Tag: candal

  • ಕೇಕ್ ಕಟ್ ಮಾಡಿ ಜೈಲಿನಲ್ಲೇ ಅದ್ಧೂರಿಯಾಗಿ ಬರ್ತ್ ಡೇ ಆಚರಣೆ- ವಿಡಿಯೋ ನೋಡಿ

    ಕೇಕ್ ಕಟ್ ಮಾಡಿ ಜೈಲಿನಲ್ಲೇ ಅದ್ಧೂರಿಯಾಗಿ ಬರ್ತ್ ಡೇ ಆಚರಣೆ- ವಿಡಿಯೋ ನೋಡಿ

    ಲಕ್ನೋ: ವಿಚಾರಣಾಧೀನ ಕೈದಿಯೊಬ್ಬ ಉತ್ತರಪ್ರದೇಶದ ಜೈಲಿನಲ್ಲಿಯೇ ಕ್ಯಾಂಡಲ್ ಉರಿಸಿ, ಕೇಕ್ ಕಟ್ ಮಾಡುವ ಮೂಲಕ ಅದ್ಧೂರಿಯಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ.

    ಶಿವೇಂದ್ರ ಸಿಂಗ್ ಹುಟ್ಟು ಹಬ್ಬ ಆಚರಿಸಿಕೊಂಡ ಕೈದಿಯಾಗಿದ್ದು, ಈತ ಕೊಲೆ ಪ್ರಕರಣದ ಆರೋಪದಲ್ಲಿ ಉತ್ತರ ಪ್ರದೇಶದ ಜೈಲಿಗೆ ಸೇರಿದ್ದಾನೆ. ಇದೇ ಜುಲೈ 23ರಂದು ಈತನ ಹುಟ್ಟಿದ ದಿನವಾಗಿದ್ದು, ಅಂದು ಕೇಕ್ ಮಾಡಿ ಇತರರಿಗೆ ತಿನ್ನಿಸಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊಲೆ ಪ್ರಕರಣ ಸಂಬಂಧ ಕೋರ್ಟ್ ಗೆ ಹೋಗೋದಕ್ಕೂ ಮೊದಲು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಿವೇಂದ್ರ, ಹುಟ್ಟು ಹಬ್ಬ ಆಚರಣೆ ಮಾಡಲು ಜೈಲಿನಲ್ಲಿರೋ ವಿನಯ್ ಕುಮಾರ್ ನನಗೆ ಅವಕಾಶ ಮಾಡಿಕೊಟ್ಟರು. ಅಲ್ಲದೇ ವಿನಯ್ ಸಿಬ್ಬಂದಿಯೇ ವಿಡಿಯೋ ಮಾಡಿದ್ದಾರೆ. ಆದ್ರೆ ಬೇರೆ ಸಿಬ್ಬಂದಿ ಈ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಸದ್ಯ ಹುಟ್ಟುಹಬ್ಬ ಆಚರಣೆ ಮಾಡಿದ್ದಕ್ಕಾಗಿ 1 ಲಕ್ಷ ರೂ. ನನ್ನಿಂದ ಪಡೆದಿದ್ದಾರೆ. ಅಲ್ಲದೇ ಆ ಬಳಿಕ ಜೈಲಿನಲ್ಲಿ ನನಗೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಅಂತ ಹೇಳಿದ್ದಾನೆ.

    ನನ್ನ ಹುಟ್ಟು ಹಬ್ಬ ಆಚರಿಸಲು ಚಾಕು, ಲೈಟರ್ ಮತ್ತು ಕ್ಯಾಂಡಲ್ಸ್ ಮುಂತಾದ ವಸ್ತುಗಳು ಕೂಡ ಲಭ್ಯವಿದ್ದವು ಅಂತ ಆತ ಬಾಯ್ಬಿಟ್ಟಿದ್ದಾನೆ. ಆಚರಣೆಯ 5 ನಿಮಿಷದ ಬಳಿಕ ಫಯಾಜಾಬಾದ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಹಾಗೂ ಪೊಲೀಸರು ಜೈಲಿಗೆ ದಾಳಿ ಮಾಡಿದ್ದರು. ಆದ್ರೆ ಅದಾಗಲೇ ಕೈದಿಗಳ ಮೂಲಕ ಜೈಲು ಸಿಬ್ಬಂದಿ ಎಲ್ಲಾ ವಸ್ತುಗಳನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಹಣ ಕೊಟ್ರೆ ಮೊಬೈಲ್ ಕೂಡ ಜೈಲಿನೊಳಗೆ ತೆರಲುಅ ನುಮತಿ ನೀಡುತ್ತಾರೆ ಅಂತ ಇದೇ ವೇಳೆ ಶಿವೇಂದ್ರ ಆರೋಪಿಸಿದ್ದಾನೆ.

    ವಕೀಲ ಮರ್ತಾಂಡ ಪ್ರತಾಪ್ ಸಿಂಗ್ ಘಟನೆಯ ಬಳಿಕ ಜೈಲಿನ ಹೊರಗೆ ಸಿಪಾಯಿಗಳ ಮನೆಯಲ್ಲಿ ಬರ್ತ್ ಡೇ ಆರಣೆ ನಡೆದಿದೆ ಅಂತ ಖಚಿತಪಡಿಸಿಕೊಂಡಿದ್ದಾರೆ. ಅಲ್ಲದೇ ಪ್ರತೀ ತಿಂಗಳು ಇಂತಹ ಸೌಲಭ್ಯಗಳನ್ನು ಕಲ್ಪಿಸಲು ಜೈಲಿನವರು 1 ಲಕ್ಷ ರೂ. ಬೇಡಿಕೆಯಿಡುತ್ತಾರೆ. ಆದ್ರೆ ಇಷ್ಟೊಂದು ಹಣ ನಿಡಲು ಶಿವೇಂದ್ರ ನಿರಾಕರಿಸಿದ್ದಾನೆ. ಹೀಗಾಗಿ ಆತನಿಗೆ ಬೆದರಿಕೆ ಹಾಕಿ ಘಟನೆಯನ್ನು ಹರಿದಾಡಿಸುವ ಮೂಲಕ ಕೇಸ್ ದಾಖಲಿಸಿದ್ದಾರೆ ಅಂತ ಅವರು ತಿಳಿಸಿದ್ದಾರೆ.