Tag: Car Rally

  • ಕಾರ್ ರ‍್ಯಾಲಿ ಮೂಲಕ ರಸ್ತೆ ನಿಯಮಗಳ ಕುರಿತು ಜಾಗೃತಿ

    ಕಾರ್ ರ‍್ಯಾಲಿ ಮೂಲಕ ರಸ್ತೆ ನಿಯಮಗಳ ಕುರಿತು ಜಾಗೃತಿ

    ಹುಬ್ಬಳ್ಳಿ: ವಿವಿಧ ಡ್ರೈವಿಂಗ್ ಸ್ಕೂಲ್‍ನಿಂದ ಆಗಮಿಸಿದ 15 ಹೆಚ್ಚು ಕಾರುಗಳು ನಗರದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಸುವುದರ ಮೂಲಕ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದವು.

    ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾಡಳಿತ, ಸಾರಿಗೆ, ಪೊಲೀಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹುಬ್ಬಳ್ಳಿ ಧಾರವಾಡ ಮೋಟಾರು ವಾಹನ ತರಬೇತಿ ಶಾಲೆಗಳ ಸಹಯೋಗದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಕಾರು ರ‍್ಯಾಲಿಯಲ್ಲಿ ಭಾಗವಹಿಸಿ ಗಮನ ಸೆಳೆದವು. ರ‍್ಯಾಲಿಗೆ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಸ್.ಎಂ. ಸಂದೀಗವಾಡ ಚಾಲನೆ ನೀಡಿದರು.

    ಈದ್ಗಾ ಮೈದಾನದಿಂದ ಹೊರಟ ರ‍್ಯಾಲಿ ಚನ್ನಮ್ಮ ವೃತ್ತ, ಹಳೆ ಬಸ್ ನಿಲ್ದಾಣ, ಹೊಸರು ಕ್ರಾಸ್, ವಿದ್ಯಾನಗರ, ಬಿ.ವಿ.ಬಿ.ಎಂಜಿನಿಯರಿಂಗ್ ಕಾಲೇಜು, ಟೆಂಡರ್ ಶ್ಯೂರ್ ರಸ್ತೆಯ ಮೂಲಕ ಚೇತನಾ ಕಾಲೇಜು ಬಳಿ ಮುಕ್ತಾಯವಾಯಿತು. ಸೀಟ್ ಬೆಲ್ಟ್ ಧರಿಸಿ, ಸಂಚಾರಿ ನಿಯಮ ಹಾಗೂ ಸಂಜ್ಞೆಗಳನ್ನು ಪಾಲಿಸಿ ಸಾರ್ವನಿಕರಿಗೆ ಮಾದರಿಯಾಗುವಂತೆ ವಾಹನ ಚಾಲಕರು ಕಾರು ಚಲಾಯಿಸಿದರು.

    ಈ ಸಂದರ್ಭದಲ್ಲಿ ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಲ್ವತ್ವಾಡಮಠ, ಪಶ್ಚಿಮ ಸಾರಿಗೆ ಅಧಿಕಾರಿ ಸಿ.ಡಿ.ನಾಯಕ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಮೋಟಾರು ವಾಹನ ನಿರೀಕ್ಷಕರಾದ ಅರುಣ ಕಟ್ಟಿಮನಿ, ರಫೀಕ್ ಅಹಮದ್ ಕಿತ್ತೂರ್, ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಮಹಾಂತೇಶ್ ಹೊಸಪೇಟೆ, ರತನ್ ಕುಮಾರ್ ಜೀರಗಾಳ, ಪ್ರಶಾಂತ್ ನಾಯ್ಕ, ವಾಹನ ತರಬೇತಿ ಶಾಲೆಗಳ ತರಬೇತುದಾರರಾದ ಪುಷ್ಪಾ, ಪ್ರತಿಭಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ಕಾಫಿ ನಾಡಿನಲ್ಲಿ ಇಂಡಿಯನ್ ನ್ಯಾಷನಲ್ ಕಾರ್ ರ‍್ಯಾಲಿ

    ಕಾಫಿ ನಾಡಿನಲ್ಲಿ ಇಂಡಿಯನ್ ನ್ಯಾಷನಲ್ ಕಾರ್ ರ‍್ಯಾಲಿ

    ಚಿಕ್ಕಮಗಳೂರು: ಕಾರ್ ರ‍್ಯಾಲಿಯಂದರೆ ನಾವು-ನೀವು ಸ್ಪೋರ್ಟ್ಸ್ ಚಾನೆಲ್‍ಗಳಲ್ಲಿ ನೋಡಿರುತ್ತೇವೆ. ಕಾಫಿನಾಡಲ್ಲಿ ನಡೆದ ಕಾರ್ ರ‍್ಯಾಲಿ ಅಷ್ಟೆ ಪ್ರಮಾಣದ ಮನೋರಂಜನೆ ಜೊತೆ ನೋಡುಗರಿಗೆ ಸಖತ್ ಕಿಕ್ ಕೊಟ್ಟಿದೆ. ಒಂದೊಂದು ಕಾರ್ ಧೂಳೆಬ್ಬಿಸ್ತಾ ಹೋದ ಹಾಗೆ ಜನ ಹುಚ್ಚೆದ್ದು ಕುಣಿದಿದ್ದಾರೆ. ರಾಷ್ಟ್ರೀಯ ಮಟ್ಟದ ಡ್ರೈವರ್ ಗಳ ಜೊತೆ ಸ್ಥಳೀಯ ಪ್ರತಿಭೆಗಳು ತೊಡೆ ತಟ್ಟಿದ್ದು ಈ ರ‍್ಯಾಲಿಯ ಮತ್ತೊಂದು ವಿಶೇಷ.

    ಕಾಫಿ ಡೇ ಗ್ಲೋಬಲ್‍ರವರ ಪ್ರಯೋಜತ್ವದಲ್ಲಿ ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಶಿಪ್‍ನ ಎಂಆರ್‍ಎಫ್ ಹಾಗೂ ಎಫ್‍ಎಂಎಸ್‍ಸಿಐ ರ‍್ಯಾಲಿ ಇದಾಗಿದೆ. ಏಕ ಕಾಲದಲ್ಲಿ ಮೂರು ವಿಭಾಗಗಳಿಗೆ ನಡೆದ ರ‍್ಯಾಲಿಯಲ್ಲಿ ಹತ್ತಾರು ಕಂಪನಿಯ ಕಾರುಗಳು ಕಮಾಲ್ ಮಾಡಿದವು. ಮಾರುತಿ ಎಸ್ಟೀಮ್, ಮಾರುತಿ ಬೊಲೆರೋ, ಮೀಟ್ಸ್ ಮೀಷನ್, ಓಕ್ಸ್ ಪೋಲೋ, ಓಕ್ಸ್ ವ್ಯಾಗನ್, ಸ್ಕೊಡ ಕಾರುಗಳ ಜೊತೆ ಜಿಪ್ಸಿ ಕೂಡ ಒಂದಕ್ಕೊಂದು ಸೆಡ್ಡು ಹೊಡೆಯುತ್ತಾ ಮುನ್ನುಗಿವೆ. ಮೊದಲ ದಿನದ ಅಂಕಗಳಿಗಾಗಿ ಅಖಾಡಕ್ಕಿಳಿದಿದ್ದ ಕಾರುಗಳು ನೋಡುಗರಿಗೆ ಸಖತ್ ಥ್ರಿಲ್ ನೀಡಿವೆ.

    ನೋಡುಗರ ಮನೋರಂಜನೆಗಾಗಿ ಸಿದ್ಧಪಡಿಸಿದ್ದ ಟ್ರ್ಯಾಕ್‍ನಲ್ಲಿ ಸ್ಪರ್ಧಾಳುಗಳು ಪ್ರೇಕ್ಷಕರ ಮೈನವಿರೇಳಿಸಿದರು. 2.2 ಕಿ.ಮೀ. ವ್ಯಾಪ್ತಿಯ ಹಾವು-ಬಳುಕಿನ ಮೈಕಟ್ಟಿನ ಮಣ್ಣಿನ ಹಾದಿಯಲ್ಲಿ ಚಾಲಕರ ಧೂಳೆಬ್ಬಿಸ್ತಾ ಓಡಿಸ್ತಿದ್ದ ಕಾರುಗಳು ನೋಡುಗರ ಎದೆ ಮೇಲೆ ಹೋದಂತಿತ್ತು. ಹೆಸರು ನೋಂದಾಯಿಸಿದ್ದ 47 ಸ್ಪರ್ಧಿಗಳಲ್ಲಿ 47 ರೈಡರ್‍ಳು ಕೂಡ ನೋಡುಗರಿಗೆ ಮನೋರಂಜನೆ ನೀಡಿದರು. ಈ ಬಾರಿಯ ರ್ಯಾಲಿಯಲ್ಲಿ ದೆಹಲಿ, ದುಬೈ, ಮಹಾರಾಷ್ಟ್ರ, ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳ ರೈಡರ್ ಗಳಿಗೆ ಚಿಕ್ಕಮಗಳೂರಿನ ಸ್ಥಳೀಯ ಪ್ರತಿಭೆಗಳು ಸೆಡ್ಡು ಹೊಡೆದರು. ಅರುಣಾಚಲ ಪ್ರದೇಶ, ಚೆನ್ನೈ ಹಾಗೂ ಕೊಯಮತ್ತೂರಿನಲ್ಲಿ ರ್ಯಾಲಿ ನಡೆದಿದ್ದು, ನಾಲ್ಕನೇ ಹಂತದಲ್ಲಿ ನಡೆಯುತ್ತಿರುವ ಇಲ್ಲಿನ ಗೆಲುವು ಕಂಡವರು ರ್ಯಾಲಿಯ ಚಾಂಪಿಯನ್ ಆಗುತ್ತಾರೆ.

    ಪ್ರೇಕ್ಷಕರ ರಂಜನೆಗಾಗಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ರಾಷ್ಟ ಮಟ್ಟದ ಸ್ಫರ್ಧಾಳುಗಳು ಭಾಗವಹಿಸಿ ರೋಚಕ ಪ್ರದರ್ಶನ ನೀಡಿದರು. 150 ರಿಂದ 200 ಕಿ.ಮೀ. ವೇಗದಲ್ಲಿ ಓಡುತ್ತಿರೋ ಕಾರುಗಳನ್ನ ನೋಡಿ ಜನ ಫುಲ್ ಫಿದಾ ಆಗಿದ್ದಾರೆ. ಮೂಡಿಗೆರೆಯ ಚಂದ್ರಾಪುರ, ಕಮ್ಮರಗೋಡು, ಚಟ್ನಹಳ್ಳಿ ಕಾಫಿ ತೋಟಗಳಲ್ಲಿ ಇನ್ನು ಎರಡು ದಿನ ಓಡುವ ಕಾರುಗಳು ನೋಡುಗರಿಗೆ ಮತ್ತಷ್ಟು ಮನೋರಂಜನೆ ನೀಡಲಿದ್ದು, ಜನ ಆ ರಮಣೀಯ ದೃಶ್ಯಗಳನ್ನ ನೋಡೋದಕ್ಕೂ ಕಾತರುರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv