Tag: car

  • ಬೆಟ್ಟದಿಂದ ಉರುಳಿ ಕಾರಿನೊಳಕ್ಕೆ ಬಿದ್ದ ಬಂಡೆ ಕಲ್ಲು – ಮಹಿಳೆ ಸಾವು

    ಬೆಟ್ಟದಿಂದ ಉರುಳಿ ಕಾರಿನೊಳಕ್ಕೆ ಬಿದ್ದ ಬಂಡೆ ಕಲ್ಲು – ಮಹಿಳೆ ಸಾವು

    ಮುಂಬೈ: ಸಾವು ಯಾರಿಗೆ ಹೇಗೆ, ಎಲ್ಲಿ, ಯಾವಾಗ ಬರುತ್ತೆ ಅಂತ ಹೇಳೋಕೆ ಆಗಲ್ಲ. ಅದೇ ರೀತಿ ಮುಂಬೈನಲ್ಲಿ (Mumbai) ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಂಡೆ ಕಲ್ಲೊಂದು (Rock) ಬೆಟ್ಟದಿಂದ ಉರುಳಿ ಕಾರಿನ ಸನ್‌ರೂಫ್‌ನಿಂದ ಒಳಗೆ ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ.

    ಹೌದು, ಮಹಾರಾಷ್ಟ್ರದ ಪರ್ವತ ಮಾರ್ಗವಾದ ತಮ್ಹಿನಿ ಘಾಟ್‌ನಲ್ಲಿ ಈ ಘಟನೆ ನಡೆದಿದೆ. ಸ್ನೇಹಲ್ ಗುಜರಾತಿ (43) ಮೃತ ಮಹಿಳೆ. ಇದನ್ನೂ ಓದಿ: Mumbai Hostage | 17 ಮಕ್ಕಳನ್ನ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರೋಪಿ ಪೊಲೀಸರ ಗುಂಡಿಗೆ ಬಲಿ

    ಮಹಿಳೆಯು ಪುಣೆಯಿಂದ ಮಂಗಾವ್‌ಗೆ ವೋಕ್ಸ್ವ್ಯಾಗನ್ ವರ್ಟಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಲಿಸುತ್ತಿದ್ದ ಕಾರಿನ ಮೇಲೆ ಬಂಡೆ ಕಲ್ಲೊಂದು ಉರುಳಿ ಸನ್‌ರೂಫ್ ಮೂಲಕ ಒಳಗೆ ಬಿದ್ದಿದೆ. ಮಹಿಳೆ ಕೂತಿದ್ದ ಸೀಟಿನ ಮೇಲೆ ಬಿದ್ದಿದ್ದರಿಂದ ಆಕೆಯ ತಲೆಗೆ ನೇರವಾಗಿ ಬಂಡೆ ಕಲ್ಲು ಬಡಿದು, ಮೃತಪಟ್ಟಿದ್ದಾರೆ.

    ಅಲ್ಲದೇ ಮುಂಬೈನಲ್ಲಿ ಪ್ರತ್ಯೇಕ ಘಟನೆಯೊಂದು ಸಂಭವಿಸಿದ್ದು, ಚಾಲಕ ತನ್ನ ಸಮಯಪ್ರಜ್ಞೆಯಿಂದ 12 ಪ್ರಯಾಣಿಕರ ಜೀವ ಉಳಿಸಿದ್ದಾನೆ. ಬುಧವಾರ ನಸುಕಿನ ವೇಳೆ 3 ಗಂಟೆ ಸುಮಾರಿಗೆ ಮುಂಬೈನಿಂದ ಜಲ್ನಾಗೆ ಪ್ರಯಾಣಿಸುತ್ತಿದ್ದಾಗ ಸಮೃದ್ಧಿ ಹೆದ್ದಾರಿಯಲ್ಲಿ ಖಾಸಗಿ ಐಷಾರಾಮಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು.

    ಕೂಡಲೇ ಎಚ್ಚೆತ್ತುಕೊಂಡ ಚಾಲಕ 12 ಪ್ರಯಾಣಿಕರನ್ನು ತಕ್ಷಣವೇ ಬಸ್‌ನಿಂದ ಕೆಳಗಿಳಿಸಿ ಅವರ ಪ್ರಾಣ ಉಳಿಸಿದ್ದಾನೆ.

  • ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ – ಅಪ್ರಾಪ್ತ ಚಾಲಕನಿಗೆ ಸ್ಥಳೀಯರಿಂದ ಧರ್ಮದೇಟು

    ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ – ಅಪ್ರಾಪ್ತ ಚಾಲಕನಿಗೆ ಸ್ಥಳೀಯರಿಂದ ಧರ್ಮದೇಟು

    – ಅದೃಷ್ಟವಶಾತ್‌ ಬಾಲಕಿ ಪಾರು

    ಗಾಂಧಿನಗರ: ಅಹಮದಾಬಾದ್‌ನ (Ahmedabad) ನೋಬಲ್‌ನಗರದಲ್ಲಿ ಅಪ್ರಾಪ್ತನೊಬ್ಬ ಚಲಾಯಿಸುತ್ತಿದ್ದ ಕಾರು (Car) ಮೂರು ವರ್ಷದ ಬಾಲಕಿಗೆ (Accident) ಡಿಕ್ಕಿಯಾಗಿದೆ. ‌

    ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸರೆಯಾಗಿದ್ದು, ಬಾಲಕಿಗೆ ಕಾರಿನ ಮುಂಭಾಗ ಡಿಕ್ಕಿಯಾಗಿ ಕೆಳಕ್ಕೆ ಬಿದ್ದಿದ್ದಾಳೆ. ಅದೃಷ್ಟವಶಾತ್‌ ಬಾಲಕಿ ಕಾರಿನ ನಡು ಭಾಗದಲ್ಲಿ ಕೆಳಗೆ ಬಿದ್ದಿದ್ದಾಳೆ. ಕಾರು ಮುಂದೆ ಚಲಿಸುತ್ತಿದ್ದಂತೆ, ಹಿಂಬದಿಯಿಂದ ಎದ್ದು ನಡೆದು ಬಂದಿದ್ದಾಳೆ. ಈ ವೇಳೆ ಅಪ್ರಾಪ್ತ ಕಾರು ನಿಲ್ಲಿಸಿ ಬಾಲಕಿ ಬಳಿ ಬಂದಿದ್ದಾನೆ. ಇದನ್ನೂ ಓದಿ: ಟಿಪ್ಪರ್‌, ಇನ್ನೋವಾ ನಡುವೆ ಡಿಕ್ಕಿ – ಚಾಲಕ ಸಜೀವ ದಹನ

    ಸ್ಥಳಕ್ಕೆ ಬಂದ ಸ್ಥಳೀಯ ನಿವಾಸಿಗಳು ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಕಪಾಳಮೋಕ್ಷ ಮಾಡಿದ್ದಾರೆ. ಬಾಲಕನಿಗೆ ಕಪಾಳಮೋಕ್ಷ ಮಾಡುವ ವೀಡಿಯೋ ವೈರಲ್‌ ಆಗಿದೆ. ಈ ಸಂಬಂಧ ಚಾಲಕನ ವಿರುದ್ಧ ಅಹಮದಾಬಾದ್ ಪೊಲೀಸರು ಬಿಎನ್ಎಸ್ ಸೆಕ್ಷನ್ 281, 125(ಎ), ಮತ್ತು ಮೋಟಾರು ವಾಹನ ಕಾಯ್ದೆ ಸೆಕ್ಷನ್ 177, 184, 181 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಕಾರಿನ ಕೀಗಳನ್ನು ಅಪ್ರಾಪ್ತರಿಗೆ ನೀಡಬಾರದು. ಅವರಿಗೆ ಸಿಗದಂತೆ ಇಡಬೇಕು ಎಂದು ಒಬ್ಬರು ಅಪಘಾತದ ವೀಡಿಯೋಗೆ ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ಪವಾಡಗಳು ಸಂಭವಿಸುತ್ತವೆ ಎಂಬುದಕ್ಕೆ ಈ ವೀಡಿಯೊ ಪುರಾವೆಯಾಗಿದೆ. ಆದರೆ ಪ್ರತಿ ಬಾರಿಯೂ ಅದು ಸಂಭವಿಸಲ್ಲ. ರಸ್ತೆ ಆಟದ ಮೈದಾನವಲ್ಲ, ಪೋಷಕರು ಯಾವಾಗಲೂ ಮಕ್ಕಳ ಮೇಲೆ ಕಣ್ಣಿಡಬೇಕು ಎಂದು ಬರೆದುಕೊಂಡಿದ್ದಾರೆ.

    ಮತ್ತೊಬ್ಬರು, ಅಪ್ರಾಪ್ತ ವಯಸ್ಕನಿಗೆ ಕಾರಿನ ಕೀ ಹೇಗೆ ಸಿಕ್ಕಿತು? ಅವನ ಪೋಷಕರನ್ನು ಶಾಶ್ವತವಾಗಿ ಜೈಲಿಗೆ ಹಾಕಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಳಗಾವಿ | ಭಿಕ್ಷೆ ಬೇಡುತ್ತಾ ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಹರಿದ ಲಾರಿ – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

  • ನೆಲಮಂಗಲ ಹೈವೇಯಲ್ಲಿ ಲಾರಿ, ಕಾರು ಮಧ್ಯೆ ಭೀಕರ ಅಪಘಾತ – ಇಬ್ಬರು ಬಲಿ

    ನೆಲಮಂಗಲ ಹೈವೇಯಲ್ಲಿ ಲಾರಿ, ಕಾರು ಮಧ್ಯೆ ಭೀಕರ ಅಪಘಾತ – ಇಬ್ಬರು ಬಲಿ

    ನೆಲಮಂಗಲ: ತುಮಕೂರು- ಬೆಂಗಳೂರು (Tumakuru-Bengaluru) ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಲಾರಿ ಕಾರು ನಡುವೆ ಭೀಕರ ಅಪಘಾತ (Accident) ಇಬ್ಬರು ಮೃತಪಟ್ಟ ಘಟನೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ನಡೆದಿದೆ.

    ಗದಗ ಜಿಲ್ಲೆಯ ರೋಣಾದಿಂದ ಬೆಂಗಳೂರಿಗೆ ಮಾರುತಿ ಎರ್ಟಿಗಾ ಕಾರು ಬರುತ್ತಿತ್ತು. ಲಾರಿ ಚಾಲಕ ಸಡನ್ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ:  ಬೈಕ್‌ ಡಿಕ್ಕಿ, ಧಗಧಗಿಸಿದ ಬೆಂಗಳೂರಿಗೆ ಬರುತ್ತಿದ್ದ ಬಸ್ಸು – 10ಕ್ಕೂ ಹೆಚ್ಚು ಮಂದಿ ಸಜೀವ ದಹನ

    ಕಾರಿನಲ್ಲಿದ್ದ ಐವರ ಪೈಕಿ ಇಬ್ಬರು ಸಾವನ್ನಪ್ಪಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಶಿವಲಿಂಗ ಗೌಡ(60), ಪ್ರಮೀಳಾ (55) ಮೃತಪಟ್ಟಿದ್ದಾರೆ.

    ಕಾರಿನಲ್ಲಿ ಕುಟುಂಬ ಸದಸ್ಯರು ಬೆಂಗಳೂರಿನ ನಾರಾಯಣ ಆಸ್ಪತ್ರೆಗೆ ಬರುತ್ತಿದ್ದರು. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.

  • ಜಾತಿಗಣತಿಗೆ ತೆರಳಿದ್ದಾಗ ಕಾರು, ಬೈಕ್‌ ನಡುವೆ ಅಪಘಾತ – ಶಿಕ್ಷಕನ ಕಾಲು ಮುರಿತ, ಸಹ ಶಿಕ್ಷಕಿಗೆ ಗಾಯ

    ಜಾತಿಗಣತಿಗೆ ತೆರಳಿದ್ದಾಗ ಕಾರು, ಬೈಕ್‌ ನಡುವೆ ಅಪಘಾತ – ಶಿಕ್ಷಕನ ಕಾಲು ಮುರಿತ, ಸಹ ಶಿಕ್ಷಕಿಗೆ ಗಾಯ

    ಮೈಸೂರು: ಜಾತಿಗಣತಿಗೆ (Caste Census) ತೆರಳಿದ್ದಾಗ ಕಾರು, ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ (Accident) ಇಬ್ಬರು ಶಿಕ್ಷಕರು ಗಾಯಗೊಂಡ ಘಟನೆ ಹೆಚ್.ಡಿ.ಕೋಟೆ (H.D Kote) ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.

    ಗಾಯಾಳುಗಳನ್ನು ಬೂದನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸ್ವಾಮೀಗೌಡ ಹಾಗೂ ಸಹ ಶಿಕ್ಷಕಿ ಮಧುಶ್ರೀ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮುಖ್ಯಶಿಕ್ಷಕನ ಕಾಲು ಮುರಿದಿದೆ. ಸಹ ಶಿಕ್ಷಕಿಗೆ ಸಣ್ಣಪುಟ್ಟ ಗಾಯವಾಗಿದೆ. ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರು | 8 ದಿನ ಪ್ರೇಯಸಿ ಜೊತೆಯಿದ್ದ ಯುವಕ ಲಾಡ್ಜ್‌ನಲ್ಲಿ ಸಾವು

    ಅದೃಷ್ಟವಶಾತ್‌ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: 7ನೇ ಕ್ಲಾಸ್ ವಿದ್ಯಾರ್ಥಿನಿಯ ರೇಪ್ ಮಾಡಿದ ಟ್ಯೂಷನ್ ಟೀಚರ್‌ಗೆ 10 ವರ್ಷ ಜೈಲು – ತೆಲಂಗಾಣ ಕೋರ್ಟ್ ಆದೇಶ

  • ಆಸ್ತಿ ಕಲಹ – ಪತಿಯ ಕಾರಿಗೆ ಬೆಂಕಿ ಇಟ್ಟ ಪತ್ನಿ

    ಆಸ್ತಿ ಕಲಹ – ಪತಿಯ ಕಾರಿಗೆ ಬೆಂಕಿ ಇಟ್ಟ ಪತ್ನಿ

    ಚಿಕ್ಕೋಡಿ: ಕೌಟುಂಬಿಕ ಕಲಹ (Family Conflict) ಹಾಗೂ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪುತ್ರನ ಜೊತೆ ಸೇರಿ ಪತ್ನಿ ಪತಿಯ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikkodi) ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.

    ಪೊಗತ್ಯಾನಟ್ಟಿ ಗ್ರಾಮದ ಪ್ರಗತಿಪರ ರೈತ ಶಿವಗೌಡ ಪಾಟೀಲ (Car)  ಅವರಿಗೆ ಪತ್ನಿ ಸಾವಿತ್ರಿ ಹಾಗೂ ಪುತ್ರ ಪ್ರಜ್ವಲ್‌ ಹಲ್ಲೆ ಮಾಡಿ ಮಾರುತಿ ಇಕೋ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಕಾರಿನಲ್ಲಿ ಕೂಡಿ ಹಾಕಿ ಹತ್ಯೆ ಮಾಡಲು ಯತ್ನಿಸಿದ್ದಾರೆ ಎಂದು ಶಿವಗೌಡ ಪಾಟೀಲ ಆರೋಪ ಮಾಡಿದ್ದಾರೆ.  ಇದನ್ನೂ ಓದಿ:  ಅನ್ನಭಾಗ್ಯ | 5 ಕೆಜಿ ಅಕ್ಕಿ ಬದಲು ʻಇಂದಿರಾ ಆಹಾರ ಕಿಟ್‌ʼ

    ದಂಪತಿ ಮದುವೆಯಾಗಿ 22 ವರ್ಷಗಳಾಗಿದ್ದು ಅನ್ಯೋನ್ಯವಾಗಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಭಿನ್ನಾಭಿಪ್ರಾಯ ಉಂಟಾಗಿ ಆಸ್ತಿ ಬೇಕು ಎಂದು ಪತ್ನಿ ಸಾವಿತ್ರಿ ಹಾಗೂ ಪುತ್ರ ಬೇಡಿಕೆ ಇಟ್ಟಿದ್ದರು. ಈ ಕಾರಣಕ್ಕೆ ಗಲಾಟೆಯಾಗಿದೆ ಎನ್ನುವ ಪ್ರಾಥಮಿಕ ಮಾಹಿತಿಯನ್ನ ಪೊಲೀಸರು ನೀಡಿದ್ದಾರೆ‌‌. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

    ಪ್ರಗತಿಪರ ರೈತ ಆಗಿರುವ ಶಿವಗೌಡ ವಿವಿಧ ಬಗೆಯ ಬಾಳೆ ಹಣ್ಣು ಸೇರಿದಂತೆ ದೇಶ ವಿದೇಶದ ಬೆಳೆಗಳನ್ನ ಬೆಳೆದು ಹೆಸರುವಾಸಿಯಾಗಿದ್ದಾರೆ.

  • ಬಾಡಿಗೆ ಪಡೆದು ಕಾರು ವಂಚನೆ – 46 ಕಾರು ವಶಕ್ಕೆ, ಆರೋಪಿ ಪರಾರಿ

    ಬಾಡಿಗೆ ಪಡೆದು ಕಾರು ವಂಚನೆ – 46 ಕಾರು ವಶಕ್ಕೆ, ಆರೋಪಿ ಪರಾರಿ

    – 700ಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿರುವ ಶಂಕೆ

    ಬಳ್ಳಾರಿ: ನೂರಾರು ಕಾರುಗಳನ್ನು ಬಾಡಿಗೆ (Car Rental Fraud) ಪಡೆದು ಸಿನಿಮೀಯ ರೀತಿಯಲ್ಲಿ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆ ನಡೆಸಿದ ಬಳ್ಳಾರಿ ಪೊಲೀಸರು (Ballari Police) ಬರೋಬ್ಬರಿ 46 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

    ರಾಯಚೂರು ಜಿಲ್ಲೆಯ ಸಿಂಧನೂರು ಮೂಲದ ಜಾಹೀದ್‌ ಅಲಿಯಾಸ್ ಸೋನು ವಂಚನೆ ಮಾಡಿದ್ದು ಈಗ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಡೈರಿಯಲ್ಲಿ ಅವ್ಯವಹಾರ ಆರೋಪ –  ಅಧ್ಯಕ್ಷೆ, ಕಾರ್ಯದರ್ಶಿ ಮನೆ ಮುಂದೆ ಹಾಲು ಸುರಿದು ಗ್ರಾಮಸ್ಥರ ಪ್ರತಿಭಟನೆ

    ವಂಚನೆ ಎಸಗಿದ ಸಿಂಧನೂರು ಮೂಲದ ಜಾಹೀದ್‌
    ವಂಚನೆ ಎಸಗಿದ ಸಿಂಧನೂರು ಮೂಲದ ಜಾಹೀದ್‌

    ತಿಂಗಳಿಗೆ 50-60 ಸಾವಿರ ರೂ. ಬಾಡಿಗೆ ನೀಡುವುದಾಗಿದ್ದ ಹೇಳಿ ಜಾಹಿದ್‌ ಕಾರುಗಳನ್ನು ಬಾಡಿಗೆ ಪಡೆದು ಹಲವೆಡೆ ಮಾರಾಟ ಮಾಡಿದ್ದ. ಆ ಬಳಿಕ ಬ್ರಾಂಡೆಡ್ ಕಾರುಗಳನ್ನು 4-10 ಲಕ್ಷದವರೆಗೂ ಮಾರಾಟ ಮಾಡಿ ಬಂದ ಹಣದಲ್ಲಿ ಮಜಾ ಮಾಡುತ್ತಿದ್ದ. ಇದನ್ನೂ ಓದಿ:  ಯಾವುದೇ ಪಶ್ಚಾತ್ತಾಪವಿಲ್ಲ, ಕ್ಷಮೆ ಕೇಳಲ್ಲ, ಶೂ ಎಸೆಯಲು ದೇವರೇ ಪ್ರಚೋದಿಸಿದ್ದಾನೆ: ವಕೀಲ ರಾಕೇಶ್‌ ಕಿಶೋರ್‌

    ಆರಂಭದಲ್ಲಿ ಕಾರುಗಳ ಮಾಲೀಕರಿಗೆ ಒಂದು ತಿಂಗಳು ಬಾಡಿಗೆ ಕೊಟ್ಟು ನಂತರ ಜಾಹೀದ್‌ ಫೋನ್ ಸ್ವಿಚ್ ಆಫ್‌ ಮಾಡಿಕೊಂಡಿದ್ದ. ಜಿಪಿಎಸ್ ಟ್ರ್ಯಾಕ್ ಮಾಡಿದಾಗ ಕಾರು ಮಾರಾಟ ಮಾಡಿದ್ದು ಬೆಳಕಿಗೆ ಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿಯ ಹಲವು ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿತ್ತು. ತನಿಖೆಗೆ ಇಳಿದಾಗ ಜಹೀದ್ 107 ಕಾರುಗಳ ಮಾಲೀಕರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿತ್ತು.

    ತನಿಖೆ ಚುರುಕುಗೊಳಿಸಿ ಕಾರುಗಳನ್ನು ಪತ್ತೆ ಮಾಡಿರುವ ಪೊಲೀಸರು ಮಾಲೀಕರಿಗೆ ಕಾರುಗಳನ್ನು ಹಿಂತಿರುಗಿಸಿದ್ದಾರೆ. ಆರೋಪಿ ಜಹೀದ್ 700ಕ್ಕೂ ಹೆಚ್ಚು ಕಾರುಗಳನ್ನ ಬಾಡಿಗೆ ಪಡೆದು ಮಾರಾಟ ಮಾಡಿರುವ ಶಂಕೆ ಇದೆ.

  • Koalr | ಸೇತುವೆ ಮೇಲಿಂದ ಕಾರು ಬಿದ್ದು ಓರ್ವ ಸಾವು, ನಾಲ್ವರಿಗೆ ಗಾಯ

    Koalr | ಸೇತುವೆ ಮೇಲಿಂದ ಕಾರು ಬಿದ್ದು ಓರ್ವ ಸಾವು, ನಾಲ್ವರಿಗೆ ಗಾಯ

    ಕೋಲಾರ: ಸೇತುವೆ (Bridge) ಮೇಲಿಂದ ಕಾರೊಂದು (Car) ಕೆಳಗೆ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಕೋಲಾರ (Kolar) ಜಿಲ್ಲೆ ಕೆಜಿಎಫ್‌ನ (KGF) ಕೃಷ್ಣಾವರಂ ಬಳಿ ನಡೆದಿದೆ.

    ಕರ್ಣ (48) ಮೃತ ವ್ಯಕ್ತಿ. ಫೋರ್ಡ್ ಇಕೋಸ್ಪೋರ್ಟ್ ಕಾರು ಸೇತುವೆ ಮೇಲಿಂದ ಬಿದ್ದು ಘಟನೆ ಸಂಭವಿಸಿದೆ. ಘಟನೆಯಲ್ಲಿ ಉಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: `ಶಕ್ತಿ’ ಚಂಡಮಾರುತ ಎಫೆಕ್ಟ್ – ಗಡಿಜಿಲ್ಲೆ ಬೀದರ್‌ನಲ್ಲಿ ವರುಣನ ಅಬ್ಬರ ಜೋರು

    ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಚಿತ್ರದುರ್ಗ | ರಸ್ತೆ ದಾಟುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್‌ಗೆ ಲಾರಿ ಡಿಕ್ಕಿ – ಗಂಭೀರ ಗಾಯ

  • ದರ್ಶನ್ ಅನುಪಸ್ಥಿತಿಯಲ್ಲಿ ದಸರಾ ಆಯುಧಪೂಜೆ ನೆರವೇರಿಸಿದ ವಿಜಯಲಕ್ಷ್ಮಿ, ಪುತ್ರ

    ದರ್ಶನ್ ಅನುಪಸ್ಥಿತಿಯಲ್ಲಿ ದಸರಾ ಆಯುಧಪೂಜೆ ನೆರವೇರಿಸಿದ ವಿಜಯಲಕ್ಷ್ಮಿ, ಪುತ್ರ

    ಟ ದರ್ಶನ್ (Darshan) ಕುಟುಂಬದಲ್ಲಿ ದಸರಾ ಹಬ್ಬ ಯಾವಾಗ್ಲೂ ವಿಶೇಷವಾಗೇ ಇರುತ್ತದೆ. ನೂರಾರು ಐಶಾರಾಮಿ ಕಾರುಗಳ ಒಡೆಯ ದರ್ಶನ್ ಈಗ ಜೈಲಲ್ಲಿದ್ದಾರೆ. ಪ್ರತಿ ವರ್ಷ ದರ್ಶನ್ ಆರ್‌ಆರ್ ನಗರದ ತಮ್ಮ ನಿವಾಸದ ರಸ್ತೆಯುದ್ದಕ್ಕೂ ಕಾರುಗಳನ್ನ ನಿಲ್ಲಿಸಿ ಆಯುಧ ಪೂಜೆ (Ayudha Pooja) ಮಾಡುತ್ತಿದ್ದರು. ಆದರೆ ಕಳೆದೆರಡು ವರ್ಷಗಳಿಂದ ದರ್ಶನ್ ಜೈಲಲ್ಲೇ ದಸರಾ ಹಬ್ಬ ಮಾಡುವಂತಾಗಿದೆ. ಆದರೆ ದರ್ಶನ್ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮಿ (Vijayalakshmi) ಹಾಗೂ ಪುತ್ರ ವಿನೀಶ್ ಸಂಪ್ರದಾಯದಂತೆ ಆಯುಧಪೂಜಾ ಹಬ್ಬ ಮಾಡಿದ್ದಾರೆ.

    ಅಮ್ಮ ಮಗ ಇಬ್ಬರೂ ದಸರಾ ಹಬ್ಬ ಮಾಡಿರುವ ಫೋಟೋವನ್ನ ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಪೂಜೆ ಮಾಡಿರುವ ಕಾರ್ ಮುಂದೆ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ನಿಂತಿರುವ ಫೋಟೋ ಜೊತೆ ಕಾರ್‌ಗಳ ಕೀಗಳನ್ನೆಲ್ಲಾ ಸಮಗ್ರವಾಗಿ ಒಂದು ಬೌಲ್‌ನಲ್ಲಿಟ್ಟಿರುವ ಫೋಟೋವನ್ನೂ ತೋರಿಸಿದ್ದಾರೆ ವಿಜಯಲಕ್ಷ್ಮಿ.

    ದರ್ಶನ್ ಕಾರ್ ಪ್ರಿಯರಾಗಿದ್ದು ಐಶಾರಾಮಿ ಎಲ್ಲಾ ಬ್ರ್ಯಾಂಡ್ ಕಾರ್‌ಗಳನ್ನ ಹೊಂದಿದ್ದಾರೆ. ಆದರೆ ಸದ್ಯದ ಅವರ ಪರಿಸ್ಥಿತಿ ಹಾಸಿಗೆ ದಿಂಬಿಗಾಗಿ ಪರದಾಡುವಂತಾಗಿದೆ.

  • ಪೀಕ್‌ ಅವರ್‌ನಲ್ಲಿ ಬೆಂಗಳೂರಿನಲ್ಲಿ ಒಬ್ಬರೇ ಕಾರ್‌ನಲ್ಲಿ ಸಂಚರಿಸಿದ್ರೆ ಟ್ಯಾಕ್ಸ್‌?

    ಪೀಕ್‌ ಅವರ್‌ನಲ್ಲಿ ಬೆಂಗಳೂರಿನಲ್ಲಿ ಒಬ್ಬರೇ ಕಾರ್‌ನಲ್ಲಿ ಸಂಚರಿಸಿದ್ರೆ ಟ್ಯಾಕ್ಸ್‌?

    – ಸರ್ಕಾರಕ್ಕೆ ತಜ್ಞರ ಸಮಿತಿಯಿಂದ ಪ್ರಸ್ತಾಪ

    ಬೆಂಗಳೂರು: ಸಂಚಾರ ದಟ್ಟಣೆ (Heavy Traffic) ಇರುವ ಬೆಂಗಳೂರಿನ (Bengaluru) ಕೆಲ ರೋಡ್ ಗಳಲ್ಲಿ ನೀವು ಸಿಂಗಲ್ ಆಗಿ ಕಾರ್ ಓಡಿಸ್ತೀರಾ ಹಾಗಾದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು. ಒಂದು ವೇಳೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡರೆ ದೇಶದಲ್ಲಿ ಎಲ್ಲಿಯೂ ಇಲ್ಲದಸಂಚಾರ ದಟ್ಟಣೆ ತೆರಿಗೆ (Congestion Tax) ಪಾವತಿಸಬೇಕಾಗುತ್ತದೆ.

    ಹೌದು. ಸೆಪ್ಟೆಂಬರ್ 24 ರಂದು ಸಂಚಾರ ದಟ್ಟಣೆ, ಗುಂಡಿ ಸಮಸ್ಯೆ ಬಗ್ಗೆ ವಿವಿಧ ಇಲಾಖೆಗಳ ಕೋ ಆರ್ಡಿನೇಶನ್ ಮತ್ತು ಕೆಲ ಉದ್ಯಮಿಗಳ ಮಹತ್ವದ ಸಭೆ ನಡೆದಿದೆ. ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ‌ನಡೆದಿದ್ದ ಸಭೆಯಲ್ಲಿ ತಜ್ಞರು ಸಂಚಾರ ದಟ್ಟಣೆ ಟ್ಯಾಕ್ಸ್ ಪ್ರಸ್ತಾಪ ಇಟ್ಟಿದ್ದಾರೆ. ಫಾಸ್ಟ್ ಟ್ಯಾಗ್ ಸಿಸ್ಟಮ್ ಮೂಲಕ ಸಂಚಾರ ದಟ್ಟಣೆ ಇರುವ ನಿರ್ದಿಷ್ಟ ರಸ್ತೆಗಳಲ್ಲಿ ಟ್ಯಾಕ್ಸ್ ಪ್ರಸ್ತಾಪ ಇಟ್ಟಿದ್ದಾರೆ. ಅಲ್ಲದೆ ಕಾರ್ ಪೂಲಿಂಗ್ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ.

     

    ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ನಡೆದ ತಜ್ಞರ ಸಮಿತಿ ಈ ಪ್ರಸ್ತಾಪಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ನೀಡಿಲ್ಲ. ಸಂಚಾರ ದಟ್ಟಣೆ ಟ್ಯಾಕ್ಸ್ ಹಾಕಿರೆ ಸಾರ್ವಜನಿಕವಾಗಿ ವ್ಯಾಪಕವಾಗಿ ಆಕ್ರೋಶ ಸಾಧ್ಯತೆ ಅರಿತು ಆ ಪ್ರಸ್ತಾಪ ರಿಜೆಕ್ಟ್ ಆಗಬಹುದು. ಹಾಗಾಗಿ ಸರ್ಕಾರ ಮಟ್ಟದಲ್ಲಿ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ.‌

    ಲಂಡನ್, ಸಿಂಗಾಪುರ್, ನ್ಯೂಯಾರ್ಕ್ ನಗರಗಳಲ್ಲಿ ಸಂಚಾರಣ ದಟ್ಟಣೆ ಟ್ಯಾಕ್ಸ್ ಬಗ್ಗೆ ಉಲ್ಲೇಖಿಸಲಾಗಿದ್ದು, ಬೆಂಗಳೂರು ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಅಲ್ಲಿಗೆ ಹೋಲಿಸಿ ಟ್ಯಾಕ್ಸ್ ಹಾಕುವ ಪ್ರಸ್ತಾಪಕ್ಕೆ ಬಿಜೆಪಿ ತೀವ್ರವಾಗಿ ವಿರೋಧಿಸಿದೆ.

    ಏನಿದು ಸಂಚಾರ ದಟ್ಟಣೆ ತೆರಿಗೆ?
    ಪೀಕ್ ಅವರ್ ನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ನಿರ್ದಿಷ್ಟ ರಸ್ತೆಗಳಲ್ಲಿ ಜಾರಿ. ಒಬ್ಬರೇ ಕಾರು ಓಡಿಸಿದರೆ ಸಂಚಾರ ದಟ್ಟಣೆ ತೆರಿಗೆ ಕಟ್ಟಬೇಕು. ಫಾಸ್ಟ್ ಟ್ಯಾಗ್ ಮೂಲಕ ಸಂಚಾರ ದಟ್ಟಣೆ ತೆರಿಗೆ ಕಡಿತ ಮಾಡಲು ಪ್ರಸ್ತಾಪ ಇಡಲಾಗಿದೆ.

  • ಕಾರುಗಳ ಬೆಲೆ ಭಾರೀ ಇಳಿಕೆ- ಯಾವ ಕಾರುಗಳ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

    ಕಾರುಗಳ ಬೆಲೆ ಭಾರೀ ಇಳಿಕೆ- ಯಾವ ಕಾರುಗಳ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

    ವರಾತ್ರಿ, ದೀಪಾವಳಿ ಹಬ್ಬಕ್ಕೆ ಕಾರು ಖರೀದಿ ಮಾಡಬೇಕು ಅಂತ ಪ್ಲ್ಯಾನ್‌ ಇದ್ಯಾ? ಹಾಗಾದ್ರೆ ನಿಮ್ಗೆ ಗುಡ್‌ನ್ಯೂಸ್‌. ಜಿಎಸ್‌ಟಿ ಸ್ಲ್ಯಾಬ್‌ ಪರಿಷ್ಕರಣೆಯಾದ ಬೆನ್ನಲ್ಲೇ ಕಾರು ಮತ್ತು ಬೈಕುಗಳ ದರ ಇಳಿಕೆಯಾಗಿದೆ. 40 ಸಾವಿರ ರೂ. ನಿಂದ ಹಿಡಿದು ಐಷಾರಾಮಿ ಕಾರುಗಳ ಬೆಲೆ ಸುಮಾರು 18 ಲಕ್ಷ ರೂ. ಇಳಿಕೆಯಾಗಿದೆ.

    ಮೊದಲು ಕಾರು ಮತ್ತು ಬೈಕುಗಳಿಗೆ 28% ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಈಗ 350 ಸಿಸಿಗಿಂತ ಕಡಿಮೆ ಇರುವ ಬೈಕ್‌ ಮತ್ತು 1200 ಸಿಸಿಗಿಂತ ಕಡಿಮೆ ಇರುವ ಸಣ್ಣ ಕಾರುಗಳ ತೆರಿಗೆಯನ್ನು 28% ನಿಂದ 18% ಇಳಿಕೆ ಮಾಡಲಾಗಿದೆ.

    ಐಷಾರಾಮಿ ವಾಹನಗಳ ಮೇಲೆ 40% ತೆರಿಗೆ ಹಾಕಲಾಗುತ್ತಿದೆ. ಐಷಾರಾಮಿ ವಾಹನಗಳಿಗೆ 40% ತೆರಿಗೆ ವಿಧಿಸಿದ್ರೂ ಬೆಲೆ ಕಡಿಮೆಯಾಗಲಿದೆ. ಈ ಮೊದಲು 28% ಜಿಎಸ್‌ಟಿ ಇದ್ದರೂ ಸೆಸ್‌ 20-22% ಹಾಕಲಾಗುತ್ತಿತ್ತು. ಇದರಿಂದಾಗಿ ತೆರಿಗೆಯೇ 50% ಆಗುತ್ತಿತ್ತು. ಆದರೆ ಇನ್ನು ಮುಂದೆ ಈ ಸೆಸ್‌ ಇರುವುದಿಲ್ಲ. ಹೀಗಾಗಿ ಐಷಾರಾಮಿ ಕಾರುಗಳ ಬೆಲೆಯೂ ಇಳಿಕೆಯಾಗಲಿದೆ.  ಇದನ್ನೂ ಓದಿ: ಇಂದಿನಿಂದ ಉಳಿತಾಯ ಹಬ್ಬ| ನಾವು ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ?

    ಕೆಳಗೆ ನೀಡಲಾಗಿರುವ ದರ ಶೋರೂಂ ದರ ಆಗಿದ್ದು ಇದು ರಾಜ್ಯದಿಂದ ರಾಜ್ಯಕ್ಕೆ, ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುತ್ತದೆ. ಈ ದರಕ್ಕೆ  ರೋಡ್‌ ಟ್ಯಾಕ್ಸ್‌, ರಿಜಿಸ್ಟ್ರೇಷನ್‌ ಫೀಸ್‌, ಇನ್ಶುರೆನ್ಸ್‌ ಅಪ್ಲೈ ಆಗುವುದಿಲ್ಲ.

    ಮಾರುತಿ ಸುಜುಕಿ
    ಆಲ್ಟೊ ಕೆ10: 40,000 ರೂ.
    ವ್ಯಾಗನ್ಆರ್: 57,000 ರೂ.
    ಸ್ವಿಫ್ಟ್: 58,000 ರೂ.
    ಡಿಜೈರ್: 61,000 ರೂ.
    ಬಲೆನೊ: 60,000 ರೂ.
    ಫ್ರಾಂಕ್ಸ್: 68,000 ರೂ.

    ಬ್ರೆಝಾ: 78,000 ರೂ.
    ಇಕೊ: 51,000 ರೂ.
    ಎರ್ಟಿಗಾ: 41,000 ರೂ.
    ಸೆಲೆರಿಯೊ: 50,000 ರೂ.
    ಎಸ್-ಪ್ರೆಸ್ಸೊ: 38,000 ರೂ.
    ಇಗ್ನಿಸ್: 52,000 ರೂ.
    ಜಿಮ್ನಿ: 1.14 ಲಕ್ಷ ರೂ.
    XL6: 35,000 ರೂ.
    ಇನ್ವಿಕ್ಟೋ: 2.25 ಲಕ್ಷ ರೂ.

     


    ಮಹೀಂದ್ರಾ
    ಬೊಲೆರೊ ನಿಯೋ: 1.27 ಲಕ್ಷ ಅಗ್ಗ
    XUV 3XO: 1.40 ಲಕ್ಷ ರೂ. (ಪೆಟ್ರೋಲ್), 1.56 ಲಕ್ಷ ರೂ. (ಡೀಸೆಲ್)
    ಥಾರ್: 1.35 ಲಕ್ಷ ರೂ.
    ಥಾರ್ ರಾಕ್ಸ್: 1.33 ಲಕ್ಷ ರೂ.
    ಸ್ಕಾರ್ಪಿಯೋ ಕ್ಲಾಸಿಕ್: 1.01 ಲಕ್ಷ ರೂ.
    ಸ್ಕಾರ್ಪಿಯೋ ಎನ್: 1.45 ಲಕ್ಷ ರೂ.
    XUV700: 1.43 ಲಕ್ಷ ರೂ. ಇದನ್ನೂ ಓದಿ:  ಇಂದಿನಿಂದ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆ- ಮೊದಲು ಎಷ್ಟು? ಈಗ ಎಷ್ಟು ಇಳಿಕೆ?

     

    ಟಾಟಾ ಮೋಟಾರ್ಸ್
    ಟಿಯಾಗೊ: 75,000 ರೂ.
    ಟಿಗೋರ್: 80,000 ರೂ.
    ಆಲ್ಟ್ರೋಜ್: 1.10 ಲಕ್ಷ ರೂ.
    ಪಂಚ್: 85,000 ರೂ.
    ನೆಕ್ಸಾನ್: 1.55 ಲಕ್ಷ ರೂ.
    ಹ್ಯಾರಿಯರ್: 1.40 ಲಕ್ಷ ರೂ.
    ಸಫಾರಿ: 1.45 ಲಕ್ಷ ರೂ.
    ಕರ್ವ್: 65,000 ರೂ.

     


    ಟೊಯೋಟಾ 
    ಫಾರ್ಚೂನರ್: 3.49 ಲಕ್ಷ ರೂ.
    ಲೆಜೆಂಡರ್: 3.34 ಲಕ್ಷ ರೂ.
    ಹಿಲಕ್ಸ್: 2.52 ಲಕ್ಷ
    ವೆಲ್‌ಫೈರ್: 2.78 ಲಕ್ಷ ರೂ.
    ಕ್ಯಾಮ್ರಿ: 1.01 ಲಕ್ಷ ರೂ.
    ಇನ್ನೋವಾ ಕ್ರಿಸ್ಟಾ: 1.80 ಲಕ್ಷ ರೂ.
    ಇನ್ನೋವಾ ಹೈಕ್ರಾಸ್: 1.15 ಲಕ್ಷ ರೂ.

     

    ಲ್ಯಾಂಡ್‌ ರೋವರ್
    ರೇಂಜ್ ರೋವರ್ 4.4P SV LWB: 30.4 ಲಕ್ಷ ರೂ.
    ರೇಂಜ್ ರೋವರ್ 3.0D SV LWB: 27.4 ಲಕ್ಷ ರೂ.
    ರೇಂಜ್ ರೋವರ್ 3.0P: 18.3 ಲಕ್ಷ ರೂ.
    ಡಿಸ್ಕವರಿ: 9.9 ಲಕ್ಷ ರೂ.
    ಡಿಸ್ಕವರಿ ಸ್ಪೋರ್ಟ್: 4.6 ಲಕ್ಷ ರೂ.

    ಕಿಯಾ
    ಸೋನೆಟ್: 1.64 ಲಕ್ಷ ರೂ.
    ಸಿರೋಸ್: 1.86 ಲಕ್ಷ ರೂ.
    ಸೆಲ್ಟೋಸ್: 75,372 ರೂ.
    ಕ್ಯಾರೆನ್ಸ್: 48,513 ರೂ.
    ಕ್ಯಾರೆನ್ಸ್ ಕ್ಲಾವಿಸ್: 78,674 ರೂ.
    ಕಾರ್ನಿವಲ್: 4.48 ಲಕ್ಷ ರೂ.
    ಸ್ಕೋಡಾ – 5.8 ಲಕ್ಷ ರೂ.
    ಕೊಡಿಯಾಕ್: 3.3 ಲಕ್ಷ ರೂ. ಜಿಎಸ್‌ಟಿ ಕಡಿತ + 2.5 ಲಕ್ಷ ರೂ. ಹಬ್ಬದ ಕೊಡುಗೆಗಳು
    ಕುಶಾಕ್: 66,000 ರೂ. ಜಿಎಸ್‌ಟಿ ಕಡಿತ + 2.5 ಲಕ್ಷ ರೂ. ಹಬ್ಬದ ಕೊಡುಗೆಗಳು
    ಸ್ಲಾವಿಯಾ: 63,000 ರೂ. ಜಿಎಸ್‌ಟಿ ಕಡಿತ + 1.2 ಲಕ್ಷ ರೂ. ಹಬ್ಬದ ಕೊಡುಗೆಗಳು

     

    ಹುಂಡೈ 
    ಗ್ರ್ಯಾಂಡ್ ಐ10 ನಿಯೋಸ್: 73,808 ರೂ.
    ಔರಾ: 78,465 ರೂ.
    ಎಕ್ಸ್‌ಟರ್: 89,209 ರೂ.
    i20: 98,053 ರೂ. (ಎನ್-ಲೈನ್ 1.08 ಲಕ್ಷ ರೂ.)
    ವೆನ್ಯೂ: 1.23 ಲಕ್ಷ ರೂ.(ಎನ್-ಲೈನ್ 1.19 ಲಕ್ಷ ರೂ.)
    ವೆರ್ನಾ: 60,640 ರೂ.
    ಕ್ರೆಟಾ: 72,145 ರೂ.(ಎನ್-ಲೈನ್ 71,762 ರೂ.)
    ಅಲ್ಕಾಜರ್: 75,376 ರೂ.
    ಟಕ್ಸನ್: 2.4 ಲಕ್ಷ ರೂ.

    ರೆನಾಲ್ಟ್
    ಕಿಗರ್: 96,395 ರೂ


    ನಿಸ್ಸಾನ್ – 1 ಲಕ್ಷ ರೂ.
    ಮ್ಯಾಗ್ನೈಟ್ ವಿಸಿಯಾ ಎಂಟಿ: 6 ಲಕ್ಷ ರೂ.
    ಮ್ಯಾಗ್ನೈಟ್ ಸಿವಿಟಿ ಟೆಕ್ನಾ: 97,300 ರೂ.
    ಮ್ಯಾಗ್ನೈಟ್ ಸಿವಿಟಿ ಟೆಕ್ನಾ+: 1,00,400 ರೂ.
    ಸಿಎನ್‌ಜಿ ರೆಟ್ರೋಫಿಟ್ ಕಿಟ್: 71,999 ರೂ.