Tag: cardiac arrest

  • ಹೃದಯಸ್ತಂಭನ – ಗೋವಾ ಸಚಿವ, ಮಾಜಿ ಸಿಎಂ ರವಿ ನಾಯ್ಕ್ ನಿಧನ

    ಹೃದಯಸ್ತಂಭನ – ಗೋವಾ ಸಚಿವ, ಮಾಜಿ ಸಿಎಂ ರವಿ ನಾಯ್ಕ್ ನಿಧನ

    ಪಣಜಿ: ಹೃದಯಸ್ತಂಭನದಿಂದ (Cardiac Arrest) ಗೋವಾ ಮಾಜಿ ಸಿಎಂ, ಕೃಷಿ ಸಚಿವ ರವಿ ನಾಯ್ಕ್ (Ravi Naik) ಮಂಗಳವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಪಣಜಿಯಿಂದ 30 ಕಿ.ಮೀ ದೂರದಲ್ಲಿರುವ ನಿವಾಸದಲ್ಲಿ ರವಿ ನಾಯ್ಕ್ ಅವರು ಹೃದಯಸ್ತಂಭನಕ್ಕೊಳಗಾಗಿದ್ದರು. ಕೂಡಲೇ ಪೊಂಡಾ ಪಟ್ಟಣದ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು. ಆದರೆ ತಡರಾತ್ರಿ 1 ಗಂಟೆಯ ಸುಮಾರಿಗೆ ರವಿ ನಾಯ್ಕ್ ನಿಧನರಾಗಿದ್ದಾರೆ. ಇಂದು ಸಂಜೆ 3 ಗಂಟೆಯ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಇದನ್ನೂ ಓದಿ: Mandya | 60 ವರ್ಷದ ಹಿಂದೂ ಸ್ಮಶಾನ ಈಗ ಮುಸ್ಲಿಂ ಮಕಾನ್

    79 ವರ್ಷದ ರವಿ ನಾಯ್ಕ್ 2 ಬಾರಿ ಸಿಎಂ ಆಗಿ ಆಯ್ಕೆಯಾಗಿದ್ದರು. ಅಲ್ಲದೇ 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇನ್ನು ರವಿ ನಾಯ್ಕ್ ನಿಧನಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಸಂತಾಪ ಸೂಚಿಸಿದ್ದಾರೆ. ರವಿ ನಾಯ್ಕ್ ಅವರ ನಾಯಕತ್ವ, ವಿನಯತೆ ಹಾಗೂ ಸಾರ್ವಜನಿಕ ಕಲ್ಯಾಣಕ್ಕೆ ನೀಡಿದ ಕೊಡುಗೆ ಗಮನಾರ್ಹ ಎಂದು ಪ್ರಮೋದ್ ಸಾವಂತ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕೊಪ್ಪಳ | KPCC ಕಾರ್ಮಿಕ ವಿಭಾಗದ ಕಾರ್ಯದರ್ಶಿ ಮೇಲೆ ಹಲ್ಲೆ – ಪಿಎಸ್‌ಐ ಸಸ್ಪೆಂಡ್

    ಇನ್ನು ರವಿ ನಾಯ್ಕ್ ನಿಧನಕ್ಕೆ ಪ್ರಧಾನಿ ಮೋದಿ ಕೂಡ ಸಂತಾಪ ಸೂಚಿಸಿದ್ದಾರೆ. ಸಚಿವ ರವಿ ನಾಯ್ಕ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ದೀನದಲಿತರ ಸಬಲೀಕರಣದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ರವಿ ನಾಯ್ಕ್, ಗೋವಾದ ಅಭಿವೃದ್ಧಿ ಪಥವನ್ನು ಹೆಚ್ಚು ಶ್ರೀಮಂತಗೊಳಿಸಿದ ಅನುಭವಿ ಆಡಳಿತಗಾರ. ಅಲ್ಲದೇ ಸಾರ್ವಜನಿಕರ ಸೇವೆಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದರು ಎಂದು ಮೋದಿ ಎಕ್ಸ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ ಆರೋಪ – ಭಾರತ ಮೂಲದ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್ ಅರೆಸ್ಟ್‌

  • ಹೃದಯ ಶಸ್ತ್ರಚಿಕಿತ್ಸಕನಿಗೇ ಹೃದಯ ಸ್ತಂಭನ; ಆಸ್ಪತ್ರೆಯಲ್ಲಿ ರೌಂಡ್ಸ್‌ನಲ್ಲಿದ್ದಾಗ ಕುಸಿದುಬಿದ್ದು ಸಾವು

    ಹೃದಯ ಶಸ್ತ್ರಚಿಕಿತ್ಸಕನಿಗೇ ಹೃದಯ ಸ್ತಂಭನ; ಆಸ್ಪತ್ರೆಯಲ್ಲಿ ರೌಂಡ್ಸ್‌ನಲ್ಲಿದ್ದಾಗ ಕುಸಿದುಬಿದ್ದು ಸಾವು

    – ಆಸ್ಪತ್ರೆಯಲ್ಲಿದ್ದರೂ ಉಳಿಯದ 39 ವಯಸ್ಸಿನ ಡಾಕ್ಟರ್‌ ಜೀವ

    ಚೆನ್ನೈ: ಹೃದಯ ಶಸ್ತ್ರಚಿಕಿತ್ಸಕ ಆಸ್ಪತ್ರೆಯಲ್ಲಿ ರೌಂಡ್ಸ್‌ ಹಾಕುತ್ತಿದ್ದಾಗಲೇ ಹೃದಯ ಸ್ತಂಭನದಿಂದ ಮೃತಪಟ್ಟಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. 39 ವಯಸ್ಸಿನ ವೈದ್ಯನ ದುರಂತ ಸಾವು ದೇಶಾದ್ಯಂತ ಅಘಾತವನ್ನು ಸೃಷ್ಟಿಸಿದೆ.

    ಹೃದಯ ಶಸ್ತ್ರಚಿಕಿತ್ಸಕ ಡಾ. ಗ್ರಾಡ್ಲಿನ್ ರಾಯ್ (39) ಅವರು ಹೃದಯ ಶಸ್ತ್ರಚಿಕಿತ್ಸಕರಾಗಿದ್ದರು. ಭಾರಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.

    ಡಾ. ಗ್ರಾಡ್ಲಿನ್‌ ರಾಯ್‌ ಅವರು ವಾರ್ಡ್‌ನಲ್ಲಿ ರೌಂಡ್ಸ್‌ ಹಾಕುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ತಕ್ಷಣ ಅವರನ್ನು ಸಹೋದ್ಯೋಗಿಗಳು ಪರೀಕ್ಷೆಗೆ ಒಳಪಡಿಸಿದರು. ಸಿಪಿಆರ್‌ ಮಾಡಿದರು. ಆಂಜಿಯೋಪ್ಲಾಸ್ಟಿ ಕೂಡ ಮಾಡಿದರು. ಇಂಟ್ರಾ-ಆರ್ಟಿಕ್‌ ಬಲೂನ್‌ ಪಂಪ್‌, ಇಸಿಎಂಒ ಕೂಡ ಮಾಡಲಾಯಿತು. ಆದರೆ, 100% ಎಡ ಮೇನ್‌ ಆರ್ಟರಿ ಅಡಚಣೆಯಿಂದಾಗಿ ಹೃದಯ ಸ್ತಂಭನ ಆಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ವೈದ್ಯರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

    ಸಹೋದ್ಯೋಗಿಯ ನಿಧನಕ್ಕೆ ಡಾ. ಸುಧೀರ್‌ ಕುಮಾರ್‌ ಸಂತಾಪ ಸೂಚಿಸಿದ್ದಾರೆ. ದೀರ್ಘ-ಅನಿಯಮಿತ ಕೆಲಸದ ಸಮಯ, ಅನಾರೋಗ್ಯಕರ ಆಹಾರ ಪದ್ಧತಿ, ಜಡ ಜೀವನಶೈಲಿ, ಮಾನಸಿಕ ಹೊರೆ, ಅಧಿಕ ಒತ್ತಡ, ಧೂಮಪಾನ ಮತ್ತು ಮದ್ಯಪಾನವು ವೈದ್ಯಕೀಯ ವೃತ್ತಿಪರರಿಗೆ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಕುಮಾರ್‌ ಅವರು ಪೋಸ್ಟ್‌ ಮೂಲಕ ಹಂಚಿಕೊಂಡಿದ್ದಾರೆ.

    ವೈದ್ಯರು ಹೃದಯ ಆರೋಗ್ಯಕ್ಕೆ ಪೂರಕವಾಗಿ ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಇತರರ ಹೃದಯಗಳನ್ನು ಉಳಿಸಲು ತಮ್ಮ ಜೀವನವನ್ನು ಮುಡಿಪಾಗಿಡುವವರು ಹೆಚ್ಚಾಗಿ ತಮ್ಮದೇ ಆದ ಹೃದಯಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಕುಮಾರ್‌ ಅವರು ತಿಳಿಸಿದ್ದಾರೆ.

  • ಸರ್ಕಾರಿ ಗೌರವದೊಂದಿಗೆ ಯೋಧ ಕಿರಣರಾಜ್ ಅಂತ್ಯಕ್ರಿಯೆ

    ಸರ್ಕಾರಿ ಗೌರವದೊಂದಿಗೆ ಯೋಧ ಕಿರಣರಾಜ್ ಅಂತ್ಯಕ್ರಿಯೆ

    ಚಿಕ್ಕೋಡಿ: ಕಳೆದ ಮಂಗಳವಾರ ಪಂಜಾಬಿನ (Punjab) ಪಟಿಯಾಲಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಕರ್ತವ್ಯ ನಿರತ ಯೋಧ ಕಿರಣರಾಜ್ (Kiranraj) ಕೇದಾರಿ ತೆಲಸಂಗ (23) ಅವರ ಅಂತ್ಯಕ್ರಿಯೆ ಸ್ವಗ್ರಾಮ ಅಥಣಿ ತಾಲೂಕಿನ‌ ಐಗಳಿ ಗ್ರಾಮದಲ್ಲಿ ಜರುಗಿತು.

    15 ತಿಂಗಳ ಹಿಂದೆ ಸೇನೆ ಸೇರಿದ್ದ ಕಿರಣರಾಜ್ ತಮ್ಮ ಕರ್ತವ್ಯದಲ್ಲಿದ್ದಾಗಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮಂಗಳವಾರ ಕೊನೆಯುಸಿರೆಳೆದಿದ್ದರು. ಇದನ್ನೂ ಓದಿ: ಸಲ್ಮಾನ್ ಖಾನ್‌ನ್ನು ಆಹ್ವಾನಿಸಿದ್ದಕ್ಕೆ ಕಪಿಲ್ ಶರ್ಮಾ ಕೆಫೆ ಮೇಲೆ ಶೂಟೌಟ್ ಬಿಷ್ಣೋಯ್ ಗ್ಯಾಂಗ್‌ನದ್ದೇ ಎನ್ನಲಾದ ಆಡಿಯೋ ವೈರಲ್

    ಕಿರಣರಾಜ್ ಅವರ ಪಾರ್ಥಿವ ಶರೀರಕ್ಕೆ ಅಥಣಿ ಪಟ್ಟಣದ ತಹಸೀಲ್ದಾರ್‌ ಕಚೇರಿ, ಮಾಜಿ ಸೈನಿಕರ ಸಂಘದ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು. ತೆರೆದ ವಾಹನದಲ್ಲಿ ಪಾರ್ಥಿವ ಶರೀರವನ್ನು ಮುಖ್ಯ ರಸ್ತೆಯ ಮೂಲಕ ಸಾವಿರಾರು ಸಂಖ್ಯೆಯ ಜನರ ಮಧ್ಯೆ ಮೆರವಣಿಗೆ ಮೂಲಕ  ತರಲಾಯಿತು.

    ಕಿರಣರಾಜ್ ಅವರ ತೋಟದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಯೋಧನ ಕಳೆದುಕೊಂಡ ಕುಟುಂಬ ಅಲ್ಲದೆ ನೆರೆದ ಸಾವಿರಾರು ಜನ ಕಂಬನಿ ಮಿಡಿದು ಕಿರಣರಾಜ್ ಅಮರ ರಹೇ ಎಂದು ಘೋಷಣೆ ಕೂಗಿ ಅಭಿಮಾನ ತೋರಿದರು.

  • ಮಂತ್ರಾಲಯ | ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿ ಹೃದಯ ಸ್ತಂಭನದಿಂದ ಸಾವು

    ಮಂತ್ರಾಲಯ | ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿ ಹೃದಯ ಸ್ತಂಭನದಿಂದ ಸಾವು

    ರಾಯಚೂರು: ಜ.21ರಂದು ಸಿಂಧನೂರು (Sindhanur) ಬಳಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಮಂತ್ರಾಲಯ (Mantralya) ರಾಯರ ಮಠದ ಸಂಸ್ಕೃತ ವಿದ್ಯಾರ್ಥಿ ಇಂದು ಮುಂಜಾನೆ ಹೃದಯ ಸ್ತಂಭನದಿಂದ (Cardiac Arrest) ಮೃತಪಟ್ಟಿದ್ದಾನೆ.

    ಜಯಸಿಂಹ (23) ಮೃತ ವಿದ್ಯಾರ್ಥಿ. ಈತ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 23 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ಸಿಂದನೂರಿನಲ್ಲಿ ನಡೆದ ಅಪಘಾತದಲ್ಲಿ ಜಯಸಿಂಹನ ತಲೆ, ಬೆನ್ನು, ಶಾಸ್ವಕೋಶ ಸೇರಿ ದೇಹದ ಹಲವೆಡೆ ತೀವ್ರ ಗಾಯಗಳಾಗಿದ್ದವು. ಇದನ್ನೂ ಓದಿ: Fashion | ಕಪಲ್ ರಿಂಗ್ ಗಿಫ್ಟ್‌ ಕೊಟ್ಟು ಪ್ರೇಮಿಗಳ ದಿನ ಆಚರಿಸಿ

    ಜನವರಿ 21ರಂದು ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಗೆ ಹೊರಟಿದ್ದ ಕ್ರೂಸರ್ ವಾಹನ ಪಲ್ಟಿಯಾಗಿತ್ತು. ಈ ಅಪಘಾತದಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದರು. 10 ಜನರಿಗೆ ಗಾಯಗಳಾಗಿದ್ದವು. ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಪದ್ಮಶ್ರೀ ಪುರಸ್ಕೃತೆ, ಜನಪದ ಗಾನ ಕೋಗಿಲೆ ಸುಕ್ರಿ ಬೊಮ್ಮಗೌಡ ವಿಧಿವಶ

  • ಮದುವೆಯಲ್ಲಿ ಡಾನ್ಸ್‌ ಮಾಡುತ್ತಿದ್ದಾಗಲೇ ಹೃದಯ ಸ್ತಂಭನ – ವೇದಿಕೆಯಲ್ಲೇ ಎಂಬಿಎ ಪದವೀಧರೆ ಸಾವು

    ಮದುವೆಯಲ್ಲಿ ಡಾನ್ಸ್‌ ಮಾಡುತ್ತಿದ್ದಾಗಲೇ ಹೃದಯ ಸ್ತಂಭನ – ವೇದಿಕೆಯಲ್ಲೇ ಎಂಬಿಎ ಪದವೀಧರೆ ಸಾವು

    – 12ನೇ ವಯಸ್ಸಿನಲ್ಲೇ ಆಕೆಯ ಸಹೋದರನೂ ಹೃದಯಾಘಾತದಿಂದಲೇ ಸಾವು

    ಭೋಪಾಲ್‌: ಮದುವೆ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದಾಗಲೇ ಹೃದಯಸ್ತಂಭನದಿಂದ (Cardiac Arrest) 23ರ ಯುವತಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ವಿದಿಶಾ ಜಿಲ್ಲೆಯ ರೆಸಾರ್ಟ್‌ನಲ್ಲಿ ನಡೆದಿದೆ.

    ಯುವತಿಯನ್ನು ಇಂದೋರ್ ನಿವಾಸಿ ಪರಿಣಿತಾ ಜೈನ್ ಎಂದು ಗುರುತಿಸಲಾಗಿದ್ದು, ಆಕೆಯ ಸೋದರ ಸಂಬಂಧಿ ಮದುವೆಯಲ್ಲಿ (Wedding) ಪಾಲ್ಗೊಂಡಿದ್ದರು. 200ಕ್ಕೂ ಹೆಚ್ಚು ಗಣ್ಯರು ಉಪಸ್ಥಿತರಿದ್ದರು. ಈ ವೇಳೆ ಪರಿಣಿತಾ ವೇದಿಕೆಯಲ್ಲಿ ಬಾಲಿವುಡ್‌ ಗೀತೆಯೊಂದಕ್ಕೆ ನೃತ್ಯ ಮಾಡುತ್ತಿದ್ದಾಗಲೇ ಹೃದಯ ಸ್ತಂಬನದಿಂದ ಸಾವನ್ನಪ್ಪಿದ್ದಾರೆ. ಆಕೆ ಕುಸಿದು ಬಿದ್ದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ ನಂತರ ಘಟನೆ ಬೆಳಕಿಗೆ ಬಂದಿದೆ.

    ಈ ವೇಳೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೈದ್ಯರು ಆಕೆಗೆ ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ನೀಡಲು ಪ್ರಯತ್ನಿಸಿದ್ರು, ಆದ್ರೆ ಪ್ರಯೋಜನವಾಗಲಿಲ್ಲ. ತಕ್ಷಣ ಅಲ್ಲಿಂದ ಖಾಸಗಿ ಅಸ್ಪತ್ರೆಗೆ ಕರೆದೊಯ್ಯಲಾಯಿತು ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ರು. ಇದನ್ನೂ ಓದಿ: ಇಂದಿನಿಂದ ಟಿ.ನರಸೀಪುರದಲ್ಲಿ ದಕ್ಷಿಣ ಭಾರತದ ಏಕೈಕ ಕುಂಭಮೇಳ

    ಎಂಬಿಎ ಪದವೀಧರರಾಗಿದ್ದ ಪರಿಣಿತಾ ತಮ್ಮ ಪೋಷಕರೊಂದಿಗೆ ಇಂದೋರ್‌ನ ದಕ್ಷಿಣ ತುಕೋಗಂಜ್‌ನಲ್ಲಿ ವಾಸಿಸುತ್ತಿದ್ದರು. ಮೂಲಗಳ ಪ್ರಕಾರ, ಆಕೆಯ ಸಹೋದರನೊಬ್ಬ 12ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ. ಇದನ್ನೂ ಓದಿ:  Aero India 2025 | ವೈಮಾನಿಕ ಪ್ರದರ್ಶನಕ್ಕಿಂದು ಚಾಲನೆ – ರಷ್ಯಾ, ಅಮೆರಿಕ ಸೇರಿ 90 ದೇಶಗಳು ಭಾಗಿ

  • ಚಾಮರಾಜನಗರ | ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿನಿ ಸಾವು

    ಚಾಮರಾಜನಗರ | ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿನಿ ಸಾವು

    ಚಾಮರಾಜನಗರ: 3ನೇ ತರಗತಿ ವಿದ್ಯಾರ್ಥಿನಿಯೊಬ್ಬಳು (Student) ಕುಸಿದುಬಿದ್ದು ಮೃತಪಟ್ಟ ಘಟನೆ ಚಾಮರಾಜನಗರದ (Chamarajanagar) ಖಾಸಗಿ ಶಾಲೆಯೊಂದರಲ್ಲಿ (School) ನಡೆದಿದೆ.

    ಮೃತ ಬಾಲಕಿಯನ್ನು ಬದನಗುಪ್ಪೆಯ ಗ್ರಾಮದ ಲಿಂಗರಾಜು, ಶೃತಿ ದಂಪತಿಯ ಪುತ್ರಿ ತೇಜಸ್ವಿನಿ (8) ಎಂದು ಗುರುತಿಸಲಾಗಿದೆ.

    ಬಾಲಕಿ ಬೆಳಗ್ಗೆ ಶಾಲೆಗೆ ಹೋಗಿದ್ದಳು. ತರಗತಿಯಲ್ಲಿ ಶಿಕ್ಷಕರಿಗೆ ನೋಟ್ಸ್ ತೋರಿಸಲು ಹೋಗುತ್ತಿದ್ದಂತೆ ವಿದ್ಯಾರ್ಥಿನಿ ಹೃದಯ ಸ್ತಂಭನದಿಂದ (Cardiac Arrest) ಕುಸಿದು ಬಿದ್ದಿದ್ದಾಳೆ. ಕುಸಿದು ಬಿದ್ದ ವಿದ್ಯಾರ್ಥಿನಿಯನ್ನು ಶಿಕ್ಷಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ಅಷ್ಟರಲ್ಲಿ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ.

  • ಆಡುತ್ತಲೇ ಕ್ರೀಡಾಂಗಣದಲ್ಲಿ ಹೃದಯ ಸ್ತಂಭನದಿಂದ ಕುಸಿದು ಕ್ರಿಕೆಟಿಗ ಸಾವು

    ಆಡುತ್ತಲೇ ಕ್ರೀಡಾಂಗಣದಲ್ಲಿ ಹೃದಯ ಸ್ತಂಭನದಿಂದ ಕುಸಿದು ಕ್ರಿಕೆಟಿಗ ಸಾವು

    ಮುಂಬೈ: ಕ್ರಿಕೆಟ್‌ (Cricket) ಪಂದ್ಯ ಆಡುತ್ತಿದ್ದಾಗಲೇ 35 ವರ್ಷದ ಕ್ರಿಕೆಟಿಗ ಹೃದಯ ಸ್ತಂಭನದಿಂದ ಕುಸಿದು ಸಾವನ್ನಪ್ಪಿರುವ ಘಟನೆ ಪುಣೆಯ (Pune) ಗರ್ವಾರೆ ಕ್ರೀಡಾಂಗಣದಲ್ಲಿ ನಡೆದಿದೆ.

    ಕ್ರಿಕೆಟಿಗ ಇಮ್ರಾನ್ ಪಟೇಲ್ ಮೃತ ಆಟಗಾರ. ಆರಂಭಿಕರಾಗಿ ಬ್ಯಾಟಿಂಗ್‌ ಮಾಡುತ್ತಿದ್ದರು. ಪಿಚ್‌ನಲ್ಲಿ ಸ್ವಲ್ಪ ಸಮಯ ಕಳೆದ ನಂತರ ಎದೆ ಮತ್ತು ತೋಳಿನ ನೋವಿನ ಬಗ್ಗೆ ಹೇಳಿಕೊಂಡರು. ಅಂಪೈರ್‌ಗಳು ಮೈದಾನದಿಂದ ಹೊರಹೋಗಲು ಅನುಮತಿ ನೀಡಿದರು. ಆದರೆ, ಪೆವಿಲಿಯನ್‌ಗೆ ಹಿಂತಿರುಗುವಾಗ ಇಮ್ರಾನ್ ಕುಸಿದು ಬಿದ್ದರು. ಇದನ್ನೂ ಓದಿ: ಆರ್‌ಸಿಬಿ ಹಿಂದಿ ಒಲವಿಗೆ ಕನ್ನಡ ಅಭಿಮಾನಿಗಳ ಆಕ್ರೋಶ

    ನೇರಪ್ರಸಾರವಾಗುತ್ತಿದ್ದ ಪಂದ್ಯಾವಳಿಯ ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಮ್ರಾನ್ ಕುಸಿದು ಬೀಳುತ್ತಿದ್ದಂತೆ ಮೈದಾನದಲ್ಲಿದ್ದ ಇತರ ಆಟಗಾರರು ಅವರತ್ತ ಧಾವಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಪರೀಕ್ಷಿಸಿದ ಬಳಿಕ ಇಮ್ರಾನ್‌ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಇಮ್ರಾನ್ ಅವರು ತುಂಬಾ ಆರೋಗ್ಯವಾಗಿದ್ದರು. ದೈಹಿಕವಾಗಿ ಸದೃಢರಾಗಿದ್ದರು. ಆದರೆ ಹೃದಯ ಸ್ತಂಭನದಿಂದ ಮೃತಪಟ್ಟಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇಮ್ರಾನ್‌ಗೆ ಪತ್ನಿ ಮತ್ತು ಮೂವರು ಪುತ್ರಿಯರಿದ್ದು, ಅವರಲ್ಲಿ ಕಿರಿಯ ಮಗುವಿಗೆ ಕೇವಲ ನಾಲ್ಕು ತಿಂಗಳು. ಪಟೇಲ್ ಅವರು ಕ್ರಿಕೆಟ್ ತಂಡದ ಮಾಲೀಕರಾಗಿದ್ದರು. ಇದನ್ನೂ ಓದಿ: ಆರ್‌ಸಿಬಿ ಹಿಂದಿ ಒಲವಿಗೆ ಕನ್ನಡ ಅಭಿಮಾನಿಗಳ ಆಕ್ರೋಶ

    ಅವರು ಈವರೆಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ಹಿನ್ನೆಲೆ ಹೊಂದಿದವರಲ್ಲ. ಅವರು ಉತ್ತಮ ದೈಹಿಕ ಸ್ಥಿತಿಯಲ್ಲಿದ್ದರು ಎಂದು ಪಂದ್ಯದ ಮತ್ತೊಬ್ಬ ಆಟಗಾರ ನಾಸೀರ್‌ ಖಾನ್‌ ತಿಳಿಸಿದ್ದಾರೆ.

  • ವಿಕಾಸ್ ಸೇಥಿಗೆ ಹೃದಯ ಸ್ತಂಭನ- 48ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ನಟ

    ವಿಕಾಸ್ ಸೇಥಿಗೆ ಹೃದಯ ಸ್ತಂಭನ- 48ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ನಟ

    ಹಿಂದಿ ಕಿರುತೆರೆಯಲ್ಲಿ ಗಮನ ಸೆಳೆದ ವಿಕಾಸ್ ಸೇಥಿ (Vikas Sethi) ಅವರು (ಸೆ.8) ಹೃದಯ ಸ್ತಂಭನದಿಂದ (Cardiac Arrest) ನಿಧನರಾಗಿದ್ದಾರೆ. 48ನೇ ವಯಸ್ಸಿಗೆ ಇಹಲೋಕ ತ್ಯಜಿಸಿರುವ ನಟನಿಗೆ ಫ್ಯಾನ್ಸ್, ಕಿರುತೆರೆ ಕಲಾವಿದರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ

    ಹೃದಯ ಸ್ತಂಭನದಿಂದ ನಟ ವಿಕಾಸ್ ಸೇಥಿ ಸೆ.8ರಂದು ಮಲಗಿದ್ದಲ್ಲೇ ಮೃತಪಟ್ಟಿರೋದಾಗಿ ವರದಿಯಾಗಿದೆ. ಮೃತ ದೇಹವನ್ನು ಮುಂಬೈನ ಖಾಸಗಿ ಆಸ್ಪತ್ರೆಯೊಂದಕ್ಕೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    ಅಂದಹಾಗೆ, ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ, ಕಹಿಂ ತೊ ಹೋಗಾ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿ ವಿಕಾಸ್ ಸೇಥಿ ಗಮನ ಸೆಳೆದಿದ್ದಾರೆ.

  • ಕೇರಳದಲ್ಲಿ ನಿಫಾ ವೈರಸ್‍ಗೆ ಮೊದಲ ಬಲಿ – ಹೆಚ್ಚಿದ ಆತಂಕ

    ಕೇರಳದಲ್ಲಿ ನಿಫಾ ವೈರಸ್‍ಗೆ ಮೊದಲ ಬಲಿ – ಹೆಚ್ಚಿದ ಆತಂಕ

    ತಿರುವನಂತಪುರಂ: ಕೇರಳದ (Kerala) ಮಲಪ್ಪುರಂನಲ್ಲಿ ನಿಫಾ ವೈರಸ್ (Nipah Virus) ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

    ಸೋಂಕಿಗೆ ತುತ್ತಾಗಿದ್ದ ಬಾಲಕನಿಗೆ ಭಾನುವಾರ ಬೆಳಗ್ಗೆ 10:50ಕ್ಕೆ ಪಾಂಡಿಕ್ಕಾಡ್‍ನ ತೀವ್ರ (Cardiac Arrest) ಹೃದಯ ಸ್ತಂಭನವಾಗಿತ್ತು. ಬಳಿಕ ವೆಂಟಿಲೇಟರ್ ಸಹಾಯದಿಂದ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಸಾವಿಗೀಡಾಗಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದರೋಡೆ, ಲೂಟಿ ತಡೆಯಲು ಸೇನೆ ಕರೆಸಬೇಕಿತ್ತಾ? – ಡಿಕೆಶಿಗೆ ಹೆಚ್‌ಡಿಕೆ ತಿರುಗೇಟು

    ಅಂತಾರಾಷ್ಟ್ರೀಯ ಶಿಷ್ಟಾಚಾರದ ಪ್ರಕಾರ ಬಾಲಕನ ಅಂತ್ಯಕ್ರಿಯೆ ನಡೆಯಲಿದೆ. ಜಿಲ್ಲಾಧಿಕಾರಿಗಳು ಬಾಲಕನ ಪೋಷಕರು ಮತ್ತು ಕುಟುಂಬದವರೊಂದಿಗೆ ಚರ್ಚಿಸಿದ ನಂತರ ಅಂತ್ಯಕ್ರಿಯೆಯ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ನಿಫಾ ಜಾಗೃತಿಗಾಗಿ ಸಾರ್ವಜನಿಕ ಸುರಕ್ಷತೆಗಾಗಿ ಮಲಪ್ಪುರಂನಲ್ಲಿರುವ ಸರ್ಕಾರಿ ತಂಗುದಾಣದಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಸೋಂಕಿತ ಬಾಲಕನ ಸಂಪರ್ಕದಲ್ಲಿದ್ದವರ ಪಟ್ಟಿ ಸಿದ್ಧಪಡಿಸಲಾಗಿದೆ. ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿರುವ ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲು ಕ್ರಮವಹಿಸಲಾಗಿದೆ. ಬಾಲಕನಿಗೆ ಸೋಂಕು ತಗುಲಿದ ಪ್ರದೇಶದ 3 ಕಿಮೀ ವ್ಯಾಪ್ತಿಯಲ್ಲಿ ನಿಬರ್ಂಧ ವಿಧಿಸಬೇಕೆ ಎಂಬ ಬಗ್ಗೆಯೂ ಸಭೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ನಿಂದ ವೈಭವದ ಗುರುಪೂರ್ಣಿಮೆ ಆಚರಣೆ – ಹೂವು, ಹಣ್ಣುಗಳಿಂದ ಅದ್ಧೂರಿ ಅಲಂಕಾರ!

  • ಮಧ್ಯಪ್ರದೇಶದಲ್ಲಿ ಲೋಕಸಭಾ ಅಭ್ಯರ್ಥಿ ನಿಧನ- ಚುನಾವಣೆ ಮುಂದೂಡಿಕೆ

    ಮಧ್ಯಪ್ರದೇಶದಲ್ಲಿ ಲೋಕಸಭಾ ಅಭ್ಯರ್ಥಿ ನಿಧನ- ಚುನಾವಣೆ ಮುಂದೂಡಿಕೆ

    ಭೋಪಾಲ್:‌ ಮಧ್ಯಪ್ರದೇಶದ ಬೆತುಲ್ ಕ್ಷೇತ್ರದಿಂದ ಮಾಯಾವತಿಯವರ ಬಹುಜನ ಸಮಾಜ ಪಕ್ಷದ (BSP) ಲೋಕಸಭಾ ಅಭ್ಯರ್ಥಿ ಅಶೋಕ್ ಭಾಲವಿ (Ashok Bhalawi) ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ನಡೆಯಬೇಕಿದ್ದ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.

    ಪಕ್ಷದ ಪ್ರಕಾರ, ಭಾಲವಿಗೆ ಎದೆನೋವು ಕಾಣಿಸಿಕೊಂಡ ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ವಿಚಾರವನ್ನು ಬೆತುಲ್ ಡಿಎಂ ನರೇಂದ್ರ ಕುಮಾರ್ ಸೂರ್ಯವಂಶಿ ಖಚಿತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದೇವೆ. ಹೀಗಾಗಿ ಏಪ್ರಿಲ್‌ 26ರಂದು ನಡೆಯಬೇಕಿದ್ದ ಎರಡನೇ ಹಂತದ ಮತದಾನವನ್ನು ಮುಂದೂಡಿದ್ದೇವೆ ಎಂದು ಹೇಳಿದರು.

    ಇತ್ತ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ನರೇಂದ್ರ ಸಿಂಗ್ ರಘುವಂಶಿ ಪ್ರತಿಕ್ರಿಯಿಸಿ, ಪ್ರಜಾಪ್ರತಿನಿಧಿ ಕಾಯ್ದೆಯಡಿ ಚುನಾವಣಾ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಸಿಎಎ ಉಲ್ಲೇಖಿಸಲು ಭಯ – ಕಾಂಗ್ರೆಸ್‌ ವಿರುದ್ಧ ಪಿಣರಾಯಿ ಕಿಡಿ

    ಬೇತುಲ್‌ನ ಹಾಲಿ ಸಂಸದ ದುರ್ಗಾ ದಾಸ್ ಉಯಿಕೆ ಅವರನ್ನು ಬಿಜೆಪಿ ಮತ್ತೊಮ್ಮೆ ಕ್ಷೇತ್ರದಿಂದ ಕಣಕ್ಕಿಳಿಸಿದರೆ, ಕಾಂಗ್ರೆಸ್ ರಾಮು ಟೇಕಂ ಅವರನ್ನು ಕಣಕ್ಕಿಳಿಸಿದೆ. ಏಪ್ರಿಲ್ 26 ರಂದು ಟಿಕಮ್‌ಗಢ್, ದಾಮೋಹ್, ಖಜುರಾಹೊ, ಸತ್ನಾ, ರೇವಾ ಮತ್ತು ಹೊಶಂಗಾಬಾದ್ ಸ್ಥಾನಗಳೊಂದಿಗೆ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಬೇತುಲ್ ಮತದಾನ ಮಾಡಲು ನಿರ್ಧರಿಸಲಾಗಿತ್ತು.