Tag: cannes film festival 2024

  • ಕಾನ್ ಫೆಸ್ಟಿವಲ್‌ನಲ್ಲಿ ಮೊದಲ ಬಹುಮಾನ ಗೆದ್ದ ಕನ್ನಡಿಗನ ಸಾಧನೆಯನ್ನು ಹಾಡಿ ಹೊಗಳಿದ ಯಶ್

    ಕಾನ್ ಫೆಸ್ಟಿವಲ್‌ನಲ್ಲಿ ಮೊದಲ ಬಹುಮಾನ ಗೆದ್ದ ಕನ್ನಡಿಗನ ಸಾಧನೆಯನ್ನು ಹಾಡಿ ಹೊಗಳಿದ ಯಶ್

    ಕಾನ್ ಫಿಲ್ಮ್ ಫೆಸ್ಟಿವೆಲ್‌ಗೆ (Cannes Film Festival 2024) ಮೈಸೂರಿನ ಹುಡುಗ ಚಿದಾನಂದ ನಾಯ್ಕ್ (Chidananda S Naik) ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ’ ಕಿರುಚಿತ್ರ ಆಯ್ಕೆಯಾಗಿತ್ತು. ಈ ಫೆಸ್ಟಿವೆಲ್‌ಗೆ ಆಯ್ಕೆಯಾದ ಮೊದಲ ಕನ್ನಡಿಗರ ಕಿರುಚಿತ್ರ ಇದಾಗಿದ್ದು, ಇದೀಗ ಮೊದಲ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿರುವ ಚಿದಾನಂದ ಸಾಧನೆಗೆ ನ್ಯಾಷನಲ್ ಸ್ಟಾರ್ ಯಶ್ (Actor Yash) ಹಾಡಿ ಹೊಗಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ‘ಕೆಜಿಎಫ್‌ 2’ ನಟ (KGF 2 Actor) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಚಿದಾನಂದ ನಾಯಕ್‌ಗೆ ಅಭಿನಂದನೆಗಳು. ಕಾನ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರಕ್ಕಾಗಿ ‘ಲಾ ಸಿನೆಫ್’ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ‘ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ’ (Sunflowers Were The First Ones To Know) ಚಿತ್ರಕ್ಕೆ ಅಭಿನಂದನೆಗಳು ಎಂದು ಯಶ್ ಶುಭಕೋರಿದ್ದಾರೆ. ನೀವು ಕನ್ನಡ ಜಾನಪದವನ್ನು ಜಾಗತಿಕ ಹಂತಕ್ಕೆ ಕೊಂಡೊಯ್ಯುವುದನ್ನು ಮತ್ತು ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡಗಳನ್ನು ಹೊಂದಿಸುವುದನ್ನು ನೋಡಲು ಹೆಮ್ಮೆಪಡುತ್ತೇನೆ ಎಂದು ಚಿದಾನಂದಗೆ ಯಶ್ ಎಕ್ಸ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ನಾನು ಸಿಂಗಲ್‌, ಹೊಸ ಸಂಬಂಧಕ್ಕೆ ಸಿದ್ಧಳಾಗಿದ್ದೇನೆ ಎಂದು ಬ್ರೇಕಪ್‌ ಬಗ್ಗೆ ತಿಳಿಸಿದ ‘ಸಲಾರ್‌’ ನಟಿ


    ರಚನೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಚಿದಾನಂದ ಹೊತ್ತಿದ್ದರೆ, ವಿ. ಮನೋಜ್ ಅವರ ಸಂಕಲನವಿದೆ. ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ ಸ್ಟಿಟ್ಯೂಟ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಅಲ್ಲದೇ ಕನ್ನಡದ ಅನೇಕ ಕಲಾವಿದರು ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ.

    ಕಾನ್ ಚಿತ್ರೋತ್ಸವಕ್ಕೆ ತಮ್ಮ ಕಿರುಚಿತ್ರ ಆಯ್ಕೆಯಾಗಿರುವುದು ಸಹಜವಾಗಿಯೇ ಚಿದಾನಂದ್ ಅವರಿಗೆ ಸಂಭ್ರಮ ತಂದಿತ್ತು. ಕಾನ್ ನೋಡುಗರು ಈ ಕಿರುಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ಕೊನೆಗೂ ಕನ್ನಡದ ಹುಡುಗ ಗೆದ್ದಿದ್ದಾನೆ. ಈ ಮೂಲಕ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾನೆ.

  • Cannes Film Festival 2024: ಎ.ಆರ್ ರೆಹಮಾನ್ ಭೇಟಿಯಾದ ಸಾಧು ಕೋಕಿಲ

    Cannes Film Festival 2024: ಎ.ಆರ್ ರೆಹಮಾನ್ ಭೇಟಿಯಾದ ಸಾಧು ಕೋಕಿಲ

    ಕಾನ್ಸ್ ಫಿಲ್ಮ್ ಫೆಸ್ಟಿವಲ್‌ಗೆ (Cannes Film Festival 2024) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಹಲವು ಚಿತ್ರರಂಗದ ಕಲಾವಿದರು ಈ ಕಾರ್ಯಕ್ರಮಕ್ಕೆ ಬಂದು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಕಾನ್ಸ್ ಚಿತ್ರೋತ್ಸವದಲ್ಲಿ ಸಾಧು ಕೋಕಿಲ (Sadhu Kokila) ಭಾಗಿಯಾಗಿದ್ದಾರೆ. ಈ ವೇಳೆ, ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್‌ರನ್ನು (A.R. Rahman) ಭೇಟಿಯಾಗಿದ್ದಾರೆ. ಹಳೆಯ ದಿನಗಳನ್ನು ಸಾಧು ಕೋಕಿಲ ಸ್ಮರಿಸಿದ್ದಾರೆ.

     

    View this post on Instagram

     

    A post shared by Sadhukokila (@nimmasadhukokila)

    ನಟ ಕಮ್ ಗಾಯಕ ಸಾಧು ಕೋಕಿಲ ಅವರು ನಟನೆ ಮಾತ್ರವಲ್ಲ ಸಂಗೀತ ಕ್ಷೇತ್ರದಲ್ಲೂ ಸಂಚಲನ ಮೂಡಿಸಿದ್ದಾರೆ. ಇದೀಗ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಎ.ಆರ್ ರೆಹಮಾನ್‌ರನ್ನು ಅನಿರೀಕ್ಷಿತ ಭೇಟಿಯ ಬಗ್ಗೆ ನಟ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ರೇವ್ ಪಾರ್ಟಿಗೆ ಹೋಗುವ ಅಭ್ಯಾಸ ನನಗಿಲ್ಲ ಎಂದು ಸ್ಟಷ್ಟನೆ ನೀಡಿದ ನಟ ಶ್ರೀಕಾಂತ್

    ಹಲವಾರು ವರ್ಷದ ನಂತರ ಅಪರೂಪದ ಅನಿರೀಕ್ಷಿತ ಭೇಟಿ. ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರ ಜೊತೆ ಕ್ಯಾನ್ಸ್ ಚಿತ್ರೋತ್ಸವದಲ್ಲಿ ತುಂಬಾ ವರ್ಷಗಳ ಹಿಂದೆ ಇಬ್ಬರೂ ಒಟ್ಟಿಗೆ ಕೀಬೋರ್ಡ್ ನುಡಿಸುತ್ತಿದ್ದ ದಿನಗಳ ನೆನಪು ಹಂಚಿಕೊಂಡೆವು ಎಂದು ಹಳೆಯ ದಿನಗಳ ಬಗ್ಗೆ ಸಾಧು ಕೋಕಿಲ ಸ್ಮರಿಸಿದ್ದಾರೆ. ಜೊತೆಗೆ ಎ.ಆರ್ ರೆಹಮಾನ್ ಜೊತೆಗಿನ ಫೋಟೋ ಕೂಡ ಹಂಚಿಕೊಂಡಿದ್ದಾರೆ. ತಮ್ಮ ಕೆರಿಯರನ್‌ ಪ್ರಾರಂಭದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಇಬ್ಬರೂ ದಿಗ್ಗಜರನ್ನು ಒಟ್ಟಿಗೆ ನೋಡಿ ಫ್ಯಾನ್ಸ್‌ ಖುಷಿಪಡ್ತಿದ್ದಾರೆ.

  • ಕಾನ್ಸ್ ಚಿತ್ರೋತ್ಸವ ಮುಗಿದ ನಂತರ ಐಶ್ವರ್ಯಾ ರೈ ಕೈಗೆ ಶಸ್ತ್ರ ಚಿಕಿತ್ಸೆ

    ಕಾನ್ಸ್ ಚಿತ್ರೋತ್ಸವ ಮುಗಿದ ನಂತರ ಐಶ್ವರ್ಯಾ ರೈ ಕೈಗೆ ಶಸ್ತ್ರ ಚಿಕಿತ್ಸೆ

    ಕಾನ್ಸ್ ಫಿಲ್ಮ್ ಫೆಸ್ಟಿವಲ್ (Cannes Film Festival) ಈವೆಂಟ್ ಅದ್ಧೂರಿಯಾಗಿ ನಡೆಯುತ್ತಿದೆ. ವಿವಿಧ ದೇಶದ ಕಲಾವಿದರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಈ ಬಾರಿ ಐಶ್ವರ್ಯಾ ರೈ ಕೈಗೆ ಬ್ಯಾಂಡೇಜ್ ಕಟ್ಟಿಕೊಂಡೆ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಸಿಕ್ಕಿರುವ ಮಾಹಿತಿ ಏನೆಂದರೆ, ಕಾನ್ಸ್ ಫೆಸ್ಟಿವಲ್ ಮುಗಿದ ನಂತರ ಭಾರತಕ್ಕೆ ವಾಪಸ್ ಆಗುತ್ತಿದ್ದಂತೆ ನಟಿ ಸರ್ಜರಿಗೆ ಒಳಗಾಗಲಿದ್ದಾರೆ. ಇದನ್ನೂ ಓದಿ:ಪ್ರಭಾಸ್‌ ಜೀವನದ ಸ್ಪೆಷಲ್‌ ವ್ಯಕ್ತಿ ಕೀರ್ತಿ ಸುರೇಶ್?‌

    ಕೆಲ ದಿನಗಳ ಹಿಂದೆ ಐಶ್ವರ್ಯಾಗೆ ಅವರ ಮಣಿಕಟ್ಟಿಗೆ ಪೆಟ್ಟಾಗಿತ್ತು. ನೋವು ಇರುವುದರಿಂದ ಯಾವುದೇ ಕಾರ್ಯಕ್ರಮಕ್ಕೂ ತೆರಳುವುದು ಬೇಡ ಎಂದು ಆಪ್ತರು ಸಲಹೆ ನೀಡಿದ್ದರು. ಆದರೆ ಅದಕ್ಕೆ ನಟಿ ಒಪ್ಪಲಿಲ್ಲ. ಎಂದಿನಂತೆ ಈ ವರ್ಷವು ಕೂಡ ನಟಿ ಆಗಮಿಸಿದ್ದಾರೆ. ಸದ್ಯ ಕಾನ್ಸ್ ಚಿತ್ರೋತ್ಸವಕ್ಕೆ ಮಗಳ ಜೊತೆ ನಟಿ ಹಾಜರಿ ಹಾಕಿದ್ದಾರೆ. ಹಾಗಾಗಿ ಮುಂದಿನ ವಾರ ಅವರು ಶಸ್ತ್ರಚಿಕಿತ್ಸೆಗೆ ನಟಿ ಒಳಗಾಗಲಿದ್ದಾರೆ ಎನ್ನಲಾಗಿದೆ.

    ಮೊದಲ ದಿನ ಐಶ್ವರ್ಯಾ ಫಲ್ಗುಣಿ ಶೇನ್ ಪೀಕಾಕ್ ಗೌನ್ ಧರಿಸಿದ್ದರು. ವಿಶೇಷ ಏನೆಂದರೆ, ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಅವರು ರೆಡ್ ಕಾರ್ಪೆಟ್‌ನಲ್ಲಿ ಪೋಸ್ ನೀಡಿದ್ದರು. ಐಶ್ವರ್ಯಾ ರೈ ಅವರು ಎರಡನೇ ಬಾರಿ ಬೆಳ್ಳಿ ಮತ್ತು ನೀಲಿ ಮಿಶ್ರಿತ ಗೌನ್ ಧರಿಸಿದ್ದರು. ಫಲ್ಗುಣಿ ಮತ್ತು ಶೇನ್ ಪೀಕಾಕ್ ವಿನ್ಯಾಸಗೊಳಿಸಿದ ಸ್ಕರ್ಟ್ ಇದಾಗಿತ್ತು.

  • ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಐಶ್ವರ್ಯಾ ರೈ

    ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಐಶ್ವರ್ಯಾ ರೈ

    ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಕಾನ್ಸ್ ಫಿಲ್ಮ್ ಫೆಸ್ಟಿವಲ್ (Cannes Film Festival) ಕೂಡ ಒಂದು. ಕಾನ್ಸ್ ಚಿತ್ರೋತ್ಸವ 14ರಿಂದ ಆರಂಭವಾಗಿದೆ. ಇದೀಗ ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ (Aishwarya Rai) ಹೆಜ್ಜೆ ಹಾಕಿದ್ದಾರೆ.

    ಪ್ರತಿವರ್ಷದಂತೆ ಈ ವರ್ಷವು ಕೂಡ ಕಾನ್ಸ್ ಚಿತ್ರೋತ್ಸವದಲ್ಲಿ ಕರಾವಳಿ ನಟಿ ಐಶ್ವರ್ಯಾ ರೈ ಭಾಗಿಯಾಗಿದ್ದಾರೆ. ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ನಟಿ ಹೆಜ್ಜೆ ಹಾಕಿದ್ದಾರೆ. ನಟಿಯ ಕೈಗೆ ಪೆಟ್ಟಾಗಿದ್ರೂ ನಗು ಮುಖದಿಂದ ನಟಿ ಕಾರ್ಯಕ್ರಮದಲ್ಲಿ ಮಿಂಚಿರೋದು ನೋಡಿ ನೆಟ್ಟಿಗರು ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ:ಕೇಂದ್ರದ ಸಾಧನೆ ಹಾಡಿಹೊಗಳಿದ ರಶ್ಮಿಕಾ ಮಂದಣ್ಣಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ

    ಕಾನ್ಸ್ ರೆಡ್ ಕಾರ್ಪೆಟ್‌ನಲ್ಲಿ ನಟಿ ಫಲ್ಗುಣಿ ಶೇನ್ ಪೀಕಾಕ್ ಗೌನ್‌ನಲ್ಲಿ ಮಿಂಚಿದ್ದಾರೆ. ಐಶ್ವರ್ಯಾ ರೈ ವಿವಿಧ ಭಂಗಿಯಲ್ಲಿ ನಿಂತು ಪೋಸ್ ಕೊಡ್ತಿರೋದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 50ನೇ ವರ್ಷದ ವಯಸ್ಸಿನಲ್ಲಿಯೂ ನಟಿ ಗ್ಲ್ಯಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ.

    ಅಂದಹಾಗೆ, ಕಾನ್ಸ್ ಚಿತ್ರೋತ್ಸವಕ್ಕೆ ಬರಲು ಮುಂಬೈ ವಿಮಾನ ನಿಲ್ದಾಣದಿಂದ ಐಶ್ವರ್ಯಾ ರೈ ಹೊರಟಾಗಲೇ ಫ್ಯಾನ್ಸ್‌ಗೆ ಆತಂಕವಾಗಿತ್ತು. ಆದರೆ ಕೈಗೆ ಪೆಟ್ಟಾಗಿದ್ರೂ ನಗುಮುಖದಿಂದಲೇ ಹೊರಟ ಐಶ್ವರ್ಯಾರನ್ನು ನೋಡಿ ಅಭಿಮಾನಿಗಳು ಆರೋಗ್ಯ ವಿಚಾರಿಸಿದ್ದರು.