Tag: car accident

  • ಕಾರು, ಕಬ್ಬು ಕಟಾವು ಮಿಷಿನ್ ನಡುವೆ ಭೀಕರ ಅಪಘಾತ; ಐವರು ದುರ್ಮರಣ

    ಕಾರು, ಕಬ್ಬು ಕಟಾವು ಮಿಷಿನ್ ನಡುವೆ ಭೀಕರ ಅಪಘಾತ; ಐವರು ದುರ್ಮರಣ

    ವಿಜಯಪುರ: ಕಾರು ಮತ್ತು ಕಬ್ಬು ಕಟಾವು ಮಿಷಿನ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೇಭಾವಿ (Bilebhavi) ಕ್ರಾಸ್ ಬಳಿ ನಡೆದಿದೆ.

    ಮೃತರನ್ನು ವಿಜಯಪುರ ತಾಲೂಕಿನ ಅಲಿಯಾಬಾದ್ ನಿವಾಸಿಗಳೆಂದು ಗುರುತಿಸಲಾಗಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಶಾಸಕರೊಂದಿಗೆ ಅನುಚಿತ ವರ್ತನೆ – ಆರ್‌ಟಿಓ ಇನ್ಸ್‌ಪೆಕ್ಟರ್ ಅಮಾನತು

    ಹುಣಸಗಿಯಿಂದ ತಾಳಿಕೋಟೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ಮತ್ತು ಕಬ್ಬು ಕಟಾವು ಮಷಿನ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಘಟನಾ ಸ್ಥಳಕ್ಕೆ ತಾಳಿಕೋಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಡಿವೋರ್ಸ್ ವದಂತಿಗೆ ಫುಲ್ ಸ್ಟಾಪ್- ಜೊತೆಯಾಗಿ ಕಾಣಿಸಿಕೊಂಡ ಅಭಿಷೇಕ್, ಐಶ್ವರ್ಯಾ ರೈ

     

  • ಮರಕ್ಕೆ ಡಿಕ್ಕಿಯಾಗಿ ನಜ್ಜುಗುಜ್ಜಾದ ಕಾರು – ತಂದೆ, ಮಗ ದಾರುಣ ಸಾವು

    ಮರಕ್ಕೆ ಡಿಕ್ಕಿಯಾಗಿ ನಜ್ಜುಗುಜ್ಜಾದ ಕಾರು – ತಂದೆ, ಮಗ ದಾರುಣ ಸಾವು

    ಹಾಸನ: ಕಾರಿನ ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿಯಾದ (Car Accident) ಪರಿಣಾಮ ತಂದೆ ಹಾಗೂ ಮಗ ಸಾವಿಗೀಡಾದ ಘಟನೆ ಚನ್ನರಾಯಪಟ್ಟಣದ (Channarayapatna) ಅಮಾನಿಕೆರೆ ಬಳಿ ನಡೆದಿದೆ.

    ಮೃತರನ್ನು ರಾಕೇಶ್ (28), ಮೋಕ್ಷಿತ್‍ಗೌಡ (8) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ರಾಕೇಶ್‍ನ ಪತ್ನಿ ಆಶಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಮರಕ್ಕೆ ಡಿಕ್ಕಿಯಾಗುವ ಮುನ್ನ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಬಳಿಕ ಮರಕ್ಕೆ ಡಿಕ್ಕಿಯಾಗಿ ನಜ್ಜುಗುಜ್ಜಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

    ಕಾರಿನಲ್ಲಿ ಚನ್ನರಾಯಪಟ್ಟಣದಿಂದ ಶ್ರವಣೇರಿ ಗ್ರಾಮಕ್ಕೆ ದಂಪತಿ ತೆರಳುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ರಸ್ತೆ ದಾಟುವಾಗ ಸಿನಿಮೀಯ ರೀತಿಯಲ್ಲಿ ಭೀಕರ ಅಪಘಾತ – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ರಸ್ತೆ ದಾಟುವಾಗ ಸಿನಿಮೀಯ ರೀತಿಯಲ್ಲಿ ಭೀಕರ ಅಪಘಾತ – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಬೀದರ್: ರಸ್ತೆ ದಾಟುವಾಗ ಕಾರು ಡಿಕ್ಕಿಯಾದ ರಭಸಕ್ಕೆ ಸಿನಿಮೀಯ ರೀತಿಯಲ್ಲಿ ವಿದ್ಯಾರ್ಥಿ ಮೇಲಕ್ಕೆ ಹಾರಿ ಬಿದ್ದ ಭಯಾನಕ ಘಟನೆ ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲೂಕಿನ ಜಿರ್ಗಾ ಕ್ರಾಸ್ ಬಳಿ ನಡೆದಿದೆ.

    ಅಪಘಾತಕ್ಕೊಳಗಾದ ವಿದ್ಯಾರ್ಥಿಯನ್ನು ವಿಕಾಸ್ ಸೋಪಾನ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಸಾವಿನಲ್ಲೂ ಒಂದಾದ ದಂಪತಿ – ಪತಿಯ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದು ಪತ್ನಿ ಸಾವು

    ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಶಾಲಾ ವಾಹನದ ಎದುರಿನಿಂದ ವಿದ್ಯಾರ್ಥಿ ಓಡಿಕೊಂಡು ಬಂದಿದ್ದಾನೆ. ಈ ವೇಳೆ ಅದೇ ಶಾಲಾ ವಾಹನದ ಪಕ್ಕದಿಂದ ವೇಗವಾಗಿ ಕಾರೊಂದು ಬಂದು ವಿದ್ಯಾರ್ಥಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸಿನಿಮೀಯ ರೀತಿಯಲ್ಲಿ ಮೇಲಿಂದ ಹಾರಿ ಮುಂದೆ ಹೋಗಿ ಬಿದ್ದಿದ್ದಾನೆ. ಈ ಅಪಘಾತದ ಭೀಕರ ದೃಶ್ಯಗಳು ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ತಕ್ಷಣವೇ ವಿದ್ಯಾರ್ಥಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

    ಇನ್ನೂ ಭೀಕರ ರಸ್ತೆ ಅಪಘಾತದಿಂದಾಗಿ ರೋಸಿ ಹೋದ ಗ್ರಾಮಸ್ಥರು, ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ಮಾಡುತ್ತಿದ್ದು, ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿ ಮಾಡಲಾಗಿದೆ. ಇದರಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದ್ದಾರೆ. ಇನ್ನೂ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ವಿದ್ಯಾರ್ಥಿಗೆ ಸೂಕ್ತ ಪರಿಹಾರ ನೀಡಬೇಕು ಎಂದಿದ್ದಾರೆ.

    ಪ್ರತಿಭಟನೆ ಮಾಡುತ್ತಿರುವ ಗ್ರಾಮಸ್ಥರನ್ನು ಮನವೊಲಿಸಲು ಪೊಲೀಸರು ಹರಸಾಹಸಪಡುತ್ತಿದ್ದು, ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸ್ವಪ್ರತಿಷ್ಠೆಯಿಂದ ಹೋರಾಟ ಮಾಡ್ತಿರೋದು ಅವ್ರಿಗೆ ಶೋಭೆ ತರಲ್ಲ: ಯತ್ನಾಳ್ ವಿರುದ್ಧ ಬಿಎಸ್‌ವೈ ಬೇಸರ

  • ನಿಯಂತ್ರಣ ತಪ್ಪಿ ಕಾರು ಪಲ್ಟಿ – ಚಾಲಕ ಸ್ಥಳದಲ್ಲೇ ಸಾವು

    ನಿಯಂತ್ರಣ ತಪ್ಪಿ ಕಾರು ಪಲ್ಟಿ – ಚಾಲಕ ಸ್ಥಳದಲ್ಲೇ ಸಾವು

    ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನೋರ್ವ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೊಡಸಣಿ ಕ್ರಾಸ್‌ ಎನ್‌ಎಚ್-66ರಲ್ಲಿ ನಡೆದಿದೆ.

    ಕಾರು ಚಲಾಯಿಸುತ್ತಿದ್ದ ಹೊನ್ನಾವರದ ಹರೀಶ್ ನಾಯ್ಕ್ (30) ಮೃತ ವ್ಯಕ್ತಿ. ಚಾಲಕನೊಂದಿಗೆ ಪಯಣಿಸುತಿದ್ದ ಹೊನ್ನಾವರದ ದಿನೇಶ್ ಆಚಾರ್ಯ (45) ಗಂಭೀರ ಗಾಯಗೊಂಡಿದ್ದಾರೆ.

    ಟಾಟಾ ನ್ಯಾನೋ ಕಾರಿನಲ್ಲಿ ಹೊನ್ನಾವರದಿಂದ ಅಂಕೋಲಾದತ್ತ ಹರೀಶ್ ಹಾಗೂ ದಿನೇಶ್ ಪ್ರಯಾಣಿಸುತ್ತಿದ್ದರು. ಕಾರು ಅತೀ ವೇಗದಲ್ಲಿದ್ದ ಕಾರಣ ಕೊಡಸಣಿ ಕ್ರಾಸ್‌ನಲ್ಲಿ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾಗಿ ಘಟನೆ ನಡೆದಿದೆ.

    ಗಂಭೀರ ಗಾಯಗೊಂಡ ದಿನೇಶ್ ಆಚಾರ್ಯ ಎಂಬವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರು ಪಲ್ಟಿ – ಇಬ್ಬರು ಮಕ್ಕಳು, ಚಾಲಕನಿಗೆ ಗಂಭೀರ ಗಾಯ

    ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರು ಪಲ್ಟಿ – ಇಬ್ಬರು ಮಕ್ಕಳು, ಚಾಲಕನಿಗೆ ಗಂಭೀರ ಗಾಯ

    ಮಂಗಳೂರು: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರು ಪಲ್ಟಿಯಾಗಿದ್ದು, ಇಬ್ಬರು ಮಕ್ಕಳು ಮತ್ತು ಚಾಲಕನಿಗೆ ಗಂಭೀರ ಗಾಯವಾಗಿರುವ ಘಟನೆ ಬಂಟ್ವಾಳದಲ್ಲಿ (Bantwal) ನಡೆದಿದೆ.

    ಬಂಟ್ವಾಳ ತಾಲೂಕಿನ ಪೆರುವಾಯಿ ಮುಚ್ಚಿಲಪದವು ಎಂಬಲ್ಲಿ ಘಟನೆ ನಡೆದಿದ್ದು, ಎಂಟು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ಮಕ್ಕಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 98 ಮಂದಿ ಸೇರಿ ಮರಕುಂಬಿಯ 99 ಅಪರಾಧಿಗಳಿಗೆ ಜಾಮೀನು

    ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಶಾಲಾ ಮಕ್ಕಳ ವಾಹನ ಅಪಘಾತದ ಭೀಕರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ನಾಗ್ಪುರ ಆಡಿ ಕಾರು ಅಪಘಾತ – ಬಾರ್‌ನಲ್ಲಿದ್ದ ಬಿಜೆಪಿ ಮುಖಂಡನ ಪುತ್ರನ ವೀಡಿಯೋ ಮಿಸ್ಸಿಂಗ್

    ನಾಗ್ಪುರ ಆಡಿ ಕಾರು ಅಪಘಾತ – ಬಾರ್‌ನಲ್ಲಿದ್ದ ಬಿಜೆಪಿ ಮುಖಂಡನ ಪುತ್ರನ ವೀಡಿಯೋ ಮಿಸ್ಸಿಂಗ್

    ನಾಗ್ಪುರ: ನಾಗ್ಪುರದಲ್ಲಿ (Nagpur) ಮಹಾರಾಷ್ಟ್ರ (Maharashtra) ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ (Chandrashekhar Bawankule) ಪುತ್ರನ ಒಡೆತನದ ಆಡಿ ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಇತ್ತೀಚಿಗೆ ನಡೆದಿತ್ತು. ಅಪಘಾತಕ್ಕೂ ಮೊದಲು ಬಾರ್‌ನಲ್ಲಿ ಇದ್ದ ಸಮಯದ ಸಿಸಿಟಿವಿ ದೃಶ್ಯಾವಳಿಗಳು ಕಾಣೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಪುತ್ರ ಸಾಂಕೇತ್ ಬವಾಂಕುಲೆ (Sanket Bawankule) ಅವರ ಆಡಿ ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದು, ಘಟನಾ ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ಪೊಲೀಸರು ಇಬ್ಬರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.ಇದನ್ನೂ ಓದಿ: ಸಿಇಟಿ, ನೀಟ್ 2ನೇ ಸುತ್ತಿನ ಸೀಟು ಹಂಚಿಕೆಗೆ ತಯಾರಿ ಆರಂಭ- ಕೆಇಎ

    ಸೋಮವಾರ ಘಟನೆ ನಡೆದು, ಮಂಗಳವಾರ ಬಾರ್ ಮ್ಯಾನೇಜರ್ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ತನಿಖಾ ತಂಡಕ್ಕೆ ಹಸ್ತಾಂತರಿಸಲು ನಿರಾಕರಿಸಿದ್ದರು. ಬಳಿಕ ಬುಧವಾರ ಡಿವಿಆರ್‌ನ್ನು (Digital Video Recorder) ಪೊಲೀಸರು ವಶಪಡಿಸಿಕೊಂಡಿದ್ದರು. ಬಳಿಕ ಅದನ್ನು ತನಿಖಾ ತಂಡಕ್ಕೆ ನೀಡಲಾಗಿತ್ತು.

    ತನಿಖೆಯ ನಂತರ ಭಾನುವಾರ ರಾತ್ರಿಯಿಂದ ಸಿಸಿಟಿವಿಯಲ್ಲಿ ಯಾವುದೇ ದೃಶ್ಯಾವಳಿಗಳಿಲ್ಲ ಎಂದು ತಿಳಿದು ಬಂದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆ ನಡೆದದ್ದು ಹೇಗೆ?
    ಘಟನೆ ಮಧ್ಯರಾತ್ರಿ ಸುಮಾರು 1 ಗಂಟೆಗೆ ನಡೆದಿದ್ದು, ಕಾರಿನಲ್ಲಿದ್ದವರು ಮದ್ಯ ಸೇವಿಸಿದ್ದರು ಎನ್ನಲಾಗಿತ್ತು. ಆಡಿ ಕಾರು, ದೂರುದಾರ ಜಿತೇಂದ್ರ ಸೋಕಾಂಬ್ಲೆ ಕಾರಿಗೆ ಮೊದಲು ಡಿಕ್ಕಿ ಹೊಡೆದು ನಂತರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರರಿಬ್ಬರೂ ಗಾಯಗೊಂಡಿದ್ದರು.ಇದನ್ನೂ ಓದಿ: ನಾಗಮಂಗಲ ಗಲಭೆ ಬೆನ್ನಲ್ಲೇ ಗುಪ್ತಚರ ವಿಭಾಗದ ಎಡಿಜಿಪಿ ಶರತ್‌ ಚಂದ್ರ ಎತ್ತಂಗಡಿ

    ಧರಂಪೇತ್‌ನ ಬಾರ್‌ನಿಂದ ಹಿಂತಿರುಗುವ ವೇಳೆ ಈ ಘಟನೆ ಸಂಭವಿಸಿದ್ದು, ಬಂಧಿತರಿಬ್ಬರನ್ನು ಹೊರತುಪಡಿಸಿ ಸಾಂಕೇತ್ ಬವಾಂಕುಲೆ ಸೇರಿದಂತೆ ಇನ್ನೂ ಮೂವರು ಕಾರಿನಲ್ಲಿದ್ದರು ಎಂದು ವರದಿಯಾಗಿದೆ.

    ಆಡಿ ಕಾರು ಮಂಕಾಪುರದ ಕಡೆಗೆ ಚಲಿಸುತ್ತಿದ್ದ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಟಿ-ಪಾಯಿಂಟ್‌ನಲ್ಲಿ ಪೋಲೋ ಕಾರಿಗೂ ಡಿಕ್ಕಿ ಹೊಡೆದಿದೆ. ಕಾರನ್ನು ಹಿಂಬಾಲಿಸಿ ಪೋಲೋ ಕಾರಿನ ಚಾಲಕ ಮಂಕಾಪುರದ ಸೇತುವೆಯ ಬಳಿ ಆಡಿ ಕಾರನ್ನು ನಿಲ್ಲಿಸಿದ್ದರು. ಸಾಂಕೇತ್ ಸೇರಿದಂತೆ ಮೂವರು ಪರಾರಿಯಾಗಿದ್ದರು.

    ಘಟನೆಯ ಕುರಿತು ಚಂದ್ರಶೇಖರ್ ಬವಾಂಕುಲೆ ಸುದ್ದಿಗಾರರೊಂದಿಗೆ ಮಾತನಾಡಿ, ಆಡಿ ಕಾರು ತನ್ನ ಮಗನ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಒಪ್ಪಿಕೊಂಡಿದ್ದರು. ಪೊಲೀಸರು ಅಪಘಾತದ ಬಗ್ಗೆ ಯಾವುದೇ ಪಕ್ಷಪಾತ ಮಾಡದೇ ಸದ್ಯ ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.

  • ತಮಿಳು ನಟ ಜೀವ ಕಾರು ಅಪಘಾತ

    ತಮಿಳು ನಟ ಜೀವ ಕಾರು ಅಪಘಾತ

    ಚೆನ್ನೈ: ಕಾಲಿವುಡ್ ಖ್ಯಾತ ನಟ ಜೀವ (Tamil Actor Jiiva) ಕಾರು ಅಪಘಾತವಾಗಿದೆ. ಪತ್ನಿಯೊಂದಿಗೆ ನಟ ಜೀವ ಪ್ರಯಾಣಿಸುತ್ತಿದ್ದ ವೇಳೆ, ಕಲ್ಲಕುರಿಚಿ ಜಿಲ್ಲೆಯ ಚಿನ್ನಸೇಲಂ ಬಳಿ ಕಾರು ಅಪಘಾತ (Car Accident) ಸಂಭವಿಸಿದೆ. ಇದನ್ನೂ ಓದಿ:ನನ್ನ ಗಮನಕ್ಕೆ ತರದೇ ಡಿವೋರ್ಸ್ ಘೋಷಿಸಿದ್ದಾರೆ: ಜಯಂ ರವಿ ವಿರುದ್ಧ ಆರತಿ ಆಕ್ರೋಶ

    ಇಂದು (ಸೆ.11) ಮಧ್ಯಾಹ್ನ 3 ಗಂಟೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಅನಿರೀಕ್ಷಿತವಾಗಿ ಓರ್ವ ವ್ಯಕ್ತಿ ಅಡ್ಡ ಬಂದಿದ್ದಾನೆ. ಆತನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಟ ಜೀವ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾರೆ. ನಟ ಜೀವ ಮತ್ತು ಪತ್ನಿ ಸುಪ್ರಿಯಾಗೆ ಯಾವುದೇ ಗಾಯವಾಗಿಲ್ಲ. ಅವಘಡದಿಂದ ಇಬ್ಬರೂ ಪಾರಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಜೀವ ದಂಪತಿಯನ್ನು ಬೇರೆ ಕಾರಿನಲ್ಲಿ ಚೆನ್ನೈಗೆ ಕಳುಹಿಸಿ ಕೊಟ್ಟಿದ್ದಾರೆ.

    ಅಂದಹಾಗೆ, ತಮಿಳು ನಟ, ನಿರ್ಮಾಪಕ ಜೀವ ಅವರು ರಾಮ್, ಡಿಶ್ಯೂಂ, ಸೀರು, ಯಾನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  • Tumkur | ಗೌರಿ-ಗಣೇಶ ಹಬ್ಬ ಮುಗಿಸಿಕೊಂಡು ಬರುತ್ತಿದ್ದ ವೇಳೆ ಕಾರು ಅಪಘಾತ – ಐವರು ದಾರುಣ ಸಾವು!

    Tumkur | ಗೌರಿ-ಗಣೇಶ ಹಬ್ಬ ಮುಗಿಸಿಕೊಂಡು ಬರುತ್ತಿದ್ದ ವೇಳೆ ಕಾರು ಅಪಘಾತ – ಐವರು ದಾರುಣ ಸಾವು!

    ತುಮಕೂರು: ಗೌರಿ-ಗಣೇಶ ಹಬ್ಬ ಮುಗಿಸಿಕೊಂಡು ವಾಪಸ್‌ ಮನೆಗೆ ಬರುತ್ತಿದ್ದ ವೇಳೆ ಭೀಕರ ಕಾರು ಅಪಘಾತದಲ್ಲಿ (Car Accident) ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಐವರು ದಾರುಣ ಸಾವಿಗೀಡಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಒಂದು ಕಾರಿನಲ್ಲಿ ಮೂವರು, ಮತ್ತೊಂದು ಕಾರಿನಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.

    ತುಮಕೂರು (Tumkur) ಜಿಲ್ಲೆಯ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಹಾಗೂ ಕಾಟಗಾನಹಟ್ಟಿ ಬಳಿ ಘಟನೆ ನಡೆದಿದ್ದು, ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಇನ್ನುಳಿದವರ ಹೆಸರು ಪತ್ತೆಯಾಗಿಲ್ಲ, ಅಪಘಾತಕ್ಕೀಡಾದವರ ಪೈಕಿ ಕಾರಿನಲ್ಲಿದ ಮತ್ತೋರ್ವ ಮಹಿಳೆ ಮತ್ತು ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕುಸ್ತಿಪಟುಗಳ ಬಗ್ಗೆ ಮಾತನಾಡಬೇಡಿ – ಬ್ರಿಜ್ ಭೂಷಣ್ ಸಿಂಗ್‍ಗೆ ಬಿಜೆಪಿ ಎಚ್ಚರಿಕೆ

    ತುಮಕೂರು ಕಡೆಯಿಂದ ಬರುತ್ತಿದ್ದ ಸಿಯಾಜ್ ಮಾರುತಿ ಕಾರು ಹಾಗೂ ಮಧುಗಿರಿ ಕಡೆಯಿಂದ ತುಮಕೂರು ಕಡೆಗೆ ಹೊರಟಿದ್ದ ಟಾಟಾ ಟಿಯಾಗೋ ಕಾರಿನ ನಡುವೆ ಅಫಘಾತ ಸಂಭವಿಸಿದೆ. ಸ್ಥಳಕ್ಕೆ ತುಮಕೂರು ಎಸ್ಪಿ ಕೆ.ವಿ ಅಶೋಕ್ ಹಾಗೂ ಮಧುಗಿರಿ ಠಾಣೆ ಪಿಎಸ್‌ಐ ವಿಜಯ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಅಪಘಾತಕ್ಕೀಡಾದ ಕಾರುಗಳನ್ನ ಸ್ಥಳದಿಂದ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.  ಇದನ್ನೂ ಓದಿ: ಕ್ರಿಶ್ಚಿಯನ್ ಧರ್ಮದ ಉನ್ನತೀಕರಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ – 5 ಕೋಟಿ ಅನುದಾನ ಘೋಷಿಸಿದ ಸಿಎಂ

    ಐವರ ದಾರುಣ ಸಾವು:
    ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಐವರು ಸಾವನ್ನಪ್ಪಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದ ಯೋಗೆಶ್, ಯೋಗೆಶ್ ಪುತ್ರಿ ಸಿಂಧೂ (12) ಸೇರಿ ಒಂದೇ ಕುಟುಂಬದ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಇಂದು ರಾತ್ರಿಯೇ ಡಿಸಿಎಂ ಡಿಕೆಶಿ ಅಮೆರಿಕ ಪ್ರವಾಸ – ಕಮಲಾ ಹ್ಯಾರಿಸ್‌ರಿಂದ ಬಂತು ವಿಶೇಷ ಆಹ್ವಾನ?

    ಅಪಘಾತ ಆಗಿದ್ದು ಹೇಗೆ?
    ಮೃತ ಯೋಗೇಶ್‌ ಕುಟುಂಬಸ್ಥರು ಗೌರಿ-ಗಣೇಶ ಹಬ್ಬಕ್ಕೆಂದು ಊರಿಗೆ ತೆರಳಿದ್ದರು. ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಾಗಿದ್ದ ಯೋಗೇಶ್‌ ಕುಟುಂಬ ಭಾನುವಾರ ಹಬ್ಬ ಮುಗಿಸಿಕೊಂಡು ವೈ.ಎನ್ ಹೊಸಕೋಟೆ ಕಡೆಯಿಂದ ಬೆಂಗಳೂರಿಗೆ ಹೊರಟಿತ್ತು. ಇತ್ತ ಮೃತ ನಾಗರಾಜ್ ಕೊರಟಗೆರೆ ಕಡೆಯಿಂದ ಮಧುಗಿರಿ ಕಡೆಗೆ ತೆರಳಿದ್ದರು. ಮಧುಗಿರಿ ತಾಲೂಕಿನ ಕಾಟಗಾನಹಟ್ಟಿ ಹಾಗೂ ಕೆರೆಗಳಪಾಳ್ಯ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಎರಡು ಕಾರಗಳು ಸಂಪೂರ್ಣ ಜಖಂ ಆಗಿವೆ.

  • ಭೀಕರ ರಸ್ತೆ ಅಪಘಾತ; ಮದ್ವೆಯಾದ ಎರಡೇ ದಿನಕ್ಕೆ ನವ ವಿವಾಹಿತೆ ಸಾವು, ಪತಿ ಗಂಭೀರ!

    ಭೀಕರ ರಸ್ತೆ ಅಪಘಾತ; ಮದ್ವೆಯಾದ ಎರಡೇ ದಿನಕ್ಕೆ ನವ ವಿವಾಹಿತೆ ಸಾವು, ಪತಿ ಗಂಭೀರ!

    ಮಂಗಳೂರು: ಮದುವೆಯಾದ 2ನೇ ದಿನಗಳಲ್ಲಿ ಭೀಕರ ರಸ್ತೆ ಅಪಘಾತದಲ್ಲಿ (Road Accident) ನವವಿವಾಹಿತೆ (Newly Married Women) ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತಲಪಾಡಿ ಎಂಬಲ್ಲಿ ನಡೆದಿದೆ.

    ಭೀಕರ ಕಾರು ಅಪಘಾತದಲ್ಲಿ ನವ ವಿವಾಹಿತೆ ಸಾವನ್ನಪ್ಪಿದ್ದು, ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸ ಮೃತ ನವವಿವಾಹಿತೆ. ಗಂಭೀರವಾಗಿ ಗಾಯಗೊಂಡಿರುವ ಅನಿಶ್ ಕೃಷ್ಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ‘ಹನುಮಾನ್’ ನಿರ್ದೇಶಕನ ಹೊಸ ಸಿನಿಮಾ: ಚಿತ್ರರಂಗಕ್ಕೆ ಬಾಲಯ್ಯ ಪುತ್ರನ ಗ್ರ್ಯಾಂಡ್ ಎಂಟ್ರಿ

    ನವದಂಪತಿ ಬಿ.ಸಿ ರಸ್ತೆ ಕಡೆಯಿಂದ ಮಂಗಳೂರು (Mangaluru) ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು, ಡಿವೈಡರ್‌ನಿಂದಾಚೆಗೆ ಹಾರಿ, ಎದುರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿವಿಸಿದ ಬಳಿಕ ಹೆದ್ದಾರಿಯಲ್ಲಿ ಕೆಲ ಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

    ಅನಿಶ್ ಕೃಷ್ಣ – ಮಾನಸ ದಂಪತಿ ಕಳೆದ ಎರಡು ದಿನಗಳ ಹಿಂದಷ್ಟೇ ಅಂದ್ರೆ ಸೆಪ್ಟಂಬರ್‌ 5ರಂದು ದೇಂತಡ್ಕ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಕಾರ್ಯಕ್ರಮದ ವಿಚಾರವಾಗಿ ಕೆಲವೊಂದು ಲೆಕ್ಕಾಚಾರ ಮಾಡಲು ದೇಂತಡ್ಕ ದೇವಸ್ಥಾನಕ್ಕೆ ಬಂದಿದ್ದರು. ವಾಪಸ್‌ ಮನೆಗೆ ತೆರಳುವ ವೇಳೆ ದುರ್ಘಟನೆ ನಡೆದಿದೆ.

    ದಂಪತಿಯಿಬ್ಬರೂ ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಗಣೇಶೋತ್ಸವದ ದಿನ ನಡೆಯಬೇಕಿದ್ದ ಈದ್ ಮಿಲಾದ್ ಮೆರವಣಿಗೆ ಮೂಂದೂಡಿಕೆ!

  • ಕಾರು ಆಕ್ಸಿಡೆಂಟ್ ಬಗ್ಗೆ ನಿರ್ದೇಶಕ ನಾಗಶೇಖರ್ ಹೇಳೋದೇನು?

    ಕಾರು ಆಕ್ಸಿಡೆಂಟ್ ಬಗ್ಗೆ ನಿರ್ದೇಶಕ ನಾಗಶೇಖರ್ ಹೇಳೋದೇನು?

    ‘ಮೈನಾ’ ಚಿತ್ರದ ನಿರ್ದೇಶಕ ನಾಗಶೇಖರ್ (Nagashekar) ಅವರು ಕಾರು ಅಪಘಾತದ (Car Accident) ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕಾರಿನಲ್ಲಿ ಹೋಗುವಾಗ ಸ್ವಲ್ಪ ಕಣ್ಮುಚ್ಚಿದೆ ಇದರಿಂದ ಅಪಘಾತವಾಗಿದೆ ಎಂದು ನಿರ್ದೇಶಕ ‘ಪಬ್ಲಿಕ್ ಟಿವಿ’ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ದರ್ಶನ್ ಹೊಡೆತದಿಂದಲೇ ರೇಣುಕಾಸ್ವಾಮಿ ಸಾವು? – ಆ 3 ಹೊಡೆತಗಳ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

    ಇಂದು ಮಧ್ಯಾಹ್ನ 1:30ಕ್ಕೆ ಕಾರಿನಲ್ಲಿ ಹೋಗುತ್ತಿರುವಾಗ ಅಪಘಾತವಾಗಿದೆ. ಈ ವೇಳೆ ಓರ್ವ ಮಹಿಳೆಗೆ ಗಾಯವಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಅವರ ಕಾಲಿಗೆ ಸಣ್ಣದಾಗಿ ಗಾಯವಾಗಿರೋದಾಗಿ ತಿಳಿಸಿದ್ದಾರೆ. ಕಾರಿನಲ್ಲಿ ಹೋಗುವಾಗ ಸ್ವಲ್ಪ ಕಣ್ಮುಚ್ಚಿದ ಪರಿಣಾಮ ಅಪಘಾತಕ್ಕೆ ಕಾರಣವಾಯಿತು. ಕಾರು ಡ್ಯಾಮೇಜ್ ಆಗಿದೆ, ಅದು ಬಿಟ್ಟರೆ ನನಗೇನು ತೊಂದರೆ ಆಗಿಲ್ಲ ಎಂದು ನಾಗಶೇಖರ್ ಮಾತನಾಡಿದ್ದಾರೆ.

    ಅಂದಹಾಗೆ, ಮೈನಾ, ಸಂಜು ವೆಡ್ಸ್ ಗೀತಾ, ಅಮರ್ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ `ಸಂಜು ವೆಡ್ಸ್ ಗೀತಾ 2′ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ ನಾಗಶೇಖರ್.