Tag: cannes festival 2025

  • ಕಾನ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕಂಗೊಳಿಸಿದ KGF ನಟಿ ಮೌನಿ

    ಕಾನ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕಂಗೊಳಿಸಿದ KGF ನಟಿ ಮೌನಿ

    ನ್ನಡದ ‘ಕೆಜಿಎಫ್’ (KGF) ಚಿತ್ರದಲ್ಲಿ ಯಶ್ ಜೊತೆ ಸೊಂಟ ಬಳುಕಿಸಿದ್ದ ಮೌನಿ ರಾಯ್ (Mouni Roy) ಅವರು 78ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (Cannes Film Festival) ಭಾಗಿಯಾಗಿದ್ದಾರೆ. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಮೌನಿ ಕಂಗೊಳಿಸಿದ್ದಾರೆ. ಇದನ್ನೂ ಓದಿ:’ದಿ ಗರ್ಲ್‌ಫ್ರೆಂಡ್’ ಸಿನಿಮಾ ಏನಾಯ್ತು?- ಕೊನೆಗೂ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ರು ರಶ್ಮಿಕಾ

    ಕನ್ನಡದ ನಟಿ ದಿಶಾ ಮದನ್ ಬಳಿಕ ಬಳಕುವ ಬಳ್ಳಿಯಂತಿರುವ ಮೌನಿ ರಾಯ್ ಕೂಡ ಕಾನ್ ಸಿನಿಮಾ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಅದಕ್ಕಾಗಿ ಫ್ರಾನ್ಸ್‌ಗೆ ತೆರಳಿದ್ದಾರೆ. ಕಪ್ಪು ಬಣ್ಣದ ಡ್ರೆಸ್‌ಗೆ ನೀಲಿ ಬಣ್ಣದ ಕಸೂತಿ ಮಾಡಲಾಗಿದೆ. ಅದಕ್ಕೆ ದುಬಾರಿ ನೆಕ್ಲೆಸ್ ಅನ್ನು ನಟಿ ಧರಿಸಿದ್ದಾರೆ. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ:‘ಮುದ್ದು ರಾಕ್ಷಸಿ’ ಹಾಡಿಗೆ ಪತ್ನಿ ಕೈಹಿಡಿದು ದರ್ಶನ್ ರೊಮ್ಯಾಂಟಿಕ್ ಡ್ಯಾನ್ಸ್

    ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಆಯೋಜಕರು ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ಅದರಂತೆ ನಟಿ ಮೌನಿ ರಾಯ್ ಅವರಿಗೂ ಆಹ್ವಾನ ನೀಡಲಾಗಿದೆ. ಹೀಗಾಗಿ ಅವರು ಕೂಡ ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದಾರೆ.

    ಫ್ರಾನ್ಸ್‌ನಲ್ಲಿ ಈ ಸಿನಿಮಾ ಹಬ್ಬಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಅತೀ ದೊಡ್ಡ ಚಲನಚಿತ್ರೋತ್ಸವಕ್ಕೆ ದೇಶ ವಿದೇಶದ ನಟ-ನಟಿಯರು ಭಾಗಿಯಾಗಿದ್ದಾರೆ. ಈ ಚಲನಚಿತ್ರೋತ್ಸವ ಮೇ 13ರಿಂದ 24ರವರೆಗೆ ನಡೆಯಲಿದೆ.

    ಮೌನಿ ಅವರು ವರುಣ್ ಧವನ್ ನಟನೆಯ ಸಿನಿಮಾದಲ್ಲಿ ಪ್ರಸ್ತುತ ನಟಿಸುತ್ತಿದ್ದಾರೆ. ಕೈತುಂಬಾ ಸಿನಿಮಾಗಳು ನಟಿಯ ಕೈಯಲ್ಲಿವೆ.

  • ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡತಿ- ಅಮ್ಮನ ಸೀರೆ ಗೌನ್ ಮಾಡಿದ ದಿಶಾ ಮದನ್

    ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡತಿ- ಅಮ್ಮನ ಸೀರೆ ಗೌನ್ ಮಾಡಿದ ದಿಶಾ ಮದನ್

    ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಫ್ರಾನ್ಸ್‌ನಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್‌ಗೆ (Cannes Festival 2025) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಅತೀ ದೊಡ್ಡ ಚಲನಚಿತ್ರೋತ್ಸವಕ್ಕೆ ದೇಶ ವಿದೇಶದ ನಟ-ನಟಿಯರು ಭಾಗಿಯಾಗುತ್ತಾರೆ. ಇದೀಗ ಈ ಚಲನಚಿತ್ರೋತ್ಸವದಲ್ಲಿ ಕನ್ನಡ ಕಿರುತೆರೆ ನಟಿ ದಿಶಾ ಮದನ್ ಕೂಡ ಭಾಗಿಯಾಗಿದ್ದಾರೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕನ್ನಡತಿ ದಿಶಾ ಮದನ್‌ಗೆ ಕಾನ್ ಫಿಲ್ಮ್ ಫೆಸ್ಟಿವಲ್ ಆಹ್ವಾನ

    ವಿಶೇಷ ಅಂದರೆ ಈ ಕಾರ್ಯಕ್ರಮದಲ್ಲಿ ದಿಶಾ (Disha Madan) ಅಮ್ಮನ ಸೀರೆಯನ್ನೇ ಗೌನ್ ಮಾಡಿ ಧರಿಸಿದ್ದಾರೆ. ಅಮ್ಮ ಸಿಲ್ಕ್ ಸೀರೆಗೆ ಹೊಸ ರೂಪ ಕೊಟ್ಟು ಸ್ಟೈಲೀಶ್ ಆದ ಗೌನ್ ಮಾಡಿಸಿ ಅದನ್ನು ನಟಿ ಧರಿಸಿದ್ದಾರೆ. ಇದನ್ನೂ ಓದಿ: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರದ ರಿಲೀಸ್ ಡೇಟ್ ಅನೌನ್ಸ್

     

    View this post on Instagram

     

    A post shared by Disha Madan (@disha.madan)

    ಅದಷ್ಟೇ ಅಲ್ಲ, 2017ರಲ್ಲಿ ತಮ್ಮ ಮದುವೆಯಲ್ಲಿ ಧರಿಸಿದ ಸೀರೆಯನ್ನು ಈ ಕಾರ್ಯಕ್ರಮದಲ್ಲೂ ನಟಿ ತೊಟ್ಟಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿ, ನನ್ನ ಮದುವೆಯ ಸೀರೆಗಳಲ್ಲಿ ಇದು ಕೂಡ ಒಂದಾಗಿದೆ. ಇದು ಕೇವಲ ಫ್ಯಾಷನ್ ಅಲ್ಲ. ಅದಕ್ಕೂ ಹೆಚ್ಚಾಗಿ ಒಂದು ಆಳವಾದ ಎಮೋಷನ್ಸ್ ಇದೆ ಎಂದು ದಿಶಾ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Disha Madan (@disha.madan)

    ಈ ಚಲನಚಿತ್ರೋತ್ಸವ ಮೇ 13ರಿಂದ 24ರವರೆಗೆ ಇದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ಕನ್ನಡತಿ ದಿಶಾಗೆ ಈ ಸಿನಿಮಾ ಹಬ್ಬಕ್ಕೆ ಬರಲು ಬಂಪರ್ ಅವಕಾಶ ಸಿಕ್ಕಿದೆ. ಆಹ್ವಾನ ಪತ್ರ ನೀಡಲಾಗಿದೆ. ಈ ಬಗ್ಗೆ ನಟಿ ವಿಡಿಯೋ ಮೂಲಕ ತಿಳಿಸಿದ್ದರು.

    ದಿಶಾ ಮದನ್ ಹುಟ್ಟಿ ಬೆಳೆದಿದ್ದು ಬೆಂಗಳೂರಲ್ಲಿ. ನಟಿಯ 3ನೇ ವರ್ಷ ಹುಟ್ಟುಹಬ್ಬದ ಸಮಯದಲ್ಲಿ ಅವರನ್ನು ಡ್ಯಾನ್ಸ್ ತರಬೇತಿಗೆ ಸೇರಿಸಲಾಯಿತು. ಮೂರು ಗಂಟೆಗೂ ಜಾಸ್ತಿ ನಿರಂತರ ನೃತ್ಯಾಭ್ಯಾಸ ಮಾಡುತ್ತಿದ್ದರು. ಹೀಗೆ ನೃತ್ಯ ಮಾಡಿ ಸುಸ್ತಾಗಿ ಬಂದಾಗ ಅಮ್ಮ ಮುದ್ದು ಮಾಡಿ ಊಟ ಮಾಡಿಸುತ್ತಿದ್ದರು. ರಾಜ್‌ಕುಮಾರ್ ಅವರ ಸಿನಿಮಾಗಳ ಹಾಡನ್ನ ಹಾಡಿ ಮಲಗಿಸುತ್ತಿದ್ದರು. ಭಾನುವಾರ ಬಂದರೆ ಅಜ್ಜ ಬಬ್ರುವಾಹನ ಚಿತ್ರವನ್ನ ಮನೆಯಲ್ಲಿ ಹಾಕುತ್ತಿದ್ದರು. ಹೀಗೆ ಬಾಲ್ಯದಿಂದಲೂ ಸಿನಿಮಾ ಜೀವನದ ಒಂದು ಭಾಗವೇ ಆಗಿದೆ ಎಂದು ನಟಿ ವಿಡಿಯೋದಲ್ಲಿ ಹೇಳಿದ್ದಾರೆ. ಪ್ರತಿಯೊಬ್ಬ ನರ್ತಕಿಯಲ್ಲೂ ಒಬ್ಬ ನಟಿ ಇರುತ್ತಾಳೆ. ಹೀಗಾಗಿ ಆಕಸ್ಮಿಕವಾಗಿ ನಟನೆಗೆ ಎಂಟ್ರಿ ಕೊಟ್ಟಿದ್ದಾಗಿ ತಿಳಿಸಿದ್ದರು.

    ಪ್ರಸ್ತುತ ನಟಿ ದಿಶಾ ‘ಲಕ್ಷ್ಮಿ ನಿವಾಸ’ ಸೀರಿಯಲ್‌ನಲ್ಲಿ ಭಾವನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮನೋಜ್ಞ ನಟನೆಯಿಂದ ಮನೆ ಮಾತಾಗಿದ್ದಾರೆ.