Tag: cancer

  • ಕ್ಯಾನ್ಸರ್‌ಗೆ ಹೆದರಿ ಗಲ್ಫ್‌ನಿಂದ ಮರಳಿದ ವ್ಯಕ್ತಿಯ ಕೈಹಿಡಿಯಿತು ಕೃಷಿ

    ಕ್ಯಾನ್ಸರ್‌ಗೆ ಹೆದರಿ ಗಲ್ಫ್‌ನಿಂದ ಮರಳಿದ ವ್ಯಕ್ತಿಯ ಕೈಹಿಡಿಯಿತು ಕೃಷಿ

    ಮಂಗಳೂರು: ಕ್ಯಾನ್ಸರ್ ಕಾಯಿಲೆ ಬಂತೆಂದ್ರೆ ಇನ್ನು ಸಾವೇ ಗತಿ ಎನ್ನುವವರೇ ಹೆಚ್ಚು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಮೂಡಬಿದ್ರೆಯ ವ್ಯಕ್ತಿಯೋರ್ವರು ಕ್ಯಾನ್ಸರನ್ನೇ (Cancer) ಗೆದ್ದು ತೋರಿಸಿದ್ದಾರೆ.

    ಹೌದು… ಕ್ಯಾನ್ಸರ್ ಜೊತೆ ಸೆಣಸಾಡುತ್ತಿರುವ ಅದೇಷ್ಟೋ ಸಾವಿರ ಮಂದಿಗೆ ಇವರು ಸ್ಫೂರ್ತಿದಾಯಕವಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ (Moodbidri) ತಾಲೂಕಿನ ಪುಚ್ಚೆಮೊಗರು ಗ್ರಾಮದ ನಿವಾಸಿ ಥಾಮಸ್ ಗ್ರೇಜರಿ ರೆಬೆಲ್ಲೋ ಹುಟ್ಟಿನಿಂದಲೇ ಕೃಷಿಕರಲ್ಲ. ಗಲ್ಫ್‌ ರಾಷ್ಟ್ರದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದು ಅಲ್ಲೇ ಸೆಟಲ್ ಆಗುವ ಯೋಚನೆಯಲ್ಲಿದ್ದರು. ಆದರೆ ಗಂಟಲಿನ ಕ್ಯಾನ್ಸರ್ ಇವರ ಯೋಜನೆಯನ್ನೇ ಬದಲಾಯಿಸಿತು. ಕ್ಯಾನ್ಸರ್ ದೇಹದೊಳಗೆ ಆಕ್ರಮಿಸುತ್ತಾ ಹೋಯಿತು.

    ಸತ್ರೆ ಜನ್ಮಭೂಮಿಯಲ್ಲೇ ಸಾಯೋಣ ಅಂತಾ ಹಳ್ಳಿಗೆ ಬಂದ ಥಾಮಸ್ ಗ್ರೇಜರಿ ರೆಬೆಲ್ಲೋ ಅವರಲ್ಲಿ ಊರಿಗೆ ಬಂದ ನಂತರ ಕಂಡಿದ್ದು ಅಚ್ಚರಿಯ ಬದಲಾವಣೆ. ಕತ್ತರಿಸಲ್ಪಟ್ಟ ಗಂಟಲು, ದೇಹದೊಳಗೆ ಕಾಡುತ್ತಿದ್ದ ಆರೋಗ್ಯದ ಸಮಸ್ಯೆಯ ನಡುವೆಯೇ ಕಾಡುತ್ತಿದ್ದ ಒಂಟಿತನವನ್ನು ದೂರಮಾಡಲು ಕೃಷಿ (Agriculture) ಕೆಲಸಕ್ಕೆ ಕೈ ಹಾಕಿದರು.

    ದಿನ ಕಳೆದಂತೆ ಥಾಮಸ್ ಅವರ ಆರೋಗ್ಯದಲ್ಲಿ ಕಂಡಿದ್ದೇ ಅಚ್ಚರಿಯ ಬದಲಾವಣೆಯಾಯಿತು. ಸಾವಿನ ದಿನ ಎಣಿಸುತ್ತಿದ್ದ ಥಾಮಸ್ ತನ್ನ ಒಂದೂವರೆ ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಾ ಮಾಡುತ್ತಾ ಕ್ಯಾನ್ಸರ್ ಜೊತೆ ಹೋರಾಡುತ್ತಾ ಹನ್ನೆರಡು ವರ್ಷಗಳೇ ಕಳೆದುಹೋಗಿದೆ. ಅವರ ಪತ್ನಿ ಮತ್ತು ಮಗ ವಿದೇಶದಲ್ಲಿದ್ದು, ಥಾಮಸ್ ಮಾತ್ರ ಊರಲ್ಲೇ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ತಕ್ಕ ಪ್ರಾಶಸ್ತ್ಯ ಸಿಗುತ್ತಿಲ್ಲ: ಶರದ್ ಪವಾರ್ ಬೇಸರ

    ಅಡಿಕೆ, ತೆಂಗು, ತರಕಾರಿ ಕೃಷಿ ಮಾಡುತ್ತಾ ಮಾಡುತ್ತಾ ತನ್ನೊಳಗಿರುವ ಮಹಾಮಾರಿಯನ್ನೇ ಮರೆತು ಸ್ಫೂರ್ತಿಯಾಗಿದ್ದಾರೆ. ಪ್ರಾರಂಭದಲ್ಲಿ ಕ್ಯಾನ್ಸರ್ ಜೊತೆಗೆ ಸಕ್ಕರೆ ಖಾಯಿಲೆ ಕೂಡಾ ಕಾಡಿದ್ದರೂ ಈಗ ಅದೂ ಸಂಪೂರ್ಣ ಮಾಯವಾಗಿದೆ. ಈ ಬಗ್ಗೆ ಥಾಮಸ್ ಗ್ರೇಜರಿ ರೆಬೆಲ್ಲೊ ಮಾತನಾಡಿ, ಕ್ಯಾನ್ಸರ್‌ ರೋಗಿಗಳು ಧೃತಿಗೆಡದೆ ಕೃಷಿ ಮಾಡಿ. ಕೃಷಿಯಲ್ಲಿ ಖುಷಿ ಪಡಿ ಎನ್ನುವ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಕ್ಯಾನ್ಸರ್ ರೋಗಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿ ಹೋರಾಡುವವರಿಗಿಂತ ಥಾಮಸ್ ಭಿನ್ನವಾಗಿ ಕಾಣುತ್ತಾರೆ. ಇದನ್ನೂ ಓದಿ: ಕೊಡಗಿನಲ್ಲಿ 3ನೇ ಸಾಕಾನೆ ಶಿಬಿರ ಲೋಕಾರ್ಪಣೆ – ಹಾರಂಗಿ ವಿಶೇಷತೆ ಏನು?

    Live Tv
    [brid partner=56869869 player=32851 video=960834 autoplay=true]

  • ಹರೀಶ್ ರಾಯ್ ಗೆ ಹಣಕಾಸಿನ ಸಮಸ್ಯೆಯೇ ಕ್ಯಾನ್ಸರ್ ಆಗಿ ಬದಲಾಗಲು ಕಾರಣ ಆಯಿತಾ?

    ಹರೀಶ್ ರಾಯ್ ಗೆ ಹಣಕಾಸಿನ ಸಮಸ್ಯೆಯೇ ಕ್ಯಾನ್ಸರ್ ಆಗಿ ಬದಲಾಗಲು ಕಾರಣ ಆಯಿತಾ?

    ಮೂರು ವರ್ಷದ ಹಿಂದೆಯೇ ಹರೀಶ್ ರಾಯ್ ಅವರಿಗೆ ಗಡ್ಡೆ ರೂಪದಲ್ಲಿ ಕ್ಯಾನ್ಸರ್ ಸೂಚನೆ ನೀಡಿದ್ದರೂ, ಹಣಕಾಸಿನ ಸಮಸ್ಯೆಯಿಂದಾಗಿ ಅದನ್ನು ಆಪರೇಷನ್ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಕ್ಕಳು ಬೆಳೆಯಲಿ, ಸಿನಿಮಾ ರಂಗದಲ್ಲಿ ಕೈ ತುಂಬಾ ಕೆಲಸ ಸಿಗಲಿ ಎಂದು ಕಾಯುತ್ತಾ ಕುಳಿತಿದ್ದ ಈ ನಟ ಕೊನೆಗೂ ಕ್ಯಾನ್ಸರ್ ತಂದುಕೊಂಡಿದ್ದಾರೆ.

    ಹರೀಶ್ ಅವರೇ ಹೇಳುವಂತೆ, ಗಡ್ಡೆಯು ಮೂರು ವರ್ಷಗಳ ಹಿಂದೆಯೇ ಕಾಣಿಸಿಕೊಂಡಿದೆ. ಅದನ್ನು ವೈದ್ಯರಿಗೆ ತೋರಿಸಿದಾಗ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಹೇಳಿದ್ದಾರೆ. ಸಿನಿಮಾ ಸಿಗಲಿ, ಮಕ್ಕಳು ದೊಡ್ಡವರಾಗಲಿ ಎಂದು ಸುಮ್ಮನಾಗಿದ್ದರಂತೆ. ಅದೀಗ ಕ್ಯಾನ್ಸರ್ ಹುನ್ನಾಗಿ ಬದಲಾಗಿದೆ. ಈಗಲೂ ಹಣಕಾಸಿನ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಸಿನಿಮಾ ಇಂಡಸ್ಟ್ರಿ ಸಹಾಯ ಮಾಡುವ ಭರವಸೆ ಕೂಡ ಸಿಕ್ಕಿದೆಯಂತೆ. ಇದನ್ನೂ ಓದಿ:ಆ ಒಂದು ಹೆಸರಿನ ಟ್ಯಾಟೋನಿಂದ ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಹಾಕಿದ ಮೇಘನಾ ರಾಜ್

    ಗಡ್ಡೆ ಬೆಳೆದ ನಂತರ ಕ್ಯಾನ್ಸರ್ ಕುರುಹುಗಳು ಆಗಾಗ್ಗೆ ಕಂಡರೂ, ಅದನ್ನು ನೆಗ್ಲೆಟ್ ಮಾಡಿದ್ದೂ ಕ್ಯಾನ್ಸರ್ ಆಗಲು ಕಾರಣ ಎನ್ನಲಾಗುತ್ತಿದೆ. ಕೆಜಿಎಫ್ 2 ಸಿನಿಮಾ ಮಾಡುವಾಗ ಲೇಂಥಿ ಫೈಟ್ ಇಟ್ಟಿದ್ದರು. ದೃಶ್ಯ ಮುಗಿದ ಮೇಲೆ ಉಸಿರು ಕಟ್ಟೋಕೆ ಶುರುವಾಯ್ತು. ಯಾವಾಗಲೂ ಕಫ ಮತ್ತು ಕೆಮ್ಮು ಬರ್ತಿತ್ತು. ಡಾಕ್ಟರ್ ಹತ್ತಿರ ಚೆಕ್ ಮಾಡಿಸಿದಾಗ ಲಂಗ್ಸ್ ನಲ್ಲಿ ನೀರಿದೆ ಎಂದು ಹೇಳಿದರು. ಟೆಸ್ಟ್ ಮಾಡಿಸಿದಾಗ ಕ್ಯಾನ್ಸರ್ ಇರುವುದು ಗೊತ್ತಾಯಿತು ಎನ್ನುತ್ತಾರೆ ಹರೀಶ್ ರಾಯ್.

    ಈಗಾಗಲೇ ಹಲವರು ಹರೀಶ್ ರಾಯ್ ಗಾಗಿ ಸಹಾಯ ಮಾಡಿದ್ದಾರೆ. ಕನ್ನಡದ ಸ್ಟಾರ್ ನಟರೊಬ್ಬರು ಚಿಕಿತ್ಸೆಗೆ ನೆರವು ನೀಡುವುದಾಗಿಯೂ ತಿಳಿಸಿದ್ದಾರಂತೆ. ಅಲ್ಲದೇ, ಅನೇಕರು ಹರೀಶ್ ರಾಯ್ ಅವರಿಗೆ ಸಹಾಯ ಮಾಡುವಂತೆ ಸೋಷಿಯಲ್ ಮೀಡಿಯಾ ಮೂಲಕ ಮನವಿಯನ್ನೂ ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ಹೆಸರಾಂತ ನಟ ಹರೀಶ್ ರೈಗೆ ಕ್ಯಾನ್ಸರ್: ‘ಕೆಜಿಎಫ್ 2’ ಚಾಚಾ ಆರೋಗ್ಯದ ಬಗ್ಗೆ ಅಭಿಮಾನಿಗಳ ಕಳವಳ

    ಕನ್ನಡದ ಹೆಸರಾಂತ ನಟ ಹರೀಶ್ ರೈಗೆ ಕ್ಯಾನ್ಸರ್: ‘ಕೆಜಿಎಫ್ 2’ ಚಾಚಾ ಆರೋಗ್ಯದ ಬಗ್ಗೆ ಅಭಿಮಾನಿಗಳ ಕಳವಳ

    ತ್ತೀಚೆಗಷ್ಟೇ ಬಿಡುಗಡೆಯಾದ ಕೆಜಿಎಫ್ 2 ಸಿನಿಮಾದಲ್ಲಿ ರಾಕಿಭಾಯ್ ನೆಚ್ಚಿನ ಚಾಚಾ ಪಾತ್ರದಲ್ಲಿ ಕಾಣಿಸಿಕೊಂಡಿರುವ, ಕನ್ನಡದ ಹೆಸರಾಂತ ನಟ ಹರೀಶ್ ರೈ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಯೂಟ್ಯೂಬ್ ವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ತಾವು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕ್ಯಾನ್ಸರ್ ನಿಂದ ಈಗಾಗಲೇ ಸಖತ್ ಬಳಲುತ್ತಿರುವ ವಿಷಯವನ್ನೂ ಅವರು ಹಂಚಿಕೊಂಡಿದ್ದಾರೆ.

    ಮೊದಲು ಹರೀಶ್ ರೈ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ಈ ಥೈರಾಯ್ಡ್ ಮುಂದೆ ಕ್ಯಾನ್ಸರ್ ಆಗಿ ಬದಲಾಗಿದೆಯಂತೆ. ಈಗದು ಗಂಭೀರ ಸ್ಥಿತಿಯಲ್ಲಿ ಇರುವುದರಿಂದ ಆರ್ಥಿಕ ಮುಗ್ಗಟ್ಟಿನ ನಡುವೆಯೇ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ ಎಂದು ಹರೀಶ್ ರೈ ಮಾತನಾಡಿದ್ದಾರೆ. ತಾವು ಆರ್ಥಿಕ ಸಂಕಷ್ಟದಲ್ಲಿ ಇರುವುದಾಗಿಯೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ

    ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಹರೀಶ್ ರೈ, ನೆಗೆಟಿವ್ ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು. ಕೆಜಿಎಫ್ 2 ಸಿನಿಮಾದಲ್ಲಿ ಅವರದ್ದು ಪಾಸಿಟಿವ್ ಪಾತ್ರವಾಗಿತ್ತು. ಹಾಗಾಗಿ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಈ ಗೆಲುವನ್ನು ಅವರು ಸಂಭ್ರಮಿಸಬೇಕು ಎನ್ನುವಷ್ಟರಲ್ಲಿ ಕ್ಯಾನ್ಸರ್ ಅವರನ್ನು ಹಿಂಡಿ ಹಿಪ್ಪಿ ಮಾಡುತ್ತಿದೆ. ಜೋಡಿ ಹಕ್ಕಿ, ತಾಯವ್ವ, ಸಂಜು ವೆಡ್ಸ್ ಗೀತಾ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿರುವ ಹರೀಶ್, ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

    ಹರೀಶ್ ರೈ ಅವರಿಗೆ ಕ್ಯಾನ್ಸರ್ ಆಗಿರುವ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದ್ದಂತೆಯೇ ಆ ವಿಡಿಯೋವನ್ನು ನಟ ಅನಿರುದ್ಧ ಪೋಸ್ಟ್ ಮಾಡಿದ್ದು, ನಟನಿಗೆ ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಆದಷ್ಟು ಬೇಗ ಅವರು ಕ್ಯಾನ್ಸರ್ ನಿಂದ ಗೆದ್ದು ಬರಲಿ ಎಂದು ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ಯಾನ್ಸರ್ ಇದೆ ಎಂದು ತಿಳಿದು ಇಡೀ ಫ್ಯಾಮಿಲಿ ಆತ್ಮಹತ್ಯೆಗೆ ಶರಣು

    ಕ್ಯಾನ್ಸರ್ ಇದೆ ಎಂದು ತಿಳಿದು ಇಡೀ ಫ್ಯಾಮಿಲಿ ಆತ್ಮಹತ್ಯೆಗೆ ಶರಣು

    ಬೆಂಗಳೂರು: ಕ್ಯಾನ್ಸರ್ ಇದೆ ಎಂದು ತಿಳಿದು ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

    ಮಹೇಶ್ (44), ಪತ್ನಿ ಜ್ಯೋತಿ ಮತ್ತು ಮಗ ನಂದೀಶ್ ಗೌಡ (9) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಮಹೇಶ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಅಷ್ಟೇ ಅಲ್ಲದೇ ಪ್ರತಿದಿನ ಟ್ಯಾಬ್ಲೇಟ್ ತೆಗೆದುಕೊಂಡು ಸುಸ್ತಾಗಿ ಹೋಗಿದ್ದ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹೊಟ್ಟೆ ನೋವಿಗೆ ಕಾರಣವೇನು ಎಂದು ಖಾಸಗಿ ಆಸ್ಪತ್ರೆಯಲ್ಲಿ ಚೆಕ್ ಮಾಡಿಸಿಕೊಂಡಿದ್ದಾರೆ. ಈ ವೇಳೆ ಕ್ಯಾನ್ಸರ್ ಇದೆ ಎಂದು ಡಾಕ್ಟರ್ ತಿಳಿಸಿದ್ದಾರೆ.

    crime

    ಈ ವಿಷಯ ಗೊತ್ತಾದ ಮಹೇಶ್ ತಾನು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ರೆ ತನ್ನ ಕುಟುಂಬ ಅನಾಥವಾಗುತ್ತದೆ. ಪತ್ನಿ, ಮಗು ಎಲ್ಲರೂ ಬೀದಿಗೆ ಬರುತ್ತಾರೆ. ತನ್ನ ಸಾವಿನ ನಂತರ ತನ್ನ ಹೆಂಡತಿ, ಮಕ್ಕಳ ಜೀವನ ಕಷ್ಟ ಎಂದು ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾರೆ.

    ಮಹೇಶ್ ತಾನು ಮಾಡಿದ್ದ ನಿರ್ಧಾರದಂತೆ ಮನೆಯ ಒಂದು ರೂಂನಲ್ಲಿ ಫ್ಯಾನ್‍ಗೆ ನೇಣು ಬಿಗಿದುಕೊಂಡು ಮಹೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮತ್ತೊಂದು ರೂಂನ ಬೆಡ್ ಮೇಲೆ ಪತ್ನಿ ಹಾಗೂ ನಂದೀಶ್ ಶವವಾಗಿ ಪತ್ತೆ ಆಗಿದ್ದಾರೆ. ಘಟನೆಯಲ್ಲಿ ಪತ್ನಿ ಹಾಗೂ ಮಗು ವಿಷ ಸೇವಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಗರ್ಲ್ ಫ್ರೆಂಡ್ ಭೇಟಿಗಾಗಿ ಬುರ್ಕಾ ಧರಿಸಿದವ ಜೈಲು ಪಾಲು

    POLICE JEEP

    ಘಟನೆ ಕುರಿತು ಮಹೇಶ್ ಡೆತ್‍ನೋಟ್ ಬರೆದಿಟ್ಟಿದ್ದಾರೆ. ಮಹೇಶ್ ಬರೆದಿರುವ ಅರ್ಧ ಪುಟದ ಡೆತ್ ನೋಟ್‍ನಲ್ಲಿ ಆರೋಗ್ಯ ಸಮಸ್ಯೆ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: No Follow Up, ಯಾವುದೇ ಕಾರಿಡಾರ್‌ ಸುತ್ತಿಲ್ಲ, 30 ವರ್ಷದಲ್ಲಿ ಇದು ಫಸ್ಟ್‌ – ಕೇಂದ್ರವನ್ನು ಹೊಗಳಿದ ಸುನಿಲ್‌ ಮಿತ್ತಲ್‌

    Live Tv
    [brid partner=56869869 player=32851 video=960834 autoplay=true]

  • 2023ಕ್ಕೆ ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ಮಾರಾಟ ಬಂದ್

    2023ಕ್ಕೆ ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ಮಾರಾಟ ಬಂದ್

    ವಾಷಿಂಗ್ಟನ್: ಪ್ರಸಿದ್ಧ ಫಾರ್ಮ ಕಂಪನಿ ಜಾನ್ಸನ್ ಆ್ಯಂಡ್ ಜಾನ್ಸನ್ ತನ್ನ ಟಾಲ್ಕಮ್ ಆಧಾರಿತ ಜಾನ್ಸನ್ ಬೇಬಿ ಪೌಡರ್‍ನ ಮಾರಾಟವನ್ನು 2023ಕ್ಕೆ ವಿಶ್ವಾದ್ಯಂತ ನಿಲ್ಲಿಸುವುದಾಗಿ ಘೋಷಿಸಿದೆ.

    ಈ ಮುನ್ನ ಜಾನ್ಸನ್ ಆ್ಯಂಡ್ ಜಾನ್ಸನ್ ತನ್ನ ಬೇಬಿ ಪೌಡರ್ ಅನ್ನು ಅಮೆರಿಕ ಮತ್ತು ಕೆನಡಾದಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸಿತ್ತು. ಈ ಬೇಬಿ ಪೌಡರ್ ಬಳಕೆಯಿಂದಾಗಿ ಕ್ಯಾನ್ಸರ್ ಬರುತ್ತದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಕಂಪನಿಯ ವಿರುದ್ಧ ಸಾವಿರಾರು ಪ್ರಕರಣಗಳು ದಾಖಲಾಗಿದ್ದವು. ಇಷ್ಟೇ ಅಲ್ಲದೇ ಕ್ಯಾನ್ಸರ್ ಆತಂಕದ ವರದಿ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಈ ಉತ್ಪನ್ನದ ಮಾರಾಟ ಭಾರೀ ಕುಸಿತ ಕಂಡುಬಂದಿತ್ತು.

    ವಿಶ್ವದಾದ್ಯಂತ ಮೌಲ್ಯಮಾಪನವಾಗಿ, ನಾವು ಎಲ್ಲಾ ಕಾರ್ನ್‍ಸ್ಟಾರ್ಚ್ ಆಧಾರಿತ ಬೇಬಿ ಪೌಡರ್‌ಗಳ ಮಾರಾಟವನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಜಾನ್ಸನ್ ಮತ್ತು ಜಾನ್ಸನ್ ಗುರುವಾರ ಪ್ರಕಟಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಶುರುವಾಯ್ತು ಹರ್ ಘರ್ ತಿರಂಗಾ ಹವಾ – ತಿರಂಗಾ ನಡೆಗೆ ಚಾಲನೆ ನೀಡಿದ ಪ್ರಹ್ಲಾದ್ ಜೋಶಿ

    ಪ್ರಸ್ತುತ ಜಾನ್ಸನ್ ಆ್ಯಂಡ್ ಜಾನ್ಸನ್ ವಿರುದ್ಧ 19,400 ಪ್ರಕರಣಗಳು ದಾಖಲಾಗಿದ್ದು, ಇದರ ಟಾಲ್ಕಂ ಪೌಡರ್‍ನಿಂದಾಗಿ ಜನರು ಅಂಡಾಶಯದ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದರಿಂದ ಶ್ವಾಸಕೋಶ ಮತ್ತು ಇತರ ಅಂಗಾಂಗಗಳ ಮೇಲೆ ಮೆಸೊಥೆಲಿಯೋಮಾ ಕ್ಯಾನ್ಸರ್ ಉಂಟಾಗುತ್ತದೆ. ಇದುವರೆಗೂ ಈ ಕುರಿತಂತೆ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ 12 ಪ್ರಕರಣಗಳಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ಜಯ ಸಾಧಿಸಿದ್ದರೆ, 15ರಲ್ಲಿ ಹಿನ್ನಡೆಯಾಗಿದೆ.

    ಪೌಡರ್ ಬಗ್ಗೆ ಸ್ವತಃ ಕಂಪನಿಯೇ ಸಂಶೋಧನೆ ನಡೆಸಿ, ಟಾಲ್ಕಮ್ ಬೇಬಿ ಪೌಡರ್ ಸುರಕ್ಷಿತವಾಗಿದೆ ಮತ್ತು ಇದು ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ ಎಂದು ತಿಳಿಸಿತ್ತು. ಆದರೂ ಈ ಪೌಡರ್ ಕ್ಯಾನ್ಸರ್‌ಗೆ ಕಾರಣವಾಗಿರಲಿ, ಇಲ್ಲದೇ ಇರಲಿ, ಜನ ಈ ಉತ್ಪನ್ನವನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ ಎಂದು 2020ರಲ್ಲಿಯೇ ಮಿಚಿಗನ್ ವಿಶ್ವವಿದ್ಯಾಲಯದ ವ್ಯಾಪಾರ ಶಾಲೆಯ ಪ್ರಾಧ್ಯಾಪಕ ಎರಿಕ್ ಗಾರ್ಡನ್ ತಿಳಿಸಿದ್ದರು. ಇದನ್ನೂ ಓದಿ: ಕೋವಿಡ್‌ ಹೆಚ್ಚಳ; ಸ್ವಾತಂತ್ರ್ಯೋತ್ಸವದಲ್ಲಿ ಜನಸಂದಣಿಗೆ ಅವಕಾಶ ನೀಡಬೇಡಿ – ರಾಜ್ಯಗಳಿಗೆ ಕೇಂದ್ರ ಸೂಚನೆ

    Live Tv
    [brid partner=56869869 player=32851 video=960834 autoplay=true]

  • ಪುಟಿನ್‌ಗೆ ಕ್ಯಾನ್ಸರ್‌ – ಯುದ್ಧದ ವೇಳೆ ಅಧಿಕಾರ ಹಸ್ತಾಂತರ ಸಾಧ್ಯತೆ!

    ಪುಟಿನ್‌ಗೆ ಕ್ಯಾನ್ಸರ್‌ – ಯುದ್ಧದ ವೇಳೆ ಅಧಿಕಾರ ಹಸ್ತಾಂತರ ಸಾಧ್ಯತೆ!

    ಮಾಸ್ಕೋ: ಉಕ್ರೇನ್‌ ಮೇಲೆ ಸತತ ಎರಡು ತಿಂಗಳಿಂದ ಯುದ್ಧ ನಡೆಸುತ್ತಿದ್ದರೂ, ದೇಶವನ್ನು ಹತೋಟಿಗೆ ತೆಗೆದುಕೊಳ್ಳುವಲ್ಲಿ ವಿಫಲವಾಗಿ ಕಂಗೆಟ್ಟಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪುಟಿನ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಪುಟಿನ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು. ದೇಶದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೇವ್ ಅವರಿಗೆ ತಾತ್ಕಾಲಿಕವಾಗಿ ಅಧಿಕಾರ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಯುಎಸ್‌ನ ನ್ಯೂಯಾರ್ಕ್ ಪೋಸ್ಟ್‌ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಯಾರೂ ಗೆದ್ದಿಲ್ಲ: ಮೋದಿ

    ಪುಟಿನ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕೆಂದು ವೈದ್ಯರು ಹೇಳಿದ್ದಾರೆ ಎಂದು ವರದಿಯಾಗಿದೆ. ರಷ್ಯಾದ ಮಾಜಿ ವಿದೇಶಿ ಗುಪ್ತಚರ ಸೇವೆಯ ಲೆಫ್ಟಿನೆಂಟ್ ಜನರಲ್ ನಡೆಸುತ್ತಿದ್ದ ಟೆಲಿಗ್ರಾಮ್ ಚಾನೆಲ್ ಅನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

    ರಷ್ಯಾದ ಅಧ್ಯಕ್ಷರು ಕ್ಯಾನ್ಸರ್ ಮತ್ತು ಪಾರ್ಕಿನ್ಸನ್ ಸೇರಿದಂತೆ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂಬ ವದಂತಿಗಳಿವೆ. ನಿರೀಕ್ಷಿತ ಶಸ್ತ್ರಚಿಕಿತ್ಸೆ ಮತ್ತು ಚೇತರಿಕೆಯು ಪುಟಿನ್ ಅವರನ್ನು ಕೆಲ ಕಾಲ ಅಸಮರ್ಥಗೊಳಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದನ್ನೂ ಓದಿ: ರಷ್ಯಾ ಮುತ್ತಿಗೆ – ಮರಿಯುಪೋಲ್‌ನಿಂದ ನೂರಾರು ಜನರ ಸ್ಥಳಾಂತರ

    ಆದರೆ, ಈ ವರದಿಯನ್ನು ದೃಢೀಕರಿಸುವ ಯಾವುದನ್ನೂ ನಾವು ನೋಡಿಲ್ಲ ಎಂದು ಪೆಂಟಗನ್ ವಕ್ತಾರ ಜಾನ್ ಕಿರ್ಬಿ ಹೇಳಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

    ಕೆಲವು ದಿನಗಳ ಹಿಂದೆ ಪುಟಿನ್, ನಿಕೊಲಾಯ್ ಪಟ್ರುಶೆವ್ ಅವರೊಂದಿಗೆ ಎರಡು ಗಂಟೆಗಳ ಕಾಲ ತುಂಬಾ ಆತ್ಮೀಯವಾದ ಸಂಭಾಷಣೆ ನಡೆಸಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿಯು ಟೆಲಿಗ್ರಾಮ್ ಪೋಸ್ಟ್ ಅನ್ನು ಉಲ್ಲೇಖಿಸಿ ಹೇಳಿದೆ. ಇದನ್ನೂ ಓದಿ: ರಷ್ಯಾ ಪಡೆ ನನ್ನನ್ನು ಸೆರೆ ಹಿಡಿಯಲು ಭಾರೀ ಹತ್ತಿರದಲ್ಲಿತ್ತು: ಝೆಲೆನ್ಸ್ಕಿ

    Vladimir Putin

    ಇತ್ತೀಚಿನ ದಿನಗಳಲ್ಲಿ ರಷ್ಯಾದ ಅಧ್ಯಕ್ಷರ ಆರೋಗ್ಯದ ಬಗ್ಗೆ ಅನೇಕ ಚರ್ಚೆಗಳಾಗುತ್ತಿವೆ. ವಿಶೇಷವಾಗಿ ಕಳೆದ ತಿಂಗಳು ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರೊಂದಿಗಿನ ಭೇಟಿಯ ಸಮಯದಲ್ಲಿ ಪುಟಿನ್, ಮೇಜನ್ನು ಗಟ್ಟಿಯಾಗಿ ಹಿಡಿದಿದ್ದರು ಎಂದು ಹೇಳಲಾಗಿತ್ತು. ಇಂತಹ ಹಲವು ಸನ್ನಿವೇಶಗಳ ಮೂಲಕ ಪುಟಿನ್‌ ಆರೋಗ್ಯದ ಬಗ್ಗೆ ನಾನಾ ಪ್ರಶ್ನೆಗಳು ಉದ್ಭವಿಸುತ್ತಿವೆ.

  • ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಇಂಟರ್ವ್ಯೂ ಅಟೆಂಡ್ ಮಾಡಿದ ಹಠವಾದಿ

    ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಇಂಟರ್ವ್ಯೂ ಅಟೆಂಡ್ ಮಾಡಿದ ಹಠವಾದಿ

    ನವದೆಹಲಿ: ಕ್ಯಾನ್ಸರ್ ಬಂದ್ರೆ ಜೀವನವೇ ಮುಗಿಯಿತು ಎಂದು ತಿಳಿದುಕೊಳ್ಳುವ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ಛಲ ಬಿಡದೆ ಇಂಟರ್ವ್ಯೂ ಅಟೆಂಡ್ ಮಾಡಿರುವ ಸುದ್ದಿ ಎಲ್ಲಕಡೆ ವೈರಲ್ ಆಗಿದೆ.

    ಕ್ಯಾನ್ಸರ್ ರೋಗಿಯೊಬ್ಬರು ತಮ್ಮ ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ರೂ ಉದ್ಯೋಗಕ್ಕಾಗಿ ಇಂಟರ್ವ್ಯೂ ಅಟೆಂಡ್ ಮಾಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸುದ್ದಿ ವೈರಲ್ ಆಗುತ್ತಿದೆ. ಜಾರ್ಖಂಡ್ ಮೂಲದ ಐಟಿ ವೃತ್ತಿಪರ ಅರ್ಶ್ ನಂದನ್ ಪ್ರಸಾದ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕೀಮೋಥೆರಪಿಯಲ್ಲಿದ್ದಾರೆ. ಈ ವೇಳೆ ಅವರಿಗೆ ಇಂಟರ್ವ್ಯೂಗೆ ಕಾಲ್ ಬಂದಿದೆ. ಈ ಹಿನ್ನೆಲೆ ಪ್ರಸಾದ್ ಅವರು ನಾನು ನನ್ನನ್ನು ಪ್ರೂವ್ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದಾರೆ. ಅದಕ್ಕೆ ಆಸ್ಪತ್ರೆ ಬೆಡ್‍ನಿಂದಲೇ ತಮ್ಮ ಲ್ಯಾಪ್‍ಟಾಪ್ ಮೂಲಕ ಇಂಟರ್ವ್ಯೂ ಅಟೆಂಡ್ ಮಾಡಿದ್ದಾರೆ. ಇದನ್ನೂ ಓದಿ: ಸೂರ್ಯ-ಚಂದ್ರ ಇರುವವರೆಗೂ ಹಿಂದೂ ಧರ್ಮ, ಮಾತೃ ಭಾಷೆ ಶಾಶ್ವತವಾಗಿರುತ್ತೆ: ಕಾರಜೋಳ

    ಓಪನ್‍ಟುವರ್ಕ್ ಎಂಬ ಬ್ಯಾಡ್ಜ್ ಹೊಂದಿರುವ ಪ್ರಸಾದ್, ತಮ್ಮ ಆರೋಗ್ಯ ಸಮಸ್ಯೆಯಿಂದಾಗಿ ಉದ್ಯೋಗ ಪಡೆದುಕೊಳ್ಳಲು ಎಷ್ಟೂ ಕಷ್ಟವಾಗುತ್ತಿತ್ತು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ವೇಳೆ ಅವರು, ನೀವು ಸಂದರ್ಶನಗಳಲ್ಲಿ ಅತ್ಯುತ್ತಮವಾದದ್ದನ್ನು ನೀಡಿದ್ರೂ, ನಿಮ್ಮ ಇಂಟರ್ವ್ಯೂ ಪಾಸ್ ಆಗುವುದಿಲ್ಲ. ಆಗ ಈ ಕಂಪನಿಗಳು ಎಷ್ಟು ಮುಂದುವರೆದಿದೆ ಎಂಬುದನ್ನು ತೋರಿಸುತ್ತದೆ. ಆದರೆ ನಾನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ ಎಂದು ನೇಮಕಾತಿದಾರರಿಗೆ ತಿಳಿಯುತ್ತಿದ್ದಂತೆ, ಅವರಲ್ಲಿ ಆಗುವ ಬದಲಾವಣೆಯನ್ನು ನಾನು ನೋಡುತ್ತೇನೆ. ಆದರೆ ನನಗೆ ನಿಮ್ಮ ಸಹಾನುಭೂತಿ ಬೇಕಾಗಿಲ್ಲ. ನನ್ನನ್ನು ನಾನು ಸಾಬೀತುಪಡಿಸಲು ನಾನು ಇಲ್ಲಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಸ್ಫೂರ್ತಿ ನೀಡುವ ಪೋಸ್ಟ್
    ಈ ಪೋಸ್ಟ್ ನೋಡಿದ ನೆಟ್ಟಿಗರು, ನೀವು ಅನೇಕರಿಗೆ ಸ್ಫೂರ್ತಿ ನೀಡಿದ್ದೀರಿ. ನೀವು ಹೆಚ್ಚು ಶಕ್ತಿ ಮತ್ತು ಬದ್ಧತೆಯನ್ನು ತೋರಿಸುತ್ತಿದ್ದೀರಿ. ಇದರಿಂದ ಇತರರನ್ನು ಬಲಶಾಲಿಯಾಗುವಂತೆ ಮಾಡುತ್ತದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ, ನಿಮಗೆ ಅರ್ಹವಾದ ಪೋಸ್ಟ್ ನಿಮಗೆ ಸಿಗಲಿ ಎಂಬುದು ನನ್ನ ಪ್ರಾರ್ಥನೆ. ನಿಮ್ಮ ಮೌಲ್ಯಗಳು, ಕೌಶಲ್ಯಗಳು ಮತ್ತು ವೈಯಕ್ತಿಕ ಗುರಿಗಳೊಂದಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುವ ಸ್ಥಾನವನ್ನು ನೀವು ಕಂಡುಕೊಳ್ಳುತ್ತೀರಿ. ನೀವು ತಲೆ ಎತ್ತಿ ನಡೆಯಿರಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಮದುವೆಯಾಗಿ ಒಂದೇ ವರ್ಷಕ್ಕೆ ಯುವತಿ ಅನುಮಾನಾಸ್ಪದ ಸಾವು 

    ಏನಾಯಿತು?
    ಅರ್ಶ್ ತನ್ನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಬಳಿಕ ಮಹಾರಾಷ್ಟ್ರ ಮೂಲದ ಟೆಕ್ ಕಂಪನಿ ಅಪ್ಲೈಡ್ ಕ್ಲೌಡ್ ಕಂಪ್ಯೂಟಿಂಗ್‍ನ ಸ್ಥಾಪಕ ಮತ್ತು ಸಿಇಒ ನೀಲೇಶ್ ಸತ್ಪುಟೆ ಅವರು ಉದ್ಯೋಗ ಆಫರ್ ಕೊಟ್ಟಿದ್ದಾರೆ. ಈ ವೇಳೆ ಸತ್ಪುಟೆ ಅವರು, ಪ್ರಸಾದ್ ನಿಮ್ಮ ಚಿಕಿತ್ಸೆ ಮುಗಿದ ಬಳಿಕ ಕೆಲಸಕ್ಕೆ ಬಂದು ಸೇರಿಕೊಳ್ಳಬಹುದು. ನೀನು ಒಬ್ಬ ಯೋಧ. ಪ್ರಸ್ತುತ ನೀವು ನಿಮ್ಮ ಚಿಕಿತ್ಸೆ ಕಡೆ ಗಮನಕೊಡಿ. ಬೇರೆ ಇಂಟರ್ವ್ಯೂ ಅಟೆಂಡ್ ಮಾಡುವುದನ್ನು ನಿಲ್ಲಿಸಿ ಎಂದು ಬರೆದು ತಿಳಿಸಿದ್ದಾರೆ.

  • ಸ್ತನ ಕ್ಯಾನ್ಸರ್ ಚಿಕಿತ್ಸೆ ನಂತರ ಫೋಟೋ ಶೇರ್ ಮಾಡಿ ಅನುಭವ ಹಂಚಿಕೊಂಡ ಛವಿ ಮಿತ್ತಲ್

    ಸ್ತನ ಕ್ಯಾನ್ಸರ್ ಚಿಕಿತ್ಸೆ ನಂತರ ಫೋಟೋ ಶೇರ್ ಮಾಡಿ ಅನುಭವ ಹಂಚಿಕೊಂಡ ಛವಿ ಮಿತ್ತಲ್

    ಕೆಲ ತಿಂಗಳ ಹಿಂದೆಯಷ್ಟೇ ತಮಗೆ ಸ್ತನ ಕ್ಯಾನ್ಸರ್ ಆಗಿರುವ ವಿಚಾರ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು ಬಾಲಿವುಡ್ ಮತ್ತು ಕಿರುತೆರೆ ನಟಿ ಛವಿ ಮಿತ್ತಲ್. ಕ್ಯಾನ್ಸರ್ ಮೊದಲ ಹಂತದಲ್ಲೇ ಇರುವಾಗಲೇ ತಮಗೆ ತಿಳಿದಿದ್ದರಿಂದ, ಅದಕ್ಕೆ ಅಗತ್ಯ ಸರ್ಜರಿ ಮಾಡಿಸಿಕೊಳ್ಳುವುದಾಗಿಯೂ ಹೇಳಿದ್ದರು. ಮೊದಲ ಹಂತದಲ್ಲೇ ತಮಗೆ ತಿಳಿದಿದ್ದಕ್ಕೆ ದೇವರಿಗೆ ಧನ್ಯವಾದ ಕೂಡ ಅರ್ಪಿಸಿದ್ದರು. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಇದೀಗ ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದಿರುವ ಛವಿ, ಸರ್ಜರಿಯ ನಂತರದ ಫೋಟೋವನ್ನೂ ಶೇರ್ ಮಾಡಿದ್ದಾರೆ. ಆರು ತಾಸುಗಳ ಕಾಲ ಈ ಚಿಕಿತ್ಸೆ ನಡೆದಿದ್ದು, ತಮಗೆ ಮರುಜೀವ ಬಂದಿದೆ ಎನ್ನುವ ಅರ್ಥದಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಅಲ್ಲದೇ, ಚಿಕಿತ್ಸೆ ನೀಡಿದ ವೈದ್ಯರಿಗೆ ಅವರು ಧನ್ಯವಾದಗಳನ್ನೂ ತಿಳಿಸಿದ್ದಾರೆ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ವೈದ್ಯರು ಆರು ತಾಸುಗಳ ಸರ್ಜರಿ ವಿಚಾರವನ್ನು ನನ್ನೊಂದಿಗೆ ಹಂಚಿಕೊಂಡರು. ಅರವಳಿಕೆ ತಜ್ಞರು ಮದ್ದು ನೀಡಿ, ಒಳ್ಳೆಯ ವಿಚಾರಗಳನ್ನು ಯೋಚಿಸುತ್ತಾ ಕಣ್ಣು ಮುಚ್ಚಿಕೊಳ್ಳಲು ಹೇಳಿದರು. ವೈದ್ಯರು ಹೇಳಿದ ಎಲ್ಲ ಸಲಹೆಗಳನ್ನೂ ಪಾಸಿಟಿವ್ ಆಗಿಯೇ ತಗೆದುಕೊಂಡು ಕಣ್ಣು ಮುಚ್ಚಿಕೊಂಡೆ. ಆರು ಗಂಟೆಗಳ ನಂತರ ಸ್ತನ ಸರ್ಜರಿ ಆದ ವಿಚಾರ ನನಗೆ ಗೊತ್ತಾಯಿತು. ವೈದ್ಯರು ಆಗ ಕ್ಯಾನ್ಸರ್ ಮುಕ್ತವಾಗಿರುವ ಬಗ್ಗೆ ತಿಳಿಸಿದರು ಎಂದು ಛವಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

    ಸ್ತನ ಕ್ಯಾನ್ಸರ್ ಇರುವವರು ಭಯ ಪಡಬೇಕಿಲ್ಲ. ಎಲ್ಲದಕ್ಕೂ ಈಗ ಚಿಕಿತ್ಸೆಯಿದೆ. ಧೈರ್ಯವೇ ಎಲ್ಲದಕ್ಕೂ ಮದ್ದು. ಹಾಗಾಗಿ ಧೈರ್ಯದಿಂದ ಏನೇ ಬಂದರೂ ಎದುರಿಸಿ. ನಿಮ್ಮೆಲ್ಲರ ಪ್ರಾರ್ಥನೆಯಿಂದ ನಾನು ಈಗ ಕ್ಯಾನ್ಸರ್ ಗೆದ್ದು ಬಂದಿದ್ದೇನೆ. ನಿಮ್ಮ ಪ್ರೀತಿಗೆ ನಾನು ಋಣಿ ಎಂದು ಅವರು ಬರೆದುಕೊಂಡಿದ್ದಾರೆ.

  • ಕ್ಯಾನ್ಸರ್ ರೋಗಿಗಳಿಗೆ ತಲೆಗೂದಲು ದಾನ ಮಾಡಿದ ಅನುಪಮಾ ಗೌಡ

    ಕ್ಯಾನ್ಸರ್ ರೋಗಿಗಳಿಗೆ ತಲೆಗೂದಲು ದಾನ ಮಾಡಿದ ಅನುಪಮಾ ಗೌಡ

    ಕಿರುತೆರೆ ನಟಿ, ನಿರೂಪಕಿ ಅನುಪಮಾ ಗೌಡ ಮಾದರಿಯ ಕೆಲಸ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ. ವರ್ಷಗಳಿಂದ ಬೆಳೆಸಿದ್ದ ತಲೆಗೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಮೂಲಕ ಅವರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ‘ನನ್ನ ವೃತ್ತಿ ಜೀವನದಲ್ಲಿ ಉದ್ದನೆಯ ಜಡೆ ನನ್ನ ಆತ್ಮವಿಶ್ವಾಸದ ಕುರುಹು ಆಗಿತ್ತು. ಈ ತಲೆಗೂದಲನ್ನು ಪ್ರೀತಿಯಿಂದ ಪೋಷಣೆ ಮಾಡುತ್ತಾ ಬಂದಿದ್ದೆ. ಇದೀಗ ಅನೇಕರಿಗೆ ಈ ತಲೆಗೂದಲಿನ ಅವಶ್ಯಕತೆ ಇರುವುದು ಕಂಡು ಬಂತು. ಹಾಗಾಗಿ ನಾನು ಅವುಗಳನ್ನು ಕತ್ತರಿಸಿ, ಅಗತ್ಯವಿದ್ದರಿಗೆ ಕೊಡಲು ಮುಂದಾಗಿದ್ದೇನೆ. ಈ ಕೆಲಸ ಮಾಡಲು ನನಗೆ ಹೆಮ್ಮೆ ಅನಿಸುತ್ತಿದೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

    ತಾವು ತಲೆಗೂದಲನ್ನು ಕಟ್ ಮಾಡಿಸಿದ್ದರ ಫೋಟೋವನ್ನೂ ಕೂಡ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಇದೊಂದು ಚಿಕ್ಕ ಕೆಲಸವಾದರೂ, ತಲೆಗೂದಲು ಅವಶ್ಯವಿದ್ದವರ ಮುಖದಲ್ಲಿ ನಗು ನೋಡಿದಾಗ ಒಂದು ರೀತಿ ಸಾರ್ಥಕ ಭಾವ ಮೂಡುತ್ತದೆ ಎಂದೂ ಅವರು ಬರೆದುಕೊಂಡಿದ್ದಾರೆ. ತಾವು ಇಂಥದ್ದೊಂದು ಪೋಸ್ಟ್ ಹಾಕುತ್ತಿರುವುದು ಕೇವಲ ಬೇರೆಯವರಿಗೂ ಪ್ರೇರಣೆ ಆಗಲಿ ಎನ್ನುವ ಕಾರಣಕ್ಕಾಗಿಯೇ ಹೊರತು, ಯಾವುದೇ ಪ್ರಚಾರಕ್ಕಾಗಿ ಅಲ್ಲ’ ಎನ್ನುವುದನ್ನು ಅವರು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್

    ಹಳ್ಳಿ ದುನಿಯಾ ಶೋ ಮೂಲಕ ಟಿವಿ ರಂಗಕ್ಕೆ ಎಂಟ್ರಿ ಕೊಟ್ಟ ಅನುಪಮಾ ಗೌಡ, ಆ ನಂತರ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ನಿರೂಪಣೆಯತ್ತ ಮುಖ ಮಾಡಿದರು. ಈಗ ಅನುಪಮಾ ಗೌಡ ಸ್ಟಾರ್ ನಿರೂಪಕಿ ಮತ್ತು ಬೇಡಿಕೆಯ ನಿರೂಪಕಿಯಾಗಿ ಬೆಳೆದಿದ್ದಾರೆ. ಕಷ್ಟದ ದಿನಗಳನ್ನು ಎದುರಿಸಿ ಇದೀಗ ತಮ್ಮಿಷ್ಟದಂತೆ ಬದುಕುವಷ್ಟು ಅನುಪಮಾ ಗೌಡ ವೃತ್ತಿ ಬದುಕನ್ನು ಕಟ್ಟಿಕೊಂಡಿದ್ದಾರೆ.

    ಈ ಹಿಂದೆ ಅನೇಕ ತಾರೆಯರು ಕ್ಯಾನ್ಸರ್ ರೋಗಿಗಳಿಗಾಗಿಯೇ ತಮ್ಮ ತಲೆಗೂದಲನ್ನು ದಾನ ಮಾಡಿದ್ದಾರೆ. ಈ ಹಿಂದೆ ಕಾರುಣ್ಯ ರಾಮ್, ಕಾವ್ಯ ಶಾಸ್ತ್ರಿ ಸೇರಿದಂತೆ ಹಲವು ನಟಿಯರು ಇಂತಹ ಕೆಲಸ ಮಾಡುವ ಮೂಲಕ ಮಾದರಿಯಾಗಿದ್ದರು.

  • ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಖ್ಯಸ್ಥ ಪಾಣಕ್ಕಾಡ್ ತಂಙಳ್ ನಿಧನ

    ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಖ್ಯಸ್ಥ ಪಾಣಕ್ಕಾಡ್ ತಂಙಳ್ ನಿಧನ

    ತಿರುವನಂತಪುರಂ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸೈಯದ್ ಹೈದರಾಲಿ ಶಿಹಾಬ್ ತಂಙಳ್(74) ಅವರು ನಿಧರಾಗಿದ್ದಾರೆ.

    ಮಲಪ್ಪುರಂನ ಪಾಣಕ್ಕಾಡ್‍ನ ಪುಕ್ಕೋಯ ಕುಟುಂಬದ ಸದಸ್ಯರು ಪಾಣಕ್ಕಾಡ್ ಸೈಯದ್ ಹೈದರಾಲಿ ಶಿಹಾಬ್ ತಂಙಳ್ ಅವರು 2009 ರಲ್ಲಿ ಐಯುಎಂಎಲ್‍ನಲ್ಲಿ ರಾಜ್ಯಾಧ್ಯಕ್ಷರಾದರು. ಅದಕ್ಕೂ ಮುನ್ನ ಮುಸ್ಲಿಂ ಲೀಗ್‍ನ ಮಲಪ್ಪುರಂ ಜಿಲ್ಲಾಧ್ಯಕ್ಷರಾಗಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಜೊತೆಗೆ ಹೈದರ್ ಅಲಿ ಶಿಹಾಬ್ ತಂಙಳ್ ಅವರು ಕೇರಳದ ಸುನ್ನಿ ಮುಸ್ಲಿಂ ಸಂಘಟನೆಗಳಲ್ಲಿ ಒಂದಾದ ಸಮಸ್ತ ಕೇರಳ ಜಮಿಯ್ಯತುಲ್ ಉಲಮಾದ ಬಣದ ಉಪಾಧ್ಯಕ್ಷರೂ ಆಗಿದ್ದರು. ಜೊತೆಗೆ ಕೇರಳದ ಸುನ್ನಿ ಮುಸ್ಲಿಂ ಸಂಘಟನೆಗಳಲ್ಲಿ ಒಂದಾದ ಸಮಸ್ತ ಕೇರಳ ಜಮಿಯ್ಯತುಲ್ ಉಲಮಾದ ಬಣದ ಉಪಾಧ್ಯಕ್ಷರಾಗಿದ್ದರು. ಇದನ್ನೂ ಓದಿ:  ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?

    ಪಾಣಕ್ಕಾಡ್ ಸಯ್ಯಿದ್ ಹೈದರ್ ಅಲಿ ಶಿಹಾಬ್ ತಂಙಳ್ ಅವರ ನಿಧನ ಕುರಿತಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದು, ಕೇರಳ ರಾಜಕೀಯದ ಪುಟ್ಟ ದೈತ್ಯ ಎಂದು ಬಣ್ಣಿಸಿದ್ದಾರೆ. ಮತ್ತೊಂದೆಡೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು, ತಂಙಳ್ ಅವರು ಅತ್ಯಂತ ವಿನಮ್ರ ವ್ಯಕ್ತಿಯಾಗಿದ್ದರು. ಕಳೆದ ಕೆಲವು ವರ್ಷಗಳಿಂದ ನಾನು ಅವರೊಂದಿಗೆ ನಿಕಟ ಸಂವಾದ ನಡೆಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಪಾಣಕ್ಕಾಡ್ ಸಯ್ಯಿದ್ ಹೈದರಾಲಿ ಶಿಹಾಬ್ ತಂಙಳ್ ಅವರ ಅಂತ್ಯಕ್ರಿಯೆ ಸೋಮವಾರ ಪಾಣಕ್ಕಾಡಿನಲ್ಲಿ ನಡೆಯಲಿದೆ. ಇದನ್ನೂ ಓದಿ:  ಕಾರ್ ಅಪಘಾತದ ಬಗ್ಗೆ ಹೊಸ ಹಾಡು ರಚಿಸಿದ ಕಚ್ಚಾ ಬಾದಮ್ ಗಾಯಕ ಭುಬನ್