Tag: canter

  • ಕ್ಯಾಂಟರ್‌ಗೆ ಕಾರು ಡಿಕ್ಕಿ; ನಾಲ್ವರು ಸ್ಥಳದಲ್ಲೇ ಸಾವು

    ಕ್ಯಾಂಟರ್‌ಗೆ ಕಾರು ಡಿಕ್ಕಿ; ನಾಲ್ವರು ಸ್ಥಳದಲ್ಲೇ ಸಾವು

    ಬಾಗಲಕೋಟೆ: ಕ್ಯಾಂಟರ್  ಹಾಗೂ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ಹುನಗುಂದ ತಾಲ್ಲೂಕಿನ ಧನ್ನೂರು ಎಂಬಲ್ಲಿ ನಡೆದಿದೆ.

    ಲಕ್ಷ್ಮಣ ವಡ್ಡರ್ (55),ಬೈಲಪ್ಪ ಬಿರಾದಾರ್(45), ರಾಮಣ್ಣ ನಾಯಕಮಕ್ಕಳು (50) ಹಾಗೂ ಕಾರು ಚಾಲಕ ರಫಿಕ್ ಮುಲ್ಲಾ(25) ಸಾವಿಗೀಡಾದವರು. ಮೃತರು ವಿಜಯಪುರ (Vijayapura) ಜಿಲ್ಲೆ ಬಿದರಕುಂದಿ ಗ್ರಾಮದವರು. ತಡರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಇದನ್ನೂ ಓದಿ: ಮುಡಾ ಹಗರಣ ಸಂಕಷ್ಟ; ಹೈಕಮಾಂಡ್‌ಗೆ ವರದಿ ನೀಡಿದ ಸಿಎಂ ಸಿದ್ದರಾಮಯ್ಯ

    ಕಾರು ಮುದ್ದೇಬಿಹಾಳ (Muddebihal) ಕಡೆ ಹೊರಟಿತ್ತು. ಕ್ಯಾಂಟರ್ ಮುದ್ದೇಬಿಹಾಳದಿಂದ ಹುನಗುಂದ ಕಡೆ ಬರುತ್ತಿತ್ತು. ಈ ವೇಳೆ ಕಾರು ಚಾಲಕ ನಿದ್ರೆಗೆ ಜಾರಿದ್ದು, ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ನಜ್ಜುಗುಜ್ಜಾಗಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Karawar | ಹಣಕೋಣ ಉದ್ಯಮಿ ಹತ್ಯೆ -ಪ್ರಮುಖ ಆರೋಪಿ ಆತ್ಮಹತ್ಯೆ, ಮೂವರ ಬಂಧನ

    ಘಟನೆ ನಡೆದ ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದದ ಬಳಿಕ ಹೆಚ್ಚಿದ ಬೇಡಿಕೆ – ಹಾಸನಾಂಬ ಲಡ್ಡು ಪ್ರಸಾದಕ್ಕೂ ನಂದಿನಿ ತುಪ್ಪ

  • ಹಾವೇರಿಯಲ್ಲಿ ಆಟೋಗೆ ಕ್ಯಾಂಟರ್ ಡಿಕ್ಕಿ – ಇಬ್ಬರು ಮಹಿಳೆಯರು ಸಾವು, ನಾಲ್ವರು ಗಂಭೀರ

    ಹಾವೇರಿಯಲ್ಲಿ ಆಟೋಗೆ ಕ್ಯಾಂಟರ್ ಡಿಕ್ಕಿ – ಇಬ್ಬರು ಮಹಿಳೆಯರು ಸಾವು, ನಾಲ್ವರು ಗಂಭೀರ

    -ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ ವಾಪಸ್ಸಾಗುತ್ತಿದ್ದಾಗ ದುರ್ಘಟನೆ

    ಹಾವೇರಿ: ಆಟೋಗೆ (Auto) ಕ್ಯಾಂಟರ್ (Canter) ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿ (Haveri) ಜಿಲ್ಲೆಯ ರಾಣೆಬೆನ್ನೂರು (Ranebennur) ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ಯಶೋಧ ಮತ್ತು ಬಸಮ್ಮ ಎಂದು ಗುರುತಿಸಲಾಗಿದೆ. ಯಶೋಧ ಮತ್ತು ಬಸಮ್ಮ ಸೇರಿದಂತೆ ಒಟ್ಟು ಎಂಟು ಜನರು ದಾವಣಗೆರೆಯಿಂದ ಚಳಗೇರಿ ಗ್ರಾಮಕ್ಕೆ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಬಂದಿದ್ದರು. ಅಂತ್ಯಕ್ರಿಯೆ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಜವರಾಯನಾಗಿ ಬಂದ ಕ್ಯಾಂಟರ್ ಆಟೋಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ದರ್ಶನ್‌ಗಾಗಿ ಬಟ್ಟೆ, ಡ್ರೈಪ್ರೂಟ್ಸ್ ತಂದ ವಿಜಯಲಕ್ಷ್ಮಿ – ನಿಮ್ಮೊಂದಿಗೆ ನಾನಿದ್ದೇನೆ ಎಂದು ದರ್ಶನ್‌ಗೆ ಅಭಯ

    ಗಾಯಾಳುಗಳನ್ನು ರಾಣೆಬೆನ್ನೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಬರುತ್ತಿದ್ದ ವಿಮಾನದ ಇಂಜಿನ್ ಆಗಸದಲ್ಲೇ ವೈಫಲ್ಯ – ಕೋಲ್ಕತ್ತಾ ಏರ್‌ಪೋರ್ಟಲ್ಲಿ ಎಮರ್ಜೆನ್ಸಿ, ಸೇಫ್ ಲ್ಯಾಂಡಿಂಗ್

  • ಕಾರು, ಕ್ಯಾಂಟರ್ ಡಿಕ್ಕಿ- ಒಂದೇ ಕುಟುಂಬದ ಮೂವರು ಸೇರಿ ನಾಲ್ವರ ಸಾವು

    ಕಾರು, ಕ್ಯಾಂಟರ್ ಡಿಕ್ಕಿ- ಒಂದೇ ಕುಟುಂಬದ ಮೂವರು ಸೇರಿ ನಾಲ್ವರ ಸಾವು

    ತುಮಕೂರು: ಇಂಡಿಕಾ ಕಾರು (Car) ಮತ್ತು ಕ್ಯಾಂಟರ್ (Canter) ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Accident) ನಾಲ್ವರು ಸಾವನ್ನಪ್ಪಿರುವ ಘಟನೆ ತುಮಕೂರು (Tumkur) ಜಿಲ್ಲೆಯಲ್ಲಿ ನಡೆದಿದೆ.

    ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಕೊಂಡ್ಲಿ ಕ್ರಾಸ್‌ನಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ನಡುವಿನಹಳ್ಳಿಯ ರಾಮಣ್ಣ (58), ನಾರಾಯಣಪ್ಪ (54), ಸಾಗರ್ (23) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಿಸದೆ ನಾಗರತ್ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ವೈದ್ಯನಿಂದ ಪತ್ನಿಯ ಬರ್ಬರ ಹತ್ಯೆ – ಸೂಟ್‍ಕೇಸ್‍ನಲ್ಲಿ ತುಂಬಿ 400 ಕಿ.ಮೀ ದೂರದಲ್ಲಿ ಸುಟ್ಟು ಹಾಕಿದ

    crime

    ಮೃತರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಬೆಂಗಳೂರಿಗೆ ತೆರಳುತ್ತಿದ್ದಾಗ ಅಪಘಾತವಾಗಿದೆ. ತುಮಕೂರು ಕಡೆಯಿಂದ ಕೆ.ಬಿ ಕ್ರಾಸ್ ತೆರಳುತ್ತಿದ್ದ ಕ್ಯಾಂಟರ್ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಕಾರು ಕೆ.ಬಿ.ಕ್ರಾಸ್‌ನಿಂದ ತುಮಕೂರಿಗೆ ತೆರಳುತ್ತಿತ್ತು. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೆಹಲಿ ಏಮ್ಸ್‌ಗೆ ಕನ್ನ ಹಾಕಿದ್ದು ಚೀನಾ – ಡೇಟಾ ಈಗ ಸುರಕ್ಷಿತ

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಅಪಘಾತ – ಕ್ಯಾಂಟರ್‌ನಲ್ಲಿ ಸಿಲುಕಿ ನರಳಾಡಿದ ಚಾಲಕ

    ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಅಪಘಾತ – ಕ್ಯಾಂಟರ್‌ನಲ್ಲಿ ಸಿಲುಕಿ ನರಳಾಡಿದ ಚಾಲಕ

    ಮಂಡ್ಯ: ಹೆದ್ದಾರಿಗೆ ವೈಟ್ ಟ್ಯಾಪಿಂಗ್ ಹಾಕುವ ಲಾರಿಗೆ (Lorry) ಕ್ಯಾಂಟರ್ (Canter Truck) ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ನಜ್ಜುಗುಜ್ಜಾಗಿ ಕ್ಯಾಂಟರ್ ಒಳಭಾಗದಲ್ಲಿ ಚಾಲಕ ಸಿಲುಕಿ ನರಳಾಡಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ (Bengaluru-Mysuru Express Highway) ನಡೆದಿದೆ.

    ಕಳೆದ ರಾತ್ರಿ ಮಂಡ್ಯದ ಗೆಜ್ಜಲುಗೆರೆಯ ಬಳಿಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಗೆ ಕಾರ್ಮಿಕರು ವೈಟ್ ಟ್ಯಾಪಿಂಗ್‍ನ್ನು ಹಾಕುತ್ತಿದ್ದರು. ಈ ವೇಳೆ ಕ್ಯಾಂಟರ್ ಟ್ಯಾಂಪಿಗ್ ತುಂಬಿದ್ದ ಲಾರಿಗೆ ಹಿಂದೆಯಿಂದ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ನಜ್ಜುಗುಜ್ಜಾಗಿದ್ದು, ಕ್ಯಾಂಟರ್ ಒಳಭಾಗದಲ್ಲಿ ಚಾಲಕ ಸಿಲುಕಿ ನರಳಾಡಿದ್ದಾನೆ. ಈ ವೇಳೆ ವೈಟ್ ಟ್ಯಾಪಿಂಗ್ ಹಾಕುತ್ತಿದ್ದ ಕಾರ್ಮಿಕನಿಗೂ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್ ಬಳಸುವಂತಿಲ್ಲ – ಮದ್ರಾಸ್ ಹೈಕೋರ್ಟ್ ಆದೇಶ

    ಬಳಿಕ ಸ್ಥಳದಲ್ಲಿ ಇದ್ದ ಸ್ಥಳೀಯರು ಕ್ಯಾಂಟರ್ ಒಳಭಾಗದಲ್ಲಿ ಸಿಲುಕಿದ್ದ ಚಾಲಕನನ್ನು ಹೊರತೆಗೆದು ಬಳಿಕ ಚಾಲಕ ಹಾಗೂ ಕಾರ್ಮಿಕನನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಾಮಗಾರಿಯ ವೇಳೆ ಸೂಚನ ಫಲಕವನ್ನು ಅಳವಡಿಕೆ ಮಾಡದೇ ಇರುವುದು ಈ ಅಪಘಾತಕ್ಕೆ ಕಾರಣವಾಗಿದೆ. ಹೆದ್ದಾರಿ ಕಾಮಗಾರಿ ಆರಂಭವಾದ ದಿನದಿಂದಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ಕಾರಣ ಈ ರೀತಿಯ ಘಟನೆಗಳು ಪದೇ ಪದೇ ಜರುಗುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನ ಹತ್ಯೆಗೆ ಸ್ಕೆಚ್ – ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಮುಖಂಡ ಗಂಭೀರ ಆರೋಪ

    Live Tv
    [brid partner=56869869 player=32851 video=960834 autoplay=true]

  • ಕ್ಯಾಂಟರ್ ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ – ಗಾಯಗೊಂಡ ಗರ್ಭಿಣಿ ಸ್ಥಿತಿ ಗಂಭೀರ

    ಕ್ಯಾಂಟರ್ ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ – ಗಾಯಗೊಂಡ ಗರ್ಭಿಣಿ ಸ್ಥಿತಿ ಗಂಭೀರ

    ಚಿಕ್ಕಬಳ್ಳಾಪುರ: ನಗರದ ರಾಷ್ಟ್ರೀಯ ಹೆದ್ದಾರಿ (National Highway) 44ರ ರಾಮದೇವರಗುಡಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

    ಬೆಂಗಳೂರು ಕಡೆಯಿಂದ ಬರುತ್ತಿದ್ದ ಕ್ಯಾಂಟರ್ (Canter) ಎದುರಿಗೆ ಅಡ್ಡ ಬಂದ ಏಕೋ ಸ್ಪೋರ್ಟ್ಸ್ ಕಾರನ್ನು (Car) ತಪ್ಪಿಸಲು ಹೋಗಿ ಹೈವೇಯ ಮತ್ತೊಂದು ಬದಿಗೆ ನುಗ್ಗಿದೆ. ಮೊದಲು ಬೈಕ್ (Bike) ಹಾಗೂ ತದನಂತರ ಪ್ರಣವ್ ಹೋಟೆಲ್ ಮುಂಭಾಗ ನಿಂತಿದ್ದ ಐದು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಪಿ ಚೊಕ್ಕನಹಳ್ಳಿ ಗ್ರಾಮದ ಪಿ.ಜನಾರ್ಧನ (20) ಮತ್ತು ಪ್ರಣವ್ ಹೋಟೆಲ್ ಸೆಕ್ಯೂರಿಟಿ ಗಾರ್ಡ್ ನಾರಾಯಣಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರೈತನ ಮನೆಗೆ ನುಗ್ಗಿದ ಫೈನಾನ್ಸ್ ಕಂಪನಿ ಅಧಿಕಾರಿಗಳು – ಗರ್ಭಿಣಿ ಮೇಲೆ ಟ್ರ್ಯಾಕ್ಟರ್ ಹರಿಸಿದ್ರು

    ಹೋಟೆಲ್‍ಗೆ ತಿಂಡಿಗೆಂದು ಬಂದು ಕಾರಿನಿಂದ ಕೆಳಗೆ ಇಳಿದಿದ್ದ ಕಾಡಿಗುಡಿ ನಿವಾಸಿಗಳಾದ ಸಾಫ್ಟ್‌ವೇರ್ ಇಂಜಿನಿಯರ್ ಹರ್ಷ ದೇಶಪಾಂಡೆ ಅವರ ಪತ್ನಿ ಮಾನಸ ಹಾಗೂ ಅವರ ತಂದೆ ನರಸಿಂಹ ಮೇಲೆ ಕ್ಯಾಂಟರ್ ಹರಿದು ಗಂಭೀರ ಗಾಯಗೊಂಡಿದ್ದಾರೆ. ಮಾನಸ ಗರ್ಭಿಣಿಯಾಗಿದ್ದು ಕಾಲಿನ ಮೇಲೆ ಕ್ಯಾಂಟರ್ ಹರಿದ ಪರಿಣಾಮ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಬ್ಬರನ್ನು  ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಟ್ರಕ್ – ಬಸ್ ನಡುವೆ ಭೀಕರ ಅಪಘಾತ – 6 ಸಾವು, 20 ಮಂದಿಗೆ ಗಾಯ

    ಕ್ಯಾಂಟರ್ ಚಾಲಕ ತಮಿಳುನಾಡು ಮೂಲದ ಅಜಿತ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್‌ಗಳ ಬಿಡಿ ಭಾಗಗಳನ್ನು ಸಾಗಿಸುವ ಕ್ಯಾಂಟರ್ ಇದಾಗಿದೆ. ಅಪಘಾತಕ್ಕೀಡಾಗಿ ಜಖಂಗೊಂಡಿರುವ ಕಾರುಗಳನ್ನು ಪೊಲೀಸ್ ಠಾಣೆ ಬಳಿ ರವಾನಿಸಲಾಗಿದೆ. ಅಪಘಾತವಾದ ಸ್ಥಳದಲ್ಲೇ ಮತ್ತೊಬ್ಬ ಕಾರ್ ಚಾಲಕ ಅಪಘಾತ ನೋಡುತ್ತಾ ಬಂದು ಹೈವೇ ಡ್ರೈನೇಜ್‍ಗೆ ಇಳಿಸಿದ್ದಾನೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿ – 4 ವರ್ಷದ ಮಗು ದಾರುಣ ಸಾವು!

    ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿ – 4 ವರ್ಷದ ಮಗು ದಾರುಣ ಸಾವು!

    ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು, ಪರಿಣಾಮ 4 ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

    ಚಿಂತಾಮಣಿ ನಗರದ ಎಂಜಿ ರಸ್ತೆಯ ಕೆಎಂಡಿ ಕಲ್ಯಾಣ ಮಂಟಪದ ಬಳಿ ಕ್ಯಾಂಟರ್ ವಾಹನ ಚಾಲಕ ವೇಗದಿಂದ ಬರುತ್ತಿದ್ದು, ಅಜಾಗರೂಕತೆಯಿಂದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕ್‍ನಲ್ಲಿದ್ದ ಮಗು ಕೆಳಗೆ ಉರುಳಿಬಿದ್ದಿದ್ದಾನೆ. ಈ ವೇಳೆ ಕ್ಯಾಂಟರ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್ ಸವಾರನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ನಡೆದಿದ್ದೇನು?
    ಮೃತ ಮಗು ನಗರದ ಚೌಡರೆಡ್ಡಿಪಾಳ್ಯದ ಹೂವಿನ ವ್ಯಾಪಾರಿ ಜಮೀರ್ ಪಾಷಾ ಅವರ 4 ವರ್ಷದ ಮಗು ಸೂಫಿಯಾನ್ ಎಂದು ತಿಳಿದುಬಂದಿದೆ. ಜಮೀರ್ ಪಾಷಾ ಸ್ನೇಹಿತ ಬಾಬಾ ಜಾಣ್ ಮಗುವನ್ನ ಮನೆಯಿಂದ ತಂದೆಯ ಹೂವಿನ ಅಂಗಡಿ ಬಳಿ ಕರೆದುಕೊಂಡು ಬಂದಿದ್ದು, ತದನಂತರ ಮನೆಗೆ ವಾಪಾಸ್ ಬಿಡಲು ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ವೇಗದಿಂದ ಬಂದ ಕ್ಯಾಂಟರ್ ಲಾರಿ ಬೈಕ್ ಗೆ ಗುದ್ದಿದ್ದು, ಈ ಘಟನೆ ಸಂಭವಿಸಿದೆ.

    ಬೈಕ್ ಗೆ ಡಿಕ್ಕಿ ಹೊಡೆದ ನಂತರ ಕ್ಯಾಂಟರ್ ಚಾಲಕ ವಾಹನ ಬಿಟ್ಟು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟೌನ್‍ಹಾಲ್ ಮುಂದೆ ಪಲ್ಟಿಯಾದ ಲಾರಿ- ಚಾಲಕನ ಅಜಾಗರೂಕತೆಗೆ ಪತ್ರಕರ್ತ ದುರ್ಮರಣ

    ಟೌನ್‍ಹಾಲ್ ಮುಂದೆ ಪಲ್ಟಿಯಾದ ಲಾರಿ- ಚಾಲಕನ ಅಜಾಗರೂಕತೆಗೆ ಪತ್ರಕರ್ತ ದುರ್ಮರಣ

    ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿ ಪಲ್ಟಿ ಆದ ಕ್ಯಾಂಟರ್ ಪತ್ರಕರ್ತನನ್ನು ಬಲಿ ಪಡೆದುಕೊಂಡಿದೆ.

    ಟೌನ್ ಹಾಲ್ ಮುಂಭಾಗ ದೊಡ್ಡ ಲಾಜಿಸ್ಟಿಕ್ ಲಾರಿ ಡಿವೈಡರ್ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆ ಮೇಲೆ ಪಲ್ಟಿ ಆಗಿದೆ. ಘಟನೆಯಲ್ಲಿ ಓರ್ವ ಪತ್ರಕರ್ತ ಗಂಗಾಧರ್ ಮೂರ್ತಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ವಿಕ್ಟೋರಿಯಾ ಶವಾಗಾರಕ್ಕೆ ದೇಹ ಶಿಫ್ಟ್ ಮಾಡಲಾಗಿದೆ.

    ಭಾನುವಾರ ರಸ್ತೆ ಖಾಲಿ ಇದ್ದ ಕಾರಣ, ಕ್ಯಾಂಟರ್ ಚಾಲಕ ವೇಗವಾಗಿ ಜೆ.ಸಿ. ರಸ್ತೆಯಿಂದ ಬಂದಿದ್ದಾನೆ. ವೇಗವಾಗಿ ಬಂದು ಸಡನ್ ಆಗಿ ಮಾರ್ಕೆಟ್ ಕಡೆ ತಿರವು ಪಡೆದುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ, ಲಾರಿಯಲ್ಲಿದ್ದ ಸುಮಾರು 300 ಲೀಟರ್ ಅಷ್ಟು ಆಯಿಲ್ ಡ್ರಮ್‍ಗಳ ತೂಕ ಒಂದೇ ಕಡೆ ವಾಲಿದೆ. ಇದರಿಂದ ಕಂಟ್ರೋಲ್‍ಗೆ ಸಿಗದೇ ಲಾರಿ ಡಿವೈಡರ್ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಇದನ್ನೂ ಓದಿ: ಹಿರಿಯ ಪತ್ರಕರ್ತ ಜಿ.ಎಂ.ಕುಲಕರ್ಣಿ ನಿಧನ

    ಲಾರಿ ಬಿಟ್ಟು ಡ್ರೈವರ್ ಎಸ್ಕೇಪ್..!
    ಮಹಾರಾಷ್ಟ್ರದ ನೋಂದಣಿ ಸಂಖ್ಯೆ ಹೊಂದಿರೋ ಲಾರಿ ಪಲ್ಟಿಯಾಗುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅತಿಯಾದ ವೇಗ, ಅಜಾಗರೂಕತೆ ವಾಹನ ಚಾಲನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನಾಪತ್ತೆ ಆಗಿರೋ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪಲ್ಟಿಯಾಗಿದ ಸ್ಥಳದಲ್ಲಿ ಕ್ಯಾಂಟರ್ ನಲ್ಲಿದ್ದ ಆಯಿಲ್ ರಸ್ತೆಗೆ ಚೆಲ್ಲಿತ್ತು. ಕೂಡಲೇ ಪೊಲೀಸರು ಸ್ಥಳೀಯರ ಸಹಾಯದಿಂದ ಆಯಿಲ್ ಡಬ್ಬಗಳನ್ನ ಬೇರ್ಪಡಿಸಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಲಾರಿಯನ್ನ ಶಿಫ್ಟ್ ಮಾಡಲಾಯ್ತು.

  • ಲಾರಿ ಡಿಕ್ಕಿಯಾಗಿ ಕ್ಯಾಂಟರ್ ಚಾಲಕ ದುರ್ಮರಣ

    ಲಾರಿ ಡಿಕ್ಕಿಯಾಗಿ ಕ್ಯಾಂಟರ್ ಚಾಲಕ ದುರ್ಮರಣ

    ವಿಜಯಪುರ: ಲಾರಿ ಹಾಗೂ ಕ್ಯಾಂಟರ್ ಡಿಕ್ಕಿಯಾದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರ ಭಾಗದ ಎನ್‍ಎಚ್ 218ರಲ್ಲಿ ನಡೆದಿದೆ.

    ಘಟನೆಯಲ್ಲಿ ಕ್ಯಾಂಟರ್ ಚಾಲಕ ವಿಕಾಸ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ವಿಕಾಸ್ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಬಾರ್ಸಿ ತಾಲೂಕಿನ ಪಾನಗಾವ್ ನಿವಾಸಿ ಎಂದು ತಿಳಿದು ಬಂದಿದೆ.

    ಲಾರಿ ಚಾಲಕ, ಕ್ಲಿನರ್ ಹಾಗೂ ಕ್ಯಾಂಟರ್ ಚಾಲಕನಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನ ಕೊಲ್ಹಾರ ಸರ್ಕಾರಿ ಆಸ್ಪತ್ತೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುಂಜಾನೆ ಕ್ಯಾಂಟರ್ ಪಲ್ಟಿ- ಹಾಲಿನ ಪ್ಯಾಕೆಟ್‍ಗಳು ಮಣ್ಣುಪಾಲು

    ಮುಂಜಾನೆ ಕ್ಯಾಂಟರ್ ಪಲ್ಟಿ- ಹಾಲಿನ ಪ್ಯಾಕೆಟ್‍ಗಳು ಮಣ್ಣುಪಾಲು

    ಆನೇಕಲ್: ಹಾಲಿನ ಪ್ಯಾಕೆಟ್ ಗಳನ್ನು ತುಂಬಿದ್ದ ಕ್ಯಾಂಟರ್ ಪಲ್ಟಿಯಾದ ಪರಿಣಾಮ ಪ್ಯಾಕೆಟ್ ಗಳು ಮಣ್ಣುಪಾಲಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನ ತಾಲೂಕಿನ ಹೀಲಲಿಗೆ ಬಳಿ ನಡೆದಿದೆ.

    ಇಂದು ಬೆಳಗ್ಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಕ್ಯಾಂಟರ್ ನೆಲಕ್ಕುರುಳಿದೆ. ಘಟನೆಯಲ್ಲಿ ಯಾವುದೆ ಪ್ರಾಣಾಪಾಯವಿಲ್ಲ. ಆದರೆ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದ್ವೆ ಮುಗಿಸಿ ಬರುತ್ತಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣ

    ಮದ್ವೆ ಮುಗಿಸಿ ಬರುತ್ತಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣ

    ಚಂಡೀಗಢ: ಮದುವೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಒಂದೇ ಕುಟುಂಬದ ನಾಲ್ವರು ಅಪಘಾತದಲ್ಲಿ ಮೃತಪಟ್ಟ ಘಟನೆ ಪಂಜಾಬ್‌ನ ಪರ‍್ಯಾಲಿಯಲ್ಲಿ ನಡೆದಿದೆ.

    ಸುನಂ-ಭವಾನಿಗಡ ಮಾರ್ಗದಲ್ಲಿ ಈ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ಪತಿ-ಪತ್ನಿ ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಾಲ್ವರು ಮದುವೆ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದರು ಎಂದು ಹೇಳಲಾಗುತ್ತಿದೆ.

    ಚಾಲಕ ಕೆಟ್ಟು ನಿಂತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅಲ್ಲದೆ ಈ ಬಗ್ಗೆ ಅವರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ.

    ಅಪಘಾತದಲ್ಲಿ ಪತಿ, ಪತ್ನಿ, ಅವರ ಮಗ ಹಾಗೂ ಮೊಮ್ಮಗಳು ಪ್ರಯಾಣಿಸುತ್ತಿದ್ದರು. ಮೃತಪಟ್ಟ ವ್ಯಕ್ತಿಯನ್ನು ಹರೀಶ್ ಅದಾಲ್ಕಾ ಎಂದು ಗುರುತಿಸಲಾಗಿದ್ದು, ಇವರು ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಸೋಮವಾರ ರಾತ್ರಿ ನಾಲ್ವರು ಭವಾನಿಗಡದಲ್ಲಿ ನಡೆದ ಮದುವೆ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದರು ಎನ್ನಲಾಗಿದೆ.

    ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.