Tag: car accident

  • ಬೈಕ್‌ಗೆ ಕಾರು ಡಿಕ್ಕಿ: ಫ್ಲೈಓವರ್ ಮೇಲಿನಿಂದ ಕೆಳಗೆ ಬಿದ್ದ ಕಾರು – ಮೂವರ ಸ್ಥಿತಿ ಗಂಭೀರ

    ಬೈಕ್‌ಗೆ ಕಾರು ಡಿಕ್ಕಿ: ಫ್ಲೈಓವರ್ ಮೇಲಿನಿಂದ ಕೆಳಗೆ ಬಿದ್ದ ಕಾರು – ಮೂವರ ಸ್ಥಿತಿ ಗಂಭೀರ

    ಬೆಂಗಳೂರು: ಬೈಕ್‌ಗೆ ಡಿಕ್ಕಿ ಹೊಡೆದು ಕಾರು ಫ್ಲೈಓವರ್ (Fly Over) ಮೇಲಿನಿಂದ ಕೆಳಗೆ ಬಿದ್ದಿರುವ ಭೀಕರ ಅಪಘಾತ ನಗರದ ಯಶವಂತಪುರ ಸರ್ಕಲ್‌ನಲ್ಲಿ (Yashwantpur Circle) ನಡೆದಿದೆ.

    ಬೈಕ್‌ನಲ್ಲಿದ್ದ ಇಬ್ಬರು, ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.ಇದನ್ನೂ ಓದಿ: ರಾತ್ರಿ ತರಬೇತಿ ಕಾರ್ಯಾಚರಣೆ ವೇಳೆ ವಾಯುಪಡೆಯ MiG-29 ಫೈಟರ್ ಜೆಟ್ ಪತನ – ಪೈಲಟ್‌ ಸೇಫ್‌

    ಬೆಳಗ್ಗೆ 3:45ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಮಾರ್ಗವಾಗಿ ಬರುತ್ತಿದ್ದ ಕಾರು ವೇಗದ ಪರಿಣಾಮದಿಂದಾಗಿ ಫ್ಲೈಓವರ್ ಮೇಲಿನ ಡಿವೈಡರ್ ಹಾರಿ ಎದುರಿಗೆ ಬರುತ್ತಿದ್ದ ಬೈಕ್‌ಗೆ ಗುದ್ದಿದೆ. ಇದರಿಂದ ಫ್ಲೈಓವರ್ ಮೇಲಿನಿಂದ ಕಾರು ಕೆಳಗೆ ಬಿದ್ದಿದೆ.

    ಚಾಲಕ ಕುಡಿದು ಕಾರು ಓಡಿಸಿರುವ ಶಂಕೆಯಿದ್ದು, ಕಾರು ಚಾಲಕನ ಅಜಾಗರೂಕತೆಯಿಂದಾಗಿ ಈ ಅವಘಡ ಸಂಭವಿಸಿದೆ. ಕಾರಿನಲ್ಲಿ ಖಾಲಿ ಮದ್ಯ ಬಾಟಲಿಗಳು ಪತ್ತೆಯಾಗಿದೆ. ತಮಿಳುನಾಡು ರಿಜಿಸ್ಟ್ರೇಷನ್ ಹೊಂದಿರುವ ವೊಕ್ಸ್ ವಾಗೇನ್ ವೆಂಟೋ (Volkswagen Vento) TN37DH9484 ಕಾರಿನಲ್ಲಿ 3 ಯುವಕರು ತೆರಳುತ್ತಿದ್ದರು.ಇದನ್ನೂ ಓದಿ: ಅಮೆರಿಕದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆಯಲ್ಲಿ ಶ್ರಾವಣ ಅಮಾವಾಸ್ಯೆ ಆಚರಣೆ

    ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಗಾಯಾಳುಗಳನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ..

  • ಕಮರಿಗೆ ಉರುಳಿದ ಕಾರು – ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ದುರ್ಮರಣ!

    ಕಮರಿಗೆ ಉರುಳಿದ ಕಾರು – ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ದುರ್ಮರಣ!

    ಶ್ರೀನಗರ: ಜಮ್ಮು-ಕಾಶ್ಮೀರದ (Jammu And Kashmir) ಅನಂತ್‌ನಾಗ್‌ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ (Car Accident) ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿರುವ ಘಟನೆ ನಡೆಸಿದೆ.

    ಟಾಟಾ ಸುಮೋ ಕಾರೊಂದು ಕಮರಿಗೆ ಉರುಳಿದ್ದು, ಐವರು ಮಕ್ಕಳು ಸೇರಿ 8 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ. ಜಮ್ಮು-ಕಾಶ್ಮೀರದ ದಕ್ಸುಮ್‌ ಪ್ರದೇಶದಲ್ಲಿ ಕಾರು ನಿಯಂತ್ರಣ ತಪ್ಪಿ, ಕಮರಿಗೆ ಉರುಳಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ರಾಮನಗರ ಇತಿಹಾಸ ಅಳಿಸುವ ಕೆಲಸ: ನಿಖಿಲ್

    ದಕ್ಸುಮ್‌ ಪ್ರದೇಶದಿಂದ ಸುಮಾರು 20 ಕಿಮೀ ದೂರದಲ್ಲಿರುವ ಆರ್ಶುನ್‌ ಹಟ್‌ ಎಂಬ ಪ್ರದೇಶದಲ್ಲಿ ಕಾರು ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿದೆ. ಕಾರು ಕಣಿವೆಗೆ ಉರುಳುತ್ತಲೇ ಅವರ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಇನ್ನೂ ಕಾರನ್ನು ಮೇಲಕ್ಕೆ ಎತ್ತಿಲ್ಲ. ಶವಗಳನ್ನು ಕೂಡ ಮೇಲೆ ಎತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಮೃತರ ಕುರಿತು ಕೂಡ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Paris Olympics 2024: ಭಾರತದ ಮನು ಭಾಕರ್‌ ಫೈನಲ್‌ಗೆ ಎಂಟ್ರಿ – 20 ವರ್ಷಗಳ ಬಳಿಕ ವಿಶೇಷ ಸಾಧನೆ!

    ಜಮ್ಮು-ಕಾಶ್ಮೀರವು ಕಣಿವೆ ಪ್ರದೇಶವಾದ ಕಾರಣ ವಾಹನಗಳು ಹೆಚ್ಚಾಗಿ ಕಣಿವೆಗೆ ಉರುಳುತ್ತವೆ. ರಾಜೌರಿ ಜಿಲ್ಲೆಯಲ್ಲಿ ಕಳೆದ ಜೂನ್‌ನಲ್ಲಿ ಸೇನೆಯ ವಾಹನವೊಂದು ಕಂದಕಕ್ಕೆ ಉರಳಿ ಒಬ್ಬ ಯೋಧ ಮೃತಪಟ್ಟಿದ್ದರು ಹಾಗೆಯೇ, ನಾಲ್ವರು ಸೈನಿಕರು ಗಾಯಗೊಂಡಿದ್ದರು. ಗಾಯಗೊಂಡಿರುವ ಯೋಧರನ್ನು ಸೇನೆಯ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ನೀಡಲಾಗಿತ್ತು. ಇದನ್ನೂ ಓದಿ: ನಾಯಿ ಸ್ವಲ್ಪ ಟಚ್‌ ಆದ್ರೂ ಮಸೀದಿಯೊಳಕ್ಕೆ ಹೋಗಲ್ಲ, ಅಂತಹದ್ದರಲ್ಲಿ ಮಾಂಸ ತರೋಕಾಗುತ್ತಾ? – ಅಬ್ದುಲ್‌ ರಜಾಕ್‌

  • ಎಕ್ಸ್‌ಪ್ರೆಸ್‌ವೇನಲ್ಲಿ ರಾಂಗ್‌ ರೂಟ್‌ನಲ್ಲಿ ಬಂದ ಕಾರಿನಿಂದ ಭೀಕರ ಅಪಘಾತ – 6 ಮಂದಿ ಸ್ಥಳದಲ್ಲೇ ಸಾವು

    ಎಕ್ಸ್‌ಪ್ರೆಸ್‌ವೇನಲ್ಲಿ ರಾಂಗ್‌ ರೂಟ್‌ನಲ್ಲಿ ಬಂದ ಕಾರಿನಿಂದ ಭೀಕರ ಅಪಘಾತ – 6 ಮಂದಿ ಸ್ಥಳದಲ್ಲೇ ಸಾವು

    ನವದೆಹಲಿ: ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್‌ವೇನಲ್ಲಿ (Mumbai Nagpur Expressway) ರಾಂಗ್‌ ರೂಟ್‌ನಲ್ಲಿ ಕಾರೊಂದು ಬಂದಿದ್ದರಿಂದ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ.

    ಮುಂಬೈನಿಂದ ಸುಮಾರು 400 ಕಿಮೀ ದೂರದಲ್ಲಿರುವ ಜಲ್ನಾ ಜಿಲ್ಲೆಯ ಸಮೃದ್ಧಿ ಹೆದ್ದಾರಿಯ ಕಡ್ವಾಂಚಿ ಗ್ರಾಮದ ಬಳಿ ನಿನ್ನೆ ರಾತ್ರಿ ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್‌ವೇ ಅಥವಾ ಸಮೃದ್ಧಿ ಮಹಾಮಾರ್ಗ್‌ನಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಆರು ಜನರು ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: UGC-NET 2024: ಹೊಸ ದಿನಾಂಕ ಪ್ರಕಟಿಸಿದ ಎನ್‌ಟಿಎ

    ರಾತ್ರಿ 11 ಗಂಟೆ ಸುಮಾರಿಗೆ ಸ್ವಿಫ್ಟ್ ಡಿಜೈರ್ ವಾಹನವು ಇಂಧನ ತುಂಬಿದ ನಂತರ ರಾಂಗ್ ಸೈಡ್‌ನಿಂದ ಹೆದ್ದಾರಿಗೆ ಪ್ರವೇಶಿಸಿ, ನಾಗ್ಪುರದಿಂದ ಮುಂಬೈಗೆ ಹೋಗುತ್ತಿದ್ದ ಎರ್ಟಿಗಾ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

    ಅಪಘಾತ ಎಷ್ಟು ತೀವ್ರವಾಗಿತ್ತೆಂದರೆ, ಎರ್ಟಿಗಾ ಕಾರು ಗಾಳಿಗೆ ಹಾರಿ ಹೆದ್ದಾರಿಯ ಬ್ಯಾರಿಕೇಡ್‌ ಮೇಲೆ ಬಿದ್ದಿತು. ಕಾರಿನಲ್ಲಿದ್ದವರು ರಸ್ತೆ ಮೇಲೆ ಬಿದ್ದರು. ಮತ್ತೊಂದು ಕಾರು ಡಿಕ್ಕಿ ರಭಸಕ್ಕೆ ಅಪ್ಪಚ್ಚಿಯಾಗಿತ್ತು. ಅಪಘಾತದ ಭೀಕರತೆಗೆ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರಕ್ತಸಿಕ್ತ ಮೃತದೇಹಗಳು ಹೆದ್ದಾರಿಯಲ್ಲಿ ಬಿದ್ದಿರುವ ದೃಶ್ಯ ವೈರಲ್‌ ಆಗಿದೆ. ಇದನ್ನೂ ಓದಿ: ಗದಗ: ಆರೋಪಿ ಕರೆದೊಯ್ಯುವ ವೇಳೆ ಪೊಲೀಸರ ಮೇಲೆಯೇ ಅಟ್ಯಾಕ್

    ಅಪಘಾತದ ಮಾಹಿತಿ ತಿಳಿದ ಕೂಡಲೇ ಸಮೃದ್ಧಿ ಹೆದ್ದಾರಿ ಪೊಲೀಸರು ಮತ್ತು ಜಲ್ನಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕಾರುಗಳನ್ನು ತೆರವುಗೊಳಿಸಲು ಕ್ರೇನ್ ಕಾರ್ಯಾಚರಣೆ ನಡೆಸಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಸಮೃದ್ಧಿ ಮಹಾಮಾರ್ಗ್ ಮಹಾರಾಷ್ಟ್ರದಲ್ಲಿ ಆರು-ಲೇನ್ ಮತ್ತು 701 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿದೆ. ಇದು ಮುಂಬೈ ಮತ್ತು ರಾಜ್ಯದ ಮೂರನೇ ಅತಿ ದೊಡ್ಡ ನಗರ ನಾಗ್ಪುರವನ್ನು ಸಂಪರ್ಕಿಸುವ ದೇಶದ ಅತಿ ಉದ್ದದ ಗ್ರೀನ್‌ಫೀಲ್ಡ್ ರಸ್ತೆ ಯೋಜನೆಗಳಲ್ಲಿ ಒಂದಾಗಿದೆ.

  • ಲಾರಿ, ಕಾರು ನಡುವೆ ಭೀಕರ ಅಪಘಾತ – ಮಗು ಸೇರಿದಂತೆ ನಾಲ್ವರ ದುರ್ಮರಣ

    ಲಾರಿ, ಕಾರು ನಡುವೆ ಭೀಕರ ಅಪಘಾತ – ಮಗು ಸೇರಿದಂತೆ ನಾಲ್ವರ ದುರ್ಮರಣ

    ಚಿತ್ರದುರ್ಗ: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Car Accident) ಮಗು ಸೇರಿದಂತೆ ನಾಲ್ವರು ಸಾವಿಗೀಡಾದ ಘಟನೆ ಚಿಕ್ಕಬೆನ್ನೂರು ಬಳಿ ನಡೆದಿದೆ.

    ಮೃತರನ್ನು ಬೆಂಗಳೂರಿನ (Bengaluru) ಥಣಿಸಂದ್ರ ಮೂಲದ ಪ್ರಜ್ವಲ್ ರೆಡ್ಡಿ (30), ಹರ್ಷಿತಾ (28), ನೋಹನ್ (2) ಹಾಗೂ ವಿಜಯರೆಡ್ಡಿ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಗೋವಾಕ್ಕೆ ಫಾರ್ಚುನರ್ ಕಾರಿನಲ್ಲಿ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಪರಿಣಾಮ ಮಗು ಹಾಗೂ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೋರ್ವ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್‌ಗೆ 8 ನಕ್ಸಲರು ಬಲಿ – ಓರ್ವ ಯೋಧ ಹುತಾತ್ಮ

    ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ದಾವಣಗೆರೆಯ (Davanagere) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ. ಸ್ಥಳಕ್ಕೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ – ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ದುರ್ಮರಣ

  • ಎಕ್ಸ್‌ಪ್ರೆಸ್‌ ವೇಯಲ್ಲಿ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು- ನಾಲ್ವರು ಗಂಭೀರ

    ಎಕ್ಸ್‌ಪ್ರೆಸ್‌ ವೇಯಲ್ಲಿ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು- ನಾಲ್ವರು ಗಂಭೀರ

    ರಾಮನಗರ: ನಿಯಂತ್ರಣ ತಪ್ಪಿ ಕಾರೊಂದು (Car) ಹೆದ್ದಾರಿ ಪಕ್ಕದ ಕೆರೆಗೆ ಬಿದ್ದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡ ಘಟನೆ ಬೆಂಗಳೂರು-ಮೈಸೂರು ದಶಪಥ (Express Way) ಹೆದ್ದಾರಿಯಲ್ಲಿ ನಡೆದಿದೆ.

    ಬೆಂಗಳೂರಿನಿಂದ (Bengaluru) ಸ್ಕೋಡಾ ಕಾರು ಮೈಸೂರು ಕಡೆಗೆ ಹೋಗುತ್ತಿತ್ತು. ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗೇಟ್ ಬಳಿ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಬರುವ ವೇಳೆ ಘಟನೆ ನಡೆದಿದೆ. ಫಿಲ್ಮೀ ಸ್ಟೈಲ್‌ನಲ್ಲಿ ಕಾರು ಕೆರೆಗೆ ಬಿದ್ದಿದ್ದು, ಓವರ್ ಸ್ಪೀಡ್‌ನಿಂದಾಗಿ (Over Speed) ಸರ್ವಿಸ್ ರಸ್ತೆಗೆ ಬರುವ ವೇಳೆ ಕಾರು ಕೆರೆಗೆ ಹಾರಿದೆ. ಘಟನೆಯಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಕುಮಾರ್ ಬಂಗಾರಪ್ಪ ನಿವಾಸಕ್ಕೆ ಶಿವಣ್ಣ ಅಭಿಮಾನಿಗಳಿಂದ ಮುತ್ತಿಗೆ

    ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಜೂನ್ 12 ರ ವರೆಗೆ ರಾಜ್ಯದಲ್ಲಿ ಭಾರೀ ಮಳೆಯ ಎಚ್ಚರಿಕೆ

  • ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು – ಓರ್ವ ದುರ್ಮರಣ, ಚಾಲಕ ಪಾರು

    ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು – ಓರ್ವ ದುರ್ಮರಣ, ಚಾಲಕ ಪಾರು

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಓರ್ವ ಸಾವಿಗೀಡಾಗಿದ ಘಟನೆ ಅಂಬಳೆ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ಮೃತನನ್ನು ಗ್ರಾಮದ ದಿನೇಶ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಚಿಕ್ಕಮಗಳೂರಿಗೆ ಹೋಗಿ ಗ್ರಾಮಕ್ಕೆ ವಾಪಸ್ ಆಗುವ ವೇಳೆ ಈ ಅಪಘಾತ ಸಂಭವಿಸಿದೆ. ಈ ವೇಳೆ ಕಾರಿನ ಒಳಗೆ ನೀರು ತುಂಬಿದ್ದು ಒಳಗಿದ್ದ ಚಾಲಕ ಕೋಡಲೇ ಹೊರಗೆ ಬಂದಿದ್ದು, ಮತ್ತೋರ್ವನಿಗೆ ಹೊರಗೆ ಬರಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ.ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಮಳೆ – ಎಲ್ಲೆಲ್ಲಿ ಏನೇನು ಅವಾಂತರ?

    ಕಳೆದ ಕೆಲವು ದಿನಗಳಿಂದ ಗ್ರಾಮದ ಸುತ್ತಮುತ್ತ ಮಳೆಯಾಗುತ್ತಿದ್ದು, ಕೆರೆಯಲ್ಲಿ ನೀರು ಏರಿಕೆಯಾಗಿತ್ತು. ಕೆರೆಯಿಂದ ಮೃತ ದೇಹ ಹಾಗೂ ಕಾರನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ 7 ನಕ್ಸಲರು ಬಲಿ

  • ಬೈರತಿ ಬಸವರಾಜ್ ಕಾರು ಪಲ್ಟಿ – ಚಾಲಕ, ಗನ್ ಮ್ಯಾನ್‍ಗೆ ಗಾಯ

    ಬೈರತಿ ಬಸವರಾಜ್ ಕಾರು ಪಲ್ಟಿ – ಚಾಲಕ, ಗನ್ ಮ್ಯಾನ್‍ಗೆ ಗಾಯ

    ಯಾದಗಿರಿ: ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ರಾಜೂಗೌಡ ಪರವಾಗಿ ಪ್ರಚಾರಕ್ಕೆ ತೆರಳಿದ್ದ ಶಾಸಕ ಬೈರತಿ ಬಸವರಾಜ್ (Byrati Basavaraj) ಕಾರು  (Car Accident) ಅಪಘಾತಕ್ಕೀಡಾಗಿದ್ದು, ಕಾರು ಚಾಲಕ ಹಾಗೂ ಗನ್ ಮ್ಯಾನ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಾಮನಟಗಿ ಗ್ರಾಮದ ಎರೆ ಕೆನಾಲ್ ಬಳಿ ಈ ಘಟನೆ ನಡೆದಿದೆ. ಈ ವೇಳೆ ಕಾರಿನಲ್ಲಿ ಬೈರತಿ ಬಸವರಾಜ್ ಇರಲಿಲ್ಲ. ಅವರು ಬೇರೆಯವರ ಕಾರಿನಲ್ಲಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಆ ಕಾರನ್ನು ಹಿಂದೆ ಅಪಘಾತಕ್ಕೀಡಾದ ಕಾರು ಚಲಿಸುತ್ತಿತ್ತು. ಈ ವೇಳೆ ಕಾರು ರಸ್ತೆಯ ಪಕ್ಕದಲ್ಲಿದ್ದ ಕಂದಕಕ್ಕೆ ಉರುಳಿ ಬಿದ್ದಿದೆ. ಇದನ್ನೂ ಓದಿ: ಮುರುಘಾ ಶ್ರೀಗೆ ಮೇ 27ರವರೆಗೆ ನ್ಯಾಯಾಂಗ ಬಂಧನ

    ಅಪಘಾತದಲ್ಲಿ ಕಾರು ಚಾಲಕ ಹಾಗೂ ಗನ್ ಮ್ಯಾನ್‍ಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಹುಣಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹುಣಸಗಿ ಠಾಣೆ ಪಿಎಸ್‍ಐ ಸಂಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ – ಆರೋಪಿ ಕಾಲಿಗೆ ಗುಂಡೇಟು

  • ಕಾರು ಅಪಫಾತ – ಶಾಸಕ ಎ.ಆರ್ ಕೃಷ್ಣಮೂರ್ತಿ ಅಪಾಯದಿಂದ ಪಾರು

    ಕಾರು ಅಪಫಾತ – ಶಾಸಕ ಎ.ಆರ್ ಕೃಷ್ಣಮೂರ್ತಿ ಅಪಾಯದಿಂದ ಪಾರು

    ಚಾಮರಾಜನಗರ: ಕೊಳ್ಳೇಗಾಲದ ಶಾಸಕ ಎ.ಆರ್ ಕೃಷ್ಣಮೂರ್ತಿಯವರ (Kollegala MLA AR Krishnamurthy) ಕಾರು ಅಪಘಾತವಾಗಿದ್ದು, ಅದೃಷ್ಟವಶಾತ್ ಶಾಸಕರು, ಅವರ ಸಹಾಯಕ ಹಾಗೂ ಕಾರಿನ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

    ಕೊಳ್ಳೇಗಾಲ ಕ್ಷೇತ್ರದಲ್ಲಿ ಚುನಾವಣಾ (Lok Sabha Election 2024) ಪ್ರಚಾರ ಮುಗಿಸಿ ಮಧ್ಯರಾತ್ರಿ ಮೈಸೂರಿಗೆ (Mysuru) ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಆಕಸ್ಮಿಕವಾಗಿ ಶಾಸಕರ ಕಾರಿನ ಟೈರ್ ಬ್ಲಾಸ್ಟ್ ಆಗಿದೆ. ಈ ವೇಳೆ ಕಾರು ರಸ್ತೆಯ ಬದಿಗೆ ನುಗ್ಗಿ, ಪಕ್ಕದಲ್ಲಿದ್ದ ಕಲ್ಲಿಗೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಇದನ್ನೂ ಓದಿ: ಹಾಡು ನಿಲ್ಲಿಸಿದ ರಂಗನಾಯಕ – ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ

    ರಾತ್ರಿ 11:50ರ ಸಮಯವಾದ್ದರಿಂದ ಆ ಸಮಯದಲ್ಲಿ ಬೇರೆ ವಾಹನಗಳ ಓಡಾಟ ಕಡಿಮೆಯಾಗಿದ್ದು, ಜೊತೆಗೆ ಕಾರು ರಸ್ತೆಬದಿಯ ಹಳ್ಳಕ್ಕೆ ಬಂದು ನಿಂತಿದ್ದರಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬರದಿಂದ ತರಕಾರಿ ದರ ಏರಿಕೆ – ಕ್ಯಾರೆಟ್ ಸೆಂಚುರಿ, ಬೀನ್ಸ್ ಡಬಲ್ ಸೆಂಚುರಿ

  • ವಿಶ್ರಾಂತಿ ಪಡೆಯುತ್ತಿದ್ದ ಕಾರ್ಮಿಕರ ಮೇಲೆ ಹರಿದ ಕಾರು – ಇಬ್ಬರ ಸ್ಥಿತಿ ಗಂಭೀರ

    ವಿಶ್ರಾಂತಿ ಪಡೆಯುತ್ತಿದ್ದ ಕಾರ್ಮಿಕರ ಮೇಲೆ ಹರಿದ ಕಾರು – ಇಬ್ಬರ ಸ್ಥಿತಿ ಗಂಭೀರ

    ಕಾರವಾರ: ಅತಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ (Car Accident) ರಸ್ತೆ ಬದಿ ವಿಶ್ರಾಂತಿ ಪಡೆಯುತಿದ್ದ ಮಗು ಸೇರಿ ಐವರು ಕಾರ್ಮಿಕರ ಮೇಲೆ ಹರಿದ ಘಟನೆ ಶಿರಸಿಯ (Sirsi) ಹಿಪ್ನಳ್ಳಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಮಗು ಮತ್ತು ಕಾರ್ಮಿಕನೊಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

    ಶಿರಸಿಯಿಂದ ಕುಮಟಾ ಕಡೆ ಹೋಗುತ್ತಿದ್ದ ಡಸ್ಟರ್ ಕಾರು, ರಸ್ತೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹರಿದಿದೆ. ಚಾಲಕನ ನಿರ್ಲಕ್ಷ್ಯ ಹಾಗೂ ಅತೀ ವೇಗದ ಪರಿಣಾಮ ಈ ಅಪಘಾತ ನಡೆದಿದೆ ಎಂದು ಆರೋಪಿಸಲಾಗಿದೆ. ಗಾಯಾಳುಗಳು ಹೈದರಾಬಾದ್ ಮೆಹಬೂಬ್ ನಗರದ ಕಾರ್ಮಿಕರು ಎಂದು ತಿಳಿದು ಬಂದಿದೆ. ಗಾಯಗೊಂಡಿರುವ ಮಗು ಸೇರಿ ಐದು ಜನರನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಅತ್ತೆ, ಮಾವನ ಮೇಲಿನ‌ ಸಿಟ್ಟಿಗೆ ಅಡಿಕೆ ಮರಗಳನ್ನು ಕಡಿದು ಹಾಕಿದ ಸೊಸೆ!

    ಗಾಯಾಳುಗಳನ್ನು ಹೈದರಾಬಾದ್ ಮೂಲದ ಮೆಹಬೂಬ್ ನಗರದ ನರಸಿಂಹ, ಲಾವಣ್ಯ , ಪಾರ್ವತಮ್ಮ, ಕಿಶನ್, ನಾಗಲಕ್ಷ್ಮಿ ಎಂದು ಗುರುತಿಸಲಾಗಿದೆ.

    ಘಟನೆ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್‌ (Sirsi Police) ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗುರುದ್ವಾರದ ಕರಸೇವಾ ಮುಖ್ಯಸ್ಥನ ಹತ್ಯೆ ಪ್ರಕರಣ- ಪ್ರಮುಖ ಆರೋಪಿ ಎನ್‍ಕೌಂಟರ್‌ಗೆ ಬಲಿ

  • ಶ್ರೀಲಂಕಾ ಮಾಜಿ ಕ್ರಿಕೆಟಿಗನ ಕಾರಿಗೆ ಲಾರಿ ಡಿಕ್ಕಿ – ಆಸ್ಪತ್ರೆಗೆ ದಾಖಲು

    ಶ್ರೀಲಂಕಾ ಮಾಜಿ ಕ್ರಿಕೆಟಿಗನ ಕಾರಿಗೆ ಲಾರಿ ಡಿಕ್ಕಿ – ಆಸ್ಪತ್ರೆಗೆ ದಾಖಲು

    ಕೊಲಂಬೋ: ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ (Former Sri Lanka Skipper) ಲಾಹಿರು ತಿರಿಮನ್ನೆ (Lahiru Thirimanne) ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಲಾರಿ ಅನುರಾಧಪುರ ಎಂಬಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಅವರನ್ನು ಅನುರಾಧಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ತಿರಿಮನ್ನೆ ಅವರೊಂದಿಗೆ ಮತ್ತೋರ್ವ ಪ್ರಯಾಣಿಕನಿದ್ದು, ಅವರಿಗೂ ಸಹ ಗಾಯಗಳಾಗಿದ್ದು, ಅವರನ್ನೂ ಸಹ ಚಿಕಿತ್ಸೆಗೆ ದಾಖಲಿಸಲಾಗಿದೆ.

    ತಿರಿಮನ್ನೆ ಪ್ರಸ್ತುತ ಲೆಜೆಂಡ್ಸ್ ಕ್ರಿಕೆಟ್‍ನಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ಸ್ ಪರ ಆಡುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಫ್ರಾಂಚೈಸಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

    ತಿರಿಮನ್ನೆ ಮತ್ತು ಅವರ ಕುಟುಂಬ ಧಾರ್ಮಿಕ ಕ್ಷೇತ್ರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಅಪಘಾತದ  (Car Accident) ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ.

    2010 ರಲ್ಲಿ ಶ್ರೀಲಂಕಾ ಪರ ಪಾದಾರ್ಪಣೆ ಮಾಡಿದ್ದ ತಿರಿಮನ್ನೆ ಒಟ್ಟು 197 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 2022 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ 34 ವರ್ಷ ಎಡಗೈ ದಾಂಡಿಗ ತಿರಿಮನ್ನೆ ವಿವಿಧ ಲೀಗ್​ಗಳಲ್ಲಿ ಕಣಕ್ಕಿಳಿಯುತ್ತಿದ್ದರು. ಇತ್ತೀಚೆಗೆ ನಡೆದ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ ಟೂರ್ನಿಯಲ್ಲೂ ಅವರು ಕಾಣಿಸಿಕೊಂಡಿದ್ದರು.