ಲಂಡನ್: ಇಟಲಿಯ ಜಾನ್ನಿಕ್ ಸಿನ್ನರ್ (Jannik Sinner) ಚೊಚ್ಚಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೋಸ್ ಆಲ್ಕರಜ್ (Carlos Alcaraz) ವಿರುದ್ಧ 4-6, 6-4, 6-4, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ಈ ಸೋಲಿನೊಂದಿಗೆ ಹ್ಯಾಟ್ರಿಕ್ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಆಲ್ಕರಜ್ ಕನಸು ಭಗ್ನಗೊಂಡಿತು. ಸಿನ್ನರ್‌ಗೆ ಶರಣಾಗುವ ಮೂಲಕ ವಿಂಬಲ್ಡನ್‌ನಲ್ಲಿ ಸತತ 20 ಗೆಲುವುಗಳ ಓಟಕ್ಕೂ ಬ್ರೇಕ್ ಬಿತ್ತು. ಯಾನ್ನಿಕ್ ಸಿನ್ನರ್ ಅವರಿಗೆ ಈ ವರ್ಷ 2ನೇ ಹಾಗೂ ಒಟ್ಟಾರೆ 4ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಸಿಕ್ಕಿದಂತಾಗಿದೆ.
ಕಳೆದ ಎರಡೂ ಆವೃತ್ತಿಗಳಲ್ಲಿ ದಿಗ್ಗಜ ನೊವಾಕ್ ಜೊಕೊವಿಕ್ (Novak Djokovic) ಅವರನ್ನ ಮಣಿಸಿ 2 ಬಾರಿ ಪ್ರಶಸ್ತಿಗೆ ಮುತ್ತಿಟ್ಟಿದ್ದ ಅಲ್ಕರಾಜ್ ಸತತ 3ನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ತವಕದಲ್ಲಿದ್ದರು. ಈ ಬಾರಿಯ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್‌ನಂತೆ ಪುರುಷರ ಸಿಂಗಲ್ಸ್‌ನಲ್ಲೂ ಹೊಸ ಚಾಂಪಿಯನ್‌ನ ಉದಯವಾಗಿರುವುದು ವಿಶೇಷ.
ಬಹುಮಾನ ಎಷ್ಟು?
ಚಾಂಪಿಯನ್ ಆಗಿರುವ ಸಿನ್ನರ್‌ಗೆ 30 ಲಕ್ಷ ಪೌಂಡ್(ಅಂದಾಜು 34.75 ಕೋಟಿ ರೂ.) ಬಹುಮಾನ ಸಿಕ್ಕಿದರೆ, ರನ್ನರ್ ಅಪ್ ಆದ ಆಲ್ಕರಜ್‌ಗೆ 15.2 ಲಕ್ಷ ಪೌಂಡ್ (ಅಂದಾಜು 17.61 ಕೋಟಿ ರೂ.) ಬಹುಮಾನ ಮೊತ್ತ ಸಿಕ್ಕಿದೆ.
ಲಂಡನ್: ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿಂದು (Wimbledon Final) ಕಾರ್ಲೋಸ್ ಅಲ್ಕರಾಜ್ (Carlos Alcaraz) ಅವರು ಇದೇ ಮೊದಲ ಬಾರಿಗೆ ಫೈನಲ್ ತಲುಪಿರುವ ಜಾನಿಕ್ ಸಿನ್ನರ್ ಅವರನ್ನ ಎದುರಿಸಲಿದ್ದಾರೆ. ಪುರುಷರ ಟೆನ್ನಿಸ್‌ನಲ್ಲಿ ಉತ್ತುಂಗಕ್ಕೇರಲು ಇಬ್ಬರು ಯುವ ತಾರೆಗಳ ಪೈಪೋಟಿ ರಂಗೇರಿಸಲಿದೆ.
ಲಂಡನ್‌ನಲ್ಲಿ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ಫೈನಲ್ ಹಣಾಹಣಿ ನಡೆಯಲಿದ್ದು, ರಾತ್ರಿ 8:30ಕ್ಕೆ ಗೇಮ್ ಶುರುವಾಗಲಿದೆ. ಕಳೆದ ಎರಡೂ ಆವೃತ್ತಿಗಳಲ್ಲಿ ದಿಗ್ಗಜ ನೊವಾಕ್ ಜೊಕೊವಿಕ್ (Novak Djokovic) ಅವರನ್ನ ಮಣಿಸಿ 2 ಬಾರಿ ಪ್ರಶಸ್ತಿಗೆ ಮುತ್ತಿಟ್ಟಿದ್ದ ಅಲ್ಕರಾಜ್ ಸತತ 3ನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ತವಕದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಫೈನಲ್ ತಲುಪಿರುವ ಸಿನ್ನರ್ (Jannik Sinner) ಕೂಡ ಪ್ರಶಸ್ತಿ ಗೆಲ್ಲುವ ಛಲದಲ್ಲಿದ್ದಾರೆ. ಇದನ್ನೂ ಓದಿ: ಕನ್ನಡಿಗ ರಾಹುಲ್ ಆಕರ್ಷಕ ಶತಕ; ಇಂಗ್ಲೆಂಡ್ ಲೆಕ್ಕ ಚುಕ್ತಾ ಮಾಡಿದ ಟೀಂ ಇಂಡಿಯಾ
ಕೊನೆಯ 8 ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗಳಲ್ಲಿ ಏಳನ್ನು ಇವರಿಬ್ಬರು ಹಂಚಿಕೊಂಡಿದ್ದಾರೆ. 2024ರ ಬಳಿಕ ತಲಾ ಮೂರು ಪ್ರಮುಖ ಟೂರ್ನಿಗಳಲ್ಲಿ ಇವರಿಬ್ಬರು ಚಾಂಪಿಯನ್ ಆಗಿದ್ದಾರೆ. ಟೆನಿಸ್‌ನ ‘ಬಿಗ್ ತ್ರೀ’ ಎನಿಸಿದ್ದ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್, ಸ್ಪೇನ್ ರಫೆಲ್ ನಡಾಲ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಪ್ರಾಬಲ್ಯದ ಯುಗ ಅಂತ್ಯಗೊಂಡಿದೆ. ಇದನ್ನೂ ಓದಿ: ಬೌಂಡರಿಯಿಂದಲೇ 196 ರನ್ – ವೇಗದ ತ್ರಿಶತಕ ಸಿಡಿಸಿ ದಾಖಲೆ ಬರೆದ ಮುಲ್ಡರ್
ಎರಡು ಬಾರಿಯ ಚಾಂಪಿಯನ್, 22 ವರ್ಷದ ಅಲ್ಕರಾಜ್ ಅವರು ಮೇಲ್ನೋಟಕ್ಕೆ ಭಾನುವಾರ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ಸ್ಪೇನ್‌ನ ಆಟಗಾರ, ಇಟಲಿಯ ಆಟಗಾರನ ವಿರುದ್ಧ 12 ಮುಖಾಮುಖಿಗಳಲ್ಲಿ ಕೊನೆಯ ಐದರಲ್ಲಿ ಸೇರಿದಂತೆ ಎಂಟರಲ್ಲಿ ಜಯಗಳಿಸಿದ್ದಾರೆ. ಅಲ್ಕರಾಜ್ ಐದು ಗ್ರ್ಯಾಂಡ್‌ಸ್ಲಾಮ್ ಮತ್ತು 23 ವರ್ಷದ ಸಿನ್ನರ್ ಮೂರು ಟ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಲಂಡನ್: ಸತತ 10 ವರ್ಷಗಳ ಕಾಲ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ಸೋಲಿಲ್ಲದ ಸರದಾರನಾಗಿ ಆರ್ಭಟಿಸಿದ್ದ ನೊವಾಕ್ ಜೊಕೊವಿಕ್‌ಗೆ ?(Novak Djokovic) ಸತತ 2ನೇ ಬಾರಿಗೆ ಸೋಲಾಗಿದೆ. ಕಾರ್ಲೋಸ್ ಅಲ್ಕರಾಜ್ (Carlos Alcaraz) ಮತ್ತೆ ಚಾಂಪಿಯನ್ ಆಗಿದ್ದಾರೆ.
ಕಳೆದ ವರ್ಷ ಸಹ ಅಲ್ಕರಾಜ್, ನೊವಾಕ್ ಜೊಕೊವಿಕ್ ಅವರನ್ನೇ ಮಣಿಸಿ ಚೊಚ್ಚಲ ವಿಂಬಲ್ಡನ್ ಕಿರೀಟಕ್ಕೆ ಮುತ್ತಿಟ್ಟಿದ್ದರು. ಈ ಬಾರಿಯೂ ಜೊಕೊವಿಕ್ ಅವರನ್ನೇ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ವಿಶೇಷ. 6-2, 6-2, 7-6 (7/4) ಸೆಟ್‌ಗಳಲ್ಲಿ ಮಣಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ತಮ್ಮ ಹೆಸರಿನಲ್ಲೇ ಅಲ್ಕರಾಜ್ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: IPL ಟ್ರೋಫಿ ತಂದುಕೊಡದಿದ್ದಕ್ಕೆ ತಲೆದಂಡ – ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್ಗೆ ಕೊಕ್!
3ನೇ ಗ್ರ್ಯಾಂಡ್‌ಸ್ಲಾಮ್ ಕಿರೀಟ:
ಇದು ಅಲ್ಕರಾಜ್ ಗೆದ್ದ 3ನೇ ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿಯೂ (Grand Slam Crown) ಸಹ ಆಗಿದೆ. 2022ರ ಯುಎಸ್ ಓಪನ್ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟ ಜಯಿಸಿದ್ದರು. ಬಳಿಕ 2023ರಲ್ಲಿ ಆಲ್ ಇಂಗ್ಲೆಂಡ್ ಟೆನ್ನಿಸ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಜೊಕೊವಿಕ್ ವಿರುದ್ಧ 2ನೇ ಗ್ರ್ಯಾಂಡ್‌ಸ್ಲ್ಯಾಮ್ ಕಿರೀಟ ಗೆದ್ದುಕೊಂಡಿದ್ದರು.
ಲಂಡನ್: ಕಳೆದ 10 ವರ್ಷಗಳಿಂದ ವಿಂಬಲ್ಡನ್ (Wimbledon) ಸೆಂಟರ್ ಕೋರ್ಟ್‌ನಲ್ಲಿ ಸೋಲಿಲ್ಲದ ಸರದಾರನಾಗಿ ಆರ್ಭಟಿಸಿದ್ದ ನೊವಾಕ್ ಜೊಕೊವಿಕ್‌ನನ್ನ (Novak Djokovic) ಸೋಲಿಸಿ ವಿಶ್ವ ಶ್ರೇಯಾಂಕ ಆಟಗಾರ ಕಾರ್ಲೊಸ್ ಅಲ್ಕರಾಝ್ (Carlos Alcaraz) ಚೊಚ್ಚಲ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ
ಆಲ್ ಇಂಗ್ಲೆಂಡ್ ಟೆನ್ನಿಸ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಭಾನುವಾರ (ಜುಲೈ 16) ನಡೆದ ಹೈ-ವೋಲ್ಟೇಜ್ ಕಣದಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದರೂ, 20 ವರ್ಷದ ಯುವ ತಾರೆ ಕಾರ್ಲೊಸ್ ಅಲ್ಕರಾಝ್, 1-6, 7-6 (8-6), 6-1, 3-6, 6-4 ಅಂತರದ 5 ಸೆಟ್‌ಗಳ ಮ್ಯಾರಥಾನ್ ಹೋರಾಟದಲ್ಲಿ ಟೆನಿಸ್ ಲೋಕದ ದಿಗ್ಗಜ ನೊವಾಕ್ ಜೊಕೋವಿಕ್ ವಿರುದ್ಧ ಗೆಲುವು ಸಾಧಿಸಿ ವಿಂಬಲ್ಡನ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಇದು ಕಾರ್ಲೊಸ್ ಗೆದ್ದ 2ನೇ ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿಯಾಗಿದೆ. ಈ ಹಿಂದೆ 2022 ಯುಎಸ್ ಓಪನ್ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟ ಜಯಿಸಿದ್ದರು.
ಬರೋಬ್ಬರಿ 4 ಗಂಟೆ 42 ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಗೆಲುವಿನ ಸಂಭ್ರಮ ಕಂಡು ವಿಂಬಲ್ಡನ್ ಮುಕುಟ ಗೆದ್ದ ಕಾರ್ಲೊಸ್ ಅಲ್ಕರಾಝ್ ವಿಶ್ವದ ನಂಬರ್ 1 ಸ್ಥಾನವನ್ನು ಉಳಿಸಿಕೊಳ್ಳುವುದರ ಜೊತೆಗೆ 2003ರ ಬಳಿಕ ಟೆನ್ನಿಸ್ ಲೋಕದ ದಿಗ್ಗಜರಾದ ರೋಜರ್ ಫೆಡರರ್, ರಫಾಲ್ ನಡಾಲ್, ನೊವಾಕ್ ಜೊಕೋವಿಕ್, ಆಂಡಿ ಮರ್ರೆ ನಂತರ ವಿಂಬಲ್ಡನ್ ಗೆದ್ದ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಇದನ್ನೂ ಓದಿ: Wimbledon 2023ː ಮಹಿಳಾ ಸಿಂಗಲ್ಸ್ ಗೆದ್ದು ಇತಿಹಾಸ ಬರೆದ ವಾಂಡ್ರೊಸೊವಾ
ನೊವಾಕ್ ಜೊಕೊವಿಕ್ ವಿಂಬಲ್ಡನ್‌ನಲ್ಲಿ ಸತತ 5 ಬಾರಿ ಗ್ರಾಂಡ್ ಸ್ಲಾಮ್ ಪ್ರಶಸ್ತಿ (Grand Slam Crown) ಗೆದ್ದಿದ್ದಾರೆ. ಆದ್ರೆ ಕಳೆದ 10 ವರ್ಷಗಳಿಂದ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ಸೋಲಿಲ್ಲದ ಸರದಾರ ನಾಗಿದ್ದ ಆರ್ಭಟಿಸಿದ್ದ ಜೊಕೊವಿಕ್, ವಿಂಬಲ್ಡನ್ ಫೈನಲ್ ನಲ್ಲಿ ಕಾರ್ಲೊಸ್ ಅಲ್ಕರಾಝ್ ವಿರುದ್ಧ ಸೋತು ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ಅವರ ಸತತ 7 ಬಾರಿ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ದಾಖಲೆ ಮುರಿಯುವ ಅವಕಾಶ ಕೈಚೆಲ್ಲಿಕೊಂಡಿದ್ದಾರೆ. ಇದನ್ನೂ ಓದಿ: Test Cricketː ನಂ.1 ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಭಾರತ!
ಬಾಯ್ತುಂಬ ಹೊಗಳಿದ ಜೊಕೊವಿಕ್:
ವಿಂಬಲ್ಡನ್ ಫೈನಲ್‌ನಲ್ಲಿ ಸೋತ ಬಳಿಕ ಮಾತನಾಡಿದ ಜೊಕೊವಿಕ್, ಅಲ್ಕರಾಝ್‌ನನ್ನ ಬಾಯ್ತುಂಬ ಹೊಗಳಿದ್ದಾರೆ. ನನ್ನ ವೃತ್ತಿಬದುಕಿನಲ್ಲಿ ಕಾರ್ಲೊಸ್ ಅಲ್ಕರಾಝ್ ಮಾದರಿಯ ಆಟಗಾರ ಎದುರಾಗೇ ಇಲ್ಲ ಎಂದು ಗುಣಗಾನ ಮಾಡಿದ್ದಾರೆ. ಕಾರ್ಲೊಸ್ ಅಲ್ಕರಾಝ್ ಅವರಲ್ಲಿ ರೋಜರ್ ಫೆಡರರ್, ರಾಫೆಲ್ ನಡಾಲ್ ಮತ್ತು ನನ್ನ ಆಟದ ಸಮ್ಮಿಶ್ರಣ ಕಾಣಬಹುದು ಅಂತಾ ಚರ್ಚೆಯಾಗುತ್ತಿದೆ. ಇದನ್ನ ನಾನು ಕೂಡ ಒಪ್ಪಿಕೊಳ್ಳುತ್ತೇನೆ. ಕಾರ್ಲೊಸ್ ಪರಿಪೂರ್ಣ ಆಟಗಾರ. ನನ್ನ ವೃತ್ತಿಬದುಕಿನಲ್ಲಿ ಇಂತಹ ಒಬ್ಬ ಆಟಗಾರನನ್ನ ನೋಡಿಯೇ ಇರಲಿಲ್ಲ. ಅವರು ನಿಜಕ್ಕೂ ಒಬ್ಬ ಪರಿಪೂರ್ಣ ಆಟಗಾರನಾಗಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.
ಇದೇ ವೇಳೆ ಅಲ್ಕರಾಝ್ ಸಹ ಮಾತನಾಡಿದ್ದು, ಜೊಕೊವಿಕ್‌ನನ್ನ ಹೊಗಳಿದ್ದಾರೆ. ನಾನು ನಿಮ್ಮನ್ನು ನೋಡುತ್ತಲೇ ಟೆನ್ನಿಸ್ ಆಟ ಕಲಿತೆ. ನಾನು ಹುಟ್ಟಿದಾಗಿನಿಂದಲೂ ನೀವು ಹಲವು ಪಂದ್ಯಗಳನ್ನ ಗೆದ್ದಿದ್ದೀರಿ. ನಿಜಕ್ಕೂ ಅವೆಲ್ಲವೂ ಅದ್ಭುತ ಎಂದು ಅಭಿನಂದಿಸಿದ್ದಾರೆ. ಅತಿಹೆಚ್ಚು ಬಾರಿ ಗ್ರ್ಯಾನ್‌ಸ್ಲಾನ್ ಗೆದ್ದ ರಫಾಲ್ ನಡಾಲ್ ಕೂಡ ಅಲ್ಕರಾಝ್‌ಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.