Tag: car accident

  • ಸಾರ್ವಜನಿಕವಾಗಿ ಕುರಾನ್ ಸುಟ್ಟಿದ್ದಕ್ಕೆ ಆಕ್ರೋಶ – ನಾಯಕನ ಕಾರನ್ನು ಅಪಘಾತಗೈದವರು ಅರೆಸ್ಟ್

    ಸಾರ್ವಜನಿಕವಾಗಿ ಕುರಾನ್ ಸುಟ್ಟಿದ್ದಕ್ಕೆ ಆಕ್ರೋಶ – ನಾಯಕನ ಕಾರನ್ನು ಅಪಘಾತಗೈದವರು ಅರೆಸ್ಟ್

    ಓಸ್ಲೋ: ಕುರಾನ್ ಅನ್ನು ಸುಟ್ಟುಹಾಕಿದ ನಿಮಿಷಗಳ ನಂತರ ತೀವ್ರಗಾಮಿ ನಾರ್ವೇಜಿಯನ್ ಇಸ್ಲಾಮಿಕ್ ವಿರೋಧಿ ಗುಂಪಿನ ನಾಯಕನ ಕಾರಿಗೆ ಅಪಘಾತ ಮಾಡಿ ಜಖಂಗೊಳಿಸಿರುವ ಘಟನೆ ನಾರ್ವೆಯ ಓಸ್ಲೋದ ಹೊರವಲಯದಲ್ಲಿ ನಡೆದಿದೆ.

    “ಸ್ಟಾಪ್ ದಿ ಇಸ್ಲಾಮೈಸೇಷನ್ ಆಫ್ ನಾರ್ವೆ” (ನಾರ್ವೆ ಇಸ್ಲಾಮೀಕರಣ ನಿಲ್ಲಿಸಿ) ಹೆಸರಿನ ಗುಂಪಿನ ನಾಯಕ ಲಾರ್ಸ್ ಥಾರ್ಸನ್ ಅವರ ಎಸ್‌ಯುವಿ ಅಪಘಾತ ಮಾಡಿದ್ದ ಆರೋಪದ ಮೇಲೆ ಕಾರಿನ ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ನಾರ್ವೇಜಿಯನ್ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದುಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್‌ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

    ಎಸ್‌ಯುವಿಯಲ್ಲಿದ್ದ ಐವರು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಒಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಓಸ್ಲೋ ಉಪನಗರ ಮಾರ್ಟೆನ್ಸ್ರುಡ್‌ಗೆ ಇಸ್ಲಾಮಿಕ್ ವಿರೋಧಿ ಗುಂಪಿನ ಥಾರ್ಸನ್ ತನ್ನ ಕಾರ್ಯಕರ್ತರೊಂದಿಗೆ ಹೋಗಿದ್ದಾರೆ. ಅಲ್ಲಿ ನೆರೆದಿದ್ದ ಜನಸಂದಣಿ ಮಧ್ಯೆ ಕುರಾನ್ ಅನ್ನು ಸುಟ್ಟು ಹಾಕಿದ್ದಾರೆ. ಈ ವೇಳೆ ಬೆಂಕಿ ಆರಿಸಲು ಮುಂದಾದ ಜನರನ್ನೂ ತಡೆದಿದ್ದಾರೆ. ಆಗ ಜನಸ್ತೋಮ, ಥಾರ್ಸನ್ ವಿರುದ್ಧ ಕಿಡಿಕಾರಿತು. ಇದನ್ನೂ ಓದಿ: ಮದುವೆಯಾಗಿ ನವವಧುವನ್ನು ಸೇನಾ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದ ತಾಲಿಬಾನ್‌ ಕಮಾಂಡರ್‌

    ಇದಾದ ಬಳಿಕ ಥಾರ್ಸನ್ ಮತ್ತು ಕಾರ್ಯಕರ್ತರು ಕಾರಿನಲ್ಲಿ ಹೋಗುವಾಗ ಮತ್ತೊಂದು ವಾಹನ ಬಂದು ಅಪಘಾತ ಮಾಡಿದೆ. ಅಲ್ಲದೇ ಥಾರ್ಸನ್ ಇದ್ದ ಕಾರನ್ನು ಜಖಂಗೊಳಿಸಿದೆ. ಈ ಘಟನೆಯ ವೀಡಿಯೋ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ.

    ನಾರ್ವೆಯ ದೇಶೀಯ ಗುಪ್ತಚರ ಈ ದಾಳಿಯನ್ನು ‘ಇಸ್ಲಾಮಿ ಭಯೋತ್ಪಾದನೆಯ ಕೃತ್ಯ’ ಎಂದು ಬಣ್ಣಿಸಿದೆ. ಸ್ಕ್ಯಾಂಡಿನೇವಿಯನ್ ಇಸ್ಲಾಂ ವಿರೋಧಿ ಕಾರ್ಯಕರ್ತರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಇರುವ ಭಾಗಗಳಿಗೆ ಹೋಗಿ ಕುರಾನ್ ಸುಡುವ ಕೆಲಸ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾರು ಅಪಘಾತ – ಅಮೂಲ್ ಎಂಡಿ ಸೋಧಿಗೆ ಪೆಟ್ಟು, ಆಸ್ಪತ್ರೆಗೆ ದಾಖಲು

    ಕಾರು ಅಪಘಾತ – ಅಮೂಲ್ ಎಂಡಿ ಸೋಧಿಗೆ ಪೆಟ್ಟು, ಆಸ್ಪತ್ರೆಗೆ ದಾಖಲು

    ಗಾಂಧಿನಗರ: ಅಮೂಲ್ ಬ್ರ್ಯಾಂಡ್‌ನ ಅಡಿಯಲ್ಲಿ ಉತ್ಪನ್ನ ತಯಾರಿಸುವ GCMMF ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.

    ಗುಜರಾತಿನ ಆನಂದ್ ಪಟ್ಟಣದ ಸಮೀಪ ಬುಧವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಸೋಧಿ ಅವರು ಪ್ರಾಣಾಪಾಯಯದಿಂದ ಪಾರಾಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಡೆದಿದ್ದೇನು?: ಸೋಧಿ ಅವರು ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಆನಂದ್-ಬಕ್ರೋಲ್ ರಸ್ತೆಯಲ್ಲಿ ಚಲಿಸುತ್ತಿದ್ದ ವೇಳೆ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಗುದ್ದಿದ ಪರಿಣಾಮ ಉರುಳಿ ಬಿದ್ದಿದೆ. ಕಾರು ನಿಯಂತ್ರಣ ಕಳೆದುಕೊಳ್ಳಲು ನಿಖರ ಕಾರಣ ಏನೆಂಬುದು ಕಂಡುಬಂದಿಲ್ಲ. ಆದರೆ ಸ್ಥಳೀಯ ಮೂಲಗಳು ಹೇಳುವಂತೆ ಚಾಲಕ ದ್ವಿಚಕ್ರ ವಾಹವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿ, ತಿರುವು ತೆಗೆದುಕೊಂಡಿದ್ದರಿಂದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತ ಸಂಭವಿಸಿದೆ ಎಂಬುದಾಗಿ ತಿಳಿದು ಬಂದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬಿಡಿ ಜಡೇಜಾ ತಿಳಿಸಿದ್ದಾರೆ.

    CRIME

    ಅಪಘಾತಕ್ಕೀಡಾದ ಸೋಧಿ ಹಾಗೂ ಚಾಲಕನನ್ನು ಸ್ಥಳೀಯರು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮಾಹಿತಿ ನೀಡಿದ್ದಾರೆ.

    ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಸಂಸ್ಥೆ ನಿಯಮಿತವು (GCMMF) ಆನಂದ್ ಪಟ್ಟಣದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಅಮೂಲ್ ಬ್ರ‍್ಯಾಂಡ್ ಹೆಸರಿನ ಅಡಿ ಅದು ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಸೋಧಿ ಅವರು 2019 ರಿಂದಲೂ ಅದರ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

    Live Tv

  • ಮುನುಸ್ವಾಮಿ ಬಲಿ ಪಡೆದ ಕಾಲಿವುಡ್ ಖ್ಯಾತ ನಟ ಸಿಂಬು ಕಾರು

    ಮುನುಸ್ವಾಮಿ ಬಲಿ ಪಡೆದ ಕಾಲಿವುಡ್ ಖ್ಯಾತ ನಟ ಸಿಂಬು ಕಾರು

    ಕಾಲಿವುಡ್ ಖ್ಯಾತ ನಟ ಸಿಂಬು ಒಡೆತನದ ಐಶಾರಾಮಿ ಕಾರು ಮಾ.18 ರಂದು ವ್ಯಕ್ತಿಯೋರ್ವನನ್ನು ಬಲಿ ಪಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಪಘಾತಕ್ಕೀಡಾದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ : ಎದೆಹಾಲು ದಾನ ಮಾಡಿ – ಅಭಿಮಾನಿಗಳಿಗೆ ಸಿಂಡ್ರೆಲಾ ಸಂದೇಶ

    ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಮುನುಸ್ವಾಮಿ ಎಂದು ಗುರುತಿಸಲಾಗಿದ್ದು, 70ರ ವಯಸ್ಸಿನ ಇವರು ತೇನಂಪೇಟೆ ಪ್ರದೇಶದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಕೆಲವೇ ದಿನಗಳ ಹಿಂದೆ ಅವರಿಗೆ ಕಾಲಿಗೆ ಪೆಟ್ಟಾಗಿದ್ದರಿಂದ, ತೆವಳುತ್ತಾ ರಸ್ತೆ ದಾಟುತ್ತಿದ್ದರು ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಸಿಂಬು ಹೆಸರಿನಲ್ಲಿರುವ ಕಾರು ಮುನುಸ್ವಾಮಿ ಮೇಲೆ ಹರಿದಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಸ್ಥಳಿಯರು ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

     

    ಅಪಘಾತಕ್ಕೀಡಾದ ತಕ್ಷಣವೇ ಕಾರಿನಲ್ಲಿದ್ದವರು ಪರಾರಿ ಆಗಿದ್ದಾರೆ. ಹಾಗಾಗಿ ಯಾರೆಲ್ಲ ಕಾರಿನಲ್ಲಿ ಇದ್ದರು ಎಂದು ಇನ್ನೂ ಪತ್ತೆ ಆಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಚಾಲಕ ಸೆಲ್ವಂ ಎಂಬುವವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದು, ಹಚ್ಚಿನ ವಿಚಾರಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ.  ಸಿಲೆಬ್ರಿಟಿಗಳ ಈ ವರ್ತನೆಗೆ ಖಂಡನೆ ವ್ಯಕ್ತವಾಗುತ್ತಿದೆ.

  • ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?

    ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?

    ಸೋಷಿಯಲ್ ಮೀಡಿಯಾದ ಸ್ಟಾರ್ ಮತ್ತು ನಟಿ ಡಾಲಿ ಡಿಕ್ರೂಜ್ ಅಲಿಯಾಸ್ ಗಾಯತ್ರಿ ಮಾರ್ಚ್ 18ರಂದು ನಡೆದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು. ಸ್ನೇಹಿತರ ಜೊತೆ ಹೋಳಿ ಪಾರ್ಟಿಗೆ ಎಂದು ಪಬ್ ವೊಂದಕ್ಕೆ ತೆರಳಿದ್ದ ಅವರು, ಅಲ್ಲಿಂದ ವಾಪಸ್ ಮನೆಗೆ ಬರುವಾಗ ಕಾರು ಅಪಘಾತವಾಗಿತ್ತು. ಚಾಲಕ ನಿಯಂತ್ರಣ ತಪ್ಪಿ ಫುಟ್ ಪಾತ್ ಮೇಲೆ ಹಾರಿದ್ದ ಕಾರು, ಈ ನಟಿಯ ಪ್ರಾಣ ತಗೆದಿತ್ತು. ಈ ಪ್ರಕರಣವನ್ನು ಬೆನ್ನುಹತ್ತಿದ್ದ ಪೊಲೀಸರಿಗೆ ಒಂದಷ್ಟು ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿವೆ. ಇದನ್ನೂ ಓದಿ : ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ

    ಹೋಳಿ ಹಬ್ಬದ ದಿನ ಹೈದರಾಬಾದ್ ನಲ್ಲಿ ಮದ್ಯ ನಿಷೇಧವಾಗಿತ್ತು. ಹಾಗಾಗಿಯೇ ಇವರು ಮದ್ಯ ಕುಡಿಯಲೆಂದು ಉಪಾಯ ಮಾಡಿದ್ದು ಎಳನೀರನ್ನು. ಅದಕ್ಕೆ ಮಿಕ್ಸ್ ಮಾಡಿ ಗೊತ್ತಿಲ್ಲದಂತೆ ಗಾಯತ್ರಿ ಮತ್ತು ಅವರ ಜೊತೆ ಹೋಗಿದ್ದ ರೋಹಿತ್ ಗೆ ಕೊಟ್ಟಿದ್ದಾರೆ. ತಾವು ಎಷ್ಟು ಕುಡಿದಿದ್ದೇವೆ ಎಂದು ಅರಿಯದೇ ಕಂಠಪೂರ್ತಿ ಕುಡಿದು ಕಾರು ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ.

    ತಾನು ಮನೆಯಲ್ಲೇ ಹೋಳಿ ಹಬ್ಬ ಆಚರಿಸುವುದಾಗಿ ಗಾಯತ್ರಿ ಹೇಳಿದ್ದರೂ, ಒತ್ತಾಯ ಮಾಡಿ ರೋಹಿತ್ ಮತ್ತು ಸ್ನೇಹಿತರು ಆಕೆಯನ್ನು ಪ್ರಿಸ್ಮಾ ಎಂಬ ಪಬ್ ಗೆ ಕರೆದುಕೊಂಡು ಹೋಗಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ಮನೆಯಲ್ಲೇ ಹಬ್ಬ ಆಚರಿಸಿದ್ದರೆ ಮಗಳ ಪ್ರಾಣ ಉಳಿಯತ್ತಿತ್ತು ಎಂದಿದ್ದಾರೆ ಕುಟುಂಬದ ಸದಸ್ಯರು. ಇದನ್ನೂ ಓದಿ : ತೂಫಾನಿಗೆ ಸೋಷಿಯಲ್ ಮೀಡಿಯಾ ಗಡಗಡ: ಪೂಜೆಗೆ ಬಂದ ಯಶ್ ಅಭಿಮಾನಿಗಳು

    ಗಾಯತ್ರಿ ಮತ್ತು ಸ್ನೇಹಿತರಿದ್ದ ಆ ಕಾರು ತುಂಬಾ ವೇಗವಾಗಿ ಚಲಿಸಿದೆ. ಫುಟ್ ಪಾತ್ ಗೆ ಢಿಕ್ಕಿ ಹೊಡೆದು, ಅಲ್ಲಿಂದ ಒಂದಷ್ಟು ಅಡಿ ಉರುಳುತ್ತಾ ಸಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೂ ತಾಗಿದೆ. ಆಕೆಯು ಕೂಡ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರಂತೆ.

  • ಕಚ್ಚಾ ಬದಾಮ್ ಸಿಂಗರ್ ಭುಬನ್ ಬದ್ಯಾಕರ್ ಆಸ್ಪತ್ರೆಗೆ ದಾಖಲು

    ಕಚ್ಚಾ ಬದಾಮ್ ಸಿಂಗರ್ ಭುಬನ್ ಬದ್ಯಾಕರ್ ಆಸ್ಪತ್ರೆಗೆ ದಾಖಲು

    ಕೋಲ್ಕತ್ತಾ: ಕಚ್ಚಾ ಬಾದಮ್ ಸಿಂಗರ್ ಭುಬನ್ ಬದ್ಯಾಕರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹೌದು. ಸೋಮವಾರ ನಡೆದ ಕಾರು ಅಪಘಾತದಲ್ಲಿ ಭುಬನ್ ಗಾಯಗೊಂಡು ಸುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾತ್ರೋ ರಾತ್ರಿ ಫೇಮಸ್ ಆಗಿರುವ ಭುಬನ್, ಇತ್ತೀಚೆಗೆ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ಡ್ರೈವಿಂಗ್ ಕಲಿಯುತ್ತಿದ್ದ ಸಂದರ್ಭದಲ್ಲಿ ಗೋಡೆಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಭುಬನ್ ಎದೆಗೆ ಏಟು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಸದ್ಯ ಅವರು ಆಸ್ಪತ್ರೆಯಲ್ಲಿದ್ದಾರೆ.

    ಕಡಲೆ ಕಾಯಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಭುಬನ್ ಅವರು ಕಚ್ಚಾ ಬದಾಮ್ ಹಾಡು ಹಾಡಿ ರಾತ್ರಿ ಬೆಳಗಾವುದೊರಳಗೆ ಭಾರೀ ಫೇಮಸ್ ಆಗಿದ್ದರು. ಇವರ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ ಅನೇಕ ಮಂದಿ ರೀಲ್ಸ್ ಕುಡ ಮಾಡುತ್ತಿದ್ದಾರೆ. ಇದನ್ನೂ ಓದಿ: ಪ್ರಜೆಗಳನ್ನು ರಕ್ಷಿಸಿ ಭಾರತ ಮಾದರಿಯಾದ್ರೆ, ನಿಮ್ಮ ರಕ್ಷಣೆ ನಿಮ್ಮ ಹೊಣೆ ಎಂದ ಅಮೆರಿಕ..!

    ಹಳೆಯ ಚೈನ್, ಮೊಬೈಲ್‍ಗಳನ್ನು ತೆಗೆದುಕೊಂಡು ಅದಕ್ಕೆ ಪ್ರತಿಯಾಗಿ ಭುಬನ್ ಕಡಲೆಕಾಯಿ ನೀಡುತ್ತಿದ್ದರು. ಹಾಡಿನ ಸಾಹಿತ್ಯ ಕೂಡ ಅದೇ ಅರ್ಥವನ್ನು ನೀಡಿತ್ತು. ತಾನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದಕ್ಕೆ ಖುಷಿ ಇದೆ ಎಂದಿದ್ದಾರೆ. ಅಲ್ಲದೆ ಆ ಬಳಿಕ ಅವರಿಗೆ ಸಿನಿಮಾ ಹಾಡುಗಳನ್ನು ಹಾಡುವ ಅವಕಾಶವೂ ದೊರೆಯಿತು.

    ಇತ್ತೀಚೆಗೆ ಭುಬನ್ ಅವರು ಕೋಲ್ಕತ್ತಾದ ಪಬ್ ನಲ್ಲಿ ಹಾಡು ಹಾಡಲು ತೆರಳಿದ್ದರು. ರಾಕ್ ಸ್ಟಾರ್ ನಂತೆ ಡ್ರೆಸ್ಸಿಂಗ್ ಮಾಡುವ ಮೂಲಕ ನ್ಯೂ ಲುಕ್ ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು. ಇತ್ತೀಚೆಗೆ ಪಶ್ಚಿಮ ಬಂಗಾಳದ ಪೊಲಿಸರು ಕೂಡ ಭುಬನ್ ಅವರನ್ನು ಸನ್ಮಾನ ಮಾಡಿದ್ದರು.

  • ಹಿರಿಯ ನಟ ಶಿವರಾಮ್ ಆರೋಗ್ಯ ಗಂಭೀರ

    ಹಿರಿಯ ನಟ ಶಿವರಾಮ್ ಆರೋಗ್ಯ ಗಂಭೀರ

    ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟ ಶಿವರಾಮ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

    84 ವರ್ಷದ ಶಿವರಾಮ್ ಅವರ ತಲೆಗೆ ಗಂಭೀರ ಗಾಯವಾಗಿದ್ದು ಬ್ರೈನ್ ಗೆ ಬಲವಾದ ಪೆಟ್ಟು ಬಿದ್ದಿದೆ. ಸದ್ಯ ಶಿವರಾಮ್ ಅವರನ್ನು ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದ ಶಿವರಾಮ್ ಅವರ ಅರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ ನಟ ಶ್ರೀನಿವಾಸ್ ಮೂರ್ತಿ ಮಾಹಿತಿ ನೀಡಿದ್ದಾರೆ.

    ಈ ಸಂಬಂಧ ತಂದೆಯ ಆರೋಗ್ಯದ ಬಗ್ಗೆ ಹಿರಿಯ ಪುತ್ರ ರವಿಶಂಕರ್ ಮಾಹಿತಿ ನೀಡಿ, ಮೂರು ದಿನಗಳ ಹಿಂದೆ ಕಾರಿನಲ್ಲಿ ಹೊರಗೆ ಹೋಗಿದ್ದ ವೇಳೆ ಕಾರ್ ಆಕ್ಸಿಡೆಂಟ್ ಆಗಿತ್ತು. ಮೂರು ದಿನಗಳಿಂದ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಮೊನ್ನೆ ರಾತ್ರಿ ಮನೆಯಲ್ಲಿ ಅಯ್ಯಪ್ಪನ ಪೂಜೆ ಮಾಡಲು ರೂಂಗೆ ಹೋಗಿದ್ದರು. ಆ ವೇಳೆ ರೂಂನಲ್ಲಿ ಬಿದ್ದ ಹಿನ್ನೆಲೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಅಂದು ರಾತ್ರಿಯೇ ಅಸ್ಪತ್ರೆಗೆ ಕರೆದುಕೊಂಡು ಬಂದು ಸ್ಕ್ಯಾನಿಂಗ್ ಮಾಡಿಸಿದ್ದೀವಿ. ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಯಿತು. ವೈದ್ಯರು ಸರ್ಜರಿ ಮಾಡಬೇಕು ಎಂದು ಹೇಳಿದ್ರು. ಆದರೆ ನಮ್ಮ ತಂದೆಗೆ ವಯಸ್ಸಾದ ಹಿನ್ನೆಲೆ ಸರ್ಜರಿ ಮಾಡಲು ಆಗಿಲ್ಲ. ಸದ್ಯ ಐಸಿಯುನಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದರು. ಇದನ್ನೂ ಓದಿ: ಆಂಧ್ರಪ್ರದೇಶ ಪ್ರವಾಹ – ತಲಾ 25 ಲಕ್ಷ ದೇಣಿಗೆ ನೀಡಿದ ಚಿರಂಜೀವಿ, ರಾಮ್‍ಚರಣ್

  • ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಕಾರು- ಚಾಲಕ ಸಾವು

    ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಕಾರು- ಚಾಲಕ ಸಾವು

    ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಉರುಳಿದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಹೊಳೆ ನರಸೀಪುರ ತಾಲೂಕಿನ ತೇಜೂರು ಗ್ರಾಮದಲ್ಲಿ ನಡೆದಿದೆ.

    ACCIDENT

    ಸುಮಾರು 43 ವರ್ಷದ ಶಿವಮೂರ್ತಿ ಮೃತ ದುರ್ದೈವಿ. ಇದನ್ನೂ ಓದಿ: ದೀಪಾವಳಿಯಲ್ಲಿ ಹಸಿರು ಪಟಾಕಿ ಸಿಡಿಸಲು ಅವಕಾಶ- ಮಾರ್ಗಸೂಚಿ ಬಿಡುಗಡೆ

    ಹಳ್ಳಿಮೈಸೂರಿನಿಂದ ಕೆಲಸ ಮುಗಿಸಿಕೊಂಡು ಶಿವಮೂರ್ತಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಅವರ ನಿಯಂತ್ರಣ ತಪ್ಪಿದ ಕಾರು ಮೊದಲು ವಿದ್ಯುತ್ ಪರಿವರ್ತಕಕ್ಕೆ ಡಿಕ್ಕಿ ಹೊಡೆದಿದೆ. ನಂತರ ಕಾರು ಪಕ್ಕದಲ್ಲೇ ಇದ್ದ ಕಾಲುವೆಗೆ ಉರುಳಿದೆ. ಕಾಲುವೆಯಲ್ಲಿದ್ದ ನೀರಿಗೆ ಸಿಲುಕಿ ಉಸಿರುಗಟ್ಟಿ ಚಾಲಕ ಶಿವಮೂರ್ತಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ರಾಜ್‍ಕುಮಾರ್ ಮಕ್ಕಳ ಜೊತೆ ನಾನು ಆ್ಯಕ್ಟಿಂಗ್ ಮಾಡ್ಬೇಕುಂತ ಅಮ್ಮನಿಗೆ ಆಸೆ ಇತ್ತು: ರಚಿತಾ ರಾಮ್

    POLICE JEEP

    ಕಾರು ಕಾಲುವೆಗೆ ಬೀಳುವುದನ್ನು ಗಮನಿಸಿದ ಜನರು, ಕಾರಿನ ಚಾಲಕನನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯುವತಿಯಿಂದ ಕಾರು ಚಾಲನೆ- ಆಟೋ ಸಂಪೂರ್ಣ ನಜ್ಜುಗುಜ್ಜು

    ಯುವತಿಯಿಂದ ಕಾರು ಚಾಲನೆ- ಆಟೋ ಸಂಪೂರ್ಣ ನಜ್ಜುಗುಜ್ಜು

    ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಶಾಂತಿ ನಗರ ಬಳಿ ನಿಂತಿದ್ದ ಆಟೋಗೆ ವೇಗವಾಗಿ ಬಂದ ವ್ಯಾಗನರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋ ನಜ್ಜುಗುಜ್ಜಾಗಿ ಪಲ್ಟಿಯಾಗಿರುವ ಘಟನೆ ನಡೆದಿದೆ.

    ಯುವತಿ ಕಾರು ಚಲಾಯಿಸಿದ್ದು, ಅಜಾಗರೂಕತೆಯಿಂದ ಈ ಅಪಘಾತ ನಡೆದಿದೆ.ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ಜಖಂ ಆಗಿದ್ದು, ಆಟೋದಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕನಿಗೆ ಗಂಭೀರ ಗಾಯಗಳಾಗಿದೆ. ಆಟೋ ಚಾಲಕ ಪ್ರಾಣಪಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ:  ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಗಣಿಗಾರಿಕೆ ಪ್ರದೇಶದಲ್ಲಿ ಸ್ಪೋಟಕ್ಕೆ ಜೀವಗಳು ಬಲಿ

    ವ್ಯಾಗನರ್ ಕಾರಿನಲ್ಲಿದ್ದ ನಾಲ್ವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಆಟೋದಲ್ಲಿ ಸಿಲುಕಿದ್ದ ಪ್ರಯಾಣಿಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಅಂಬುಲೆನ್ಸ್ ನಲ್ಲಿ ನೆಲಮಂಗಲ ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ:  ಈಜಲು ಹೋಗಿದ್ದ ಯುವಕ ನೀರುಪಾಲು

    ಅಪಘಾತದಿಂದ ಗುಂಪು ಸೇರಿದ ಸ್ಥಳೀಯರು ಕಾರಿನಲ್ಲಿದ್ದವರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅತೀ ವೇಗವಾಗಿ ಕಾರನ್ನು ಚಲಾಯಿಸಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕಾಡಾನೆ ಕಂಡು ಗಾಬರಿಯಾಗಿ ಮರಕ್ಕೆ ಕಾರು ಡಿಕ್ಕಿ ಹೊಡೆದ.!

    ಕಾಡಾನೆ ಕಂಡು ಗಾಬರಿಯಾಗಿ ಮರಕ್ಕೆ ಕಾರು ಡಿಕ್ಕಿ ಹೊಡೆದ.!

    ಡಿಕೇರಿ: ರಸ್ತೆಯಲ್ಲಿ ಸಂಚರಿಸುವಾಗ ಮಾರ್ಗ ಮಧ್ಯದಲ್ಲಿ ಕಾಡಾನೆ ನೋಡಿ ಗಾಬರಿಗೊಂಡು, ಚಾಲಕ ಕಾರನ್ನು ಮರಕ್ಕೆ ಡಿಕ್ಕಿ ಹೊಡೆಸಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹುಂಡಿ ಗ್ರಾಮದಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಖಾಸಗಿ ಬ್ಯಾಂಕ್ ವ್ಯವಸ್ಥಾಪಕರೊಬ್ಬರು ಕಾರಿನಲ್ಲಿ ಪಾಲಿಬೆಟ್ಟದಿಂದ ಸಿದ್ದಾಪುರದತ್ತ ಬರುತ್ತಿದ್ದರು. ಈ ವೇಳೆ ಹುಂಡಿ ಎಂಬಲ್ಲಿ ದಿಢೀರಾಗಿ ಕಾಡಾನೆ ಎದುರಾಗಿದೆ. ಕಾಡಾನೆಯನ್ನು ನೋಡಿದ ತಕ್ಷಣ ಗಾಬರಿಗೊಂಡ ಅವರು ಕಾರಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತೋಟದೊಳಗೆ ಕಾರನ್ನು ನುಗ್ಗಿಸಿದ್ದಾರೆ. ಇದರ ಪರಿಣಾಮ ಕಾರು ಆಲದ ಮರಕ್ಕೆ ಡಿಕ್ಕಿಯಾಗಿದೆ. ಇದನ್ನೂ ಓದಿ:ಫಾಲ್ಸ್‌ಗೆ ಬಿದ್ದು ಇಬ್ಬರು ಯುವಕರು ಸಾವು – ಶವ ಎತ್ತಿದ ಪಿಎಸ್‍ಐ

    ಕಾರು ಡಿಕ್ಕಿಯಾದ ರಭಸಕ್ಕೆ ಮರ ಎರಡು ಸೀಳಾಗಿದೆ. ಅದೃಷ್ಟವಶಾತ್ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರಕ್ಕೆ ಕಾರು ಅಪ್ಪಳಿಸಿದಾಗ ಉಂಟಾದ ಶಬ್ಧಕ್ಕೆ ಬೆದರಿದ ಕಾಡಾನೆ ಅಲ್ಲಿಂದ ಕಾಲ್ಕಿತ್ತಿದೆ. ಬಳಿಕ ಟ್ರ್ಯಾಕ್ಟರ್ ಸಹಾಯದಿಂದ ಕಾರನ್ನು ತೋಟದೊಳಗಿನಿಂದ ಹೊರಕ್ಕೆ ತರಲಾಗಿದ್ದು, ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ:21 ಕೆಜಿಯ ಲಡ್ಡು 18.90 ಲಕ್ಷಕ್ಕೆ ಹರಾಜಾಯ್ತು!

  • ಡಿಸಿಎಂ ಮಗ ಅಂದಾಗ ಇಂತಹ ಊಹಾಪೋಹಗಳೆಲ್ಲ ಸಹಜ: ಲಕ್ಷ್ಮಣ್ ಸವದಿ

    ಡಿಸಿಎಂ ಮಗ ಅಂದಾಗ ಇಂತಹ ಊಹಾಪೋಹಗಳೆಲ್ಲ ಸಹಜ: ಲಕ್ಷ್ಮಣ್ ಸವದಿ

    ಬೆಂಗಳೂರು: ಡಿಸಿಎಂ ಮಗನ ಕಾರ್ ಅಪಘಾತಕ್ಕೊಳಗಾಗಿದೆ ಅಂದಾಗ ಇಂತಹ ಊಹಾಪೋಹಗಳೆಲ್ಲ ಸಹಜ. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಪುತ್ರನಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.

    ಪುತ್ರ ಚಿದಾನಂದ್ ಮತ್ತು ಆತನ ಸ್ನೇಹಿತರು ಅಂಜನಾದ್ರಿ ಬೆಟ್ಟದಿಂದ ಹಿಂದಿರುಗುವ ವೇಳೆ ಅಪಘಾತ ನಡೆದಿದೆ. ಚಿದಾನಂದ್ ಫಾರ್ಚೂನರ್ ಕಾರ್ ನಲ್ಲಿ ಪ್ರಯಾಣಿಸುತ್ತಿದ್ರು. ಹಿಂದಿನಿಂದ ಬರುತ್ತಿದ್ದ ಇನ್ನೊಂದು ಕಾರ್ ನಲ್ಲಿ ಗೆಳೆಯರು ಬರುತ್ತಿದ್ರು. ಗೆಳೆಯರಿದ್ದ ಕಾರ್ ಅಪಘಾತವಾಗಿದೆ. ಆಕ್ಸಿಡೆಂಟ್ ಆಗ್ತಿದ್ದಂತೆ ಗೆಳೆಯರು ಫೋನ್ ಮಾಡಿದ್ದರಿಂದ ಚಿದಾನಂದ್ ವಾಪಸ್ಸು ಹೋಗಿದ್ದಾನೆ. ಅವನೇ ಅಂಬ್ಯುಲೆನ್ಸ್ ಗೆ ಫೋನ್ ಮಾಡಿ ಆಸ್ಪತ್ರೆ ಸೇರಿಸಿ ಮನೆಗೆ ಹೋಗಿದ್ದಾನೆ. ರಾತ್ರಿ ಬೈಕ್ ಸವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಿದರು.

    ರಾತ್ರಿ ಸಾವು ಆಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಣಮಂತು ನಮ್ಮ ಖಾಯಂ ಡ್ರೈವರ್. ಮಗನ ಕಾರ್ ನಮ್ಮ ಚಾಲಕನೇ ಚಲಾಯಿಸುತ್ತಿದ್ದನು. ಡಿಸಿಎಂ ಮಗ ಅಥವಾ ವಿನಿಸ್ಟರ್ ಪುತ್ರ ಅಂದಾಗ ಈ ರೀತಿ ಊಹಾಪೋಹಗಳೆಲ್ಲ ಸಹಜ ಎಂದು ಹೇಳುವ ಮೂಲಕ ಎಲ್ಲ ಆರೋಪಗಳನ್ನು ಉಪ ಮುಖ್ಯಮಂತ್ರಿಗಳು ತಳ್ಳಿ ಹಾಕಿದರು.

    ಮನೆಯ ಹಿರಿಯನನ್ನು ಆ ಕುಟುಂಬ ಕಳೆದುಕೊಂಡಿದೆ. ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪರಿಹಾರ ಕೊಡುವುದು ನಮ್ಮ ಧರ್ಮ. ಫೋನ್ ನಲ್ಲಿ ಮಾತನಾಡೋದು ಸೂಕ್ತವಲ್ಲ. ನಾನೇ ಖುದ್ದಾಗಿ ಗ್ರಾಮಕ್ಕೆ ತೆರಳಿ ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ಸಾಂತ್ವಾನ ಹೇಳುತ್ತೇನೆ ಅಂದ್ರು. ಇದನ್ನೂ ಓದಿ: ಕಾರ್ ಪ್ಲೇಟ್ ನಂಬರ್ ಅವರೇ ಕಲ್ಲಿನಿಂದ ಜಜ್ಜಿದ್ರು, ಫೋಟೋ ತೆಗೆದವರನ್ನ ನಿಂದಿಸಿ ಅವಾಜ್ ಹಾಕಿದ್ರು

    ಏನಿದು ಪ್ರಕರಣ?:
    ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ್ ಕಾರ್ ಅಪಘಾತಕ್ಕೆ ಒಳಗಾಗಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿಯ ಚಿತ್ರದುರ್ಗ-ಸೊಲ್ಹಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಕೊಡ್ಲೆಪ್ಪ ಬೋಳಿ ಮೃತ ಬೈಕ್ ಸವಾರ. ಕುಡ್ಲೆಪ್ಪ ಹೊಲದಿಂದ ಮನೆಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಕಾರ್ ಡಿಕ್ಕಿಯಾಗುತ್ತಿದ್ದಂತೆ ಕೂಡ್ಲೆಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೂಡ್ಲೆಪ್ಪ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೈಕ್ ಅಡ್ಡ ಬಂದಿದ್ದಕ್ಕೆ ಕಾರ್ ಡಿಕ್ಕಿ ಆಯ್ತು: ಚಿದಾನಂದ್ ಸವದಿ

    ಆರೋಪಗಳೆಲ್ಲ ಸುಳ್ಳು:
    ನನ್ನ ವಿರುದ್ಧ ಕೇಳಿ ಬಂದಿರುವ ಎಲ್ಲ ಆರೋಪಗಳು ಸುಳ್ಳು. ಯಾರ ಕೊರಳ ಪಟ್ಟಿಯನ್ನು ನಾವು ಹಿಡಿದಿಲ್ಲ. ಯಾರಿಗೂ ಅವಾಜ್ ಹಾಕಿಲ್ಲ. ಕುಟುಂಬಸ್ಥರ ನಂಬರ್ ಇರಲಿಲ್ಲ ಹಾಗಾಗಿ ಯಾರನ್ನೂ ಸಂಪರ್ಕಿಸಿಲ್ಲ. ಆದ್ರೆ ಕೂಡಲೇ ಕುಟುಂಬಸ್ಥರನ್ನು ಭೇಟಿಯಾಗುತ್ತೇನೆ. ಡ್ರೈವರ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಸದ್ಯ ಅಥಣಿಯಲ್ಲಿದ್ದಾನೆ. ಪೊಲೀಸರ ಮುಂದೆ ಹಾಜರಾಗ್ತಾನೆ. ದೇವರಾಣೆ, ನನ್ನ ವಿರುದ್ಧ ಕೇಳಿ ಬಂದ ಎಲ್ಲ ಆರೋಪಗಳು ಶುದ್ಧ ಸುಳ್ಳು.