Tag: Cash for Query

  • 30 ದಿನಗಳ ಒಳಗಡೆ ಮನೆ ಖಾಲಿ ಮಾಡಿ: ಮೊಯಿತ್ರಾಗೆ ನೋಟಿಸ್‌

    30 ದಿನಗಳ ಒಳಗಡೆ ಮನೆ ಖಾಲಿ ಮಾಡಿ: ಮೊಯಿತ್ರಾಗೆ ನೋಟಿಸ್‌

    ನವದೆಹಲಿ: ಪ್ರಶ್ನೆ ಕೇಳಲು (Cash for Query) ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಲೋಕಸಭೆಯಿಂದ ಉಚ್ಛಾಟನೆಯಾಗಿರುವ ಟಿಎಂಸಿ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ಶ್ರೀಘ್ರವೇ ತಮ್ಮ ಅಧಿಕೃತ ನಿವಾಸವನ್ನು ತೊರೆಯಲಿದ್ದಾರೆ.

    ಲೋಕಸಭೆಯ (Lok Sabha) ವಸತಿ ಸಮಿತಿಯು ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದಿದ್ದು 30 ದಿನಗಳ ಒಳಗಡೆ ತನ್ನ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಕೇಳಿಕೊಳ್ಳುವಂತೆ ಸೂಚಿಸಿದೆ.

    ಮೊಯಿತ್ರಾ ಅವರಿಗೆ ವಿಶೇಷ ಕೋಟಾದ ಅಡಿಯಲ್ಲಿ ಸಚಿವಾಲಯವು ಮನೆಯನ್ನು ಮಂಜೂರು ಮಾಡಿದೆ. ಲೋಕಸಭೆಯಿಂದ ಉಚ್ಛಾಟನೆ ಮಾಡಿದ್ದನ್ನು ಪ್ರಶ್ನಿಸಿ ಮೊಯಿತ್ರಾ ಸುಪ್ರೀಂ ಕೋರ್ಟ್‌ನಲ್ಲಿ (Suprme Court) ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹೊಸ ಟ್ರಕ್‌ಗಳಲ್ಲಿ ಚಾಲಕರಿಗೆ ಎಸಿ ಕ್ಯಾಬಿನ್‌ ಕಡ್ಡಾಯ – ಅಧಿಸೂಚನೆ ಪ್ರಕಟ

    ನೀತಿ ಸಮಿತಿ ನೀಡಿದ ವರದಿಯ ಆಧಾರದ ಮೇಲೆ ಲೋಕಸಭೆಯಿಂದ ಮಹುವಾ ಮೊಯಿತ್ರಾ ಅವರನ್ನು ಉಚ್ಛಾಟನೆ ಮಾಡಲಾಗಿದೆ.

    ಮೊಯಿತ್ರಾ ಅವರು ಸಂಸತ್ತಿನಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳುವ ಸಲುವಾಗಿ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ 2 ಕೋಟಿ ರೂ. ನಗದು ಮತ್ತು ಐಷಾರಾಮಿ ಉಡುಗೊರೆ ವಸ್ತುಗಳು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದರು.

    ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸುವಂತೆ ಶಿಫಾರಸು ಮಾಡಿರುವ ವರದಿಯನ್ನು ಬಿಜೆಪಿ ಸಂಸದ ವಿನೋದ್‌ ಕುಮಾರ್‌ ಸೋನಕರ್‌ ನೇತೃತ್ವದ ನೀತಿ ಸಮಿತಿಯು ನ.9 ರಂದು ಅಂಗೀಕರಿಸಿತ್ತು

    ದರ್ಶನ್ ಹಿರಾನಂದಾನಿ (Darshan Hiranandani) ಅವರು ಸಂಸತ್ತಿನ ನೈತಿಕ ಸಮಿತಿಗೆ ಅಫಿಡವಿಟ್‌ ಸಲ್ಲಿಸಿ ಟಿಎಂಸಿ ಲೋಕಸಭೆ ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ತಿನ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಹಂಚಿಕೊಂಡಿದ್ದರು ಎಂದು ಹೇಳಿದ್ದರು.

     

  • ಮಹುವಾ ಮೊಯಿತ್ರಾ ಲೋಕಸಭಾ ಸದಸ್ಯತ್ವ ರದ್ದು – ನೈತಿಕ ಸಮಿತಿ ವರದಿಯಲ್ಲಿ ಏನಿದೆ?

    ಮಹುವಾ ಮೊಯಿತ್ರಾ ಲೋಕಸಭಾ ಸದಸ್ಯತ್ವ ರದ್ದು – ನೈತಿಕ ಸಮಿತಿ ವರದಿಯಲ್ಲಿ ಏನಿದೆ?

    ನವದೆಹಲಿ: ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ (Cash for Query Case) ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ (TMC MP Mahua Moitra) ಸಂಕಷ್ಟ ಎದುರಾಗಿದೆ. ಅವರ ಲೋಕಸಭೆ (Lok Sabha) ಸದಸ್ಯತ್ವ ರದ್ದಾಗುವ ಸಾಧ್ಯತೆಯಿದೆ.

    ಪ್ರಕರಣದ ವಿಚಾರಣೆ ನಡೆಸಿದ್ದ ಲೋಕಸಭೆಯ ನೈತಿಕ ಸಮಿತಿ, ಮಹುವಾ ಲೋಕಸಭೆ ಸದಸ್ಯತ್ವ ರದ್ದು ಮಾಡುವಂತೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ನೇತೃತ್ವದ ಸಮಿತಿಯು ಸಭೆ ಸೇರಿ, ತನ್ನ ವರದಿಯನ್ನು ಅಂಗೀಕರಿಸಿ ಮಹುವಾರನ್ನು ಉಚ್ಚಾಟಿಸುವಂತೆ ಶಿಫಾರಸು ಮಾಡಿದೆ ಎಂದು ವರದಿಗಳು ತಿಳಿಸಿವೆ.

    ಮೊಯಿತ್ರಾ ನಡೆ ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ, ದೋಷಪೂರಿತ ಎಂದು ವರದಿಯಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ. ನೈತಿಕ ಸಮಿತಿಯ ಒಟ್ಟು 10 ಮಂದಿಯಲ್ಲಿ ಆರು ಸದಸ್ಯರು ವರದಿಯನ್ನು ಅಂಗೀಕರಿಸುವುದನ್ನು ಬೆಂಬಲಿಸಿದ್ದಾರೆ ಮತ್ತು ಉಳಿದ ನಾಲ್ವರು ಅದನ್ನು ವಿರೋಧಿಸಿದ್ದಾರೆ.

    ಮುಂದಿನ ಕ್ರಮಕ್ಕಾಗಿ ವರದಿಯನ್ನು ಈಗ ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Om Birla) ಅವರಿಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಸಭೆಯ ನಂತರ ನಾಲ್ವರು ವಿರೋಧ ಪಕ್ಷದ ಸದಸ್ಯರು ಸಮಿತಿಯ ಶಿಫಾರಸು ‘ಪೂರ್ವಾಗ್ರಹ ಪೀಡಿತ’ ಮತ್ತು ‘ತಪ್ಪು’ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಟಿಎಂಸಿ ಎಂಪಿ ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆ

    ಮಹುವಾ ಮೊಯಿತ್ರಾ ಅವರು ಅನಧಿಕೃತ ವ್ಯಕ್ತಿಗಳೊಂದಿಗೆ ಯೂಸರ್ ಐಡಿಯನ್ನು ಹಂಚಿಕೊಂಡಿದ್ದಾರೆ. ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ನಗದು ಸ್ವೀಕರಿಸಿದ್ದು ಗಂಭೀರವಾದ ದುಷ್ಕೃತ್ಯ ಎಂದು ಸಮಿತಿ ತೀರ್ಮಾನಿಸಿದೆ. ಮೊಯಿತ್ರಾ ಮತ್ತು ದರ್ಶನ್ ಹಿರಾನಂದನಿ ಮಧ್ಯೆ ನಡೆದ ನಗು ವಹಿವಾಟಿನ ಬಗ್ಗೆ ಭಾರತ ಸರ್ಕಾರ ತನಿಖೆ ನಡೆಸಬೇಕು  ಶಿಫಾರಸು ಮಾಡಿದೆ ಎನ್ನಲಾಗಿದೆ.

     

    ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಗ್ರೂಪ್ ವಿರುದ್ಧ ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪಿಸಿದ್ದರು. ಈ ಆರೋಪಕ್ಕೆ ಪೂರಕ ಎಂಬಂತೆ ಉದ್ಯಮಿ ದರ್ಶನ್ ಹಿರಾನಂದಾನಿ (Darshan Hiranandani) ಅವರು ಸಂಸತ್ತಿನ ನೀತಿ ಸಮಿತಿಗೆ ಅಫಿಡವಿಟ್‌ ಸಲ್ಲಿಸಿ ಮಹುವಾ ಮೊಯಿತ್ರಾ ಅವರು ಸಂಸತ್ತಿನ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಹಂಚಿಕೊಂಡಿದ್ದರು ಎಂದು ತಿಳಿಸಿದ್ದರು.

  • Cash for Query – ಪಾಸ್‌ವರ್ಡ್‌ ಶೇರ್‌ ಆಗಿತ್ತು: ಸಂಸದೆ ಮೊಯಿತ್ರಾ ಜೊತೆ ನಂಟು ಒಪ್ಪಿಕೊಂಡ ಉದ್ಯಮಿ

    Cash for Query – ಪಾಸ್‌ವರ್ಡ್‌ ಶೇರ್‌ ಆಗಿತ್ತು: ಸಂಸದೆ ಮೊಯಿತ್ರಾ ಜೊತೆ ನಂಟು ಒಪ್ಪಿಕೊಂಡ ಉದ್ಯಮಿ

    ನವದೆಹಲಿ: ಪ್ರಶ್ನೆಗಾಗಿ ಕಾಸು (Cash for Query) ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ದರ್ಶನ್ ಹಿರಾನಂದಾನಿ (Darshan Hiranandani) ಅವರು ಸಂಸತ್ತಿನ ನೈತಿಕ ಸಮಿತಿಗೆ ಅಫಿಡವಿಟ್‌ ಸಲ್ಲಿಸಿದ್ದು, ಟಿಎಂಸಿ ಲೋಕಸಭೆ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರು ಸಂಸತ್ತಿನ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಹಂಚಿಕೊಂಡಿದ್ದರು ಎಂದು ಹೇಳಿದ್ದಾರೆ.

    ಗುರುವಾರ ಸಂಸತ್ತಿನ ನೈತಿಕ ಸಮಿತಿಯ ಮುಂದೆ ಅಫಿಡವಿಟ್ ಸಲ್ಲಿಸಿರುವ ಅವರು ಮಹುವಾ ಮೊಯಿತ್ರಾ ಪರವಾಗಿ ಪ್ರಶ್ನೆ ಪೋಸ್ಟ್‌ ಮಾಡಲು ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ನೀಡಿದ್ದರು ಎಂದು ಉಲ್ಲೇಖಿಸಿದ್ದಾರೆ.

    ಬಿಜೆಪಿ ಸಂಸದ ನಿಶಿಕಾಂತ್ ದುಬೆ

    ಟಿಎಂಸಿಯ ಮಹುವಾ ಮೊಯಿತ್ರಾ ಅವರು ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪ ಮಾಡಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

    ಸ್ನೇಹಿತರ ಸಲಹೆಯ ಮೇರೆಗೆ ರಾಷ್ಟ್ರಮಟ್ಟದಲ್ಲಿ ಬಹಳ ಬೇಗ ಹೆಸರು ಗಳಿಸಲು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವೈಯಕ್ತಿಕ ದಾಳಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ.  ಇದನ್ನೂ ಓದಿ: ಬಿಜೆಪಿಯಿಂದ ಕಾಂಗ್ರೆಸ್ ಕಲೆಕ್ಷನ್ ವಂಶಾವಳಿ, ನಿಗಮ ಮಂಡಳಿಗಳ ರೇಟ್ ಕಾರ್ಡ್ ರಿಲೀಸ್

    ದುಬಾರಿ ಐಷಾರಾಮಿ ವಸ್ತುಗಳನ್ನು ಉಡುಗೊರೆ, ಬಂಗಲೆಯ ನವೀಕರಣಕ್ಕೆ ಸಹಾಯ, ರಜಾ ದಿನಗಳ ಪ್ರಯಾಣ ವೆಚ್ಚ ಸೇರಿದಂತೆ ಮಹುವಾ ಮೊಯಿತ್ರಾ ನನಗೆ ಪದೇ ಪದೇ ಈಡೇರಿಸುವಂತೆ ಬೇಡಿಕೆ ಸಲ್ಲಿಸುತ್ತಿದ್ದರು ಮತ್ತು ಹಲವಾರು ಅನುಕೂಲಗಳನ್ನು ಕೇಳುತ್ತಿದ್ದರು. ಅಷ್ಟೇ ಅಲ್ಲದೇ ತನ್ನ ಪರವಾಗಿ ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದರು ಎಂದು ಎಂದು ಉಲ್ಲೇಖಿಸಿದ್ದಾರೆ.

    ದರ್ಶನ್ ಹಿರಾನಂದಾನಿ ಅಫಿಡವಿಟ್‌ ಸಲ್ಲಿಸಿದ ಬೆನ್ನಲ್ಲೇ ಮಹುವಾ ಮೊಯಿತ್ರಾ ಪ್ರತಿಕ್ರಿಯಿಸಿದ್ದಾರೆ. ಸಿಬಿಐ ಮತ್ತು ನೈತಿಕ ಸಮಿತಿಯ (ಇದು ಬಿಜೆಪಿ ಸದಸ್ಯರ ಸಂಪೂರ್ಣ ಬಹುಮತವನ್ನು ಹೊಂದಿರುವ) ಸದಸ್ಯರು ನನ್ನನ್ನು ಕರೆದರೆ ಮತ್ತು ಕೇಳಿದಾಗ ಉತ್ತರಿಸಲು ನಾನು ಸಿದ್ದನಿದ್ದೇನೆ. ಅದಾನಿ ನಿರ್ದೇಶನದ ಮಾಧ್ಯಮ ಸರ್ಕಸ್ ವಿಚಾರಣೆಗೆ ಅಥವಾ ಬಿಜೆಪಿ ಟ್ರೋಲ್‌ಗಳಿಗೆ ಉತ್ತರಿಸಲು ನನಗೆ ಸಮಯ ,ಆಸಕ್ತಿ ಇಲ್ಲ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]