Tag: Car Parking

  • ನೈರುತ್ಯ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ- ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್

    ನೈರುತ್ಯ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ- ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್

    ಬೆಂಗಳೂರು: ನೈರುತ್ಯ ರೈಲ್ವೆ ಇಲಾಖೆ (South Western Railway Department) ಬೆಂಗಳೂರಿಗರಿಗೆ ಸಿಹಿ ಸುದ್ದಿ ನೀಡಿದೆ. ರೈಲ್ವೆ ಪ್ರಯಾಣಿಕರನ್ನ ಸೆಳೆಯಲು ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್‌ (Multi Level Car Parking) ನಿರ್ಮಾಣ ಮಾಡುತ್ತಿದೆ. ಯಶವಂತಪುರ ರೈಲ್ವೆ ಸ್ಟೇಷನ್ ನಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಹಲವಾರು ಅಭಿವೃದ್ಧಿ ಕಾರ್ಯಗಳು ಆಗ್ತಿವೆ.

    ಬೆಂಗಳೂರಿನ ರೈಲ್ವೆ ನಿಲ್ದಾಣಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರು ಸಂಚಾರ ಬೆಳೆಸೋ ನಿಲ್ದಾಣಗಳಲ್ಲಿ ಯಶವಂತಪುರ ರೈಲ್ವೆ ನಿಲ್ದಾಣ (Yeshwanthpur Railyway Station) ಕೂಡ ಒಂದು. ಪ್ರತಿನಿತ್ಯ ಒಂದು ಲಕ್ಷ ಪ್ರಯಾಣಿಕರು ಸಂಚಾರ ಮಾಡೋ ಯಶವಂತಪುರ ರೈಲ್ವೆ ಸ್ಟೇಷನ್‍ನನ್ನು ನೈರುತ್ಯ ರೈಲ್ವೆ ಇಲಾಖೆ ಅಭಿವೃದ್ಧಿ ಮಾಡಲು ಮುಂದಾಗಿದೆ. ರೈಲ್ವೆ ಸ್ಟೇಷನ್‍ನ ಪೂರ್ವ ಭಾಗದಲ್ಲಿ ಮಲ್ಟಿ ಲೆವೆಲ್  ಕಾರ್ ಪಾರ್ಕಿಂಗ್ ನಿರ್ಮಾಣ ಹಂತದಲ್ಲಿ ಇದೆ.

    ಕಾರು ಪಾರ್ಕಿಂಗ್ ವಿಶೇಷತೆ ಏನು?: 6 ಸಾವಿರ ಚದರ್ ಕಿಮೀ ಇರೋ ಈ ಕಾರ್ ಪಾರ್ಕಿಂಗ್ ನಲ್ಲಿ 90 ದ್ವಿಚಕ್ರ ವಾಹನಗಳು, 90 ಕಾರುಗಳನ್ನ ನಿಲ್ಲಿಸಬಹುದಾಗಿದೆ. ಪೂರ್ವ ಭಾಗದಲ್ಲಿ ಕಟ್ಟಡ ನಿರ್ಮಾಣ ಆದ ನಂತರ, ಪಶ್ಚಿಮ ಭಾಗದ ರೈಲ್ವೆ ಸ್ಟೇಷನ್ ಅಂದರೆ ಯಶವಂತಪುರ ಮೆಟ್ರೋ ರೈಲ್ವೆ ನಿಲ್ದಾಣದ ಕಡೆ ಮತ್ತೊಂದು ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಾಣ ಆಗಲಿದೆ. 2024-25ರ ಅಷ್ಟೊತ್ತಿಗೆ ಈ ಕಾಮಗಾರಿ ಮುಕ್ತಾಯ ಆಗಲಿದ್ದು, ನಂತರ ಸಾರ್ವಜನಿಕ ಅನುಕೂಲಕ್ಕೆ ಅವಕಾಶ ಕೊಡಲಾಗುತ್ತೆ. ಇದನ್ನೂ ಓದಿ; ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಪಾಸ್‌ – ಇಬ್ಬರಿಂದ ಮಾತ್ರ ವಿರೋಧ

    ಒಟ್ಟಾರೆ ಬೆಂಗಳೂರಿನಲ್ಲಿ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ವಿಶೇಷತೆ ಇದೆ. ರೈಲ್ವೇ ಪ್ರಯಾಣಿಕರಿಗೆ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ‌ ತುಂಬಾ ಅನುಕೂಲಕರ ಆಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾರು ಪಾರ್ಕ್ ಮಾಡಿದ ವಿಚಾರಕ್ಕೆ ಜಗಳ – ತಲೆಗೆ ಇಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ

    ಕಾರು ಪಾರ್ಕ್ ಮಾಡಿದ ವಿಚಾರಕ್ಕೆ ಜಗಳ – ತಲೆಗೆ ಇಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ

    ಲಕ್ನೋ: ಕಾರು ಪಾರ್ಕ್ (Car Parking) ಮಾಡಿದ ವಿಚಾರಕ್ಕೆ ಜಗಳ ನಡೆದು, ಅದರಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬನ ತಲೆಗೆ ಇಟ್ಟಿಗೆಯಿಂದ (Brick) ಹೊಡೆದು ಹತ್ಯೆ ನಡೆಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.

    ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ವರುಣ್ ಎಂದು ಗುರುತಿಸಲಾಗಿದೆ. ಆತ ದೆಹಲಿಯ ನಿವೃತ್ತ ಪೊಲೀಸ್ ಅಧಿಕಾರಿಯ ಮಗ ಎಂಬುದೂ ತಿಳಿದುಬಂದಿದೆ. ಘಟನೆಯ ಭಯಾನಕ ವೀಡಿಯೋವನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದು, ಅದರಲ್ಲಿ ವರುಣ್‌ಗೆ 4-5 ಜನರ ಗುಂಪು ಅಮಾನುಷವಾಗಿ ಥಳಿಸುವುದು ಕಂಡುಬಂದಿದೆ.

    ವರದಿಗಳ ಪ್ರಕಾರ ಕಳೆದ ರಾತ್ರಿ ವರುಣ್ ಗಾಜಿಯಾಬಾದ್‌ನ ಉಪಾಹಾರ ಗೃಹದ ಹೊರಗಡೆ ತನ್ನ ಕಾರನ್ನು ನಿಲ್ಲಿಸಿದ್ದ. ಆತ ಪಕ್ಕದ ಕಾರಿನ ಬಾಗಿಲನ್ನು ತೆರೆಯಲು ಸಾಧ್ಯವಾಗದಷ್ಟು ಹತ್ತಿರದಲ್ಲಿ ನಿಲ್ಲಿಸಿದ್ದಾನೆ ಎಂದು ಪಕ್ಕದ ಕಾರಿನ ಮಾಲೀಕ ವರುಣ್‌ನೊಂದಿಗೆ ವಾಗ್ವಾದ ಪ್ರಾರಂಭಿಸಿದ್ದಾನೆ.

    ಇಬ್ಬರ ನಡುವಿನ ಜಗಳ ಸ್ವಲ್ಪ ಸಮಯದಲ್ಲೇ ಹೊಡೆದಾಟಕ್ಕೆ ತಿರುಗಿದೆ. ಈ ವೇಳೆ ವರುಣ್ ಮೇಲೆ ಆರೋಪಿಗಳ ಗುಂಪು ಅಮಾನುಷವಾಗಿ ಹಲ್ಲೆ ನಡೆಸಿದೆ. ಬಳಿಕ ಆತನ ತಲೆಗೆ ಇಟ್ಟಿಗೆಯಿಂದ ಹೊಡೆದಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ತೀವ್ರವಾಗಿ ಗಾಯಗೊಂಡಿದ್ದ ವರುಣ್‌ನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆತ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ರೈಲು ಡಿಕ್ಕಿ ಹೊಡೆದು ಇಬ್ಬರು ಆರ್‌ಪಿಎಫ್ ಪೊಲೀಸರ ದುರ್ಮರಣ

    ಸಾರ್ವಜನಿಕ ಸ್ಥಳದಲ್ಲಿ ನಡೆದಿರುವ ಈ ಭೀಕರ ಕೊಲೆ ಪ್ರಕರಣ ಗಾಜಿಯಾಬಾದ್‌ನ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ಹಾಗೂ ಬೀದಿಗಳಲ್ಲಿ ನಡೆಯುವ ಹಿಂಸಾಚಾರವನ್ನು ಪರಿಶೀಲಿಸುವಲ್ಲಿ ಪೊಲೀಸರ ವೈಫಲ್ಯದ ಬಗ್ಗೆ ಕಳವಳ ಹುಟ್ಟು ಹಾಕಿದೆ. ಮೃತನ ಸಂಬಂಧಿಕರು ಹಾಗೂ ಸ್ಥಳೀಯರು ಪೊಲೀಸರ ಅಸಡ್ಡೆತನಕ್ಕೆ ಪ್ರತಿಭಟನೆ ನಡೆಸಿದ್ದಾರೆ.

    ಇದೀಗ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, 5 ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ತುಂಡರಿಸಿದ ಅರ್ಧ ಕೈ ಪತ್ತೆ -ಸ್ಮಶಾನಗಳತ್ತ ಪೊಲೀಸರ ದೌಡು

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಬಾಡಿಗೆ ಕಾರು ಪಾರ್ಕಿಂಗ್‌ಗೆ ಅವಕಾಶ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಬಾಡಿಗೆ ಕಾರು ಪಾರ್ಕಿಂಗ್‌ಗೆ ಅವಕಾಶ

    ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ(Eidgah Maidan) ಕೊನೆಗೂ ಬಾಡಿಗೆ ಕಾರು ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.

    ಗಣೇಶೋತ್ಸವದ(Ganeshotsav) ಹಿನ್ನೆಲೆಯಲ್ಲಿ ಪಾರ್ಕಿಂಗ್(Parking) ಮಾಡುತ್ತಿದ್ದ ಬಾಡಿಗೆ ವಾಹನಗಳನ್ನು ಖಾಲಿ ಮಾಡಿಸಿದ್ದ ಹುಬ್ಬಳ್ಳಿ-ಧಾರವಾಡ(Hubballi-Dharwad) ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಹಬ್ಬ ಮುಗಿದು 15 ದಿನಗಳು ಕಳೆದಿದ್ದರೂ ಮತ್ತೆ ಪಾರ್ಕಿಂಗ್ ಗೆ ಅವಕಾಶ ನೀಡಿರಲಿಲ್ಲ.

     

    ಈ ಬಗ್ಗೆ ಸಾಕಷ್ಟು ಬಾರಿ ಪೊಲೀಸ್ ಆಯುಕ್ತರು ಮತ್ತು ಪಾಲಿಕೆ ಮೇಯರ್ ಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿರಲಿಲ್ಲ. ಮೈದಾನದಲ್ಲಿ ಕಾರು ಪಾರ್ಕಿಂಗ್ ಇಲ್ಲದ ಕಾರಣ ಸಕಾಲದಲ್ಲಿ ಬಾಡಿಗೆ ಬಾರದೇ ನೂರಾರು ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಡಿಜೆ ಆಫ್ ಮಾಡಿ ಎಂದ ಪೊಲೀಸರು – ಯುವಕರಿಂದ ಕಲ್ಲು ತೂರಾಟ

    ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗಿತ್ತು. ಸುದ್ದಿ ಪ್ರಸಾರವಾದ ಬಳಿಕ ಎಚ್ಚೆತ್ತ ಅಧಿಕಾರಿಗಳು ಕೊನೆಗೂ, ಮೈದಾನ ಮುಖ್ಯ ಗೇಟ್ ಬೀಗ ತೆರೆದು ಕಾರ್ ಪಾರ್ಕಿಂಗ್ ಅವಕಾಶ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]