Tag: Car Fire

  • ಪ್ರೇಯಸಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಕೇಸ್‌ಗೆ ಟ್ವಿಸ್ಟ್ – ಇದಕ್ಕೂ ಮುನ್ನ ಯುವತಿ ತಂದೆಗೆ ಚಾಕು ಇರಿದಿದ್ದ ಪಾಗಲ್ ಪ್ರೇಮಿ

    ಪ್ರೇಯಸಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಕೇಸ್‌ಗೆ ಟ್ವಿಸ್ಟ್ – ಇದಕ್ಕೂ ಮುನ್ನ ಯುವತಿ ತಂದೆಗೆ ಚಾಕು ಇರಿದಿದ್ದ ಪಾಗಲ್ ಪ್ರೇಮಿ

    ಬೆಂಗಳೂರು: ಪ್ರೇಯಸಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ಬೆಂಕಿ ಹಚ್ಚುವ ಮುನ್ನ ಯುವತಿ ಮನೆಗೆ ತೆರಳಿ ತಂದೆಗೆ ಚಾಕು ಇರಿದಿದ್ದ ಎನ್ನುವುದು ಬೆಳಕಿಗೆ ಬಂದಿದೆ.

    ಈ ಘಟನೆ ಬೆಂಗಳೂರಿನ (Bengaluru) ಸುಬ್ರಮಣ್ಯಪುರದಲ್ಲಿ ನಡೆದಿದ್ದು, ಆರೋಪಿಯನ್ನು ರೌಡಿಶೀಟರ್ ರಾಹುಲ್ ಎಂದು ತಿಳಿಯಲಾಗಿದೆ. ಕೊಲೆ ಯತ್ನ, ದರೋಡೆ, ರಾಬರಿ ಸೇರಿದಂತೆ 18 ಕೇಸ್‌ಗಳಿವೆ. ಕಳೆದ ಕೆಲವು ತಿಂಗಳುಗಳಿಂದ ಯುವತಿ ಆತನ ಪ್ರೀತಿಯನ್ನು ನಿರಾಕರಿಸುತ್ತಿದ್ದಳು. ಹೀಗಾಗಿ ಭಾನುವಾರ ಸ್ನೇಹಿತರ ಜೊತೆ ಬಂದು ಪ್ರೇಯಸಿಯ ಕಾರುಗಳಿಗೆ ಬೆಂಕಿ ಇಟ್ಟಿದ್ದ.ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕಾಗಿ ಯುವತಿಯ ಕಾರು, ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

    ಪ್ರೇಯಸಿಯನ್ನು ಹುಡುಕಿಕೊಂಡ ಸಿಕೆ ಅಚ್ಚುಕಟ್ಟು ಮನೆಗೆ ಬಂದಿದ್ದಾನೆ. ಅಲ್ಲಿ ಗಲಾಟೆ ಮಾಡಿದ್ದು, ಯುವತಿಯ ಸಾಕು ತಂದೆ ಲಕ್ಷ್ಮೀನಾರಾಯಣ ವಿರೋಧಿಸಿದ್ದಕ್ಕೆ ರೊಚ್ಚಿಗೆದ್ದ ರಾಹುಲ್ ಅವರಿಗೆ ಚಾಕು ಇರಿದಿದ್ದ. ಬಳಿಕ ಅಲ್ಲಿ ಯುವತಿ ಇಲ್ಲದಿರುವುದನ್ನು ತಿಳಿದು ಸುಬ್ರಮಣ್ಯಪುರದ ಚಿಕ್ಕಲಸಂದ್ರ ಅಪಾರ್ಟ್ಮೆಂಟ್‌ಗೆ ತೆರಳಿದ್ದ. ಅಲ್ಲಿ ಅಪಾರ್ಟ್ಮೆಂಟ್‌ನ ಸೆಕ್ಯೂರಿಟಿ ಗಾರ್ಡ್‌ಗೆ ಯುವತಿಯ ಫೋಟೋ ತೋರಿಸಿ ಕಾರು ಯಾವುದು ಎಂದು ತಿಳಿದುಕೊಂಡಿದ್ದಾನೆ. ಕಾರು ಗ್ಲಾಸ್ ಒಡೆದು ಪೆಟ್ರೋಲ್ ಹಾಕಿ ಕಾರಿಗೆ ಬೆಂಕಿ ಹಚ್ಚಿದ್ದಾನೆ. ಇದರಿಂದ ಪಕ್ಕದ ಕಾರಿಗೆ ಬೆಂಕಿ ವ್ಯಾಪಿಸಿತ್ತು.

    ಸದ್ಯ ಆರೋಪಿಯ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಪ್ರಿಯತಮೆ ತಾಯಿಯಿಂದ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆ ಹಾಗೂ ವಿರೇಶ್ ಎಂಬುವವರಿಂದ ಕಾರಿಗೆ ಹಾನಿ ಮಾಡಿದ್ದ ಹಿನ್ನೆಲೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಏನಿದರ ಹಿನ್ನೆಲೆ?
    ಕಳೆದ 9 ವರ್ಷಗಳಿಂದ ರಾಹುಲ್ ಹಾಗೂ ಯುವತಿ ಪ್ರೀತಿಸುತ್ತಿದ್ದರು. ರಾಹುಲ್ ಹನುಮಂತನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ಈತನ ಹಿನ್ನೆಲೆ ಗೊತ್ತಿದ್ದರೂ ಕೂಡ ಆತನನ್ನು ಪ್ರೀತಿಸಿದ್ದಳು. ಆದರೆ ಕಳೆದ ಕೆಲ ತಿಂಗಳುಗಳಿಂದ ಯುವತಿ ಪ್ರೀತಿ ನಿರಾಕರಿಸಿದ್ದಳು. ತನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗದಂತೆ ಎಚ್ಚರಿಕೆ ನೀಡಲು ತನ್ನ ಸಹಚರರನ್ನ ಕೆರದುಕೊಂಡು ಬಂದು ಭಾನುವಾರ ಕೃತ್ಯ ಎಸಗಿದ್ದ.

    ರೌಡಿ ರಾಹುಲ್ ಕೊಡಿಸಿದ್ದ ಕಾರು:
    ರೌಡಿಶೀಟರ್ ರಾಹುಲ್ ತನ್ನ ಪ್ರೀತಿಯ ಸಂಕೇತವಾಗಿ ಯುವತಿಗೆ ಕೆಲ ವರ್ಷಗಳ ಹಿಂದೆ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದ ಎಂದು ಹೇಳಲಾಗಿದೆ. ಶನಿವಾರ ತಡರಾತ್ರಿ ಕೂಡ ತಾನು ಕೊಡಿಸಿದ್ದ ಕಾರಿಗೆ ರಾಹುಲ್ ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಪ್ರಿಯಕರ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದಂತೆ ಗಾಬರಿಗೊಂಡು ಯುವತಿ ಬೆಂಗಳೂರು ತೊರೆದಿದ್ದಾಳೆ. ಹೀಗಾಗಿ ಆಕೆಯನ್ನು ಸಂಪರ್ಕಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಆಕೆ ಬಂದ ಬಳಿಕ ಸಂಪೂರ್ಣ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ: ಸಾಲಭಾದೆ ತಾಳಲಾರದೆ ವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

  • ಪ್ರೀತಿ ನಿರಾಕರಿಸಿದ್ದಕ್ಕಾಗಿ ಯುವತಿಯ ಕಾರು, ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

    ಪ್ರೀತಿ ನಿರಾಕರಿಸಿದ್ದಕ್ಕಾಗಿ ಯುವತಿಯ ಕಾರು, ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

    ಬೆಂಗಳೂರು: ಯುವತಿ ಪ್ರೀತಿ ನಿರಾಕರಿಸಿದ್ದಕ್ಕಾಗಿ ಆಕೆಯ ಕಾರು ಹಾಗೂ ಬೈಕ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ (Bengaluru) ಸುಬ್ರಮಣ್ಯಪುರದಲ್ಲಿ (Subramanyapura) ನಡೆದಿದೆ.

    ಆರೋಪಿಯನ್ನು ರಾಹುಲ್ ಎಂದು ಗುರುತಿಸಲಾಗಿದೆ. ಸ್ನೇಹಿತರ ಜೊತೆ ಬಂದು ಬೆಂಕಿ ಹಚ್ಚಿ, ಹಲ್ಲೆ ಎಸಗಿದ್ದಾರೆ.ಇದನ್ನೂ ಓದಿ: ಪಂದ್ಯಕ್ಕೂ ಮುನ್ನವೇ ಪಾಕ್‌ ಹೈಡ್ರಾಮಾ – ಏನೇ ಆದ್ರೂ ಭಾರತವನ್ನು ಸೋಲಿಸಬೇಕು ಎಂದ ಪಿಸಿಬಿ ಮುಖ್ಯಸ್ಥ

    ಯುವತಿ ತನ್ನ ಪ್ರೀತಿಯನ್ನು ಪದೇ ಪದೇ ನಿರಾಕರಿಸುತ್ತಿದ್ದರಿಂದ ರೊಚ್ಚಿಗೆದ್ದ ರಾಹುಲ್ ಹಾಗೂ ಗ್ಯಾಂಗ್ ಕೃತ್ಯ ಎಸಗಿದ್ದಾರೆ. ಮೂರು ನಾಲ್ಕು ಬೈಕ್‌ಗಳಲ್ಲಿ ಗ್ಯಾಂಗ್ ಸಮೇತ ಬಂದು, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಮುಂದಿದ್ದ ಮನೆಯ ಮುಂದಿನ ಬೈಕ್ ಹಾಗೂ ಎರಡು ಕಾರುಗಳಿಗೆ ಬೆಂಕಿ ಇಟ್ಟಿದ್ದಾರೆ.

    ಬಳಿಕ ಅಲ್ಲಿಂದ ಸುಬ್ರಮಣ್ಯಪುರ ಶ್ರೀನಿಧಿ ಅಪಾರ್ಟ್ಮೆಂಟ್ ಬಳಿ ತೆರಳಿದ್ದಾರೆ. ಈ ವೇಳೆ ಅಪಾರ್ಟ್ಮೆಂಟ್ ಬಳಿಯಿದ್ದ ಸೆಕ್ಯುರಿಟಿ ಗಾರ್ಡ್ ತಡೆಯಲು ಬಂದಾಗ ಆತನ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿದ್ದ ಕಾರುಗಳಿಗೆ ಕೂಡ ಬೆಂಕಿ ಇಟ್ಟಿದ್ದಾರೆ. ಸದ್ಯ ಘಟನೆ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಶಿವಸೇನೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರ ಪುಂಡಾಟ

     

  • New Delhi| ಕಾರಿಗೆ ಬೆಂಕಿ – ಮದುವೆಗೆ ಆಮಂತ್ರಣ ಹಂಚಲು ಹೋಗಿದ್ದ ವರ ಸಾವು

    New Delhi| ಕಾರಿಗೆ ಬೆಂಕಿ – ಮದುವೆಗೆ ಆಮಂತ್ರಣ ಹಂಚಲು ಹೋಗಿದ್ದ ವರ ಸಾವು

    ನವದೆಹಲಿ: ಮದುವೆಗೆ ಆಮಂತ್ರಣ (Wedding Invitation) ಹಂಚಲು ತೆರಳಿದ್ದ ವರನ (Groom) ಕಾರಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಕಾರು ಸುಟ್ಟು ಕರಕಲಾಗಿ, ವರ ಸಾವನ್ನಪ್ಪಿದ ಘಟನೆ ಘಾಜಿಪುರದ (Ghazipur) ಬಾಬಾ ಬ್ಯಾಂಕ್ವೆಟ್ ಹಾಲ್ ಬಳಿ ನಡೆದಿದೆ.

    ಗ್ರೇಟರ್ ನೋಯ್ಡಾದ ನಿವಾಸಿ ಅನಿಲ್ ಮೃತ ವರ. ಅನಿಲ್ ಶನಿವಾರ ಮಧ್ಯಾಹ್ನ ಆಮಂತ್ರಣ ಪತ್ರಿಕೆ ಹಂಚಲು ಹೊರಗೆ ಹೋಗಿದ್ದ ಸಂದರ್ಭ ಘಟನೆ ಸಂಭವಿಸಿದೆ. ಸಂಜೆಯಾದರೂ ವಾಪಸ್ ಬಾರದ್ದನ್ನು ಕಂಡು ಕರೆ ಮಾಡಿದೆವು. ಆದರೆ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ರಾತ್ರಿ 11:30ರ ಸುಮಾರಿಗೆ ಅನಿಲ್‌ಗೆ ಅಪಘಾತವಾಗಿದ್ದು, ಆಸ್ಪತ್ರೆಯಲ್ಲಿದ್ದಾರೆ ಎಂದು ಪೊಲೀಸರು ಕರೆ ಮಾಡಿದ್ದರು ಎಂದು ಅನಿಲ್ ಅಣ್ಣ ಸುಮಿತ್ ತಿಳಿಸಿದ್ದಾರೆ. ಇದನ್ನೂ ಓದಿ: 2 ಗ್ಯಾಸ್‌ ಸಿಲಿಂಡರ್‌ ಸ್ಫೋಟ – ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ, ಧಗಧಗಿಸಿದ ಜ್ವಾಲೆ

    ಈ ಕುರಿತು ಅನಿಲ್ ಸೋದರ ಮಾವ ಯೋಗೇಶ್ ಮಾತನಾಡಿ, ನಾನು ಮತ್ತು ಅನಿಲ್ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಅನಿಲ್ ಫೆಬ್ರವರಿ 14 ರಂದು ನನ್ನ ಸಹೋದರಿಯನ್ನು ಮದುವೆಯಾಗಬೇಕಿತ್ತು. ಶನಿವಾರ ರಾತ್ರಿ ಅವರ ಸಾವಿನ ಬಗ್ಗೆ ನಮಗೆ ತಿಳಿಯಿತು. ಕಾರಿಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ನಮಗೆ ಇನ್ನೂ ತಿಳಿದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ಪರಿಹಾರ ವಿತರಣೆ

    ಬೆಂಕಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಅನಿಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಫೆ.10, 11, 12ರಂದು ಟಿ.ನರಸೀಪುರದಲ್ಲಿ ಕುಂಭಮೇಳ: ಹೆಚ್‌ಸಿ ಮಹದೇವಪ್ಪ