Tag: car race

  • ಕಾರು ರೇಸ್‌ಗೆ ಕಿಚ್ಚ ಎಂಟ್ರಿ – ಬೆಂಗಳೂರು ತಂಡ ಖರೀದಿಸಿದ ಸುದೀಪ್‌

    ಕಾರು ರೇಸ್‌ಗೆ ಕಿಚ್ಚ ಎಂಟ್ರಿ – ಬೆಂಗಳೂರು ತಂಡ ಖರೀದಿಸಿದ ಸುದೀಪ್‌

    ಟ ಕಿಚ್ಚ ಸುದೀಪ್ (Sudeep) ಮಹತ್ವದ ಹೆಜ್ಜೆ ಇಟ್ಟಿದ್ದು ಇಂಡಿಯನ್ ಕಾರ್‌ ರೇಸ್ ಫೆಸ್ಟಿವಲ್‌ನಲ್ಲಿ (Indian Car Race Festival) ಬೆಂಗಳೂರು ತಂಡವನ್ನು (Bengaluru Team) ಖರೀದಿಸಿದ್ದಾರೆ.

    ಸುದೀಪ್‌ ಖರೀದಿಸಿದ ತಂಡಕ್ಕೆ ಕಿಚ್ಚಾಸ್ ಕಿಂಗ್ಸ್ (Kicchas Kings) ಎಂಬ ಹೆಸರನ್ನು ಇಡಲಾಗಿದೆ. ಬೆಂಗಳೂರು ಟೀಮ್ ಓನರ್ ಆಗಿರುವ ಕಿಚ್ಚ ತಂಡಕ್ಕೆ ಬೆಂಗಳೂರು ಟೀಮ್ ಎಂದೇ ಹೆಸರಿಡುತ್ತಾರೆ ಎಂದು ಸುದೀಪ್‌ ಭಾವಿಸಿದ್ದರು. ಆದರೆ ಕಿಚ್ಚಾಸ್ ಕಿಂಗ್ಸ್ ಎಂದು ಹೆಸರಿಟ್ಟಿದ್ದಕ್ಕೆ ಸುದೀಪ್‌ ಖುಷಿಯಾಗಿದ್ದಾರೆ. ಈ ಮೂಲಕ ಸಿನಿಮಾದಾಚೆಯೂ ಕಿಚ್ಚ ಹೆಜ್ಜೆ ಇಟ್ಟಿದ್ದಾರೆ. ಇದನ್ನೂ ಓದಿ: ಗಾಳಿಯಲ್ಲಿ ಬಟ್ಟೆ ಹಾರಿಸುವ ರೀಲ್ಸ್‌ಗೆ ನಿವಿ ಅಂಬಾಸಿಡರ್

    ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಓನರ್‌ಶಿಪ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಮಾಡಲಾಗುವ ಆಟಕ್ಕೆ ಈ ರೇಸ್‌ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಈ ರೇಸ್ ಸುಲಭದ್ದಲ್ಲ ಎಂದಿದ್ದಾರೆ.

    ರೇಸ್‌ಕಾರ್‌ನಲ್ಲಿ ಕೂರುವ ಆಸೆ ಎಲ್ಲರಿಗೂ ಇರುತ್ತೆ, ಆದರೆ ಓನರ್ ಆಗಿದ್ದರೂ ಸುದೀಪ್‌ಗೆ ಕಾರ್‌ನೊಳಗೆ ಕೂರುವ ಅವಕಾಶ ಇಲ್ಲ ಲೈಸೆನ್ಸ್ ಇದ್ದವರು ಮಾತ್ರ ಕೂರಬೇಕಾಗುತ್ತೆ ಕರಾರುವಕ್ಕಾಗಿ ಹೇಳಿದ್ದಾರೆ.

    ಅಂದಹಾಗೆ ಇಂಡಿಯನ್ ರೇಸ್ ಫೆಸ್ಟಿವಲ್‌ಗೆ ಓನರ್‌ಶಿಪ್ ಆಯ್ಕೆಯನ್ನ ಬಿಡ್ಡಿಂಗ್ ಮೂಲಕವೇ ಆಯ್ಕೆ ಮಾಡಲಾಗುತ್ತದೆ. ಕಾರ್ ರೇಸ್ ಸ್ಪರ್ಧೆಗೆ ಕಿಚ್ಚ ಓನರ್ ಆಗಿರುವ ಕಾರಣ ನಿಮ್ಮ ಇಷ್ಟದ ಕಾರು ಯಾವುದು ಎಂಬ ಪ್ರಶ್ನೆಯನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಸುದೀಪ್ ನನ್ನ ಮೊದಲ ಕಾರ್ ಮಾರುತಿ 800. ಅದೇ ನನ್ನ ಸೂಪರ್ ಕಾರ್ ಎಂದಿದ್ದಾರೆ. ಇದನ್ನೂ ಓದಿ: ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ

    ಆಗಸ್ಟ್ ತಿಂಗಳಲ್ಲಿ ರೇಸ್ ಆರಂಭವಾಗಲಿದ್ದು ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಗೋವಾ ಫ್ರಾಂಚೈಸಿಗಳ ಮಧ್ಯೆ ಸ್ಪರ್ಧೆ ನಡೆಯಲಿದೆ.

  • ರೇಸ್‌ ವೇಳೆ ಮತ್ತೊಂದು ಕಾರಿಗೆ ಡಿಕ್ಕಿ – ಎರಡು ಪಲ್ಟಿಯಾಗಿ ನಿಂತ ನಟ ಅಜಿತ್‌ ಕಾರು

    ರೇಸ್‌ ವೇಳೆ ಮತ್ತೊಂದು ಕಾರಿಗೆ ಡಿಕ್ಕಿ – ಎರಡು ಪಲ್ಟಿಯಾಗಿ ನಿಂತ ನಟ ಅಜಿತ್‌ ಕಾರು

    ಮ್ಯಾಡ್ರಿಡ್: ಸ್ಪೇನ್‌ನಲ್ಲಿ (Spain) ನಡೆದ ರೇಸ್‌ನಲ್ಲಿ (Car Race) ನಟ ಅಜಿತ್ ಕುಮಾರ್ (Ajith Kumar) ಅವರ ಕಾರು (Accident) ಅಪಘಾತಕ್ಕೀಡಾಗಿದೆ.

    ಸ್ಪೇನ್‌ನ ವೇಲೆನ್ಸಿಯಾದಲ್ಲಿ ನಡೆದ ರೇಸ್‌ನಲ್ಲಿ ಅಜಿತ್ ಭಾಗವಹಿಸಿದ್ದರು. ಈ ವೇಳೆ ಅವರ ಕಾರು ಇನ್ನೊಂದು ಕಾರಿಗೆ ಹಿಂಭಾಗದಿಂದ ಡಿಕ್ಕಿಯಾಗಿ, ಹಲವಾರು ಬಾರಿ ಪಲ್ಟಿಯಾಗಿ ನಿಂತಿದೆ. ಈ ಅಪಘಾತದ ವೀಡಿಯೊವನ್ನು ಅಜಿತ್ ಅವರ ವ್ಯವಸ್ಥಾಪಕ ಸುರೇಶ್ ಚಂದ್ರ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೋ ವೈರಲ್‌ ಆಗಿದ್ದು ಅವರ ಸುರಕ್ಷತೆಯ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

    ರೇಸ್‌ನ 5ನೇ ಸುತ್ತಿನಲ್ಲಿ ಅಜಿತ್ ಕುಮಾರ್‌ ಅವರು 14 ನೇ ಸ್ಥಾನ ಪಡೆದು ಎಲ್ಲರ ಮೆಚ್ಚುಗೆಯನ್ನು ಗಳಿಸಿದರು. 6 ನೇ ಸುತ್ತಿನಲ್ಲಿ ಎರಡು ಬಾರಿ ಕಾರು ಅಪಘಾತಕ್ಕೀಡಾಯಿತು. ಮೊದಲ ಬಾರಿಗೆ ಅಪಘಾತದ ಹೊರತಾಗಿಯೂ ಅವರು ಚೆನ್ನಾಗಿಯೇ ಇದ್ದರು. ಎರಡನೇ ಬಾರಿ ಮತ್ತೆ ಅಪಘಾತ ಸಂಭವಿಸಿದಾಗ ಅವರ ಕಾರು ಪಲ್ಟಿಯಾಯಿತು. ಬಳಿಕ ಮತ್ತೆ ಅವರು ರೇಸ್‌ ಮುಂದುವರಿಸಿದರು.

    ಅಜಿತ್ ಅವರ ರೇಸಿಂಗ್ ವೃತ್ತಿಜೀವನದಲ್ಲಿ ಒಂದೇ ತಿಂಗಳಿನಲ್ಲಿ ನಡೆದ ಎರಡನೇ ಪ್ರಮುಖ ಅಪಘಾತ ಇದಾಗಿದೆ. 24H ದುಬೈ 2025 ರೇಸಿಂಗ್ ಅಭ್ಯಾಸದ ಸಮಯದಲ್ಲಿ ಅವರ ಕಾರು ಅಪಘಾತಕ್ಕೀಡಾಗಿತ್ತು. ಅವರ ಕಾರು ನಿಲುಗಡೆಗೆ ಬರುವ ಮೊದಲು ನಿಯಂತ್ರಣ ಕಳೆದುಕೊಂಡು ಗೋಡೆಗೆ ಡಿಕ್ಕಿ ಹೊಡೆದಿತ್ತು. ಅಪಘಾತ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

    ಅಜಿತ್ ರೇಸಿಂಗ್‌ನಲ್ಲಿ ತೊಡಗಿಕೊಳ್ಳಲು ಕಳೆದ ವರ್ಷ ತಮ್ಮ ನಟನಾ ವೃತ್ತಿಯನ್ನು ಬದಿಗಿಟ್ಟು, ಪೋರ್ಷೆ 992 GT3 ಕಪ್ ವಿಭಾಗದಲ್ಲಿ FIA 24H ಸರಣಿಯಲ್ಲಿ ತಮ್ಮದೇ ಆದ ರೇಸಿಂಗ್‌ ತಂಡ ರಚಿಸಿಕೊಂಡು, ರೇಸ್‌ನಲ್ಲಿ ತೊಡಗುತ್ತಿದ್ದಾರೆ.

  • ದುಬೈ ಕಾರ್ ರೇಸ್‌ನಲ್ಲಿ ಗೆದ್ದು ಬೀಗಿದ ಅಜಿತ್ ಕುಮಾರ್

    ದುಬೈ ಕಾರ್ ರೇಸ್‌ನಲ್ಲಿ ಗೆದ್ದು ಬೀಗಿದ ಅಜಿತ್ ಕುಮಾರ್

    ದುಬೈನಲ್ಲಿ ನಡೆದ ಕಾರ್ ರೇಸ್‌ನಲ್ಲಿ ಕಾಲಿವುಡ್ ನಟ ಅಜಿತ್ ಕುಮಾರ್ (Ajith Kumar) 3ನೇ ಸ್ಥಾನ ಗಳಿಸಿದ್ದಾರೆ. ಗೆದ್ದ ಸಂಭ್ರಮದಲ್ಲಿ ಪತ್ನಿ ಶಾಲಿನಿಗೆ ಅಜಿತ್ ಮುತ್ತು ಕೊಟ್ಟಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:ಹೋಟೆಲ್ ನೆಲಸಮ; ವೆಂಕಟೇಶ್, ರಾಣಾ ದಗ್ಗುಬಾಟಿ ಮೇಲೆ ಬಿತ್ತು ಎಫ್‌ಐಆರ್

    ದುಬೈನಲ್ಲಿ ನಡೆದ 24H ಸಿರೀಸ್ ಕಾರ್ ರೇಸ್‌ನಲ್ಲಿ ಅಜಿತ್ ಭಾಗವಹಿಸಿದ್ದರು. ಇದಕ್ಕಾಗಿ ಒಂದೂವರೆ ತಿಂಗಳಿಂದ ದುಬೈನಲ್ಲಿ ಪ್ರಾಕ್ಟೀಸ್ ಮಾಡಿದ್ದು, ಹಠ ಬಿಡದೇ ಕಾರ್ ರೇಸ್‌ನಲ್ಲಿ 3ನೇ ಸ್ಥಾನ ಗೆದ್ದು ಬೀಗಿದ್ದಾರೆ. 991 ಕೆಟಗರಿಯಲ್ಲಿ 3ನೇ ಸ್ಥಾನ, ಜಿಟಿ4 ಕೆಟಗರಿಯಲ್ಲಿ ‘ಸ್ಪಿರಿಟ್ ಆಫ್ ದಿ ರೇಸ್’ ಪ್ರಶಸ್ತಿ ಪಡೆದಿದ್ದಾರೆ.

    ಗೆಲುವಿನ ಸಂಭ್ರಮದಲ್ಲಿ ಶಾಲಿನಿಗೆ ಮುತ್ತು ಕೊಟ್ಟ ವಿಡಿಯೋ ವೈರಲ್ ಆಗಿದೆ. ಭಾರತದ ಧ್ವಜ ಹಿಡಿದು ಬಹುಮಾನ ಸ್ವೀಕರಿಸಲು ಅಜಿತ್ ವೇದಿಕೆ ಹತ್ತಿದ್ದಾರೆ. ಅದಷ್ಟೇ ಅಲ್ಲ, ಅಜಿತ್‌ ಕಾರ್‌ ರೇಸ್‌ ಗೆದ್ದ ಸಂಭ್ರಮಕ್ಕೆ ಮಾಧವನ್‌ ಕೂಡ ಸಾಕ್ಷಿಯಾಗಿದ್ದಾರೆ. ಗೆಳೆಯನನ್ನು ತಬ್ಬಿ ಧನ್ಯವಾದ ತಿಳಿಸಿದ್ದಾರೆ.

    ಇನ್ನೂ ಇತ್ತೀಚೆಗೆ ದುಬೈನಲ್ಲಿ ಪ್ರಾಕ್ಟೀಸ್ ವೇಳೆ ಬ್ರೇಕ್ ಫೇಲ್ ಆಗಿ ಆಕ್ಸಿಡೆಂಟ್ ಆಗಿತ್ತು. ಅದೃಷ್ಟವಶಾತ್ ಅಜಿತ್‌ಗೆ ಏನೂ ಆಗಲಿಲ್ಲ.

    ಇನ್ನೂ ‘ವಿಡಾಮುಯರ್ಚಿ’ ಮತ್ತು ‘ಗುಡ್, ಬ್ಯಾಡ್ & ಅಗ್ಲಿ’ ಸಿನಿಮಾಗಳು ಈ ವರ್ಷ ಬಿಡುಗಡೆಗೆ ಸಿದ್ಧವಾಗಿದೆ.

  • ಕಾರ್ ರೇಸ್‍ಗೆ ಚಾಲನೆ ಕೊಟ್ಟ ದರ್ಶನ್

    ಕಾರ್ ರೇಸ್‍ಗೆ ಚಾಲನೆ ಕೊಟ್ಟ ದರ್ಶನ್

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2019ರ ಪೋಸ್ಟ್ ದಸರಾ ಇವೆಂಟ್ ಮೈಸೂರಿನ ಲಲಿತಮಹಾಲ್ ಹೆಲಿಪ್ಯಾಡ್ ಗ್ರೌಂಡ್‍ನಲ್ಲಿ ನಡೆಯುತ್ತಿದೆ. ಜೊತೆಗೆ ಗ್ರಾವೇಲ್ ಫೆಸ್ಟ್ ಕಾರ್ ರೇಸ್ ಕೂಡ ನಡೆಯುತ್ತಿದೆ.

    ಕಾರ್ ರೇಸ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲನೆ ಕೊಟ್ಟಿದ್ದಾರೆ. ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಕಾರ್ ರೇಸ್‍ಗೆ ಚಾಲನೆ ನೀಡಿದ್ದಾರೆ. ಒಟ್ಟು 9 ವಿಭಾಗದಲ್ಲಿ ಗ್ರಾವೇಲ್ ಫೆಸ್ಟ್ ರೇಸ್ ನಡೆಯಲಿದೆ. ಕಾರ್ ರೇಸ್‍ನಲ್ಲಿ 120 ಕಾರುಗಳು ಮತ್ತು 170 ಡ್ರೈವರ್‌ಗಳು ಭಾಗಿಯಾಗಲಿದ್ದಾರೆ. ಈ ಮೂಲಕ ಗ್ರಾವೇಸ್ ಫೆಸ್ಟ್ ಕಾರ್ ರೇಸ್ ಸ್ಪರ್ಧೆ ರೋಚಕವಾಗಿರುತ್ತದೆ.

    ನಟ ದರ್ಶನ್ ಆಯುಧ ಪೂಜೆ ಮುಗಿದ ನಂತರ ವಿಶೇಷವಾಗಿ ಹಬ್ಬವನ್ನು ಆಚರಣೆ ಮಾಡಿದ್ದರು. ಆರ್.ಆರ್. ನಗರದಲ್ಲಿರುವ ತೂಗುದೀಪ್ ಮನೆಯ ಮುಂದೆ ಕಾರುಗಳನ್ನು ಸಾಲಾಗಿ ನಿಲ್ಲಿಸಿ, ಹೂವಿನ ಹಾರ ಹಾಕಿ ಪೂಜೆ ಮಾಡುವ ಮೂಲಕ ಅದ್ಧೂರಿಯಾಗಿ ಆಯುಧ ಪೂಜೆಯನ್ನು ನೆರವೇರಿಸಿದ್ದರು. ಆಯುಧ ಪೂಜೆ ಮಾಡಿರುವ ದಾಸನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

    ದರ್ಶನ್ ಬಳಿ ಬಿಎಂಡಬ್ಲು, ರೇಂಜ್ ರೋವರ್, ಜಾಗ್ವರ್, ಫಾರ್ಚ್ಯುನರ್ ಕಾರುಗಳಿವೆ. ಅಷ್ಟೇ ಅಲ್ಲದೆ ಲ್ಯಾಂಬೋರ್ಗಿನಿನ ನ್ಯೂ ಎಡಿಷನ್, ಫೋರ್ಡ್ ಮಸ್ಟಂಗ್ ಸ್ಪೋರ್ಟ್ಸ್  ಕಾರ್ ಗಳನ್ನು ದಚ್ಚು ಹೊಂದಿದ್ದಾರೆ. ಆಯುಧ ಪೂಜೆ ದಿನ ಒಟ್ಟು 11 ದುಬಾರಿ ಕಾರುಗಳಿಗೆ ಆಯುಧ ಪೂಜೆ ಮಾಡಿದ್ದರು.

  • ಕೆಆರ್‌ಎಸ್‌ ನಲ್ಲಿ ಮೋಜು ಮಸ್ತಿ ಕೇಸ್- ಉದ್ಯಮಿ ವಿರುದ್ಧ ಎಫ್‍ಐಆರ್

    ಕೆಆರ್‌ಎಸ್‌ ನಲ್ಲಿ ಮೋಜು ಮಸ್ತಿ ಕೇಸ್- ಉದ್ಯಮಿ ವಿರುದ್ಧ ಎಫ್‍ಐಆರ್

    ಮಂಡ್ಯ: ಭದ್ರತೆ ಲೆಕ್ಕಿಸದೆ ಕೆಆರ್‌ಎಸ್‌ ನೀರಿನಲ್ಲಿ ಮೋಜು ಮಸ್ತಿ ಮಾಡಿದ ಮೈಸೂರಿನ ಉದ್ಯಮಿ ಮೇಲೆ ಕೇಸ್ ದಾಖಲಾಗಿದೆ.

    ವಿಕ್ರಂ ಗುಪ್ತಾ ಮೈಸೂರಿನ ಉದ್ಯಮಿಯಾಗಿದ್ದು, ಹಿನ್ನೀರಿನ ಅಣೆಕಟ್ಟೆ ನೀರಿನೊಳಗೆ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ್ದಾರೆ. ಈ ಬಗ್ಗೆ ಕೆಆರ್‌ಎಸ್‌ ಇಂಜನೀಯರ್ ತಮ್ಮೇಗೌಡ ಅವರು ಕೆಆರ್‌ಎಸ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

    ಪೊಲೀಸರು ದೂರು ದಾಖಲಿಸಿಕೊಂಡು ಉದ್ಯಮಿ ವಿಕ್ರಂ ಗುಪ್ತಾ ವಿರುದ್ಧ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಐಪಿಸಿ ಸೆಕ್ಸನ್ 1860ರಡಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಕೆಆರ್‌ಎಸ್‌ ಹಿನ್ನೀರಿನಲ್ಲಿ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ಕೆಆರ್‌ಎಸ್‌ ನೀರಿನಲ್ಲಿ ಮೋಜು-ಮಸ್ತಿ: ಭದ್ರತೆ ಲೆಕ್ಕಿಸದೆ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ ಉದ್ಯಮಿ

    ಏನಿದು ಘಟನೆ?
    ಕೆಆರ್‌ಎಸ್‌ ಡ್ಯಾಂನ ಹಿನ್ನೀರಿನಲ್ಲಿ ಉದ್ಯಮಿ ವಿಕ್ರಂ ಗುಪ್ತಾ ತಮ್ಮ ಪುಂಡಾಟ ಮೆರೆದಿದ್ದರು. ಭದ್ರತೆ ಲೆಕ್ಕಿಸದೆ ವಿಕ್ರಂ ಅಣೆಕಟ್ಟಿನ ನೀರಲ್ಲಿ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಕ್ರಂ ಮೈಸೂರಿನ ಉದ್ಯಮಿಯಾಗಿದ್ದು, ಕೆಆರ್‌ಎಸ್‌ನಲ್ಲೂ ಸ್ವಂತ ಮನೆ ಹೊಂದಿದ್ದಾರೆ. ಕೆಆರ್‌ಎಸ್‌ ಹಿನ್ನೀರಿನಲ್ಲಿ ತನ್ನ ಎಸ್‍ಯುವಿ ವೆಹಿಕಲ್‍ನಲ್ಲಿ ಮೋಜು ಮಸ್ತಿ ಮಾಡಿದ್ದರು. ಇವರ ರೇಸಿಂಗ್ ಅವತಾರ ನೋಡಿಯೂ ಡ್ಯಾಂನಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಕೂಡ ಸೈಲೆಂಟ್ ಆಗಿದ್ದರು.

    ಈ ಬಗ್ಗೆ ಕಾವೇರಿ ನೀರಾವರಿ ನಿಗಮ ಎಇ ಬಸವರಾಜೇಗೌಡ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, “ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು 2 ದಿನ ಕೋಲ್ಕತ್ತಾಗೆ ಕೆಲಸಕ್ಕೆಂದು ಹೋಗಿ ಭಾನುವಾರ ಬೆಳಗ್ಗೆ ಬಂದೆ. ಹಿನ್ನೀರಿನ ಸಮೀಪ ಬರಲು ಸಾಕಷ್ಟು ರಸ್ತೆಗಳು ಇರುವ ಕಾರಣ ಜನರು ಬರುತ್ತಾರೆ. ಈ ರೀತಿ ಮಾಡುವವರ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಬಗ್ಗೆ ವೀಕ್ಷಿಸಿ ನಾವು ಆ ವ್ಯಕ್ತಿ ವಿರುದ್ಧ ಕ್ರಮಗೈಕೊಳ್ಳುತ್ತೇನೆ” ಎಂದು ಹೇಳಿದ್ದರು.

    ವಿಕ್ರಂ ಗುಪ್ತಾ ವಿರುದ್ಧ ಕೆಆರ್‌ಎಸ್‌ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    https://www.youtube.com/watch?v=jujoFIfUf8w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರ್ ರೇಸ್ ವೇಳೆ ಭಾರೀ ಅಪಾಯದಿಂದ ಪಾರಾದ ಶಾಸಕ ಮಾಲೀಕಯ್ಯ ಗುತ್ತೇದಾರ್ ಪುತ್ರ: ವಿಡಿಯೋ ನೋಡಿ

    ಕಾರ್ ರೇಸ್ ವೇಳೆ ಭಾರೀ ಅಪಾಯದಿಂದ ಪಾರಾದ ಶಾಸಕ ಮಾಲೀಕಯ್ಯ ಗುತ್ತೇದಾರ್ ಪುತ್ರ: ವಿಡಿಯೋ ನೋಡಿ

    ಮಡಿಕೇರಿ: ಕಾರ್ ರೇಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಲಬುರಗಿಯ ಅಫ್ಜಲ್‍ಪುರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಪುತ್ರ ರಿತೇಶ್ ಭಾರೀ ಅಪಾಯದಿಂದ ಪಾರಾಗಿದ್ದಾರೆ.

    ವಿರಾಜಪೇಟೆ ಬಳಿ ಅಮ್ಮತ್ತಿಯಲ್ಲಿ ನಡೆದ ಕಾರ್ ರೇಸ್ ಸ್ಪರ್ಧೆಯಲ್ಲಿ ರಿತೇಶ್ ಗುತ್ತೇದಾರ್ ಪಾಲ್ಗೊಂಡಿದ್ದರು. ವೇಗವಾಗಿ ಚಲಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿತ್ತು.

    ರಿತೇಶ್ ಹೆಲ್ಮೆಟ್ ಧರಿಸಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ರೇಸ್ ವೀಕ್ಷಿಸುತ್ತಿದ್ದ ಜನರ ಸಮೀಪವೇ ಕಾರು ಪಲ್ಟಿಯಾಗಿ ಬಿದ್ದಿತ್ತು.

    ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ರಿತೇಶ್ ಟೈಮಿಂಗ್ ಸೆಟ್ ಮಾಡಿಕೊಂಡು ಕಾರು ಚಲಾಯಿಸುತ್ತಿದ್ದೆ. ಒಂದನೇ ಬಂಡೆಯನ್ನು ಕ್ರಾಸ್ ಮಾಡಿದ ಬಳಿಕ ಸ್ಲೋ ಮಾಡುವುದು ಯಾಕೆ ಎಂದು ವೇಗವಾಗಿ ಡ್ರೈವ್ ಮಾಡ್ತಿದ್ದೆ. ಈ ವೇಳೆ ನನ್ನ ಬ್ಯಾಡ್ ಲಕ್ ಈ ರೀತಿ ಆಯ್ತು ಎಂದು ಅವರು ತಿಳಿಸಿದರು.

     

    https://www.youtube.com/watch?v=7J_seW3UTqY