Tag: Car Gift

  • ‘ಭೂಲ್ ಭುಲಯ್ಯ 2’ ಹಿಟ್ : ನಟ ಕಾರ್ತಿಕ್ ಆರ್ಯಗೆ ಬಂಪರ್ ಬಹುಮಾನ

    ‘ಭೂಲ್ ಭುಲಯ್ಯ 2’ ಹಿಟ್ : ನಟ ಕಾರ್ತಿಕ್ ಆರ್ಯಗೆ ಬಂಪರ್ ಬಹುಮಾನ

    ಕೊರೋನಾ ನಂತರ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗಿದ್ದವು. ಸ್ಟಾರ್ ನಟರ ಸಿನಿಮಾಗಳು ಬಂದರೂ, ಪ್ರೇಕ್ಷಕ ಮಾತ್ರ ಅವುಗಳನ್ನು ಸ್ವೀಕರಿಸಲೇ ಇಲ್ಲ. ಅದರಲ್ಲೂ ದಕ್ಷಿಣದ ಸಿನಿಮಾಗಳ ಮುಂದೆ ಬಾಲಿವುಡ್ ಮಂಡೆಯೂರಿತ್ತು. ಇವೆಲ್ಲ ಅವಮಾನಗಳನ್ನು ನಿವಾರಿಸಲು ಎಂಬಂತೆ ಬಂದಿದ್ದೇ ಕಾರ್ತಿಕ್ ಆರ್ಯನ್ ನಟನೆಯ ‘ಭುಲ್ ಭುಲಯ್ಯ 2’ ಸಿನಿಮಾ. ಬಾಕ್ಸ್ ಆಫೀಸಿನಲ್ಲಿ ಭಾರೀ ಸದ್ದು ಮಾಡುವುದರ ಮೂಲಕ ಬಾಲಿವುಡ್ ಮಾನ ಮರ್ಯಾದೆ ಉಳಿಸಿತ್ತು.

    ಐವತ್ತು ಕೋಟಿಯಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗಳಿಸಿದ್ದು ಬರೋಬ್ಬರಿ 185 ಕೋಟಿ ಎನ್ನಲಾಗುತ್ತಿದೆ. ನಿರೀಕ್ಷೆಗೂ ಮೀರಿ ಹಣ ಬಂದಿರುವ ಕಾರಣಕ್ಕಾಗಿ ತಮ್ಮ ಸಿನಿಮಾದ ನಾಯಕ ನಟ ಕಾರ್ತಿಕ್ ಆರ್ಯನ್ ಅವರಿಗೆ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ ನಿರ್ಮಾಪಕ ಭೂಷಣ್ ಕುಮಾರ್.  ಅಂದಾಜು ನಾಲ್ಕು ಕೋಟಿ ರೂಪಾಯಿ ಮೌಲ್ಯದ ಮೆಕ್ ಲಾರೆನ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಭಾರತ ಸಿನಿಮಾದ ರಂಗದಲ್ಲೇ ಈ ಕಾರು ಹೊಂದಿರುವ ಏಕೈಕ ನಟ ಎಂಬ ಹೆಗ್ಗಳಿಕೆ ಕಾರ್ತಿಕ್ ಕಾರಣರಾಗಿದ್ದಾರೆ. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ಕೂಡ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು. ಹಣ ಕೂಡ ಗಳಿಸಿತ್ತು. ಹಾಗಾಗಿ ತಮ್ಮ ನಿರ್ದೇಶಕರಿಗೆ ಕಾರು ಉಡುಗೊರೆಯಾಗಿ ನೀಡಿದ್ದರು ಕಮಲ್. ಕೇವಲ ನಿರ್ದೇಶಕರಿಗೆ ಮಾತ್ರವಲ್ಲ, ಸಹ ನಿರ್ದೇಶಕರಿಗೂ ಕೂಡ ದುಬಾರಿ ಬೈಕ್ ನೀಡುವ ಮೂಲಕ ಮಾದರಿಯಾಗಿದ್ದರು. ಇದೀಗ ಅದೇ ನಡೆಯನ್ನೇ ಅನುಸರಿಸಿದ್ದಾರೆ ಭುಲ್ ಭುಲಯ್ಯ 2 ಸಿನಿಮಾದ ನಿರ್ಮಾಪಕ ಭೂಷಣ್ ಕುಮಾರ್.

    Live Tv

  • ನಿರ್ದೇಶಕನಿಗೆ ಐಷಾರಾಮಿ ಕಾರು, ಸಹ ನಿರ್ದೇಶಕರಿಗೆ ದುಬಾರಿ ಬೈಕ್ ಗಿಫ್ಟ್ ಮಾಡಿದ ಕಮಲ್ ಹಾಸನ್

    ನಿರ್ದೇಶಕನಿಗೆ ಐಷಾರಾಮಿ ಕಾರು, ಸಹ ನಿರ್ದೇಶಕರಿಗೆ ದುಬಾರಿ ಬೈಕ್ ಗಿಫ್ಟ್ ಮಾಡಿದ ಕಮಲ್ ಹಾಸನ್

    ಚಾರ್ಯ ಸಿನಿಮಾ ಸೋತಿದ್ದಕ್ಕೆ ತೆಲುಗು ನಟ ಚಿರಂಜೀವಿ ತಮ್ಮ ಸಿನಿಮಾ ನಿರ್ದೇಶಕನಿಂದ ಮೂವತ್ತು ಕೋಟಿ ರೂಪಾಯಿಯನ್ನು ವಿತರಕರಿಗೆ ಮರುಪಾವತಿಸುವಂತೆ ಹೇಳಿದರೆ, ಇತ್ತ ತಮಿಳು ಚಿತ್ರದ ಖ್ಯಾತ ನಟ ಕಮಲ್ ಹಾಸನ್ ತಮ್ಮ ವಿಕ್ರಮ್ ಸಿನಿಮಾ ಗೆದ್ದಿರುವುದಕ್ಕೆ ನಿರ್ದೇಶಕರ ತಂಡಕ್ಕೆ ಭಾರೀ ಉಡುಗೊರೆ ನೀಡಿದ್ದಾರೆ. ಕಮಲ್ ಹಾಸನ್ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ : ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಸೋಲು : ಹೊಣೆಹೊತ್ತು ಹಣ ಮರಳಿಸಿದ್ರಾ ನಿರ್ದೇಶಕ ಶಿವ

    ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ನಾಲ್ಕೇ ದಿನಕ್ಕೆ 175 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ವಾರದಲ್ಲಿ ಸಿನಿಮಾ ಇನ್ನೂರು ಕೋಟಿ ಕ್ಲಬ್ ಗೆ ಸೇರಲಿದೆ ಎಂದು ಅಂದಾಜಿಸಲಾಗಿದೆ. ಈ ಖುಷಿಗಾಗಿ ಕಮಲ್ ಹಾಸನ್, ತಮ್ಮ ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದದ್ದಾರೆ. ಈ ಕಾರಿಗೆ ಅಂದಾಜು 70 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ವಿಷಯವನ್ನು ನಿರ್ದೇಶಕರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಇಟ್ಟ ಹೆಸರೇನು? ಆ ಹೆಸರಿನ ಅರ್ಥ ಏನು?

    ಕೇವಲ ನಿರ್ದೇಶಕರಿಗೆ ಮಾತ್ರವಲ್ಲ, ಸಹ ನಿರ್ದೇಶನದ ತಂಡಕ್ಕೂ ಕೂಡ ದುಬಾರಿ ಬೈಕ್ ಕೊಡಿಸಿದ್ದಾರೆ ಎನ್ನಲಾಗುತ್ತಿದೆ. ಒಟ್ಟು 18 ಜನರಿಗೆ ಈ ಬೈಕ್ ದೊರೆತಿದೆ. ವಿಕ್ರಮ್ ಸಿನಿಮಾ ಗೆಲುವಿಗೆ ಚಿತ್ರತಂಡವೇ ಕಾರಣ ಎನ್ನುವ ಕಾರಣಕ್ಕಾಗಿ ಇಂಥದ್ದೊಂದು ಉಡುಗೊರೆಯನ್ನು ಕಮಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶ್ವದಾದ್ಯಂತ ಚಿತ್ರಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಅಲ್ಲದೇ, ಕರ್ನಾಟಕದಲ್ಲೂ ಈ ಸಿನಿಮಾ ಚೆನ್ನಾಗಿಯೇ ದುಡ್ಡು ಮಾಡಿದೆ.