Tag: cardiac arrest

  • ಭಾರತದ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ ಹೃದಯ ಸ್ತಂಭನದಿಂದ ನಿಧನ

    ಭಾರತದ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ ಹೃದಯ ಸ್ತಂಭನದಿಂದ ನಿಧನ

    ನವದೆಹಲಿ: ಭಾರತದ ಮಹಿಳಾ ಯುವ ಉದ್ಯಮಿ ಹಾಗೂ ಮಹಿಳಾ ಕೇಂದ್ರಿತ ಸಾಮಾಜಿಕ ಉದ್ಯಮದ ಸಂಸ್ಥಾಪಕಿ ಪಂಖೂರಿ ಶ್ರೀವಾಸ್ತವ ಅವರು ಹೃದಯ ಸ್ತಂಭನದಿಂದ (ಕಾರ್ಡಿಯಾಕ್‌ ಅರೆಸ್ಟ್) ಮೃತಪಟ್ಟಿದ್ದಾರೆ ಎಂದು ಕಂಪನಿ ಮೂಲಗಳು ತಿಳಿಸಿವೆ.

    32 ವರ್ಷ ವಯಸ್ಸಿನ ಪಂಖೂರಿ ಅವರು ಡಿ.24ರಂದು ಹೃದಯ ಸ್ತಂಭನದಿಂದ ನಿಧನರಾದರು. ಸಿಇಒ ಪಂಖೂರಿ ಇನ್ನಿಲ್ಲ ಎನ್ನುವ ದುಃಖ ನಮ್ಮನ್ನು ಆವರಿಸಿದೆ ಎಂದು ಪಂಖೂರಿ ಅವರ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸಂತಾಪ ಸೂಚಿಸಿ ಟ್ವೀಟ್‌ ಮಾಡಲಾಗಿದೆ.

    ಭಾರತದ ಮಹಿಳೆಯರು ಲೈವ್‌ ಸ್ಟ್ರೀಮಿಂಗ್‌, ಚಾಟ್‌ ಮತ್ತು ಮೈಕ್ರೋ-ಕೋರ್ಸ್‌ಗಳ ಮೂಲಕ ಆನ್‌ಲೈನ್‌ ಶಾಪಿಂಗ್‌ ಮಾಡಲು ಪಂಖೂರಿ ಅವರ ಸಿಕ್ವೊಯಾ ಕ್ಯಾಪಿಟಲ್-ಬೆಂಬಲಿತ ಸಾಮಾಜಿಕ ಸಮುದಾಯವು ವೇದಿಕೆಯಾಗಿದೆ.

    ಪಂಖೂರಿ ಅವರು 2016ರಲ್ಲಿ ಆನ್‌ಲೈನ್‌ ಜಾಹೀರಾತು ಕಂಪನಿ ಕ್ವಿಕರ್‌ ಅನ್ನು ಸ್ವಾಧೀನಪಡಿಸಿಕೊಂಡು ರೀಟೈಲ್‌ ಸ್ಟಾರ್ಟ್‌-ಅಪ್‌ ಗ್ರಾಬ್‌ ಹೌಸ್‌ ಸ್ಥಾಪಿಸಿದ್ದರು.

    ಪಂಖೂರಿ ಅವರು, ಝಾನ್ಸಿ ಮೂಲದವರು. ರಾಜೀವ್‌ ಗಾಂಧಿ ತಾಂತ್ರಿಕ ವಿವಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದರು.

  • ಹೃದಯಾಘಾತದಿಂದ 7ನೇ ತರಗತಿ ಬಾಲಕ ಸಾವು

    ಹೃದಯಾಘಾತದಿಂದ 7ನೇ ತರಗತಿ ಬಾಲಕ ಸಾವು

    ಚಿಕ್ಕಮಗಳೂರು: ಹೃದಯಾಘಾತದಿಂದ 7ನೇ ತರಗತಿ ಬಾಲಕ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ.

    ಮೃತ ಬಾಲಕನನ್ನು 12 ವರ್ಷದ ಸೋಹನ್ ರಾಮ್ ಎಂದು ಗುರುತಿಸಲಾಗಿದೆ. ಪಟ್ಟಣದ ಮೆಸ್ಕಾಂ ಕಚೇರಿ ಬಳಿ ಇಂದು ಬೆಳಗ್ಗೆ 7.30ರ ಸುಮಾರಿಗೆ ಸೈಕಲ್ ಓಡಿಸುತ್ತಿದ್ದ ವೇಳೆ ಬಾಲಕ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದ್ದು, ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.

    ಮೃತ ಬಾಲಕ ನಗರದ ಡಿಸಿಎಂಸಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದನು. ಸೋಹನ್ ರಾಮ್ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಪ್ರಸನ್ನ ಹಾಗೂ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿ ರೂಪ ದಂಪತಿಯ ಪುತ್ರ. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಸುದ್ದಿ ಕೇಳಿ 12 ವರ್ಷದ ಬಾಲಕ ಜಗತ್ತಿನ ಅರಿವೇ ಇಲ್ಲದ ಚಿಕ್ಕ ವಯಸ್ಸಿಗೆ ಹೃದಯಾಘಾತದಿಂದ ಹೇಗೆ ಸಾವನ್ನಪ್ಪಿದನೋ ಎಂದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    ತಾಲೂಕಿನ ಜನ ಸಹ ದಿಗ್ಭ್ರಾಂತರಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ಹೃದಯಾಘಾತ ಅಂದರೆ ಹೇಗೆ ಎಂದು ಜನ ಬಾಲಕನ ಸಾವಿಗೆ ಮರುಗಿದ್ದಾರೆ. ಬಾಲಕನ ಮನೆ ಮುಂದೆ ತಾಲೂಕಿನ ನೂರಾರು ಶಿಕ್ಷಕರು ಹಾಗೂ ಸಾರ್ವಜನಿಕರು ಬಾಲಕನ ಸಾವಿಗೆ ಕಣ್ಣೀರಿಟ್ಟಿದ್ದಾರೆ.

  • 2017 ರಿಂದ ಕಾಶಿನಾಥ್ ಕ್ಯಾನ್ಸರ್‍ ನಿಂದ ಬಳಲುತ್ತಿದ್ರು, ಹೃದಯಾಘಾತದಿಂದ ಸಾವು- ಡಾ. ರವಿ ತಿಪ್ಪೇಸ್ವಾಮಿ

    2017 ರಿಂದ ಕಾಶಿನಾಥ್ ಕ್ಯಾನ್ಸರ್‍ ನಿಂದ ಬಳಲುತ್ತಿದ್ರು, ಹೃದಯಾಘಾತದಿಂದ ಸಾವು- ಡಾ. ರವಿ ತಿಪ್ಪೇಸ್ವಾಮಿ

    ಬೆಂಗಳೂರು: 2017 ರಿಂದಲೇ ಕಾಶಿನಾಥ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದರು. ಚಿಕಿತ್ಸೆ ಮುಗಿದಿತ್ತು. ಆದ್ರೆ ಇಂದು ಮುಂಜಾನೆ ಹೃದಯಾಘಾತದಿಂದ ಕಾಶಿನಾಥ್ ಕೊನೆಯುಸಿರೆಳೆದಿದ್ದಾರೆ ಎಂದು ಶಂಕರ್ ಆಸ್ಪತ್ರೆಯ ವೈದ್ಯರಾದ ಡಾ. ರವಿ ತಿಪ್ಪೇಸ್ವಾಮಿ ಹೇಳಿದ್ದಾರೆ.

    ಕಾಶಿನಾಥ್ ನಿಧನದ ಬಳಿಕ ಮಾತನಾಡಿದ ಅವರು, 2017 ರಿಂದಲೇ ಕಾಶಿನಾಥ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದರು. ಏಳು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ರು. ಹಾರ್ಟ್ ಸ್ಕಿಲ್ಸ್ ಲಿಂಕ್ ಫೋರ್ಮಾ ಅನ್ನೋ ಕ್ಯಾನ್ಸರ್ ಗೆ ಸಂಬಂಧಿಸಿದಂತ ಕಾಯಿಲೆಯಿಂದ ಬಳಲುತ್ತಿದ್ರು. ಒಂದು ತಿಂಗಳ ಹಿಂದೆ ಚಿಕಿತ್ಸೆ ಮುಗಿದಿತ್ತು. ಚಿಕಿತ್ಸೆಗೆ ಚನ್ನಾಗಿಯೇ ಸ್ಪಂದಿಸಿದ್ರು. ಇಂದು ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದ್ರು.

     

     

    2 ದಿನಗಳ ಹಿಂದೆ ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿದ್ದ ಕಾಶಿನಾಥ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಬಸವನಗುಡಿಯ ಎನ್‍ಆರ್ ಕಾಲೋನಿಯ ಎಪಿಎಸ್ ಕಾಲೇಜ್ ಗ್ರೌಂಡ್‍ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಕಾಶಿನಾಥ್ ಅವರ ಮಗಳು ದುಬೈನಿಂದ ಬಂದ ನಂತರ ಅಂತಿಮ ವಿಧಿವಿಧಾನ ನಡೆಯಲಿದೆ. ಇಂದು ಸಂಜೆ ನಾಲ್ಕು ಗಂಟೆಗೆ ಚಾಮರಾಜಪೇಟೆಯ ಟಿಆರ್ ಮಿಲ್‍ನಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

    https://www.youtube.com/watch?v=Z-vlkIrlNXw

    https://www.youtube.com/watch?v=Xs66MPO1im8

    https://www.youtube.com/watch?v=4RonOWCUWBo