Tag: carrot

  • ಕ್ಯಾರೆಟ್ ಹಲ್ವಾ ಮಾಡುವುದು ಹೇಗೆ ಗೊತ್ತಾ.. ಓದಿ ಟ್ರೈ ಮಾಡಿ

    ಕ್ಯಾರೆಟ್ ಹಲ್ವಾ ಮಾಡುವುದು ಹೇಗೆ ಗೊತ್ತಾ.. ಓದಿ ಟ್ರೈ ಮಾಡಿ

    ಕ್ಯಾರೆಟ್ ನಮ್ಮ ಆರೋಗ್ಯಕ್ಕೆ ಮತ್ತು ತ್ವಚೆಗೆ ತುಂಬಾ ಒಳ್ಳೆಯದು. ಕ್ಯಾರೆಟ್ ಜ್ಯೂಸ್ ಮತ್ತು ಹಸಿ ಕ್ಯಾರೆಟ್ ಅನ್ನು ಜನರು ತುಂಬಾ ಇಷ್ಟಪಟ್ಟು ಕುಡಿತ್ತಾರೆ ಮತ್ತು ತಿನ್ನುತ್ತಾರೆ. ಅದರಂತೆ ನಿಮಗೆ ಜನಪ್ರಿಯಾವಾದ ʼಕ್ಯಾರೆಟ್ ಹಲ್ವಾʼ ಮಾಡುವ ಸೂಪರ್ ವಿಧಾನವನ್ನು ಹೇಳಿಕೊಡುತ್ತಿದ್ದೇವೆ. ಈ ರೆಸಿಪಿಯನ್ನು ನೀವು ನಿಮ್ಮ ಮನೆಯಲ್ಲಿ ಟ್ರೈ ಮಾಡಿರುತ್ತಿರಾ ಆದರೆ ಇಂದು ನಾವು ಹೇಳಿಕೊಡುವ ರೀತಿ ಮಾಡಿದ್ರೆ ನಿಮಗೆ ಇನ್ನೂ ಹೆಚ್ಚು ಇಷ್ಟವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಟ್ರೈ ಮಾಡಿ .

    ಬೇಕಾಗಿರುವ ಪದಾರ್ಥಗಳು:
    * ಕ್ಯಾರೆಟ್ – 1 ಕೆಜಿ
    * ತುಪ್ಪ – ಅರ್ಧ ಕಪ್
    * ಕಟ್ ಮಾಡಿದ ಗೋಡಂಬಿ – 10
    * ಕಟ್ ಮಾಡಿದ ಬಾದಾಮಿ – 10


    * ಹಾಲು – 3 ಕಪ್
    * ಸಕ್ಕರೆ – ಅರ್ಧ ಕಪ್
    * ಖೋವಾ – 2 ಟೀಸ್ಪೂನ್
    * ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    * ಒಣ ದ್ರಾಕ್ಷಿ – 2 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲನೆಯದಾಗಿ, ಕ್ಯಾರೆಟ್ ಸಿಪ್ಪೆ ತೆಗೆದು ನುಣ್ಣಗೆ ತುರಿಯಿರಿ. ಪಕ್ಕಕ್ಕೆ ಇರಿಸಿ.
    * ದೊಡ್ಡ ಬಾಣಲೆಯಲ್ಲಿ ಕಡಿಮೆ ಶಾಖದಲ್ಲಿ ಅರ್ಧ ಕಪ್ ತುಪ್ಪ ಮತ್ತು ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿಯನ್ನು ಗೋಲ್ಡನ್ ಬ್ರೌನ್ ಬರುವವರೆಗೂ ಫ್ರೈ ಮಾಡಿ. ಪಕ್ಕಕ್ಕೆ ಇರಿಸಿ.

    * ಅದೇ ಬಾಣಲಿಯಲ್ಲಿ ಕ್ಯಾರೆಟ್ ಸೇರಿಸಿ ಚೆನ್ನಾಗಿ 5 ನಿಮಿಷಗಳ ಕಾಲ ಫ್ರೈ ಮಾಡಿ
    * ಈಗ 3 ಕಪ್ ಹಾಲು ಸುರಿಯಿರಿ ಮತ್ತು ಚೆನ್ನಾಗಿ ಬೆರೆಸಿ. 10 ನಿಮಿಷಗಳ ಕಾಲ ಕುದಿಸಿ. ಕ್ಯಾರೆಟ್ ಚೆನ್ನಾಗಿ ಬೇಯಿಸಿ ಹಾಲು ಕಡಿಮೆಯಾಗುವವರೆಗೆ ಕುದಿಸಿ.


    * ಹಾಲು ಸಂಪೂರ್ಣವಾಗಿ ಕಡಿಮೆಯಾದ ಮೇಲೆ ಸಕ್ಕರೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸಕ್ಕರೆ ಕರಗುವವರೆಗೆ ಬೇಯಿಸಿ.
    * ಅದಕ್ಕೆ ಕೋವಾ ಹಾಕಿ ಹುರಿಯಿರಿ ನಂತರ ಗ್ಯಾಸ್ ಆಫ್ ಮಾಡಿ ಏಲಕ್ಕಿ ಪುಡಿ ಮತ್ತು ಗೋಡಂಬಿ, ಬಾದಾಮಿಯಿಂದ ಅಲಂಕಾರಿಸಿ.

    – ಕ್ಯಾರೆಟ್ ಹಲ್ವಾವನ್ನು ತಣ್ಣಗೆ ಮಾಡಿಯೂ ಆನಂದಿಸಬಹುದು ಅಥವಾ ಬಿಸಿಯಾಗಿರುವಗಾಲು ಸವಿಯ ಬಹುದು.

    Live Tv
    [brid partner=56869869 player=32851 video=960834 autoplay=true]

  • ಇಬ್ಬರು ಜುಟ್ಟು ಎಳೆದುಕೊಂಡು ಹೊಡಿದಾಡಿ ಅಂದಿದ್ಯಾಕೆ ಅರವಿಂದ್?

    ಇಬ್ಬರು ಜುಟ್ಟು ಎಳೆದುಕೊಂಡು ಹೊಡಿದಾಡಿ ಅಂದಿದ್ಯಾಕೆ ಅರವಿಂದ್?

    ವಾರ ಕಿಚನ್ ಡಿಪಾರ್ಟ್ ನಲ್ಲಿರುವ ಶುಭಾ ಹಾಗೂ ನಿಧಿ ಸುಬ್ಬಯ್ಯ ಅಡುಗೆ ಮಾಡುವ ವೇಳೆ ಸಣ್ಣ ಮಕ್ಕಳಂತೆ ಕಿತ್ತಾಡಿದ್ದಾರೆ.

    ಬೆಳಗ್ಗೆ ಇಬ್ಬರು ಸ್ಟವ್ ಮುಂದೆ ನಿಂತು ಅಡುಗೆ ಮಾಡುವಾಗ ನಿಧಿ ಸುಬ್ಬಯ್ಯ ಶುಭಾ ನನಗೆ ಮಾತ್ರ ಯಾಕೆ ನಾಲ್ಕು ಪೀಸ್ ಆಲೂಗಡ್ಡೆ ಕೊಟ್ಟಿದ್ಯಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಶುಭಾ ವಾಟ್ ನಾನ್ ಸೆನ್ಸ್ ಸಮವಾಗಿ ಕೊಟ್ಟಿದ್ದೇನೆ ಎಂದಿದ್ದಾರೆ. ಇದಕ್ಕೆ ನಿಧಿ ಇದು ಸರಿಯಾಗಿರುವುದಿಲ್ಲ. ಪಕ್ಕದ ಸ್ಟವ್‍ನಲ್ಲಿ ಬೇಯಿಸುತ್ತಿರುವ ಆಲೂಗಡ್ಡೆಯಲ್ಲಿ ಸ್ವಲ್ಪ ತೆಗೆದು ಕೊಡು ಎಂದು ಕೇಳುತ್ತಾರೆ.

    ಆಗ ಶುಭಾ, ಗೂಬೆ ತರ ಆಡಬೇಡ ನೋಡಲ್ಲಿ ಅಷ್ಟು ತರಕಾರಿ ನೀಡಿದ್ದೇನೆ ಎನ್ನುತ್ತಾ ನಿಧಿ ಕೈನಲ್ಲಿದ್ದ ಪ್ಲೇಟ್‍ನಿಂದ ತಮ್ಮ ಕುಕ್ಕರ್‍ಗೆ ತರಕಾರಿಯನ್ನು ಸುರಿದುಕೊಳ್ಳುತ್ತಾರೆ. ನಂತರ ಈ ಕುಕ್ಕರ್ ಪಲಾವ್ ಆ ಕುಕ್ಕರ್ ಪಲಾವ್ ಅಂತ ಸಪರೇಟ್ ಆಗಿ ನಾವೇನು ಮಾಡುತ್ತಿಲ್ಲ ಮಾಡುತ್ತಿರುವುದು ಒಂದೇ ಪಲಾವ್ ಸಮನಾಗಿರಬೇಕು ಎಂದು ಬುದ್ದಿ ಹೇಳಿ, ಗುದ್ದು ಬಿಡುತ್ತೇನೆ ನಿನಗೆ ಎಂದು ಶುಭಾ ನಿಧಿಗೆ ಬಯ್ಯುತ್ತಾರೆ. ಇದಕ್ಕೆ ನಿಧಿ ನಿನಗೆ ಗುದ್ದಿ ಬಿಡುತ್ತೇನೆ ಅಂದಾಗ ಶುಭಾ ಇರಿಟೆಶನ್ ಫೆಲೋ ಅಂದಾಗ ಅದಕ್ಕೆ ನಿಧಿ ಸ್ಟುಪಿಡ್ ಎನ್ನುತ್ತಾರೆ.

    ಬಳಿಕ ಶುಭಾ ನಿಧಿ ಬೇಯಿಸುತ್ತಿದ್ದ ಕುಕ್ಕರ್‍ನಲ್ಲಿ ಅಷ್ಟು ಕ್ಯಾರೆಟ್ ಇದೆ ಕೊಡು ಎಂದು ಎತ್ತಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ನಿಧಿ ಅಲ್ಲೆ ಇದ್ದ ಅರವಿಂದ್ ಬಳಿ ಅವಳು ಬೇಯಿಸುತ್ತಿರುವ ಕುಕ್ಕರ್‍ನಲ್ಲಿ ಜಾಸ್ತಿ ಆಲೂಗಡ್ಡೆ ಇಲ್ಲಾವಾ ನೋಡು ಎಂದು ವಾದ ಒಪ್ಪಿಸುತ್ತಾರೆ. ಇದಕ್ಕೆ ಶುಭಾ ನಿಧಿಗೆ ಇರಿಟೇಟಿಂಗ್ ಫೀಮೇಲ್ ಎಂದರೆ ನಿಧಿ ಇರಿಟೇಟಿಂಗ್ ಮೇಲ್ ಎನ್ನುತ್ತಾರೆ.

    ಆಗ ಅರವಿಂದ್ ಇಬ್ಬರು ಜುಟ್ಟು ಎಳೆದುಕೊಂಡು ಹೊಡೆದುಕೊಳ್ಳಿ ಎಂದು ಅಣುಕಿಸುತ್ತಾರೆ. ಹೀಗೆ ಇಬ್ಬರು ಜಗಳ ಮುಂದುವರೆಸಿ ನಂತರ ನಿಧಿ ಹಾಗೂ ಶುಬಾ ಪೂಂಜಾ ಕ್ಯಾರೆಟ್ ಹಾಗೂ ಆಲೂಗಡ್ಡೆಯನ್ನು ಹಂಚಿಕೊಳ್ಳುವುದರ ಮೂಲಕ ಕೊನೆಗೆ ರಾಜಿಯಾಗುತ್ತಾರೆ.

  • ಗಾಢ ಬಣ್ಣದ ಕ್ಯಾರೆಟ್ ಖರೀದಿಸೋ ಮುನ್ನ ಈ ಸ್ಟೋರಿ ಓದಿ

    ಗಾಢ ಬಣ್ಣದ ಕ್ಯಾರೆಟ್ ಖರೀದಿಸೋ ಮುನ್ನ ಈ ಸ್ಟೋರಿ ಓದಿ

    ಬೀದರ್: ಕ್ಯಾರೆಟ್ ತಿಂದ್ರೆ ವಿಟಮಿನ್ ಎ ಸಿಗುತ್ತೆ, ಕಣ್ಣಿಗೆ ಒಳ್ಳೆಯದು. ಹೀಗಾಗಿ ಮಾರುಕಟ್ಟೆಗಳಲ್ಲಿ ಕ್ಯಾರೆಟ್ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುತ್ತೆ. ಆದ್ರೆ ಸದ್ಯ ಮಾರುಕಟ್ಟೆಗಳಲ್ಲಿ ಸಿಗುತ್ತಿರುವ ಗಾಢ ಬಣ್ಣದ ಕ್ಯಾರೆಟ್ ತಿನ್ನುವಾಗ ಎಚ್ಚರದಿಂರಬೇಕು.

    ಹೌದು. ಬೀದರ್‍ನ ಔರಾದ್ ತಾಲೂಕಿನಲ್ಲಿ ಗಜ್ಜರಿ ವ್ಯಾಪಾರಿಗಳು ದುಪ್ಪಟ್ಟು ಹಣ ಗಳಿಸೋಕೆ ಬಣ್ಣ ಬಳಸಿ ಕಲಬೆರಕೆ ದಂಧೆ ನಡೆಸ್ತಿದ್ದಾರೆ. ಹಲವು ವರ್ಷಗಳಿಂದ ಈ ದಂಧೆ ನಡೆಯುತ್ತಿದ್ದು, ಕ್ಯಾರೆಟ್ ತಿಂದು ಗ್ರಾಹಕರಿಗೆ ಹೊಟ್ಟೆ ನೋವಿನ ಪ್ರಕರಣ ಜಾಸ್ತಿಯಾದಾಗ ತಾಲೂಕು ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕಲಬೆರಕೆ ದಂಧೆಕೋರರು ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

    ಕ್ಯಾರೆಟ್ ಬಣ್ಣ ಗಾಢವಾಗಿಸೋಕೆ ಏನ್ ಮಾಡ್ತಾರೆ?: ಸಕ್ಕರೆ ಮಿಶ್ರಿತ ನೀರಿನಲ್ಲಿ ಕ್ಯಾರೆಟ್ ನೆನೆಸಿಡ್ತಿದ್ದಾರೆ. ರಾತ್ರಿಯಿಡೀ ಸಕ್ಕರೆ ಮಿಶ್ರಿತ ನೀರಲ್ಲಿ ನೆನೆಸಿಟ್ಟ ಕ್ಯಾರೆಟ್‍ಗೆ ಕಲರ್ ಬರುತ್ತೆ. ಇಂಥ ಕಲರ್‍ಗೆ ಮರುಳಾಗಿ ಜನ ಕ್ಯಾರೆಟ್ ಖರೀದಿ ಮಾಡ್ತಾರೆ.

    ತಿಂದ್ರೆ ಏನಾಗುತ್ತೆ?: ಈ ಸಕ್ಕರೆ ಲೇಪಿತ ಕ್ಯಾರೆಟ್ ತಿಂದ ಗ್ರಾಹಕರಿಗೆ ಹೊಟ್ಟೆ ನೋವು ಬರುತ್ತೆ. ಅಷ್ಟೇ ಅಲ್ಲದೇ ಮಧುಮೇಹ, ಶ್ವಾಸಕೋಶದ ತೊಂದರೆಗಳು, ಗ್ಯಾಸ್ಟಿಕ್ ಸಮಸ್ಯೆ, ಜೀರ್ಣಕ್ರಿಯಗೆ ಸಂಬಂಧಿಸಿದ ಹಲವು ಕಾಯಿಲೆಗಳು ಬರುವುದು ಖಚಿತ ಎಂದು ತಾಲೂಕು ಆರೋಗ್ಯಾಧಿಕಾರಿ ಮಹೇಶ್ ಬಿರಾದಾರ್ ಹೇಳಿದ್ದಾರೆ.