Tag: cancer patient

  • ಆಕ್ಸಿಜನ್ ಕೊರತೆಯಿಂದ ಕ್ಯಾನ್ಸರ್ ರೋಗಿ ಸಾವು- ಕಾರಣ ಅದಲ್ಲ ಅಂತ ವೈದ್ಯರ ವಾದ

    ಆಕ್ಸಿಜನ್ ಕೊರತೆಯಿಂದ ಕ್ಯಾನ್ಸರ್ ರೋಗಿ ಸಾವು- ಕಾರಣ ಅದಲ್ಲ ಅಂತ ವೈದ್ಯರ ವಾದ

    ಕಲಬುರಗಿ: ಲಿಕ್ವಿಡ್ ಆಕ್ಸಿಜನ್ (Liquid Oxygen) ಕೊರತೆಯಿಂದ ಕ್ಯಾನ್ಸರ್ ರೋಗಿಯೊಬ್ಬರು ಸಾವನ್ನಪ್ಪಿರುವಂತಹ ಘಟನೆ ಕಲಬುರಗಿಯ ಕಿದ್ವಾಯಿ ಆಸ್ಪತ್ರೆಯಲ್ಲಿ ನಡೆದಿದೆ.

    ಝಕೀರಾ ಬೇಗಂ ಮೃತ ಮಹಿಳೆ. ಬೀದರ್ ಜಿಲ್ಲೆಯ ಝಕೀರಾ ಬೇಗಂ ಕ್ಯಾನ್ಸರ್ ರೋಗ (Cancer Patient) ದಿಂದ ಬಳಲುತ್ತಿರುವ ಹಿನ್ನೆಲೆ ಕಲಬುರಗಿಯ ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡೋದಕ್ಕೆ ಮುಂದಾಗಿದ್ದರು. ಆದರೆ ಬೆಳಗ್ಗೆ ಕಿದ್ವಾಯಿ ಆಸ್ಪತ್ರೆ (Kidwai Hospital) ಯ ಐಸಿಯುನಲ್ಲಿನ ಆಕ್ಸಿಜನ್ ಖಾಲಿಯಾಗಿದ್ದರಿಂದ ಝಕೀರಾ ಬೇಗಂ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕ ಆತ್ಮಹತ್ಯೆ

    ಮತ್ತೊಂದೆಡೆ ಐಸಿಯುನಲ್ಲಿದ್ದ ಕನ್ಯಾಕುಮಾರಿ ಅನ್ನೋ ಮಹಿಳೆಯನ್ನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೋಡಿಸೋದಕ್ಕೆ ಮುಂದಾಗಿದ್ದಾರೆ. ಇನ್ನೂ ಆಕ್ಸಿಜನ್ ಕೊರತೆಯಿಂದ ಮಹಿಳೆ ಸಾವನ್ನಪ್ಪಿರೋದನ್ನ ಅಲ್ಲಗಳೆದ ಆಸ್ಪತ್ರೆಯ ವೈದ್ಯರು, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಹಿನ್ನೆಲೆ ಸಾವನ್ನಪ್ಪಿದ್ದಾರೆ. ಇನ್ನೂ ಜಸ್ಟ್ 15 ರಿಂದ 20 ನಿಮಿಷದಲ್ಲಿ ಆಕ್ಸಿಜನ್ ಬರುತ್ತಿತ್ತು. ಆದರೆ ರಿಸ್ಕ್ ಬೇಡ ಅಂತಾ ಬೇರೆಡೆ ಕಳುಹಿಸಿದ್ದೇವೆ. ಅದಾದ ಬಳಿಕ ಆ ಆಸ್ಪತ್ರೆಗೆ ದಾಖಲಿಸಿದ ಮೇಲೆ ಆ ಮಹಿಳೆ ಸಾವನ್ನಪ್ಪಿದ್ದಾರೆ ಅಂತಾ ವೈದ್ಯ ಎಡವಟ್ಟಿನ ಹೇಳಿಕೆ ನೀಡಿದ್ದಾರೆ.

    ಅದೃಷ್ಟ ಅಂದ್ರೆ ಜಿಮ್ಸ್ ಆಸ್ಪತ್ರೆಯಲ್ಲಿ ಕನ್ಯಾಕುಮಾರಿ ಅನ್ನೋ ಮಹಿಳೆ ಚಿಕಿತ್ಸೆ ಪಡೆಯೋದಕ್ಕೆ ಮುಂದಾಗಿದ್ದಾರೆ. ಆದರೆ ಕಿದ್ವಾಯಿ ಆಸ್ಪತ್ರೆಯ ವೈದ್ಯ ನವೀನ್ ಕನ್ಯಾಕುಮಾರಿ ಕೂಡ ಸಾವನ್ನಪ್ಪಿದ್ದಾರೆ ಅಂತಾ ಎಡವಟ್ಟಿನ ಹೇಳಿಕೆ ನೀಡಿದ್ದಾರೆ.

  • ಕಾಡಿನಲ್ಲಿ ಚಿತೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ – ಯಲ್ಲಾಪುರದಲ್ಲೊಂದು ವಿಚಿತ್ರ ಘಟನೆ

    ಕಾಡಿನಲ್ಲಿ ಚಿತೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ – ಯಲ್ಲಾಪುರದಲ್ಲೊಂದು ವಿಚಿತ್ರ ಘಟನೆ

    ಕಾರವಾರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ರೀತಿ ನೋಡಿದರೆ ಎಂತವರೂ ಬೆಚ್ಚಿ ಬೀಳಲೇ ಬೇಕು.

    ಹೌದು ಹಲವು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಯಲ್ಲಾಪುರದ ಕೊಂಕಣ ಕೊಪ್ಪದ ಶಿವರಾಮ ರಾಮಕೃಷ್ಣ ಹೆಗಡೆ (60) ಎಂಬುವವರು ತಮ್ಮ ಬಹು ದಿನದ ರೋಗದಿಂದ ಜಿಗುಪ್ಸೆಗೊಂಡಿದ್ದರು. ತಾನು ಸಾಯಬೇಕು ಎಂದು ಸತತ ಎರಡು ತಿಂಗಳಿಂದ ಆಹಾರ ಸೇವನೆ ಬಿಟ್ಟಿದ್ದರು. ನಂತರ ಇವರು ಮನೆಯ ಹತ್ತಿರದ ಕಾಡಿನಲ್ಲಿ ಮರದ ಕಟ್ಟಿಗೆಗಳನ್ನು ಒಟ್ಟುಮಾಡಿ ಚಿತೆಯನ್ನು ಉರಿಸಿ ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮನೆಯಲ್ಲಿ ರಾಮಕೃಷ್ಣ ಹೆಗಡೆ ಕಾಣದಿದ್ದಾಗ ಕುಟುಂಬಸ್ಥರು ಹುಡುಕಿದ್ದಾರೆ. ಈತನ ಮನೆಯ ಸ್ವಲ್ಪ ದೂರದಲ್ಲೇ ಕಾಡಿನಲ್ಲಿ ಈತನ ಬಟ್ಟೆಗಳು ಕಾಣಿಸಿದ್ದು, ಅಲ್ಲಿಯೇ ಉರಿದು ಆರಿಹೋದ ಚಿತೆಯೂ ಕಂಡಿದೆ. ಅಲ್ಲಿ ದೇಹದ ಮೂಳೆಗಳು ಸಿಕ್ಕ ಕಾರಣ ಈತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತು ಪತ್ತೆ ಹಚ್ಚಲಾಗಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕಿನಲ್ಲೇ 450 ಕಿ.ಮೀ. ಪ್ರಯಾಣಿಸಿ ಕ್ಯಾನ್ಸರ್ ರೋಗಿಗೆ ಔಷಧಿ ಕೊಟ್ಟ ಪೇದೆ

    ಬೈಕಿನಲ್ಲೇ 450 ಕಿ.ಮೀ. ಪ್ರಯಾಣಿಸಿ ಕ್ಯಾನ್ಸರ್ ರೋಗಿಗೆ ಔಷಧಿ ಕೊಟ್ಟ ಪೇದೆ

    – ಬೆಂಗಳೂರಿನಿಂದ ಧಾರವಾಡದವರೆಗೂ ಪೇದೆ ಪಯಣ

    ಧಾರವಾಡ: ಲಾಕ್‍ಡೌನ್ ಶುರುವಾದಗಿನಿಂದ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪೊಲೀಸರು ಹಗಲಿರುಳು ಎನ್ನದೇ ಕರ್ತವ್ಯ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಪೊಲೀಸ್ ಪೇದೆ ಕ್ಯಾನ್ಸರ್ ರೋಗಿಯೊಬ್ಬರಿಗೆ ಔಷಧಿ ತಲುಪಿಸಲು 450 ಕಿಲೋ ಮೀಟರ್ ಆಕ್ಟಿವಾ ಬೈಕ್ ಮೇಲೆ ಬರುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಕುಮಾರಸ್ವಾಮಿ ಕ್ಯಾನ್ಸರ್ ರೋಗಿಯೊಬ್ಬರಿಗೆ ಔಷಧಿ ತಲುಪಿಸಿರುವ ಪೊಲೀಸ್ ಪೇದೆ. ಇವರು ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಬ್ಲಿಕ್ ಟಿವಿಯಲ್ಲಿ ಬರುವ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮದಲ್ಲಿ ಧಾರವಾಡದ ಮಣಿಕಂಠನಗರದ ಉಮೇಶ್ ಕೋಟಿ ಎಂಬವರು ತನ್ನ ಕ್ಯಾನ್ಸರ್ ರೋಗದ ಔಷಧಿ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದರು.

    ಈ ಔಷದಿ ಕೇವಲ ಬೆಂಗಳೂರಿನಲ್ಲಿ ಮಾತ್ರ ಸಿಗುತ್ತೆ ಎಂದು ಉಮೇಶ್ ಹೇಳಿದ್ದನ್ನು ಪೊಲೀಸ್ ಪೇದೆ ಕುಮಾರಸ್ವಾಮಿ ಕೇಳಿದ್ದರು. ಇಂದು 450 ಕಿಲೋ ಮೀಟರ್ ದೂರ ಕ್ರಮಿಸಿ ಉಮೇಶ್ ಕೋಟಿಗೆ ಔಷಧಿಯನ್ನ ಮುಟ್ಟಿಸಿದ್ದಾರೆ.

    ಶುಕ್ರವಾರ ಬೆಂಗಳೂರಿನಿಂದ ಉಮೇಶ್‍ಗೆ ಫೋನ್ ಮಾಡಿದ್ದ ಪೇದೆ ಕುಮಾರಸ್ವಾಮಿ ಆನ್‍ನೈಲ್‍ನಲ್ಲಿ ಬುಕ್ ಮಾಡುವಂತೆ ಉಮೇಶ್‍ಗೆ ತಿಳಿಸಿದ್ದರು. ಅದರಂತೆಯೇ ಉಮೇಶ್ ಆನ್‍ಲೈನ್‍ನಲ್ಲಿ ಔಷಧಿಯನ್ನು ಬುಕ್ ಮಾಡಿದ್ದಾರೆ. ಬಳಿಕ ಕುಮಾರಸ್ವಾಮಿ ಔಷಧಿಯನ್ನ ನಿನ್ನೆ ಸಂಜೆಯೇ ತೆಗೆದುಕೊಂಡು ಇಟ್ಟುಕೊಂಡಿದ್ದರು. ಇಂದು ಬೆಳಗಿನ ಜಾವ ಸುಮಾರು 4.30ಕ್ಕೆ ಬೆಂಗಳೂರಿಂದ ಹೊರಟು ಮಧ್ಯಾಹ್ನ 2.30ಕ್ಕೆ ಧಾರವಾಡಕ್ಕೆ ಬಂದಿದ್ದಾರೆ.

    ಉಮೇಶ್‍ಗೆ ಔಷಧಿ ನೀಡಿರುವುದು ಸಂತೋಷವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಇನ್ನೂ ಪೇದೆ ಬಂದ ತಕ್ಷಣ ಉಮೇಶ್ ಮನೆಯವರು ಅವರಿಗೆ ಸನ್ಮಾನ ಮಾಡಿ ಗೌರವಿಸಿದ್ದಾರೆ.

    https://www.facebook.com/339166656101093/videos/251362209372610/

  • 15ರ ಕ್ಯಾನ್ಸರ್ ರೋಗಿ ಮೇಲೆ ಗ್ಯಾಂಗ್‍ರೇಪ್ ಮಾಡಿ ಬೀದಿಗೆಸೆದ್ರು- ಸಹಾಯ ಕೇಳಿದವನಿಂದ್ಲೂ ಮತ್ತೆ ಅತ್ಯಾಚಾರ

    15ರ ಕ್ಯಾನ್ಸರ್ ರೋಗಿ ಮೇಲೆ ಗ್ಯಾಂಗ್‍ರೇಪ್ ಮಾಡಿ ಬೀದಿಗೆಸೆದ್ರು- ಸಹಾಯ ಕೇಳಿದವನಿಂದ್ಲೂ ಮತ್ತೆ ಅತ್ಯಾಚಾರ

    ಲಕ್ನೋ: ಕ್ಯಾನ್ಸರ್ ರೋಗಿಯಾಗಿರೋ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರೋ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.

    ವರದಿಯ ಪ್ರಕಾರ ಬಾಲಕಿಗೆ ಆರೋಪಿ ಪರಿಚಯಸ್ಥನಾಗಿದ್ದು, ತನ್ನ ಸ್ನೇಹಿತನೊಂದಿಗೆ ಸೇರಿ ಅತ್ಯಾಚಾರವೆಸಗಿದ್ದಾನೆ. ನಂತರ ಬಾಲಕಿಯನ್ನ ಬೀದಿಗೆ ಎಸೆದು ಪರಾರಿಯಾಗಿದ್ದಾರೆ. ಇಷ್ಟಾದ ಮೇಲೆ ಬಾಲಕಿ ಸಹಾಯ ಕೇಳಿದ ವ್ಯಕ್ತಿಯೂ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಪೊಲೀಸರ ಪ್ರಕಾರ ಬಾಲಕಿ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಲಕ್ನೋದ ಸರೋಜಿನಿನಗರ್ ಪ್ರದೇಶದ ನಾತ್ಕುರ್ ಗ್ರಾಮದ ನಿವಾಸಿಯಾಗಿದ್ದಾಳೆ.

    ನಡೆದಿದ್ದೇನು?: ಬಾಲಕಿ ದೂರಿನಲ್ಲಿ ತಿಳಿಸಿರುವ ಪ್ರಕಾರ ಶನಿವಾರದಂದು ದಿನಸಿ ತರಲು ಹೋಗಿದ್ದಾಗ ಆಕೆಗೆ ಪರಿಚಯವಿದ್ದ ಶುಭಂ ಎಂಬಾತ ಮನೆಗೆ ಡ್ರಾಪ್ ಮಾಡೋದಾಗಿ ಕರೆದಿದ್ದಾನೆ. ಆದ್ರೆ ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಆತ ಮತ್ತು ಆತನ ಸ್ನೇಹಿತ ಸುಮಿತ್ ಸೇರಿ ರಾತ್ರಿ 11 ಗಂಟೆವರೆಗೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತರ ಆಕೆಯನ್ನು ರಸ್ತೆಯ ಬದಿ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ.

    ನಂತರ ಅದೇ ರಸ್ತೆಯಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದ ಸ್ಥಳೀಯ ಕಂಟ್ರಾಕ್ಟರ್ ವೀರೇಂದ್ರ ಯಾದವ್‍ನನ್ನು ತಡೆದ ಬಾಲಕಿ ಸಹಾಯಕ್ಕಾಗಿ ಕೋರಿದ್ದು, ಆತ ಸಹಾಯ ಮಾಡೋ ಬದಲು ಅತ್ಯಾಚಾರವೆಸಗಿದ ಎಂದು ಬಾಲಕಿ ಹೇಳಿದ್ದಾಳೆ. ನಂತರ ಆಕೆಯನ್ನು ಅಲ್ಲೇ ಬಿಟ್ಟು ಆತನೂ ಹೊರಟುಹೋಗಿದ್ದು, ಬಾಲಕಿ ಕೆಲವು ಗಂಟೆಗಳ ಕಾಲ ರಸ್ತೆಯಲ್ಲೇ ಬಿದ್ದಿದ್ದಳು ಎಂದು ವರದಿಯಾಗಿದೆ.

    ಮಧ್ಯರಾತ್ರಿ 2 ಗಂಟೆ ವೇಳೆಗೆ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಕಂಟ್ರಾಕ್ಟರ್‍ನನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

    ಕಳೆದ 5 ವರ್ಷಗಳಿಂದ ಬಾಲಕಿ ಬ್ಲಡ್ ಕ್ಯಾನ್ಸರ್‍ಗಾಗಿ ಲಕ್ನೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆಂದು ವರದಿಯಾಗಿದೆ.