Tag: canter

  • ಕೋಳಿ ತುಂಬಿದ್ದ ಕ್ಯಾಂಟರ್ ಪಲ್ಟಿ – ಸತ್ತ ಕೋಳಿಗಳನ್ನೇ ಹೊತ್ತೊಯ್ದ ಜನರು

    ಕೋಳಿ ತುಂಬಿದ್ದ ಕ್ಯಾಂಟರ್ ಪಲ್ಟಿ – ಸತ್ತ ಕೋಳಿಗಳನ್ನೇ ಹೊತ್ತೊಯ್ದ ಜನರು

    ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಕೋಳಿ ತುಂಬಿದ್ದ ಕ್ಯಾಂಟರ್ ಪಲ್ಟಿಯಾದ ಪರಿಣಾಮ ನೂರಾರು ಕೋಳಿಗಳು ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ದ್ಯಾಮೇನಹಳ್ಳಿ ಬಳಿ ನಡೆದಿದೆ.

    ಆರೀಫ್ ಮತ್ತು ಸಂತೋಷ್ ಎಂಬವರಿಗೆ ಸೇರಿದ ಕೋಳಿಗಳಾಗಿದ್ದು, ಕ್ಯಾಂಟರ್ ಪಲ್ಟಿಯಾಗಿ ಬರೋಬ್ಬರಿ 800 ಕೋಳಿಗಳು ಸಾವನ್ನಪ್ಪಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕ್ಯಾಂಟರ್ ನಲ್ಲಿ ಕೋಳಿ ತುಂಬಿಕೊಂಡು ದಾವಣಗೆರೆಯಿಂದ ದ್ಯಾಮೇನಹಳ್ಳಿಯಲ್ಲಿರುವ ಕೋಳಿ ಫಾರ್ಮ್ ಹೌಸ್‍ಗೆ ತೆಗೆದುಕೊಂಡು ಹೋಗಲಾಗುತಿತ್ತು.

    ಆ ಮಾರ್ಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿಯಾಗಿದೆ. ಆದರೆ ಜನರು ಅಪಘಾತ ನಡೆದಾಗ ರಕ್ಷಣೆ ಮಾಡುವ ಬದಲು ಸತ್ತ ಕೋಳಿಗಳನ್ನು ಬಿಡದೇ ಎರಡು-ಮೂರು ಕೋಳಿಗಳನ್ನು ತೆಗೆದುಕೊಂಡು ಹೋಗಿದ್ದಾರೆ.

    ಈ ಘಟನೆ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಲಾರಿ, ಕ್ಯಾಂಟರ್ ಮುಖಾಮುಖಿ ಡಿಕ್ಕಿ – 3 ಸಾವು, ಮೂವರು ಗಂಭೀರ

    ಲಾರಿ, ಕ್ಯಾಂಟರ್ ಮುಖಾಮುಖಿ ಡಿಕ್ಕಿ – 3 ಸಾವು, ಮೂವರು ಗಂಭೀರ

    ಬೆಂಗಳೂರು: ಲಾರಿ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿ ಮೂವರು ಮೃತಪಟ್ಟು, ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ಆನೇಕಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ತಿರುಮಗೊಂಡನಹಳ್ಳಿ ಬಳಿ ನಡೆದಿದೆ.

    ಬೆಂಗಳೂರಿನಿಂದ ತಮಿಳುನಾಡಿನತ್ತ ತೆರಳುತ್ತಿದ್ದ ಲಾರಿಗೆ ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಟೈರ್ ಸ್ಪೋಟಗೊಂಡು ಡಿವೈಡರ್ ದಾಟಿ ಎದುರು ಬರುತ್ತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್ ನಲ್ಲಿದ್ದ 3 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟವರ ಬಗ್ಗೆ ಯಾವುದೇ ವಿವರ ತಿಳಿದು ಬಂದಿಲ್ಲ. ಲಾರಿ ಚಾಲಕ ಹಾಗೂ ಕ್ಯಾಂಟರ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಸಂಚಾರ ದಟ್ಟಣೆ ಆಗಿದೆ.

    ಅಪಘಾತದಿಂದ ಮೂರು ನಾಲ್ಕು ಕಿ.ಮೀ ಉದ್ದ ವಾಹನಗಳು ಸಾಲುಗಟ್ಟಿ ನಿಂತಿದೆ. ಸದ್ಯ ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ವಾಹನ ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

  • ಗೋವಾದಿಂದ ವಾಪಸ್ಸಾಗ್ತಿದ್ದಾಗ ಕ್ಯಾಂಟರ್‌ಗೆ ಡಿಕ್ಕಿ- ಕ್ರೂಸರ್‌ನಲ್ಲಿದ್ದ 9 ಮಂದಿ ಸಾವು

    ಗೋವಾದಿಂದ ವಾಪಸ್ಸಾಗ್ತಿದ್ದಾಗ ಕ್ಯಾಂಟರ್‌ಗೆ ಡಿಕ್ಕಿ- ಕ್ರೂಸರ್‌ನಲ್ಲಿದ್ದ 9 ಮಂದಿ ಸಾವು

    ವಿಜಯಪುರ: ಬೆಳ್ಳಂಬೆಳಗ್ಗೆ ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕ್ರೂಸರ್‌ನಲ್ಲಿದ್ದ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಘಟನೆ ವಿಜಯಪುರದ ಸಿಂದಗಿ ತಾಲೂಕಿನ ಚಿಕ್ಕಸಿಂಧಗಿ ಗ್ರಾಮದ ಬಳಿ ಕ್ಯಾಂಟರ್ ಹಾಗೂ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಸಾಗರ್(25), ಚಾಂದಬಾಶಾ(26), ಅಜೀಮ್(25), ಅಂಬರೀಶ್(27), ಶಕೀರ್(28), ಗುರು(32), ಶ್ರೀನಾಥ(ಕ್ರೂಸರ್‌ ಡ್ರೈವರ್ 30), ಯುನೂಸ್(27), ಮಂಗಸಾಬ್(27) ಮೃತರನ್ನು ಗುರುತಿಸಲಾಗಿದೆ.

    ಅಪಘಾತದಿಂದಾಗಿ ಮಲ್ಲಿಕಾರ್ಜುನ, ಮಂಜು ಸದ್ದಾಂ, ಸಾಜೀದ್ ಎಂಬ ಮೂವರಿಗೆ ಗಂಭೀರ ಗಾಯಗಳಾಗಿವೆ. ಕ್ಯಾಂಟರ್‌ನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು, ಎಲ್ಲರನ್ನೂ ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೃತರು ಎಲ್ಲರು ಕಲಬುರಗಿ ಜಿಲ್ಲೆ ಚಿತ್ತಾಪುರ ಗ್ರಾಮದವರು ಎಂದು ತಿಳಿದುಬಂದಿದ್ದು, ಕಳೆದ 19ರಂದು ಮೋಜಿಗಾಗಿ ಗೋವಾಗೆ ತೆರಳಿದ್ದರು ಎನ್ನಲಾಗಿದೆ. ಗೋವಾದಿಂದ ಚಿತ್ತಾಪುರಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

    ಕ್ಯಾಂಟರ್ ಚಾಲಕ ಆಕಾಶ ದೊರೆ ಹಾಗೂ ಆನಂದ್‍ಗೆ ಕೂಡ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ರೂಸರ್ ವಾಹನ ಚಾಲಕ ಕುಡಿದ ಮತ್ತಿನಲ್ಲಿ, ನಿದ್ರೆಗೆ ಜಾರಿದ್ದೆ ಅಪಘಾತಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಕ್ರೂಸರ್, ಕ್ಯಾಂಟರ್ ಡಿಕ್ಕಿ- 9 ಮಂದಿ ದಾರುಣ ಸಾವು

    ಕ್ರೂಸರ್, ಕ್ಯಾಂಟರ್ ಡಿಕ್ಕಿ- 9 ಮಂದಿ ದಾರುಣ ಸಾವು

    ವಿಜಯಪುರ: ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಕ್ರೂಸರ್-ಕ್ಯಾಂಟರ್ ಡಿಕ್ಕಿಯಾಗಿ 9 ಜನ ಮೃತಪಟ್ಟಿದ್ದಾರೆ.

    ವಿಜಯಪುರ ಜಿಲ್ಲೆಯ ಚಿಕ್ಕಸಿಂದಗಿ ಬಳಿ ಈ ಘಟನೆ ನಡೆದಿದೆ. ಕ್ರೂಸರ್ ಹಾಗೂ ಕ್ಯಾಂಟರ್ ಪರಸ್ಪರ ಡಿಕ್ಕಿಯಾಗಿದೆ. ಪರಿಣಾಮ 9 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕಲಬುರಗಿ ಜಿಲ್ಲೆಯ ಚಿತ್ತಪೂರದವರು ಎಂದು ಹೇಳಲಾಗುತ್ತಿದೆ.

    ಕ್ಯಾಂಟರ್ ಸಿಂದಗಿ ಮೂಲಕ ವಿಜಯಪುರಕ್ಕೆ ಬರುತ್ತಿತ್ತು. ಇತ್ತ ಕ್ರೂಸರ್ ನಲ್ಲಿದ್ದ ಪ್ರಯಾಣಿಕರು ಗೋವಾದಲ್ಲಿ ಪಾರ್ಟಿ ಮುಗಿಸಿ ಹಿಂತಿರುಗುವಾಗ ಈ ಘಟನೆ ನಡೆದಿದೆ. ಅಲ್ಲದೆ ಕ್ರೂಸರ್ ನಲ್ಲಿ 15 ಮಂದಿ ಇದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಅದರಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸಿಂದಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಅಪಘಾತದಿಂದಾಗಿ ವಾಹನ ಸಂಪೂರ್ಣ ನಜ್ಜುಗುಜ್ಜು ಆಗಿದ್ದು, ಪರಿಣಾಮ ಮೃತರ ಗುರುತು ಸಿಗುತ್ತಿಲ್ಲ. ಸದ್ಯ ಈ ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • 15 ಅಡಿ ಆಳಕ್ಕೆ ಉರುಳಿತು 30ಕ್ಕೂ ಹೆಚ್ಚು ಮಂದಿಯಿದ್ದ KSRTC ಬಸ್!

    15 ಅಡಿ ಆಳಕ್ಕೆ ಉರುಳಿತು 30ಕ್ಕೂ ಹೆಚ್ಚು ಮಂದಿಯಿದ್ದ KSRTC ಬಸ್!

    – ಇತ್ತ ಕ್ಯಾಂಟರ್ ಪಲ್ಟಿಯಾಗಿ 2,000ಕ್ಕೂ ಹೆಚ್ಚು ಕೋಳಿಗಳ ಸಾವು

    ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ಸುಮಾರು 15 ಅಡಿಯ ಆಳಕ್ಕೆ ಉರುಳಿಬಿದ್ದಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿದ್ದ 30 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನೆಲಮಂಗಲದ ಲಕ್ಕೇನಹಳ್ಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

    ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಬಸ್ ಸುಮಾರು 15 ಅಡಿ ಆಳಕ್ಕೆ ಬಿದ್ದಿದ್ದಲ್ಲದೇ 4 ಕೆ.ವಿ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಸುಮಾರು 30 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಉರುಳಿಬಿದ್ದ ಪರಿಣಾಮ ಗಾಯಗೊಂಡಿದ್ದ ಪ್ರಯಾಣಿಕರನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆನೇಕಲ್ ಬಳಿ ಕ್ಯಾಂಟರ್ ಪಲ್ಟಿ:
    ಹೊಸೂರು ಮಾರ್ಗವಾಗಿ ಆನೇಕಲ್ ಗೆ  ಬರುತ್ತಿದ್ದ ಕ್ಯಾಂಟರ್ ವಾಹನವೊಂದು ಗುಡ್ನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ. ಕ್ಯಾಂಟರ್ ಬಿದ್ದ ರಭಸಕ್ಕೆ ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಕ್ಯಾಂಟರಿನಲ್ಲಿ ಸಾಗಿಸುತ್ತಿದ್ದ ಸುಮಾರು 2,000 ಕ್ಕೂ ಅಧಿಕ ಕೋಳಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಕ್ಯಾಂಟರ್ ವಾಹನವು ನಗರದ ಸುಗುಣ ಚಿಕನ್ ಕಂಪೆನಿಗೆ ಸೇರಿದ್ದಾಗಿದ್ದು, ಆನೇಕಲ್ ಚಿಕನ್ ಅಂಗಡಿಗಳಿಗೆ ಕೋಳಿಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಘಟನೆ ಸಂಬಂಧ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಕ್ಯಾಂಟರ್ ಹಿಂಬದಿಗೆ ಕಾರು ಡಿಕ್ಕಿ- ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

    ಕ್ಯಾಂಟರ್ ಹಿಂಬದಿಗೆ ಕಾರು ಡಿಕ್ಕಿ- ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

    ಚಿಕ್ಕಬಳ್ಳಾಪುರ: ಕ್ಯಾಂಟರ್ ಗೆ ಕಾರು ಡಿಕ್ಕಿಯಾದ ಪರಿಣಾಮ ಮೂವರು ಬೆಂಗಳೂರಿನ ಕಿಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ ಬಳಿ ನಡೆದಿದೆ.

    ಮುಂಜಾನೆ 3 ಗಂಟೆ ಸಮಯದಲ್ಲಿ ಅಪಘಾತವಾಗಿದ್ದು, ಅಪಘಾತದಲ್ಲಿ ಕಾರಿನಲ್ಲಿದ್ದ ಪ್ರಜ್ವಲ್, ಭೂಷಣ್, ವಿಶಾಲ್ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಮತ್ತೊರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.

    ವಿದ್ಯಾರ್ಥಿಗಳು ಬೆಂಗಳೂರು ಕಡೆಯಿಂದ ದೇವನಹಳ್ಳಿ ತಾಲೂಕು ವೆಂಕಟಗಿರಿಕೋಟೆಯ ಸ್ನೇಹಿತರ ಮನೆಗೆ ಬರುತ್ತಿದ್ದರು ಅಂತ ಮಾಹಿತಿ ತಿಳಿದು ಬಂದಿದೆ. ಕ್ಯಾಂಟರ್ ನಲ್ಲಿದ್ದ ಕಬ್ಬಿಣದ ಸರಳುಗಳಿಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ.

    ಈ ಸಂಬಂಧ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರ ಕ್ಯಾಂಟರ್ ಬಿಟ್ಟು ಚಾಲಕ ಪರಾರಿಯಾಗಿದ್ದು, ಚಾಲಕನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಮತ್ತೊಂದೆಡೆ ವಿದ್ಯಾರ್ಥಿಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕ್ಯಾಂಟರ್- ಅಪಘಾತದ ತೀವ್ರತೆಗೆ ಕ್ಲೀನರ್ ಸ್ಥಳದಲ್ಲೇ ಸಾವು

    ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕ್ಯಾಂಟರ್- ಅಪಘಾತದ ತೀವ್ರತೆಗೆ ಕ್ಲೀನರ್ ಸ್ಥಳದಲ್ಲೇ ಸಾವು

    ಬೆಂಗಳೂರು: ರಸ್ತೆ ಬದಿ ನಿಂತಿದ್ದ ಗೂಡ್ಸ್ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಗೊರಗುಂಟೆಪಾಳ್ಯ ಸಿಗ್ನಲ್ ನಲ್ಲಿ ನಡದಿದೆ.

    ಚನ್ನರಾಯಪಟ್ಟಣದ ನಿವಾಸಿ ಕಿರಣ್(25) ಮೃತ ದುರ್ದೈವಿ. ಕಿರಣ್ ಕ್ಯಾಂಟರ್ ಲಾರಿಯ ಕ್ಲೀನರ್ ಆಗಿದ್ದು, ಮುಂಜಾನೆ ನಾಲ್ಕು ಗಂಟೆ ಸರಿಯಾಗಿ ಈ ಘಟನೆ ಸಂಭವಿಸಿದೆ. ಗೊರಗುಂಟೆ ಪಾಳ್ಯ ಸಿಗ್ನಲ್‍ನ ಡಿವೈಡರ್ ಪಕ್ಕದಲ್ಲಿ ಗೂಡ್ಸ್ ಲಾರಿ ನಿಂತಿತ್ತು. ಈ ವೇಳೆ ಹಿಂದಿನಿಂದ ರಭಸವಾಗಿ ಬಂದ ಕ್ಯಾಂಟರ್ ಗೂಡ್ಸ್ ಲಾರಿಗೆ ಡಿಕ್ಕಿ ಹೊಡೆದಿದೆ.

    ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕ್ಯಾಂಟರ್ ನ ಚಾಲಕ ಮನೋಜ್ ಗೆ ಗಂಭಿರ ಗಾಯಗಳಾಗಿದ್ದು, ಅಪಘಾತ ನಡೆದ ನಿಮಿಷಗಳಲ್ಲೆ ಗೂಡ್ಸ್ ಲಾರಿ ಎಸ್ಕೇಪ್ ಆಗಿದೆ.

    ಕಿರಣ್ ಮೃತ ದೇಹವನ್ನು ರಾಮಯ್ಯ ಆಸ್ಫತ್ರೆಗೆ ರವಾನಿಸಲಾಗಿದೆ. ಅಲ್ಲದೇ ಗಾಯಾಳು ಮನೋಜ್ ನನ್ನು ರಾಮಯ್ಯ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಬಗ್ಗೆ ಯಶವಂತಪುರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಲಿಸುತ್ತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿ- ಚಾಲಕ ಸೇರಿ ದಂಪತಿ ಸಾವು!

    ಚಲಿಸುತ್ತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿ- ಚಾಲಕ ಸೇರಿ ದಂಪತಿ ಸಾವು!

    ತುಮಕೂರು: ಚಲಿಸುತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಕ್ಯಾಂಟರಿನಲ್ಲಿದ್ದ ದಂಪತಿ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರಿನ ಶಿರಾದ ದೊಡ್ಡ ಆಲದಮರದ ಬಳಿ ನಡೆದಿದೆ.

    ಚಾಲಕ ಲೋಕೇಶ್(34), ಹನುಮಂತರಾಜು(40) ಮತ್ತು ರಾಧಾ(35) ಮೃತ ದಂಪತಿ. ಚಲಿಸುತ್ತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಕ್ಯಾಂಟರ್ ನಲ್ಲಿ ಸಿಕ್ಕಿ ಶವಗಳು ನುಜ್ಜುಗುಜ್ಜಾಗಿದೆ. ಶವಗಳನ್ನು ವಾಹನದಿಂದ ಹೊರ ತೆಗೆಯಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

    ದಂಪತಿ ರಾಣಿಬೆನ್ನೂರಿನ ಕರೂರು ಗ್ರಾಮದವರಾಗಿದ್ದು, ಕಳ್ಳಂಬೆಳ್ಳಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಾರ್ ಮುಂದೆ ನಿಂತಿದ್ದ ಕ್ಯಾಂಟರ್ ಗೆ ಬೈಕ್ ಡಿಕ್ಕಿ- ಸವಾರ ಸಾವು

    ಬಾರ್ ಮುಂದೆ ನಿಂತಿದ್ದ ಕ್ಯಾಂಟರ್ ಗೆ ಬೈಕ್ ಡಿಕ್ಕಿ- ಸವಾರ ಸಾವು

    ಬೆಂಗಳೂರು: ಕ್ಯಾಂಟರ್ ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊಸೂರು ಮುಖ್ಯರಸ್ತೆ ಹಳೆ ಚಂದಾಪುರ ಸಮೀಪದ ಆರ್.ಕೆ ಬಾರ್ ಬಳಿ ನಡೆದಿದೆ.

    ಮಾಧವನ್(45) ಮೃತ ದುರ್ದೈವಿ. ಇವರು ಮೂಲತಃ ಆಂಧ್ರದವರು. ಹೆದ್ದಾರಿ ಬದಿಯಲ್ಲಿ ವಾಹನ ನಿಲ್ಲಿಸಿ ಮದ್ಯಪಾನ ಮಾಡಲೆಂದು ಚಾಲಕ ತೆರಳಿದ್ದಾಗ ಘಟನೆ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ 7ಕ್ಕೆ ಹೊಂದಿಕೊಂಡಂತಿರೋ ಆರ್.ಕೆ ಬಾರ್ ಮತ್ತು ರೆಸ್ಟೋರೆಂಟ್ ಬಳಿ ಚಾಲಕ ಕ್ಯಾಂಟರ್ ನಿಲ್ಲಿಸಿದ್ದರು. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ ರಮೇಶ್ ಒಡೆತನದ ಬಾರ್ ಅಂಡ್ ರೆಸ್ಟೋರೆಂಟ್ ಇದ್ದಾಗಿದೆ.

    ಬಾರ್ ಬಳಿಯ ಹೆದ್ದಾರಿಯಲ್ಲಿ ವಾಹನ ನಿಲ್ಲಿಸುವ ವಿಚಾರ ತಿಳಿದಿದ್ದರೂ ಪೊಲೀಸರು ಪ್ರಶ್ನೆ ಮಾಡುವುದಿಲ್ಲ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ. ಸದ್ಯ ಈ ಬಗ್ಗೆ ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕ್, ಕ್ಯಾಂಟರ್ ಮುಖಾಮುಖಿ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು

    ಬೈಕ್, ಕ್ಯಾಂಟರ್ ಮುಖಾಮುಖಿ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು

    ಬೆಂಗಳೂರು: ಬೈಕ್ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ನಿಡವಂದ ಗ್ರಾಮದ ಬಳಿ ನಡೆದಿದೆ.

     

    ಘಟನೆಯಿಂದಾಗಿ ಬೈಕ್ ಸವಾರರಾದ 30 ವರ್ಷದ ಜಗದೀಶ್ ಹಾಗೂ 32 ವರ್ಷದ ಸೀನಾನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಕ್ಯಾಂಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

    ಡಾಬಸ್‍ಪೇಟೆ ಪೊಲೀಸರು ಕ್ಯಾಂಟರ್ ವಶಪಡಿಸಿಕೊಂಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.