Tag: Cannes Film Festival

  • ಆಲಿಯಾ ಭಟ್‌ ಮತ್ತೆ ಪ್ರೆಗ್ನೆಂಟ್..? ವೈರಲ್‌ ಆಯ್ತು ವಿಡಿಯೋ..!

    ಆಲಿಯಾ ಭಟ್‌ ಮತ್ತೆ ಪ್ರೆಗ್ನೆಂಟ್..? ವೈರಲ್‌ ಆಯ್ತು ವಿಡಿಯೋ..!

    ಬಾಲಿವುಡ್‌ ಬೆಡಗಿ ಆಲಿಯಾ ಭಟ್‌ (Alia Bhatt) ಅವರ ಹೊಟ್ಟೆ ಕೊಂಚ ಉಬ್ಬಿದಂತೆ ಕಾಣಿಸಿಕೊಂಡ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಬೆನ್ನಲ್ಲೇ ನಟಿ ಮತ್ತೆ ಗರ್ಭಿಣಿಯಾಗಿದ್ದಾರೆ (Pregnant) ಎಂಬ ವದಂತಿ ಹಬ್ಬಿದ್ದು, ಪರ ವಿರೋಧ ಚರ್ಚೆಯನ್ನೂ ಹುಟ್ಟುಹಾಕಿದೆ.

    Alia Bhatt at the L’Oreal Lights On Women Awards at Cannes
    byu/Big-Criticism-8926 inBollyBlindsNGossip

    ಹೌದು.. ಶುಕ್ರವಾರ ಕಾನ್‌ ಫಿಲಂ ಫೆಸ್ಟಿವಲ್‌ನಲ್ಲಿ (Cannes Film Festival) ನಟಿ ಆಲಿಯಾ ಭಟ್‌ ಕಾಣಿಸಿಕೊಂಡ ರೀತಿ ಈ ವದಂತಿಗೆ ಕಾರಣವಾಗಿದೆ. ಇದನ್ನೂ ಓದಿ: ‘ಸಿಂಧೂರ’ ಆಯ್ತು, ಈಗ ಭಗವದ್ಗೀತೆ ಶ್ಲೋಕ- ಭಾರತೀಯ ಸಂಸ್ಕೃತಿ ಪ್ರದರ್ಶಿಸಿದ ಐಶ್ವರ್ಯಾ ರೈ!

    ಖಾನ್‌ ಫೆಸ್ಟಿವಲ್‌ಗೆ ನಟಿ ಶಿಯಾಪರೆಲ್ಲಿ ಗೌನ್‌ನಲ್ಲಿ ಎಂಟ್ರಿ ಕೊಟ್ಟಿದ್ದಾಗ ಫ್ಯಾಷನ್‌ ಪೋಸ್‌ ಕೊಟ್ಟರು.ಈ ವೇಳೆ ಅವರ ಹೊಟ್ಟೆಯ ಭಾಗ ಸ್ವಲ್ಪ ಉಬ್ಬಿದಂತೆ ಕಂಡುಬಂದಿತ್ತು. ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಆಲಿತಾ ಮತ್ತೆ ಪ್ರೆಗ್ನೆಂಟ್‌ ಆಗಿದ್ದಾರಾ? ಅಂತ ಪ್ರಶ್ನೆ ಮಾಡತೊಡಗಿದ್ರು. ಇದಕ್ಕೆ ಕೆಲವರು ಯೆಸ್‌… ಯೆಸ್‌… ಅಂತಾ ಕಾಮೆಂಟ್‌ ಮಾಡಿದ್ದಾರೆ. ಆದ್ರೆ ಆಲಿಯಾ ಭಟ್‌- ರಣಬೀರ್‌ ಕಪೂರ್‌ ದಂಪತಿಯಿಂದ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ.

    ಇನ್ನೂ 2022ರಲ್ಲಿ ರಣಬೀರ್ ಕಪೂರ್ (Ranbir Kapoor) ಜೊತೆ ಆಲಿಯಾ ಮದುವೆ ನಡೆಯಿತು. ಇವರ ಸುಂದರ ದಾಂಪತ್ಯಕ್ಕೆ 2 ವರ್ಷದ ಮಗಳು ರಾಹಾ ಸಾಕ್ಷಿಯಾಗಿದ್ದಾಳೆ. ಇದನ್ನೂ ಓದಿ: ತಮನ್ನಾ ರಾಯಭಾರಿ | ತೆರಿಗೆ ಪಾವತಿದಾರರ ಹಣವನ್ನು ವ್ಯರ್ಥ ಮಾಡಿದಂತೆ: ರಮ್ಯಾ ಬೇಸರ

    ಮದುವೆ ಬಳಿಕ ಸಿನಿಮಾಗಳಿಗೆ ಬ್ರೇಕ್‌ ನೀಡಿದ್ದ ಆಲಿಯಾ ಭಟ್‌ ಇದೀಗ ʻಬ್ರಹ್ಮಾಸ್ತ್ರ-2ʼ ಚಿತ್ರಕ್ಕಾಗಿ ಕೆಲಸ ಮಾಡ್ತಿದ್ದಾರೆ ಎಂದು ತಿಳಿದುಬಂದಿದೆ. 2022ರಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ-1’ ಸಿನಿಮಾ ರಿಲೀಸ್ ಆಗಿತ್ತು. ಚಿತ್ರದಲ್ಲಿ ಬಿಗ್ ಬಿ, ನಾಗಾರ್ಜುನ, ಮೌನಿ ರಾಯ್ ಸೇರಿದಂತೆ ಅನೇಕರು ನಟಿಸಿದ್ದರು. ಈ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು. ಇದನ್ನೂ ಓದಿ: ಮೃಣಾಲ್ ಠಾಕೂರ್ ಫ್ಯಾನ್ಸ್‌ಗೆ ಡಬಲ್ ಧಮಾಕ!

  • 40 ವರ್ಷಗಳ ಬಳಿಕ ಕಾನ್ಸ್ ಚಿತ್ರೋತ್ಸವಕ್ಕೆ ಭಾರತದ ಸಿನಿಮಾ ಆಯ್ಕೆ

    40 ವರ್ಷಗಳ ಬಳಿಕ ಕಾನ್ಸ್ ಚಿತ್ರೋತ್ಸವಕ್ಕೆ ಭಾರತದ ಸಿನಿಮಾ ಆಯ್ಕೆ

    ಪ್ರತಿಷ್ಠಿತ ಕಾನ್ಸ್ ಚಿತ್ರೋತ್ಸವಕ್ಕೆ (Cannes Film Festival)  ಭಾರತದಿಂದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ (All We Imagine As Light) ಹೆಸರಿನ ಸಿನಿಮಾ ಆಯ್ಕೆಯಾಗಿದೆ. ಪಾಯಲ್ ಕಾಪಾಡಿಯಾ (Payal Kapadia) ನಿರ್ದೇಶನದ ಈ ಸಿನಿಮಾ ಮೂಡಿ ಬಂದಿದ್ದು, ಮುಂಬೈಗೆ ಬಂದ ಕೇರಳದ ಇಬ್ಬರು ವಲಸೆ ದಾದಿಯರ ಕಥೆಯನ್ನು ಇದು ಒಳಗೊಂಡಿದೆ.

    ನಲವತ್ತು ವರ್ಷಗಳಿಂದ ಭಾರತದ ಯಾವುದೇ ಸಿನಿಮಾ ಕಾನ್ಸ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿರಲಿಲ್ಲ. ನಾಲ್ಕು ದಶಕಗಳ ನಂತರ ಭಾರತದ ಚಿತ್ರವೊಂದು ಕಾನ್ಸ್ ಗೆ ಆಯ್ಕೆ ಆಗುವ ಮೂಲಕ ಸಹಜವಾಗಿ ಸಂಭ್ರಮಕ್ಕೆ ಕಾರಣವಾಗಿದೆ.

    1983ರಲ್ಲಿ ತೆರೆಕಂಡ ಮೃಣಾಲ್ ಸೇನ್ ಅವರ ಖಾರಿಜ್ ಸಿನಿಮಾ ಕಾನ್ಸ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಆನಂತರ ಯಾವುದೇ ಸಿನಿಮಾಗೆ ಅಂತಹ ಅವಕಾಶ ಸಿಕ್ಕಿರಲಿಲ್ಲ. ಮೇ 14 ರಿಂದ 25ವರೆಗೂ ಈ ಚಿತ್ರೋತ್ಸವ ಕ್ಯಾನೆಸ್ ಫಿಲ್ಮ್ ಗಾಲಾದಲ್ಲಿ ನಿಗದಿಯಾಗಿದೆ.

  • ಪ್ರತಿಷ್ಠಿತ ಕೇನ್ಸ್  ಚಲನಚಿತ್ರೋತ್ಸವಕ್ಕೆ ಕಿರುಚಿತ್ರ ಆಯ್ಕೆ

    ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವಕ್ಕೆ ಕಿರುಚಿತ್ರ ಆಯ್ಕೆ

    ಹೈಡ್ ಅಂಡ್ ಸೀಕ್  (Hide and Sick)ಕಿರುಚಿತ್ರವನ್ನು ಭಾರತದ ಯುವ ನಿರ್ದೇಶಕಿ 20 ವರ್ಷ ವಯಸ್ಸಿನ ಮಿಸ್ ಕರೆನ್ ಕ್ಷಿತಿ ಸುವರ್ಣ (Karen Ksiti Suvarna)ಅವರು ನಿರ್ದೇಶಿಸಿದ್ದಾರೆ. ಇದು ಸ್ಕಿಜೋಫ್ರೇನಿಯಾ ಮತ್ತು ಅದರ ತೀವ್ರ ಪರಿಣಾಮಗಳ ಕುರಿತು ಸಂದೇಶವನ್ನು ಹೊಂದಿರುವ 10 ನಿಮಿಷಗಳ ಸ್ವತಂತ್ರ ಕಿರುಚಿತ್ರವಾಗಿದೆ. ಇಂದಿನ ಜಗತ್ತಿನಲ್ಲಿ ಇದು ಪ್ರಸ್ತುತವಾದ ವಿಷಯವಾಗಿದೆ. ಏಕೆಂದರೆ ನಾವು ಖಿನ್ನತೆ ಮತ್ತು ಸಿಂಜೊಫ್ರೇನಿಯಾ ಕಾಯಿಲೆಯಿಂದ ಕುಟುಂಬ ಹತ್ಯೆಗಳು / ಸಾರ್ವಜನಿಕ, ಸಾಮೂಹಿಕ ಹತ್ಯೆಗಳನ್ನು ನೋಡುತ್ತಿದ್ದೇವೆ ಎಂದಿದ್ದಾರೆ ಕರೆನ್.

    ಕರೆನ್ ಕ್ಷಿತಿ ಸುವರ್ಣ ಅವರು ತಮ್ಮ ಕ್ರಾಫ್ಟ್ ಮತ್ತು ಕಲೆಗಾಗಿ ಅವರ ಚಲನಚಿತ್ರ ತಯಾರಿಕೆಗಾಗಿ ಮೆಚ್ಚುಗೆ ಪಡೆದಿದ್ದಾರೆ. ಯುವ ನಿರ್ದೇಶಕರು ರೋಮಾಂಚಕ ಕಥೆಯನ್ನು ವಿವರಿಸಿದ್ದಾರೆ ಮತ್ತು ಆಧುನಿಕ ಪ್ರಪಂಚದ ಸ್ಕಿಜೋಫ್ರೇನಿಯಾದ ಝೇಂಕರಿಸುವ ವಿಷಯದ ಬಗ್ಗೆ ಸಂದೇಶವನ್ನು ನೀಡಿದ್ದಾರೆ. ಈ ಕಿರುಚಿತ್ರವನ್ನು ವಿಸಿಕಾ ಫಿಲಂಸ್ ಜೊತೆಗೆ ಮೋಹನ್ ಮತ್ತು ಮನು ಗೊರೂರ್ ಸಹ ನಿರ್ಮಾಪಕರಾಗಿ ನಿರ್ಮಿಸಿದ್ದಾರೆ.

    ಈ ಚಿತ್ರಕ್ಕೆ ಅನಿಲ್ ಕುಮಾರ್ ಅವರ ಛಾಯಾಗ್ರಹಣವಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ಸಂಯೋಜನೆಯ ಬಾಪಿ ತುತುಲ್ ಅವರ ಹಿನ್ನೆಲೆ ಸಂಗೀತವಿದೆ. ಹಲವಾರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಕಿರುಚಿತ್ರ ಪ್ರದರ್ಶಿಸಲಾಗಿದ್ದು, ಅವುಗಳಲ್ಲಿ ಕೇನ್ಸ್ ವಿಶ್ವ ಚಲನಚಿತ್ರೋತ್ಸವ (Cannes Film Festival) ಅತೀ ದೊಡ್ಡದಾಗಿದೆ. ಇದನ್ನು ಕೊಲಂಬಿಯನ್ ಇನ್‌ಕ್ಲೂಸಿನ್ ಫೆಸ್ಟಿವಲ್ ಮತ್ತು ಹಲವಾರು ಅರ್ಹತಾ ಚಲನಚಿತ್ರೋತ್ಸವದಲ್ಲಿ ಕೂಡ ಪ್ರದರ್ಶಿಸಲಾಗಿದೆ.

  • ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ಕನ್ನಡತಿ ಇತಿ ಆಚಾರ್ಯ

    ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ಕನ್ನಡತಿ ಇತಿ ಆಚಾರ್ಯ

    ಪ್ರತಿಷ್ಠಿತ ಅಂತಾರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್ ಕ್ಯಾನೆಸ್ (Cannes Film Festival) ಹಬ್ಬ ಫ್ರಾನ್ಸ್ ನಲ್ಲಿ ನಡೆಯುತ್ತಿದೆ. ಬಾಲಿವುಡ್ ತಾರೆಯರು ಭಿನ್ನ ವಿಭಿನ್ನ ಉಡುಗೆ ತೊಟ್ಟು ಕ್ಯಾನೆಸ್ ಫಿಲ್ಮಂ ಫೆಸ್ಟಿವಲ್ ರೆಡ್ ಕಾರ್ಪೆಟ್ (Red Carpet) ನಲ್ಲಿ ಹೆಜ್ಜೆ ಹಾಕಿದ್ದಾರೆ. 10 ದಿನಗಳ ಕಾಲ ನಡೆಯುವ ಈ ಸಿನಿಮಾ ಹಬ್ಬದಲ್ಲಿ ಕನ್ನಡತಿ ಇತಿ ಆಚಾರ್ಯ (Ithi Acharya) ಮೊದಲ ಬಾರಿಗೆ ಹೆಜ್ಜೆ ಹಾಕಿದ್ದಾರೆ.

    ವಿಮ್ ವೆಂಡರ್ಸ್ ನಿರ್ದೇಶಿಸಿದ ಅನ್ಸೆಲ್ಮ್ ಸಿನಿಮಾಕ್ಕಾಗಿ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಹೆಜ್ಜೆ ಹಾಕುವ ಅವಕಾಶ ಇತಿ ಆಚಾರ್ಯ ಪಾಲಾಗಿದೆ. ಅದರಂತೆ ಕಪ್ಪು ಬಣ್ಣದ ಗೌನ್ ತೊಟ್ಟು, ಬೆಂಗಳೂರಿನ ಖಿಯಾ ಜ್ಯುವೆಲ್ಲರಿಯವರ ವಜ್ರದ ಆಭರಣ, ದೆಹಲಿ ಮೂಲದ ತಾರಿಣಿ ನಿರುಲಾ ಅವರ ಕರಕುಶಲ ಹಮ್ಮಿಂಗ್ ಬರ್ಡ್‌ ಕಪ್ಪು ಕೈ ಕ್ಲಚ್ ಹಿಡಿದು ಕ್ಯಾನೆಸ್ ನಲ್ಲಿ ರಂಗೇರಿಸಿದ್ದಾರೆ. ಇದನ್ನೂ ಓದಿ:ಕಂಗನಾ ಸಿನಿಮಾ ನೋಡಿ ಕಣ್ಣೀರಿಟ್ಟ ರಾಜಮೌಳಿ ತಂದೆ

    ನಟಿ ಹಾಗೂ ಮಾಡೆಲ್ ಆಗಿರುವ ಇತಿ ಆಚಾರ್ಯ 2016ರ ಮಿಸ್ ಸೌತ್ ಇಂಡಿಯಾ ವಿನ್ನರ್. ಆರ್ ವಿ ಎಸ್ ಪಿ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಒಳಗೊಂಡಂತೆ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ.

    ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋಲ್ಡಿಂಗ್ಸ್ ನಲ್ಲಿ ಕಾಣಿಸಿಕೊಂಡ ಹಿರಿಮೆ ಇವರದ್ದು, ಅಮೇರಿಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಸಾಂಗ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.

  • ‘ಕಾಸ್ಟ್ಯೂಮ್ ಗುಲಾಮರು’ ಎಂದು ಐಶ್ವರ್ಯಾ ರೈ ಟೀಕಿಸಿದ ವಿವೇಕ್ ಅಗ್ನಿಹೋತ್ರಿ

    ‘ಕಾಸ್ಟ್ಯೂಮ್ ಗುಲಾಮರು’ ಎಂದು ಐಶ್ವರ್ಯಾ ರೈ ಟೀಕಿಸಿದ ವಿವೇಕ್ ಅಗ್ನಿಹೋತ್ರಿ

    ಕಾನ್ ಫೆಸ್ಟಿವಲ್ (Cannes Film Festival) ನಲ್ಲಿ ವಿಚಿತ್ರ ಕಾಸ್ಟ್ಯೂಮ್ ಮೂಲಕ ಸದ್ದು ಮಾಡಿರುವ ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai) ಅವರನ್ನು ದಿ ಕಾಶ್ಮೀರ್ ಸ್ಟೋರಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಬಲವಾಗಿ ಟೀಕಿಸಿದ್ದಾರೆ. ಅವರ ಕಾಸ್ಟ್ಯೂಮ್ ಎತ್ತಿಕೊಂಡು ಬರುವ ವ್ಯಕ್ತಿಗಳ ಕುರಿತು ‘ಕಾಸ್ಟ್ಯೂಮ್ ಗುಲಾಮರು’ ಎಂದು ಅವರು ಕರೆದಿದ್ದಾರೆ. ಈ ಸಂಸ್ಕೃತಿ ಸರಿಯಲ್ಲ ಎಂದೂ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ‘ಕಾಸ್ಟ್ಯೂಮ್ (Costume) ಗುಲಾಮರು ಎನ್ನುವ ಪದವನ್ನು ನೀವು ಕೇಳಿದ್ದೀರಾ? ಈ ರೀತಿಯ ಗುಲಾಮರು ಹೆಚ್ಚಾಗಿ ಮಹಿಳೆಯರೇ ಇರುತ್ತಾರೆ. ಹೊಂದಿಕೆ ಆಗದೇ ಇರುವ ಕಾಸ್ಟ್ಯೂಮ್ ಏನನ್ನು ಸೂಚಿಸುತ್ತದೆ? ಆ ರೀತಿಯ ಕಾಸ್ಟ್ಯೂಮ್ ಗಳಿಗೆ ಯಾಕೆ ನಾವು ಮೂರ್ಖರಾಗುತ್ತಿದ್ದೇವೆ. ಬಾಲಿವುಡ್ ನಲ್ಲೂ ಇಂತಹ ಘಟನೆಗಳು ನಡೆಯುತ್ತವೆ’ ಎಂದು ಅವರು ಬರೆದಿದ್ದಾರೆ. ವಿವೇಕ್ ಅಗ್ನಿಹೋತ್ರಿ ಈ ರೀತಿ ಬರೆದುಕೊಂಡರೆ, ಐಶ್ವರ್ಯಾ ರೈ ಫ್ಯಾನ್ಸ್ ವಿವೇಕ್ ಅವರಿಗೆ ತಿರುಗೇಟು ಕೂಡ ನೀಡಿದ್ದಾರೆ.

    76ನೇ ಕಾನ್ ಫೆಸ್ಟಿವಲ್ ಫ್ಯಾನ್ಸ್‌ನಲ್ಲಿ ಗ್ರ್ಯಾಂಡ್ ಆಗಿ ನಡೆಯುತ್ತಿದೆ. ಮೇ 16ರಿಂದ ಶುರುವಾಗಿರುವ ಈ ಕಾರ್ಯಕ್ರಮ ಮೇ 27ಕ್ಕೆ ಅಂತ್ಯವಾಗಲಿದೆ. ಕಾನ್ ಚಿತ್ರೋತ್ಸವದಲ್ಲಿ ಐಶ್ವರ್ಯ ರೈ, ಊರ್ವಶಿ ರೌಟೇಲಾ, ಮೃಣಾಲ್ ಠಾಕೂರ್ (Mrunal Thakur), ಪಾಲ್ಗೊಂಡಿದ್ದಾರೆ. ಇದನ್ನೂ ಓದಿ:‘ಸಿದ್ದರಾಮಯ್ಯ ಎಂಬ ನಾನು’: ಸಿದ್ದರಾಮಯ್ಯ ಕುರಿತು ಮತ್ತೊಂದು ಸಿನಿಮಾ ಘೋಷಣೆ

    ಕರಾವಳಿ ಬೆಡಗಿ ಐಶ್ವರ್ಯಾ ರೈ (Aishwarya Rai) ಅವರು ಗ್ರೀನ್ ಬಣ್ಣದ ಡ್ರೆಸ್ ಮತ್ತು ಕಪ್ಪು- ಸಿಲ್ವರ್ ಮಿಶ್ರಿತ ಕಲರ್ ಗೌನ್‌ನಲ್ಲಿ ಸ್ಟೈಲ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಲುಕ್ ಮತ್ತು ಕಣ್ಣಿನ ನೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ಊರ್ವಶಿ ರೌಟೇಲಾ (Urvashi Rautela) ಅವರು ಬಾದಮ್ ಮತ್ತು ನೀಲಿ ಕಲರ್ ಮಿಕ್ಸ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ತುಟಿಗೆ ನೀಲಿ ಬಣ್ಣದ ಲಿಪ್‌ಸ್ಟಿಕ್ ಹಾಕಿದ್ದಾರೆ. ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ‘ಸೀತಾ ರಾಮಂ’ ಸುಂದರಿ ಮೃಣಾಲ್ ಠಾಕೂರ್ ಅವರು ಬಿಳಿ ಬಣ್ಣದ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

  • ಪ್ರತಿಷ್ಠಿತ 74ನೇ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ‘ದೇವರ ಕನಸು’

    ಪ್ರತಿಷ್ಠಿತ 74ನೇ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ‘ದೇವರ ಕನಸು’

    ಬೆಂಗಳೂರು: ನಿರ್ದೇಶಕ ಸುರೇಶ್ ಲಕ್ಕೂರ್ ನಿರ್ದೇಶನದಲ್ಲಿ ತಯಾರಾದ ಕನ್ನಡ ಚಿತ್ರ ದೇವರ ಕನಸು ಸಿನಿಮಾ ಪ್ರತಿಷ್ಠಿತ 74ನೇ ಕಾನ್ ಸಿನಿಮೋತ್ಸದ ವೇಳೆ ಮಾರುಕಟ್ಟೆ ವಿಭಾಗದ ಮಾರ್ಷ್ ಡು ಫಿಲಂನಲ್ಲಿ ಆನ್ಲೈನ್ ಸ್ಕ್ರೀನಿಂಗ್/ ಪ್ರದರ್ಶನ ಕಂಡಿದೆ. ಮಿಲೇನಿಯಮ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಸಾಮಾಜಿಕ ಸಂದೇಶ ಸಾರುವ ಈ ಸಿನಿಮಾದಲ್ಲಿ 12 ವರ್ಷದ ಬಾಲಕನ ಸೈಕಲ್ ಪಡೆದುಕೊಳ್ಳುವ ಕನಸಿನ ಸುತ್ತ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಸ್ವಂತ ಸೈಕಲ್ ಖರೀದಿಸಿ ಊರ ಸೈಕಲ್ ರೇಸ್ ನಲ್ಲಿ ಗೆಲುವು ಸಾಧಿಸುವುದು ಆತನ ಮುಖ್ಯ ಉದ್ದೇಶ. ಅದನ್ನು ಈಡೇರಿಸಿಕೊಳ್ಳಲು ಬಾಲಕ ಏನೆಲ್ಲ ಹರಸಾಹಸ ಮಾಡುತ್ತಾನೆ ಎಂಬುದೇ ದೇವರ ಕನಸು ಚಿತ್ರದ ಎಳೆಯಾಗಿದೆ.

    ಈ ಸಿನಿಮೋತ್ಸವದ ಮಾರುಕಟ್ಟೆ ವಿಭಾಗದಲ್ಲಿ ಚಿತ್ರತಂಡ ಪಾಲ್ಗೊಳ್ಳಲು ಅವಕಾಶ ಇತ್ತಾದರೂ, ಕೋವಿಡ್ ಹಿನ್ನೆಲೆಯಲ್ಲಿ ಅದು ಈಡೇರಿರಲಿಲ್ಲ. ಮಾರುಕಟ್ಟೆ ವಿಭಾಗದ ಚಿತ್ರಗಳು ಆನ್‍ಲೈನ್ ಮೂಲಕ ಪ್ರದರ್ಶನ ಕಾಣುತ್ತಿವೆ. 2019ರಲ್ಲಿ ಶೂಟಿಂಗ್ ಆರಂಭಿಸಿದ್ದ ಈ ಸಿನಿಮಾ, ಒಟ್ಟು 29 ದಿನಗಳಲ್ಲಿ ಸಂಪೂರ್ಣ ಶೂಟಿಂಗ್ ಮುಗಿಸಿಕೊಂಡು, ಅಂತಾರಾಷ್ಟ್ರೀಯ ಸಿನಿಮೋತ್ಸವಗಳಿಗೆ ಪಾದಾರ್ಪಣೆ ಮಾಡಿದೆ.

    ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ, ದೇವರ ಕನಸು ಚಿತ್ರಕ್ಕೆ ಪ್ಯಾನ್ ಇಂಡಿಯಾ ತಂತ್ರಜ್ಞರು ಕೆಲಸ ಮಾಡಿದ್ದು, ರತ್ನಜಿತ್ ರಾಯ್ ಛಾಯಾಗ್ರಹಣ, ಅನಿರ್ಬನ್ ಗಂಗೂಲಿ ಸೌಂಡ್ ಡಿಸೈನಿಂಗ್, ಸಂಕಲನ ಜಿಸ್ನು ಸೇನ್ ಪಶ್ಚಿಮ ಬಂಗಾಳದವರಾಗಿದ್ದಾರೆ. ಅದೇ ರೀತಿ ಚೆನ್ನೈ ಮೂಲದ ನಿತ್ಯಾನಂದ ಸೌಂಡ್, ಸುಂದರ್ ಆರ್ ಅವರ ಸಂಗೀತ ನೀಡಿದ್ದಾರೆ.

    ಕೇರಳ ಮೂಲದ ಜಿಷಾ ಮ್ಯಾಥ್ಯು ವಸ್ತ್ರ ವಿನ್ಯಾಸ ಮಾಡಿದ್ದು, ಮತ್ತೋರ್ವ ಮನೋಜ್ ಅಂಗಮಾಲಿ ಮೇಕಪ್ ಜವಾಬ್ದಾರಿ ನಿಭಾಯಿಸಿದ್ದಾರೆ. ಕರ್ನಾಟಕದ ಲಿಂಗರಾಜ್ ಇತಿಹಾಸ್ ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದು, ಚನ್ನಬಸವ ಪ್ರೊಡಕ್ಷನ್ ಡಿಸೈನರ್ ಆಗಿ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಸಿನಿಮಾಕ್ಕೆ ಸುನೀಲ್ ರಾಮ್ ಕಥೆ ಬರೆದಿದ್ದಾರೆ.

    ನಿರ್ದೇಶಕ ಸುರೇಶ್ ಲಕ್ಕೂರ್ ನ್ಯೂಯಾರ್ಕ್ ಸಿನಿಮಾ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ.ಮೊದಲ ಚಿತ್ರವಾಗಿ ದೇವರ ಕನಸು ಬತ್ತಳಿಕೆಯಿಂದ ಹೊರಬಂದಿದ್ದು, ಮಕ್ಕಳ ಸಿನಿಮಾ ಮೂಲಕ ಸ್ವತಂತ್ರವಾಗಿ ಕೆಲಸ ಆರಂಭಿಸಿದ್ದಾರೆ.

    ಈ ಚಿತ್ರದಲ್ಲಿ ಕಲಾವಿದರಾಗಿ ದೀಪಕ್, ಅಮೂಲ್ಯ, ಯುವರಾಜ್ ಕಿಣಿ, ಆರುಷಿ ವೇದಿಕಾ, ಮಣಿ, ರೂಪಾ, ವಿಜಯ್ ರಾಕೇಶ್ ಪಾತ್ರವರ್ಗದಲ್ಲಿದಲ್ಲಿದ್ದಾರೆ.

  • ಮಗಳ ಜೊತೆ ಮತ್ಸ್ಯಕನ್ಯೆಯಾಗಿ ನಟಿ ಐಶ್ವರ್ಯ ಎಂಟ್ರಿ

    ಮಗಳ ಜೊತೆ ಮತ್ಸ್ಯಕನ್ಯೆಯಾಗಿ ನಟಿ ಐಶ್ವರ್ಯ ಎಂಟ್ರಿ

    ಪ್ಯಾರಿಸ್: ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಕೇನ್ಸ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ತಮ್ಮ ಮಗಳು ಆರಾಧ್ಯ ಜೊತೆ ಮತ್ಸ್ಯಕನ್ಯೆ ಆಗಿ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

    72ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಐಶ್ವರ್ಯ ಒಂದು ಕಡೆಯ ಅರ್ಧ ತೋಳು ಇರುವ ಮತ್ಸಕನ್ಯೆ ಉಡುಪು ಧರಿಸಿ ಆಗಮಿಸಿದ್ದರು. ಈ ಉಡುಪಿಗೆ ಐಶ್ವರ್ಯ ನ್ಯೂಡ್ ಲಿಪ್‍ಸ್ಟಿಕ್ ಹಾಕಿ ಯಾವುದೇ ಆಭರಣ ಇಲ್ಲದೆ ಮಿಂಚಿದ್ದಾರೆ. ಐಶ್ವರ್ಯ ಅವರ ಉಡುಪನ್ನು ಜೀನ್ ಲ್ಯೂಇಸ್ ಸಬಾಜಿ ವಿನ್ಯಾಸ ಮಾಡಿದ್ದರು.

     

    View this post on Instagram

     

    ????My Sunshine Forever☀️????✨ ????LOVE YOU ❤️

    A post shared by AishwaryaRaiBachchan (@aishwaryaraibachchan_arb) on

    ಈ ಕಾರ್ಯಕ್ರಮಕ್ಕೆ ಐಶ್ವರ್ಯ ತಮ್ಮ ಮಗಳು ಆರಾಧ್ಯಳನ್ನು ಕರೆದುಕೊಂಡು ಬಂದಿದ್ದರು. ಆರಾಧ್ಯ ತನ್ನ ತಾಯಿಯ ಉಡುಪಿನ ಜೊತೆ ಮ್ಯಾಚ್ ಆಗಲು ಹಳದಿ ಬಣ್ಣದ ಫ್ರಾಕ್ ಧರಿಸಿದ್ದರು. ಐಶ್ವರ್ಯ ಎಂಟ್ರಿ ಕೊಡುವ ವೇಳೆ ತಮ್ಮ ಮಗಳ ಕೈ ಹಿಡಿದುಕೊಂಡು ಆಕೆಯನ್ನು ಸುತ್ತಿಸಿದ್ದಾರೆ.

    ಭಾನುವಾರ ಐಶ್ವರ್ಯ ರೈ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮಗಳ ಜೊತೆಯಿರುವ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಆರಾಧ್ಯ ಕೈಯಲ್ಲಿ ಗುಲಾಬಿ ಹೂಗುಚ್ಚವನ್ನು ಹಿಡಿದುಕೊಂಡು ಕಾರಿನಲ್ಲಿ ಹೋಗುತ್ತಿದ್ದರು. ಅಲ್ಲದೆ “ನಾವು ಇಲ್ಲಿಗೆ ಬಂದಿದ್ದೇವೆ. ನಿಮ್ಮ ಪ್ರೀತಿಗೆ ಧನ್ಯವಾದಗಳು. ಕೇನ್ಸ್ 2019” ಎಂದು ಬರೆದು ಪೋಸ್ಟ್ ಮಾಡಿದ್ದರು.

     

    View this post on Instagram

     

    ✨????????????????????????

    A post shared by AishwaryaRaiBachchan (@aishwaryaraibachchan_arb) on

    ಸದ್ಯ ಕೇನ್ಸ್ ಫಿಲ್ಮ್ ಫೆಸ್ಟಿವಲ್‍ಗೆ ಬಾಲಿವುಡ್ ನಟಿಯರಾದ ಐಶ್ವರ್ಯ ರೈ ಬಚ್ಚನ್ ಸೇರಿದಂತೆ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಹಿನಾ ಖಾನ್, ಕಂಗನಾ ರನೌತ್, ಮಲ್ಲಿಕಾ ಶರಾವತ್, ಹುಮಾ ಖುರೇಶಿ, ಡಯಾನಾ ಪೆಂಟಿ ಭಾಗವಹಿಸಿದ್ದಾರೆ.

     

    View this post on Instagram

     

    ????

    A post shared by AishwaryaRaiBachchan (@aishwaryaraibachchan_arb) on

  • ಅಭಿಮಾನಿಗಳಿಗೆ ಗುಡ್‍ನ್ಯೂಸ್ ಕೊಟ್ಟ ಐಶ್ವರ್ಯಾ ರೈ

    ಅಭಿಮಾನಿಗಳಿಗೆ ಗುಡ್‍ನ್ಯೂಸ್ ಕೊಟ್ಟ ಐಶ್ವರ್ಯಾ ರೈ

    ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯದಿದ್ದ ಬಾಲಿವುಡ್ ನಟಿ ಐಶ್ವರ್ಯ ರೈ ಈಗ ಇನ್ ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದಾರೆ.

    aishwaryaraibachchan_arbಎಂಬ ಹೆಸರಿನಲ್ಲಿ ಖಾತೆ ತೆರೆದಿರುವ ಅವರು, ಯಾವುದೇ ಪೋಸ್ಟ್ ಮಾಡಿಲ್ಲ. ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಕ್ಯಾನೆ ಚಲನಚಿತ್ರೋತ್ಸವದಲ್ಲಿ ಅವರು ಭಾಗವಹಿಸಲು ಗುರುವಾರ ತೆರಳಿದ್ದರಿಂದ ಯಾವುದೇ ಪೋಸ್ಟ್ ಮಾಡಿಲ್ಲ ಎನ್ನಲಾಗುತ್ತಿದೆ.

    ಕ್ಯಾನೆ ಚಲನಚಿತ್ರೋತ್ಸವದಲ್ಲಿ ಅವರು 17ನೇ ಬಾರಿ ಭಾಗವಹಿಸುತ್ತಿದ್ದು, ತಮ್ಮ ಮಗಳೊಂದಿಗೆ ಮುಬೈನಿಂದ ಫ್ರಾನ್ಸ್ ಗೆ ತೆರಳಿದ್ದಾರೆ.

     

    ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಐಶ್ವರ್ಯ ರೈ, ತಮ್ಮ ಖಾಸಗಿ ಜೀವನದ ಕುರಿತು ಗುಟ್ಟು ಹಂಚಿಕೊಳ್ಳುತ್ತಿರಲಿಲ್ಲ. ಆದರೆ, ಖಾತೆ ತೆರೆದಿರುವ ಅವರು ಏನನ್ನು ಮೊದಲು ಹೇಳುತ್ತಾರೆ. ಯಾವ ವಿಷಯದ ಕುರಿತು ಮೊದಲು ಪೋಸ್ಟ್ ಮಾಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

    ಐಶ್ವರ್ಯ ರೈ ಯಾರನ್ನೂ ಫಾಲೋ ಮಾಡುತ್ತಿಲ್ಲ. ಆದರೆ ಅವರನ್ನು 1.34 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.