Tag: Cap

  • 21 ಯುದ್ಧವಿಮಾನ, 5 ರಕ್ಷಣಾ ಹಡಗುಗಳಿಂದ ತೈವಾನ್ ಸುತ್ತುವರಿದ ಚೀನಾ

    21 ಯುದ್ಧವಿಮಾನ, 5 ರಕ್ಷಣಾ ಹಡಗುಗಳಿಂದ ತೈವಾನ್ ಸುತ್ತುವರಿದ ಚೀನಾ

    ತೈಪೆ: ಚೀನಾ ಹಾಗೂ ತೈವಾನ್ ನಡುವಣ ಸಂಘರ್ಷ ಶಮನಗೊಳ್ಳುತ್ತಿದೆ ಅಂದುಕೊಳ್ಳುತ್ತಿರುವಾಗಲೇ ಮತ್ತೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

    ಉಕ್ರೇನ್ ಯುದ್ಧದ ನಂತರ ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿರುವ ವಿಶ್ವದ ಹಲವು ದೇಶಗಳು ಮತ್ತೊಂದು ಸಂಘರ್ಷ ಬೇಡ ಎನ್ನುವ ನಿಲುವಿಗೆ ಬಂದಿವೆ. ಈ ನಡುವೆ ಸಮರಾಭ್ಯಾಸದ ನೆಪದಲ್ಲಿ ತೈವಾನ್ ಕೊಲ್ಲಿಯಲ್ಲಿ ಚೀನಾ ಗಸ್ತು ಹೆಚ್ಚಿಸಿದ್ದು, ಇಡೀ ದ್ವೀಪಕ್ಕೆ ದಿಗ್ಬಂಧನ ಹಾಕುವ ತಾಲೀಮು ಮುಂದುವರಿಸಿದೆ. ಇದನ್ನೂ ಓದಿ: ಮಡಕೆ ಒಡೆಯುವ ಜಾನ್ ಸಿನಾ ಫೋಟೋ ಹಂಚಿಕೊಂಡು ಶ್ರೀಕೃಷ್ಣ ಜನ್ಮಾಷ್ಟಮಿ ಶುಭಕೋರಿದ WWE

    ತೈವಾನ್ ಸುತ್ತಲೂ 21 ಯುದ್ಧವಿಮಾನಗಳು ಹಾಗೂ 5 ರಕ್ಷಣಾ ಹಡಗುಗಳಿಂದ ತೈವಾನ್‌ನನ್ನು ಸುತ್ತುವರಿದಿದೆ. ಅವುಗಳಲ್ಲಿ ಚೀನಾದ ಮಿಲಿಟರಿಯಿಂದ 17 ವಿಮಾನಗಳು ಹಾಗೂ 5 ಹಡಗುಗಳನ್ನು ಸುತ್ತುರವರಿದಿರುಬವುದನ್ನು ತೈವಾನ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯ ಟ್ರ್ಯಾಕ್‌ ಮಾಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: 11 ರಾಜ್ಯಗಳಲ್ಲಿ ಮಹಿಳೆಯರೇ ಹೆಚ್ಚು ಸೆಕ್ಸ್ ಪಾಲುದಾರರನ್ನು ಹೊಂದಿದ್ದಾರೆ: ವರದಿ

    17 ಪೀಪಲ್ಸ್ ಲಿಬರೇಶನ್ ಆರ್ಮಿ ಏರ್ ಫೋರ್ಸ್ (ಪಿಎಲ್‌ಎಎಎಫ್) ಯುದ್ಧ ವಿಮಾನಗಳಲ್ಲಿ 8 ತೈವಾನ್ ಜಲಮಾರ್ಗದ ಮಧ್ಯ ಗಡಿಯನ್ನು ದಾಟಿವೆ. ಕ್ಸಿಯಾನ್ ಜೆಎಚ್-7 ಫೈಟರ್-ಬಾಂಬರ್‌ಗಳು, ಎರಡು ಸುಖೋಯ್ ಎಸ್‌ಯು-30 ಫೈಟರ್‌ಗಳು ಹಾಗೂ ಎರಡು ಶೆನ್ಯಾಂಗ್ ಎ-11 ಜೆಟ್‌ಗಳನ್ನು ಒಳಗೊಂಡಿವೆ. ಚೀನಾದ ಈ ಎಲ್ಲ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ತೈವಾನ್ ಯುದ್ಧ ವಾಯುಪಡೆಗಳು, ನೌಕಾಪಡೆಯ ಹಡಗುಗಳು ಹಾಗೂ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ವೀಡಿಯೋ: ಶೂ ಲೇಸ್‍ನಿಂದ ಬಿಯರ್ ಬಾಟಲ್ ಓಪನ್ ಮಾಡಿದ ವ್ಯಕ್ತಿ

    ವೀಡಿಯೋ: ಶೂ ಲೇಸ್‍ನಿಂದ ಬಿಯರ್ ಬಾಟಲ್ ಓಪನ್ ಮಾಡಿದ ವ್ಯಕ್ತಿ

    ಪನರ್ ಬಳಸದೇ ಬಿಯರ್ ಬಾಟಲ್‍ನನ್ನು ಹೇಗೆ ತೆಗೆಯಬೇಕೆಂಬುವುದನ್ನು ವ್ಯಕ್ತಿಯೊಬ್ಬ ತನ್ನ ಚಾಣಾಕ್ಷತನದಿಂದ ತೋರಿಸಿದ್ದಾನೆ. ಸದ್ಯ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

    ಸಾಮಾನ್ಯವಾಗಿ ಹಲ್ಲಿನ ಸಹಾಯದಿಂದ ಅಥವಾ ಮೇಜಿನ ತುದಿಯ ಭಾಗದಿಂದ ಬಿಯರ್ ಬಾಟಲ್‍ನ ಮುಚ್ಚಳವನ್ನು ತೆರೆಯುವುದನ್ನು ನೋಡಿರುತ್ತೇವೆ. ಆದರೆ ಈ ವ್ಯಕ್ತಿ ತನ್ನ ಶೂ ಲೇಸ್‍ನನ್ನು ಬಳಸಿಕೊಂಡು ಬಿಯರ್ ಬಾಟಲ್ ಮುಚ್ಚಳವನ್ನು ಓಪನ್ ಮಾಡಿದ್ದಾನೆ. ಬಿಯರ್ ಪ್ರಿಯರು ಬಾಟಲ್ ಮುಚ್ಚಳ ತೆಗೆಯಲು ಈ ಟ್ರಿಕ್ಸ್‍ನನ್ನು ಬಳಸಬಹುದಾಗಿದೆ. ಈ ವೀಡಿಯೋವನ್ನು ‘ಹೋಲ್ಡ್ ಮೈ ಬಿಯರ್’ ಎಂಬ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಇಚ್ಛಾ ಶಕ್ತಿ ಹೊಂದಿದ್ದರೆ, ಒಂದು ದಾರಿ ಇರುತ್ತದೆ’ ಎಂದು ಕ್ಯಾಪ್ಷನ್ ಬರೆಯಲಾಗಿದೆ.

    ವೀಡಿಯೋದಲ್ಲಿ ವ್ಯಕ್ತಿ ಮೇಜಿನ ಮೇಲೆ ಕಾಲು ಇರಿಸಿಕೊಂಡು, ಶೂ ಲೇಸ್‍ನನ್ನು ಬಿಯರ್ ಬಾಟಲ್ ಸುತ್ತಲೂ ಸುತ್ತುತ್ತಾನೆ. ಬಳಿಕ ಜೋರಾಗಿ ಶೂ ಲೇಸ್‍ನನ್ನು ಮೇಲಕ್ಕೆ ಎಳೆಯುತ್ತಾನೆ. ಆಗ ಬಾಟಲ್ ಕ್ಯಾಪ್ ಓಪನ್ ಆಗುತ್ತದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ 37,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 600ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಹಲವು ನೆಟ್ಟಿಗರು ಕಾಮೆಂಟ್ ನೀಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

  • ಐಪಿಎಲ್ ಪಂದ್ಯಗಳ ವೇಳೆ ಕ್ಯಾಪ್ಟನ್‍ಗಳು 2 ಟೋಪಿ ಧರಿಸಲು ಕಾರಣವೇನು?

    ಐಪಿಎಲ್ ಪಂದ್ಯಗಳ ವೇಳೆ ಕ್ಯಾಪ್ಟನ್‍ಗಳು 2 ಟೋಪಿ ಧರಿಸಲು ಕಾರಣವೇನು?

    ಅಬುಧಾಬಿ: ಸಾಮಾನ್ಯವಾಗಿ ಕ್ರೆಕೆಟ್ ನಡೆಯುತ್ತಿರುವ ವೇಳೆ ಎಲ್ಲ ಆಟಗಾರರು ಒಂದೊಂದು ಟೋಪಿ ಧರಿಸಿರುತ್ತಾರೆ. ಆದರೆ ಈ ಬಾರಿ ಐಪಿಎಲ್‍ನಲ್ಲಿ ನಾಯಕರು ಎರಡು ಟೋಪಿಗಳನ್ನು ಧರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

    ಕೊರೊನಾ ಕಾರಣದಿಂದ ಐಪಿಎಲ್-2020 ಆರು ತಿಂಗಳು ತಡವಾಗಿ ಯುಎಇಯಲ್ಲಿ ಆರಂಭವಾಗಿ ಅರ್ಧಕ್ಕಿಂತ ಹೆಚ್ಚಿನ ಪಯಾಣವನ್ನು ಯಶಸ್ವಿಯಾಗಿ ಮುಗಿಸಿದೆ. ಈಗಾಗಲೇ 43 ಪಂದ್ಯಗಳು ಐಪಿಎಲ್‍ನಲ್ಲಿ ಮುಗಿದಿವೆ. ಈ ನಡುವೆ ಪಂದ್ಯದ ವೇಳೆ ನಾಯಕರ ಎರಡು ಟೋಪಿ ಧರಿಸಲು ಕಾರಣವೇನು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದರು.

    ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಕೊರೊನಾ ನಡುವೆಯೂ ಬಿಸಿಸಿಐ ಹಲವಾರು ನಿಯಮಗಳನ್ನು ಮಾಡಿಕೊಂಡು ಐಪಿಎಲ್ ಅನ್ನು ಆರಂಭ ಮಾಡಿದೆ. ಅಂತೆಯೇ ಕೊರೊನಾ ನಡುವೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜನೆ ಮಾಡಿದ್ದ ಐಸಿಸಿ ಕೂಡ ಕೆಲ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.ಕೊರೊನಾ ಕಾರಣದಿಂದ ಬಾಲಿಗೆ ಎಂಜಲನ್ನು ಹಚ್ಚಬಾರದು ಎಂಬ ನಿಯಮವನ್ನು ಐಸಿಸಿ ಜಾರಿಗೆ ಮಾಡಿತ್ತು.

    ಈ ಮೊದಲು ಪಂದ್ಯದಲ್ಲಿ ಬೌಲರ್ ಬೌಲ್ ಮಾಡುವ ಮೊದಲು ಆತನ ಟೋಪಿ, ಗ್ಲಾಸ್ ಮತ್ತು ಸ್ವೆಟ್ಟರ್ ಇನ್ನಿತರ ವಸ್ತುಗಳನ್ನು ಅಂಪೈರ್ ಕೈಗೆ ಕೊಡುತ್ತಿದ್ದರು. ಈಗ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಐಸಿಸಿ ಹೊಸ ನಿಯಮ ಮಾಡಿದ್ದು, ಈ ನಿಯಮದಂತೆ ಯಾವ ಆಟಗಾರನೂ ಕೂಡ ಪಂದ್ಯದ ವೇಳೆ ತನ್ನ ಯಾವುದೇ ವಸ್ತುಗಳನ್ನು ಅಂಪೈರ್ ಗೆ ನೀಡುವಂತಿಲ್ಲ. ಜೊತೆಗೆ ವಸ್ತುಗಳ ಮೂಲಕ ಯಾವುದೇ ಅಂಪೈರ್ ಅನ್ನು ಸಂಪರ್ಕ ಮಾಡುವಂತಿಲ್ಲ.

    ಐಸಿಸಿ ಈ ನಿಯಮವನ್ನು ಬಿಸಿಸಿಐ ಐಪಿಎಲ್‍ನಲ್ಲೂ ಕೂಡ ಅವಳವಡಿಸಿದ್ದು, ಯಾವುದೇ ಬೌಲರ್ ಬೌಲ್ ಮಾಡುವಾಗ ತನ್ನ ವಸ್ತುಗಳನ್ನು ಅಂಪೈರ್ ಗೆ ನೀಡುವಂತಿಲ್ಲ. ಜೊತೆಗೆ ಅವರನ್ನು ಸಂಪರ್ಕ ಮಾಡುವಂತಿಲ್ಲ. ಹೀಗಾಗಿ ಯಾವುದೇ ತಂಡದ ಬೌಲರ್ ಬೌಲ್ ಮಾಡುವಾಗ ತನ್ನ ಯಾವುದೇ ವಸ್ತುಗಳನ್ನು ಅಂಪೈರಿಗೆ ನೀಡುವುದಿಲ್ಲ. ಆದ್ದರಿಂದ ಬೌಲರ್ ಬೌಲ್ ಮಾಡುವಾಗ ಆತನ ಟೋಪಿಯನ್ನು ನಾಯಕ ಧರಿಸುವ ಕಾರಣ ಕ್ಯಾಪ್ಟನ್‍ಗಳು ಎರಡು ಟೋಪಿ ತೊಟ್ಟು ಕಾಣಿಸಿಕೊಳ್ಳುತ್ತಿದ್ದಾರೆ.

    ಕೊರೊನಾ ಕಾರಣದಿಂದ ಬಹಳ ಮುಂಜಾಗ್ರತೆವಹಿಸಿ ಐಪಿಎಲ್ ಅನ್ನು ನಡೆಸಲಾಗುತ್ತಿದೆ. ಆದರೂ ಐಪಿಎಲ್ ಆರಂಭಕ್ಕೂ ಮುನ್ನವೇ ಕೊರೊನಾ ಕರಿನೆರಳು ಟೂರ್ನಿಯ ಮೇಲೆ ಬಿದ್ದಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲ ಆಟಗಾರರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ ನಂತರ ಅವರು ಸೋಂಕಿನಿಂದ ಗುಣಮುಖರಾಗಿದ್ದು, ಐಪಿಎಲ್ ಆರಂಭವಾಗಿ ತನ್ನ ಅರ್ಧ ಜರ್ನಿಯನ್ನು ಯಾವುದೇ ತೊಂದರೆಯಿಲ್ಲದೆ ಮುಗಿಸಿದೆ.