Tag: cash lesss

  • ಭೀಮ್ ಆ್ಯಪ್‍ನಲ್ಲಿ ಕನ್ನಡ ಸೇರ್ಪಡೆ: ಇದೂವರೆಗೂ ಈ ಆ್ಯಪ್‍ನಲ್ಲಿ ಎಷ್ಟು ವಹಿವಾಟು ನಡೆದಿದೆ?

    ನವದೆಹಲಿ: ಸುಲಭವಾಗಿ ಮೊಬೈಲ್‍ನಲ್ಲಿ ವಹಿವಾಟು ನಡೆಸುವ ಉದ್ದೇಶದಿಂದ ಪರಿಚಯಿಸಲಾಗಿದ್ದ ಭೀಮ್ ಆ್ಯಪ್ ಮೂಲಕ ಒಟ್ಟು 361 ಕೋಟಿ ರೂ. ವಹಿವಾಟು ನಡೆದಿದೆ ಎಂದು ಸರ್ಕಾರ ಹೇಳಿದೆ.

    ಭೀಮ್ (ಭಾರತ್ ಇಂಟರ್‍ಫೇಸ್ ಫಾರ್ ಮನಿ) ಅಪ್ಲಿಕೇಶನ್ ಮೂಲಕ ಜನರು ಒಟ್ಟು 361 ಕೋಟಿ ರೂ, ವಹಿವಾಟು ನಡೆಸಿದ್ದಾರೆ ಎಂದು ಯೋಜನಾ ಖಾತೆ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್ ಲೋಕಸಭೆಯಲ್ಲಿ ತಿಳಿಸಿದರು.

    ಸ್ಕಾಂಡಿನೇವಿಯನ್ ದೇಶಗಳಲ್ಲಿ(ಡೆನ್ಮಾರ್ಕ್, ನಾರ್ವೆ, ಸ್ವೀಡನ್) ನಗದು ರಹಿತ ವಹಿವಾಟು ಶೇ. 90 ರಷ್ಟು ಇದ್ದರೆ, ಭಾರತದಲ್ಲಿ ಅದರ ಪ್ರಮಾಣ ಶೇ. 3 ರಷ್ಟಿದೆ. ಒಂದು ವೇಳೆ ಈ ಪ್ರಮಾಣ ಶೇ.23ಕ್ಕೆ ತಲುಪಿದರೆ ನಾವು ಕಪ್ಪುಹಣವನ್ನು ತಡೆಗಟ್ಟಿ ದೇಶದ ಆರ್ಥಿಕತೆ ಸುಧಾರಣೆಯಾಗಲಿದೆ ಎಂದು ಪ್ರಶ್ನೋತ್ತರ ಕಲಾಪದಲ್ಲಿ ಅವರು ಹೇಳಿದರು.

    ಕನ್ನಡದಲ್ಲೂ ಲಭ್ಯ: ಆರಂಭದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದ್ದ ಈ ಸೇವೆಗೆ ಈಗ ಕನ್ನಡ ಸೇರಿದಂತೆ, ಬೆಂಗಾಳಿ, ಗುಜರಾತಿ, ಮಲೆಯಾಳಂ, ತಮಿಳು, ತೆಲುಗು ಭಾಷೆ ಸೇರ್ಪಡೆಗೊಂಡಿದೆ.

    ಆನ್‍ಲೈನ್ ವಹಿವಾಟು ನಡೆಸಲು ಗ್ರಾಹಕರು ಖಾಸಗಿ ಕಂಪೆನಿಗಳ ಆ್ಯಪ್‍ಗಳನ್ನು ಬಳಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 2016ರ ಡಿಸೆಂಬರ್ 30ರಂದು ಭೀಮ್ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದರು.

    ಇದನ್ನೂ ಓದಿ: ಭೀಮ್ ಆ್ಯಪ್ ಬಳಸೋದು ಹೇಗೆ?