Tag: cars

  • ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಕಲ್ಲು ತೂರಿ ಪುಂಡಾಟ – 6 ಕಾರುಗಳಿಗೆ ಹಾನಿ

    ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಕಲ್ಲು ತೂರಿ ಪುಂಡಾಟ – 6 ಕಾರುಗಳಿಗೆ ಹಾನಿ

    ಬೆಂಗಳೂರು: ಮದ್ಯದ ಅಮಲಿನಲ್ಲಿ ಪುಂಡರು ತಡರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ (Cars) ಕಲ್ಲು ತೂರಿ (Stone Pelting) ಹಾನಿ ಮಾಡಿರುವ ಘಟನೆ ಬೆಂಗಳೂರಿನ (Bengaluru) ಶ್ರೀನಿವಾಸನಗರದಲ್ಲಿ (Srinivasnagar) ನಡೆದಿದೆ.

    ತಡರಾತ್ರಿ 2:50ರ ವೇಳೆಗೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಪುಂಡರು 6ಕ್ಕೂ ಹೆಚ್ಚು ಕಾರುಗಳಿಗೆ ಕಲ್ಲು ತೂರಿ ಹಾನಿ ಮಾಡಿದ್ದಾರೆ. ಕಾರುಗಳ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕೈ ಟಿಕೆಟ್‌ ಆಕಾಂಕ್ಷಿಯ ಮೇಲೆ ಹಣದ ಮಳೆ ಸುರಿದ ಅಭಿಮಾನಿಗಳು

    ಘಟನೆಯಲ್ಲಿ ಐ20, ಹ್ಯೂಂಡೈ, ಓಮ್ನಿ ಕಾರುಗಳು ಸೇರಿದಂತೆ 6ಕ್ಕೂ ಹೆಚ್ಚು ಕಾರುಗಳಿಗೆ ಹಾನಿಯಾಗಿದೆ. ಘಟನೆ ಬಗ್ಗೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯ ಬಿಜೆಪಿ ನಾಯಕರಿಗೆ ಶಾ ಶಾಕ್‌ – ಬೆಂಗಳೂರು ಗೆಲ್ಲಲು ಬಿಗ್ ಟಾಸ್ಕ್‌

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಹುಮಹಡಿ ಕಟ್ಟಡದ ಪಾರ್ಕಿಂಗ್‌ ಸ್ಥಳದಲ್ಲಿ ಹೊತ್ತಿ ಉರಿದ ಬೆಂಕಿ – 21 ಕಾರುಗಳು ಭಸ್ಮ

    ಬಹುಮಹಡಿ ಕಟ್ಟಡದ ಪಾರ್ಕಿಂಗ್‌ ಸ್ಥಳದಲ್ಲಿ ಹೊತ್ತಿ ಉರಿದ ಬೆಂಕಿ – 21 ಕಾರುಗಳು ಭಸ್ಮ

    ನವದೆಹಲಿ: ಬಹುಮಹಡಿ ಕಟ್ಟಡವೊಂದರಲ್ಲಿ ಪಾರ್ಕಿಂಗ್‌ ಸ್ಥಳದಲ್ಲಿ ಬೆಂಕಿ (Fire) ಕಾಣಿಸಿಕೊಂಡಿದ್ದು, 21 ಕಾರುಗಳು (Cars) ಸುಟ್ಟು ಭಸ್ಮವಾಗಿರುವ ಘಟನೆ ಪಶ್ಚಿಮ ದೆಹಲಿಯ ಸುಭಾಷ್ ನಗರದಲ್ಲಿ ನಡೆದಿದೆ.

    ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ದುರ್ಘಟನೆಗೆ ಕಾರಣ ತಿಳಿಯಲು ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಶಾಸಕನ ಬಂಗಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

    ಮುಂಜಾನೆ 4 ಗಂಟೆ ಸುಮಾರಿಗೆ ಪಾರ್ಕಿಂಗ್‌ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಬೆಳಗ್ಗೆ 6:10ರ ವೇಳೆಗೆ ಬೆಂಕಿಯನ್ನು ನಂದಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಘಟನೆಯಲ್ಲಿ ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ, ವ್ಯಕ್ತಿಯೊಬ್ಬ ಘಟನೆಗೂ ಮುನ್ನ ಪಾರ್ಕಿಂಗ್‌ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 26ನೇ ವಯಸ್ಸಿಗೆ 13 ಜಿಲ್ಲೆಗಳಲ್ಲಿ 21 ಮದುವೆ ಮಾಡಿಕೊಂಡ ರಣಧೀರನಿಗೆ ಕಂಟಕ!

    Live Tv
    [brid partner=56869869 player=32851 video=960834 autoplay=true]

  • ಒಬ್ಬಳನ್ನೇ ಮದುವೆಯಾದ ಗಂಡಂದಿರಿಬ್ಬರ ಫೈಟ್ – ಪತ್ನಿಗಾಗಿ ಆಕೆಯ ಮೊದಲನೇ ಗಂಡನ ಹತ್ಯೆಗೆ ಸ್ಕೆಚ್ ಹಾಕ್ದ

    ಒಬ್ಬಳನ್ನೇ ಮದುವೆಯಾದ ಗಂಡಂದಿರಿಬ್ಬರ ಫೈಟ್ – ಪತ್ನಿಗಾಗಿ ಆಕೆಯ ಮೊದಲನೇ ಗಂಡನ ಹತ್ಯೆಗೆ ಸ್ಕೆಚ್ ಹಾಕ್ದ

    -ಹೆಂಡ್ತಿಗೆ ಮೇಸೇಜ್ ಮಾಡಿದ ಗಂಡ
    -ಕೊಲೆಗೈಯಲು 2ನೇ ಗಂಡನಿಂದ ಸಿನಿಮಾ ರೀತಿ ಕಿಡ್ನ್ಯಾಪ್
    -ಗಾಡಿ ಕೆಟ್ಟು ಲಾಕ್

    ಚಿಕ್ಕಮಗಳೂರು: ಪತ್ನಿಗೆ ಮೆಸೇಜ್ ಮಾಡಿದ ಮೊದಲ ಗಂಡನನ್ನು ಎರಡನೇ ಗಂಡ ಸಿನಿಮಾ ರೀತಿ ಕಿಡ್ನ್ಯಾಪ್ ಮಾಡಿ ಕೊಲೆಗೈಯಲು ಯತ್ನಿಸಿ ಮಾರ್ಗ ಮಧ್ಯೆ ಗಾಡಿ ಕೆಟ್ಟ ಪರಿಣಾಮ ಪೊಲೀಸರಿಗೆ ಲಾಕ್ ಆದ ಘಟನೆ ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.

    ಕಳೆದ ಐದು ವರ್ಷಗಳ ಹಿಂದೆ ಕಡೂರಿನಲ್ಲಿ ವಾಸಿಸುತ್ತಿದ್ದ ರಾಜಸ್ಥಾನದ ಕುಠಾಣಿ ಮೂಲದ ಮಂಜುಳಾರನ್ನು ಮೋಹನ್ ರಾಮ್ ಎಂಬಾತ ಕಳೆದ ವರ್ಷ ಜೋಧ್‍ಪುರ್‌ನಲ್ಲಿ ಪ್ರೀತಿಸಿ ಮದುವೆಯಾಗಿದ್ದನು. ಮದುವೆ ಬಳಿಕ ಮೋಹನ್ ರಾಮ್ ತನ್ನ ಪತ್ನಿಯನ್ನು ಕಡೂರಿಗೆ ಕರೆದುಕೊಂಡು ಬಂದು ಸಂಸಾರ ನಡೆಸುತ್ತಿದ್ದನು. ಕಡೂರಿಗೆ ಬಂದ 2 ತಿಂಗಳ ನಂತರ ರಾಜಸ್ಥಾನಕ್ಕೆ ಹೋಗಿದ್ದ ಹೆಂಡತಿಯನ್ನು ಕಡೂರಿಗೆ ಕರೆದುಕೊಂಡು ಬರಲು ಹೋಗಿದ್ದ ಪತಿ ಮೋಹನ್ ರಾಮ್ ಜೊತೆ ಮಂಜುಳಾ ಬರಲಿಲ್ಲ. ಕಡೂರಿಗೆ ಬರಲು ಆಕೆ ಒಪ್ಪದ ಹಿನ್ನೆಲೆ ಬೇಸತ್ತು ಮೋಹನ್ ಸುಮ್ಮನಾಗಿದ್ದನು.

    ಹೆಂಡತಿಯ ಮೇಲಿನ ಪ್ರೀತಿಯಿಂದ ಮೋಹನ್ ಆಗಾಗ್ಗೆ ಅವಳ ಮೊಬೈಲ್‍ಗೆ ಮೆಸೇಜ್ ಮಾಡಿದರೂ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಕಳೆದ ತಿಂಗಳು ಮತ್ತೆ ಆಕೆಯನ್ನ ಮಾತನಾಡಿಸಿ, ಬುದ್ಧಿ ಹೇಳಿ ಕರೆದುಕೊಂಡು ಬರಲು ಹೋಗಿದ್ದ ಮೋಹನ್‍ಗೆ ಆಕೆ ಹರಿಯಾಣದ ಪಿಪ್ಲಿವಾಲ ಗ್ರಾಮದ ಓಂ ಪ್ರಕಾಶ್ ಜೊತೆ ಮದುವೆಯಾಗಿರುವುದಾಗಿ ತಿಳಿದು ಬಂದಿದೆ. ಇದನ್ನೂ ಓದಿ: ಆಜಾದ್ ಬೆಂಬಲಿಸಿ 51 ನಾಯಕರ ರಾಜೀನಾಮೆ – ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ ಆಘಾತ

    POLICE JEEP

    ಮೋಹನ್ ತನ್ನ ಪತ್ನಿಗೆ ಮೆಸೇಜ್ ಮಾಡುತ್ತಿರುವ ವಿಷಯ ತಿಳಿದ ಎರಡನೇ ಪತಿ ಓಂ ಪ್ರಕಾಶ್ ಮೊದಲ ಪತಿ ಮೋಹನ್ ನನ್ನ ಮುಗಿಸಲು ಸಂಚು ರೂಪಿಸಿದ್ದ. ಏಳು ಜನರ ತಂಡದೊಂದಿಗೆ ಆ.28ರ ಭಾನುವಾರ ರಾತ್ರಿ ಕಡೂರಿಗೆ ಬಂದ ಓಂ ಪ್ರಕಾಶ್ ಸಿಪಿಸಿ ಕಾಲೋನಿಯಲ್ಲಿರುವ ದಿನಸಿ ಅಂಗಡಿಯಲ್ಲಿದ್ದ ಮೋಹನ್ ರಾಮ್‍ನನ್ನು ಸಿನಿಮಿಯ ಶೈಲಿಯಲ್ಲಿ ಅಪಹರಿಸಿ ಆತನ ಬಾಯಿಗೆ ಬಟ್ಟೆ ಕಟ್ಟಿ ಥಳಿಸಿ, ಕಾರಿನಲ್ಲಿಯೇ ಕೊಲೆಗೆ ಸಂಚು ನಡೆಸಿದ್ದಾನೆ. ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದ ದೃಶ್ಯವನ್ನು ಸ್ಥಳೀಯರು ಗಮನಿಸಿದ ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಕಡೂರು ಪೊಲೀಸರು ಹಂತಕರ ಕಾರನ್ನು ಚೇಸ್ ಮಾಡಿಕೊಂಡು ಹೋಗುವಾಗ ಕಡೂರು ತಾಲೂಕಿನ ಮತಿಘಟ್ಟ ಬಳಿ ಹಂತಕರ ಕಾರು ಕೈಕೊಟ್ಟ ಪರಿಣಾಮ ಎಂಟು ಜನ ಹಂತಕರು ಪೊಲೀಸರ ಬಂಧಿಸಿದ್ದಾರೆ.

    ಸಾವಿನ ದವಡೆಯಲ್ಲಿದ್ದ ಮೋಹನ್ ರಾಮ್ ಅದೃಷ್ಟವಶಾತ್ ಪಾರಾಗಿದ್ದಾರೆ. ಸಿನಿಮಿಯ ರೀತಿ ಗಾಡಿಯನ್ನು ಚೇಸ್ ಮಾಡಿದ ಪೊಲೀಸರು ಬೆಂಗಳೂರು ಮೂಲದ ಆರೋಪಿ 2ನೇ ಪತಿ ಓಂ ಪ್ರಕಾಶ್, ಶೈಲೇಂದ್ರ, ಪ್ರದೀಪ್, ದಲ್ಲಾರಾಮ್, ಜಿತೇಂದ್ರ, ಶಂಕರ್ ಪಾಟೀಲ್ ಹಾಗೂ ದಿನೇಶ್ ಎಂಬ ಆರೋಪಿಗಳ ಜೊತೆ ಕೊಲೆಗೈಯಲು ಬಳಸಿದ್ದ ವಿಕೆಟ್ ಹಾಗೂ ಕಾರನ್ನು ವಶಕ್ಕೆ ಪಡೆದ  ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಇನ್ನೊಬ್ಬರನ್ನು ಮುಗಿಸಿಯೇ ಮೇಲಕ್ಕೆ ಬಂದ ಮಹಾಪುರುಷ ನೀವಲ್ಲವೇ? ಸಿದ್ದು ವಿರುದ್ಧ ರಾಮುಲು ಕಿಡಿ

    ಪೊಲೀಸರ ಈ ಕಾರ್ಯಾಚರಣೆಯಲ್ಲಿ ಸಿಪಿಐ ಶಿವುಕುಮಾರ್, ಪಿ.ಎಸ್.ಐ.ಎನ್.ಕೆ. ರಮ್ಯಾ, ಹರೀಶ್, ಸಿಬ್ಬಂದಿಗಳಾದ ಕೃಷ್ಣಮೂರ್ತಿ, ರಾಜಪ್ಪ, ರಮೇಶ್, ಕುಚೇಲ, ಚಂದ್ರಶೇಖರ್ ಹಾಗೂ ಓಂಕಾರ್ ಮತ್ತಿತರು ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಟೋಲ್‍ನಲ್ಲಿ ಅಪಘಾತ – ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ

    ಟೋಲ್‍ನಲ್ಲಿ ಅಪಘಾತ – ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ

    ಚಿಕ್ಕಬಳ್ಳಾಪುರ: ಟೋಲ್ ಕಟ್ಟಲು ಸರದಿ ಸಾಲಿನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಸ್ಕಾರ್ಪಿಯೋ ಕಾರೊಂದು ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಕರ್ನಾಟಕ ಆಂಧ್ರ ಗಡಿಭಾಗದ ಬಾಗೇಪಲ್ಲಿ ಟೋಲ್ ಪ್ಲಾಜಾದಲ್ಲಿ ಅಪಘಾತ ನಡೆದಿದೆ. ಬೆಂಗಳೂರು ಕಡೆಯಿಂದ ಬಂದ ಸ್ಕಾರ್ಪಿಯೋ ಕಾರು, ಸರದಿ ಸಾಲಿನಲ್ಲಿದ್ದ ಸ್ವಿಫ್ಟ್ ಡಿಜೈರ್ ಹಾಗೂ ಹುಂಡೈ ವೆನ್ಯೂ ಕಾರಿಗೆ ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ನಂತರ ಸ್ಕಾರ್ಪಿಯೋ ಕಾರು ಪಲ್ಟಿಯಾಗಿದೆ.

    ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೂರು ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂದಹಾಗೆ ಸ್ಕಾರ್ಪಿಯೋ ಕಾರು ಚಾಲಕ ವೈಭವ್ ಕುಮಾರ್ ಕಾರು ಚಲಾಯಿಸುತ್ತಿದ್ದು, ಕಾರಿನಲ್ಲಿ ಬೆಂಗಳೂರಿನ ಪದ್ಮನಾಭನಗರದ ನಿವಾಸಿಗಳಾದ ಚಂದ್ರಕಲಾ ಹಾಗೂ ನಾಗ ಇದ್ದರು.

    ಕಾರಿನಲ್ಲಿ ಕದಿರಿಗೆ ಪ್ರಯಾಣ ಮಾಡುತ್ತಿದ್ದರು. ಸಿನಿಮಾ ಸ್ಟೈಲ್‍ನಲಿ ಸ್ಕಾರ್ಪಿಯೋ ಕಾರು ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸದ್ಯ ಬಾಗೇಪಲ್ಲಿ ಪಿಎಸ್‍ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

  • ಇಂದಿನಿಂದ ನೀವು ಕಡಿಮೆ ಬೆಲೆಗೆ‌ ಕಾರು, ಬೈಕ್ ಖರೀದಿಸಬಹುದು

    ಇಂದಿನಿಂದ ನೀವು ಕಡಿಮೆ ಬೆಲೆಗೆ‌ ಕಾರು, ಬೈಕ್ ಖರೀದಿಸಬಹುದು

    ನವದೆಹಲಿ: ಕೋವಿಡ್‌ 19 ಸಮಯದಲ್ಲಿ ವಾಹನ ಖರೀದಿಸುವ ಮಂದಿಗೆ ಗುಡ್‌ನ್ಯೂಸ್‌. ಇಂದಿನಿಂದ ನೀವು ಕಡಿಮೆ ಬೆಲೆಗೆ ವಾಹನಗಳನ್ನು ಖರೀದಿಸಬಹುದು.

    ಭಾರತದ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎಐ) ದೀರ್ಘಾವಧಿ ವಿಮೆ ಮಾಡಬೇಕೆಂಬ ನಿಯಮವನ್ನು ಕೈಬಿಟ್ಟಿದೆ. ಇಂದಿನಿಂದ ಈ ನಿಯಮ ಜಾರಿಗೆ ಬರುತ್ತಿದ್ದು ನೂತನ ವಾಹನಗಳ ಆನ್‌ರೋಡ್ ಬೆಲೆ ಇಳಿಕೆಯಾಗಲಿದೆ.

    2018ರ ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ದ್ವಿಚಕ್ರ ವಾಹನಗಳಿಗೆ 5 ವರ್ಷ ಹಾಗೂ ಕಾರು ಸೇರಿದಂತೆ ಇತರ ವಾಹನಗಳಿಗೆ 3 ವರ್ಷ ವಿಮೆ ಕಡ್ಡಾಯವಾಗಿತ್ತು. ಇದರಿಂದ ವಾಹನ ಖರೀದಿದಾರರಿಗೆ ಸ್ವಲ್ಪ ಕಷ್ಟವಾಗಿತ್ತು. ಈಗ ವಾಹನ ಮಾರಾಟವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಳೇ ನಿಯಮ ಮತ್ತೆ ಜಾರಿಯಾಗಿದೆ.

    ವಾಹನಗಳಿಗೆ 1 ವರ್ಷ ವಿಮೆ ನಿಯಮ ಜಾರಿಗೆ ಬರುತ್ತಿದೆ. ಆದರೆ ಥರ್ಡ್ ಪಾರ್ಟಿ ವಿಮೆ ನಿಯಮದಲ್ಲಿ ಬದಲಾವಣೆಯಾಗಿಲ್ಲ. ದ್ವಿಚಕ್ರ ವಾಹನ 3 ವರ್ಷ ಹಾಗೂ ಕಾರು ಸೇರಿದಂತೆ ಇತರ ನಾಲ್ಕು ಚಕ್ರ ವಾಹನ ಥರ್ಡ್ ಪಾರ್ಟಿ ವಿಮೆ 3 ವರ್ಷ ಕಡ್ಡಾಯವಾಗಿದೆ.

    ಕೋವಿಡ್‌ 19ನಿಂದ ಸಂಕಷ್ಟಕ್ಕೆ ಸಿಲುಕಿರುವ ಅಟೊಮೊಬೈಲ್‌ ಕಂಪನಿಗಳಿಗೆ ಮತ್ತು ಗ್ರಾಹಕರಿಗೆ ನೆರವಾಗಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದರಿಂದ ವಾಹನಗಳ ಬೆಲೆ ಇಂದಿನಿಂದಲೇ ಕಡಿಮೆ ಕಡಿಮೆಯಾಗಿದೆ.

  • ಐಷಾರಾಮಿ ಕಾರುಗಳನ್ನೇ ಕದಿಯುತ್ತಿದ್ದ ಸಿನಿಮಾ ನಟ ಸೇರಿ ಐವರು ಅಂದರ್

    ಐಷಾರಾಮಿ ಕಾರುಗಳನ್ನೇ ಕದಿಯುತ್ತಿದ್ದ ಸಿನಿಮಾ ನಟ ಸೇರಿ ಐವರು ಅಂದರ್

    – ಕಾರ್ ಕಳ್ಳತನದಿಂದಲೇ ಬ್ಯಾಂಕಾಕ್‍ನಲ್ಲಿ ಹೋಟೆಲ್ ಖರೀದಿ
    – 5 ಕೋಟಿ ಮೌಲ್ಯದ 50 ಕಾರು ವಶ
    – 500ಕ್ಕೂ ಹೆಚ್ಚು ಕಾರು ಕದ್ದಿರುವ ಶಂಕೆ

    ಲಕ್ನೋ: ಐಷಾರಾಮಿ ಕಾರುಗಳನ್ನೇ ಕದಿಯುತ್ತಿದ್ದ ಸಿನಿಮಾ ನಟ ಸೇರಿ ಐವರನ್ನು ಉತ್ತರ ಪ್ರದೇಶದ ಲಕ್ನೋ ಪೊಲೀಸರು ಬಂಧಿಸಿದ್ದು, 5 ಕೋಟಿ ರೂ. ಮೌಲ್ಯದ 50 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಲಕ್ನೋ ಪೊಲೀಸ್ ಆಯುಕ್ತ ಸುಜಿತ್ ಪಾಂಡೆ, “ಈವರೆಗೆ 5 ಜನರನ್ನು ಮಾತ್ರ ಬಂಧಿಸಲಾಗಿದೆ. ಮುಖ್ಯ ಆರೋಪಿ ನಾಸಿರ್ ಖಾನ್ ಅಲಿಯಾಸ್ ಚೋತಿ ಅಮಿನಾಬಾದ್ ಪ್ರದೇಶದ ನಿವಾಸಿಯಾಗಿದ್ದು, ಮೂರು ಭೋಜ್‍ಪುರಿ ಚಲನಚಿತ್ರಗಳಲ್ಲಿ ನಟಿಸಿದ್ದಾನೆ. ಈ ಪೈಕಿ ಒಂದು ಸಿನಿಮಾದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ” ಎಂದು ತಿಳಿಸಿದ್ದಾರೆ.

    “ನಾಸಿರ್ ಕದ್ದ ಕಾರುಗಳನ್ನು ಆನ್‍ಲೈನ್ ಮೂಲಕ ಮಾರಾಟ ಮಾಡುತ್ತಿದ್ದ. ಮತ್ತೋರ್ವ ಆರೋಪಿ ರಿಜ್ವಾನ್ (50) ಕಾರ್ ಕಳ್ಳತನದಿಂದ ಬಂದ ಹಣದಲ್ಲಿಯೇ ಬ್ಯಾಂಕಾಕ್‍ನಲ್ಲಿ ಹೋಟೆಲ್ ಖರೀದಿಸಿದ್ದಾನೆ. ಉಳಿದಂತೆ ಲಕ್ನೋ ಮೂಲದ ಆರೋಪಿ ಮೊಯಿನುದ್ದೀನ್ ಖಾನ್ ಮತ್ತು ವಿನಯ್ ತಲ್ವಾರ್, ಕಾನ್ಪುರದ ಶ್ಯಾಮ್ ಜಿ ಜೈಸ್ವಾಲ್ ಎಂದು ಗುರುತಿಸಲಾಗಿದೆ. ಈ ಎಲ್ಲ ಆರೋಪಿಗಳು ಹಳೆಯ ವಾಹನಗಳನ್ನು ಖರೀದಿಸಿ ಅದರ ಚಾಸಿಸ್ ಸಂಖ್ಯೆಯನ್ನು ಕದ್ದ ಕಾರುಗಳಿಗೆ ಬದಲಾಯಿಸುತ್ತಿದ್ದರು ಎಂದು ಸುಜಿತ್ ಪಾಂಡೆ ಹೇಳಿದ್ದಾರೆ.

    ಕಾರು ಕಳ್ಳತನದ ದಂಧೆಯಲ್ಲಿರುವ ಇತರ ಎಂಟು ಆರೋಪಿಗಳು ಪರಾರಿಯಾಗಿದ್ದಾರೆ. ಅವರು ಮೀರತ್, ಆಗ್ರಾ, ಮೊರಾದಾಬಾದ್, ದೆಹಲಿ ಮತ್ತು ಲಖಿಂಪುರ ಖೇರಿಗೆ ಸೇರಿದವರಾಗಿದ್ದಾರೆ.

    “ಗ್ಯಾಂಗ್ ಐಷಾರಾಮಿ ಕಾರುಗಳು ಸೇರಿದಂತೆ ಖಾಸಗಿ ವಿಮಾ ಕಂಪನಿಗಳಿಂದ ಸ್ಕ್ರ್ಯಾಪ್ ಮಾಡಿದ ವಾಹನಗಳನ್ನು ಖರೀದಿಯುತ್ತಿದ್ದರು. ನಂತರ ಉತ್ತರ ಪ್ರದೇಶ ಮತ್ತು ರಾಜ್ಯಗಳಲ್ಲಿ ಕಾರ್ ಕಳ್ಳರನ್ನು ಸಂಪರ್ಕಿಸುವ ಮೂಲಕ ಅದೇ ಮಾದರಿಯ ಕಾರುಗಳನ್ನು ಕದಿಯುತ್ತಿದ್ದರು. ಕಾರಿನ ಎಂಜಿನ್ ಮತ್ತು ಚಾಸಿಸ್ ಸಂಖ್ಯೆಯನ್ನು ಸ್ಕ್ರ್ಯಾಪ್ ಮಾಡಿದ ಕಾರಿಗೆ ಹಾಕುತ್ತಿದ್ದರು” ಎಂದು ಮಾಹಿತಿ ನೀಡಿದ್ದಾರೆ.

    ಆರೋಪಿಗಳು ವಿವಿಧ ರಾಜ್ಯಗಳಲ್ಲಿ ಜಾಲವನ್ನು ಹೊಂದಿದ್ದು, 500ಕ್ಕೂ ಕಾರು ಕದ್ದು ಮಾರಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಲಕ್ನೋ ಪೊಲೀಸ್ ಆಯುಕ್ತ ಸುಜಿತ್ ಪಾಂಡೆ ತಿಳಿಸಿದ್ದಾರೆ.

  • ಎರಡು ಕಾರುಗಳು ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಸ್ವಾಮೀಜಿ ಸೇರಿ ನಾಲ್ವರು ಸಾವು

    ಎರಡು ಕಾರುಗಳು ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಸ್ವಾಮೀಜಿ ಸೇರಿ ನಾಲ್ವರು ಸಾವು

    ಧಾರವಾಡ: ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ಸ್ವಾಮೀಜಿಯೊಬ್ಬರು ಸೇರಿ ನಾಲ್ವರು ಸಾವನ್ನಪ್ಪಿದ ಘಟನೆ ಧಾರವಾಡ ಹೊರವಲಯದ ಯರಿಕೊಪ್ಪ ಮನಸೂರ ಗ್ರಾಮ ಬೈಪಾಸ್ ಬಳಿ ಸಂಭವಿಸಿದೆ.

    ಧಾರವಾಡ ಜಿಲ್ಲೆ ಕುಂದಗೋಳ ಪಟ್ಟಣದ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ, ಕಾರು ಚಾಲಕ ಶಂಕರಗೌಡ ಪಾಟೀಲ ಹಾಗೂ ಎದುರಿನ ಕಾರಿನಲ್ಲಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಮಹಾದೇವ ಕಾಡೇಶಗೋಳ ಮತ್ತು ಮಾರುತಿ ಕುಕನೂರ ಇಬ್ಬರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಸ್ವಾಮೀಜಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಎಸ್‍ಡಿಎಂ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಸ್ವಾಮೀಜಿ ಕಾರಿನಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಸಂಬಂಧಿ ಸೋಮರಾವ್ ದೇಸಾಯಿ ಹಾಗೂ ಸಿದ್ದಪ್ಪ ಇಂಗಳಹಳ್ಳಿ ಮತ್ತು ಬಸಪ್ಪ ಪೂಜಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗೆಯಷ್ಟೇ ಮಠದ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸ್ವಾಮೀಜಿ ಧಾರವಾಡದ ಭಕ್ತರೊಬ್ಬರ ಕುಟುಂಬದ ಮದುವೆ ಸಮಾರಂಭಕ್ಕೆ ಆಗಮಿಸುತ್ತಿದ್ದಾಗ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ಸ್ವಾಮೀಜಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಪಾರ ಪ್ರಮಾಣದ ಭಕ್ತರು ಘಟನಾ ಸ್ಥಳಕ್ಕೆ ದೌಡಾಯಿಸಿ ಬಂದು ಕಣ್ಣೀರು ಹಾಕಿದರು.

    ಇದೇ ವೇಳೆ ಮಾಜಿ ಸಚಿವ ಎಂ.ಎಸ್. ಅಕ್ಕಿ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಂಬನಿ ಮಿಡಿದರು. ಸ್ವಾಮೀಜಿ ಕಳೆದುಕೊಂಡಿದ್ದು ತುಂಬಾ ದುಃಖವಾಗಿದ್ದು, ಈ ರಸ್ತೆಯಲ್ಲಿ ಹಲವು ಘಟನೆ ನಡೆದರೂ ರಸ್ತೆ ಅಗಲಿಕರಣ ನಡೆದಿಲ್ಲವೆಂದು ಬಸವರಾಜ್ ಹೊರಟ್ಟಿ ಆಕ್ರೋಶ ವ್ಯಕ್ತ ಪಡಿಸಿದರು. ಈ ಬೈಪಾಸ್ ನಂದಿ ಹೈವೆಯವರಾದ ಅಶೋಕ್ ಖೇಣಿಗೆ ಸಂಬಂಧಿಸಿದ್ದು, ಈ ಸಂಬಂಧ ಬರುವ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಗಾಯಗೊಂಡವರನ್ನು ನೋಡಲು ಮಾಜಿ ಸಚಿವ ವಿನಯ ಕುಲಕರ್ಣಿ ಕೂಡ ಆಸ್ಪತ್ರೆಗೆ ಭೇಟಿ ನೀಡಿದರು. ಸದ್ಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಕುಸಿದ ಸೇತುವೆಯ ಮಧ್ಯೆ ಸಿಲುಕಿದ ಕಾರುಗಳು: ವಿಡಿಯೋ ವೈರಲ್

    ಕುಸಿದ ಸೇತುವೆಯ ಮಧ್ಯೆ ಸಿಲುಕಿದ ಕಾರುಗಳು: ವಿಡಿಯೋ ವೈರಲ್

    ಗಾಂಧಿನಗರ: ಭಾನುವಾರ ಗುಜರಾತಿನ ಜುನಾಗಢದ ಮಲಂಕಾ ಗ್ರಾಮದಲ್ಲಿ ಭಾರೀ ಮಳೆಗೆ ಸೇತುವೆ ಕುಸಿದು ಬಿದ್ದಿದೆ. ಪರಿಣಾಮ ವಾಹನಗಳು ಕುಸಿದ ಸೇತುವೆ ಮಧ್ಯೆ ಸಿಲುಕಿದ್ದು, ಅದರಲ್ಲಿದ್ದ ಪ್ರಾಯಾಣಿಕರು ಗಾಯಗೊಂಡಿದ್ದರು. ಈ ಮಧ್ಯೆ ಸೇತುವೆಯ ಕುಸಿದ ಭಾಗದಿಂದ ವಾಹನಗಳನ್ನು ಜನರು ಹೊರತಗೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಸೇತುವೆ ಮಧ್ಯ ಭಾಗ ಕುಸಿದು ಬಿದ್ದ ತಕ್ಷಣ ಅದರ ಮೇಲೆ ಸಂಚರಿಸುತ್ತಿದ್ದ ವಾಹನಗಳು ಸೇತುವೆ ಮಧ್ಯೆ ಸಿಲುಕಿಕೊಂಡಿದೆ. ಮಳೆಗೆ ಸೇತುವೆ ಬಿರುಕು ಬಿಟ್ಟುಕೊಂಡಿತ್ತು. ಆದರೆ ಯಾರು ಕೂಡ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಭಾನುವಾರ ಸೇತುವೆ ಮೇಲೆ ವಾಹನಗಳ ಓಡಾಟಕ್ಕೆ ಅದು ಕುಸಿದು ಬಿದ್ದಿದೆ. ಈ ಘಟನೆ ನಡೆಯುತ್ತಿದ್ದಂತೆ ಸೇತುವೆ ಆಸು-ಪಾಸಿನಲ್ಲಿದ್ದ ಇತರೆ ವಾಹನ ಸವಾರರು ಹಾಗೂ ಸ್ಥಳೀಯರು ಸೇತುವೆ ಮಧ್ಯೆ ಸಿಲುಕಿದ್ದ ಜನರ ರಕ್ಷಣೆ ಮಾಡಿದರು.

    ಜೊತೆಗೆ ಸೇತುವೆ ಕುಸಿದ ಭಾಗದಲ್ಲಿ ಸಿಲುಕಿಕೊಂಡಿದ್ದ ಕಾರುಗಳನ್ನು ಹಗ್ಗ ಕಟ್ಟಿ ಎಳೆದು ಮೇಲಕ್ಕೆ ಎತ್ತಿದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸದ್ಯ ಗಾಯಗೊಂಡವರನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸೇತುವೆ ಕುಸಿದ ಹಿನ್ನೆಲೆ ಜುನಾಗಢ ಹಾಗೂ ಮಂಡ್ರಾ ಪ್ರದೇಶದ ಸಂಚಾರ ಸ್ಥಗಿತಗೊಂಡಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಡಳಿತ, ಮಳೆಗೆ ಸೇತುವೆ ಕುಸಿದು ಬಿದ್ದಿದೆ ಎನ್ನಲಾಗುತ್ತಿದೆ. ಆದರೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ಹೇಳಿದರು. ಹಾಗೆಯೇ ಹಲವು ಕಾರುಗಳು ಸೇತುವೆ ಮಧ್ಯೆ ಸಿಲುಕಿಕೊಂಡಿತ್ತು, ಸುಮಾರು 4 ಕಾರು ನದಿಗೆ ಬಿದ್ದಿದೆ ಎಂದು ತಿಳಿಸಿದರು.

    ಸೇತುವೆ ಸುತ್ತಮುತ್ತಲ ಪ್ರದೇಶದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು, ನಾವು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಜೋರಾದ ಶಬ್ದ ಬಂತು. ಆಗ ನಾವು ತಕ್ಷಣ ಸ್ಥಳಕ್ಕೆ ಹೋಗಿ ನೋಡಿದಾಗ, ಸೇತುವೆ ಕುಸಿದು ಬಿದ್ದಿತ್ತು. ಕೆಲವು ಕಾರುಗಳು ಅದರಲ್ಲಿ ಸಿಲುಕಿಕೊಂಡಿತ್ತು. ತಕ್ಷಣ ನಾವೆಲ್ಲಾ ಕುಸಿದ ಭಾಗದಲ್ಲಿ ಸಿಲುಕಿಕೊಂಡಿದ್ದ ಕಾರುಗಳಲ್ಲಿ ಇದ್ದ ಜನರನ್ನು ರಕ್ಷಣೆ ಮಾಡಿದೆವು. ಬಳಿಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಕೊಟ್ಟೆವು ಎಂದು ಹೇಳಿದರು.

  • 70 ಸಾವಿರ ರೂಪಾಯಿ ರಿಯಾಯಿತಿ ಘೋಷಿಸಿದ ಮಾರುತಿ ಸುಜುಕಿ: ಯಾವ ಕಾರಿಗೆ ಎಷ್ಟು ಡಿಸ್ಕೌಂಟ್?

    70 ಸಾವಿರ ರೂಪಾಯಿ ರಿಯಾಯಿತಿ ಘೋಷಿಸಿದ ಮಾರುತಿ ಸುಜುಕಿ: ಯಾವ ಕಾರಿಗೆ ಎಷ್ಟು ಡಿಸ್ಕೌಂಟ್?

    ನವದೆಹಲಿ: ಭಾರತದ ಮೂಂಚೂಣಿ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಕಂಪೆನಿಯು ತನ್ನ ಕಾರುಗಳ ಮೇಲೆ 70 ಸಾವಿರ ರೂಪಾಯಿ ವರೆಗಿನ ವಿಶೇಷ ರಿಯಾಯಿತಿಯನ್ನು ಪ್ರಕಟಿಸಿದೆ.

    ಈ ವಿಶೇಷ ಆಫರ್ ಕೇವಲ ಸೆಪ್ಟೆಂಬರ್ ತಿಂಗಳಲ್ಲಿ ಕಾರು ಖರೀದಿ ಮಾಡುವ ಗ್ರಾಹಕರಿಗೆ ಮಾತ್ರ ಸಿಗಲಿದೆ. ಇದರಲ್ಲಿ ಕ್ಯಾಶ್ ಡಿಸ್ಕೌಂಟ್ ಹಾಗೂ ಎಕ್ಸ್‌ಚೇಂಜ್ ಡಿಸ್ಕೌಂಟ್‍ಗಳು ಸೇರಿ ಒಟ್ಟು 70 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಗ್ರಾಹಕರಿಗೆ ಕಂಪೆನಿ ನೀಡಿದೆ. ತನ್ನ ನೂತನ ಮಾದರಿಗಳಾದ ಸ್ವಿಫ್ಟ್, ಎರ್ಟಿಗಾ, ಡಿಜೈರ್, ಸೆಲಿರಿಯೋ, ಆಲ್ಟೊ ಹಾಗೂ ಆಲ್ಟೊ ಕೆ 10 ಕಾರುಗಳ ಮೇಲೆ ವಿಶೇಷ ರಿಯಾಯಿತಿ ಘೋಷಿಸಿದೆ. ಗ್ರಾಹಕರು ಯಾವುದೇ 7 ವರ್ಷದ ಒಳಗಿನ ಕಾರುಗಳನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು.

    ಯಾವೆಲ್ಲಾ ಕಾರುಗಳಿಗೆ ಎಷ್ಟೆಷ್ಟು ರಿಯಾಯಿತಿ?
    1. ಎರ್ಟಿಗಾ:

    ಕ್ಯಾಶ್ ಡಿಸ್ಕೌಂಟ್‍ನಲ್ಲಿ ಎರ್ಟಿಗಾ ಪೆಟ್ರೋಲ್ ಮಾದರಿಗೆ 15,000 ರೂಪಾಯಿ, ಡೀಸೆಲ್ ಮಾದರಿಗೆ 20,000 ರೂಪಾಯಿ ಹಾಗೂ ಸಿಎನ್‍ಜಿ ಮಾದರಿಗೆ 10,000 ರೂಪಾಯಿಯನ್ನು ನೀಡಿದೆ. ಎಕ್ಸ್‌ಚೇಂಜ್ ಡಿಸ್ಕೌಂಟ್‍ನಲ್ಲಿ ಪೆಟ್ರೋಲ್ ಹಾಗೂ ಸಿಎನ್‍ಜಿ ಮಾದರಿಗೆ 20,000 ದಿಂದ 30,000 ರೂಪಾಯಿ ಹಾಗೂ ಡೀಸೆಲ್ ಮಾದರಿಗೆ 25,000 ದಿಂದ 35,000 ರೂಪಾಯಿವರೆಗೆ ರಿಯಾಯಿತಿ ನೀಡಿದೆ.

    2. ಡಿಜೈರ್:

    ಕ್ಯಾಶ್ ಡಿಸ್ಕೌಂಟ್‍ನಲ್ಲಿ ಡಿಜೈರ್ ಪೆಟ್ರೋಲ್ ನ ಸಾಮಾನ್ಯ ಮಾದರಿಗೆ 20,000 ಹಾಗೂ ವಿಶೇಷ ಮಾದರಿಗೆ 27,000 ರೂಪಾಯಿ ರಿಯಾಯಿತಿ ನೀಡಿದ್ದರೆ, ಡೀಸೆಲ್ ಮಾದರಿಗೆ 10,000 ರೂಪಾಯಿಗಳು. ಎಕ್ಸ್‌ಚೇಂಜ್ ಡಿಸ್ಕೌಂಟ್‍ಗಳಲ್ಲಿ ಪೆಟ್ರೋಲ್ ಮಾದರಿ ಮೇಲೆ 10,000 ದಿಂದ 20,000 ರೂಪಾಯಿ ಹಾಗೂ ಡೀಸೆಲ್ ಮಾದರಿಗೆ 10,000 ರೂಪಾಯಿ ರಿಯಾಯಿತಿ ನೀಡಿದೆ.

    3. ಸ್ವಿಫ್ಟ್:


    ಕ್ಯಾಶ್ ಡಿಸ್ಕೌಂಟ್‍ನಲ್ಲಿ ಸ್ವಿಫ್ಟ್ ಪೆಟ್ರೋಲ್ ನ ಸಾಮಾನ್ಯ ಮಾದರಿಗೆ 20,000 ರೂಪಾಯಿ, ವಿಶೇಷ ಮಾದರಿಗೆ 27,000 ರೂಪಾಯಿ ಹಾಗೂ ಡೀಸೆಲ್ ಮಾದರಿಗೆ 10,000 ರೂಪಾಯಿ ನೀಡಿದೆ. ಎಕ್ಸ್‌ಚೇಂಜ್ ಡಿಸ್ಕೌಂಟ್‍ಗಳಲ್ಲಿ ಪೆಟ್ರೋಲ್ ಮಾದರಿ ಮೇಲೆ 10,000 ದಿಂದ 20,000 ರೂಪಾಯಿ ಹಾಗೂ ಡೀಸೆಲ್ ಮಾದರಿಗೆ 25,000 ರೂಪಾಯಿವರೆಗೆ ರಿಯಾಯಿತಿ ನೀಡಿದೆ.

    4. ಸೆಲಿರಿಯೋ:


    ಕ್ಯಾಶ್ ಡಿಸ್ಕೌಂಟ್‍ನಲ್ಲಿ ಸೆಲಿರಿಯೋದ ಎಂಟಿ (ಮ್ಯಾನುವಲ್ ಟ್ರಾನ್ಸ್‌ಮಿಷನ್) ಹಾಗೂ ಎಎಂಟಿ (ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ಮಾದರಿ ಮೇಲೆ ಒಟ್ಟು 25,000 ದಿಂದ 30,000 ರೂಪಾಯಿವರೆಗೆ ರಿಯಾಯಿತಿ ನೀಡಿದೆ. ಎಕ್ಸ್‌ಚೇಂಜ್ ಡಿಸ್ಕೌಂಟ್‍ನಲ್ಲಿ ಸೆಲಿರಿಯೋ ಎಂಟಿ ಮಾದರಿಗೆ 25,000 ರೂಪಾಯಿ ಹಾಗೂ ಎಎಂಟಿ ಮಾದರಿಗೆ 30,000 ರೂಪಾಯಿವರೆಗೆ ರಿಯಾಯಿತಿ ನೀಡಿದೆ.

    5. ಆಲ್ಟೊ/ಆಲ್ಟೊ-ಕೆ10:


    ಕ್ಯಾಶ್ ಡಿಸ್ಕೌಂಟ್‍ನಲ್ಲಿ ಆಲ್ಟೊ ಪೆಟ್ರೋಲ್ ಹಾಗೂ ಸಿಎನ್‍ಜಿ ಮಾದರಿಗೆ 25,000 ರೂಪಾಯಿ, ಆಲ್ಟೋ ಕೆ10 ಎಂಟಿಗೆ 22,000 ರೂಪಾಯಿ, ಎಎಂಟಿಗೆ 27,000 ಸಾವಿರ ರೂಪಾಯಿಗಳು. ಎಕ್ಸ್‌ಚೇಂಜ್ ಡಿಸ್ಕೌಂಟ್‍ನಲ್ಲಿ ಆಲ್ಟೋ ಹಾಗೂ ಆಲ್ಟೋ ಕೆ10 ನ ಎಲ್ಲಾ ಮಾದರಿಗಳ ಮೇಲೆ ಒಟ್ಟು 30,000 ರೂಪಾಯಿಯ ರಿಯಾಯಿತಿ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಕಾರಿನ ಮೇಲೆ ಚಪ್ಪಲಿ ಎಸೆತ

    ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಕಾರಿನ ಮೇಲೆ ಚಪ್ಪಲಿ ಎಸೆತ

    ರಾಮನಗರ: ಮಾಗಡಿ ಪುರಸಭೆ ಅದ್ಯಕ್ಷ ಚುನಾವಣೆಯಲ್ಲಿ ದಲಿತರಿಗೆ ಮಾತು ಕೊಟ್ಟು ಬೇರೆಯವರಿಗೆ ಮಣೆ ಹಾಕಿದ್ದಕ್ಕೆ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಕಾರಿನ ಮೇಲೆ ಚಪ್ಪಲಿ ಎಸೆದಿರುವ ಘಟನೆ ಮಾಗಡಿಯಲ್ಲಿ ನಡೆದಿದೆ.

    ಇಂದು ಮಾಗಡಿ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ನಡೆದಿತ್ತು. ಚುನಾವಣೆಗೆ ಮುನ್ನ ದಲಿತ ಮುಖಂಡರಾದ ರಂಗಹನುಮಯ್ಯನವರ ಪತ್ನಿಗೆ ಅಧ್ಯಕ್ಷ ಸ್ಥಾನದ ಭರವಸೆ ನೀಡಲಾಗಿತ್ತು. ಆದ್ರೆ ಇಂದು ನಡೆದ ಚುನಾವಣೆಯಲ್ಲಿ ಕುರುಬ ಸಮುದಾಯದ ಮಂಜುನಾಥ್ ಗೆ ಅಧ್ಯಕ್ಷ ಪಟ್ಟ ನೀಡಲಾಯ್ತು.

    ದಲಿತ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ತಪ್ಪಿದ್ದರಿಂದ ದಲಿತರು ಪುರಸಭೆಯಿಂದ ಹೊರಟಿದ್ದ ಶಾಸಕ ಬಾಲಕೃಷ್ಣರ ಕಾರನ್ನು ಅಡ್ಡಗಟ್ಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇನ್ನೂ ಕಾರಿಗೆ ಹಾಕಿದ್ದ ಹೂವಿನ ಹಾರವನ್ನು ಕಿತ್ತೆಸೆದರು. ನಂತರ ಮುಂದೆ ಸಾಗುತ್ತಿದ್ದ ಕಾರಿನ ಮೇಲೆ ಚಪ್ಪಲಿ ಎಸೆಯಲಾಗಿದೆ. ಆದ್ರೆ ಕಾರು ಮುಂದೆ ಸಾಗಿದ್ರಿಂದ ದೂರದಲ್ಲಿ ಚಪ್ಪಲಿ ಬಿದ್ದಿದೆ. ಬಾಲಕೃಷ್ಣರಿಗೆ ಮಾತ್ರವಲ್ಲದೆ ಸಚಿವ ಎಚ್.ಎಂ.ರೇವಣ್ಣ ಹಾಗೂ ಸಂಸದ ಡಿ.ಕೆ ಸುರೇಶ್ ವಿರುದ್ಧ ಧಿಕ್ಕಾರ ಕೂಗಿ, ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

    https://www.youtube.com/watch?v=LenMxp3xZrU