Tag: car accident

  • ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಕಾರು ಅಪಘಾತ

    ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಕಾರು ಅಪಘಾತ

    ರಾಯಚೂರು: ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ್ (Karemma Nayak) ಕಾರು ಅಪಘಾತವಾಗಿರುವ ಘಟನೆ ಲಿಂಗಸುಗೂರು ತಾಲೂಕಿನ ಗುರಗುಂಟಾ ಪಟ್ಟಣದಲ್ಲಿ ನಡೆದಿದೆ.

    ದೇವದುರ್ಗದಿಂದ ಹುಬ್ಬಳ್ಳಿಗೆ ಹೊರಟಿದ್ದ ವೇಳೆ ಅಪಘಾತವಾಗಿದೆ. ಶಾಸಕಿಗೆ ಸಣ್ಣಪುಟ್ಟ ಒಳಪೆಟ್ಟು ಬಿದ್ದಿದ್ದು, ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದನ್ನೂ ಓದಿ: ಶಾಸಕರಿಗೆ ತಾಳ್ಮೆ ಇಲ್ಲ, ಕಾರ್ಯಕ್ರಮ ಹಾಳು ಮಾಡಲು ಬಂದಿದ್ದಾರೆ: ಮುನಿರತ್ನ ವಿರುದ್ಧ ಡಿಕೆಶಿ ಕಿಡಿ

    ತಮ್ಮದೇ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಹುಬ್ಬಳ್ಳಿಗೆ ಮೂರು ಕಾರುಗಳು ಹೊರಟಿದ್ದವು. ಮೂರು ಕಾರುಗಳ ಪೈಕಿ ನಡುವಿನ ಕಾರಿನಲ್ಲಿ ಶಾಸಕಿ ಇದ್ದರು. ತಮ್ಮದೇ ಕಾರ್ಯಕರ್ತರೊಂದಿಗೆ ಹುಬ್ಬಳ್ಳಿಗೆ ತೆರಳುತ್ತಿದ್ದ ವೇಳೆ ಅವಘಡ ನಡೆದಿದೆ.

  • BMW ಕಾರು ಅಪಘಾತಕ್ಕೆ ಹಣಕಾಸು ಸಚಿವಾಲಯದ ಅಧಿಕಾರಿ ಬಲಿ – 24 ಗಂಟೆಗಳಲ್ಲಿ ಚಾಲಕ ಅರೆಸ್ಟ್‌

    BMW ಕಾರು ಅಪಘಾತಕ್ಕೆ ಹಣಕಾಸು ಸಚಿವಾಲಯದ ಅಧಿಕಾರಿ ಬಲಿ – 24 ಗಂಟೆಗಳಲ್ಲಿ ಚಾಲಕ ಅರೆಸ್ಟ್‌

    – ದೆಹಲಿಯ ಕರ್ನಾಟಕ ಭವನದಲ್ಲಿ ಊಟ ಮುಗಿಸಿ ಮನೆಗೆ ತೆರಳುವಾಗ ದುರಂತ

    ನವದೆಹಲಿ: ಬಿಎಂಡಬ್ಲ್ಯೂ ಕಾರು ಡಿಕ್ಕಿಯಾಗಿ (BMW Car Hit) ಹಣಕಾಸು ಸಚಿವಾಲಯದ ಅಧಿಕಾರಿ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 24 ಗಂಟೆಯಲ್ಲೇ ಆರೋಪಿಯನ್ನ (Accused) ಬಂಧಿಸಲಾಗಿದೆ.

    ಬಂಧಿತ ಆರೋಪಿ ಮಹಿಳೆಯನ್ನ ಗಗನ್‌ಪ್ರೀತ್‌ ಕೌರ್‌ (Gaganpreet Kaur) ಎಂದು ಗುರುತಿಸಲಾಗಿದೆ. ನಿನ್ನೆ ಮಧ್ಯಾಹ್ನ ಬಾಂಗ್ಲಾ ಸಾಹಿಬ್‌ ಗುರುದ್ವಾರದಿಂದ ತಮ್ಮ ಬೈಕ್‌ನಲ್ಲಿ ತಮ್ಮ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬಿಎಂಡಬ್ಲ್ಯೂ ಕಾರು ಗುದ್ದಿತ್ತು. ಈ ವೇಳೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿ ನವಜೋತ್ ಸಿಂಗ್ (52) (Navjot Singh) ಸಾವನ್ನಪ್ಪಿದ್ದರು.

    ಇಂದು ಮಧ್ಯಾಹ್ನ ಅಪಘಾತ ಮಾಡಿದ ಕಾರು ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಅಪರಾಧ, ನರಹತ್ಯೆ, ಸಾಕ್ಷ್ಯ ನಾಶ ಮತ್ತು ದುಡುಕಿನ ಚಾಲನೆ ಪ್ರಕರಣಗಳನ್ನ ದಾಖಲಿಸಲಾಗಿದೆ. ಇದನ್ನೂ ಓದಿ: BMW ಕಾರು ಡಿಕ್ಕಿ – ಭೀಕರ ಅಪಘಾತಕ್ಕೆ ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ಬಲಿ

    38 ವರ್ಷ ವಯಸ್ಸಿನ ಗಗನ್‌ಪ್ರೀತ್‌ ಕೌರ್‌ 40 ವರ್ಷ ವಯಸ್ಸಿನ ಪರೀಕ್ಷಿತ್‌ ಮಕ್ಕಡ್‌ ಅವರನ್ನ ವಿವಾಹವಾಗಿದ್ದು, ಗುರುಗ್ರಾಮ್‌ನಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ಐಷಾರಾಮಿ ಉತ್ಪನ್ನಗಳ ವ್ಯವಹಾರ ನಡೆಸುತ್ತಿದ್ದಾರೆ. ಅಪಘಾತ ಸಂದರ್ಭದಲ್ಲಿ ಪತಿ ಪರೀಕ್ಷಿತ್‌ ಮಕ್ಕಡ್‌ ಕೂಡ ಇದ್ದರು, ಈ ಕಾರಣಕ್ಕಾಗಿ ಎಫ್‌ಐಆರ್‌ನಲ್ಲಿ ಇಬ್ಬರ ಹೆಸರನ್ನ ಉಲ್ಲೇಖಿಸಲಾಗಿದೆ.

    ಅಪಘಾತ ಸಂಭವಿಸಿದ್ದು ಎಲ್ಲಿ, ಹೇಗೆ?
    ಮೃತ ನವಜೋತ್ ಸಿಂಗ್ ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಉಪ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ನಿನ್ನೆ ತಮ್ಮ ಪತ್ನಿ ಸಂದೀಪ ಕೌರ್ ಜೊತೆಗೆ ಬಾಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದರು. ನಂತರ ಇಬ್ಬರೂ ಆರ್‌.ಕೆ ಪುರಂನಲ್ಲಿರುವ ಕರ್ನಾಟಕ ಭವನದಲ್ಲಿ ಊಟ ಮಾಡಿ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ನವಜೋತ್‌ ಮತ್ತು ಸಂದೀಪ್ ದಂಪತಿಯನ್ನ ವ್ಯಾನ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಮಗ ಗಗನ್‌ದೀಪ್‌ ಕೂಡ ಜೊತೆಗಿದ್ದರು. ಇದನ್ನೂ ಓದಿ: ʻವಕ್ಫ್ ತಿದ್ದುಪಡಿ ಕಾಯ್ದೆʼಯ ಕೆಲ ಅಂಶಗಳಿಗೆ ಸುಪ್ರೀಂ ತಡೆ; ಒಟ್ಟಾರೆ ಕಾಯ್ದೆ ಕಾನೂನು ಬದ್ಧವಾಗಿದೆ ಎಂದು ಆದೇಶ

    ಪತ್ನಿ ಆರೋಪ ಏನು?
    ನಾನು ಗಗನ್‌ಪ್ರೀತ್‌ಗೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳುತ್ತಲೇ ಇದ್ದೆ. ವ್ಯಾನ್‌ ಚಾಲಕನಿಗೂ ಮನವಿ ಮಾಡಿದೆ. ಆದ್ರೆ ಅಪಘಾತ ಸ್ಥಳದಿಂದ 19 ಕಿಮೀ ದೂರದಲ್ಲಿ ಜಿಟಿಬಿ ನಗರದಲ್ಲಿರುವ ನುಲೈಫ್‌ ಆಸ್ಪತ್ರೆಗೆ ಕರೆದೊಯುವಂತೆ ಆಕೆ ಹೇಳಿದಳು. ಇದರಿಂದಾಗಿ ನನ್ನಪತಿ ಸಾವನ್ನಪ್ಪಿದ್ದಾರೆ ಎಂದು ಮೃತ ನವಜೋತ್‌ ಪತ್ನಿ ಸಂದೀಪ ಕೌರ್ ಹೇಳಿದ್ದಾರೆ. ಇದನ್ನೂ ಓದಿ: ಕೆಲ ವಿಷಯಗಳು ಕ್ರೀಡಾ ಮನೋಭಾವಕ್ಕಿಂತಲೂ ದೊಡ್ಡದು – ಕೈಕುಲುಕದ್ದಕ್ಕೆ ಸೂರ್ಯ ಸ್ಪಷ್ಟನೆ

  • ಬೈಪಾಸ್ ಗಣೇಶ ವಿಸರ್ಜನೆ ವೀಕ್ಷಿಸಲು ಹೊರಟವರ ಕಾರು ಅಪಘಾತ – ಇಬ್ಬರು ಸಾವು

    ಬೈಪಾಸ್ ಗಣೇಶ ವಿಸರ್ಜನೆ ವೀಕ್ಷಿಸಲು ಹೊರಟವರ ಕಾರು ಅಪಘಾತ – ಇಬ್ಬರು ಸಾವು

    ಚಿಕ್ಕಬಳ್ಳಾಪುರ: ಗೌರಿಬಿದನೂರಿನ (Gauribidanur) ಬೈಪಾಸ್ ಗಣೇಶ ವಿಸರ್ಜನೆ (Ganesha Immersion) ವೀಕ್ಷಿಸಲು ಹೊರಟ ಇಬ್ಬರು ಕಾರು ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಡ್ಡರಬಂಡೆ ಗ್ರಾಮದ ಸಮೀಪ ನಡೆದಿದೆ.

    ಚಿಕ್ಕಬಳ್ಳಾಪುರ ಗೌರಿಬಿದನೂರು ಮಾರ್ಗದ ವಡ್ಡರಬಂಡೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿ ನೀಲಗಿರಿ ಮರದೊಳಗೆ ತೂರಿಕೊಂಡಿದೆ. ಕಾರಿನಲ್ಲಿದ್ದ ಮಂಚೇನಹಳ್ಳಿ ವಾಸಿ ಗೆದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎಫ್‌ಡಿಎ ಶಶಿ (42) ಹಾಗೂ ಮಂಚೇನಹಳ್ಳಿ ತಾಲೂಕಿನ ದಂಡಿಗಾನಹಳ್ಳಿಯ ಮೆಕ್ಯಾನಿಕ್ ಮುನಿರಾಜು (28) ಮೃತಪಟ್ಟಿದ್ದಾರೆ. ಇನ್ನೂ ಕಾರಿನಲ್ಲಿದ್ದ ಮಂಚೇನಹಳ್ಳಿಯ ಮುಕ್ಕಡಿಪೇಟೆಯ ರಮೇಶ್ (40) ತೀವ್ರವಾಗಿ ಗಾಯಗೊಂಡಿದ್ದು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಎರಡು ದಿನಗಳ ವರ್ಣರಂಜಿತ ಗಗನಚುಕ್ಕಿ ಜಲಪಾತೋತ್ಸವಕ್ಕೆ ತೆರೆ

    ಮಂಚೇನಹಳ್ಳಿಯಿಂದ ಗೌರಿಬಿದನೂರಿನತ್ತ ಸಾಗುವಾಗ ವಡ್ಡರ ಬಂಡೆ ಬಳಿ ಕಾರು ನೀಲಗಿರಿ ಮರಕ್ಕೆ ಡಿಕ್ಕಿಯಾಗಿದೆ. ಮೃತ ಶಶಿ ಅವರ ಪತ್ನಿ ನಾಜಿಯಾ ಈ ಬಗ್ಗೆ ಮಂಚೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಂದಹಾಗೆ ಇಂದು ಗೌರಿಬಿದನೂರು ಬೈಪಾಸ್ ಗಣೇಶನ ಗಂಗಾವೀಲೀನ ಕಾರ್ಯ ವಿಜೃಂಭಣೆಯಿಂದ ನೇರವೇರಿತ್ತು. ಇದನ್ನೂ ಓದಿ: ಟೀಂ ಇಂಡಿಯಾ ಬೌಲಿಂಗ್‌ ದಾಳಿಗೆ ಪತರುಗುಟ್ಟಿದ ಪಾಕ್‌ – ಸೂರ್ಯ ಪಡೆ ಗೆಲುವಿಗೆ ಬೇಕು 128 ರನ್‌

  • ಕಾರು-ಬಸ್ ನಡ್ವೆ ಭೀಕರ ಅಪಘಾತ; ತಂದೆ-ಮಗ ಸ್ಥಳದಲ್ಲೇ ಸಾವು

    ಕಾರು-ಬಸ್ ನಡ್ವೆ ಭೀಕರ ಅಪಘಾತ; ತಂದೆ-ಮಗ ಸ್ಥಳದಲ್ಲೇ ಸಾವು

    ಕಲಬುರಗಿ: ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ (Road Accident) ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬುರ ಕೆ ಗ್ರಾಮದ ಬಳಿ ಇಂದು ಸಂಜೆ ನಡೆದಿದೆ.

    ಸೋಮಶೇಖರ್ (55), ಪ್ರಕಾಶ್ (28) ಮೃತ ದುರ್ದೈವಿಗಳಾಗಿದ್ದು, ಮೃತರು ಬಾಗಲಕೋಟೆ (Bagalakote) ಜಿಲ್ಲೆಯವರಾಗಿದ್ದು, ಕಾರಿನಲ್ಲಿದ್ದ ತಂದೆ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್‌ ಜಾಮ್‌ – ಆಸ್ಪತ್ರೆಗೆ ಸಾಗಿಸಲಾಗದೇ ಅಂಬುಲೆನ್ಸ್‌ನಲ್ಲೇ ಮಹಿಳೆ ಸಾವು

    ಕಲಬುರಗಿ (Kalaburagi) ಕಡೆಯಿಂದ ಬಾಗಲಕೋಟೆಯ ಬಿಳಗಿ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಎದುರಿಗೆ ಬಂದ ಎನ್‌ಇಕೆಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅವಘಡ ಸಂಭವಿಸಿದೆ. ಇದನ್ನೂ ಓದಿ: ಮತಗಳ್ಳತನ ಆರೋಪ: ದಾಖಲೆ ಕೊಡುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್

    ಇನ್ನೂ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಕುಳಿತಿದ್ದ ತಂದೆ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಸೋಮಶೇಖರ್ ಪತ್ನಿ ಗಾಯಗೊಂಡಿದ್ದು, ಕಲಬುರಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಗಾಣಗಾಪುರ ಠಾಣೆಯ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ʻಎಲ್ಲರ ಬಾಸ್‌ ನಾವೇʼ ಅನ್ನೋರು ಭಾರತದ ಬೆಳವಣಿಗೆ ಸಹಿಸುತ್ತಿಲ್ಲ – ಟ್ರಂಪ್‌ಗೆ ರಾಜನಾಥ್‌ ಸಿಂಗ್‌ ಗುದ್ದು

  • ಹಾಸನ | 2 ಕಾರುಗಳ ನಡುವೆ ಭೀಕರ ಅಪಘಾತ – ಇಬ್ಬರು ಸಾವು, ನಾಲ್ವರು ಗಂಭೀರ

    ಹಾಸನ | 2 ಕಾರುಗಳ ನಡುವೆ ಭೀಕರ ಅಪಘಾತ – ಇಬ್ಬರು ಸಾವು, ನಾಲ್ವರು ಗಂಭೀರ

    ಹಾಸನ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ (Channarayapatna) ತಾಲೂಕಿನ ಶೆಟ್ಟಿಹಳ್ಳಿ ಮೇಲ್ಸೇತುವೆ ಬಳಿ ನಡೆದಿದೆ.

    ಬೆಂಗಳೂರು ಸಂಜಯ ನಗರದ ಮೀನಾಕ್ಷಿ ಹಾಗೂ ಚನ್ನರಾಯಪಟ್ಟಣ ಮೂಲದ ಪ್ರತಾಪ್ ಮೃತ ದುರ್ದೈವಿಗಳು. ಇದನ್ನೂ ಓದಿ: Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ

    ಬೆಂಗಳೂರಿನಿಂದ ಹಾಸನದ ಕಡೆಗೆ ಬರುತ್ತಿದ್ದ ಟೊಯೋಟಾ ಕ್ಯಾಮ್ರಿ ಕಾರು ಹಾಗೂ ಹಾಸನದ ಕಡೆಯಿಂದ ಚನ್ನರಾಯಪಟ್ಟಣ ಕಡೆಗೆ ತೆರಳುತ್ತಿದ್ದ ಎರ್ಟಿಗಾ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಇದನ್ನೂ ಓದಿ: ಕಲಬುರಗಿ ಜ್ಯುವೆಲರಿ ಶಾಪ್ ದರೋಡೆ ಕೇಸ್ – 30 ರೂ. ಫೋನ್ ಪೇ ಮಾಡಿ ಸಿಕ್ಕಿಬಿದ್ದ ಖದೀಮರು

    ಅಪಘಾತದ ರಭಸಕ್ಕೆ 2 ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಅಮೆರಿಕದಲ್ಲಿ ಟ್ರಕ್, ಕಾರು ನಡುವೆ ಅಪಘಾತ – ಭಾರತ ಮೂಲದ ನಾಲ್ವರು ಸಜೀವ ದಹನ

    ಅಮೆರಿಕದಲ್ಲಿ ಟ್ರಕ್, ಕಾರು ನಡುವೆ ಅಪಘಾತ – ಭಾರತ ಮೂಲದ ನಾಲ್ವರು ಸಜೀವ ದಹನ

    ವಾಷಿಂಗ್ಟನ್: ಅಮೆರಿಕದಲ್ಲಿ (America) ಕಾರು ಹಾಗೂ ಟ್ರಕ್ ನಡುವಿನ ಅಪಘಾತದಲ್ಲಿ ಭಾರತ ಮೂಲದ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಸೋಮವಾರ ನಡೆದಿದೆ.

    ಗ್ರೀನ್ ಕೌಂಟಿಯಲ್ಲಿ (Green County) ಸಂಭವಿಸಿದ ಅಪಘಾತದಲ್ಲಿ ಭಾರತದ ಹೈದರಾಬಾದ್ (Hyderabad) ಮೂಲದ ತೇಜಸ್ವಿನಿ, ವೆಂಕಟ್ ಮತ್ತು ಅವರ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಶಾಲಾ ವಾಹನಕ್ಕೆ ರೈಲು ಡಿಕ್ಕಿ – 3 ವಿದ್ಯಾರ್ಥಿಗಳು ಸಾವು, ಹಲವರಿಗೆ ಗಾಯ

    ಅಮೆರಿಕದ ಡಲ್ಲಾಸ್‌ನಲ್ಲಿ (Dallas) ವಾಸವಿದ್ದ ಕುಟುಂಬವು ರಜೆಯ ನಿಮಿತ್ತ ಕಳೆದ ವಾರ ಅಟ್ಲಾಂಟಾದಲ್ಲಿದ್ದ ಸಂಬಂಧಿಕರ ಮನೆಗೆ ತೆರಳಿತ್ತು. ಸೋಮವಾರ ಅಟ್ಲಾಂಟಾದಿಂದ ಡಲ್ಲಾಸ್‌ಗೆ ಹಿಂತಿರುತ್ತಿದ್ದ ವೇಳೆ ಟ್ರಕ್, ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಕಾರಿನಲ್ಲಿದ್ದ ನಾಲ್ವರು ಸಜೀವ ದಹನವಾಗಿದ್ದಾರೆ. ಇದನ್ನೂ ಓದಿ: ನಾನು ಆಗಲೇ ಹೋಗಿಲ್ಲ, ಈಗ ಯಾಕೆ ಹೋಗಲಿ? – ಆಪ್ತರ ಬಳಿ ಸಿಎಂ ಮನದ ಮಾತು

    ಮೃತರ ಗುರುತುಗಳನ್ನು ಡಿಎನ್‌ಎ ಪರೀಕ್ಷೆಯ ಮೂಲಕ ಪತ್ತೆ ಮಾಡಿದ ಬಳಿಕ ಮೃತರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಗುದ್ದಿದ ರಭಸಕ್ಕೆ ತುಂಡಾಗಿ ವಿದ್ಯುತ್‌ ಕಂಬವನ್ನೇ 50 ಅಡಿ ದೂರಕ್ಕೆ ದೂಡಿದ ಕಾರು!

    ಗುದ್ದಿದ ರಭಸಕ್ಕೆ ತುಂಡಾಗಿ ವಿದ್ಯುತ್‌ ಕಂಬವನ್ನೇ 50 ಅಡಿ ದೂರಕ್ಕೆ ದೂಡಿದ ಕಾರು!

    – ಏರ್ ಬ್ಯಾಗ್‌ನಿಂದ ಚಾಲಕ ಪಾರು

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ಕಂಬವನ್ನು ಸುಮಾರು 50 ಅಡಿಗಳಷ್ಟು ದೂರ ಎಳೆದೊಯ್ದ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ವಸ್ತಾರೆ ಗ್ರಾಮದಲ್ಲಿ ನಡೆದಿದೆ.

    ಚಿಕ್ಕಮಗಳೂರು ನೋಂದಣಿಯ ಸೆಲೋರಿಯಾ ಕಾರು ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಕಿತ್ತು ಕಾರಿನ ಮೇಲೆ ಮುರಿದು ಬಿದ್ದಿದೆ. ಅತಿ ವೇಗದ ಪರಿಣಾಮ, ಕಂಬವನ್ನು ಸುಮಾರು 50 ಅಡಿಗಳಷ್ಟು ದೂರ ಕಾರು ಎಳೆದೊಯ್ದಿದೆ. ಇದನ್ನೂ ಓದಿ: ಹೆಣ್ಣು ಹೂವಿನಂತೆ – ಇರಾನ್‌ ಸುಪ್ರೀಂ ನಾಯಕನ ಹಳೆಯ ಪೋಸ್ಟ್‌ ವೈರಲ್‌

    ವಿದ್ಯುತ್ ಕಂಬಕ್ಕೆ ಹಾಕಿದ್ದ ಗ್ರೌಂಡಿಂಗ್ ವೈರ್ ಕೂಡ ಕಿತ್ತು ಬಂದಿರೋದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಅಪಘಾತವಾಗುತ್ತಿದ್ದಂತೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡ ಪರಿಣಾಮ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಸಾಗರದ `ಕೈ’ ಮುಖಂಡ ಟಿಪ್ ಟಾಪ್ ಬಷೀರ್ ಮನೆ ಮೇಲೆ ಇಡಿ ದಾಳಿ

    ಕಾರು ಕಂಬಕ್ಕೆ ಡಿಕ್ಕಿ ಆಗುತ್ತಿದ್ದಂತೆ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿರುವುದು ದೊಡ್ಡ ಅನಾಹುತ ತಪ್ಪಿದೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗಂಟೆಗೆ 192 ಕಿಮೀ ವೇಗದಲ್ಲಿ ಕಾರು ಚಾಲನೆ- `ಕೈ’ ಮುಖಂಡ ಸೇರಿ ಇಬ್ಬರು ದುರ್ಮರಣ

    ಗಂಟೆಗೆ 192 ಕಿಮೀ ವೇಗದಲ್ಲಿ ಕಾರು ಚಾಲನೆ- `ಕೈ’ ಮುಖಂಡ ಸೇರಿ ಇಬ್ಬರು ದುರ್ಮರಣ

    – ಇನ್ನಿಬ್ಬರ ಸ್ಥಿತಿ ಗಂಭೀರ

    ಮಂಗಳೂರು: ಕುಡಿದು ಅತೀ ವೇಗದಲ್ಲಿ ಕಾರು ಚಲಾಯಿಸಿಕೊಂಡು ಬಂದು ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮ ಕಾಂಗ್ರೆಸ್ (Congress) ಮುಖಂಡ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳೂರಿನ (Mangaluru) 66ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಘಟನೆಯಲ್ಲಿ NSUI ಜಿಲ್ಲಾ ಉಪಾಧ್ಯಕ್ಷ ಓಂಶ್ರೀ ಪೂಜಾರಿ, ಕದ್ರಿ ನಿವಾಸಿ ಅಮನ್ ರಾವ್ ಸಾವನ್ನಪ್ಪಿದ್ದು, ವಂಶಿ ಮತ್ತು ಆಶಿಕ್ ಗಂಭೀರವಾಗಿ ಗಾಯಗೊಂಡಿದ್ದಾರೆ.ಇದನ್ನೂ ಓದಿ: ರಾಜಕೀಯ ಮಾತಾಡ್ಬಾರದು ಅಂತ ಯಾವಾಗಿನಿಂದ ಜಾರಿಯಾಗಿದೆ? – ನೋಟಿಸ್‌ಗೆ ಚಕ್ರವರ್ತಿ ಸೂಲಿಬೆಲೆ ಕಿಡಿ

    ಜೂ.17ರಂದು ಐದು ಜನ ಸೇರಿ ಮಧ್ಯರಾತ್ರಿವರೆಗೂ ಎಣ್ಣೆ ಪಾರ್ಟಿ ಮಾಡಿದ್ದಾರೆ. ಬಳಿಕ ಗಂಟೆಗೆ 192 ಕಿ.ಮೀ ವೇಗದಲ್ಲಿ ತಲಪಾಡಿಯಿಂದ ಮಂಗಳೂರಿಗೆ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಈ ವೇಳೆ ಹೆದ್ದಾರಿಯಲ್ಲಿರುವ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಫೋಕ್ಸ್ ವೇಗನ್ ಕಾರು ಅಪ್ಪಚ್ಚಿಯಾಗಿದೆ.

    ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಓವರ್ ಸ್ಪೀಡ್ ಮತ್ತು ಡ್ರಿಂಕ್ ಅಂಡ್ ಡ್ರೈವ್ ಅಪಘಾತಕ್ಕೆ ಕಾರಣ ಎಂದು ತಿಳಿಸಿದ್ದಾರೆ.

    ಸದ್ಯ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಗುಂಡಿನ ಚಕಮಕಿಯಲ್ಲಿ ಕುಕಿ ಸಮುದಾಯದ ಮಹಿಳೆ ಸಾವು – ಮಣಿಪುರ ಮತ್ತೆ ಉದ್ವಿಗ್ನ

  • ಗುಜರಾತ್‌ನಲ್ಲಿ ಪ್ರವಾಹ ಪರಿಸ್ಥಿತಿ – 9 ಜನರಿದ್ದ ಇಕೋ ಕಾರು ನೀರುಪಾಲು, ನಾಲ್ವರು ಸಾವು

    ಗುಜರಾತ್‌ನಲ್ಲಿ ಪ್ರವಾಹ ಪರಿಸ್ಥಿತಿ – 9 ಜನರಿದ್ದ ಇಕೋ ಕಾರು ನೀರುಪಾಲು, ನಾಲ್ವರು ಸಾವು

    ಗಾಂಧೀನಗರ: 9 ಜನರಿದ್ದ ಇಕೋ ಕಾರು ನೀರುಪಾಲಾಗಿ ನಾಲ್ವರು ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿರುವ ಘಟನೆ ಗುಜರಾತ್‌ನ ಬೋಟಾಡ್ (Botad) ಜಿಲ್ಲೆಯಲ್ಲಿ ನಡೆದಿದೆ. ಭಾರೀ ಮಳೆಯಿಂದಾಗಿ ಗುಜರಾತ್‌ನಲ್ಲಿ (Gujarat) ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಈ ಅವಘಡ ಸಂಭವಿಸಿದೆ.

    ಈ ಕುರಿತು ಎನ್‌ಡಿಆರ್‌ಎಫ್ (NDRF) ಅಧಿಕಾರಿ ವಿನಯ್ ಕುಮಾರ್ ಭಾಟಿ ಮಾತನಾಡಿ, ಮಂಗಳವಾರ ಬೆಳಗಿನ ಜಾವ ಈ ಅವಘಡ ಸಂಭವಿಸಿದ್ದು, ನಾಲ್ವರ ಶವ ಪತ್ತೆಯಾಗಿದೆ. ಇನ್ನೂ ಮೂವರಿಗಾಗಿ ಶೋಧಕಾರ್ಯ ಮುಂದುವರೆದಿದೆ.ಇದನ್ನೂ ಓದಿ: ಕೊಡಗಿನಲ್ಲಿ BSNL ಸೇವೆ ಸರಿಪಡಿಸಲು ಕೇಂದ್ರ ಸಚಿವರಿಗೆ ಯದುವೀರ್‌‌ ಒಡೆಯರ್‌ ಮನವಿ

    ನಮ್ಮ ತಂಡವನ್ನು ರಾಜ್‌ಕೋಟ್‌ನಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಆದರೆ ಬೋಟಾಡ್‌ನಲ್ಲಿ ಕೆಲವು ಜನ ಸಿಲುಕಿಕೊಂಡಿರುವ ಮಾಹಿತಿ ಸಿಕ್ಕ ಬೆನ್ನಲ್ಲೇ ನಾವು ಇಲ್ಲಿಗೆ ಬಂದೆವು. ಆದರೆ ಈ ಗ್ರಾಮಕ್ಕೆ ತಲುಪೋದು ಸುಲಭವಾಗಿರಲಿಲ್ಲ. ಸದ್ಯ ಸ್ಥಳೀಯ ಅಧಿಕಾರಿಗಳ ಬೆಂಬಲದೊಂದಿಗೆ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದರು.

    ಗುಜರಾತ್‌ನಲ್ಲಿ ಈಗಾಗಲೇ ಮಳೆಯಿಂದಾಗಿ 18 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ನಿರಂತರ ಮಳೆಯಿಂದಾಗಿ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆಯಾದ ಹಿನ್ನೆಲೆ ಜಿಲ್ಲೆಯ ಖಂಬದಾ ಆಣೆಕಟ್ಟಿನ ಗೇಟ್‌ಗಳನ್ನು ತೆರೆಯಲಾಗಿದೆ.ಇದನ್ನೂ ಓದಿ: ದಾಳಿ ಮಾಡಿ ಇಸ್ರೇಲ್‌ ದೊಡ್ಡ ತಪ್ಪು ಮಾಡಿದೆ, ನಾವು ಶರಣಾಗಲ್ಲ: ಟ್ರಂಪ್‌ಗೆ ಖಮೇನಿ ವಾರ್ನಿಂಗ್‌

  • ಅಪಘಾತವಾಗಿದ್ದ ಕಾರು ತೆರವು ಮಾಡ್ತಿದ್ದವರ ಮೇಲೆ ಹರಿದ ಟ್ರಕ್ – ಆರು ಮಂದಿ ಸಾವು

    ಅಪಘಾತವಾಗಿದ್ದ ಕಾರು ತೆರವು ಮಾಡ್ತಿದ್ದವರ ಮೇಲೆ ಹರಿದ ಟ್ರಕ್ – ಆರು ಮಂದಿ ಸಾವು

    ಮುಂಬೈ: ಅಪಘಾತವಾಗಿದ್ದ ಕಾರನ್ನು ತೆರವು ಮಾಡುತ್ತಿದ್ದವರ ಮೇಲೆ ಟ್ರಕ್ ಹರಿದು ಆರು ಜನರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ (Maharashtra) ಬೀಡ್ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಬೀಡ್‌ನ ಜಿಯೋರೈ ನಿವಾಸಿಗಳಾದ ಬಾಲು ಅಟ್ಕರೆ, ಭಾಗವತ್ ಪರಲ್ಕರ್, ಸಚಿನ್ ನನ್ನಾವ್ರೆ, ಮನೋಜ್ ಕರಂಡೆ, ಕೃಷ್ಣ ಜಾಧವ್ ಮತ್ತು ದೀಪಕ್ ಸುರಯ್ಯ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಬಿಜೆಪಿಯಿಂದ ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಉಚ್ಚಾಟನೆ

    ಸೋಮವಾರ ರಾತ್ರಿ 8:30ರ ಸುಮಾರಿಗೆ ದೀಪಕ್ ಅಟ್ಕರೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು, ಬೀಡ್ ಗ್ರಾಮದಿಂದ 100 ಕಿ.ಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ-52ರ ಡಿವೈಡರ್ ಬಳಿ ಅಪಘಾತಕ್ಕೀಡಾಯಿತು. ಅವಘಡವನ್ನು ನೋಡಿದ ಕೆಲವರು ಕಾರನ್ನು ರಸ್ತೆಯಿಂದ ತೆಗೆಯುತ್ತಿದ್ದರು. 11:30ರ ಸುಮಾರಿಗೆ ವೇಗವಾಗಿ ಬಂದ ಟ್ರಕ್, ತೆರವುಗೊಳಿಸುತ್ತಿದ್ದವರ ಮೇಲೆ ಹಾದು ಹೋಗಿದೆ. ಪರಿಣಾಮ ಆರು ಜನರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ.

    ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ ಹಾಗೂ ಟ್ರಕ್ ಚಾಲಕನನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.ಇದನ್ನೂ ಓದಿ: ಮ್ಯಾನೇಜರ್ ಮೇಲೆ ಹಲ್ಲೆ- ನಟ ಉನ್ನಿ ಮುಕುಂದನ್ ವಿರುದ್ಧ ಕೇಸ್