Tag: cancer

  • ಬಾಲಿವುಡ್ ನಟ ಮಂಗಲ್ ಧಿಲ್ಲೋನ್ ನಿಧನ

    ಬಾಲಿವುಡ್ ನಟ ಮಂಗಲ್ ಧಿಲ್ಲೋನ್ ನಿಧನ

    ಣಭೂಮಿ, ದಿಲ್ ತೇರಾ ಆಶಿಕ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ (Bollywood) ನಟ ಮಂಗಲ್ ಧಿಲ್ಲೋನ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ (Death). ಹಲವು ವರ್ಷಗಳಿಂದ ಅವರು ಕ್ಯಾನ್ಸರ್ (Cancer) ನಿಂದ ಬಳಲುತ್ತಿದ್ದರು. ಹಲವು ದಿನಗಳಿಂದ ಆಸ್ಪತ್ರೆಯ ಬೆಡ್ ಮೇಲೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾರೆ.

    ಕಿರುತೆರೆ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮಂಗಲ್ (Mangal Dhillon), ಪ್ಯಾರ್ ಕಾ ದೇವತಾ, ವಿಶ್ವಾತ್ಮ,  ಟ್ರೈನ್ ಟು ಪಾಕಿಸ್ತಾನ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 1988ರಲ್ಲಿ ತೆರೆಕಂಡ ಖೋನ್ ಭಾರಿ ಮಾಂಗ್ ಸಿನಿಮಾದಲ್ಲಿ ಮಾಡಿದ್ದ ವಕೀಲ ಪಾತ್ರ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಇದನ್ನೂ ಓದಿ:ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು

    ನಟನೆ ಮಾತ್ರವಲ್ಲದೇ, ಬರಹಗಾರನಾಗಿ, ನಿರ್ದೇಶಕನಾಗಿ ಹಾಗೂ ಪಂಜಾಬಿ ಸಿನಿಮಾಗಳ ನಿರ್ಮಾಪಕನಾಗಿಯೂ ಮಂಗಲ್ ಗುರುತಿಸಿಕೊಂಡಿದ್ದರು. ಮಂಗಲ್ ಧಿಲ್ಲೋನ್ ನಿಧನಕ್ಕೆ ಹಲವರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್, ನಟ ಯಶ್ ಪಾಲ್ ಶರ್ಮಾ  ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

  • ಧ್ರುವನಾರಾಯಣ ಪತ್ನಿ ವೀಣಾ ನಿಧನ

    ಧ್ರುವನಾರಾಯಣ ಪತ್ನಿ ವೀಣಾ ನಿಧನ

    ಮೈಸೂರು: ಮಾಜಿ ಸಂಸದ ದಿವಂಗತ ಆರ್ ಧ್ರುವನಾರಾಯಣ (R Dhruvanarayana) ಅವರ ಪತ್ನಿ ವೀಣಾ (Veena) ಶುಕ್ರವಾರ ನಿಧನರಾಗಿದ್ದಾರೆ.

    ಕ್ಯಾನ್ಸರ್ (Cancer) ಖಾಯಿಲೆಯಿಂದ ಬಳಲುತ್ತಿದ್ದ ಧ್ರುವನಾರಾಯಣ ಅವರ ಪತ್ನಿ ವೀಣಾ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

    ಕಳೆದ ತಿಂಗಳಷ್ಟೇ ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಕಳೆದ 2 ವರ್ಷಗಳಿಂದ ಧ್ರುವನಾರಾಯಣ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಈ ಬಾರಿ ನಂಜನಗೂಡಿನಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದರು. ಇವರು 2 ಬಾರಿ ಶಾಸಕರಾಗಿ 1 ಬಾರಿ ಸಂಸದರಾಗಿದ್ದರು. ಇದನ್ನೂ ಓದಿ: ವರುಣಾಗೆ ಬಿ.ವೈ ವಿಜಯೇಂದ್ರ ಹೆಸರು ಶಿಫಾರಸ್ಸಿಲ್ಲ!

  • ನನ್ನ ಸ್ಥಿತಿ ಯಾರಿಗೂ ಬೇಡ- ಅಪ್ಪನ ನೆನಪಿಗಾಗಿ ಕ್ಯಾಂಟೀನ್ ಮಂಜಣ್ಣನಿಂದ ಉಚಿತ ಅಂಬುಲೆನ್ಸ್ ಸೇವೆ

    ನನ್ನ ಸ್ಥಿತಿ ಯಾರಿಗೂ ಬೇಡ- ಅಪ್ಪನ ನೆನಪಿಗಾಗಿ ಕ್ಯಾಂಟೀನ್ ಮಂಜಣ್ಣನಿಂದ ಉಚಿತ ಅಂಬುಲೆನ್ಸ್ ಸೇವೆ

    ಚಿಕ್ಕಮಗಳೂರು: ಅಪ್ಪನ ಆರೋಗ್ಯ ತೀರಾ ಹದಗೆಟ್ಟತ್ತು. ಆಸ್ಪತ್ರೆಗೆ ಹೋದರೆ ಅಂಬುಲೆನ್ಸ್ (Ambulance) ಇರಲಿಲ್ಲ. ಖಾಸಗಿ ಅಂಬುಲೆನ್ಸ್‌ಗೆ ಫೋನ್ ಮಾಡಿದರೆ ಬಾಯಿಗೆ ಬಂದ ರೇಟ್ ಹೇಳಿದರು. ಆದರೂ ಅಪ್ಪನ ಆಸ್ಪತ್ರೆಗೆ ಸೇರಿಸಿದೆ ಅವರು ಬದುಕಲಿಲ್ಲ. ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಕಡೂರಿನ (Kadur) ರಸ್ತೆ ಬದಿ ತಳ್ಳುವ ಗಾಡಿಯಲ್ಲಿ ಕಾಫಿ-ಟೀ ಮಾರುವ ವ್ಯಕ್ತಿಯೋರ್ವ ದುಡಿದ ದುಡ್ಡನ್ನೆಲ್ಲಾ ಕೂಡಿಟ್ಟು ಅಪ್ಪನ ಹೆಸರಿನಲ್ಲೇ ಉಚಿತ ಅಂಬುಲೆನ್ಸ್ ಬಿಟ್ಟು ಸಮಾಜಕ್ಕೆ ಮಾದರಿಯಾಗಿದ್ದಾರೆ.

    ನಗರದ ಎಲ್‍ಐಸಿ ಆಫೀಸ್ ಪಕ್ಕದಲ್ಲಿ ಕ್ಯಾಂಟೀನ್ ಇಟ್ಟುಕೊಂಡಿರುವ ಮಂಜುನಾಥ್ ಎಂಬವರು ಕಡೂರು ಪಟ್ಟಣಕ್ಕೆ ಕ್ಯಾಂಟೀನ್ ಮಂಜಣ್ಣ ಎಂದೇ ಚಿರಪರಿಚಿತ. ದಿನಕ್ಕೆ ಅಬ್ಬಾಬ್ಬ ಅಂದ್ರೆ 500-600 ರೂಪಾಯಿ ದುಡಿಯುತ್ತಾರೆ. ಕ್ಯಾನ್ಸರ್ (Cancer) ಹಾಗೂ ಹೃದಯ (Heart) ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ ಅಪ್ಪನನ್ನ ಹೊತ್ಕೊಂಡು ಚಿಕಿತ್ಸೆಗಾಗಿ ಊರೂರು ಅಲೆದಿದ್ದರು. ಆದರೆ ಅಪ್ಪನ ಪರಿಸ್ಥಿತಿ ಚಿಂತಾಜನಕವಾಗಿದ್ದ ದಿನ ಆಸ್ಪತ್ರೆಗೆ ಹೋದರೆ ಅಂಬುಲೆನ್ಸ್ ಸಿಕ್ಕಿರಲಿಲ್ಲ. ಖಾಸಗಿಯವರು 8-10 ಸಾವಿರ ಕೇಳಿದ್ದರು. ಆಸ್ಪತ್ರೆಗೆ ಹೋಗುವಷ್ಟರಲ್ಲಿ ತಡವಾಗಿತ್ತು. ಐದೇ ದಿನಕ್ಕೆ ಅಪ್ಪ ತೀರಿಕೊಂಡಿದ್ದರು. ಅದೇ ನೋವಿನಿಂದ ಕ್ಯಾಂಟೀನ್ ಮಂಜಣ್ಣ ದುಡಿದ ದುಡ್ಡನ್ನೆಲ್ಲಾ ಕೂಡಿಟ್ಟು, ಐದೂವರೆ ಲಕ್ಷದ ಅಂಬುಲೆನ್ಸ್ ತಂದು ಕ್ಯಾಂಟೀನ್ ಮುಂದೆಯೇ ನಿಲ್ಲಿಸಿಕೊಂಡಿದ್ದಾರೆ. ಯಾರೇ ಬಂದು ಕೇಳಿದರೂ ಪೆಟ್ರೋಲ್ ಹಾಕಿಸಿಕೊಂಡು ತೆಗೆದುಕೊಂಡು ಹೋಗಿ ಎಂದು ಡ್ರೈವರ್ ಜೊತೆ ಕಳಿಸುತ್ತಾರೆ. ಅದಕ್ಕೂ ದುಡ್ಡಿಲ್ಲ ಎಂದರೆ ಪೆಟ್ರೋಲ್ ತಾವೇ ಹಾಕಿಸುತ್ತಾರೆ. ಡ್ರೈವರ್ ಬಾಟ ಕೂಡ ಕೇಳಲ್ಲ. ಅವರೇ ಪ್ರೀತಿಯಿಂದ ಕೊಟ್ಟರೆ ಮಾತ್ರ ಪಡೆದುಕೊಳ್ಳುತ್ತಾರೆ. ಇದನ್ನೂ ಓದಿ: ಬೈಡನ್‌ಗಿದ್ದ ಕ್ಯಾನ್ಸರ್ ತೆಗೆದುಹಾಕಿದ ವೈದ್ಯರು – ಅಮೆರಿಕ ಅಧ್ಯಕ್ಷ ಈಗ ಸಂಪೂರ್ಣ

    ಕೊರೋನಾ (Corona) ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಸಿಗದೆ ಎಷ್ಟೋ ಜನ ಸಾವನ್ನಪ್ಪಿದ್ದಾರೆ. ಅದೇ ಕಾಳಜಿಯಲ್ಲಿ ಅಂಬುಲೆನ್ಸ್‍ನಲ್ಲಿ ಆಕ್ಸಿಜನ್ (Oxizen) , ಟ್ರೀಟ್‍ಮೆಂಟ್ ಕಿಟ್ (Treatment kit) ಎಲ್ಲವೂ ಇಟ್ಟಿದ್ದಾರೆ.

    ಮಂಜಣ್ಣ ಸ್ಲಂನಲ್ಲಿ ವಾಸವಿದ್ದಾರೆ. ಅದೇ ಸ್ಲಂನಲ್ಲಿ ಸುಮಾರು 30ಕ್ಕೂ ಹೆಚ್ಚು ಡ್ರೈವರ್‍ಗಳು ಇದ್ದಾರೆ. ಡ್ರೈವರ್‍ಗಳು ಕೂಡ ಯಾವುದೇ ಹೊತ್ತಲ್ಲಿ ಹೋದರೂ ಆಗಲ್ಲ ಅನ್ನದೆ ಅಂಬುಲೆನ್ಸ್ ತೆಗೆದುಕೊಂಡು ಹೋಗುತ್ತಾರೆ. ಕಳೆದ ಆರು ತಿಂಗಳಿಂದ ಅಂಬುಲೆನ್ಸ್ ಸೇವೆ ಒದಗಿಸಿರೋ ಮಂಜಣ್ಣ 35ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಸೇವೆ ನೀಡಿದ್ದಾರೆ. ಇವರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಶಾಸಕರ ದಾವಣಗೆರೆಯ ಮನೆ ಮೇಲೂ ರೇಡ್- ಇಂದು ಬೇನಾಮಿ ಆಸ್ತಿ ಮೇಲೂ ದಾಳಿ ಸಾಧ್ಯತೆ

  • ಬೈಡನ್‌ಗಿದ್ದ ಕ್ಯಾನ್ಸರ್ ತೆಗೆದುಹಾಕಿದ ವೈದ್ಯರು – ಅಮೆರಿಕ ಅಧ್ಯಕ್ಷ ಈಗ ಸಂಪೂರ್ಣ ಗುಣಮುಖ

    ಬೈಡನ್‌ಗಿದ್ದ ಕ್ಯಾನ್ಸರ್ ತೆಗೆದುಹಾಕಿದ ವೈದ್ಯರು – ಅಮೆರಿಕ ಅಧ್ಯಕ್ಷ ಈಗ ಸಂಪೂರ್ಣ ಗುಣಮುಖ

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್‌ಗೆ (Joe Biden) ಇದ್ದ ಕ್ಯಾನ್ಸರ್ ಅನ್ನು ತೆಗೆದುಹಾಕಲಾಗಿದೆ. ಅವರು ಇದೀಗ ಗುಣಮುಖರಾಗಿದ್ದು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಶ್ವೇತಭವನದ ವೈದ್ಯ ಕೆವಿನ್ ಓ’ಕಾನರ್ ಶುಕ್ರವಾರ ತಿಳಿಸಿದ್ದಾರೆ.

    80 ವರ್ಷ ಪ್ರಾಯದ ಅಮೆರಿಕ ಅಧ್ಯಕ್ಷರಿಗೆ (US President) ಎದೆಯಲ್ಲಿ ಚರ್ಮದ ಗಾಯದ ರೂಪದಲ್ಲಿ ಕ್ಯಾನ್ಸರ್ (Cancer) ಇದ್ದಿದ್ದು, ಅದನ್ನು ಫೆಬ್ರವರಿ ತಿಂಗಳಿನಲ್ಲಿ ತೆಗೆದುಹಾಕಲಾಗಿದೆ. ಬೈಡನ್‌ಗೆ ಇದ್ದಿದ್ದ ಎಲ್ಲಾ ಕ್ಯಾನ್ಸರ್ ಅಂಗಾಂಶಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ. ಅವರ ಆರೋಗ್ಯದ ರಕ್ಷಣೆಯ ಭಾಗವಾಗಿ ಕಣ್ಗಾವಲು ಮುಂದುವರಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಅಲೆಸ್ ಬಿಲಿಯಾಟ್ಸ್ಕಿಗೆ 10 ವರ್ಷ ಜೈಲು

    Joe Biden

    ಫೆಬ್ರವರಿ 16ರಂದು ಬೈಡನ್ ಅವರ ವಾರ್ಷಿಕ ವೈದ್ಯಕೀಯ ತಪಾಸಣೆಯ ವೇಳೆ ಎದೆಯ ಮೇಲಿದ್ದ ಗಾಯವನ್ನು ತೆಗೆದುಹಾಕಲಾಗಿತ್ತು. ಬಳಿಕ ಅವರು ಕರ್ತವ್ಯಕ್ಕೆ ಯೋಗ್ಯ ಎಂದು ಘೋಷಿಸಲಾಗಿತ್ತು.

    ಬೈಡನ್ 2024ರಲ್ಲಿ 2ನೇ ಬಾರಿ ಅಧ್ಯಕ್ಷರಾಗುವ ನಿರೀಕ್ಷೆಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಆದರೂ ಅವರ ಪತ್ನಿ ಜಿಲ್ ಬೈಡನ್ ಸ್ಪರ್ಧಿಸಲು ಯೋಜಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗೆಗಿನ ನಿರ್ಧಾರವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿಲ್ಲ. ಇದನ್ನೂ ಓದಿ: ಶಾಸಕರ ದಾವಣಗೆರೆಯ ಮನೆ ಮೇಲೂ ರೇಡ್- ಇಂದು ಬೇನಾಮಿ ಆಸ್ತಿ ಮೇಲೂ ದಾಳಿ ಸಾಧ್ಯತೆ

  • ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿಗಾಗಿ ಹಾಡಲಿದ್ದಾರೆ ಚಿನ್ಮಯಿ

    ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿಗಾಗಿ ಹಾಡಲಿದ್ದಾರೆ ಚಿನ್ಮಯಿ

    ಸಾಫ್ಟ್​ ಲಿಂಕ್ಸ್​ ಸಂಸ್ಥೆಯ ಸುರೇಶ್​ ಬಾಬು ಕಳೆದ ಕೆಲವು ವರ್ಷಗಳಿಂದ ಹಲವು ಸಂಗೀತ (Music) ಸಂಜೆಗಳನ್ನು (Program) ಆಯೋಜಿಸುತ್ತಾ ಬಂದಿದ್ದಾರೆ. ಈಗ ಅವರು ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ (Chinmayi Sripad) ಅವರ ಸಂಗೀತ ಸಂಜೆಯನ್ನು ಮಾರ್ಚ್​ 18ರಂದು ನಗರದ ಚೌಡಯ್ಯ ಮೆಮೋರಿಯಲ್​ ಹಾಲ್​ನಲ್ಲಿ ಆಯೋಜಿಸಿದ್ದಾರೆ.

    ಕಳೆದ 20 ವರ್ಷಗಳಿಂದ ದಕ್ಷಿಣ ಭಾರತದ ಜನಪ್ರಿಯ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿರುವ ಚಿನ್ಮಯಿ ಶ್ರೀಪಾದ, ರೇಡಿಯೋ ಜಾಕಿಯಾಗಿ, ಡಬ್ಬಿಂಗ್​ ಕಲಾವಿದೆಯಾಗಿ, ನಿರೂಪಕಿಯಾಗಿಯೂ ಹೆಸರು ಮಾಡಿದ್ದಾರೆ. ಬ್ಲೂ ಎಲಿಫೆಂಟ್​ ಎಂಬ ಸಂಸ್ಥೆಯ ಸಂಸ್ಥಾಯ ಮತ್ತು ಸಿಇಓ ಆಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ:ಸಿದ್ಧಾರ್ಥ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ನಟಿ ಅದಿತಿ ರಾವ್‌ ಹೈದರಿ ಪ್ರತಿಕ್ರಿಯೆ

    ಬಾಲ್ಯದಿಂದಲೂ ಗಾಯಕಿಯಾಗಿ ಗುರುತಿಸಿಕೊಂಡಿರುವ ಚಿನ್ಮಯಿ ಶ್ರೀಪಾದ, ಚಿತ್ರರಂಗಕ್ಕೂ ಬರುವ ಮುನ್ನ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಸನ್​ ಟಿವಿಯಲ್ಲಿ ಪ್ರಸಾರವಾದ ‘ಸಪ್ತಸ್ವರಂಗಳ್​’ ಎಂಬ ಕಾರ್ಯಕ್ರಮದಲ್ಲಿ ಅವರ ಗಾಯನ ಪ್ರತಿಭೆಯನ್ನು ಗುರುತಿಸಿದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ಅವರು ತಮ್ಮ ಸಂಗೀತ ನಿರ್ದೇಶನದ ‘ಕಣ್ಣತ್ತಿಲ್​ ಮುತ್ತಮಿಟ್ಟಾಲ್​’ ಚಿತ್ರದ ಒಂದು ಪ್ರಮುಖ ಹಾಡನ್ನು ಹಾಡುವುದಕ್ಕೆ ಅವಕಾಶ ನೀಡಿದ್ದಾರೆ. 2002ರಲ್ಲಿ ಬಿಡುಗಡೆಯಾದ ಈ ಚಿತ್ರದ ‘ಒರು ದೈವಂ ತಂದ ಪೂವೆ …’ ಹಾಡಿನಿಂದ ಜನಪ್ರಿಯರಾದ ಚಿನ್ಮಯಿ ಮತ್ತೆಂದೂ ಹಿಂದಿರುಗಿ ನೋಡಲಿಲ್ಲ. ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯ ಚಿತ್ರಗಳಿಗೆ ನೂರಾರು ಹಾಡುಗಳನ್ನು ಹಾಡಿದ್ದಾರೆ.

    ‘ಹನಿಹನಿ’ ಚಿತ್ರದ ‘ಬೇಡ ಬೇಡ’ ಎಂಬ ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಿನ್ಮಯಿ, ನಂತರದ ದಿನಗಳಲ್ಲಿ ‘ಮಸ್ತ್ ಮಜಾ ಮಾಡಿ’ ಚಿತ್ರದ ‘ಚೋರಿ ಚೋರಿ’, ‘ಗನ್​’ ಚಿತ್ರದ ‘ತಾಜ ತಾಜ ಕನಸುಗಳು’, ‘ವಿಕ್ರಾಂತ್​ ರೋಣ’ ಚಿತ್ರದ ‘ಹೇ ಫಕೀರಾ’, ‘ದಿಯಾ’ ಚಿತ್ರದ ‘ಸೌಲ್​ ಆಫ್​ ದಿಯಾ’ ಸೇರಿದಂತೆ ಹಲವು ಹಾಡುಗಳನ್ನು ಹಾಡಿದ್ದಾರೆ.

    ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ 20 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಾಫ್ಟ್​ ಲಿಂಕ್ಸ್​ ಸಂಸ್ಥೆಯಿಂದ ‘ಸುವರ್ಣ ಸಂಜೆ’ ಎಂಬ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಚಿನ್ಮಯಿ ಶ್ರೀಪಾದ ಅವರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ. ಅಂದು ಕನ್ನಡದ ಹಲವು ಜನಪ್ರಿಯ ಹಾಡುಗಳನ್ನು ಹಾಡಲಾಗುವುದು. ಚಿನ್ಮಯಿ ಶ್ರೀಪಾದ ಸಹ ಈ ಸಂದರ್ಭದಲ್ಲಿ ತಾವು ಹಾಡಿರುವ ಕೆಲವು ಜನಪ್ರಿಯ ಹಾಡುಗಳನ್ನು ಲೈವ್​ ಆಗಿ ಹಾಡಲಿದ್ದಾರೆ. ಅವರ ಜತೆಗೆ ಅಜಯ್​ ಕೃಷ್ಣ ಸೇರಿದಂತೆ ಹಲವು ಜನಪ್ರಿಯ ಗಾಯಕ, ಗಾಯಕಿಯರು ಧ್ವನಿಗೂಡಿಸಲಿದ್ದಾರೆ. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಸಂಗೀತ ಸಂಜೆಯಿಂದ ಬರುವ ಹಣದ ಒಂದು ಭಾಗವನ್ನು, ಕ್ಯಾನ್ಸರ್​ನಿಂದ (Cancer) ಬಳಲುತ್ತಿರುವ ಹಿರಿಯ ಕಲಾವಿದೆ ಶೈಲಶ್ರೀ ಸುದರ್ಶನ್​ ಅವರ ಚಿಕಿತ್ಸೆಗೆ ಭರಿಸಲಾಗುವುದು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟಿ ರಾಖಿ ಸಾವಂತ್ ತಾಯಿ ಜಯಾ ನಿಧನ

    ನಟಿ ರಾಖಿ ಸಾವಂತ್ ತಾಯಿ ಜಯಾ ನಿಧನ

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ತಾಯಿ ಜಯಾ ಸಾವಂತ್ (Jaya Sawant) ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ (Death). ಕ್ಯಾನ್ಸರ್ (Cancer) ಮತ್ತು ಬ್ರೇನ್ ಟ್ಯೂಮರ್ ಖಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಹಲವು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಬಹು ಅಂಗಾಂಗ ವೈಫಲ್ಯದಿಂದಲೂ ಬಳಲುತ್ತಿದ್ದ ಕಾರಣದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ತಾಯಿಯ ಕೊನೆಯ ಕ್ಷಣಗಳನ್ನು ವಿಡಿಯೋದಲ್ಲಿ ಸೆರೆ ಹಿಡಿದಿರುವ ರಾಖಿ, ತಾಯಿಯ ಎದುರು ಕುಳಿತು ದುಃಖಿಸಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ರಾಖಿ ಸಾವಂತ್ ತಮ್ಮ ತಾಯಿಗೆ ಇರುವ ಖಾಯಿಲೆ ಕುರಿತು ಮಾತನಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡು, ತಾಯಿ ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿರುವ ಕುರಿತು ಹೇಳಿಕೊಂಡಿದ್ದರು. ಎಡದೇಹಕ್ಕೆ ಪ್ಯಾರಾಲೈಸ್ ಆಗಿರುವ ಕುರಿತು ಮಾಹಿತಿ ಹಂಚಿಕೊಂಡು, ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿರಿ ಎಂದು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ನಟ ನಂದಮೂರಿ ತಾರಕರತ್ನ ಸ್ಥಿತಿ ಗಂಭೀರ : ಮಾಜಿ ಸಿಎಂ ಚಂದ್ರಬಾಬು ನಾಯ್ಡು ಭೇಟಿ

    ರಾಖಿ ತಾಯಿ 2021ರಿಂದಲೇ ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿದ್ದಾರೆ. 2021ರ ಏಪ್ರಿಲ್‌ನಲ್ಲಿ ಅದಕ್ಕಾಗಿ ಶಸ್ತ್ರಚಿಕಿತ್ಸೆ ಕೂಡ ನಡೆಸಲಾಗಿತ್ತು. ಈ ಸರ್ಜರಿಗೆ ಸಲ್ಮಾನ್ ಖಾನ್ ಧನ ಸಹಾಯ ಮಾಡಿದ್ದರು ಎಂದು ಸ್ವತಃ ರಾಖಿಯೇ ಹೇಳಿಕೊಂಡಿದ್ದರು. ಸಂಕಷ್ಟದ ಸಮಯದಲ್ಲಿ ಸಹಾಯ ಹಸ್ತ ಚಾಚಿದ ಸಲ್ಮಾನ್ ಖಾನ್‌ ಗೆ ರಾಖಿ ಸಾವಂತ್ ಧನ್ಯವಾದ ತಿಳಿಸಿದ್ದರು. ಕೊನೆಗೂ ಯಾವುದೂ ಅವರ ತಾಯಿಯನ್ನು ಕೈ ಹಿಡಿಯಲಿಲ್ಲ. ನಿನ್ನೆ ಅವರು ಬಾರದ ಲೋಕಕ್ಕೆ ಹೋಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಖಿ ಸಾವಂತ್ ತಾಯಿಗೆ ಕ್ಯಾನ್ಸರ್: ಅಮ್ಮನಿಗಾಗಿ ಪಾರ್ಥಿಸಿ ಎಂದ ನಟಿ

    ರಾಖಿ ಸಾವಂತ್ ತಾಯಿಗೆ ಕ್ಯಾನ್ಸರ್: ಅಮ್ಮನಿಗಾಗಿ ಪಾರ್ಥಿಸಿ ಎಂದ ನಟಿ

    ವಿವಾದಿತ ಮಾತುಗಳು, ಹಾಟ್ ಹಾಟ್ ಫೋಟೋ, ಬಾಯ್ ಫ್ರೆಂಡ್ ಜೊತೆಗಿನ ತಮಾಷೆ ಮಾಡುವಂತಹ ವಿಡಿಯೋಗಳನ್ನು ಪೋಸ್ಟ್ ಮಾಡಿ ಅಭಿಮಾನಿಗಳನ್ನು ಸದಾ ರಂಜಿಸುತ್ತಿದ್ದ ಬಾಲಿವುಡ್ ವಿವಾದಿತ ತಾರೆ ರಾಖಿ ಸಾವಂತ್ (Rakhi Sawant), ಇದೇ ಮೊದಲ ಬಾರಿಗೆ ಭಾವುಕ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ತಾಯಿಯು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅಮ್ಮನಿಗಾಗಿ ನೀವೆಲ್ಲರೂ ಪಾರ್ಥಿಸಿರಿ ಎಂದು ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.

    ರಾಖಿ ಸಾವಂತ್ ತಾಯಿ ಜಯಾ ಸಾವಂತ್ (Jaya) ಬ್ರೈನ್ ಟ್ಯೂಮರ್ ಮತ್ತು ಕ್ಯಾನ್ಸರ್ (Cancer) ಕಾರಣದಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದಾರೆ. ಹಾಗಾಗಿಯೇ ಮರಾಠಿ ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಯಾಗಿದ್ದ ರಾಖಿ, ದೊಡ್ಮನೆಯಿಂದ ಹೊರಗೆ ಬಂದಿದ್ದಾರೆ. ಅಮ್ಮನ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಕಂಡ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವುದಾಗಿ ಅವರು ವಿಡಿಯೋ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ವಜ್ರಕಾಯ’ ನಟಿ ಶುಭ್ರಾ ಅಯ್ಯಪ್ಪ

    ತಾಯಿಯು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋವೊಂದನ್ನು ಹಾಕಿರುವ ಅವರು, ಆನಂತರ ವಿಡಿಯೋವೊಂದನ್ನು ಮಾಡಿ, ನಾನು ನನ್ನ ಬಾಯ್ ಫ್ರೆಂಡ್ ಆದಿಲ್ ಹಾಗೂ ಸಹೋದರ ರಾಕೇಶ್ ಮೂವರು ಅಮ್ಮನನ್ನು ಉಳಿಸಿಕೊಳ್ಳುವುದಕ್ಕಾಗಿ ಹರಸಾಹಸ ಪಡುತ್ತಿದ್ದೇವೆ. ನೀವು ಕೂಡ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ರಾಖಿನೇ ಹೇಳಿಕೊಂಡಂತೆ ಅವರ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರಂತೆ. ಕ್ಯಾನ್ಸರ್ ಜೊತೆಗೆ ಬ್ರೇನ್ ಟ್ಯೂಮರ್ ಕೂಡ ಇರುವುದರಿಂದ ಅವರ ಎಡಭಾಗವು ಪಾರ್ಶ್ವವಾಯುವಿಗೆ ತುತ್ತಾಗಿದೆ. ಕ್ಯಾನ್ಸರ್ ಶ್ವಾಸಕೋಶಕ್ಕೆ ಹರಡಿದೆ. ಈ ಹಂತದಲ್ಲಿ ಆಪರೇಷನ್ ಮಾಡುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರಂತೆ. ಸದ್ಯ ರಾಖಿ ತಾಯಿ ಮುಂಬೈನ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ಯಾನ್ಸರ್‌ನಿಂದ ಜೀವನವೇ ಬದಲಾಯ್ತು – ಸಾವನ್ನು ಗೆದ್ದ ನಟಿ ಲೀಸಾ ರೇ ಬಿಚ್ಚಿಟ್ಟ ನಿಜ ಕಥೆ

    ಕ್ಯಾನ್ಸರ್‌ನಿಂದ ಜೀವನವೇ ಬದಲಾಯ್ತು – ಸಾವನ್ನು ಗೆದ್ದ ನಟಿ ಲೀಸಾ ರೇ ಬಿಚ್ಚಿಟ್ಟ ನಿಜ ಕಥೆ

    ನವದೆಹಲಿ: ಕ್ಯಾನ್ಸರ್ (Cancer) ಕಾಯಿಲೆ ಒಮ್ಮೆ ಬಂತು ಎಂದರೆ ಅದರಿಂದ ಸಾವನ್ನು ಗೆಲ್ಲುವವರೇ ವಿರಳ. ಅಂತಹುದರಲ್ಲಿ ಸಾವನ್ನು ಗೆದ್ದಿದ್ದು ಮಾತ್ರವಲ್ಲದೇ ಸಮಾಜದಲ್ಲೂ ತನ್ನನ್ನು ತಾನು ಹಲವು ಸವಾಲುಗಳೊಂದಿಗೆ ಬದುಕಿಸಿಕೊಂಡ ನಟಿ, ರೂಪದರ್ಶಿ, ಲೇಖಕಿ ಲೀಸಾ ರೇ (Lisa Ray) ತಮ್ಮ ಆತ್ಮಕಥನವನ್ನು ಬಿಚ್ಚಿಟ್ಟಿದ್ದಾರೆ.

    ಲೀಸಾ ರೇ ಹ್ಯೂಮನ್ಸ್ ಆಫ್ ಬಾಂಬೆಯಲ್ಲಿ ತಮ್ಮ ಕ್ಯಾನ್ಸರ್ ಜೀವನದ ಬದುಕು, ಹೋರಾಟಗಳನ್ನು ತಿಳಿಸಿದ್ದಾರೆ. ತಾವು ಹೇಗೆ ಕ್ಯಾನ್ಸರ್ ರೋಗದೊಂದಿಗೆ ಹೋರಾಡಿ, ಗೆದ್ದು, ಸಮಾಜದಲ್ಲಿ ಏಳು-ಬೀಳುಗಳ ನಡುವೆ ಗೆದ್ದು ನಿಂತಿರುವ ಬಗ್ಗೆ ತಿಳಿಸಿದ್ದಾರೆ.

    ಅನಾರೋಗ್ಯದ ಹಿನ್ನೆಲೆ ಲೀಸಾ ರೇ ವೈದ್ಯರ ಬಳಿ ಹೋದಾಗ ಅವರು ತಮಗೆ ಕೆಂಪು ರಕ್ತ ಕಣಗಳು ಕಡಿಮೆಯಾಗಿರುವುದಾಗಿ ತಿಳಿಸಿದ್ದಾರೆ. ನಿಮಗೆ ಯಾವಾಗ ಬೇಕಾದರೂ ಹೃದಯ ಸ್ತಂಭನ ಆಗಬಹುದು ಎಂದು ವೈದ್ಯರು ತಿಳಿಸಿದಾಗಲೇ ಲೀಸಾ ತಮ್ಮ ಕೊನೆ ದಿನಗಳು ಸಮೀಪವಾದವು ಎಂದು ಅಂದುಕೊಂಡಿದ್ದರು. ಇದಾದ 1 ತಿಂಗಳಲ್ಲಿ ಅವರ ಆರೋಗ್ಯ ಇನ್ನಷ್ಟು ಕ್ಷೀಣಿಸಿದ್ದರಿಂದ ಮತ್ತೆ ವೈದ್ಯರನ್ನು ಸಂಪರ್ಕಿಸಿದ್ದರು. ಈ ವೇಳೆ ರಕ್ತ ಪರೀಕ್ಷೆಯಲ್ಲಿ ತಮಗೆ ಮೂಳೆ ಮಜ್ಜೆಯ ಪ್ಲಾಸ್ಮಾದ ಕ್ಯಾನ್ಸರ್ ಇರುವುದು ತಿಳಿದುಬಂದಿದೆ.

    ತಮಗೆ ಕ್ಯಾನ್ಸರ್ ಇದ್ದ ವಿಷಯವನ್ನು ತಿಳಿದ ಲೀಸಾ ಒಂದು ಕ್ಷಣ ಉಸಿರಾಡುವುದನ್ನೇ ನಿಲ್ಲಿಸಿದ್ದರು. ಆಗಾಗಲೇ ಫ್ಯಾಶನ್ ಜಗತ್ತಿನಲ್ಲಿ ಮಿಂಚಿದ್ದ ರೇ ತಮ್ಮನ್ನು ಶಾಶ್ವತ ವಿಶ್ರಾಂತಿಗೆ ಮರಳುವ ರೀತಿಯಲ್ಲಿ ಒಂದು ಬಾರಿ ಹೋಲಿಸಿಕೊಂಡರು. ಈ ವೇಳೆ ಪುಸ್ತಕ ಬರೆಯಲು ಪ್ರಯತ್ನಿಸಿದ್ದ ಅವರು ಕೆಲಸದ ಕಾರಣಕ್ಕೆ ಅದರಿಂದ ದೂರವಾದರು ಎಂದು ತಮ್ಮ ಕಷ್ಟದ ಕ್ಷಣಗಳ ಮೊದಲ ಹಂತವನ್ನು ವಿವರಿಸಿದ್ದಾರೆ.

    ‘ಆದರೆ ಕ್ಯಾನ್ಸರ್ ನನ್ನ ಜೀವನವನ್ನು ಬದಲಿಸಿತು’. ಸಾವಿಗೆ ಹತ್ತಿರವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಬಳಿಕ ಮರುಜನ್ಮವನ್ನೇನೋ ಪಡೆದ ಲೀಸಾ ಕೀಮೋಥೆರಪಿಯಿಂದಾಗಿ ತಮ್ಮ ಕೂದಲನ್ನು ಕಳೆದುಕೊಂಡಿದ್ದರು. ಇದರಿಂದ ಅವರು ತಮ್ಮ ಟ್ರಾವೆಲ್ ಚಾನೆಲ್‌ನ ಕೆಲಸವನ್ನೇ ಕಳೆದುಕೊಂಡರು. ಚಿಕಿತ್ಸೆಯ ಬಳಿಕ ವಿಗ್ ಧರಿಸಲು ಪ್ರಯತ್ನಿಸಿದ ಲೀಸಾ ಹಾಸ್ಯಾಸ್ಪದವಾಗಿ ಕಾಣಿಸಿಕೊಂಡು, ಬಳಿಕ ಅದನ್ನು ತಾವೇ ಕಳಚಿಡಲು ಮುಂದಾದರು. ತಮ್ಮ ಕೂದಲನ್ನು ಚಿಕ್ಕದಾಗಿರಿಸಿದ್ದರಿಂದ ಹಲವರು ನನ್ನನ್ನು ಇಷ್ಟಪಡುತ್ತಿರಲಿಲ್ಲ. ಚಾನೆಲ್‌ಗೂ ಉದ್ದ ಕೂದಲಿನ ಹುಡುಗಿ ಬೇಕಿತ್ತು. ಹೀಗಾಗಿ ತಾವು ಕೆಲಸ ಕಳೆದುಕೊಂಡಿದ್ದಾಗಿ ಹೃದಯವಿದ್ರಾವಕ ಕಥೆಯನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ಭಾರತದ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವೆ ಎಂದು ಅಕ್ಷಯ್ ಕುಮಾರ್

    3 ವರ್ಷಗಳ ಬಳಿಕ ತಮ್ಮ ಜೀವನ ಹಿಂದಿನಂತೆ ಮರುಕಳಿಸಿತು. ಮಾಡೆಲ್, ನಟಿಯಾಗಿ ಮತ್ತೆ ಪರದೆಯಲ್ಲಿ ಮಿಂಚಿದರು. ಆದರೆ ಮತ್ತೊಮ್ಮೆ ತನಗೆ ಕ್ಯಾನ್ಸರ್ ಕಾಡಿತ್ತು. ಆದರೆ ಈ ಬಾರಿ ತಮ್ಮ ಆತ್ಮ ಸ್ಥೈರ್ಯವನ್ನು ಕುಗ್ಗಿಸಲು ಬಿಡಲಿಲ್ಲ. ಈ ಬಾರಿ ಕೀಮೋಥೆರಪಿ ಬದಲು ಭಿನ್ನವಾಗಿ ಕ್ಯಾನ್ಸರ್‌ನೊಂದಿಗೆ ಹೋರಾಡಲು ಮುಂದಾದರು. ಧ್ಯಾನ ಮಾಡುವುದು, ಜ್ಯೂಸ್ ಸೇವಿಸುವುದು, ಮೊಳಕೆಯೊಡೆದ ಕಾಳುಗಳನ್ನು ಸೇವಿಸುವುದು ಮಾಡಿದರು. ಆಂತರಿಕವಾಗಿ ಕಾಯಿಲೆಯಿಂದ ಗುಣಮುಖವಾಗಿದ್ದಲ್ಲದೇ ಕ್ಯಾನ್ಸರ್ ಅನ್ನು ಸೋಲಿಸಿದರು ಎಂದು ತಾವು ಕ್ಯಾನ್ಸರ್ ಗೆದ್ದ ಕಥೆಯನ್ನು ಹೇಳಿದ್ದಾರೆ.

    ಸಾವು-ಬದುಕಿನ ನಡುವೆ ಹೋರಾಡಿ ಇದೀಗ 9 ವರ್ಷ ಕಳೆದಿದೆ. ನಾನು ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ, ಪುಸ್ತಕವನ್ನು ಬರೆದಿದ್ದೇನೆ, ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದ್ದೇನೆ, ಮಕ್ಕಳನ್ನು ಪಡೆದೆ, ನಾನು ಯೋಚಿಸದ ಕೆಲಸಗಳನ್ನೂ ಮಾಡಿದ್ದೇನೆ. ಸಾಮಾನ್ಯವಾಗಿ ಅಂತ್ಯವನ್ನು ತರುವ ಕಾಯಿಲೆ ತನ್ನ ಜೀವನವನ್ನು ಸಂಪೂರ್ಣವಾಗಿ ಹೇಗೆ ಬದಲಾಯಿಸಿತು, ಎಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ಹೆಚ್ಚು ಜೀವಂತವಾಗಿರುವಂತೆ ಮಾಡಿತು ಎಂದು ಲೀಸಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಲೀಸಾ ರೇ ಅವರು ದೀಪಾ ಮೆಹ್ತಾ ಅವರ ವಾಟರ್‌ನಲ್ಲಿನ ಪಾತ್ರಕ್ಕೆ ಹೆಚ್ಚು ಖ್ಯಾತಿಗಳಿಸಿದ್ದಾರೆ. ಕಸೂರ್, ವೀರಪ್ಪನ್ ಹಾಗೂ ದೋಬಾರಾ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಲಿಸಾ ರೇ ಎಂಡ್‌ಗೇಮ್, ಟಾಪ್ ಚೆಫ್ ಕೆನಡಾ, ಮರ್ಡೋಕ್ ಮಿಸ್ಟರೀಸ್, ಬ್ಲಡ್ ಟೈಸ್ ಮತ್ತು ಫೋರ್ ಮೋರ್ ಶಾಟ್ಸ್ ಪ್ಲೀಸ್! ನಂತಹ ಟಿವಿ ಶೋಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ನಿತ್ಯಾನಂದನ ದೇಶದಲ್ಲಿ ಉದ್ಯೋಗವಕಾಶ- ಹಣವಿಲ್ಲದಿದ್ರೂ ಕೈಲಾಸಕ್ಕೆ ಹೋದ್ರೆ ಕೈತುಂಬಾ ಸಂಬಳ

    Live Tv
    [brid partner=56869869 player=32851 video=960834 autoplay=true]

  • ಇಂಜೆಕ್ಷನ್ ತೆಗೆದುಕೊಳ್ಳಲು ದೇಹದ ಭಾಗಗಳು ಸ್ಪಂದಿಸುತ್ತಿಲ್ಲ – ಪುಟಿನ್ ಆರೋಗ್ಯ ಮತ್ತಷ್ಟು ಕ್ಷೀಣ

    ಮಾಸ್ಕೋ: ಉಕ್ರೇನ್ (Ukraine) ವಿರುದ್ಧ ಸಮರ ಸಾರಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ಆರೋಗ್ಯ (Health) ಮತ್ತಷ್ಟು ಕ್ಷೀಣಿಸುತ್ತಿದೆ. ದೇಹದ ಇತರ ಭಾಗಗಳು ಚುಚ್ಚುಮದ್ದು ತೆಗೆದುಕೊಳ್ಳಲು ಸ್ಪಂದಿಸದಂತಾಗಿದೆ ಎಂಬುದಾಗಿ ವೈದ್ಯರು (Doctors) ತಿಳಿಸಿದ್ದಾರೆ.

    ಪುಟಿನ್ ದೇಹದ ಮೇಲೆ ವಿಚಿತ್ರ ಗುರುತುಗಳು ಪತ್ತೆಯಾಗಿದ್ದು, ಈ ಕುರಿತ ಫೋಟೋಗಳು ಜಾಲತಾಣದಲ್ಲಿ (Social Media) ಹರಿದಾಡುತ್ತಿವೆ. ಇದು ಆರೋಗ್ಯ ಕ್ಷೀಣಿಸಿರುವ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಯತ್ನ

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ನಿವೃತ್ತ ಬ್ರಿಟಿಷ್ ಸೇನಾಧಿಕಾರಿ ಮತ್ತು ಹೌಸ್ ಆಫ್ ಲಾರ್ಡ್ಸ್ ಸದಸ್ಯ ರಿಚರ್ಡ್ ಡಾನಾಟ್, ಪುಟಿನ್ ಅವರ ಚಿತ್ರಗಳು ಅವರು ಎಷ್ಟು ಆರೋಗ್ಯವಾಗಿದ್ದಾರೆ ಎಂಬುದನ್ನೂ ಸೂಚಿಸುತ್ತದೆ. ಅವರ ಕೈಗಳ ಮೇಲ್ಬಾಗದಲ್ಲಿ ಕಪ್ಪು ಬಣ್ಣದ ಗುರುತುಗಳು ಕಾಣುತ್ತಿವೆ. ಅಲ್ಲದೇ ಪುಟಿನ್ ದೇಹದ ಇತರ ಭಾಗಗಳು ಇಂಜೆಕ್ಷನ್ (Injection) ತೆಗೆದುಕೊಳ್ಳಲು ಸ್ಪಂದಿಸುತ್ತಿಲ್ಲ. ಪುಟಿನ್ ಆರೋಗ್ಯವಾಗಿದ್ದಾರೆ, ಆದರೂ ಅವರ ಬಗ್ಗೆ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ರಿಚರ್ಡ್ ಡಾನಾಟ್ ಅವರು ಹೇಳಿದ್ದಾರೆ.

    ಕ್ಯಾನ್ಸರ್ (Cancer) ಕಾಯಿಲೆಯಿಂದ ಬಳಲುತ್ತಿರುವ ರಷ್ಯಾ ಅಧ್ಯಕ್ಷ (Russia President) ಪುಟಿನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಹೆಚ್ಚೆಂದರೆ ಅವರಿನ್ನು 3 ವರ್ಷ ಬದುಕಬಹುದೆಂದು ವೈದ್ಯರು ಹೇಳಿರುವುದಾಗಿ ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್‌ಎಸ್‌ಬಿಯ ವರದಿ ಕೆಲ ದಿನಗಳ ಹಿಂದೆ ಹೇಳಿತ್ತು. ಇದನ್ನೂ ಓದಿ: ಭಾರತಕ್ಕೆ 5 ರನ್‍ಗಳ ರೋಚಕ ಗೆಲುವು – ಹರ್ಷ ತಂದ ಅರ್ಷದೀಪ್

    ಪುಟಿನ್ ಅವರ ಕಣ್ಣಿನ ದೃಷ್ಟಿ ಗಂಭೀರವಾಗಿ ಹದಗೆಟ್ಟಿದೆ. ಅವರ ಬೆರಳುಗಳೂ ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿದ್ದವು. ಬ್ರಿಟನ್ನಲ್ಲಿ ಪುಟಿನ್ ಹತ್ಯೆ ಮಾಡಲು ಸಂಚು ರೂಪಿಸಿರುವವರಿಗೆ ತಿಳಿಯದಂತೆ ಬಚ್ಚಿಡಲಾಗಿದೆ. ದುರ್ಬಲತೆಗೆ ಕಾರಣವಾಗುತ್ತದೆ ಎಂಬ ಭಯದಿಂದ ಗ್ಲಾಸ್ ಧರಿಸಲು ಪುಟಿನ್ ತಿರಸ್ಕರಿಸುತ್ತಿದ್ದಾರೆ ಎಂಬುದಾಗಿ ಗುಪ್ತಚರ ಇಲಾಖೆ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ್ದವು.

    Live Tv
    [brid partner=56869869 player=32851 video=960834 autoplay=true]

  • ನಿತ್ಯ 5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಈ ಕಾಯಿಲೆಗಳು ಬರುತ್ತೆ!

    ನಿತ್ಯ 5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಈ ಕಾಯಿಲೆಗಳು ಬರುತ್ತೆ!

    ನಿದ್ರೆ (Sleep) ಅಂದ್ರೆ ಎಲ್ಲರಿಗೂ ಇಷ್ಟ. ಆದರೆ ಬದಲಾದ ಜೀವನಶೈಲಿ, ಒತ್ತಡದ ಬದುಕಿನಿಂದಾಗಿ ಬಹುಪಾಲು ಮಂದಿ ನಿದ್ರೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎಷ್ಟೋ ಮಂದಿ ನಿದ್ರೆಗಿಂತ ತಮ್ಮ ಕೆಲಸಗಳಿಗೇ ಹೆಚ್ಚು ಆದ್ಯತೆ ನೀಡುತ್ತಾರೆ. ಇನ್ನೂ ಕೆಲವರಿಗೆ ಮೊಬೈಲ್‌, ಲ್ಯಾಪ್‌ಟಾಪ್‌ ಕೈಯಲಿದ್ರೆ ಸಾಕು, ನಿದ್ರೆಯನ್ನೇ ಮರೆತುಬಿಡ್ತಾರೆ. ಇಂಥವರಿಗೆ ಅಧ್ಯಯನವೊಂದು ಶಾಕಿಂಗ್‌ ನ್ಯೂಸ್‌ ಕೊಟ್ಟಿದೆ. ಅದರಲ್ಲೂ ಮುಖ್ಯವಾಗಿ 50 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ನಿದ್ರೆಗೂ ಹೆಚ್ಚಿನ ಒತ್ತು ನೀಡಬೇಕು.

    50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ದಿನಕ್ಕೆ ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯ ನಿದ್ರೆ ಮಾಡಿದರೆ ಹೃದ್ರೋಗ (Heart Disease), ಮಧುಮೇಹ (Diabetes) ಮತ್ತು ಕ್ಯಾನ್ಸರ್‌ನಂತಹ (Cancer) ಬಹು ದೀರ್ಘಕಾಲದ ಕಾಯಿಲೆಗಳು ಎದುರಾಗುವ ಸಮಸ್ಯೆ ಇರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

    ಈಚೆಗೆ ಪೀರ್-ರಿವ್ಯೂಡ್ ಜರ್ನಲ್ PLOS ಮೆಡಿಸಿನ್‌ನಲ್ಲಿ ತಮ್ಮ ಸಂಶೋಧನೆಗಳನ್ನು ಸಂಶೋಧಕರ ತಂಡವು ಪ್ರಕಟಿಸಿದೆ. 50, 60 ಮತ್ತು 70 ವರ್ಷ ವಯಸ್ಸಿನ 7,864 ಬ್ರಿಟಿಷ್ ನಾಗರಿಕ ಸೇವಕರ ಡೇಟಾವನ್ನು ಸಂಶೋಧಕರ ತಂಡವು ವಿಶ್ಲೇಷಿಸಿದೆ.

    ಸಂಶೋಧನೆಗಳ ಪ್ರಕಾರ, 50ನೇ ವಯಸ್ಸಿನಲ್ಲಿ ಐದು ಗಂಟೆಗಳ ಅಥವಾ ಅದಕ್ಕಿಂತ ಕಡಿಮೆ ಅವಧಿ ನಿದ್ರೆ ಮಾಡುವವರಲ್ಲಿ ದೀರ್ಘಕಾಲದ ಕಾಯಿಲೆಗಳು ಶೇ.20 ವೃದ್ಧಿಯಾಗುತ್ತದೆ.

    50, 60 ಮತ್ತು 70ನೇ ವಯಸ್ಸಿನಲ್ಲಿ ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಕಾಲ ನಿದ್ರಿಸುವುದು ಮಲ್ಟಿಮಾರ್ಬಿಡಿಟಿಯ ಸಮಸ್ಯೆಯನ್ನು ಶೇ.30 ರಿಂದ 40 ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದನ್ನೂ ಓದಿ: ಬುದ್ಧಿವಂತರು ಯಾವಾಗಲು ಏಕಾಂಗಿಯಾಗಿಯೇ ಕೆಲಸ ಮಾಡ್ತಾರೆ.. ಯಾಕೆ ಗೊತ್ತಾ?

    ಜನರು ವಯಸ್ಸಾದಂತೆ ಅವರ ನಿದ್ರೆಯ ಅಭ್ಯಾಸಗಳು ಮತ್ತು ನಿದ್ರೆಯ ರಚನೆಯು ಬದಲಾಗುತ್ತದೆ. ಆದಾಗ್ಯೂ ರಾತ್ರಿಯಲ್ಲಿ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದು ಒಳಿತು. ಅದಕ್ಕಿಂತ ಕಡಿಮೆ ಅವಧಿಯ ನಿದ್ರೆಯಿಂದ ದೀರ್ಘಕಾಲದ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧ್ಯಯನದ ಪ್ರಮುಖ ಲೇಖಕ ಡಾ. ಸೆವೆರಿನ್ ಸಬಿಯಾ ತಿಳಿಸಿದ್ದಾರೆ.

    ನೀವು ಮಲಗುವ ಕೋಣೆ ಶಾಂತ, ಕತ್ತಲೆ, ಆರಾಮದಾಯಕ ತಾಪಮಾನದಲ್ಲಿರಬೇಕು. ರಾತ್ರಿ ಹೊತ್ತು ಅತಿಯಾಗಿ ಊಟ ಸೇವಿಸುವುದು ಸರಿಯಲ್ಲ. ಹಗಲಿನಲ್ಲಿ ವ್ಯಾಯಾಮ, ದೈಹಿಕ ಶ್ರಮ ಹಾಕಿದರೆ ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಮಾಡಬಹುದು ಎನ್ನುತ್ತಾರೆ ಡಾ. ಸಬಿಯಾ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    Live Tv
    [brid partner=56869869 player=32851 video=960834 autoplay=true]