Tag: Car Driving

  • ಡ್ರೈವಿಂಗ್‌ ಕಲಿಯಲು ಹೋಗಿ, ಚಾಲಕ ಗೇರ್ ಬದಲಿಸುವ ಶೈಲಿಗೆ ಬೋಲ್ಡ್ ಆದ ಬ್ಯೂಟಿ

    ಡ್ರೈವಿಂಗ್‌ ಕಲಿಯಲು ಹೋಗಿ, ಚಾಲಕ ಗೇರ್ ಬದಲಿಸುವ ಶೈಲಿಗೆ ಬೋಲ್ಡ್ ಆದ ಬ್ಯೂಟಿ

    ಇಸ್ಲಾಮಾಬಾದ್: ಲವ್ ಸ್ಟೋರಿ (Love Story) ಎನ್ನುತ್ತಿದ್ದಂತೆ ಅನೇಕ ಸಿನಿಮಾ (Cinema) ಕಥೆಗಳು ಕಣ್ಣಮುಂದೆಯೇ ಹಾದುಹೋಗುತ್ತವೆ. ಅಲ್ಲಿ ಪ್ರತಿ ಹುಟ್ಟುವ ಕ್ಷಣಗಳು ಕಣ್ಣಿನಲ್ಲಿ ಸೆರೆಯಾಗುತ್ತವೆ. ಹಾಗೆಯೇ ಇಲ್ಲೊಬ್ಬಳು ಯುವತಿ ಕಾರು ಚಾಲಕ ಗೇರ್ ಬದಲಿಸುವ ಶೈಲಿಗೆ ಬೋಲ್ಡ್ ಆಗಿ, ಅವನನ್ನೇ ಮದುವೆಯಾಗಿದ್ದಾಳೆ.

    ಪಾಕಿಸ್ತಾನದ (Pakistan) 17ರ ಯುವತಿ, ತನಗೆ ವಾಹನ ಚಾಲನೆ (Car Driving) ಹೇಳಿಕೊಡುವ 21 ವರ್ಷದ ಚಾಲಕನನ್ನೇ ಮದುವೆಯಾಗಿದ್ದಾಳೆ. ಅದಕ್ಕೆ ಆತನ ಆಸ್ತಿ, ಜನಪ್ರಿಯತೆ, ದೇಹದಾರ್ಡ್ಯ, ಅಥವಾ ಆಕರ್ಷಕ ವ್ಯಕ್ತಿತ್ವ ಮುಂತಾದವು ಕಾರಣವಲ್ಲ. ಆತ ಕಾರಿನ ಗೇರ್ ಬದಲಿಸುವ ಶೈಲಿಗೆ ಪ್ರೀತಿಯಲ್ಲಿ (Love) ಬಿದ್ದು, ಮದುವೆಯಾಗಿದ್ದಾಳೆ. ಸಂದರ್ಶನವೊಂದರಲ್ಲಿ ಅವರು ತಮ್ಮ ಪ್ರೇಮ ಕಥೆಯನ್ನ (Love Story) ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಾಡಿಗೆ ತಾಯ್ತನ ಮೂಲಕ ಮಗ-ಸೊಸೆಯ ಮಗುವಿಗೆ ಜನ್ಮ ಕೊಟ್ಟ ಅಜ್ಜಿ

    17ರ ಹರೆಯದ ಖತೀಜಾ ಅವರ ತಂದೆ, ಮಗಳಿಗೆ ಕಾರು ಚಲಾಯಿಸುವುದನ್ನು ಕಲಿಸಿಕೊಡುವಂತೆ ಒಬ್ಬ ವ್ಯಕ್ತಿಯನ್ನು ನೇಮಿಸಿದ್ದರು. ಆದರೆ ಆಕೆ ಕಾರ್ ಡ್ರೈವಿಂಗ್‌ ಎಷ್ಟರಮಟ್ಟಿಗೆ ಕಲಿತಳೋ ಗೊತ್ತಿಲ್ಲ, ಪ್ರೀತಿಯ ಕಲೆಯನ್ನಂತೂ ಕರಗತ ಮಾಡಿಕೊಂಡಳು. ಆತ ಕಾರು ಚಲಾಯಿಸುವ ಶೈಲಿಗೆ ಕ್ಲೀನ್ ಬೋಲ್ಡ್ ಆಗಿ, ಕೊನೆಗೆ ಅವನನ್ನೇ ಮದುವೆಯಾಗಿದ್ದಾಳೆ. ಆದರೂ ಆಕೆ ಕಾರ್ ಡ್ರೈವಿಂಗ್‌ ಕಲಿಯಲೇ ಇಲ್ಲ. ಇದನ್ನೂ ಓದಿ: ವಿಮಾನದ ಸೀಟ್‌ನಲ್ಲಿ ಕುಳಿತು ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಗೆ 1 ವರ್ಷ ಜೈಲು

    ಪ್ರತಿನಿತ್ಯ ಆಕೆ ಚಾಲನಾ ತರಬೇತಿಗೆ ಮಾತ್ರ ತಪ್ಪದೇ ಹಾಜರಾಗುತ್ತಿದ್ದಳು. ಅಲ್ಲಿ ಗೇರ್ ಬದಲಿಸುವುದು, ಕ್ಲಚ್ ಒತ್ತುವುದು, ಸ್ಟೀರಿಂಗ್ ಹಿಡಿಯುವುದು ಆಕೆಯ ತಲೆಗೆ ಹತ್ತಲಿಲ್ಲ. ನಂತರ ಇಬ್ಬರ ನಡುವೆ ಪ್ರೇಮ ಮೂಡಿತ್ತು. ಪ್ರತಿದಿನದ ಭೇಟಿಮಾಡಿ ನಡೆಸುತ್ತಿದ್ದ ಮಾತುಕತೆಯ ಸ್ವಾರಸ್ಯ ಇಬ್ಬರ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು.

    ಕಾರು ಓಡಿಸುವಾಗ ಆತ ಗೇರ್ ಬದಲಿಸುವುದನ್ನು ಕಂಡಾಗ, ಆತನ ಕೈ ಹಿಡಿದುಕೊಳ್ಳುವ ಆಸೆ ಆಕೆಯಲ್ಲಿ ಮೂಡುತ್ತಿತ್ತಂತೆ. ಕೊನೆಗೆ ಸತಿಪತಿಗಳಾಗಿ ಕೈ ಹಿಡಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]