Tag: Cannabis sativa

  • ಚಕ್ಕಲಿ, ನಿಪ್ಪಟ್ಟು ಮಾರಾಟದಿಂದ ಬಂದ ಹಣ ಸಾಲುತ್ತಿಲ್ಲವೆಂದು ಗಾಂಜಾ ಮಾರಿ ಸಿಕ್ಕಿಬಿದ್ರು

    ಚಕ್ಕಲಿ, ನಿಪ್ಪಟ್ಟು ಮಾರಾಟದಿಂದ ಬಂದ ಹಣ ಸಾಲುತ್ತಿಲ್ಲವೆಂದು ಗಾಂಜಾ ಮಾರಿ ಸಿಕ್ಕಿಬಿದ್ರು

    – ವಿದ್ಯಾರ್ಥಿಗಳೇ ಇವರ ಟಾರ್ಗೆಟ್

    ಬೆಂಗಳೂರು: ಚಕ್ಕಲಿ ನಿಪ್ಪಟ್ಟು ಮಾರಾಟ ಮಾಡಿಕೊಂಡಿದ್ದವರು, ಹೆಚ್ಚಿನ ಹಣದ ಆಸೆಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅಂತರ್ ರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ರಾಜಗೋಪಾಲ ನಗರ ಪೊಲೀಸರು ಬಂಧಿಸಿದ್ದಾರೆ.

    ಪ್ರಕಾಶ್, ಸುಂದರ್ ಪಾಂಡೆ ಬಂಧಿತರಾಗಿದ್ದಾರೆ. ಬಂಧಿತರಿಂದ 21.18 ಕೆಜಿ ಹೈ ಎಂಡ್ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪಕ್ಕದ ರಾಜ್ಯ ಆಂಧ್ರದಿಂದ ರೈಲಿನಲ್ಲಿ ಗಾಂಜಾ ತಂದು ಬೆಂಗಳೂರಿನಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದು ಬೆಳಕಿಗೆ ಬಂದಿದೆ.

    ಆರೋಪಿಗಳು ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದದ್ದು, ತನಿಖೆಯ ವೇಳೆ ತಿಳಿದು ಬಂದಿದೆ. ತಮ್ಮ ಮನೆಯಲ್ಲೇ ಗಾಂಜಾವನ್ನಿಟ್ಟು ಕೊಂಡು ವಿದ್ಯಾರ್ಥಿಗಳನ್ನು ಗುರುತಿಸಿ ಮಾರಾಟ ಮಾಡುತ್ತಿದ್ದರು. ಇದನ್ನೂ ಓದಿ:  ಶುಭ ಭಾನುವಾರ, ಶುಭ ಗಳಿಗೆಯಲ್ಲಿ ಇಂದು ಪಾದಯಾತ್ರೆಗೆ ಚಾಲನೆ: ಡಿಕೆಶಿ

    ಆರೋಪಿಗಳು ಚಕ್ಕಲಿ ನಿಪ್ಪಟ್ಟು ಮಾರಾಟ ಮಾಡಿಕೊಂಡಿದ್ದುಕೊಂಡು, ಜೀವನ ನಿರ್ವಹಣೆಗೆ ಹಣ ಸಾಲುತ್ತಿಲ್ಲವೆಂದು ಗಾಂಜಾ ವ್ಯಾಪಾರಕ್ಕೆ ಮಾಡಲು ಪ್ರಾರಂಭಿಸಿದ್ದರು ಎಂದು ಆರೋಪಿಗಳ ಬಂಧನದಿಂದ ತಿಳಿದು ಬಂದಿದೆ. ಘಟನೆ ಸಂಬಂಧ ರಾಜಗೋಪಾಲ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.