Tag: car accident

  • ಪಂತ್ ಹಣೆಗೆ ಸ್ಟಿಚ್ ಹಾಕಲಾಗಿದೆ, ಮೊಣಕಾಲು, ಪಾದ, ಬೆನ್ನಿಗೆ ಗಾಯ – ಭಯಪಡುವ ಅಗತ್ಯವಿಲ್ಲ: ಬಿಸಿಸಿಐ ವರದಿ

    ಪಂತ್ ಹಣೆಗೆ ಸ್ಟಿಚ್ ಹಾಕಲಾಗಿದೆ, ಮೊಣಕಾಲು, ಪಾದ, ಬೆನ್ನಿಗೆ ಗಾಯ – ಭಯಪಡುವ ಅಗತ್ಯವಿಲ್ಲ: ಬಿಸಿಸಿಐ ವರದಿ

    ಮುಂಬೈ: ರಿಷಭ್ ಪಂತ್ (Rishabh Pant) ಹಣೆಗೆ ಎರಡು ಸ್ಟಿಚ್ ಹಾಕಲಾಗಿದೆ. ಅವರ ಬಲ ಮೊಣಕಾಲಿನ ಬಳಿ ಹರಿದ ಗಾಯಗಳಾಗಿದ್ದು, ಮೂಳೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಲ ಮಣಿಕಟ್ಟು, ಪಾದ, ಪಾದದ ಬೆರಳಿಗೆ ಗಾಯವಾಗಿದೆ. ಬೆನ್ನಿನಲ್ಲೂ ಉಚ್ಚಿದಂತಿರುವ ಸುಟ್ಟಗಾಯದಂತಿದ್ದು, ರಿಷಭ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಭಯಪಡುವ ಅಗತ್ಯವಿಲ್ಲ ಎಂದು ಭಾರತೀಯ ನಿಯಂತ್ರಣ ಮಂಡಳಿ (BCCI) ಪಂತ್ ಆರೋಗ್ಯದ ಕುರಿತು ಮಾಧ್ಯಮ ವರದಿ ಬಿಡುಗಡೆಗೊಳಿಸಿದೆ.

    ಉತ್ತರಾಖಂಡದಿಂದ (Uttarakhand) ದೆಹಲಿಗೆ ಪಂತ್ ಹಿಂದಿರುಗುತ್ತಿದ್ದ ವೇಳೆ ಹಮ್ಮದ್‍ಪುರ ಝಾಲ್‍ನ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದ ಪಂತ್ ಗಾಜನ್ನು ಹೊಡೆದುಕೊಂಡು ಹೊರ ಬಂದು ಗ್ರೇಟ್ ಎಸ್ಕೇಪ್ ಆಗಿದ್ದರು. ಕೂಡಲೇ ಪಂತ್‍ರನ್ನು ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದರು. ಇದನ್ನೂ ಓದಿ: ರಕ್ತದ ಮಡುವಿನಲ್ಲಿ ಕಾರಿನ ಗಾಜು ಹೊಡೆದು ಹೊರಬಂದ ಪಂತ್ – ಕಾರಿನಲ್ಲಿದ್ದ ಹಣ ದೋಚಿದ ಕಳ್ಳರು

    ಬಿಸಿಸಿಐ ಮಾಧ್ಯಮ ವರದಿ:
    ಉತ್ತರಾಖಂಡದ ರೂರ್ಕಿ ಬಳಿ ಶುಕ್ರವಾರ ಮುಂಜಾನೆ ಭಾರತದ ವಿಕೆಟ್ ಕೀಪರ್ ರಿಷಭ್‌ ಪಂತ್ ಕಾರು ಅಪಘಾತಕ್ಕೀಡಾಗಿತ್ತು. ಪರಿಣಾಮ ಗಾಯಗೊಂಡ ಪಂತ್‌ ಅವರನ್ನು ಸಕ್ಷಮ್ ಆಸ್ಪತ್ರೆ ಮಲ್ಟಿಸ್ಪೆಷಾಲಿಟಿ ಮತ್ತು ಥರ್ಮಾ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

    ರಿಷಭ್ ಅವರ ಹಣೆಗೆ ಎರಡು ಸ್ಟಿಚ್ ಹಾಕಲಾಗಿದೆ. ಅವರ ಬಲ ಮೊಣಕಾಲಿನ ಬಳಿ ಹರಿದ ಗಾಯಗಳಾಗಿದೆ. ಬಲ ಮಣಿಕಟ್ಟು, ಪಾದ, ಪಾದದ ಬೆರಳಿಗೆ ಗಾಯವಾಗಿದೆ. ಬೆನ್ನಿಗೂ ಉಚ್ಚಿದಂತಿರುವ ಸುಟ್ಟಗಾಯದಂತಿದೆ. ರಿಷಭ್‍ನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಈಗ ಡೆಹ್ರಾಡೂನ್‍ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವೈದ್ಯರ ತಂಡ ಮುಂದಿನ ಚಿಕಿತ್ಸೆಗಾಗಿ MRI ಸ್ಕ್ಯಾನ್‍ಗೆ ಒಳಪಡಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್‌ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

    ಬಿಸಿಸಿಐ, ರಿಷಭ್ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವೈದ್ಯಕೀಯ ತಂಡವು ಪ್ರಸ್ತುತ ರಿಷಭ್‍ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಕ್ಷಣ, ಕ್ಷಣದ ಮಾಹಿತಿ ಪಡೆಯುತ್ತಿದ್ದೇವೆ. ರಿಷಭ್‍ಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಆರೈಕೆಯನ್ನು ನೀಡಲು ಸಹಕರಿಸುತ್ತೇವೆ. ಈ ಆಘಾತದಿಂದ ಹೊರಬರಲು ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತೇವೆ ಎಂದು ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಕ್ತದ ಮಡುವಿನಲ್ಲಿ ಕಾರಿನ ಗಾಜು ಹೊಡೆದು ಹೊರಬಂದ ಪಂತ್ – ಕಾರಿನಲ್ಲಿದ್ದ ಹಣ ದೋಚಿದ ಕಳ್ಳರು

    ರಕ್ತದ ಮಡುವಿನಲ್ಲಿ ಕಾರಿನ ಗಾಜು ಹೊಡೆದು ಹೊರಬಂದ ಪಂತ್ – ಕಾರಿನಲ್ಲಿದ್ದ ಹಣ ದೋಚಿದ ಕಳ್ಳರು

    ಡೆಹ್ರಾಡೂನ್: ಟೀಂ ಇಂಡಿಯಾದ (Team India) ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ರಿಷಭ್ ಪಂತ್ (Rishabh Pant) ಸಂಚರಿಸುತ್ತಿದ್ದ ಕಾರು ಅಪಘಾತಗೊಂಡು ರಕ್ತದ ಮಡುವಿನಲ್ಲಿ ಪಂತ್ ಕಾರಿನ ಗಾಜು ಹೊಡೆದು ಹೊರಬಂದಿದ್ದಾರೆ. ಈ ವೇಳೆ ಅಲ್ಲಿದ್ದ ಸ್ಥಳೀಯ ಕೆಲ ವ್ಯಕ್ತಿಗಳು ಪಂತ್ ಕಾರಿನಲ್ಲಿದ್ದ ಹಣ ದೋಚಿ ಪರಾರಿಯಾಗಿರುವ ಬಗ್ಗೆ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಉತ್ತರಾಖಂಡದಿಂದ (Uttarakhand) ದೆಹಲಿಗೆ ಪಂತ್‌ ಹಿಂದಿರುಗುತ್ತಿದ್ದ ವೇಳೆ ಹಮ್ಮದ್‍ಪುರ ಝಾಲ್‍ನ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದ ಪಂತ್ ಗಾಜನ್ನು ಹೊಡೆದುಕೊಂಡು ಹೊರ ಬಂದಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಪಂತ್ ತಲೆಯಲ್ಲಿ ರಕ್ತ ಸುರಿಯುತ್ತಿದ್ದರೆ, ಬೆನ್ನಿನಲ್ಲಿ ಬೆಂಕಿಯಿಂದ ಸುಟ್ಟ ಗಾಯಗಳಾಗಿದೆ. ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್‌ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

    ಇತ್ತ ಪಂತ್ ನೋವಿನಿಂದ ನರಳುತ್ತಿದ್ದರೆ, ಅತ್ತ ಕಿಡಿಗೇಡಿಗಳು ಪಂತ್ ಕಾರಿನಲ್ಲಿದ್ದ ಹಣವನ್ನು ದೋಚಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರು ಗುದ್ದಿದ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ರಿಷಭ್ ಪಂತ್ ತನ್ನ ತಾಯಿಗೆ ಸರ್ಪ್ರೈಸ್‌ ಕೊಡಬೇಕು, ತಾಯಿಯೊಂದಿಗೆ ಹೊಸ ವರ್ಷದ ಸಂಭ್ರಮ ಕಳೆಯಬೇಕು ಎಂದು ಮರ್ಸಿಡೀಸ್ ಎಎಂಜಿ ಜಿಎಲ್‌ಇ-43 ಕೂಪೆ (Mercedes-AMG GLE43 Coupe) ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ನಿದ್ದೆಗೆ ಜಾರಿದಂತಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಕಾರು ಅಪಘಾತಕ್ಕೀಡಾಗಿದೆ. ಬಳಿಕ ಕಾರಿನ ಕಿಟಕಿ ಗಾಜನ್ನು ಒಡೆದು ಪಂತ್ ಹೊರಗೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಫುಟ್ಬಾಲ್ ಲೆಜೆಂಡ್ ಪೀಲೆ ಇನ್ನಿಲ್ಲ

    https://twitter.com/_sillysoul/status/1608712913405235201

    ಕೂಡಲೇ ಪಂತ್‍ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆ, ಬೆನ್ನು ಹಾಗೂ ಕಾಲಿನ ಭಾಗಕ್ಕೆ ಹೆಚ್ಚಿನ ಗಾಯಗಳಾಗಿದ್ದು ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಾಯಿಗೆ ಸರ್ಪ್ರೈಸ್‌ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

    ತಾಯಿಗೆ ಸರ್ಪ್ರೈಸ್‌ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

    ಡೆಹ್ರಾಡೂನ್: ಟೀಂ ಇಂಡಿಯಾ (Team India) ಸ್ಟಾರ್ ಆಟಗಾರ ರಿಷಭ್ ಪಂತ್ (Rishabh Pant) ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಪಂತ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತನ್ನ ತಾಯಿಯೊಂದಿಗೆ ಹೊಸವರ್ಷ ಆಚರಿಸಲು ತೆರಳುತ್ತಿದ್ದ ವೇಳೆಯೇ ದುರಂತ ಸಂಭವಿಸಿದೆ.

    ಅತೀ ವೇಗವೇ ಅಪಘಾತಕ್ಕೆ ಕಾರಣ: ಉತ್ತರಾಖಂಡದಿಂದ (Uttarakhand) ದೆಹಲಿಗೆ ಹಿಂದಿರುಗುತ್ತಿದ್ದ ವೇಳೆ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ (Car Accident) ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದ್ರೆ ರಾಕೆಟ್ ವೇಗದಲ್ಲಿ ಕಾರು ಚಲಿಸುತ್ತಿದ್ದದ್ದೇ ರಿಷಭ್ ಪಂತ್‌ಗೆ ಮುಳುವಾಯ್ತು ಎಂದು ಹೇಳಲಾಗ್ತಿದೆ. ಅಪಘಾತದ ಸಂದರ್ಭದಲ್ಲಿ ರಿಷಭ್ ಚಲಿಸುತ್ತಿದ್ದ `ಮರ್ಸಿಡೀಸ್ ಎಎಂಜಿ ಜಿಎಲ್‌ಇ-43 ಕೂಪೆ’ (Mercedes-AMG GLE43 Coupe) ಕಾರು ರಾಕೆಟ್ ವೇಗದಲ್ಲಿತ್ತು ಎನ್ನಲಾಗಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ರಿಷಭ್ ಪಂತ್ ತನ್ನ ತಾಯಿಗೆ ಸರ್ಪ್ರೈಸ್‌ ಕೊಡಬೇಕು, ತಾಯಿಯೊಂದಿಗೆ ಹೊಸ ವರ್ಷದ ಸಂಭ್ರಮ ಕಳೆಯಬೇಕು ಎಂದು ಮರ್ಸಿಡೀಸ್ ಎಎಂಜಿ ಜಿಎಲ್‌ಇ-43 ಕೂಪೆ (Mercedes-AMG GLE43 Coupe) ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ನಿದ್ರೆ ಮಾಡುವಂತಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಕಾರು ಅಪಘಾತಕ್ಕಿಡಾಗಿದೆ. ಬಳಿಕ ಕಾರಿನ ಕಿಟಕಿ ಗಾಜನ್ನು ಒಡೆದು ಪಂತ್ ಹೊರಗೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಅವರನ್ನು ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆ, ಬೆನ್ನು ಹಾಗೂ ಕಾಲಿನ ಭಾಗಕ್ಕೆ ಗಾಯಗಳಾಗಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾರೆ. ಗಂಭೀರ ಸ್ಥಿತಿ ಎದುರಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಭೀಕರ ಕಾರು ಅಪಘಾತ- ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಸ್ಥಿತಿ ಗಂಭೀರ

    ಅಭಿಮಾನಿಗಳ ಆಕ್ರಂದನ: ಕಾರು ಅಪಘಾತಕ್ಕೀಡಾಗಿರುವ ರಿಷಭ್ ಪಂತ್ ಶೀಘ್ರವೇ ಗುಣಮುಖರಾಗುವಂತೆ ಅಭಿಮಾನಿಗಳು ಅಲವತ್ತುಕೊಂಡಿದ್ದಾರೆ. ಜಾಲತಾಣದಲ್ಲಿ ಪಂತ್ ಅವರ ಭಾವಚಿತ್ರವನ್ನು ಹಂಚಿಕೊಂಡಿದ್ದು, ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಫುಟ್ಬಾಲ್ ಲೆಜೆಂಡ್ ಪೀಲೆ ಇನ್ನಿಲ್ಲ

    Live Tv
    [brid partner=56869869 player=32851 video=960834 autoplay=true]

  • ಭೀಕರ ಕಾರು ಅಪಘಾತ- ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಸ್ಥಿತಿ ಗಂಭೀರ

    ಭೀಕರ ಕಾರು ಅಪಘಾತ- ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಸ್ಥಿತಿ ಗಂಭೀರ

    ಡೆಹ್ರಾಡೂನ್: ಟೀಂ ಇಂಡಿಯಾ (Team India) ಆಟಗಾರ ರಿಷಭ್ ಪಂತ್ (Rishabh Pant) ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು (Car Accident) ಪಂತ್ ಸ್ಥಿತಿ ಗಂಭೀರವಾಗಿದೆ.

    ದೆಹಲಿಯಿಂದ ಉತ್ತರಾಖಂಡದಲ್ಲಿರುವ (Uttarakhand) ತಮ್ಮ ನಿವಾಸಕ್ಕೆ ಹಿಂದಿರುಗುತ್ತಿದ್ದ ವೇಳೆ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ಲಾಸ್ಟಿಕ್ ಸರ್ಜರಿಯ (Plastic Surgery) ಅವಶ್ಯಕತೆ ಇರುವುದಾಗಿ ವರದಿಯಾಗಿದೆ.

    ರಿಷಭ್ ಪಂತ್ ಅವರ ತಲೆ (ಹಣೆಯ ಭಾಗ), ಬೆನ್ನು, ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಸಕ್ಷಮ್ ಆಸ್ಪತ್ರೆಯ ಅಧ್ಯಕ್ಷ ಡಾ. ಸುಶೀಲ್ ನಗರ್ ತಿಳಿಸಿದ್ದಾರೆ. ಇದನ್ನೂ ಓದಿ: ಟಿ20ಗೆ ಪಾಂಡ್ಯ ನಾಯಕ, ಸೂರ್ಯ ಉಪನಾಯಕ – ಟೀಂ ಇಂಡಿಯಾದಲ್ಲಿ ಪಂತ್‍ಗಿಲ್ಲ ಸ್ಥಾನ

    ಪ್ರತ್ಯಕ್ಷದರ್ಶಿಗಳ ಪ್ರಕಾರ, ರಿಷಭ್ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿದೆ. ನಂತರ ಹರಸಾಹಸ ಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಇದನ್ನೂ ಓದಿ: ಆರ್‌ಎಸ್‍ಎಸ್ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತಿದೆ: ರವೀಂದ್ರ ಜಡೇಜಾ

    ಸತತ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ರಿಷಭ್ ಬಾಂಗ್ಲಾದೇಶದ (Bangladesh) ಟೆಸ್ಟ್ ಸರಣಿಯಲ್ಲಿ ಸಮಾಧಾನಕರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಸಂಚರಿಸುತ್ತಿದ್ದ ಕಾರು ಅಪಘಾತ

    ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಸಂಚರಿಸುತ್ತಿದ್ದ ಕಾರು ಅಪಘಾತ

    ಮೈಸೂರು: ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಹೋದರ ಪ್ರಹ್ಲಾದ್ ಮೋದಿ (Prahlad Modi) ಅವರಿದ್ದ ಕಾರು ಅಪಘಾತಕ್ಕೀಡಾಗಿರುವ (Car Accident) ಘಟನೆ ಮೈಸೂರು (Mysuru) ತಾಲೂಕಿನ ಕಡಕೊಳ ಬಳಿ ನಡೆದಿದೆ.

    ಮರ್ಸಿಡಿಸ್ ಬೆಂಜ್ ಕಾರಿನಲ್ಲಿದ್ದ ಪ್ರಹ್ಲಾದ್ ಮೋದಿ ಪುತ್ರ ಹಾಗೂ ಸೊಸೆಗೆ ಗಂಭೀರ ಗಾಯಗಳಾಗಿವೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಮೈಸೂರು ಎಸ್​ಪಿ ಸೀಮಾ ಲಾಟ್ಕರ್ ಭೇಟಿ ನೀಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬೇಲಿ ಹಾರಿ ಜನರ ಮೇಲೆ ಚಿರತೆ ದಾಳಿ – 25 ಗಂಟೆಯಲ್ಲಿ 15 ಜನರಿಗೆ ಗಾಯ

    ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ಮೋದಿ (70), ಪ್ರಹ್ಲಾದ್ ಮೋದಿ ಪುತ್ರ ಮೆಹೂಲ್ ಪ್ರಹ್ಲಾದ್ ಮೋದಿ (40), ಸೊಸೆ ಜಿಂದಾಲ್ ಮೋದಿ (35) ಹಾಗೂ ಮೊಮ್ಮಗ ಮಾಸ್ಟರ್ ಮೆಹತ್ ಮೆಹೋಲ್‌ ಮೋದಿ (06) ಹಾಗೂ ಕಾರು ಚಾಲಕ ಸತ್ಯನಾರಾಯಣ ಚಾಲಕ (46) ಬಂಡೀಪುರಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಬೇಲಿ ಹಾರಿ ಜನರ ಮೇಲೆ ಚಿರತೆ ದಾಳಿ – 25 ಗಂಟೆಯಲ್ಲಿ 15 ಜನರಿಗೆ ಗಾಯ

    ಅಪಘಾತದಲ್ಲಿ ಮೋದಿ ಸಹೋದರನ ಮೊಮ್ಮಗನ ಕಾಲಿಗೆ ಹಾಗೂ ಪ್ರಹ್ಲಾದ್‌ ಮೋದಿಗೆ ಮುಖದ ಬಳಿ ಗಾಯವಾಗಿದೆ. ಉಳಿದ ಯಾರಿಗೂ ದೊಡ್ಡ ಪ್ರಮಾಣದಲ್ಲಿ ಗಾಯಗಳಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಜೆಎಸ್‌ಎಸ್‌ ಆಸ್ಪತ್ರೆಯ ವೈದ್ಯ ಡಾ.ಮಧು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.


    ಸಿಎಂ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳದಲ್ಲೇ ಇದ್ದು ಸನ್ನಿವೇಶ ಗಮನಿಸುತ್ತಿದ್ದಾರೆ. ವೈದ್ಯರಿಂದ ಚಿಕಿತ್ಸೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಮಗನ ಕಾರು ಅಪಘಾತಕ್ಕೆ ‘ಬುಧ ಭಕ್ತಿ’ ಕಾರಣ ಎಂದ ಜಗ್ಗೇಶ್

    ನನ್ನ ಮಗನ ಕಾರು ಅಪಘಾತಕ್ಕೆ ‘ಬುಧ ಭಕ್ತಿ’ ಕಾರಣ ಎಂದ ಜಗ್ಗೇಶ್

    ಟ ಜಗ್ಗೇಶ್ ಅವರ ಪುತ್ರ ಯತೀಶ್ ಕಾರು ಆಕ್ಸಿಡೆಂಟ್ ಪ್ರಕರಣ ಸಖತ್ ಸುದ್ದಿ ಮಾಡಿತ್ತು. ಕಾರು ಅಪಘಾತ ಮಾಡಿಕೊಂಡಿದ್ದ ಯತೀಶ್ ಅಂದು ವರ್ತಿಸಿದ ರೀತಿ ಟ್ರೋಲ್ ಕೂಡ ಆಗಿತ್ತು. ಮತ್ತೆ ರಿಪೇರಿ ಆಗದೇ ಇರುವಷ್ಟು ಕಾರು ಕೂಡ ಡ್ಯಾಮೇಜ್ ಆಗಿತ್ತು. ಈ ಕುರಿತು ಮೊದಲ ಬಾರಿಗೆ ಜಗ್ಗೇಶ್ ಘಟನೆಯ ಕುರಿತು ಮಾತನಾಡಿದ್ದಾರೆ. ಅಂದು ನಡೆದ ಕಾರು ಅಪಘಾತಕ್ಕೆ ಕಾರಣ ಏನು ಎನ್ನುವುದನ್ನು ಜಗ್ಗೇಶ್ ತಿಳಿಸಿದ್ದಾರೆ.

    ಜಗ್ಗೇಶ್ ಸಹೋದರ ಕೋಮಲ್ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗುತ್ತಿರುವ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಜಗ್ಗೇಶ್, ‘ನನ್ನ ಮಗನಿಗೆ ಬುಧಭುಕ್ತಿ ಇತ್ತು. ಹಾಗಾಗಿ ಹುಷಾರಿಂದ ಇರುವಂತೆ ಅವನಿಗೆ ಹೇಳಿದ್ದೆ. ಕೋವಿಡ್ ಸಂದರ್ಭಲ್ಲಿ ಯತೀಶ್ ಎಲ್ಲಿಯೂ ಹೋಗುತ್ತಿರಲಿಲ್ಲ. ಭಯದಿಂದ ಮನೆಯಲ್ಲೇ ಇರುತ್ತಿದ್ದ. ಅವತ್ತು ಎ.ಆರ್.ಬಾಬು ಪುತ್ರನಿಗೆ ಕಾಲ್ ಮಾಡಿ, ಬಿರಿಯಾನಿ ಮಾಡಿಸು ಎಂದು ಹೇಳಿ ಹೊರಟ. ಬುಧಭುಕ್ತಿ ಇರುವ ಕಾರಣಕ್ಕಾಗಿಯೇ ಕಾರು ಅಪಘಾತ ಆಯಿತು’ ಎಂದು ಜಗ್ಗೇಶ್ ಮಾತನಾಡಿದ್ದಾರೆ. ಇದನ್ನೂ ಓದಿ:‘ಲೈಗರ್’ ಸಿನಿಮಾಗೆ ಹಣ ಎಲ್ಲಿಂದ ಬಂತು?: ನಟಿ, ನಿರ್ದೇಶಕನಿಗೆ ‘ಇಡಿ’ ಗ್ರಿಲ್

    ‘ಕೋಮಲ್ ಗೆ ಕೇತುದೆಸೆ ಇತ್ತು. ಈ ವೇಳೆಯಲ್ಲಿ ಏನೇ ಕೆಲಸ ಮಾಡಿದರೂ, ಅದರಲ್ಲಿ ಯಶಸ್ಸು ಕಾಣುವುದಿಲ್ಲೆ ಎ‍ನ್ನುವುದು ಗೊತ್ತಿತ್ತು. ಹಾಗಾಗಿ ನಾನೇ ಸಿನಿಮಾ ಮಾಡಬೇಡ ಅಂತ ಕೋಮಲ್ ಗೆ ಹೇಳಿದ್ದೆ. ಇದೀಗ ಕೇತುದೆಸೆ ಕಳೆದಿದೆ. ಇನ್ಮುಂದೆ ಕೋಮಲ್ ಸಿನಿಮಾಗಳು ಹಿಟ್ ಆಗುತ್ತವೆ. ಸಿನಿಮಾ ರಂಗದಲ್ಲಿ ಮತ್ತೆ ಕೋಮಲ್ ಅಗಾಧವಾಗಿ ಬೆಳೆಯುತ್ತಾರೆ ಎಂದು ತಮ್ಮನ ಬಗ್ಗೆ ಮಾತನಾಡಿದರು ಜಗ್ಗೇಶ್.

    ಕೋಮಲ್ ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರುವುದು ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ಆಗಿದೆ. ಅಲ್ಲದೇ, ಕೋಮಲ್ ನಟನೆಯ ನಮೋ ಭೂತಾತ್ಮ ಸಿನಿಮಾ ಭಾಗ 2 ಆಗಿ ಮೂಡಿ ಬರಲಿದೆಯಂತೆ. ಅಲ್ಲದೇ, ಕೋಮಲ್ ಗೆ ಸಿನಿಮಾ ಮಾಡಲು  ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ. ಕೋಮಲ್ ಮತ್ತೆ ಸಿನಿಮಾ ರಂಗದಲ್ಲಿ ಬ್ಯುಸಿ ಆಗುವುದರಲ್ಲಿ ಅನುಮಾನವಿಲ್ಲ ಅಂತಾರೆ ಜಗ್ಗೇಶ್.

    Live Tv
    [brid partner=56869869 player=32851 video=960834 autoplay=true]

  • ಚಂದ್ರಶೇಖರ್ ಸಾವಿನ ಪ್ರಕರಣ- ಇಂದು ಹೊರಬೀಳುತ್ತಾ ಪೋಸ್ಟ್‌ ಮಾರ್ಟಂ ರಿಪೋರ್ಟ್?

    ಚಂದ್ರಶೇಖರ್ ಸಾವಿನ ಪ್ರಕರಣ- ಇಂದು ಹೊರಬೀಳುತ್ತಾ ಪೋಸ್ಟ್‌ ಮಾರ್ಟಂ ರಿಪೋರ್ಟ್?

    ದಾವಣಗೆರೆ: ಶಾಸಕ ರೇಣುಕಾಚಾರ್ಯ (Renukacharya) ಸಹೋದರನ ಪುತ್ರನ ಸಾವು ನಾನಾ ಅನುಮಾನಗಳನ್ನು ಹುಟ್ಟಿಹಾಕಿವೆ. ಅದರಲ್ಲಿ ಆತನ ಸಾವು ಆತ್ಮಹತ್ಯೆಯೋ, ಕೊಲೆಯೋ, ಇಲ್ಲ ಆಕ್ಸಿಡೆಂಟ್ ಎನ್ನುವ ಪ್ರಶ್ನೆಗಳೇ ಹೆಚ್ಚು, ಆದರೆ ರೇಣುಕಾಚಾರ್ಯ ಸೇರಿದಂತೆ ಅವರ ಕುಟುಂಬಸ್ಥರು ಇದೊಂದು ಪೂರ್ವನಿಯೋಜಿತ ಕೊಲೆ ಎಂದು ಆರೋಪ ಮಾಡಿದ್ದಾರೆ. ಏನೇ ಆಗಲಿ ವರದಿ ಬಂದ ನಂತರ ಸತ್ಯಾಸತ್ಯತೆ ತಿಳಿಯಲಿದ್ದು. ಇಂದು ವರದಿ ಬರುವ ಸಾಧ್ಯತೆ ಇದ್ದು, ಏನಾದ್ರು ಅಪಘಾತ ಬಂತು ಎಂದರೆ ಹೆಚ್ಚಿನ ತನಿಖೆಗೆ ಒತ್ತಾಯಿಸುವ ಸಾಧ್ಯತೆ ಹೆಚ್ಚಿದೆ.

    ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರು (Chandrashekhar) ಸಾವಿನ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಚಂದ್ರು ಸಾವಿಗೆ ನಿಖರವಾದ ಕಾರಣ ಇಂದು ಹೊರಬೀಳುವ ಸಾಧ್ಯತೆ ಇದೆ. ಈಗಾಗ್ಲೇ ಇದು ಕೊಲೆಯಲ್ಲ, ಅಪಘಾತದಿಂದ ಉಂಟಾದ ಸಾವು ಎಂಬುದು ಪೊಲೀಸ್ ಹಾಗೂ ಎಫ್‍ಎಸ್‍ಎಲ್ (FSL) ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗುತ್ತಿದೆ. ಆದರೆ ರೇಣುಕಾಚಾರ್ಯ ಕುಟುಂಬಸ್ಥರು ಮಾತ್ರ ಇದೊಂದು ಪೂರ್ವನಿಯೋಜಿತ ಕೊಲೆ ಅಂತ ಆರೋಪ ಮಾಡಿರೋದೇ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿರೋದು. ಇಂದು ಚಂದ್ರು ಪೋಸ್ಟ್‍ಮಾರ್ಟ್‍ಂ ವರದಿ ಹಾಗೂ ಎಫ್‍ಎಸ್‍ಎಲ್ ರಿಪೋರ್ಟ್ ಪೊಲೀಸರ ಕೈ ಸೇರುವ ಸಾಧ್ಯತೆ ಇದೆ. ಇದನ್ನೂ ಓದಿ: ಚಂದ್ರು ದೇಹದಲ್ಲಿ ಒಳ ಉಡುಪು ಇರಲಿಲ್ಲ – ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದ್ರಾ ಯುವ ನಾಯಕ?

    ಈಗಾಗಲೇ ಘಟನೆ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆ (Honnalli Police Station) ಯಲ್ಲಿ 302 ಹಾಗೂ 201 ಕೇಸ್ ಕೂಡ ದಾಖಲಾಗಿದೆ. ಚಂದ್ರುವಿನ ಕೊಲೆಯಾಗಿದೆ, ಅಲ್ಲದೆ ಆತನನ್ನು ಕೊಲೆ ಮಾಡಿ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇತ್ತ ಎಫ್‍ಎಸ್‍ಎಲ್ ಅಧಿಕಾರಿಗಳ ಎರಡು ತಂಡ ಅಪಘಾತ ನಡೆದ ಹೊನ್ನಾಳಿ ಬಳಿ ಇರುವ ತುಂಗಾ ಮೇಲ್ದಂಡೆ ಕಾಲುವೆ ಬಳಿ ಪರಿಶೀಲನೆ ಮಾಡಿ ಎವಿಡೆನ್ಸ್ ಕಲೆಕ್ಟ್ ಮಾಡಿದ್ದಾರೆ. ಪೊಲೀಸರು ಕೂಡ ಟೆಕ್ನಿಕಲ್ ಎವಿಡೆನ್ಸ್ ಕೂಡ ಕಲೆಕ್ಟ್ ಮಾಡಿಲಾಗಿದ್ದು, ಇದೊಂದು ಅಪಘಾತ, ಓವರ್ ಸ್ಪೀಡ್‍ನಲ್ಲಿ ಬಂದ ಹಿನ್ನೆಲೆ ಚಾನಲ್ ನಲ್ಲಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

    ಶಾಸಕ ರೇಣುಕಾಚಾರ್ಯ ಮಾತ್ರ ಇದೊಂದು ಪ್ರೀ ಪ್ಲಾನ್ ಮರ್ಡರ್ ಎಂದು ಆರೋಪ ಮಾಡುತ್ತಿದ್ದಾರೆ. ಎಡಿಜಿಪಿ ಅಲೋಕ್ ಕುಮಾರ್ ಇದನ್ನು ಅಪಘಾತ ಎಂದು ಪರಿಗಣಿಸಿದ್ದು, ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ತನಿಖೆ ನಡೆಸುವವರು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಅದನ್ನು ಬಿಟ್ಟು ತನಿಖೆ ಪ್ರಗತಿಯಲ್ಲಿ ಇರುವಾಗ ಮಾಧ್ಯಮಗಳ ಮುಂದೆ ಇದೊಂದು ಅಪಘಾತ ಆಗಿರಬಹುದು ಎಂದು ಹೇಳಿದ್ದಾರೆ. ಇದರಿಂದ ಆರೋಪಿಗಳನ್ನು ತಪ್ಪಿಸುವ ಕೆಲಸ ಮಾಡುತ್ತಿದ್ದರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಅಪಘಾತ ಎಂದು ಬಂದರೆ, ಉನ್ನತ ತನಿಖೆಗೆ ಒತ್ತಾಯಿಸುವ ಎಲ್ಲಾ ಸಿದ್ಧತೆಯನ್ನು ರೇಣುಕಾಚಾರ್ಯ ಕುಟುಂಭಸ್ಥರು ಹಾಗೂ ಅವರ ಆಪ್ತರು ಮಾಡಿಕೊಂಡಿದ್ದಾರೆ.

    ಒಟ್ಟಾರೆಯಾಗಿ ಚಂದ್ರು ಸಾವಿಗೆ ಕಾರಣ ಏನು ಎಂಬುದು ಪೋಸ್ಟ್ ಮಾರ್ಟಂ ವರದಿ ಬಂದ ನಂತರ ಗೊತ್ತಾಗಲಿದೆ. ಇಂದು ಸಂಜೆಯೊಳಗೆ ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈ ಸೇರೋ ಸಾಧ್ಯತೆ ಇದೆ. ಅ ವರದಿಯ ಮೇಲೆ ರೇಣುಕಾಚಾರ್ಯರ ನಡೆ ತೀರ್ಮಾನಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಚಂದ್ರು ಕಾರು ಅಪಘಾತ ಆಗಿರೋದು ನಿಜ: FSL ತಜ್ಞ

    ಚಂದ್ರು ಕಾರು ಅಪಘಾತ ಆಗಿರೋದು ನಿಜ: FSL ತಜ್ಞ

    ಬೆಂಗಳೂರು/ದಾವಣಗೆರೆ: ಹೊನ್ನಾಳಿ ಚಂದ್ರಶೇಖರ್ (Honnalli Chandrashekhar) ನಿಗೂಢ ಸಾವಿನ ಪ್ರಕರಣ ಮತ್ತಷ್ಟು ಕಂಗಟ್ಟಾಗಿ ಮುಂದುವರಿದಿದೆ. ಇದು ಅಪಘಾತವೋ.. ಕೊಲೆಯೋ..? ಅನ್ನೋ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸ್ತಿದ್ದಾರೆ.

    ಚಂದ್ರಶೇಖರ್ ಕಾರು (Car) ಪತ್ತೆಯಾಗಿದ್ದ ದಾವಣಗೆರೆಯ ನ್ಯಾಮತಿ-ಹೊನ್ನಾಳಿ ಮಾರ್ಗದ ಸೊರಟೂರಿನ ತುಂಗಾ ಮೇಲ್ದಂಡೆ ಕಾಲುವೆ ಬಳಿ ಪೊಲೀಸರು ಮರುಸೃಷ್ಠಿ ನಡೆಸಿದರು. ಖಾಸಗಿ ವಿಧಿ ವಿಜ್ಞಾನ ತಜ್ಞರಾದ ಡಾ. ಫಣೀಂದ್ರ ಅವರು ಸ್ಥಳಕ್ಕೆ ಭೇಟಿ ಕೊಟ್ಟು ಮರುಸೃಷ್ಠಿ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಕೆಲವೊಂದು ಮಾಹಿತಿಯನ್ನು ಕೊಟ್ಟಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಖಾಸಗಿ ವಿಧಿ ವಿಜ್ಞಾನತಜ್ಞರಾದ ಡಾ. ಫಣೀಂದ್ರ, ಚಂದ್ರಶೇಖರ್ ಕಾರ್ ಅಪಘಾತ ಆಗಿರೋದು ನಿಜ. ಆದರೆ ಸಾವು ಅಪಘಾತಕ್ಕೋ.. ಮತ್ಯಾವುದಕ್ಕೆ ಆಗಿದೆ ಅನ್ನೋದು ತನಿಖೆಯಲ್ಲಿ ಗೊತ್ತಾಗಬೇಕು ಅಂತಿದ್ದಾರೆ. ಇದನ್ನೂ ಓದಿ: ನನ್ನ ಮಗನ ಮರ್ಮಾಂಗ ಊದಿಕೊಂಡಿತ್ತು, ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ- ಮೃತ ಚಂದ್ರು ತಂದೆ ಗಂಭೀರ ಆರೋಪ

    100-120 ಕಿ.ಮೀ. ಸ್ಪೀಡ್‍ನಲ್ಲಿ ಕಾರ್ ಡ್ರೈವಿಂಗ್ ಮಾಡಲಾಗಿದೆ. ಚಂದ್ರು ಕಾರ್ ಟೈಯರ್ ಸ್ಫೋಟವಾಗಿದೆ. ಈ ವೇಳೆ ಮೊದಲು ಮೈಲುಗಲ್ಲಿಗೆ ಡಿಕ್ಕಿ ಹೊಡೆದು ನಂತರ ಕಾರಿನ ನಿಯಂತ್ರಣ ತಪ್ಪಿದೆ. ಸ್ಪೀಡ್ ಲಿಮಿಟ್ ಕಟ್ ಆದ ಬಳಿಕ ಕಾಂಕ್ರೀಟ್‍ನ ಹಂಪ್‍ಗೆ ಡಿಕ್ಕಿಯಾಗಿದೆ. ಬಳಿಕ ಕಾಲುವೆ ತಡೆಗೋಡೆಗೆ ಡಿಕ್ಕಿ ಹೊಡೆದು ನಾಲೆಗೆ ಕಾರು ಬಿದ್ದಿದೆ. ಕಾರಿನಲ್ಲಿ ಸಾಕಷ್ಟು ದೊಡ್ಡ ಡ್ಯಾಮೇಜ್ ಆಗಿದ್ದು, ಕಾರ್ ನಿಯಂತ್ರಣ ತಪ್ಪಿದ್ದರಿಂದ ಹಿಂಬದಿಗೂ ಡ್ಯಾಮೇಜ್ ಆಗಿದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ನನ್ನ ಮಗನ ಮರ್ಮಾಂಗ ಊದಿಕೊಂಡಿತ್ತು, ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ- ಮೃತ ಚಂದ್ರು ತಂದೆ ಗಂಭೀರ ಆರೋಪ

    ನನ್ನ ಮಗನ ಮರ್ಮಾಂಗ ಊದಿಕೊಂಡಿತ್ತು, ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ- ಮೃತ ಚಂದ್ರು ತಂದೆ ಗಂಭೀರ ಆರೋಪ

    ದಾವಣಗೆರೆ: ನನ್ನ ಮಗನ  ಮರ್ಮಾಂಗ ಊದಿಕೊಂಡಿತ್ತು, ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ. ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ ಎಂದು ಮೃತ ಚಂದ್ರಶೇಖರ್ (Chandrashekhar) ತಂದೆ ಎಂ.ಪಿ ರಮೇಶ್ (MP Rameh) ಗಂಭೀರ ಆರೋಪ ಮಾಡಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಮಗನನ್ನು ಪ್ರೀ ಪ್ಲಾನ್ ಮಾಡಿ ಕೊಲೆ ಮಾಡಿದ್ದಾರೆ. ಆದರೆ ತನಿಖೆ ನಡೆಸುತ್ತಿದ್ದ ಪೊಲೀಸರು ಶುದ್ಧ ಸುಳ್ಳು ಹೇಳುತ್ತಿದ್ದಾರೆ. ನನ್ನ ಮಗನದ್ದು ವ್ಯವಸ್ಥಿತವಾಗಿ ಕೊಲೆ ಆಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ನನ್ನ ಮಗನ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ: ರೇಣುಕಾಚಾರ್ಯ ಅನುಮಾನ

    ಮನೆಯಿಂದ ಹೋಗುವಾಗ ಒಳ ಉಡುಪು(ಚಡ್ಡಿ) ಇತ್ತು. ಆದರೆ ಮರಣೋತ್ತರ ಪರೀಕ್ಷೆ ಮಾಡುವಾಗ ಒಳ ಉಡುಪು ಇರಲಿಲ್ಲ. ಅಲ್ಲದೆ ಆತನ ಮರ್ಮಾಂಗ ಬಾತುಕೊಂಡಿತ್ತು, ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ. ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ. ಕಾರ್ ಹಿಂಭಾಗದ ಇಂಡಿಕೇಟರ್ ಸಹ ಒಡೆಯದೇ ಕೇವಲ ಹಿಂಭಾಗ ಮಾತ್ರ ಗುದ್ದಿರುವ ಹಾಗೇ ಕಾರು ಸಿಕ್ಕಿದೆ. ಬೇರೆ ಕಡೆ ಚಿತ್ರ ಹಿಂಸೆ ಕೊಟ್ಟು ಕೊಲೆ ಮಾಡಿ ಹಾಕಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ನನ್ನ ಮಗನಿಗೆ ಮಚ್ಚಿನಿಂದ ತಲೆ, ಬೆನ್ನಿಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ: ರೇಣುಕಾಚಾರ್ಯ

    ಗೌರಿಗದ್ದೆ ಗುರೂಜಿ (Vinay Guruji) ಹೇಳಿಕೆಗೂ ಚಂದ್ರು ಸ್ನೇಹಿತ ಕಿರಣ್ (Kiran) ಹೇಳಿಕೆಗೂ ಸಾಕಷ್ಟು ಗೊಂದಲ ಇದೆ. ಕಿರಣ್ ನೋಡಿದರೆ ಕ್ರೇಟಾ ಕಾರ್ ನಲ್ಲಿ ಆಶ್ರಮಕ್ಕೆ ಹೋಗಿದ್ದೆವು ಎಂದು ಹೇಳುತ್ತಾರೆ. ಗುರೂಜಿ ಮಾತ್ರ ಬೇರೆ ಕಾರಿನಲ್ಲಿ ಬಂದಿದ್ದರು ಎಂದು ಹೇಳುತ್ತಾರೆ. ಹೀಗೆ ಹಲವು ಗೊಂದಲದ ಹೇಳಿಕೆಗಳನ್ನು ಇಬ್ಬರು ಹೇಳುತ್ತಿದ್ದಾರೆ. ಪೋಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂದರು.

    ನಮ್ಮ ಕಾರ್ಯಕರ್ತರೇ ಚಂದ್ರು ಕಾರನ್ನು ಪತ್ತೆ ಹಚ್ಚಿದ್ದು. ಪೊಲೀಸರು ಪ್ರಕರಣ ಪತ್ತೆ ಹಚ್ಚಿಲ್ಲ. ಯಾರದ್ದೋ ಪ್ರಭಾವಕ್ಕೆ ಒಳಗಾಗಿ ಪ್ರಕರಣದ ದಾರಿ ತಪ್ಪಿಸುತ್ತಿದ್ದಾರೆ. ಪ್ರಕರಣ ತನಿಖೆ ನಡೆಸಿ ಆರೋಪಿಗಳನ್ನ ಪತ್ತೆ ಹಚ್ಚಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಹೊನ್ನಾಳಿ ಚಂದ್ರು ಸಾವಿನ ಸುತ್ತ 5 ಅನುಮಾನ

    Live Tv
    [brid partner=56869869 player=32851 video=960834 autoplay=true]

  • ನಟಿ ರಂಭಾ ಕಾರು ಭೀಕರ ಅಪಘಾತ : ರಂಭಾ ಪುತ್ರಿಗೆ ತೀವ್ರ ಗಾಯ

    ನಟಿ ರಂಭಾ ಕಾರು ಭೀಕರ ಅಪಘಾತ : ರಂಭಾ ಪುತ್ರಿಗೆ ತೀವ್ರ ಗಾಯ

    ನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ನಟಿಸಿರುವ ನಟಿ ರಂಭಾ (Rambha) ಅವರ ಕಾರಿಗೆ ಭೀಕರ ಅಪಘಾತವಾಗಿದ್ದು (Car Accident)  ರಂಭಾ ಪುತ್ರಿ ಸಾಶಾ (Sasha) ತೀವ್ರ ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ರಂಭಾಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಯ ನಂತರ ಅವರು ಮನೆಗೆ ವಾಪಸ್ಸಾಗಿದ್ದಾರೆ. ಆದರೆ, ಮಗಳಿಗೆ ಮಾತ್ರ ಇನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

    ರಂಭಾ ಮತ್ತು ಪತಿ ಇಂದ್ರಕುಮಾರ್ ಪದ್ಮನಾಥನ್ (Indrakumar Padmanathan) ಕೆನಡಾದ ಒಂಟಾರಿಯೊ ಪ್ರಾಂತ್ಯದ ರಾಜಧಾನಿ ಟೊರೊಂಟೊ (Toronto)ದಲ್ಲಿ ನೆಲೆಸಿದ್ದಾರೆ.  ಈ ದಂಪತಿಗೆ ಇಬ್ಬರು ಪುತ್ರಿಯರಿದ್ದು, ಓರ್ವ ಪುತ್ರನಿದ್ದಾನೆ. ಟೊರೊಂಟೊದಲ್ಲೇ ಅವರು ಮಕ್ಕಳಿಗೆ ಶಿಕ್ಷಣ ಕೂಡ ಕೊಡಿಸುತ್ತಿದ್ದಾರೆ. ಶಾಲೆ ಮುಗಿಸಿಕೊಂಡು ಮಕ್ಕಳನ್ನು ಕರೆತರುವಾಗ ಕಾರು ಅಪಘಾತಕ್ಕೀಡಾಗಿದೆ. ರಂಭಾ ಚಲಾಯಿಸುತ್ತಿದ್ದ ಕಾರು ಬಲ ಬದಿಯಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

    ರಂಭಾ ಚಲಾಯಿಸುತ್ತಿದ್ದ ಕಾರಿನಲ್ಲಿ ಇಬ್ಬರು ಮಕ್ಕಳು ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಿರುವ ಕೆಲಸದಾಕೆ ಇದ್ದರು ಎಂದು ಹೇಳಲಾಗುತ್ತಿದ್ದು, ಕಿರಿಯ ಪುತ್ರಿ ಸಾಶಾಗೆ ತೀವ್ರ ಗಾಯಗಳಾಗಿದ್ದು, ಉಳಿದಂತೆ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಈ ಎಲ್ಲ ವಿವರಗಳನ್ನು ಸ್ವತಃ ರಂಭಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]