Tag: cancer

  • ಬ್ರಿಟನ್ ಮೂರನೇ ಚಾರ್ಲ್ಸ್‌ಗೆ  ಕ್ಯಾನ್ಸರ್ ದೃಢ – ಶೀಘ್ರವೇ ಗುಣಮುಖರಾಗುವಂತೆ ಹಾರೈಸಿದ ಮೋದಿ

    ಬ್ರಿಟನ್ ಮೂರನೇ ಚಾರ್ಲ್ಸ್‌ಗೆ  ಕ್ಯಾನ್ಸರ್ ದೃಢ – ಶೀಘ್ರವೇ ಗುಣಮುಖರಾಗುವಂತೆ ಹಾರೈಸಿದ ಮೋದಿ

    ಲಂಡನ್: ಬ್ರಿಟನ್‌ನ ( Great Britain) ರಾಜ 3ನೇ ಚಾರ್ಲ್ಸ್  ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದು, ಅವರು ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹಾರೈಸಿದ್ದಾರೆ.

    ಕಿಂಗ್ ಚಾರ್ಲ್ಸ್ 3 (King Charles  III. ) ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಬಕಿಂಗ್ಹ್ಯಾಮ್‌ ಅರಮನೆ (Buckingham  Palace) ಸ್ಪಷ್ಟಪಡಿಸಿದೆ. ಅವರಿಗೆ ಕ್ಯಾನ್ಸರ್ ಇರುವುದರಿಂದ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳದೇ ಇರುವಂತೆ ವೈದ್ಯರು ತಿಳಿಸಿದ್ದಾರೆ. ಹೀಗಿದ್ದರೂ ಈ ಅವಧಿಯಲ್ಲಿ ಅಧಿಕೃತ ಕೆಲಸವನ್ನು ಮುಂದುವರಿಸುತ್ತಾರೆ ಎಂದು ಬಕಿಂಗ್ಹ್ಯಾಮ್‌ ಅರಮನೆ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ತಿಂಡಿ ಮಾಡದ್ದಕ್ಕೆ ತಾಯಿಯನ್ನು ಹತ್ಯೆಗೈದ ಕೇಸ್‍ಗೆ ಟ್ವಿಸ್ಟ್ – ಕೊಲೆ ಮಾಡಿದ್ದು ಮಗನಲ್ಲ, ತಂದೆಯಿಂದಲೇ ಕೃತ್ಯ

    ಈ ವಿಷಯದ ಬಗ್ಗೆ ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಹಾರೈಸಿದ್ದಾರೆ. “3 ಚಾರ್ಲ್ಸ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಅವರಿಗೆ ಒಳ್ಳೆ ಆರೋಗ್ಯ ಸಿಗಲಿ. ಅದಕ್ಕೆ ನಾನು ಭಾರತದ ಜನರೊಂದಿಗೆ ಸೇರಿ ಹಾರೈಸುತ್ತೇನೆ” ಎಂದು ಅವರ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಸಿಎಂ ಸಿದ್ದರಾಮಯ್ಯಗೆ 10 ಸಾವಿರ ದಂಡ – ಜನಪ್ರತಿನಿಧಿಗಳ ಕೋರ್ಟ್‌ ಆದೇಶ

    ಜೊತೆಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಅವರು ಸಹ ಚಾರ್ಲ್ಸ್‌ ಅವರಿಗೆ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದು, ಅವರು ಶೀಘ್ರವೇ ಪೂರ್ಣ ಶಕ್ತಿಯೊಂದಿಗೆ ಮರಳುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ತಿಳಿಸಿ ಹಾರೈಸಿದ್ದಾರೆ. ಇದನ್ನೂ ಓದಿ: ರಾಯಚೂರಿನ ಕೃಷ್ಣಾ ನದಿಯಲ್ಲಿ ಶಿವಲಿಂಗ, ವೆಂಕಟೇಶ್ವರ ಮೂರ್ತಿಗಳು ಪತ್ತೆ

  • ನಾನು ಬದುಕಿದ್ದೇನೆ : ವಿಡಿಯೋ ಮಾಡಿ ಶಾಕ್ ಕೊಟ್ಟ ಪೂನಂ

    ನಾನು ಬದುಕಿದ್ದೇನೆ : ವಿಡಿಯೋ ಮಾಡಿ ಶಾಕ್ ಕೊಟ್ಟ ಪೂನಂ

    ನಿನ್ನೆಯಷ್ಟೇ ಬಾಲಿವುಡ್ ನಟಿ ಪೂನಂ ಪಾಂಡೆ (Poonam Pandey) ಇನ್ಸ್ಟಾದಲ್ಲಿ ಪೂನಂ ಅವರ ಮ್ಯಾನೇಜರ್ ಗರ್ಭಕೋಶ ಕಂಠ ಕ್ಯಾನ್ಸರ್ (Cancer)ನಿಂದಾಗಿ ಪೂನಂ ನಿಧನರಾಗಿದ್ದಾರೆ (Death) ಎಂದು ಪೋಸ್ಟ್ ಹಾಕಿ ಇಡೀ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಪೂನಂ ನಿಧನ ಇಡೀ ದೇಶವೇ ಚರ್ಚೆ ಮಾಡುವಂತೆ ಮಾಡಿತ್ತು. ಪೂನಂ ಸತ್ತಿರುವ ಸಮಾಚಾರದ ಹೊರತಾಗಿ ಬೇರೆ ಯಾವ ಫೋಟೋಗಳು ಆಚೆ ಬರಲಿಲ್ಲ. ಹಾಗಾಗಿ ಸಹಜವಾಗಿಯೇ ಸಾವಿನ ಬಗ್ಗೆ ಅನುಮಾನ ಮೂಡಿತ್ತು.

    ಇದೀಗ ಪೂನಂ ಬದುಕಿರುವ ಸುದ್ದಿಯನ್ನು ಸ್ವತಃ ಪೂನಂ ಅವರೇ ನೀಡಿದ್ದಾರೆ. ತಾನು ಬದುಕಿದ್ದೇನೆ. ಹಾಗೆ ಮಸೇಜ್ ಮಾಡಲು ಕಾರಣವಿದೆ. ಗರ್ಭಕೋಶ ಕಂಠ ಕ್ಯಾನ್ಸರ್ ಕುರಿತಾದ ಜಾಗೃತಿ ಮೂಡಿಸಬೇಕಿತ್ತು. ಹಾಗಾಗಿ ಈ ಪೋಸ್ಟ್ ಮಾಡಲಾಯಿತು. ದಯವಿಟ್ಟು ಈ ಕ್ಯಾನ್ಸರ್ ಕುರಿತಂತೆ ಜಾಗೃತ ವಹಿಸಿ ಎಂದು ಪೂನಂ ವಿಡಿಯೋ ಮೂಲಕ ಹೇಳಿದ್ದಾರೆ.

    ಪೂನಂ ಬದುಕಿರುವ ಸಮಾಚಾರ ತಿಳಿದು ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ, ಜಗತ್ತನ್ನೇ ಫೂಲ್ ಮಾಡಿದ ಪೂನಂರನ್ನು ಕೆಲವರು ತರಾಟೆಗೂ ತೆಗೆದುಕೊಂಡಿದ್ದಾರೆ. ಏನೇ ಇರಲಿ.. ಈ ಮಾರ್ಗದ ಮೂಲಕ ಜಾಗೃತಿ ಮೂಡಿಸುವುದು ತರವಲ್ಲ ಎನ್ನುವುದು ಅನೇಕರ ಅಭಿಪ್ರಾಯ.

  • ಕ್ಯಾನ್ಸರ್ ಗೆ ಬಲಿಯಾದ ನಟ, ಗಾಯಕ ಜಾನಿ

    ಕ್ಯಾನ್ಸರ್ ಗೆ ಬಲಿಯಾದ ನಟ, ಗಾಯಕ ಜಾನಿ

    ಹಾಲಿವುಡ್ ನಿಂದ ದಿನಕ್ಕೊಂದು ದುಃಖದ ಸುದ್ದಿಗಳು ಬರುತ್ತಿವೆ. ನಿನ್ನೆಯಷ್ಟೇ ಬ್ರೆಜಿಲಿಯನ್ ನ ಪ್ರಸಿದ್ಧ ಗಾಯಕ ಡಾರ್ಲಿನ್ ಮೊರೈಸ್ ಜೇಡ ಕಚ್ಚಿದ ಪರಿಣಾಮ ಸಾವನ್ನಪ್ಪಿದ್ದರು. ಇದೀಗ ಆಸ್ಟ್ರೇಲಿಯಾದ (Australia) ನಟ, ಗಾಯಕ ಜಾನಿ ರೆಪೋ ಕ್ಯಾನ್ಸರ್ (Cancer) ನಿಂದಾಗಿ ನಿಧನರಾಗಿದ್ದಾರೆ.

    ಜಾನಿ ರೆಪೋ (Johnny Ruffo) 1017ರಿಂದಲೂ ಮೆದುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ತಾವು ಕ್ಯಾನ್ಸರ್ ಗೆ ತುತ್ತಾಗಿದ್ದೇನೆ ಎಂದು ತಿಳಿಯುತ್ತಿದ್ದಂತೆಯೇ ಕ್ಯಾನ್ಸರ್ ವಿರುದ್ಧ ಹೋರಾಟದ ಅಭಿಯಾನದಲ್ಲೂ ಸಕ್ರಿಯರಾಗಿದ್ದರು.

     

    ಹಲವಾರು ಸಿನಿಮಾಗಳು, ವೆಬ್ ಸರಣಿಗಳು ಮತ್ತು ಟಿವಿ ಶೋಗಳಲ್ಲೂ ಜಾನಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಅನೇಕ ಸಂಗೀತ ಕಾರ್ಯಕ್ರಮಗಳನ್ನೂ ಇವರು ನಡೆಸಿಕೊಟ್ಟಿದ್ದಾರೆ. ಶುಕ್ರವಾರವಷ್ಟೇ 35ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

  • 26ನೇ ವರ್ಷಕ್ಕೆ ಬದುಕು ಮುಗಿಸಿದ ಮಾಜಿ ವಿಶ್ವಸುಂದರಿ ಸ್ಪರ್ಧಿ!

    26ನೇ ವರ್ಷಕ್ಕೆ ಬದುಕು ಮುಗಿಸಿದ ಮಾಜಿ ವಿಶ್ವಸುಂದರಿ ಸ್ಪರ್ಧಿ!

    ಮಾಜಿ ವಿಶ್ವ ಸುಂದರಿ ಸ್ಪರ್ಧಿ ಶೆರಿಕಾ ಡಿ ಅರ್ಮಾಸ್ (26) ನಿಧನರಾಗಿದ್ದಾರೆ (Former Miss World Contestant Sherika De Armas). ಗರ್ಭ ಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಇದೀಗ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ವರದಿಯಾಗಿದೆ.

    ಸ್ಥಳೀಯ ಮಾಧ್ಯಮಗಳ ಪ್ರಕಾರ, ಕಳೆದ 2 ವರ್ಷಗಳಿಂದ ಶೆರಿಕಾ ಅವರು ಕ್ಯಾನರ್ (Cervical Cancer) ನಿಂದ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು. ಹಲವು ಬಾರಿ ಚಿಕಿತ್ಸೆಗೆ ಒಳಗಾದರೂ ಯಾವುದೇ ಪ್ರಯೋಜನವಾಗಿಲ್ಲ.

    ಶೆರಿಕಾ ಅವರು 2015ರಲ್ಲಿ ತನ್ನ ದೇಶ ಉರುಗ್ವೆಯನ್ನು ಪ್ರತಿನಿಧಿಸಿದ್ದರು. ಸದ್ಯ ಶೆರಿಕಾ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು ಹಾಗೂ ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ; 5 ವರ್ಷದ ಮಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ!

    ಮಿಸ್ ಉರುಗ್ವೆ, ಕಾರ್ಲಾ ರೊಮೆರೊ ಅವರು ನನ್ನ ಜೀವನದಲ್ಲಿ ನಾನು ಭೇಟಿಯಾದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರು ಎಂದು ಶೋಕ ವ್ಯಕ್ತಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮೆರಿಕದಲ್ಲಿ ಕ್ಯಾನ್ಸರ್ ಔಷಧಕ್ಕೆ ಬರ – ಇದರಲ್ಲಿ ಭಾರತದ ಪಾತ್ರವೇನು?

    ಅಮೆರಿಕದಲ್ಲಿ ಕ್ಯಾನ್ಸರ್ ಔಷಧಕ್ಕೆ ಬರ – ಇದರಲ್ಲಿ ಭಾರತದ ಪಾತ್ರವೇನು?

    ಮೆರಿಕದಲ್ಲಿ (America) ಕ್ಯಾನ್ಸರ್ (Cancer) ಚಿಕಿತ್ಸೆಗೆ ಬಳಕೆಯಾಗುವ ಔಷಧಗಳ ಕೊರತೆ ಉಂಟಾಗಿದೆ. ಭಾರತದಿಂದ (India) ಅಮೆರಿಕಕ್ಕೆ ಸರಬರಾಜಾಗುತ್ತಿದ್ದ ಕೀಮೋಥೆರಪಿ ಔಷಧಿಗಳ ಗುಣಮಟ್ಟದ ಬಗ್ಗೆ ಅಲ್ಲಿನ ಔಷಧ ಹಾಗೂ ಆಹಾರ ನಿಗಮ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಸರಬರಾಜನ್ನು ನಿಲ್ಲಿಸಿದ್ದರೆ ಔಷಧ ಕೊರತೆಗೆ ಪ್ರಮುಖ ಕಾರಣ.

    ಅಮೆರಿಕಕ್ಕೆ ಗುಜರಾತ್‌ನ ಅಹಮದಾಬಾದ್‌ನ ಇಂಟಾಸ್ ಫಾರ್ಮಾಸ್ಯುಟಿಕಲ್ಸ್ ಒಡೆತನದ ಘಟಕದಿಂದ 50% ಔಷಧಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಈ ಘಟಕವನ್ನು ಅಮೆರಿಕದ ಔಷಧ ಹಾಗೂ ಆಹಾರ ನಿಗಮ 2020ರ ನವೆಂಬರ್ ನಲ್ಲಿ ತಪಾಸಣೆ ನಡೆಸಿ ಗುಣಮಟ್ಟ ಹಾಗೂ ಸುರಕ್ಷತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಇದಾದ ಬಳಿಕ ಔಷಧ ಉತ್ಪಾದನೆಯನ್ನು ನಿಲ್ಲಿಸಲಾಗಿತ್ತು. ಇದನ್ನೂ ಓದಿ: ಭೂಮಿ ನಿರ್ನಾಮ ಹಂತ ತಲುಪಿದ್ರೆ ಮುಂದೇನು?

    ಇದು ಅಮೆರಿಕದಲ್ಲಿ ಹಂತ ಹಂತವಾಗಿ ಔಷಧಗಳ ಕೊರತೆ ಹಾಗೂ ಅವುಗಳ ಬೆಲೆ ಏರಿಕೆಗೆ ಕಾರಣವಾಯಿತು. ಈಗ 14 ಕ್ಯಾನ್ಸರ್ ಔಷಧಿಗಳ ಕೊರತೆಯಿದೆ. ಪ್ರಮುಖವಾಗಿ ಬಳಸಲಾಗುವ ಕೀಮೋಥೆರಪಿ ಔಷಧಿಯ ಕೊರತೆ ಹೆಚ್ಚಾಗಿದೆ. ಇದು ರೋಗಿಗಳಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಸಂಸ್ಥೆಯೊಂದರ ಸಮೀಕ್ಷಾ ವರದಿ ಸಹ ಎಚ್ಚರಿಸಿದೆ.

    ಮುಂದುವರೆದ ರಾಷ್ಟ್ರ ಎನಿಸಿಕೊಂಡಿರುವ ಅಮೆರಿಕ ಈ ಕೊರತೆಯನ್ನು ಸರಿದೂಗಿಸಲು ಪರದಾಡುತ್ತಿದೆ. ಇದರ ನಡುವೆ ಆರೋಗ್ಯ ತಜ್ಞರ ಎಚ್ಚರಿಕೆ ಮೇರೆಗೆ ಬೇರೆ ದೇಶಗಳಿಂದ ಔಷಧಿಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ. ಈಗಾಗಲೇ ಚೀನಾದ ಕಂಪನಿಯೊಂದಕ್ಕೆ ಎಫ್‌ಡಿಎ ಅನುಮತಿ ನೀಡಿದ್ದು ಸಿಪ್ಲಾಟಿನ್ ಔಷಧದ ಆಮದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 

    ಈ ರೀತಿಯ ಔಷಧಗಳ ಕೊರತೆ ಅಮೆರಿಕದ ಔಷಧಿಗಳ ಉತ್ಪಾದನೆ ಮತ್ತು ಪೂರೈಕೆ ಸರಪಳಿ ನಿರ್ವಹಣೆಯಲ್ಲಿನ ನ್ಯೂನ್ಯತೆಯನ್ನು ತೋರಿಸುತ್ತದೆ. ಅಲ್ಲದೇ ಕಾರ್ಖಾನೆಗಳ ಉತ್ಪಾದನೆಯನ್ನು ನವೀಕರಿಸಲು ಕಂಪನಿಗಳಿಗೆ ಪ್ರೋತ್ಸಾಹದ ಕೊರತೆ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. 

    ಅಮೆರಿಕದಲ್ಲಿ ಪ್ರಸ್ತುತ 19 ಲಕ್ಷ ಜನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. 2022 ರಲ್ಲಿ 609,360 ಜನ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಈಗ ಔಷಧದ ಕೊರತೆಯಿಂದ ಕ್ಯಾನ್ಸರ್‌ನಿಂದ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಕೂಡ ಇದೆ.

    ಭಾರತ ಕೈಗೊಂಡ ಕ್ರಮಗಳೇನು?

    ಇಂಟಾಸ್‌ನಲ್ಲಿ ಅಮೆರಿಕ ಔಷಧಿ ಹಾಗೂ ಆಹಾರ ಸಮಿತಿ ತಪಾಸಣೆ ನಡೆಸಿದ ನಂತರ ಹೆಚ್ಚಿನ ಭಾರತೀಯ ಔಷಧಿ ಕಂಪನಿಗಳನ್ನು ಭಾರತದ ಔಷಧ ನಿಯಂತ್ರಣ ಇಲಾಖೆ ಪರಿಶೀಲಿಸಿದೆ. ಅಲ್ಲದೇ ಕೆಮ್ಮಿನ ಸಿರಪ್‌ನಿಂದಾಗಿ 66 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ ಗ್ಯಾಂಬಿಯಾ ಘಟನೆಯ ನಂತರ ಭಾರತದಲ್ಲಿನ ಇತರ ಔಷಧೀಯ ಕಂಪನಿಗಳು ಮತ್ತು ಉತ್ಪಾದನಾ ಸೌಲಭ್ಯಗಳು ಜಾಗತಿಕ ಪರಿಶೀಲನೆ ಅಡಿಯಲ್ಲಿವೆ. ಗ್ಯಾಂಬಿಯಾ ಘಟನೆಯ ಬಗ್ಗೆ ವಿಶ್ವ ಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿತ್ತು.

    ಬಳಿಕ ಇರಾಕ್‌ನಲ್ಲಿ ಮಾರಾಟವಾಗಿರುವ ಭಾರತದಲ್ಲಿ ತಯಾರಿಸಲಾದ ಕಾಮನ್ ಕೋಲ್ಡ್ ಕೆಮ್ಮಿನ ಸಿರಪ್‌ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿತ್ತು. ಇದು ಬಳಕೆಗೆ ಯೋಗ್ಯವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿತ್ತು. ಇದರಿಂದ ಭಾರತದ ಔಷಧ ನಿಯಂತ್ರಣ ಇಲಾಖೆ ನಕಲಿ ಔಷಧಗಳನ್ನು ತಯಾರಿಸುತ್ತಿದ್ದ 18 ಫಾರ್ಮಾ ಕಂಪನಿಗಳ ಪರವಾನಗಿಯನ್ನು ರದ್ದುಗೊಳಿಸಿತ್ತು. ಇದನ್ನೂ ಓದಿ: ಗಗನಯಾತ್ರಿಗಳ ಆರೋಗ್ಯದ ಮೇಲೆ ಬಾಹ್ಯಾಕಾಶ ಪ್ರಯಾಣದ ಪರಿಣಾಮಗಳೇನು? – ಪರಿಹಾರವೇನು? 

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ ನಿಧನ

    ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ ನಿಧನ

    ಹರಾರೆ: ಹಲವು ದಿನಗಳಿಂದ ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ಜಿಂಬಾಬ್ವೆ (Zimbabwe) ಕ್ರಿಕೆಟ್ (Cricket) ದಂತಕಥೆ ಹೀತ್ ಸ್ಟ್ರೀಕ್ (49) ಅವರು ನಿಧನರಾಗಿದ್ದಾರೆ. ಕರುಳು ಹಾಗೂ ಯಕೃತ್ತಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸ್ಟ್ರೀಕ್ (Heath Streak) ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

    1993ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಎಂಟ್ರಿ ಕೊಟ್ಟಿದ್ದ ಹೀತ್ ಸ್ಟ್ರೀಕ್, ರಾವಲ್ಪಿಂಡಿಯಲ್ಲಿ ನಡೆದ 2ನೇ ಟೆಸ್ಟ್‍ನಲ್ಲೇ 8 ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದರು. ಇದನ್ನೂ ಓದಿ: ಏಕದಿನ ವಿಶ್ವಕಪ್‌ ಟೂರ್ನಿಯಿಂದಲೂ ಸಂಜು ಸ್ಯಾಮ್ಸನ್‌ ಔಟ್‌?

    ಜಿಂಬಾಬ್ವೆಯ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ಸ್ಟ್ರೀಕ್ 2000 ಮತ್ತು 2004ರ ವಿಶ್ವಕಪ್ ಟೂರ್ನಿ ವೇಳೆ ತಂಡವನ್ನ ಮುನ್ನಡೆಸಿದ್ದರು. 65 ಟೆಸ್ಟ್ ಪಂದ್ಯಗಳು ಮತ್ತು 189 ಏಕದಿನ ಪಂದ್ಯಗಳನ್ನಾಡಿರುವ ಸ್ಟ್ರೀಕ್, ಟೆಸ್ಟ್ ಕ್ರಿಕೆಟ್‍ನಲ್ಲಿ 100 ವಿಕೆಟ್ ಪಡೆದ ಏಕೈಕ ಜಿಂಬಾಬ್ವೆ ಆಟಗಾರ ಎನಿಸಿಕೊಂಡಿದ್ದರು. ಜಿಂಬಾಬ್ವೆ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ಹೀತ್ ಸ್ಟ್ರೀಕ್ ಟೆಸ್ಟ್ ಕ್ರಿಕೆಟ್‍ನಲ್ಲಿ 1,990 ರನ್, ಏಕದಿನ ಕ್ರಿಕೆಟ್‍ನಲ್ಲಿ 2,943 ರನ್ ಗಳಿಸಿದ್ದಾರೆ. ಹರಾರೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ 127 ರನ್ ಗಳಿಸಿದ್ದು ಏಕೈಕ ಟೆಸ್ಟ್ ಶತಕವಾಗಿದೆ.

    2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತರಾದ ಹೀತ್ ಸ್ಟ್ರೀಕ್ ಆ ಬಳಿಕ 2 ವರ್ಷಗಳ ಒಪ್ಪಂದದೊಂದಿಗೆ 2006ರಲ್ಲಿ ಇಂಗ್ಲೆಂಡ್‍ನ ಕೌಂಟಿ ತಂಡವಾದ ವಾರ್ವಿಕ್‍ಶೈರ್‍ನ ನಾಯಕರಾಗಿ ಆಯ್ಕೆಯಾದರು. ಆದರೆ ವೈಯಕ್ತಿಕ ಕಾರಣಗಳಿಂದ ಅವರು ಈ ಒಪ್ಪಂದವನ್ನ ಶೀಘ್ರದಲ್ಲೇ ಕೊನೆಗೊಳಿಸಬೇಕಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ನಂತರ ಜಿಂಬಾಬ್ವೆ, ಸ್ಕಾಟ್ಲೆಂಡ್, ಬಾಂಗ್ಲಾದೇಶ, ಐಪಿಎಲ್‍ನಲ್ಲಿ ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇದನ್ನೂ ಓದಿ: Asia Cup 2023: ಬ್ಯಾಟಿಂಗ್‌ ಮಾಡದೆಯೇ ಟೀಂ ಇಂಡಿಯಾ ವಿರುದ್ಧ ದಾಖಲೆ ಬರೆದ ಪಾಕಿಸ್ತಾನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಿಂಬಾಬ್ವೆ ಕ್ರಿಕೆಟ್‌ ದಿಗ್ಗಜ ಹೀತ್‌ ಸ್ಟ್ರೀಕ್‌ ಬದುಕಿದ್ದಾರೆ – ಆಪ್ತ ಹೆನ್ರಿ ಒಲೊಂಗಾ ಅಚ್ಚರಿಯ ಟ್ವೀಟ್‌

    ಜಿಂಬಾಬ್ವೆ ಕ್ರಿಕೆಟ್‌ ದಿಗ್ಗಜ ಹೀತ್‌ ಸ್ಟ್ರೀಕ್‌ ಬದುಕಿದ್ದಾರೆ – ಆಪ್ತ ಹೆನ್ರಿ ಒಲೊಂಗಾ ಅಚ್ಚರಿಯ ಟ್ವೀಟ್‌

    ಜೋಹಾನ್ಸ್‌ಬರ್ಗ್‌: ಜಿಂಬಾಬ್ವೆ (Zimbabwe) ಕ್ರಿಕೆಟ್‌ ದಿಗ್ಗಜ ಹೀತ್‌ ಸ್ಟ್ರೀಕ್‌ (49) (Heath Streak) ಕೊನೆಯುಸಿರೆಳೆದಿದ್ದಾರೆ. ಕರುಳು ಹಾಗೂ ಯಕೃತ್‌ ಕ್ಯಾನ್ಸರ್‌ ಕಾಯಿಲೆಯಿಂದ ಬಳುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಮಾಜಿ ಸಹೋದ್ಯೋಗಿ ಮಾಹಿತಿ ಹಂಚಿಕೊಂಡಿರುವುದಾಗಿ ವರದಿಯಾಗಿತ್ತು. ಆದರೀಗ ಹೀತ್‌ಸ್ಟ್ರೀಕ್‌ ಮೃತಪಟ್ಟಿಲ್ಲ ಬದುಕಿದ್ದಾರೆ ಎಂಬ ಅಚ್ಚರಿಯ ಸುದ್ದಿಯನ್ನ ಅವರ ಮಾಜಿ ಸಹ ಆಟಗಾರ ಹೆನ್ರಿ ಒಲೊಂಗಾ (Henry Olonga) ಹಂಚಿಕೊಂಡಿದ್ದಾರೆ.

    ಮೊದಲಿಗೆ ಹೀತ್‌ ಸ್ಟ್ರೀಕ್‌ ಮೃತಪಟ್ಟಿದ್ದಾರೆ ಎಂದು ತಿಳಿದು ಹೆನ್ರಿ ಒಲೊಂಗಾ ಕೂಡ ಟ್ವೀಟ್‌ ಮೂಲಕ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್‌ ಮಾಡಿದ, ಹೀತ್‌ ಸ್ಟ್ರೀಕ್‌ ಜೊತೆಗಿನ ವಾಟ್ಸ್‌ಆಪ್‌ ಸಂಭಾಷಣೆಯ ಸ್ಕ್ರೀನ್‌ ಶಾಟ್‌ ಹಂಚಿಕೊಂಡಿದ್ದಾರೆ. ಅದರಲ್ಲಿ ಹೀತ್‌ ಸ್ಟ್ರೀಕ್‌ ಅವರ ಕಡೆಯಿಂದ ‘ನಾನಿನ್ನೂ ಬದುಕಿದ್ದೇನೆ’ ಎಂದು ಉತ್ತರ ಬರೆದಿರುವುದನ್ನು ಕಾಣಬಹುದಾಗಿದೆ. ಹೀತ್‌ ಸ್ಟ್ರೀಕ್‌ ಸತ್ತಿದ್ದಾರೆ ಎಂಬ ಸುದ್ದಿ ತಪ್ಪಾಗಿ ಹಬ್ಬಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಇದರ ವೈಭವೀಕರಣ ನಡೆದಿದೆ. ಅವರಿಂದಲೇ ಈಗ ಮಾಹಿತಿ ಲಭ್ಯವಾಗಿದ್ದು, 3ನೇ ಅಂಪೈರ್‌ ಅವರನ್ನು ಮರಳಿ ಕರೆತಂದಿದ್ದಾರೆ. ಪ್ರೀತಿಯ ಜನರೆ ಅವರಿನ್ನೂ ಬದುಕಿದ್ದಾರೆ ಎಂದು ಹೆನ್ರಿ ಒಲೊಂಗಾ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬ್ಯಾಕಪ್‌ ಪಟ್ಟಿ ಸೇರಿದ ಟೀಂ ಇಂಡಿಯಾ ಸ್ಟಾರ್‌ – ವಿಶ್ವಕಪ್‌ ಆಡುವ ಸಂಜು ಸ್ಯಾಮ್ಸನ್‌ ಕನಸು ಭಗ್ನ?

    ಜಿಂಬಾಬ್ವೆ ಕ್ರಿಕೆಟ್‌ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಪೈಕಿ ಹೀತ್‌ ಸ್ಟ್ರೀಕ್‌ ಕೂಡ ಒಬ್ಬರು. 12 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಅವರು, ಆಲ್‌ರೌಂಡ್‌ ಆಟದ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು. 1993ರಲ್ಲಿ ಪಾಕಿಸ್ತಾನ (Pakistan) ವಿರುದ್ಧ ನಡೆದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ಎಂಟ್ರಿ ಕೊಟ್ಟಿದ್ದ ಹೀತ್‌ ಸ್ಟ್ರೀಕ್‌, ರಾವಲ್ಪಿಂಡಿಯಲ್ಲಿ ನಡೆದ 2ನೇ ಟೆಸ್ಟ್‌ನಲ್ಲೇ 8 ವಿಕೆಟ್‌ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದರು. ಇದನ್ನೂ ಓದಿ: AsiaCup 2023: ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಬ್ಯೂಟಿಫುಲ್‌ ನಿರೂಪಕಿಯರು ಇವರೇ

    ಜಿಂಬಾಬ್ವೆಯ ಶ್ರೇಷ್ಠ ಕ್ರಿಕೆಟ್‌ ಆಟಗಾರರಲ್ಲಿ ಒಬ್ಬರಾದ ಸ್ಟ್ರೀಕ್‌ 2000 ಮತ್ತು 2004ರ ವಿಶ್ವಕಪ್‌ ಟೂರ್ನಿ ವೇಳೆ ತಂಡವನ್ನ ಮುನ್ನಡೆಸಿದ್ದರು. 65 ಟೆಸ್ಟ್ ಪಂದ್ಯಗಳು ಮತ್ತು 189 ಏಕದಿನ ಪಂದ್ಯಗಳನ್ನಾಡಿರುವ ಸ್ಟ್ರೀಕ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆದ ಏಕೈಕ ಜಿಂಬಾಬ್ವೆ ಆಟಗಾರ ಎನಿಸಿಕೊಂಡಿದ್ದರು. ಜಿಂಬಾಬ್ವೆ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಿದ್ದ ಹೀತ್‌ ಸ್ಟ್ರೀಕ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 1,990 ರನ್‌, ಏಕದಿನ ಕ್ರಿಕೆಟ್‌ನಲ್ಲಿ 2,943 ರನ್‌ ಗಳಿಸಿದ್ದಾರೆ. ಹರಾರೆಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಪಂದ್ಯದಲ್ಲಿ 127 ರನ್‌ ಗಳಿಸಿದ್ದು ಏಕೈಕ ಟೆಸ್ಟ್‌ ಶತಕವಾಗಿದೆ.

    2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಹೀತ್ ಸ್ಟ್ರೀಕ್ ಆ ಬಳಿಕ 2 ವರ್ಷಗಳ ಒಪ್ಪಂದದೊಂದಿಗೆ 2006 ರಲ್ಲಿ ಇಂಗ್ಲೆಂಡ್‌ನ ಕೌಂಟಿ ತಂಡವಾದ ವಾರ್ವಿಕ್‌ಶೈರ್‌ನ ನಾಯಕರಾಗಿ ಆಯ್ಕೆಯಾದರು. ಆದ್ರೆ ವೈಯಕ್ತಿಕ ಕಾರಣಗಳಿಂದ ಅವರು ಈ ಒಪ್ಪಂದವನ್ನ ಶೀಘ್ರದಲ್ಲೇ ಕೊನೆಗೊಳಿಸಬೇಕಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿ ನಂತರ ಜಿಂಬಾಬ್ವೆ, ಸ್ಕಾಟ್ಲೆಂಡ್, ಬಾಂಗ್ಲಾದೇಶ, ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡಗಳಿಗೆ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜಿಂಬಾಬ್ವೆ ಕ್ರಿಕೆಟ್‌ ದಂತಕಥೆ ಹೀತ್ ಸ್ಟ್ರೀಕ್ ನಿಧನ

    ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜಿಂಬಾಬ್ವೆ ಕ್ರಿಕೆಟ್‌ ದಂತಕಥೆ ಹೀತ್ ಸ್ಟ್ರೀಕ್ ನಿಧನ

    ಜೋಹಾನ್ಸ್‌ಬರ್ಗ್: ಹಲವು ದಿನಗಳಿಂದ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ (49) (Heath Streak) ಅವರು ನಿಧನರಾಗಿದ್ದಾರೆ. ಕರುಳು ಹಾಗೂ ಯಕೃತ್ತಿನ ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ಸ್ಟ್ರೀಕ್ ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊನೆಗೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

    1993ರಲ್ಲಿ ಪಾಕಿಸ್ತಾನ (Pakistan) ವಿರುದ್ಧ ನಡೆದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ಎಂಟ್ರಿ ಕೊಟ್ಟಿದ್ದ ಹೀತ್‌ ಸ್ಟ್ರೀಕ್‌, ರಾವಲ್ಪಿಂಡಿಯಲ್ಲಿ ನಡೆದ 2ನೇ ಟೆಸ್ಟ್‌ನಲ್ಲೇ 8 ವಿಕೆಟ್‌ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದರು. ಇದನ್ನೂ ಓದಿ: ಬ್ಯಾಕಪ್‌ ಪಟ್ಟಿ ಸೇರಿದ ಟೀಂ ಇಂಡಿಯಾ ಸ್ಟಾರ್‌ – ವಿಶ್ವಕಪ್‌ ಆಡುವ ಸಂಜು ಸ್ಯಾಮ್ಸನ್‌ ಕನಸು ಭಗ್ನ?

    ಜಿಂಬಾಬ್ವೆಯ ಶ್ರೇಷ್ಠ ಕ್ರಿಕೆಟ್‌ ಆಟಗಾರರಲ್ಲಿ ಒಬ್ಬರಾದ ಸ್ಟ್ರೀಕ್‌ 2000 ಮತ್ತು 2004ರ ವಿಶ್ವಕಪ್‌ ಟೂರ್ನಿ ವೇಳೆ ತಂಡವನ್ನ ಮುನ್ನಡೆಸಿದ್ದರು. 65 ಟೆಸ್ಟ್ ಪಂದ್ಯಗಳು ಮತ್ತು 189 ಏಕದಿನ ಪಂದ್ಯಗಳನ್ನಾಡಿರುವ ಸ್ಟ್ರೀಕ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆದ ಏಕೈಕ ಜಿಂಬಾಬ್ವೆ ಆಟಗಾರ ಎನಿಸಿಕೊಂಡಿದ್ದರು. ಜಿಂಬಾಬ್ವೆ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಿದ್ದ ಹೀತ್‌ ಸ್ಟ್ರೀಕ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 1,990 ರನ್‌, ಏಕದಿನ ಕ್ರಿಕೆಟ್‌ನಲ್ಲಿ 2,943 ರನ್‌ ಗಳಿಸಿದ್ದಾರೆ. ಹರಾರೆಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಪಂದ್ಯದಲ್ಲಿ 127 ರನ್‌ ಗಳಿಸಿದ್ದು ಏಕೈಕ ಟೆಸ್ಟ್‌ ಶತಕವಾಗಿದೆ. ಇದನ್ನೂ ಓದಿ: AsiaCup 2023: ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಬ್ಯೂಟಿಫುಲ್‌ ನಿರೂಪಕಿಯರು ಇವರೇ

    2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಹೀತ್ ಸ್ಟ್ರೀಕ್ ಆ ಬಳಿಕ 2 ವರ್ಷಗಳ ಒಪ್ಪಂದದೊಂದಿಗೆ 2006 ರಲ್ಲಿ ಇಂಗ್ಲೆಂಡ್‌ನ ಕೌಂಟಿ ತಂಡವಾದ ವಾರ್ವಿಕ್‌ಶೈರ್‌ನ ನಾಯಕರಾಗಿ ಆಯ್ಕೆಯಾದರು. ಆದ್ರೆ ವೈಯಕ್ತಿಕ ಕಾರಣಗಳಿಂದ ಅವರು ಈ ಒಪ್ಪಂದವನ್ನ ಶೀಘ್ರದಲ್ಲೇ ಕೊನೆಗೊಳಿಸಬೇಕಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿ ನಂತರ ಜಿಂಬಾಬ್ವೆ, ಸ್ಕಾಟ್ಲೆಂಡ್, ಬಾಂಗ್ಲಾದೇಶ, ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡಗಳಿಗೆ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

    ಜಿಂಬಾಬ್ವೆ ತಂಡದ ಮಾಜಿ ಸ್ಪಿನ್‌ ಮಾಂತ್ರಿಕ ಹೆನ್ರಿ ಒಲೊಂಗಾ ಈ ವಿಷಯವನ್ನ ತಮ್ಮ ಟ್ವಿಟ್ಟರ್‌ (X) ಖಾತೆಯಲ್ಲಿ ಹಂಚಿಕೊಂಡಿದ್ದು, ಕಂಬನಿ ಮಿಡಿದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಯಾನ್ಸರ್‌ ಭಯ ಬೇಡ – ಕಿಮೋಥೆರಪಿ ಎಂದರೇನು? ಅದು ಹೇಗೆ ಕೆಲಸ ಮಾಡುತ್ತೆ?

    ಕ್ಯಾನ್ಸರ್‌ ಭಯ ಬೇಡ – ಕಿಮೋಥೆರಪಿ ಎಂದರೇನು? ಅದು ಹೇಗೆ ಕೆಲಸ ಮಾಡುತ್ತೆ?

    ಕ್ಯಾನ್ಸರ್‌ (Cancer) ಎಂಬ ಮಹಾಮಾರಿ ರೋಗ ಸದ್ಯ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಾಡುತ್ತಿದೆ. ಕೆಲವು ಮಕ್ಕಳಿಗೆ ಹುಟ್ಟಿದ ಕೆಲವು ದಿನಗಳು, ತಿಂಗಳಲ್ಲಿ ಕ್ಯಾನ್ಸರ್‌ ರೋಗ ಅಂಟಿಕೊಂಡರೆ ಇನ್ನುಳಿದವರಿಗೆ ಯಾವಾಗ ಬರುತ್ತದೆ? ಹೇಗೆ ಬರುತ್ತದೆ ಎಂಬುದನ್ನು ಹೇಳಲು ಅಸಾಧ್ಯ. ಕ್ಯಾನ್ಸರ್‌ ರೋಗದಲ್ಲಿ ಅನೇಕ ರೀತಿಯ ವಿಧಗಳಿದ್ದು, ನಾಲ್ಕು ಹಂತಗಳಲ್ಲಿರುತ್ತದೆ. ಈ ರೋಗ ಮೊದಲನೆಯ ಹಂತ ಮತ್ತು ಎರಡನೆಯ ಹಂತದಲ್ಲಿದ್ದರೆ ಅದನ್ನು ಆಪರೇಷನ್‌ ಅಥವಾ ಔಷಧಿಗಳ ಮೂಲಕ ಸರಿಪಡಿಸಬಹುದು ಎಂದು ಡಾಕ್ಟರ್‌ ಹೇಳುತ್ತಾರೆ. ಕ್ಯಾನ್ಸರ್‌ ರೋಗಿಗಳಿಗೆ ಕಿಮೋಥೆರಪಿ (Chemotherapy) ಎಂಬ ಚಿಕಿತ್ಸೆಯನ್ನು ನೀಡುತ್ತಾರೆ ಎಂಬುದನ್ನು ನೀವೆಲ್ಲರೂ ತಿಳಿದಿರಬಹುದು. ಆದರೆ ಇದು ಮಾನವ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.

    ಕಿಮೋಥೆರಪಿ ಎಂದರೆ ಮಾನವ ದೇಹದಲ್ಲಿ ಉಂಟಾಗುವ ಕ್ಯಾನ್ಸರ್‌ ಜೀವಕೋಶವನ್ನು ನಾಶಪಡಿಸಲು ಬಳಸುವ ಒಂದು ಔಷಧಿಯಾಗಿದೆ. ಈ ಚಿಕಿತ್ಸೆಯನ್ನು ನೀಡುವುದರಿಂದ ದೇಹದಲ್ಲಿ ಕ್ಯಾನ್ಸರ್‌ ಕೋಶ ಬೆಳೆಯದಂತೆ ಹಾಗೂ ಕೋಶ ಬೆಳೆದು ವಿಭಜನೆಯಾಗದಂತೆ ಕಿಮೋಥೆರಪಿ ತಡೆಗಟ್ಟುತ್ತದೆ. ಇದು ರಕ್ತದ ಮುಖಾಂತರ ಮಾನವ ದೇಹಕ್ಕೆ ಹೊಕ್ಕು, ದೇಹದ ಎಲ್ಲಾ ಭಾಗವನ್ನು ಆವರಿಸಿಕೊಳ್ಳುತ್ತದೆ. ಕಿಮೋಥೆರಪಿಯಲ್ಲಿ ಅನೇಕ ರೀತಿಯ ವಿಧಗಳಿವೆ. ಈ ಚಿಕಿತ್ಸೆಗೆ ಬಳಸುವ ಔಷಧಿಗಳು ಪವರ್‌ಫುಲ್‌ ಆಗಿದ್ದು ಕ್ಯಾನ್ಸರ್‌ ಕೋಶಗಳ ವಿರುದ್ಧ ಹೋರಾಡುತ್ತದೆ. ಕ್ಯಾನ್ಸರ್‌ ಜೀವಕೋಶಗಳು ಅತಿವೇಗವಾಗಿ ಮಾನವ ದೇಹದಲ್ಲಿ ಹರಡಿಕೊಳ್ಳುತ್ತದೆ. ಆದ್ದರಿಂದ ಕಿಮೋಥೆರಪಿ ಇದನ್ನು ತಡೆಗಟ್ಟುವಲ್ಲಿ ಅತ್ಯಂತ ಸಹಕಾರಿಯಾಗಿದೆ.

    ಕಿಮೋಥೆರಪಿ ಚಿಕಿತ್ಸೆ ರಕ್ತದ ಮೂಲಕ ಇಡೀ ದೇಹವನ್ನು ಆವರಸಿಕೊಳ್ಳುವ ಸಂದರ್ಭ ಸಾಮಾನ್ಯ ಜೀವಕೋಶಗಳಿಗೆ ಹಾನಿಯುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದಾಗಿ ಕ್ಯಾನ್ಸರ್‌ ರೋಗಿ ಹಲವು ಅಡ್ಡ ಪರಿಣಾಮವನ್ನು ಎದರಿಸುತ್ತಾರೆ. ಅಂದರೆ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗುವ ರೋಗಿಯ ತಲೆ ಕೂದಲು ಸಂಪೂರ್ಣವಾಗಿ ಉದುರುತ್ತದೆ. ಅಲ್ಲದೇ ವಾಕರಿಕೆ, ತಲೆಸುತ್ತು, ಸುಸ್ತು ಮುಂತಾದ ಅಡ್ಡಪರಿಣಾಮಗಳನ್ನು ಎದುರಿಸುತ್ತಾರೆ. ಈ ಥೆರಪಿಯನ್ನು ಕೆಲವು ಡಾಕ್ಟರ್‌ಗಳು ಆಪರೇಷನ್‌ ಬಳಿಕ ಮಾಡುತ್ತಾರೆ. ಇನ್ನೂ ಕೆಲವರು ಆಪರೇಷನ್‌ಗೂ ಮುನ್ನ ಚಿಕಿತ್ಸೆ ನೀಡಿ ಕ್ಯಾನ್ಸರ್‌ ಕೋಶಗಳು ಹರಡದಂತೆ ತಡೆಗಟ್ಟಿ ನಂತರ ಆಪರೇಷನ್‌ಗೆ ಮುಂದಾಗುತ್ತಾರೆ.

    ಕಿಮೋಥೆರಪಿ ಚಿಕಿತ್ಸೆಯನ್ನು ಎರಡು ರೀತಿಯಲ್ಲಿ ನೀಡಬಹುದಾಗಿದೆ. ಮೊದಲನೆಯದು ಇಂಜೆಕ್ಷನ್‌ ರೂಪದಲ್ಲಿ ಇದನ್ನು ನೀಡಬಹುದು. ಪ್ರಸ್ತುತ ಇದು ಮಾತ್ರೆಗಳ ರೂಪದಲ್ಲಿ ಕೂಡಾ ಲಭ್ಯವಿದೆ. ಕ್ಯಾನ್ಸರ್‌ ರೋಗಕ್ಕೆ ಮಾತ್ರವಲ್ಲದೇ ಬೇರೆ ರೋಗಗಳಿಗೂ ಈ ಕಿಮೋಥೆರಪಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಕಿಮೋಥೆರಪಿ ಎಂಬುದು ಸುಮಾರು 40-50 ವರ್ಷಗಳ ಹಿಂದೆ ಆವಿಷ್ಕಾರವಾಗಿರುವಂತಹ ಚಿಕಿತ್ಸೆಯಾಗಿದೆ.

    ಕಿಮೋಥೆರಪಿ ಎಂಬುದು ಕೇವಲ ಒಂದು ಡ್ರಗ್ಸ್‌ ಅನ್ನು ಒಳಗೊಂಡಿಲ್ಲ. ಇದು ಸುಮಾರು ಎರಡರಿಂದ ಮೂರು ಹೈ ಡೋಸೇಜ್ ಡ್ರಗ್ಸ್‌ ಅನ್ನು ಒಳಗೊಂಡಿದ್ದು, ಮಾನವ ದೇಹದಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದನ್ನು ನಾಲ್ಕನೇ ಹಂತದಲ್ಲಿರುವ ಕ್ಯಾನ್ಸರ್‌ ರೋಗಿಗಳಿಗೆ ಅಗತ್ಯವಾಗಿ ಕೊಡಲಾಗುತ್ತದೆ. ಕಿಮೋಥೆರಪಿ ಚಿಕಿತ್ಸೆ ಸುಮಾರು 90% ಕ್ಯಾನ್ಸರ್‌ ರೋಗವನ್ನು ಗುಣಪಡಿಸುತ್ತದೆ. ಕಿಡ್ನಿ ಕ್ಯಾನ್ಸರ್‌ ಮತ್ತು ಚರ್ಮ ಕ್ಯಾನ್ಸರ್‌ಗಳಂತಹ ರೋಗಗಳಿಗೆ ಇದು ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.‌

    ಸ್ತನ ಕ್ಯಾನ್ಸರ್‌, ಧ್ವನಿಪೆಟ್ಟಿಗೆ ಕ್ಯಾನ್ಸರ್‌ನಂತಹ ಕೆಲವು ಕ್ಯಾನ್ಸರ್‌ ರೋಗಗಳಿಗೆ ಕಿಮೋಥೆರಪಿ ಚಿಕಿತ್ಸೆ ನೀಡಿದರೆ ಆಪರೇಷನ್‌ ಮಾಡುವ ಅಗತ್ಯವಿಲ್ಲ. ಇದರಲ್ಲಿಯೇ ಕ್ಯಾನ್ಸರ್‌ ರೋಗ ವಾಸಿಯಾಗುತ್ತದೆ. ಕಿಮೋಥೆರಪಿಯೊಂದಿಗೆ ರೇಡಿಯೇಷನ್‌ ಚಿಕಿತ್ಸೆಯನ್ನು ಕೊಡುವುದರಿಂದ ಕೆಲವು ಕ್ಯಾನ್ಸರ್‌ ರೋಗಿಗಳಿಗೆ ಆಪರೇಷನ್‌ ಮಾಡುವುದನ್ನು ತಪ್ಪಿಸಬಹುದಾಗಿದೆ.

    ಕಿಮೋಥೆರಪಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಇನ್ಫೆಕ್ಷನ್‌ ಆಗದ ರೀತಿಯಲ್ಲಿ ಎಚ್ಚರವಹಿಸುವುದು ತುಂಬಾ ಅಗತ್ಯವಾಗಿರುತ್ತದೆ. ಈ ರೀತಿಯಾದಲ್ಲಿ ರೋಗಿ ತುಂಬಾ ಸೀರಿಯಸ್‌ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಸಮಯದಲ್ಲಿ ತುಂಬಾ ಜಾಗೃತರಾಗಿರಬೇಕು. ಕಿಮೋಥೆರಪಿ ಚಿಕಿತ್ಸೆಯಿಂದ ಬಿಳಿ ರಕ್ತಕಣ, ಕೆಂಪು ರಕ್ತಕಣ ಅಥವಾ ಪ್ಲೇಟ್‌ಲೆಟ್‌ ಕೌಂಟ್‌ ಕೂಡಾ ಕಡಿಮೆಯಾಗುವ ಸಂಭವವಿದೆ. ಕಿಮೋಥೆರಪಿ ಚಿಕಿತ್ಸೆ ಎಂಬುದು ದಿನಾ ನೀಡುವ ಚಿಕಿತ್ಸೆಯಲ್ಲ. ಇದನ್ನು ಎರಡರಿಂದ ಮೂರು ವಾರಗಳಿಗೊಮ್ಮೆ ನೀಡಲಾಗುತ್ತದೆ. ಮಾತ್ರೆಗಳು ಕೂಡಾ ಎರಡು ವಾರಗಳಿಗೊಮ್ಮೆ ನೀಡಲಾಗುತ್ತದೆ.

    ಸುಮಾರು 30ರಿಂದ 40%ನಷ್ಟು ಕ್ಯಾನ್ಸರ್‌ ರೋಗಗಳು ಕೇವಲ ಕಿಮೋಥೆರಪಿ ಚಿಕಿತ್ಸೆಯಿಂದ ಗುಣವಾದರೆ 60ರಿಂದ 70%ನಷ್ಟು ಕ್ಯಾನ್ಸರ್‌ ರೋಗಗಳು ಆಪರೇಷನ್‌, ಕಿಮೋಥೆರಪಿ ಮತ್ತು ರೇಡೀಯೇಷನ್‌ ಚಿಕಿತ್ಸೆಯನ್ನು ನೀಡುವ ಮೂಲಕ ಗುಣಪಡಿಸಬಹುದು. ಕಿಮೋಥೆರಪಿ ಎಂದಾಗ ಜನರು ಭಯಬೀಳುವುದು ಜಾಸ್ತಿ. ಕಿಮೋಥೆರಪಿ ಚಿಕಿತ್ಸೆಗೆ ಯಾರೂ ಭಯಪಡಬೇಕಾದ ಅಗತ್ಯವಿಲ್ಲ. ಇದು ಕ್ಯಾನ್ಸರ್‌ ರೋಗವನ್ನು ಗುಣಪಡಿಸುತ್ತದೆ ಮತ್ತು ಕಿಮೋಥೆರಪಿ ಚಿಕಿತ್ಸೆಯಿಂದ ಉಂಟಾಗುವ ಸೈಡ್‌ ಎಫೆಕ್ಟ್ಸ್‌ಗೂ ಚಿಕಿತ್ಸೆಗಳು ಆಸ್ಪತ್ರೆಗಳಲ್ಲಿ ಲಭ್ಯವಿದೆ. ಆದ್ದರಿಂದ ಭಯಪಡದೇ ಚಿಕಿತ್ಸೆಯನ್ನು ಪಡೆದುಕೊಂಡು ಕಾಯಿಲೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ. ಇದನ್ನೂ ಓದಿ: ಅಮೆರಿಕದ ಟಾಪ್ ಸೀಕ್ರೆಟ್ ಪ್ಲೇಸ್ – ಅಂಥಾದ್ದೇನಿದೆ ಏರಿಯಾ 51ರಲ್ಲಿ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಯಾನ್ಸರ್ ಪೀಡಿತ ಪುಟ್ಟ ಅಭಿಮಾನಿ ಭೇಟಿ ಮಾಡಿದ ಕಿಚ್ಚ ಸುದೀಪ್

    ಕ್ಯಾನ್ಸರ್ ಪೀಡಿತ ಪುಟ್ಟ ಅಭಿಮಾನಿ ಭೇಟಿ ಮಾಡಿದ ಕಿಚ್ಚ ಸುದೀಪ್

    ಭಿನಯ ಚಕ್ರವರ್ತಿ ಸುದೀಪ್ (Sudeep) ತೆರೆಮೇಲೆ ಮಾತ್ರವಲ್ಲ ತೆರೆಹಿಂದೆಯೂ ಅವರು ರಿಯಲ್ ಹೀರೋ. ಕಷ್ಟದಲ್ಲಿದ್ದವರಿಗೆ ಜೊತೆಯಾಗಿ ನಿಲ್ಲುವ ಸೂಪರ್ ಸ್ಟಾರ್. ಕಿಚ್ಚನ ಹೃದಯವಂತಿಕೆ, ಸರಳತೆ ಬಗ್ಗೆ ಹೊಸದಾಗಿ ವಿವರಿಸುವ ಅಗತ್ಯವಿಲ್ಲ. ಕೋಟಿಗೊಬ್ಬನ್ನು ಒಮ್ಮೆಯಾದ್ರೂ ಭೇಟಿಯಾಗಬೇಕು. ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಪ್ರತಿಯೊಬ್ಬ ಸುದೀಪಿಯನ್ಸ್ ಗೂ ಇದ್ದೇ ಇರುತ್ತದೆ. ಆ ಆಸೆ ಈಡೇರಿಕೆಗೆ ಸಮಯ ಕೂಡಿ ಬರಬೇಕು ಅಷ್ಟೇ. ಈಗ ಸುದೀಪ್ ವಿಶೇಷ ಅಭಿಮಾನಿಯನ್ನು(Fan)  ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

    ಕ್ಯಾನ್ಸರ್ (Cancer) ನಿಂದ ಬಳಲುತ್ತಿರುವ ಸಾಕ್ಷಿ (Sakshi) ಎಂಬ ಬಾಲಕಿ ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿ. ಜೀವನದಲ್ಲಿ ಒಮ್ಮೆಯಾದ್ರೂ ತಮ್ಮ ನೆಚ್ಚಿನ ಸ್ಟಾರ್ ಭೇಟಿಯಾಗಬೇಕು ಎಂಬುದು ಸಾಕ್ಷಿ ಆಸೆ. ಬಾಲಕಿಯ ಆಸೆ ಮತ್ತು ಆರೋಗ್ಯ ಸಮಸ್ಯೆ ಬಗ್ಗೆ ತಿಳಿದುಕೊಂಡ ಕಿಚ್ಚ ಸುದೀಪ್ ತನ್ನ ಅಭಿಮಾನಿ ಹಾಗೂ ಅವರ ಕುಟುಂಬಸ್ಥರನ್ನ ಭೇಟಿ ಮಾಡಿದ್ದಾರೆ. ಇದನ್ನೂ ಓದಿ:‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ: ರೆಟ್ರೋ ಲುಕ್ ಫೋಟೋ ಲೀಕ್

    ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಕ್ಷಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ‘ಆಟೋಗ್ರಾಫ್’ ನೀಡಿ ಪ್ರೀತಿಯಿಂದ ಅಭಿಮಾನಿಗೆ ಅಪ್ಪುಗೆ ಕೊಟ್ಟಿದ್ದಾರೆ. ಇದನ್ನೂ ಓದಿ:ಕೆಜಿಎಫ್ ತಾತ ಕೊನೆ ಸಿನಿಮಾ: ಜುಲೈ 07ಕ್ಕೆ ನ್ಯಾನೋ ನಾರಾಯಣಪ್ಪ ತೆರೆಗೆ

     

    ಸುದೀಪ್ ಭೇಟಿಯಾದ ಖುಷಿ ಕ್ಷಣಗಳನ್ನು ಹಂಚಿಕೊಂಡಿರುವ ಸಾಕ್ಷಿ, ನನಗೆ ಸುದೀಪ್ ಸರ್ ಇಷ್ಟ. ರನ್ನ ಸಿನಿಮಾದ ಥಿತಲಿ ಹಾಡು ನನಗೆ ಸ್ಪೂರ್ತಿ ಎಂದಿದ್ದಾರೆ. ಕೋಟಿಗೊಬ್ಬನ್ನು ನೋಡಿ ಆ ಪುಟ್ಟ ಅಭಿಮಾನಿಯ ಖುಷಿಗೆ ಪಾರವೇ ಇಲ್ಲ. ಕಿಚ್ಚನ ಈ ಹೃದಯವಂತಿಕೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಸಲಾಂ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]