ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ನಟ ಶಿವರಾಜ್ ಕುಮಾರ್ (Shiva Rajkumar) ಅವರು ಅಮೆರಿಕದಲ್ಲಿ ಸರ್ಜರಿ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನಟ ಶಿವಣ್ಣಗೆ ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ನಲ್ಲಿ ಸರ್ಜರಿ ನಡೆದಿತ್ತು. ಯಶಸ್ವಿ ಸರ್ಜರಿ ಬಳಿಕ ಡಿಸ್ಚಾರ್ಜ್ ಆಗಿದ್ದಾರೆ. ಸರ್ಜರಿ ಬಳಿಕ ಎರಡು ಚೆಕಪ್ ಬಾಕಿ ಇದ್ದು, ನಂತರ ಸಂಪೂರ್ಣ ಗುಣಮುಖರಾಗಿ ಜ.24ರ ಬಳಿಕ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಗೆದ್ದ ಶಿವಣ್ಣ- ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ನಟ
ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾದ ಶಿವಣ್ಣ ಕೆಲ ದಿನಗಳ ಹಿಂದಷ್ಟೇ ಅಭಿಮಾನಿಗಳಿಗೆ ವೀಡಿಯೋ ಸಂದೇಶ ಕಳುಹಿಸಿದ್ದರು. ಕ್ಯಾನ್ಸರ್‌ನಿಂದ ಗುಣಮುಖರಾಗಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದರು. ಶೀಘ್ರವೇ ಬೆಂಗಳೂರಿಗೆ ವಾಪಸ್ ಆಗಿ ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದರು.
ಬೆಂಗಳೂರು: ನಟ ಶಿವರಾಜ್ ಕುಮಾರ್ (Shivaraj Kumar) ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಗೆ ಬುಧವಾರ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಅಮೆರಿಕಗೆ (USA) ಪ್ರಯಾಣ ಬೆಳೆಸಿದ್ದ ಶಿವರಾಜ್‌ಕುಮಾರ್‌ಗೆ, ಪತ್ನಿ ಗೀತಾ ಶಿವರಾಜ್‌ಕುಮಾರ್, ಪುತ್ರಿ ನಿವೇದಿತಾ ಸಾಥ್ ನೀಡಿದರು.
ಡಿಸೆಂಬರ್ 24ರಂದು ಫ್ಲೋರಿಡಾ ರಾಜ್ಯದ ಮಿಯಾಮಿಯಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ (MCI) ಆಸ್ಪತ್ರೆಯಲ್ಲಿ ಶಿವರಾಜ್‌ಕುಮಾರ್ ಅವರಿಗೆ ಸರ್ಜರಿ ನಡೆಯಲಿದೆ. ಡಾಕ್ಟರ್ ಮುರುಗೇಶ್ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಬರೋಬ್ಬರಿ ಒಂದು ತಿಂಗಳು ಕಾಲ ಅಮೆರಿಕದಲ್ಲೇ ಶಿವರಾಜ್‌ಕುಮಾರ್ ಉಳಿದುಕೊಳ್ಳಲಿದ್ದಾರೆ.
ಜನವರಿ 25ರಂದು ಅಮೆರಿಕದಿಂದ ಶಿವರಾಜ್‌ಕುಮಾರ್ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರು ಬಿಡುವ ಮುನ್ನ ಶಿವಣ್ಣ ಭಾವುಕರಾಗಿದ್ದರು. ಒಂದು ತಿಂಗಳ ಕಾಲ ಭಾರತವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆ:
ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್ (Miami Cancer Institute) ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ (Operation) ದಾಖಲಾಗಲಿರುವ ಶಿವರಾಜ್‌ಕುಮಾರ್‌ಗೆ ಅಲ್ಲಿ ಭಾರತ ಮೂಲದ ಮುರುಗೇಶ್ ನೇತೃತ್ವದ ತಜ್ಞವೈದ್ಯರ ತಂಡದಿಂದ ಚಿಕಿತ್ಸೆ ನಡೆಯಲಿದೆ. ಇದನ್ನೂ ಓದಿ: ಶಿವಣ್ಣ ಫೈಟರ್, ಅವರು ಯಾವತ್ತೂ ಕುಗ್ಗಿಲ್ಲ, ಕುಗ್ಗೋದು ಇಲ್ಲ: ಸುದೀಪ್
ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್ ನೆಕ್ಷ್ಟ್ ಜನರೇಶನ್ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯಾಗಿದ್ದು, ವೈದ್ಯಕೀಯ ಆರೈಕೆ, ಸಂಶೋಧನೆ, ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ.
ವಿಶ್ವಮಾನ್ಯತೆ ಪಡೆದ ಆಂಕೋಲಾಜಿಸ್ಟ್‌ಗಳೆಂದು ಕರೆಯಲಾಗುವ ತಜ್ಞ ವೈದ್ಯರ ತಂಡ ಇದೆ. ಇವರು ಜಗತ್ತಿನ ಉನ್ನತ ಕ್ಯಾನ್ಸರ್ ಕೇಂದ್ರಗಳಿಂದ ನೇಮಕಗೊಂಡ ವೈದ್ಯರುಗಳಾಗಿದ್ದು, ಇಲ್ಲಿ ಶಸ್ತ್ರ ಚಿಕಿತ್ಸೆಯಿಂದ ಗುಣವಾಗುವ ಪ್ರಮಾಣ ಹೆಚ್ಚಿದೆ. ಈ ಕಾರಣಕ್ಕೆ ಹಲವು ದೇಶಗಳಿಂದ ಚಿಕಿತ್ಸೆಗೆ ಇಲ್ಲಿಗೆ ಆಗಮಿಸುತ್ತಿದ್ದಾರೆ.
ಅತ್ಯಾಧುನಿಕ ಸುಧಾರಿತ ಲೇಸರ್ ತಂತ್ರಜ್ಞಾನ ಒಂದೇ ಸ್ಥಳದಲ್ಲಿ ಲಭ್ಯವಿದ್ದು ಪ್ರತಿಯೊಂದು ವಿಧದ ಕ್ಯಾನ್ಸರ್ ಚಿಕಿತ್ಸೆಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಕಾರಣಕ್ಕೆ ಶಿವರಾಜ್ ಕುಮಾರ್ ಭರ್ತಿ ಒಂದು ತಿಂಗಳುಗಳ ಕಾಲ ಅಲ್ಲೇ ಚಿಕಿತ್ಸೆ ಪಡೆದು ಸ್ವದೇಶಕ್ಕೆ ಮರಳಲಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಸ್ತನ ಕ್ಯಾನ್ಸರ್ (Breast cance) ಮತ್ತು ಗರ್ಭಕಂಠದ ಕ್ಯಾನ್ಸರ್ (Cervical cancer) ಹೆಚ್ಚಳವಾಗಿದ್ದು, ತಪಾಸಣೆಯಲ್ಲಿ ಸ್ತನ, ಗರ್ಭಕಂಠದ ಕ್ಯಾನ್ಸರ್ ಧೃಢವಾದರೆ ಚಿಕಿತ್ಸೆ ನೀಡುವ ಕೆಲಸ ಆಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‍ನ ತಿಪ್ಪೇಸ್ವಾಮಿಯವರ ಪ್ರಶ್ನೆಗೆ ಅವರು ಉತ್ತರಿಸಿದರು. ಈ ವೇಳೆ ಮನೆ ಮನೆಗೆ ಭೇಟಿ ನೀಡಿ ಕ್ಯಾನ್ಸರ್ ಪರೀಕ್ಷೆ ಮಾಡುವ ಚಿಂತನೆ ನಡೆಸಿದ್ದೇವೆ. ಕೇಂದ್ರದಿಂದ ಹೆಚ್‍ಪಿವಿ ವ್ಯಾಕ್ಸಿನೇಷನ್ ಘೋಷಣೆ ಮಾಡಿದೆ. ಆದರೆ ಇದೂವರೆಗೆ ಅನುಷ್ಠಾನಕ್ಕೆ ಬಂದಿಲ್ಲ. ಬಜೆಟ್‍ನಲ್ಲಾದರೂ ನೀಡಬಹುದು ಎಂಬ ನಿರೀಕ್ಷೆ ಇದೆ. ಇನ್ನೂ ಮನೆ ಮನೆಗೆ ಹೋಗಿ ಕ್ಷಯ ರೋಗ ತಪಾಸಣೆಗೆ ವಿಶೇಷ ಕಾರ್ಯಕ್ರಮ ಜಾರಿಗೆ ತರುವ ಬಗ್ಗೆ ಚಿಂತನೆ ಮಾಡಲಾಗಿದೆ. ರಾಜ್ಯ ಸರ್ಕಾರ 9 ರಿಂದ 14 ವರ್ಷದ ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿರುವ ಹೆಚ್‍ಪಿವಿ ಲಸಿಕೆಯನ್ನು ರಾಜ್ಯದಲ್ಲಿ ಕಡ್ಡಾಯ ಮಾಡಿಲ್ಲ. ಲಸಿಕೆ ಸರಬರಾಜಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸಹಕಾರ ಕೊಟ್ಟರೆ ರಾಜ್ಯದಲ್ಲಿ ಲಸಿಕೆ ಹಾಕುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಧೃಡವಾಗಿರೋ ಕ್ಯಾನ್ಸರ್ ಮಾದರಿ
ಗರ್ಭಕಂಠದ ಕ್ಯಾನ್ಸರ್- 5473 (ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ – 2066)
ಸ್ತನ ಕ್ಯಾನ್ಸರ್- 2213 (ಚಿಕಿತ್ಸೆ – 2213)
ಬಾಯಿ ಕ್ಯಾನ್ಸರ್- 5787 (ಚಿಕಿತ್ಸೆ – 5787)
ಬೆಂಗಳೂರು: ಗೋಬಿ, ಕಬಾಬ್ ಬಳಿಕ ಪಾನಿಪುರಿಯಲ್ಲಿ (Panipuri) ಕ್ಯಾನ್ಸರ್‌ಕಾರಕ (Cancer) ಅಂಶಗಳು ಪತ್ತೆಯಾಗಿದೆ. ಬೆಂಗಳೂರಿನ 49 ಪ್ರದೇಶಗಳಿಂದ ಸಂಗ್ರಹಿಸಿದ ಪಾನಿಪುರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಇರೋದು ಪತ್ತೆಯಾಗಿದೆ.
ವಿದ್ಯಾರ್ಥಿಗಳು, ಯುವತಿಯರು ಪಾನಿಪುರಿ ಅಂದರೆ ಬಾಯಿ ಬಾಯಿ ಬಿಡುತ್ತಾರೆ. ಪಾನಿಪುರಿ ತಿನ್ನೋಕೆ ಸಾಲು ಗಟ್ಟಿ ನಿಲ್ಲುತ್ತಾರೆ. ಅಂತಹ ಪಾನಿಪುರಿ ಪ್ರಿಯರಿಗೆ ಇದು ಶಾಕಿಂಗ್ ನ್ಯೂಸ್. ಪಾನಿಪುರಿಗೆ ಬಳಸುವ ಸಾಸ್ ಮತ್ತು ಮೀಟಾ ಖಾರದ ಪುಡಿಯಲ್ಲಿ ಕ್ಯಾನ್ಸರ್‌ಕಾರಕ ಇರೋದು ಪತ್ತೆಯಾಗಿದೆ. ಜೊತೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (Department of Food Safety and Quality) ಬೆಂಗಳೂರು ಸೇರಿದಂತೆ ರಾಜ್ಯದ 79 ಕಡೆ ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಹಾನಿಕಾರಕ ಅಂಶ ಇರೋದು ಪತ್ತೆಯಾಗಿದೆ. ಇನ್ನು ಬೆಂಗಳೂರಿನ 19 ಕಡೆಗಳಲ್ಲಿ ಕ್ಯಾನ್ಸರ್‌ಕಾರಕವಿರುವ ಸಾಸ್, ಮೀಟಾ ಖಾರದ ಪುಡಿ ಬಳಸುತ್ತಿರೋದು ವರದಿಯಾಗಿದೆ. ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ನಾಳೆಯಿಂದ ಭಾರಿ ವಾಹನಗಳ ಸಂಚಾರ ನಿಷೇಧ
ಆಹಾರ ಮತ್ತು ಸುರಕ್ಷತಾ ಇಲಾಖೆ ಟೆಸ್ಟ್‌ನಲ್ಲಿ ಸನ್‌ಸೆಟ್ ಯಲ್ಲೋ 1, ಸನ್‌ಸೆಟ್ ಯಲ್ಲೋ 2 ಜೊತೆಗೆ ಬ್ರಿಲಿಯಂಟ್ ಬ್ರೂ ಮತ್ತು ಕಾರ್ಮೋಸಿಯಸ್ ರಾಸಾಯನಿಕ ಅಂಶ ಬೆರಕೆ ಆಗಿರೋದು ಪತ್ತೆಯಾಗಿದೆ. ಈ ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗಲಿದೆ. ಹಾಗಾಗಿ ಕ್ಯಾನ್ಸರ್‌ಕಾರಕ ಆಗಿರೋ ಕಲಬೆರಕೆ ಬೆರೆಸಬಾರದು ಎನ್ನುತ್ತಿದ್ದಾರೆ. ಈ ವಾರದಲ್ಲಿ ಪಾನಿಪುರಿಗೆ ಹಾಕೋ ಸಾಸ್ ಮತ್ತು ಮಿಟಾ ಬ್ಯಾನ್ ಮಾಡೋಕೆ ನಿರ್ಧರಿಸಿದ್ದು, ಅಧಿಕೃತ ಘೋಷಣೆ ಮಾಡಲಿದ್ದಾರೆ. ಇದನ್ನೂ ಓದಿ: ಜುಲೈ 3 ರಿಂದ ಜಿಯೋದಿಂದ ಹೊಸ ಅನ್‌ಲಿಮಿಟೆಡ್ ಪ್ಲಾನ್
ಒಟ್ಟಾರೆ ಕಾಟನ್ ಕ್ಯಾಂಡಿ, ಗೋಬಿ, ಕಬಾಬ್ ಬಳಿಕ ಪಾನಿಪುರಿ ತಯಾರಿಕೆಯಲ್ಲಿ ಬಳಸುವ ಸಾಸ್‌ನಲ್ಲೂ ಹಾನಿಕಾರಕ ಇರೋದು ಪತ್ತೆಯಾಗಿದೆ. ಈ ವಾರದಲ್ಲಿ ಹಾನಿಕಾರಕ ರಾಸಾಯನಿಕ ಅಂಶಗಳನ್ನು ಬ್ಯಾನ್ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಕೊಡಗಿನಲ್ಲಿ ಭಾರೀ ಮಳೆ- ದುಬಾರೆ ಆನೆ ಶಿಬಿರಕ್ಕೆ ಪ್ರವಾಸಿಗರಿಗೆ ನಿಷೇಧ
ಮುಂಬೈ: ಜೆಟ್ ಏರ್‌ವೇಸ್ (Jet Airways) ಸಂಸ್ಥಾಪಕ ನರೇಶ್ ಗೋಯಲ್ (Naresh Goyal) ಅವರ ಪತ್ನಿ ಅನಿತಾ ಗೋಯಲ್ (Anita Goyal) ಅವರು ಮುಂಬೈನ (Mumbai) ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಅವರು ಸುಮಾರು ನಸುಕಿನ ಜಾವ 3 ಗಂಟೆಗೆ ನಿಧನರಾದರು. ಅವರ ಮೃತದೇಹವನ್ನು ಮನೆಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಅವರು ದೀರ್ಘಕಾಲದಿಂದ ಕ್ಯಾನ್ಸರ್‌ನೊಂದಿಗೆ (Cancer) ಹೋರಾಡುತ್ತಿದ್ದರು. ಚಿಕಿತ್ಸೆಯ ಹೊರತಾಗಿಯೂ ಕಳೆದ ಕೆಲವು ತಿಂಗಳುಗಳಿಂದ ಅನಿತಾ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಅವರು ಕ್ಯಾನ್ಸರ್ ಮೂರನೇ ಹಂತದಲ್ಲಿತ್ತು ಎಂದು ತಿಳಿದು ಬಂದಿದೆ. ನರೇಶ್ ಗೋಯಲ್ ಸಹ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದನ್ನೂ ಓದಿ: ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್‍ಗೆ ಮಧ್ಯಂತರ ಜಾಮೀನು
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿದ್ದ ನರೇಶ್ ಗೋಯಲ್ ಅವರಿಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿತ್ತು. ಗೋಯಲ್ ಅವರು ತಮ್ಮ ಪತ್ನಿಯ ಗಂಭೀರ ಆರೋಗ್ಯ ಸ್ಥಿತಿ ಹಾಗೂ ತಮ್ಮ ಚಿಕಿತ್ಸೆಗಾಗಿ ಮಾನವೀಯ ಆಧಾರದ ಮೇಲೆ ಜಾಮೀನು ಕೋರಿದ್ದರು.
ಅನಿತಾ ಅವರ ಪತಿ ಮತ್ತು ಇಬ್ಬರು ಮಕ್ಕಳಾದ ನಮ್ರತಾ ಮತ್ತು ನಿವಾನ್ ಅವರನ್ನು ಅಗಲಿದ್ದಾರೆ. ಗುರುವಾರ ಮುಂಬೈನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.
ಕೆನರಾ ಬ್ಯಾಂಕ್ (Canara Bank) ಜೆಟ್ ಏರ್‌ವೇಸ್ ನೀಡಿದ್ದ 538.62 ಕೋಟಿ ರೂ. ಮೊತ್ತದ ಸಾಲವನ್ನು ವಂಚಿಸಿದ್ದಾರೆ ಮತ್ತು ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂಬ ಆರೋಪದ ಮೇಲೆ ಗೋಯಲ್ ಅವರನ್ನು ಸೆಪ್ಟೆಂಬರ್ 2023 ರಲ್ಲಿ ಇಡಿ ಬಂಧಿಸಿತ್ತು. 2023ರ ನವೆಂಬರ್‌ನಲ್ಲಿ ಇಡಿ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿದಾಗ ಅವರ ಪತ್ನಿಯನ್ನು ಬಂಧಿಸಲಾಗಿತ್ತು. ಅವರ ವಯಸ್ಸು ಮತ್ತು ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿ ಅದೇ ದಿನ ವಿಶೇಷ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು. ಇದನ್ನೂ ಓದಿ: ಜೀವನದಲ್ಲಿ ಭರವಸೆಯಿಲ್ಲ, ಜೈಲಿನಲ್ಲೇ ಸಾಯೋದು ಉತ್ತಮ: ಜೆಟ್ ಏರ್‌ವೇಸ್ ಸಂಸ್ಥಾಪಕ ಗೋಯಲ್
ಪಾಟ್ನಾ: ಬಿಹಾರದ (Bihar) ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ (Sushil Kumar Modi) ಅವರು ಸೋಮವಾರ 72ನೇ ವಯಸ್ಸಿನಲ್ಲಿ ಸೋಮವಾರ ನಿಧನರಾಗಿದ್ದಾರೆ.
– ಕಾರ್ಕಳದ ಡಾ ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಮೊದಲ ಮಾದರಿ ರವಾನೆ
ಉಡುಪಿ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಮಣಿಪಾಲ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಡ್ರೋನ್ (Drone) ಮೂಲಕ ಬಹು ಅಗತ್ಯ ವೈಮಾನಿಕ ಆಧಾರಿತ ಆರೋಗ್ಯ ವಿತರಣಾ ವ್ಯವಸ್ಥೆಯ ಯೋಜನೆಯನ್ನು ಜಂಟಿಯಾಗಿ ಉದ್ಘಾಟಿಸಲಾಯಿತು. ಕರ್ನಾಟಕದ ಪೆರಿಫೆರಲ್ ಮತ್ತು ಟರ್ಷಿಯರಿ ಕೇರ್ ಆಸ್ಪತ್ರೆಗಳ ನಡುವೆ ಆಂಕೊಪಾಥೋಲಾಜಿಕಲ್ ಮಾದರಿಗಳನ್ನು (Sample) ಸಾಗಿಸಲು ಡ್ರೋನ್‌ಗಳನ್ನು ಬಳಸಿಕೊಳ್ಳುವ ಗುರಿಯನ್ನು ಈ ಯೋಜನೆ ಹೊಂದಿದೆ.
ಫ್ರೋಜನ್ ಮಾದರಿಗಳಂತಹ (ಸ್ಯಾಂಪಲ್) ವಸ್ತುಗಳನ್ನು ದೂರದ ಸ್ಥಳಗಳ ಬಾಹ್ಯ ಆಸ್ಪತ್ರೆಗಳಿಂದ ಟರ್ಷಿಯರಿ ಕೇರ್ ಆಸ್ಪತ್ರೆಗಳಿಗೆ ವೈಮಾನಿಕ ವಿಧಾನಗಳನ್ನು ಬಳಸಿಕೊಂಡು ವರ್ಗಾಯಿಸುವ ಕಾರ್ಯಸಾಧ್ಯತೆಯನ್ನು ನಿರ್ಣಯಿಸುವುದು ಈ ಉಪಕ್ರಮದ ಮುಖ್ಯ ಉದ್ದೇಶ. ಈ ಪ್ರಯತ್ನವು ಶಸ್ತçಚಿಕಿತ್ಸಕರು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಮಾದರಿಗಳನ್ನು ಪರೀಕ್ಷಿಸಿ ಅಗತ್ಯವಿರುವ ಕಾರ್ಯವಿಧಾನಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ದಿನೇಶ್ ಗುಂಡುರಾವ್ ಮನೆ ಅಂದ್ರೆ ಅದು ಕಾಂಗ್ರೆಸ್ ಮನೆ : ಅರ್ಧ ಪಾಕಿಸ್ತಾನ ಹೇಳಿಕೆಗೆ ಯತ್ನಾಳ್ ಸಮರ್ಥನೆ
Deployment of a RObust NEed based aerial healthcare delivery system (DRONE): Utilizing Drones for Transporting Onco-pathological Samples between Peripheral and Tertiary Care Hospitals in Karnataka
ಮಾನವರಹಿತ ವೈಮಾನಿಕ ವಾಹನಗಳು, ಸಾಮಾನ್ಯವಾಗಿ ಡ್ರೋನ್‌ಗಳು ಎಂದು ಕರೆಯಲ್ಪಡುತ್ತವೆ. ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಭಾರತದಲ್ಲಿ ಗ್ರಾಮೀಣ ಪ್ರದೇಶಗಳಿಂದ ಇಂಟ್ರಾ ಆಪರೇಟಿವ್ ಮಾದರಿ (ಸ್ಯಾಂಪಲ್) ಸಾರಿಗೆಯ ಕೊರತೆಯನ್ನು ಇವುಗಳು ನೀಗಿಸುತ್ತವೆ. ಈ ಯೋಜನೆಯು ತ್ವರಿತ ಸಾರಿಗೆ ಉದ್ದೇಶಕ್ಕಾಗಿ ಡ್ರೋನ್‌ಗಳನ್ನು ಬಳಸಿಕೊಳ್ಳುವ ಕಾರ್ಯಸಾಧ್ಯತೆ, ಉಪಯುಕ್ತತೆ ಮತ್ತು ವೆಚ್ಚ-ಪರಿಣಾಮಕಾರಿತ್ವವನ್ನು ಅನ್ವೇಷಿಸಲು ಪ್ರಯತ್ನಿಸುತ್ತದೆ. ಇದನ್ನೂ ಓದಿ: ಸಿಬಿಐಗೆ ಸಲ್ಲಿಸಿದ ದಾಖಲೆ ನಮಗೂ ನೀಡಿ – ಡಿಕೆಶಿಗೆ ಲೋಕಾಯುಕ್ತದಿಂದ ನೋಟಿಸ್
ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ಮಾದರಿಗಳನ್ನು ತ್ವರಿತವಾಗಿ ಸಾಗಿಸಬಹುದು. ಶಸ್ತçಚಿಕಿತ್ಸಾ ವಿಧಾನಗಳ ಸಮಯದಲ್ಲಿ ಫ್ರೋಜನ್ ಮಾದರಿಗಳ ಪರೀಕ್ಷೆ ಮೂಲಕ ಸುಧಾರಿತ ರೋಗನಿರ್ಣಯಗಳಿಗೆ ತಕ್ಷಣದ ಪ್ರವೇಶವನ್ನು ಒದಗಿಸುತ್ತದೆ. ಈ ಯೋಜನೆಯು ಯಶಸ್ವಿಯಾದರೆ ಈ ಸಂಶೋಧನೆಯು ಗ್ರಾಮೀಣ ಆಸ್ಪತ್ರೆಗಳು ಮತ್ತು ಪ್ರಯೋಗಾಲಯ ಸೌಲಭ್ಯಗಳ ನಡುವೆ ಸಂಪರ್ಕವನ್ನು ಸ್ಥಾಪಿಸುವ ಮೂಲಕ ಆರೋಗ್ಯ ವಿತರಣೆಯಲ್ಲಿ ಕ್ರಾಂತಿಗೊಳಿಸಬಹುದು. ಇದರಿಂದಾಗಿ ಭೌಗೋಳಿಕವಾಗಿ ಪ್ರವೇಶಿಸಲಾಗದ ಪ್ರದೇಶಗಳಲ್ಲಿ ರೋಗಿಗಳಿಗೆ ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸುಗಮಗೊಳಿಸುತ್ತದೆ. ಇದನ್ನೂ ಓದಿ: ಕ್ಷೇತ್ರದಲ್ಲಿ ಭಯದ ವಾತಾವರಣವಿದ್ದರೂ ಜನರಿಗೆ ಎದುರಿಸುವ ಶಕ್ತಿಯಿದೆ: ಸಿಎನ್ ಮಂಜುನಾಥ್
ಡ್ರೋನ್ ಯೋಜನೆಯನ್ನು ಉದ್ಘಾಟಿಸಿದ ಡಾ. ರಾಜೀವ್ ಬಹ್ಲ್, ಆರೋಗ್ಯ ರಕ್ಷಣೆಯ ವಿತರಣಾ ಉಪಕ್ರಮದ ನವೀನ ವಿಧಾನವನ್ನು ಶ್ಲಾಘಿಸಿದರು. ವಿಶೇಷವಾಗಿ ಕಡಿಮೆ ಸಾರಿಗೆ ವ್ಯವಸ್ಥೆಯುಳ್ಳ ಗ್ರಾಮೀಣ ಪ್ರದೇಶಗಳಲ್ಲಿ ಮಾದರಿಗಳನ್ನು (ಸ್ಯಾಂಪಲ್) ಸಾಗಿಸಲು ಇರುವ ಸಾರಿಗೆ ತೊಡಕುಗಳು ಮತ್ತು ಈ ಯೋಜನೆಯ ಮೂಲಕ ರೋಗನಿರ್ಣಯ ಸೇವೆಗಳನ್ನು ಕ್ರಾಂತಿಗೊಳಿಸುವ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ಇದನ್ನೂ ಓದಿ: ಗ್ಯಾರಂಟಿ ಹೆಸರು ಹೇಳಿಕೊಂಡು ಹೋಗುವ ಶಾಸಕರಿಗೆ ಜನ ತಟ್ಟುತ್ತಾರೆ: ಗೋವಿಂದ ಕಾರಜೋಳ
ನವದೆಹಲಿ: ನಕಲಿ ಕೀಮೋಥೆರಪಿ ಔಷಧಗಳನ್ನು (Chemotherapy Drugs) ತಯಾರಿಸಿ ಸರಬರಾಜು ಮಾಡುತ್ತಿದ್ದ ಏಳು ಆರೋಪಿಗಳನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವಿಫಿಲ್ ಜೈನ್ (46), ಸೂರಜ್ ಶಾತ್ (28), ನೀರಜ್ ಚೌಹಾಣ್ (38), ಪರ್ವೇಜ್ (33), ಕೋಮಲ್ ತಿವಾರಿ (39), ಅಭಿನಯ್ ಕೊಹ್ಲಿ (30) ಮತ್ತು ತುಷಾರ್ ಚೌಹಾಣ್ (28) ಎಂದು ಗುರುತಿಸಲಾಗಿದೆ. ಆರೋಪಿಗಳು ನಕಲಿ ಕ್ಯಾನ್ಸರ್ ಔಷಧಿ ತಯಾರಿಕೆ ಮತ್ತು ಪೂರೈಕೆಯಲ್ಲಿ ತೊಡಗಿರುವ ದಂಧೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧರಿಸಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ವಿಶೇಷ ಪೆÇಲೀಸ್ ಆಯುಕ್ತೆ (ಅಪರಾಧ ವಿಭಾಗ) ಶಾಲಿನಿ ಸಿಂಗ್ ಹೇಳಿದ್ದಾರೆ.
ಪೊಲೀಸರು, ಮೋತಿ ನಗರದಲ್ಲಿ ಎರಡು ಫ್ಲಾಟ್‍ಗಳು, ಗುಗಾರ್ಂವ್‍ನ ದಕ್ಷಿಣ ನಗರದಲ್ಲಿ ಒಂದು ಫ್ಲಾಟ್, ಈಶಾನ್ಯ ದೆಹಲಿಯ ಯಮುನಾ ವಿಹಾರ್‍ನಲ್ಲಿರುವ ಒಂದು ಫ್ಲಾಟ್ ಮತ್ತು ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆ ಸೇರಿ ನಾಲ್ಕು ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ನಕಲಿ ಕ್ಯಾನ್ಸರ್ ಚುಚ್ಚುಮದ್ದಿನ 140 ತುಂಬಿದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಲ್ಲಿ ಕೆಲವರು ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನವದೆಹಲಿ: ಆದಿತ್ಯ-ಎಲ್1 (Aditya-L1) ಮಿಷನ್ ಉಡಾವಣೆಯಾದ ದಿನವೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮುಖ್ಯಸ್ಥ ಎಸ್ ಸೋಮನಾಥ್ (Somnath) ಅವರಿಗೆ ಕ್ಯಾನ್ಸರ್ (Cancer) ಇರುವುದು ಪತ್ತೆಯಾಗಿತ್ತು.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಚಂದ್ರಯಾನ-3 ಮಿಷನ್ (Chandrayaan-3 mission) ಉಡಾವಣೆ ಸಮಯದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳಿದ್ದವು. ಆದರೆ ಆ ಸಮಯದಲ್ಲಿ ನನಗೆ ಸ್ಪಷ್ಟವಾದ ಮಾಹಿತಿ ಇರಲಿಲ್ಲ. ಆದಿತ್ಯ-ಎಲ್1 ಮಿಷನ್ ಉಡಾವಣೆಯಾದ ದಿನ ಸ್ಕ್ಯಾನಿಂಗ್ ಮಾಡಿದಾಗ ಕ್ಯಾನ್ಸರ್ ಇರುವುದು ದೃಢಪಟ್ಟಿತು ಎಂದು ತಿಳಿಸಿದರು. ಇದನ್ನೂ ಓದಿ: ಕ್ಯಾನ್ಸರ್ ಭಯ ಬೇಡ – ಕಿಮೋಥೆರಪಿ ಎಂದರೇನು? ಅದು ಹೇಗೆ ಕೆಲಸ ಮಾಡುತ್ತೆ?
ಆದಿತ್ಯ ಎಲ್ 1, ಸೂರ್ಯನನ್ನು ಅಧ್ಯಯನ ಮಾಡಲು ತನ್ನ ಪ್ರಯಾಣವನ್ನು ಪ್ರಾರಂಭಿಸಿದಾಗ ಬಳಿಕ ಸೋಮನಾಥ್ ರೂಟಿನ್ ಸ್ಕ್ಯಾನ್‌ಗೆ ಒಳಗಾದರು. ಈ ವೇಳೆ ಕ್ಯಾನ್ಸರ್ ಇರುವುದು ದೃಢಪಡುತ್ತಿದ್ದಂತೆ ಹೆಚ್ಚಿನ ಚಿಕಿತ್ಸೆಗೆ ಚೆನ್ನೈಯ ಆಸ್ಪತ್ರಗೆ ದಾಖಲಾದರು. ಈ ಕ್ಯಾನ್ಸರ್ ಅನುವಂಶೀಯತೆಯಿಂದ ಕ್ಯಾನ್ಸರ್ ಬಂದಿರುವುದು ಗೊತ್ತಾಯಿತು. ಸೋಮನಾಥ್ ಅವರಿಗೆ ಶಸ್ತ್ರಚಿಕಿತ್ಸೆಯ ನಂತರ ಕಿಮೊಥೆರಪಿ ಮಾಡಲಾಯಿತು.
ಆಸ್ಪತ್ರೆಯಲ್ಲಿ ಕೇವಲ ನಾಲ್ಕು ದಿನಗಳನ್ನು ಕಳೆದ ನಂತರ ಸೋಮನಾಥ್ ಮತ್ತೆ ಇಸ್ರೋದಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾದರು. ಐದನೇ ದಿನದಿಂದ ಯಾವುದೇ ನೋವು ಇಲ್ಲದೆ ಕೆಲಸ ಮಾಡಲಾರಂಭಿಸಿದರು.
ನಾನು ನಿಯಮಿತವಾಗಿ ತಪಾಸಣೆ ಮತ್ತು ಸ್ಕ್ಯಾನ್‌ಗೆ ಒಳಗಾಗುತ್ತೇನೆ. ಈಗ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ ಮತ್ತು ನನ್ನ ಕರ್ತವ್ಯವನ್ನು ಪುನರಾರಂಭಿಸಿದ್ದೇನೆ ಎಂದು ಸೋಮನಾಥ್ ಹೇಳಿದರು.
ಚಂದ್ರಯಾನ-3 (Chandrayaan-3) ಯೋಜನೆಯ ಯಶಸ್ಸಿನ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸೂರ್ಯನನ್ನು ಅಧ್ಯಯನ ಮಾಡಲು ಸೆಪ್ಟೆಂಬರ್ 3 ರಂದು ಅದಿತ್ಯ ಎಲ್1 ಮಿಷನ್ ಆರಂಭಿಸಿತ್ತು. ಆದಿತ್ಯ-ಎಲ್1 ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಸೂರ್ಯನ ಹೊರಗಿನ ಪದರಗಳು (ಕರೋನಾ) ಮತ್ತು ಎಲ್-1 (ಸೂರ್ಯ-ಭೂಮಿಯ ಲಗ್ರಾಂಜಿಯನ್ ಪಾಯಿಂಟ್) ಅಧ್ಯಯನ ಮಾಡುತ್ತಿದೆ.
– ಎರಡನೇ ಬಾರಿ ಕ್ಯಾನ್ಸರ್ ಬರುವುದನ್ನು ತಡೆಯುತ್ತೆ ಮಾತ್ರೆ – 10 ವರ್ಷಗಳ ಕಾಲ ದೀರ್ಘ ಸಂಶೋಧನೆ – FSSAI ಅನುಮೋದನೆಗಾಗಿ ಕಾಯುತ್ತಿದ್ದಾರೆ ಸಂಶೋಧಕರು
ಮುಂಬೈ: ಎರಡನೇ ಬಾರಿಗೆ ಕ್ಯಾನ್ಸರ್ (Cancer) ಬರುವುದನ್ನು ತಡೆಯುವ ಮಾತ್ರೆಯನ್ನು (Tablet) ನಾವು ಅಭಿವೃದ್ಧಿ ಪಡಿಸಿರುವುದಾಗಿ ಭಾರತದ ಪ್ರಸಿದ್ಧ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಟಾಟಾ ಸ್ಮಾರಕ ಕೇಂದ್ರ (TMC) ಹೇಳಿಕೊಂಡಿದೆ.
ಸಂಶೋಧಕರು 10 ವರ್ಷಗಳ ಕಾಲ ಸಂಶೋಧನೆ ನಡೆಸಿದ ಬಳಿಕ ಮಾತ್ರೆ ಅಭಿವೃದ್ಧಿ ಪಡಿಸಿದ್ದು ವಿಕಿರಣ (Radiation) ಮತ್ತು ಕೀಮೋಥೆರಪಿಯಂತಹ (Chemotherapy) ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನು 50% ರಷ್ಟು ಮಾತ್ರೆ ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷದಿಂದ ಕೋಟಿ ರೂ. ವೆಚ್ಚವಾಗುತ್ತಿದ್ದು, ಈ ಮಾತ್ರೆಯ ಬೆಲೆ ಕೇವಲ 100 ರೂ. ಇರಲಿದೆ ಎಂದು ಟಾಟಾ ಸಂಸ್ಥೆ ಹೇಳಿದೆ.
ಸಂಶೋಧನಾ ಗುಂಪಿನ ಭಾಗವಾಗಿದ್ದ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ರಾಜೇಂದ್ರ ಬದ್ವೆ ಪ್ರತಿಕ್ರಿಯಿಸಿ, ಸಂಶೋಧನೆಗಾಗಿ ಆರಂಭದಲ್ಲಿ ಇಲಿಗಳಲ್ಲಿ (Rat) ಮಾನವನ ಕ್ಯಾನ್ಸರ್ ಕೋಶಗಳನ್ನು ಸೇರಿಸಲಾಯಿತು. ಆ ಕೋಶಗಳು ಇಲಿಗಳಲ್ಲಿ ಗೆಡ್ಡೆಯನ್ನು ರೂಪಿಸಿತು. ನಂತರ ಇಲಿಗಳಿಗೆ ವಿಕಿರಣ ಚಿಕಿತ್ಸೆ, ಕೀಮೋಥೆರಪಿ ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲಾಯಿತು. ಈ ಕ್ಯಾನ್ಸರ್ ಕೋಶಗಳು ಸತ್ತಾಗ ಅವು ಕ್ರೊಮಾಟಿನ್ ಕಣಗಳೆಂದು ಕರೆಯಲ್ಪಡುವ ಸಣ್ಣ ತುಂಡುಗಳಾಗಿ ಒಡೆಯುತ್ತವೆ. ಈ ಸಣ್ಣ ತುಂಡುಗಳು ರಕ್ತದೊಂದಿಗೆ ಸೇರಿ ಆರೋಗ್ಯ ಹೊಂದಿದ ಜೀವಕೋಶಗಳನ್ನು ಪ್ರವೇಶಿಸಿದಾಗ ಕ್ಯಾನ್ಸರ್ ಬರುತ್ತದೆ ಎಂದು ತಿಳಿಸಿದರು.
ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು, ವೈದ್ಯರು ಇಲಿಗಳಿಗೆ ರೆಸ್ವೆರಾಟ್ರೊಲ್ ಮತ್ತು ತಾಮ್ರದ (R+Cu) ಪ್ರೊ-ಆಕ್ಸಿಡೆಂಟ್ ಮಾತ್ರೆಗಳನ್ನು ನೀಡಲಾಯಿತು. R+Cu ಆಮ್ಲಜನಕ ಮುಕ್ತ ಕಣಗಳನ್ನು ಉತ್ಪಾದಿಸುತ್ತದೆ, ಇದು ಕ್ರೊಮಾಟಿನ್ ಕಣಗಳನ್ನು ನಾಶಪಡಿಸುತ್ತದೆ ಎಂದು ವಿವರಿಸಿದರು. ಇದನ್ನೂ ಓದಿ: ಗೆದ್ದ ಬೆನ್ನಲ್ಲೇ ನಾಸೀರ್ ಹುಸೇನ್ ಬೆಂಬಲಿಗರಿಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ
R+Cu ಅನ್ನು ಸೇವಿಸಿದಾಗ ಹೊಟ್ಟೆಯಲ್ಲಿ ಆಮ್ಲಜನಕ ಮುಕ್ತ ಕಣಗಳನ್ನು ಉತ್ಪಾದಿಸುತ್ತದೆ. ಈ ಆಮ್ಲಜನಕ ಮುಕ್ತ ಕಣಗಳನ್ನು ಚಲಾವಣೆಯಲ್ಲಿರುವ ಕ್ರೊಮಾಟಿನ್ ಕಣಗಳನ್ನು ನಾಶಮಾಡುತ್ತವೆ ಮತ್ತು ‘ಮೆಟಾಸ್ಟೇಸ್’ಗಳನ್ನು ತಡೆಯುತ್ತವೆ. ಇದು ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕ್ಯಾನ್ಸರ್ ಕೋಶಗಳ ಚಲನೆ ತಡೆಯುತ್ತದೆ ಎಂದು ಹೇಳಿದರು.
ಈ ಟ್ಯಾಬ್ಲೆಟ್ ಕ್ಯಾನ್ಸರ್ ಚಿಕಿತ್ಸೆಯ ಚಿಕಿತ್ಸೆಯ ಅಡ್ಡಪರಿಣಾಮಗಳನ್ನು ಸುಮಾರು 50 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಮತ್ತು ಎರಡನೇ ಬಾರಿಗೆ ಇದು ಕ್ಯಾನ್ಸರ್ ತಡೆಗಟ್ಟುವಲ್ಲಿ ಸುಮಾರು 30% ಪರಿಣಾಮಕಾರಿಯಾಗಿದೆ. ಇದು ಮೇದೋಜೀರಕ ಗ್ರಂಥಿ, ಶ್ವಾಸಕೋಶ ಮತ್ತು ಬಾಯಿಯ ಕ್ಯಾನ್ಸರ್‌ನ ಮೇಲೂ ಪರಿಣಾಮಕಾರಿಯಾಗಬಲ್ಲದು ಎಂದು ತಿಳಿಸಿದರು.
ಟಾಟಾ ವೈದ್ಯರು ಸುಮಾರು ಒಂದು ದಶಕದಿಂದ ಈ ಮಾತ್ರೆಯ ಮೇಲೆ ಸಂಶೋಧನೆ ಮಾಡುತ್ತಿದ್ದು ಈಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅನುಮೋದನೆಗೆ ಕಾಯತ್ತಿದ್ದಾರೆ. ಈಗಾಲೇ ಟಿಐಎಫ್‌ಆರ್ ವಿಜ್ಞಾನಿಗಳು ಈ ಮಾತ್ರೆಯನ್ನು ಅನುಮೋದಿಸಲು ಎಫ್‌ಎಸ್‌ಎಸ್‌ಎಐಗೆ ಅರ್ಜಿ ಸಲ್ಲಿಸಿದ್ದಾರೆ. ಅನುಮೋದನೆ ಪಡೆದ ನಂತರ ಜೂನ್-ಜುಲೈನಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಇದನ್ನೂ ಓದಿ: ಗಗನಯಾನ ಕೈಗೊಳ್ಳುವ 4 ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಮೋದಿ
ಈ ಮಾತ್ರೆ ಸೇವನೆಯ ಬಳಿಕ ಇಲಿಗಳು ಮತ್ತು ಮನುಷ್ಯರ ಮೇಲೆ ಆಗುವ ಅಡ್ಡ ಪರಿಣಾಮವನ್ನು ಪರೀಕ್ಷಿಸಲಾಗಿದೆ. ಮಾನವನ ಮೇಲಿನ ಪ್ರಯೋಗಗಳನ್ನು ಪೂರ್ಣಗೊಳಿಸಲು ಸುಮಾರು ಐದು ವರ್ಷ ಬೇಕಾಯಿತು. ಸಂಶೋಧನೆಯ ಸಮಯದಲ್ಲಿ ಸವಾಲುಗಳು ಇದ್ದವು. ಈ ಸಂಶೋಧನೆ ಮಾಡುವಾಗ ಸಮಯ ಮತ್ತು ಹಣ ವ್ಯರ್ಥ ಎಂದು ಹಲವರು ಹೇಳಿದ್ದರು. ಆದರೆ ಇಂದು ನಾವೆಲ್ಲ ಸಂತೋಷವಾಗಿದ್ದು ದೊಡ್ಡ ಯಶಸ್ಸು ಸಿಕ್ಕಿದೆ ಎಂದು ವೈದ್ಯರು ಬಣ್ಣಿಸಿದರು.
ಕ್ಯಾನ್ಸರ್ ಎರಡನೇ ಬಾರಿ ಹೇಗೆ ಬರುತ್ತೆ?
ಕೆಲವೊಮ್ಮೆ ಕ್ಯಾನ್ಸರ್ ಚಿಕಿತ್ಸೆಯ ನಂತರ ಕ್ಯಾನ್ಸರ್ ಮತ್ತೆ ಬರುತ್ತದೆ. ಇದನ್ನು ಕ್ಯಾನ್ಸರ್ ಮರುಕಳಿಸುವಿಕೆ ಎಂದು ಕರೆಯಲಾಗುತ್ತದೆ. ಮೂಲ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಿದ ವಾರ, ತಿಂಗಳುಗಳು ಅಥವಾ ವರ್ಷಗಳ ನಂತರವೂ ಇದು ಬರಹುದು.
ಕೆಲವು ರೀತಿಯ ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯು ಎರಡನೇ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಮಗು, ಹದಿಹರೆಯ ಅಥವಾ ಯುವ ವಯಸ್ಕರಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದಿದ್ದರೆ ಅಪಾಯವು ಹೆಚ್ಚು. ರೋಗಿಗೆ ಚಿಕಿತ್ಸೆ ಮುಗಿದ ನಂತರ ಕ್ಯಾನ್ಸರ್ ಮತ್ತೆ ಬರುತ್ತದೆಯೇ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.