Tag: candy crush

  • ಶೂಟಿಂಗ್ ಸ್ಪಾಟ್ ನಲ್ಲೇ ಮದುವೆ ವಾರ್ಷಿಕೋತ್ಸವ ಆಚರಿಸಿದ ಚಂದನ್

    ಶೂಟಿಂಗ್ ಸ್ಪಾಟ್ ನಲ್ಲೇ ಮದುವೆ ವಾರ್ಷಿಕೋತ್ಸವ ಆಚರಿಸಿದ ಚಂದನ್

    ದುವೆ ವಾರ್ಷಿಕೋತ್ಸವವನ್ನು (Wedding Anniversary) ಈ ಬಾರಿ ಶೂಟಿಂಗ್ ಸ್ಪಾಟ್ ನಲ್ಲಿ ಆಚರಿಸಿಕೊಂಡಿದ್ದಾರೆ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ದಂಪತಿ. ಈ ಜೋಡಿ ಇದೇ ಮೊದಲಬಾರಿಗೆ ಬೆಳ್ಳಿತೆರೆಯ ಮೇಲೂ ಜೋಡಿಯಾಗಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಕ್ಯಾಂಡಿ ಕ್ರಶ್ ಎಂದು ಹೆಸರಿಡಲಾಗಿದೆ.

    ಸೈಕೋಥ್ರಿಲ್ಲರ್ ಕಥಾಹಂದರ ಹೊಂದಿರುವ ಆ ಚಿತ್ರಕ್ಕೆ ಪುನೀತ್ ಶ್ರೀನಿವಾಸ್ (Puneeth Srinivas) ಅವರು ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪುನೀತ್ ಶ್ರೀನಿವಾಸ್ ಕನ್ನಡ  ಚಿತ್ರರಂಗಕ್ಕೆ ಹೊಸಬರೇನಲ್ಲ, ಶಿವಣ್ಣ, ಸುದೀಪ್ ರಂಥ  ಸ್ಟಾರ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ  ನಂದಕಿಶೋರ್ ಅವರಬಳಿ ಅಧ್ಯಕ್ಷದಿಂದ ಟಗರು ಚಿತ್ರದವರೆಗೆ (ತೆಲುಗು ಸಿನಿಮಾ ಸೇರಿ) ಸುಮಾರು  12 ವರ್ಷಗಳ ಕಾಲ ಕೆಲಸ ಮಾಡಿ ನಿರ್ದೇಶನದ ಪಾಠ ಕಲಿತು ಇದೀಗ ಮೊದಲಬಾರಿಗೆ  ನಿರ್ದೇಶನಕ್ಕಿಳಿದಿದ್ದಾರೆ.

    ಅವರು ತಮ್ಮ  ಪ್ರಥಮ ಪ್ರಯತ್ನದಲ್ಲೇ ವಿಭಿನ್ನ ಕಾನ್ಸೆಪ್ಟ್ ಮೂಲಕ ತಮ್ಮ ಹೊಸ ಜರ್ನಿಯನ್ನು  ಆರಂಭಿಸಿದ್ದು, ಶ್ರೀ ಚೌಡೇಶ್ಬರಿ ಸಿನಿ ಕ್ರಿಯೇಶನ್ಸ್ ಮೂಲಕ ಎಲ್.ಮೋಹನ್ ಕುಮಾರ್ ಅವರು ದೊಡ್ಡ ಮಟ್ಟದ ಬಂಡವಾಳ ಹೂಡಿದ್ದಾರೆ.

     

    ಎಂ.ಎಸ್.ತ್ಯಾಗರಾಜ್ ಅವರ ಸಂಗೀತ ಸಂಯೋಜನೆ, ಕರುಣಾಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸದ್ಯ ರೊಮ್ಯಾಂಟಿಕ್ ಗೀತೆಯೊಂದರ ಶೂಟ್ ಮಾಡುತ್ತಿದ್ದಾರೆ ನಿರ್ದೇಶಕರು.

  • ಕ್ಯಾಂಡಿ ಕ್ರಶ್ ಆಡುತ್ತಲೇ ಬ್ರೈನ್ ಟ್ಯೂಮರ್ ಆಪರೇಷನ್ ಮಾಡಿಸಿಕೊಂಡ್ಳು 10ರ ಬಾಲಕಿ!

    ಕ್ಯಾಂಡಿ ಕ್ರಶ್ ಆಡುತ್ತಲೇ ಬ್ರೈನ್ ಟ್ಯೂಮರ್ ಆಪರೇಷನ್ ಮಾಡಿಸಿಕೊಂಡ್ಳು 10ರ ಬಾಲಕಿ!

    ಚೆನ್ನೈ: 10 ವರ್ಷದ ಬಾಲಕಿಯೊಬ್ಬಳು ಬ್ರೈನ್ ಟ್ಯೂಮರ್ ಆಪರೇಷನ್ ಗೆ ಒಳಗಾಗಿದ್ದು, ಈ ವೇಳೆ ಆಕೆ ಕ್ಯಾಂಡಿ ಕ್ರಶ್ ಗೇಮ್ಸ್ ಆಡಿದ್ದಾಳೆ.

    5ನೇ ತರಗತಿ ಓದುತ್ತಿದ್ದ ನಂದಿನಿ ಶಸ್ತ್ರಚಿಕಿತ್ಸಗೆ ಒಳಗಾದ ಬಾಲಕಿ. ಭರತನಾಟ್ಯ ಮಾಡುತ್ತಿದ್ದ ನಂದಿನಿ ಆರೋಗ್ಯ ಇದ್ದಕ್ಕಿದ್ದಂತೆ ಕೆಡುತಿತ್ತು. ಹೀಗಾಗಿ ಆಕೆಯನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಆಕೆಯ ಮೆದುಳನ್ನು ಸ್ಕ್ಯಾನ್ ಮಾಡಿದಾಗ ಬ್ರೈನ್ ಟ್ಯೂಮರ್ ಇದೆ ಎನ್ನುವುದು ತಿಳಿದು ಬಂದಿದೆ.

    ಆಪರೇಷನ್ ಈಗಲೇ ನಡೆಸದೇ ಇದ್ದರೆ ಮುಂದೆ ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ತಿಳಿಸಿದಾಗ ನಂದಿನಿಯ ಪೋಷಕರು ಆರಂಭದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲು ಅನುಮತಿ ನೀಡಿರಲಿಲ್ಲ. ಆದರೆ ಪುದುಚೇರಿಯಲ್ಲಿರುವ ಬಾಲಕಿಯ ಸಂಬಂಧಿಯೊಬ್ಬರನ್ನು ವೈದ್ಯರು ಆಸ್ಪತ್ರೆಗೆ ಕರೆಸಿದ್ದರು. ಸಂಬಂಧಿ ವೈದ್ಯರಾಗಿದ್ದ ಕಾರಣ ಸಹಾಯವನ್ನು ಪಡೆದು ಪೋಷಕರ ಮನವೊಲಿಸಿದ ಚೆನ್ನೈ ವೈದ್ಯರು ಯಶಸ್ವಿಯಾಗಿ ಸರ್ಜರಿ ನಡೆಸಿದ್ದಾರೆ.

    ಗೆಡ್ಡೆಯನ್ನು ಹೊರ ತೆಗೆಯುವಾಗ ನಾನು ಅಲ್ಲಿಯೇ ಇದ್ದೆ. ನಂದಿನಿ ನನ್ನ ಮೊಬೈಲ್ ನಲ್ಲಿ ಕ್ಯಾಂಡಿ ಕ್ರಷ್ ಆಡುತ್ತಿದ್ದಳು. ನಂದಿನಿಗೆ ಸರ್ಜರಿ ಮಾಡುವಾಗ ಅದು ಅರಿವಾಗಬಾರದು ಎಂದು ವೈದ್ಯರು ನಿರ್ಧರಿಸಿದ್ದರು. ಆದರೆ ಬಾಲಕಿ ತುಂಬಾ ಧೈರ್ಯವಾಗಿದ್ದಳು ಎಂದು ಆಕೆಯ ಸಂಬಂಧಿ ತಿಳಿಸಿದ್ದಾರೆ.

    ಗೇಮ್ಸ್ ಆಡಿದ್ದು ಯಾಕೆ? ಈ ಆಪರೇಷನ್ ನಡೆಸುವಾಗ ಮೆದುಳು ಚಲನೆಯಲ್ಲಿರಬೇಕಾಗುತ್ತದೆ. ಹೀಗಾಗಿ ಮೆದುಳು ಚಲನೆಯಲ್ಲಿರಲು ಆಕೆಗೆ ಕ್ಯಾಂಡಿ ಕ್ರಾಶ್ ಗೇಮ್ಸ್ ಅಡಲು ವೈದ್ಯರು ಸೂಚಿಸಿದ್ದರು.

  • ಸಿಎಂ ಕಾರ್ಯಕ್ರಮದಲ್ಲಿ ಕ್ಯಾಂಡಿ ಕ್ರಶ್ ಆಡಿದ್ದಕ್ಕೆ 3 ಐಪಿಎಸ್ ಅಧಿಕಾರಿಗಳಿಗೆ ನೋಟಿಸ್

    ಸಿಎಂ ಕಾರ್ಯಕ್ರಮದಲ್ಲಿ ಕ್ಯಾಂಡಿ ಕ್ರಶ್ ಆಡಿದ್ದಕ್ಕೆ 3 ಐಪಿಎಸ್ ಅಧಿಕಾರಿಗಳಿಗೆ ನೋಟಿಸ್

    ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಮಾದಕದ್ರವ್ಯಗಳ ಕಳ್ಳಸಾಗಣೆ ಬಗ್ಗೆ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆ ಇಬ್ಬರು ಐಪಿಎಸ್ ಅಧಿಕಾರಿಗಳು ಫೋನ್‍ನಲ್ಲಿ ಕ್ಯಾಂಡಿ ಕ್ರಶ್ ಗೇಮ್ ಆಡಿದ್ದು, ಮತ್ತೊಬ್ಬರು ವಾಟ್ಸಪ್ ನೋಡುತ್ತಿದ್ದ ಕಾರಣ ಅವರಿಗೀಗ ನೋಟಿಸ್ ನೀಡಲಾಗಿದೆ.

    ಜೂನ್ 26ರಂದು ಬಿಹಾರದಲ್ಲಿ ಮಾದಕದ್ರವ್ಯಗಳ ಕಳ್ಳಸಗಣೆ ಹಾಗೂ ಅಪರಾಧ ಕೃತ್ಯಗಳ ಬಗ್ಗೆ ಚರ್ಚೆ ನಡೆಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ರು. ಬಿಹಾರದ ಪೊಲೀಸ್ ಮಹಾನಿರ್ದೇಶಕರು ಕೂಡ ಭಾಗಿಯಾಗಿದ್ರು. ಆದ್ರೆ ಈ ಕಾರ್ಯಕ್ರಮದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮೊಬೈಲ್‍ನಲ್ಲಿ ಗೇಮ್ ಆಡುತ್ತಿದ್ದು, ಮತ್ತೊಬ್ಬ ಅಧಿಕಾರಿ ವಾಟ್ಸಪ್ ನೋಡುತ್ತಿದ್ದುದು ಕಂಡುಬಂದಿತ್ತು. ಈ ದೃಶ್ಯಗಳನ್ನ ಮಾಧ್ಯಮಗಳು ಪ್ರಸಾರ ಮಾಡಿದ್ದು, ಸಾಕಷ್ಟು ಸುದ್ದಿಯಾಗಿತ್ತು.

    ಈ ಹಿನ್ನೆಲೆಯಲ್ಲಿ ಪಾಟ್ನಾ ಎಸ್‍ಎಸ್‍ಪಿ ಮನು ಮಹಾರಾಜ್, ಸಿಟಿ ಎಸ್‍ಪಿ ಚಂದನ್ ಕುಮಾರ್ ಕುಶ್ವಾಹಾ ಹಾಗೂ ಐಪಿಎಸ್ ಅಧಿಕಾರಿ ಪಂಕಜ್ ಕುಮಾರ್ ರಾಜ್ ಅವರಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಕೂಡಲೇ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಕೇಳಲಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಇಲ್ಲಿನ ಸಹಾಯಕ ಪೊಲೀಸ್ ಮಹಾನಿರ್ದೇಶಕರಾದ ಎಸ್‍ಕೆ ಸಿಂಗಲ್, ಹಿರಿಯ ಪೊಲೀಸ್ ಅಧಿಕಾರಿಗಳಿಂದ ಈ ರೀತಿಯ ವರ್ತನೆ ನಿರೀಕ್ಷಿಸುವುದಿಲ್ಲ. ನಾವು ಅವರನ್ನು ಕೌನ್ಸೆಲಿಂಗ್ ಮಾಡುತ್ತೇವೆ ಎಂದಿದ್ದಾರೆ.