Tag: Car Ride

  • 200 ಕಿಮೀ ವೇಗದಲ್ಲಿ ಕಾರ್ ಸವಾರಿ ಮಾಡಿದ ಅರ್ವಿಯಾ

    200 ಕಿಮೀ ವೇಗದಲ್ಲಿ ಕಾರ್ ಸವಾರಿ ಮಾಡಿದ ಅರ್ವಿಯಾ

    ಬೆಂಗಳೂರು: ಬಿಗ್‍ಬಾಸ್ ಖ್ಯಾತಿಯ ದಿವ್ಯಾ ಉರುಡುಗ, ಅರವಿಂದ್ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ಜೋಡಿ ಏನೇ ಮಾಡಿದ್ರು ಸುದ್ದಿ ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳ ಬಳಗ ಇವರಿಗೆ ಇದೆ. ಈ ಜೋಡಿ ಇದೀ ಒಟ್ಟಿಗೆ ಕಾರ್ ಸವಾರಿ ಮಾಡುವ ಮೂಲಕವಾಗಿ ಸುದ್ದಿಯಲ್ಲಿದೆ.

    ಕೆಪಿ ಅರವಿಂದ್ ಅವರು ಗಂಟೆಗೆ 200 ಕಿಮೀ ವೇಗದಲ್ಲಿ ಕಾರ್ ಸವಾರಿ ಮಾಡಿದ್ದಾರೆ. ಆ ಬಗ್ಗೆ ದಿವ್ಯಾ ಉರುಡುಗ ಕೂಡ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ಬ್ಲೂ ಫಿಲಂಗಳ ಬಗ್ಗೆ ಹೆಚ್‍ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ: ಅಶ್ವಥ್ ನಾರಾಯಣ

     

    View this post on Instagram

     

    A post shared by Divya Uruduga (@divya_uruduga)

    ಗಂಟೆಗೆ 200 ಕಿಮೀ ಓಡುವ ಕಾರನಲ್ಲಿ ಎಂದಿಗೂ ನಾನು ನನ್ನ ಜೀವನದಲ್ಲಿ ಕೂತಿರಲಿಲ್ಲ. ಡ್ರೈವರ್ ಕೌಶಲದ ಮೇಲೆ ನಿಮಗೆ ನಂಬಿಕೆ ಇದ್ದಾಗ, ಸೂಪರ್ ಫನ್ ಆಗಿರತ್ತೆ. ಈ ನ್ಯಾಷನಲ್ ರೆಕಾರ್ಡ್‍ನಲ್ಲಿ ಭಾಗಿಯಾಗಲು ಸೂಪರ್ ಥ್ರಿಲ್ ಆಗಿತ್ತು ಎಂದು ದಿವ್ಯಾ ಉರುಡುಗ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಸಾಕಷ್ಟು ಜನರು ದಿವ್ಯಾ ಉರುಡುಗ ಪೋಸ್ಟ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಕಟೀಲ್ ಆರೋಪಕ್ಕೆ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಸಾಕ್ಷ್ಯ ನೀಡಿದ ಬಿಜೆಪಿ

     

    View this post on Instagram

     

    A post shared by Aravind K P (@aravind_kp)

    ದಿವ್ಯಾ ನಂತಹ ಸಹ ಚಾಲಕಿ ಸಿಕ್ಕಿರುವುದು ತುಂಬಾ ಖುಷಿಯಾಗಿದೆ. ಯಾವುದೇ ಸಮಯದಲ್ಲಿ ಯಾವುದೇ ಅಪಾಯ ಬರಬಹುದು, ಹೀಗಿರುವಾಗ ಆಕೆಯ ನಂಬಿಕೆ ಗಳಿಸಿಕೊಂಡಿರುವುದಕ್ಕೆ ನಾನು ಅದೃಷ್ಟ ಮಾಡಿದ್ದೇನೆ ಎಂದು ಅರವಿಂದ್ ಹೇಳಿಕೊಂಡಿದ್ದಾರೆ.

    ಖಾಸಗಿ ಕಂಪನಿ ಆಯೋಜಿಸಿದ್ದ ಕಾರ್ ರೈಡ್‍ನಲ್ಲಿ ದಿವ್ಯಾ ಉರುಡುಗ, ಕೆಪಿ ಅರವಿಂದ್ ಭಾಗವಹಿಸಿದ್ದರು. ದಿವ್ಯಾ ಹಾಗೂ ಅರವಿಂದ್ ಇತ್ತೀಚಿಗೆ ಖಾಸಗಿ ಸಮಾರಂಭವೊಂದರಲ್ಲಿ ಜೊತೆಯಾಗಿ ಡ್ಯಾನ್ಸ್ ಮಾಡಿದ್ದು, ಪ್ರೇಕ್ಷಕರ ಗಮನ ಸೆಳೆದಿತ್ತು. ದಿವ್ಯಾ ಹಾಗೂ ಅರವಿಂದ್‍ರನ್ನು ಇಷ್ಟಪಟ್ಟ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅರ್ವಿಯಾ ಹ್ಯಾಶ್ ಟ್ಯಾಗ್ ಸೃಷ್ಟಿ ಮಾಡಿ ಟ್ರೆಂಡ್ ಮಾಡಿದ್ದರು.

  • ಡ್ರೀಮ್ ಕಾರಿನಲ್ಲಿ ದಾಸನ ಜೊತೆ ರಿಷಬ್ ಶೆಟ್ಟಿ ಜಾಲಿ ರೈಡ್

    ಡ್ರೀಮ್ ಕಾರಿನಲ್ಲಿ ದಾಸನ ಜೊತೆ ರಿಷಬ್ ಶೆಟ್ಟಿ ಜಾಲಿ ರೈಡ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಬೆಲ್‍ಬಾಟಮ್ ಖ್ಯಾತಿಯ ಹೀರೋ ರಿಷಬ್ ಶೆಟ್ಟಿಯವರು ತನ್ನ ಕನಸಿನ ಕಾರಿನಲ್ಲಿ ಜಾಲಿ ರೈಡ್ ಹೋಗಿದ್ದಾರೆ.

    ಡಿ ಬಾಸ್ ದರ್ಶನ್ ಅವರು ಬೈಕ್ ಮತ್ತು ಕಾರಿನ ಬಗ್ಗೆ ಹೆಚ್ಚಿನ ಕ್ರೇಜ್ ಹೊಂದಿರುವ ನಾಯಕನಟ. ದರ್ಶನ್ ಅವರು ಲ್ಯಾಂಬೋರ್ಗಿನಿ, ಪೋರ್ಷೆ ಕಂಪನಿಯ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಅಂತೆಯೇ ಚಿಂಗಾರಿಯ ಬಳಿ ಹಳದಿ ಬಣ್ಣದ ಫೋರ್ಡ್ ಮಸ್ಟಂಗ್ ಕಾರು ಕೂಡ ಇದೆ. ಈ ಕಾರು ರಿಷಬ್ ಶೆಟ್ಟಿಯವರ ನೆಚ್ಚಿನ ಕಾರಗಿದ್ದು, ಇದರಲ್ಲಿ ರಿಷಬ್ ದರ್ಶನ್ ಜೊತೆ ರೈಡ್ ಹೋಗಿದ್ದಾರೆ.

    ಈ ವಿಚಾರವನ್ನು ತಮ್ಮ ಟ್ವಿಟ್ಟರಿನಲ್ಲಿ ಫೋಟೋ ಹಂಚಿಕೊಂಡಿರುವ ರಿಷಬ್ ಅವರು, ನನ್ನ ಕನಸಿನ ಕಾರು ಫೋರ್ಡ್ ಮಸ್ಟಂಗ್. ನಿನ್ನೆ ಸಂಜೆ ದರ್ಶನ್ ಸರ್ ತಮ್ಮ ಫೋರ್ಡ್ ಮಸ್ಟಂಗ್ ಕಾರಿನಲ್ಲಿ ಒಂದು ಡ್ರೈವ್ ಕರೆದುಕೊಂಡು ಹೋದಾಗ ಆದ ಖುಷಿ ಅಷ್ಟಿಷ್ಟಲ್ಲ. ಧನ್ಯವಾದಗಳು ನಿಮಗೆ ದರ್ಶನ್ ಸರ್ ನಿಮ್ಮ ಜೊತೆ ಒಳ್ಳೆಯ ಸಮಯವನ್ನು ಕಳೆದೆ ಎಂದು ಬರೆದುಕೊಂಡಿದ್ದಾರೆ.

    2018ರಲ್ಲಿ ಸಂಕ್ರಾಂತಿ ಹಬ್ಬದೊಂದು ದರ್ಶನ್ ಅವರು ಈ ಮಸ್ಟಂಗ್ ಕಾರನ್ನು ಖರೀದಿ ಮಾಡಿದ್ದರು. ಈ ಕಾರಿನ ಬೆಲೆ ಅಂದು 75 ಲಕ್ಷ ಆಗಿದ್ದು, ಅದರ ವಿನ್ಯಾಸದ ಖರ್ಚು ಎಲ್ಲ ಸೇರಿ ಅನ್‍ರೋಡ್ ಬೆಲೆ ಒಂದು ಕೋಟಿಯಾಗಿತ್ತು. ದರ್ಶನ್ ಬಳಿ ಜಾಗ್ವಾರ್, ಆಡಿ ಕ್ಯೂ 7, ಬಿಎಂಡಬ್ಲ್ಯು, ರೇಂಜ್ ರೋವರ್, ಫಾಚ್ರ್ಯೂನರ್ ಕಾರುಗಳ ಕಲೆಕ್ಷನ್ ಇದೆ. ಇತ್ತೀಚೆಗೆ ಲ್ಯಾಂಬೋರ್ಗಿನಿಯನ್ನು ಖರೀದಿಸಿದ್ದರು.

    ಸದ್ಯ ದರ್ಶನ್ ಅವರು ರಾಬರ್ಟ್ ಸಿನಿಮಾ ಚಿತ್ರೀಕರಣ ಮುಗಿದಿದೆ. ಸದ್ಯ ಅವರು ವೀರ ಮದಕರಿ ನಾಯಕ ಸಿನಿಮಾದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಸ್ನೇಹಿತರ ಜೊತೆ ದರ್ಶನ್ ಅವರು ಮಡಿಕೇರಿಗೆ ಜಾಲಿ ರೈಡ್ ಕೂಡ ಹೋಗಿ ಬಂದಿದ್ದರು. ರಿಷಬ್ ಶೆಟ್ಟಿಯವರು ಹೀರೋ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಸದ್ಯ ‘ಹರಿಕಥೆಯಲ್ಲ ಗಿರಿಕಥೆ’ ಎಂಬ ಸಿನಿಮಾದಲ್ಲಿ ರಿಷಬ್ ನಿರತರಾಗಿದ್ದಾರೆ.