Tag: Canter vehicle

  • 50 ಅಡಿ ಬ್ರಿಡ್ಜ್ ಮೇಲಿಂದ ಉರುಳಿ ಬಿದ್ದ ಕ್ಯಾಂಟರ್ – ಪವಾಡಸದೃಶವಾಗಿ ಬದುಕುಳಿದ ಚಾಲಕ

    50 ಅಡಿ ಬ್ರಿಡ್ಜ್ ಮೇಲಿಂದ ಉರುಳಿ ಬಿದ್ದ ಕ್ಯಾಂಟರ್ – ಪವಾಡಸದೃಶವಾಗಿ ಬದುಕುಳಿದ ಚಾಲಕ

    ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ವಾಹನವೊಂದು (Canter vehicle) ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ (Bridge) ಮೇಲಿಂದ ಬಿದ್ದಿರುವ ಘಟನೆ ಎಕೆ ಹುಬ್ಬಳ್ಳಿ ಸಮೀಪದಲ್ಲಿ ನಡೆದಿದೆ. ಅಪಘಾತದಲ್ಲಿ ಅದೃಷ್ಟವಶಾತ್ ಚಾಲಕ (Driver) ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿ ಗ್ರಾಮದ ಬಳಿಯ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಂದಾಜು 50 ಅಡಿ ಬ್ರಿಡ್ಜ್ ಮೇಲಿಂದ ಕ್ಯಾಂಟರ್ ಉರುಳಿ ಬಿದ್ದಿದೆ. ಆದರೂ ಪವಾಡಸದೃಶವಾಗಿ ಬದುಕುಳಿದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ಮಹಾರಾಷ್ಟ್ರ ಮೂಲದ ರಾಮದಾಸ್ ಗೋಡೆ (42) ಸದ್ಯ ಬದುಕುಳಿದ ಚಾಲಕ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲಿಂದ ನದಿಗೆ ಕ್ಯಾಂಟರ್ ವಾಹನ ಉರಿಳಿದ್ದು ಚಿಕ್ಕಮಗಳೂರಿನಿಂದ ಮಹಾರಾಷ್ಟ್ರಕ್ಕೆ ಕಟ್ಟಿಗೆ ಹೊತ್ತೊಯ್ಯುತ್ತಿದ್ದಾಗ ಘಟನೆ ನಡೆದಿದೆ. ಇದನ್ನೂ ಓದಿ: ಊರಿಗೆ ಹೋಗಲು ನಿಲ್ದಾಣದಲ್ಲಿ ಕಾದು ಸುಸ್ತಾಗಿ ತಾನೇ ಸರ್ಕಾರಿ ಬಸ್ ಚಲಾಯಿಸಿದ ಭೂಪ!

    ಅಪಘಾತದ ರಭಸಕ್ಕೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಬೆಳಗಾವಿಯ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: 200 ಯುನಿಟ್ ಒಳಗೆ ಬಳಸುವ ಬಾಡಿಗೆದಾರರಿಗೂ ಉಚಿತ ವಿದ್ಯುತ್ ಯೋಜನೆ ಅನ್ವಯ: ಸಿಎಂ

  • ಕ್ಯಾಂಟರ್- ಕಾರು ಮುಖಾಮುಖಿ ಡಿಕ್ಕಿ; ಧರ್ಮಸ್ಥಳಕ್ಕೆ ತೆರಳುತ್ತಿದ್ದ ತಂದೆ, ಮಗ ಸಾವು

    ಕ್ಯಾಂಟರ್- ಕಾರು ಮುಖಾಮುಖಿ ಡಿಕ್ಕಿ; ಧರ್ಮಸ್ಥಳಕ್ಕೆ ತೆರಳುತ್ತಿದ್ದ ತಂದೆ, ಮಗ ಸಾವು

    ಹಾಸನ: ಕ್ಯಾಂಟರ್ ಹಾಗೂ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ತಂದೆ, ಮಗ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ.

    ತಮಿಳುನಾಡು ಮೂಲದ ಅಂಜನಪ್ಪ (40), ಕಾರ್ತಿಕ್ (17) ಮೃತ ದುರ್ದೈವಿಗಳು. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು, ಆಲೂರು ತಾಲೂಕಿನ ಆಲೂರು-ಈಶ್ವರಹಳ್ಳಿ ಕೂಡಿಗೆ ಸಮೀಪ ಈ ಘಟನೆ ನಡೆದಿದೆ. ಧರ್ಮಸ್ಥಳಕ್ಕೆಂದು 2 ಕಾರಿನಲ್ಲಿ 10 ಜನ ತೆರಳುತ್ತಿದ್ದರು. ಅದರಲ್ಲಿ ಒಂದು ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿ, ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಕುಟುಂಬವನ್ನು ಭೇಟಿಯಾಗಲಿರುವ ಪ್ರಧಾನಿ

    ಅಪಘಾತಕ್ಕೆ ಅವೈಜ್ಞಾನಿಕ ಸಂಚಾರಕ್ಕೆ ವ್ಯವಸ್ಥೆ ಮಾಡಿರುವುದು ಕಾರಣ ಎನ್ನಲಾಗುತ್ತಿದ್ದು, ಹೆದ್ದಾರಿಯ ಹಲವೆಡೆ ಹಲವು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಆಲೂರು ವೃತ್ತ ನಿರೀಕ್ಷಕ ಹೇಮಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಜೂನ್ 20 ರಂದು ಪ್ರಧಾನಿ ಕಾರ್ಯಕ್ರಮ- ಆಯ್ದ ಮಾರ್ಗಗಳ ಕಾಲೇಜುಗಳಿಗೆ ರಜೆ

    Live Tv

  • ಬೆಂಕಿ ಹೊತ್ತಿಕೊಂಡಿದ್ರೂ 5 ಕಿ.ಮೀ ಕ್ಯಾಂಟರ್ ಚಾಲನೆ

    ಬೆಂಕಿ ಹೊತ್ತಿಕೊಂಡಿದ್ರೂ 5 ಕಿ.ಮೀ ಕ್ಯಾಂಟರ್ ಚಾಲನೆ

    – ಚಾಲಕನ ಚಾಣಾಕ್ಷತನದಿಂದ ತಪ್ಪಿದ ಭಾರೀ ಅನಾಹುತ

    ಚಿಕ್ಕೋಡಿ: ಕ್ಯಾಂಟರ್ ಹಿಂಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದರೂ ಚಾಲಕ ನೀರು ಇರುವ ಜಾಗದವರೆಗೂ ಚಾಲನೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಕೊಲ್ಲಾಪುರದಿಂದ ತಮಿಳುನಾಡಿನ ಚೆನ್ನೈಗೆ ಜನರೇಟರ್ ಗಳನ್ನು ಕ್ಯಾಂಟರ್ ನಲ್ಲಿ ಸಾಗಿಸಲಾಗುತ್ತಿತ್ತು. ಆದರೆ ಸಂಕೇಶ್ವರ ಪಟ್ಟಣದ ಸಮೀಪದಲ್ಲಿ ಲಾರಿಯ ಹಿಂಬದಿಯಲ್ಲಿದ್ದ ಜನರೇಟರ್ ಗೆ ಆಕಸ್ಮಿಕ ಬೆಂಕಿ ತಗುಲಿ, ಹೊತ್ತಿ ಉರಿಯುತ್ತಿತ್ತು. ಇದನ್ನು ನೋಡಿದ ಸಾರ್ವಜನಿಕರು, ಸವಾರರು ಸಂಕೇಶ್ವರ ಪಟ್ಟಣದಲ್ಲಿ ಚಾಲಕನ ಗಮನಕ್ಕೆ ತಂದಿದ್ದಾರೆ.

    ಈ ವಿಚಾರ ಗೊತ್ತಾಗುತ್ತಿದ್ದಂತೆ ಚಾಲಕ ಸಂಜು ಮಾದಿಗಾರ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸುವ ವೇಳೆಗೆ ಲಾರಿ ಕೂಡ ಸುಟ್ಟು ಭಸ್ಮವಾಗುತ್ತದೆ ಎಂದು ಯೋಜಿಸಿದ್ದ. ಹೀಗಾಗಿ ತಕ್ಷಣವೇ ಚಾಣಾಕ್ಷತನ ಮೆರೆದು ವಾಟರ್ ಸರ್ವಿಸ್ ಮಾಡುವ ಗ್ಯಾರೆಜ್‍ವರೆಗೂ ಅಂದ್ರೆ ಹೆಬ್ಬಾಳ ಗ್ರಾಮದ ಸಮೀಪ 5 ಕಿ.ಮೀ ವರೆಗೆ ಜನರೇಟರ್ ಗೆ ಬೆಂಕಿ ಹತ್ತಿದ್ದರೂ ಕ್ಯಾಂಟರ್ ಚಾಲನೆ ಮಾಡಿಕೊಂಡು ಬಂದಿದ್ದಾನೆ.

    ವಾಟರ್ ಸರ್ವಿಸ್ ಗ್ಯಾರೆಜ್‍ಗೆ ಕ್ಯಾಂಟರ್ ಬಂದು ನಿಲ್ಲುತ್ತಿದ್ದಂತೆ ಚಾಲಕನ ಅಲ್ಲಿದ್ದ ಜನರೊಂದಿಗೆ ಸೇರಿ ನೀರು ಸುರಿದು ಬೆಂಕಿಯನ್ನ ನಂದಿಸಿದ್ದಾನೆ. ಘಟನೆಯಲ್ಲಿ ಜನರೇಟರ್ ಸಂಪೂರ್ಣ ಸುಟ್ಟು ಭಸ್ಮವಾದರೂ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.