Tag: capcicum bonda

  • ಬಿಸಿ ಬಿಸಿ ಕ್ಯಾಪ್ಸಿಕಂ ಬೋಂಡಾ ಮಾಡಿ ಸವಿಯಿರಿ

    ಬಿಸಿ ಬಿಸಿ ಕ್ಯಾಪ್ಸಿಕಂ ಬೋಂಡಾ ಮಾಡಿ ಸವಿಯಿರಿ

    ಬಜ್ಜಿ, ಬೋಂಡಾ ಎಂದರೆ ಎಲ್ಲರಿಗೂ ಸಾಮಾನ್ಯವಾಗಿ ಇಷ್ಟವಾಗುತ್ತದೆ. ಆದರೆ ನಾವು ತಿನ್ನಬೇಕು ಎಂದು ಅನ್ನಿಸಿದಾಗಲೇಲ್ಲಾ ಹೋಟೆಲ್ ಹಾಗೂ ರಸ್ತೆ ಬದೀ ಇರುವ ಅಂಗಡಿಗಳಿಗೆ ಹೋಗುತ್ತವೆ. ಆದರೆ ಇಂದು ಸ್ವಲ್ಪ ವಿಭಿನ್ನವಾಗಿ ಕ್ಯಾಪ್ಸಿಕಂ ಬೋಂಡಾವನ್ನು ಮನೆಯಲ್ಲಿ ತಯಾರಿಸಿ ಅದರೊಳಗೆ ಮಸಾಲೆ ತುಂಬಿ ತಿನ್ನಲು ತುಂಬಾ ರುಚಿಯಾಗಿರುತ್ತದೆ.


    ಬೇಕಾಗುವ ಸಾಮಗ್ರಿಗಳು:
    * ಕ್ಯಾಪ್ಸಿಕಂ 3-4
    * ಕಡಲೆ ಹಿಟ್ಟು ಅರ್ಧ ಕಪ್
    * ಮೆಣಸಿನ ಪುಡಿ – ಆರ್ಧ ಚಮಚ
    * ಅರಿಶಿಣ ಪುಡಿ – ಅರ್ಧ ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- 2ಕಪ್
    * ಈರುಳ್ಳಿ -2
    * ಚಾಟ್ ಮಸಾಲ- ಅರ್ಧ ಚಮಚ
    * ಕ್ಯಾರೆಟ್ – 1 ಚಿಟಿಕೆಯಷ್ಟು
    * ನಿಂಬೆ ರಸ- ಅರ್ಧ ಚಮಚ

    ಮಾಡುವ ವಿಧಾನ:
    *  ಕ್ಯಾಪ್ಸಿಕಂ ಅನ್ನು ಕುದಿಯುವ ನೀರಿಗೆ ಹಾಕಿ 5 ನಿಮಿಷ ಬೇಯಿಸಿ, ನಂತರ ನೀರಿನಿಂದ ತೆಗೆದು ಒಂದು ಬಟ್ಟಲಿನಲ್ಲಿ ಹಾಕಿಡಿ.
    * ಒಂದು ಬಟ್ಟಲಿಗೆ ಕಡಲೆ ಹಿಟ್ಟು ಹಾಕಿ ಅದಕ್ಕೆ ಖಾರದ ಪುಡಿ, ಅರಿಶಿಣ ಪುಡಿ, ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಸಿಕೊಳ್ಳಬೇಕು. ಇದನ್ನೂ ಓದಿ: ಗರಂ ಗರಂ ಬ್ರೆಡ್ ಬೋಂಡ ಮಾಡಿ ಸವಿಯಿರಿ


    * ಇರುಳ್ಳಿ, ಚಾಟ್ ಮಸಾಲ, ಕ್ಯಾರೆಟ್, ನಿಂಬೆ ರಸ, ಅರಿಶಿಣ, ಎಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಕ್ಯಾಪ್ಸಿಕಂ ಒಳಗೆ ತುಂಬಲು ಸಿದ್ಧಮಾಡಿಕೊಳ್ಳಬೇಕು.

    * ಈಗ ಡೀಪ್ ಫ್ರೈಗೆ ಸಾಕಾಗುವಷ್ಟು ಎಣ್ಣೆಯನ್ನು ಬಾಣಲೆಗೆ ಹಾಕಿ ಕಾಯಿಸಿ, ಎಣ್ಣೆ ಕಾದ ನಂತರ ಕ್ಯಾಪ್ಸಿಕಂ ಅನ್ನು ಕಡಲೆ ಹಿಟ್ಟಿನ ಮಿಶ್ರಣಕ್ಕೆ ಅದ್ದಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವಾಗ ತೆಗೆಯಿರಿ.
    * ನಂತರ ಈಗ ಕರಿದ ಕ್ಯಾಪ್ಸಿಕಂ ಒಳಗೆ ತುಂಬಲು ಹೇಳಿದ ಸಾಮಾಗ್ರಿಗಳನ್ನು ಹಾಕಿದರೆ ರುಚಿ ರುಚಿಯಾದ ಕ್ಯಾಪ್ಸಿಕಂ ಬೋಂಡಾ ಸಿದ್ಧವಾಗುತ್ತದೆ.