Tag: cancer

  • 50 ಲಕ್ಷ ರೂ. ಮೌಲ್ಯದ ಕಾಳಿಂಗ ಸರ್ಪದ ವಿಷ ಸಾಗಾಟ- ಮೈಸೂರಿನಲ್ಲಿ ಓರ್ವನ ಬಂಧನ

    50 ಲಕ್ಷ ರೂ. ಮೌಲ್ಯದ ಕಾಳಿಂಗ ಸರ್ಪದ ವಿಷ ಸಾಗಾಟ- ಮೈಸೂರಿನಲ್ಲಿ ಓರ್ವನ ಬಂಧನ

    ಮೈಸೂರು: ಕಾಳಿಂಗ ಸರ್ಪದ ವಿಷ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದು ಮೈಸೂರಿನಲ್ಲಿ ಪತ್ತೆಯಾಗಿದೆ.

    ಸುಮಾರು 50 ಲಕ್ಷ ರೂ. ಮೌಲ್ಯದ ಕಾಳಿಂಗ ಸರ್ಪದ ವಿಷವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಆತನಿಂದ ಒಂದು ಲೀಟರ್ ಕಾಳಿಂಗ ಸರ್ಪದ ವಿಷದ ಬಾಟಲಿಯನ್ನು ಅರಣ್ಯ ಸಂಚಾರಿ ದಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಕೆ.ವಿ.ರಾಜು (43) ಬಂಧಿತ ಆರೋಪಿ. ಕೊಡಗು ಜಿಲ್ಲೆಸೋಮವಾರಪೇಟೆಯ ರಾಜುನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೆಲವೊಂದು ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಈ ಹಾವಿನ ವಿಷವನ್ನು ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ಮಾರಾಟ ಮಾಡುತ್ತಿದ್ದುದಾಗಿ ಆರೋಪಿ ಹೇಳಿದ್ದಾನೆ. ಸೋಮವಾರಪೇಟೆ ಸುತ್ತಮುತ್ತ ಹಾವಾಡಿಗರಿಂದ ಕಾಳಿಂಗ ಸರ್ಪದ ವಿಷ ಸಂಗ್ರಹಿಸಿ ಮಾರಾಟ ಮಾಡಲು ಬಾಟಲಿಯಲ್ಲಿ ಶೇಖರಿಸಿಕೊಂಡಿದ್ದ ಎನ್ನಲಾಗಿದೆ.

    ಈತ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಎದುರು ಕಾಳಿಂಗ ಸರ್ಪದ ವಿಷವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ವಿಷಯ ತಿಳಿದ ಪೊಲೀಸರು, ಹಠಾತ್ ದಾಳಿ ನಡೆಸಿ ರಾಜುನನ್ನು ಬಂಧಿಸಿದ್ದಾರೆ. ಅರಣ್ಯ ಸಂಚಾರಿ ದಳದ ಉಪ ನಿರೀಕ್ಷಕ ಎಸ್.ಪಿ ಹರೀಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

  • ನೀವು ಹಂದಿ, ಕುರಿ ಮಾಂಸ ತಿನ್ನುತ್ತೀರಾ? ಹಾಗಾದ್ರೆ ಈ ಸುದ್ದಿ ಓದಿ

    ನೀವು ಹಂದಿ, ಕುರಿ ಮಾಂಸ ತಿನ್ನುತ್ತೀರಾ? ಹಾಗಾದ್ರೆ ಈ ಸುದ್ದಿ ಓದಿ

    ಮಂಗಳೂರು: ನೀವು ಹಂದಿ, ಕುರಿ ಮಾಂಸ ತಿನ್ನುವುವರಾದರೆ ಈ ಸುದ್ದಿ ನೋಡಲೇ ಬೇಕು. ಈ ಮಾಂಸಗಳನ್ನು ತಿನ್ನುವವರು ಎಚ್ಚರ ವಹಿಸಲೇಬೇಕು. ಯಾಕಂದ್ರೆ ರೆಡ್ ಮೀಟ್ ತಿಂದರೆ ನಿಮಗೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ. ಮಂಗಳೂರಿನ ಎಂಐಓ ಕ್ಯಾನ್ಸರ್ ಆಸ್ಪತ್ರೆಯು ಇಂತಹದ್ದೊಂದು ಆಘಾತಕಾರಿ ಸಂಶೋಧನಾ ವರದಿ ನೀಡಿದೆ.

    ಮಂಗಳೂರಿನ ಇನ್ಸ್ ಟಿಟ್ಯೂಟ್ ಆಫ್ ಒಂಕಾಲಜಿ ಆಸ್ಪತ್ರೆಯ ನುರಿತ ತಜ್ಞರ ತಂಡವೊಂದು ಆಘಾತಕಾರಿ ವರದಿ ನೀಡಿದೆ. ಪ್ರದೇಶವಾರು ಸುಮಾರು 900 ಕ್ಯಾನ್ಸರ್ ರೋಗಿಗಳನ್ನ ವೈದ್ಯರು ಸರ್ವೇ ಮಾಡಿದ್ದಾರೆ. ಕೇರಳ, ಕಾಸರಗೋಡು, ಮಂಜೇಶ್ವರ ಭಾಗದ ಜನ ಕುರಿ, ದನ, ಹಂದಿ ಮಾಂಸ ತಿನ್ನುತ್ತಿದ್ದು, ಅಂಥವರಲ್ಲಿ ಅತಿಹೆಚ್ಚು ಸ್ತನ ಹಾಗೂ ಕರಳು ಕ್ಯಾನ್ಸರ್ ಕಂಡುಬಂದಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ.

    ರೆಡ್ ಮೀಟ್‍ನಲ್ಲಿರುವ ಕೊಬ್ಬಿನ ಅಂಶ ಹಾಗೂ ಪದೇ ಪದೇ ಬೇಯಿಸಿ ತಿನ್ನೋದ್ರಿಂದ ಕ್ಯಾನ್ಸರ್ ಬರುತ್ತಂತೆ. ಹೀಗಾಗಿ ರೆಡ್ ಮೀಟ್ ಆಹಾರದ ಬಗ್ಗೆ ಜಾಗ್ರತೆ ವಹಿಸುವಂತೆ ಹಾಗೂ ವಾರಕ್ಕೆ 500 ಗ್ರಾಂ ಮಾತ್ರ ಸೇವಿಸುವಂತೆ ಸೂಚನೆ ನೀಡಿದ್ದಾರೆ. ಮಂಗಳೂರು ವೈದ್ಯರ ತಂಡ ಮಾಂಸ ಪ್ರಿಯರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

     

  • ಚಿಕಿತ್ಸೆಗೆ ಹಣ ನೀಡೆಂದು ಅಪ್ಪನನ್ನು ಬೇಡಿದ್ದ ಕ್ಯಾನ್ಸರ್‍ಪೀಡಿತ ಬಾಲಕಿ- ಆಕೆಯ ಸಾವಿನ ನಂತರ ವೈರಲ್ ಆಯ್ತು ಈ ವಿಡಿಯೋ

    ಚಿಕಿತ್ಸೆಗೆ ಹಣ ನೀಡೆಂದು ಅಪ್ಪನನ್ನು ಬೇಡಿದ್ದ ಕ್ಯಾನ್ಸರ್‍ಪೀಡಿತ ಬಾಲಕಿ- ಆಕೆಯ ಸಾವಿನ ನಂತರ ವೈರಲ್ ಆಯ್ತು ಈ ವಿಡಿಯೋ

    ವಿಜಯವಾಡ: ಡ್ಯಾಡಿ, ನೀನು ನಿನ್ನ ಬಳಿ ಹಣ ಇಲ್ಲ ಅಂತ ಹೇಳ್ತೀಯ. ಆದ್ರೆ ನಮ್ಮ ಬಳಿ ಈ ಮನೆನಾದ್ರೂ ಇದೆ. ಪ್ಲೀಸ್ ಈ ಮನೆಯನ್ನ ಮಾರಿ ನನ್ನ ಚಿಕಿತ್ಸೆಗೆ ಹಣ್ಣ ಕಟ್ಟಿ ಡ್ಯಾಡಿ. ಇಲ್ಲ ಅಂದ್ರೆ ನಾನು ಹೆಚ್ಚು ದಿನ ಬದುಕಲ್ಲ ಅಂತ ಹೇಳಿದ್ದಾರೆ. ಪ್ಲೀಸ್ ಏನಾದ್ರೂ ಮಾಡಿ ನನ್ನ ಉಳಿಸ್ಕೋ ಡ್ಯಾಡಿ….. ಹೀಗಂತ 13 ವರ್ಷದ ಹೆಣ್ಣುಮಗಳೊಬ್ಬಳು ತನ್ನ ಕ್ಯಾನ್ಸರ್ ಚಿತ್ಸೆಗಾಗಿ ಹಣ ಕೊಡಿ ಅಂತ ಅಪ್ಪನನ್ನ ಬೇಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೊಂದು ವಿಪರ್ಯಾಸವೆಂದರೆ ಮೇ 14ರಂದು ಈ ಬಾಲಕಿ ಸಾವನ್ನಪ್ಪಿದ್ದಾಳೆ.

    ಆಂಧ್ರಪ್ರದೇಶ ಮೂಲದ ಈ ಬಾಲಕಿಯ ಹೆಸರು ಸಾಯಿ ಶ್ರೀ. ಈಕೆಗೆ ಬೋನ್ ಮ್ಯಾರೋ ಕ್ಯಾನ್ಸರ್ ಇದೆ ಎಂದು 2016ರ ಆಗಸ್ಟ್ 27ರಂರಂದು ವೈದ್ಯರು ಹೇಳಿದ್ದರು. ಆದ್ರೆ ಚಿಕಿತ್ಸೆಗೆ ಬೇಕಾಗುವಷ್ಟು ಹಣ ಅಮ್ಮನ ಬಳಿ ಇಲ್ಲ. ಮನೆ ಮಾರಿ ಹಣ ಕೊಡಿ. ಅಮ್ಮನಿಗೆ ಹಣ ಕೊಡಲು ಇಷ್ಟವಿಲ್ಲ ಅಂದ್ರೆ ನೀವೇ ಬಂದು ಆಸ್ಪತ್ರೆಯಲ್ಲಿ ಹಣ ಕಟ್ಟಿ ಎಂದು ಸಾಯಿ ಶ್ರೀ ವಿಡಿಯೋ ಮೂಲಕ ತನ್ನ ತಂದೆಗೆ ಹಣ ನೀಡುವಂತೆ ಕೇಳಿದ್ದಳು.

    ಸಾಯಿ ಶ್ರೀ ತಂದೆ ಮದಮ್‍ಶೆಟ್ಟಿ ಶಿವಕುಮಾರ್ ತನ್ನ ಪತ್ನಿ ಸುಮಾ ಶ್ರೀ ಮತ್ತು ಮಗಳಿಂದ 8 ವರ್ಷದ ಹಿಂದೆಯೇ ದೂರವಾಗಿದ್ರು. ವರದಿಯ ಪ್ರಕಾರ ಸಾಯಿ ಶ್ರೀ ತನ್ನ ತಾಯಿಯೊಂದಿಗೆ ವಿಜಯವಾಡದಲ್ಲಿ ನೆಲೆಸಿದ್ದು, ತಂದೆ ಬೆಂಗಳೂರಿನಲ್ಲಿದ್ದರು ಎನ್ನಲಾಗಿದೆ.

    ಶಿವ ಕುಮಾರ್ ಮತ್ತು ಸುಮಾ ದೂರವಾಗುವುದಕ್ಕೂ ಮುನ್ನ ಮಗಳಾದ ಸಾಯಿ ಶ್ರೀ ಹೆಸರಲ್ಲಿ ಒಂದು ಫ್ಲಾಟ್ ಖರೀದಿಸಿದ್ರು. ಮನೆ ಮಾರಿ ಮಗಳ ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸಲು ಮುಂದಾದಾಗ ಗಂಡ ಶಿವ ಕುಮಾರ್, ತೆಲುಗು ದೇಶಂ ಪಾರ್ಟಿಯ ಶಾಸಕ ಬೋಂಡಾ ಉಮಾಮಹೇಶ್ವರ್ ರಾವ್ ಅವರ ನೆರವಿನಿಂದ ಮನೆ ಮಾರಾಟ ಮಾಡದಂತೆ ತಡೆದಿದ್ದರು ಎಂದು ಸುಮಾ ಆರೋಪಿಸಿದ್ದಾರೆ.

    ಶಾಸಕರ ಬೆಂಬಲ ಇದ್ದ ಕಾರಣ ಶಿವ ಕುಮಾರ್ ಕಳಿದಿದ್ದ ಗೂಂಡಾಗಳ ವಿರುದ್ಧ ದೂರು ದಾಖಲಿಸಿಕೊಳ್ಳಲು ಆಂಧ್ರಪ್ರದೇಶದ ಪೊಲೀಸರು ನಿರಾಕರಿಸಿದ್ರು ಎಂದು ಸುದ್ದಿ ಸಂಸ್ಥೆ ಎಎನ್‍ಐ ವರದಿ ಮಾಡಿದೆ.

    ಈ ಬಗ್ಗೆ ಹೇಳಿಕೆ ನೀಡಿರೋ ಬಾಲಾಲ ಹಕ್ಕುಳ ಸಂಗಂನ ಅಧ್ಯಕ್ಷರಾದ ಅಚ್ಯುತ್ ರಾವ್, ನಾವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗದಲ್ಲಿ ಅರ್ಜಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದಿದ್ದಾರೆ.

    ಹಣ ನೀಡಲು ಶಕ್ತರಾಗಿದ್ದರೂ ತಂದೆ ಮಗಳ ಚಿಕಿತ್ಸೆಗೆ ಹಣ ನೀಡಿಲ್ಲವೆಂಬುದನ್ನು ಮನಗಂಡ ರಾಜ್ಯ ಮಾನವ ಹಕ್ಕುಗಳ ಆಯೋಗ, ಈ ಬಗ್ಗೆ ವಿಸ್ತøತ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ.

    ಈ ವಿಡಿಯೋ ಸದ್ಯ ದೇಶದಾದ್ಯಂತ ವೈರಲ್ ಆಗಿದ್ದು, ತಂದೆಯ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.

    https://www.youtube.com/watch?v=iqejG-FQ01s

    https://www.youtube.com/watch?v=wpxTOC7C-aY

     

  • ಕ್ಯಾನ್ಸರ್‍ಪೀಡಿತ ವ್ಯಕ್ತಿಯ ಮನವಿಗೆ ಮೊಬೈಲ್ ಟವರ್ ಬಂದ್ ಮಾಡಲು ಸುಪ್ರೀಂ ಆದೇಶ

    ಕ್ಯಾನ್ಸರ್‍ಪೀಡಿತ ವ್ಯಕ್ತಿಯ ಮನವಿಗೆ ಮೊಬೈಲ್ ಟವರ್ ಬಂದ್ ಮಾಡಲು ಸುಪ್ರೀಂ ಆದೇಶ

    ನವದೆಹಲಿ: ಮೊಬೈಲ್ ಟವರ್‍ನ ವಿದ್ಯುತ್ಕಾಂತೀಯ ವಿಕಿರಣದಿಂದ ನಾನು ಕ್ಯಾನ್ಸರ್‍ಗೆ ತುತ್ತಾಗಿದ್ದೇನೆ ಎಂದು 42 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಳಿಕ ಮೊಬೈಲ್ ಟವರ್ ಬಂದ್ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಇಂತಹದ್ದೊಂದು ಆದೇಶ ನೀಡಿದೆ ಎಂದು ವರದಿಯಾಗಿದೆ.

    2002ರಲ್ಲಿ ತಮ್ಮ ಪಕ್ಕದ ಮನೆಯ ಛಾವಣಿಯ ಮೇಲೆ ಅಕ್ರಮವಾಗಿ ಅಳವಡಿಕೆ ಮಾಡಲಾದ ಮೊಬೈಲ್ ಟವರ್ ಬಂದ್ ಮಾಡುವಂತೆ ಕೋರಿ ಮಧ್ಯಪ್ರದೇಶದ ಗ್ವಾಲಿಯರ್‍ನ ದಾಲ್ ಬಜಾರ್ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಹರೀಶ್ ಚಂದ್ ತಿವಾರಿ ಕಳೆದ ವರ್ಷ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕಳೆದ 14 ವರ್ಷಗಳಿಂದ ಈ ಮೊಬೈಲ್ ಟವರ್‍ನ ಹಾನಿಕಾರಕ ವಿಕರಣಗಳಿಂದ ತೊಂದರೆ ಪಡುತ್ತಿದ್ದೇವೆ ಎಂದು ಹರೀಶ್ ಹೇಳಿದ್ದರು.

    ದೀರ್ಘ ಕಾಲದಿಂದ ವಿಕರಣಕ್ಕೆ ಒಡ್ಡಿಕೊಂಡಿದ್ದರಿಂದ ಹಾಡ್ಕಿನ್ಸ್ ಲಿಮ್ಫೋಮಾ(ಕ್ಯಾನ್ಸರ್)ಗೆ ತುತ್ತಾಗಿದ್ದೇನೆ ಎಂದು ಹೇಳಿ ಸ್ಥಳೀಯ ವಕೀಲೆ ನಿವೇದಿತಾ ಶರ್ಮಾ ಅವರ ಸಹಾಯ ಪಡೆದು ಹರೀಶ್ ಅವರು ಅರ್ಜಿ ಸಲ್ಲಿಸಿದ್ದರು.

    ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಂಜನ್ ಗೋಗಿ ಹಾಗೂ ನ್ಯಾ. ನವೀನ್ ಸಿನ್ಹಾ ನೇತೃತ್ವದ ಪೀಠ, 7 ದಿನಗಳ ಒಳಗಾಗಿ ಮೊಬೈಲ್ ಟವರ್ ಬಂದ್ ಮಾಡುವಂತೆ ಸೂಚಿಸಿದೆ.