Tag: cancer

  • ನಟ ಉಮೇಶ್ ಆರೋಗ್ಯ ವಿಚಾರಿಸಿದ ಹಿರಿಯ ಕಲಾವಿದರು

    ನಟ ಉಮೇಶ್ ಆರೋಗ್ಯ ವಿಚಾರಿಸಿದ ಹಿರಿಯ ಕಲಾವಿದರು

    ಹಿರಿಯ ನಟ ಎಂಎಸ್ ಉಮೇಶ್ (Umesh) ಮನೆಯಲ್ಲಿ ಕಾಲುಜಾರಿ ಬಿದ್ದು ಸೊಂಟ ಹಾಗೂ ಬಲಗೈ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.

    ಹಿರಿಯ ನಟ ಉಮೇಶ್ ಅವರಿಗೆ ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನಿಂಗ್ ಮಾಡಿದ ಬಳಿಕ ಲಿವರ್‌ನಲ್ಲಿ ಘನಗಾತ್ರದ ಗೆಡ್ಡೆ ಪತ್ತೆಯಾಗಿದೆ. ಲಿವರ್ ಕ್ಯಾನ್ಸರ್ ಆಗಿ ಅದು ಬೇರೆ ಬೇರೆ ಅಂಗಗಳಿಗೆ ಹರಡಿದೆ ಎಂದು ಶಾಂತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಹಿರಿಯ ನಟ ಉಮೇಶ್‌ಗೆ ಕ್ಯಾನ್ಸರ್; 4ನೇ ಸ್ಟೇಜ್‌ನಲ್ಲಿ ಕಾಯಿಲೆ

    ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ನಟ ಉಮೇಶ್ ಅವರ ಆರೋಗ್ಯವನ್ನ ವಿಚಾರಿಸಿದ್ದಾರೆ ಹಿರಿಯ ಕಲಾವಿದರು. ಈ ವೇಳೆ ತಮ್ಮ ಒಡನಾಟ ಹಾಗೂ ಹಳೆದಿನ ಶೂಟಿಂಗ್ ವೇಳೆ ಕಳೆದ ದಿನಗಳನ್ನ ಮೆಲುಕು ಹಾಕಿದ್ದಾರೆ. ಹಿರಿಯ ನಟಿ ಗಿರಿಜಾ ಲೋಕೇಶ್ ಹಾಡು ಹೇಳಿ ಉಮೇಶ ಅವರ ಜೊತೆ ಕೆಲಹೊತ್ತು ಕಾಲಕಳೆದಿದ್ದಾರೆ. ಹಿರಿಯ ನಟಿ ಗಿರಿಜಾ ಲೋಕೇಶ್, ಡಿಂಗ್ರಿ ನಾಗರಾಜ್, ಶ್ರುತಿ ಅವರ ತಾಯಂದಿರು ಹಾಗೂ ತಂದೆ, ನಟ ಗಣೇಶ್ ರಾವ್ ಸೇರಿ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

    ಹಿರಿಯ ನಟ ಉಮೇಶ್ ಅವರು ಕನ್ನಡ ಚಿತ್ರರಂಗ, ರಂಗಭೂಮಿಯಲ್ಲಿ ಕಲಾ ಸೇವೆಯನ್ನ ಸಲ್ಲಿಸಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಬೇಗ ಗುಣಮುಖರಾಗಿ ಬರಲೆಂದು ಆಪ್ತರು, ಅಭಿಮಾನಿಗಳ ಆಶಯವಾಗಿದೆ. ಇದನ್ನೂ ಓದಿ: ಕನ್ನಡಿಗರ ಆಶೀರ್ವಾದ ಇರೋತನಕ ಬಿಗ್‌ ಬಾಸ್‌ ನಿಲ್ಲಲ್ಲ – ಮೌನ ಮುರಿದ ಕಿಚ್ಚ ಸುದೀಪ್‌

  • ಹಿರಿಯ ನಟ ಉಮೇಶ್‌ಗೆ ಕ್ಯಾನ್ಸರ್; 4ನೇ ಸ್ಟೇಜ್‌ನಲ್ಲಿ ಕಾಯಿಲೆ

    ಹಿರಿಯ ನಟ ಉಮೇಶ್‌ಗೆ ಕ್ಯಾನ್ಸರ್; 4ನೇ ಸ್ಟೇಜ್‌ನಲ್ಲಿ ಕಾಯಿಲೆ

    ಸ್ಯಾಂಡಲ್‌ವುಡ್‌ನ ಹಿರಿಯ ನಟ ಉಮೇಶ್‌ (Actor Umesh) ಅವರು ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದಾರೆ. ನಟನಿಗೆ ಕಾಯಿಲೆ 4ನೇ ಸ್ಟೇಜ್‌ನಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಹಿರಿಯ ನಟ ಎಂ.ಎಸ್ ಉಮೇಶ್ ಅವರು ನಿನ್ನೆ (ಅ.10) ಮನೆಯಲ್ಲಿ ಬಿದ್ದು ಕಾಲು ಹಾಗೂ ಭುಜಕ್ಕೆ ಪೆಟ್ಟು ಮಾಡಿಕೊಂಡ ಕಾರಣದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾದ ಬಳಿಕ MRI ಹಾಗೂ CT ಸ್ಕ್ಯಾನಿಂಗ್ ಮಾಡಿದಾಗ ಅವರಿಗೆ ಕ್ಯಾನ್ಸರ್ ಕಾಯಿಲೆ ಪತ್ತೆಯಾಗಿದೆ. ಮುದ್ದಿನ ಪಾಳ್ಯದ ಶಾಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಚೇರ್ಮನ್ ಆದ ಶಿವರಾಜ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕನಕರಾಜನಾದ ನಟ ಅನೂಪ್ ರೇವಣ್ಣ – ಇದು ಸಿಎಂ ಅಭಿಮಾನಿ ಸ್ಟೋರಿ

    ಹಿರಿಯ ಕಲಾವಿದ ಉಮೇಶ್ ಅವರು ಆಗೊಂದು ಈಗೊಂದು ಸಿನಿಮಾ ಮಾಡುತ್ತ ಜೀವನ ನಡೆಸೋದು ಕಷ್ಟವಾದ ಈ ಕಾಲದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದು ಕಡೆ ಕೈಕೊಟ್ಟ ಆರೋಗ್ಯ ಮತ್ತೊಂದೆಡೆ ಕುಟುಂಬದ ನಿರ್ವಹಣೆ. ಹೀಗಾಗಿ, ಚಿತ್ರರಂಗದ ನೆರವಿಗಾಗಿ ಎದುರು ನೋಡುತ್ತಿದ್ದಾರೆ.

    500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ ಉಮೇಶ್ ಅವರಿಗೆ ಉನ್ನತ ಮಟ್ಟದ ಚಿಕಿತ್ಸೆಯ ಅವಶ್ಯಕತೆ ಇದೆ. ಇಷ್ಟೆಲ್ಲಾ ನೋವಿನಲ್ಲೂ ಸಿನಿಮಾದ ಡೈಲಾಗ್ ಹೇಳಿ ನಗೆ ಚಟಾಕಿ ಹಾರಿಸಿದ್ದಾರೆ ಹಿರಿಯ ನಟ ಉಮೇಶ್. ಕ್ಯಾನ್ಸರ್ ಕಾಯಿಲೆ 4ನೇ ಹಂತದಲ್ಲಿ ಇದ್ದು, ಇದಕ್ಕೆ ಚಿಕಿತ್ಸೆ ಆದ ಬಳಿಕ ಮೂಳೆ ಸರ್ಜರಿ ಮಾಡಲು ಸಾಧ್ಯ ಅಂತಿದ್ದಾರೆ ವೈದ್ಯರು. ಇದನ್ನೂ ಓದಿ: ದರ್ಶನ್‌ಗೆ ಜೈಲಲ್ಲಿ ಹಾಸಿಗೆ, ದಿಂಬು ನೀಡದ ವಿಚಾರ – ‘ಜೈಲು ಪರಿಶೀಲಿಸಿ ರಿಪೋರ್ಟ್‌ ಕೊಡಿ’: ಕಾನೂನು ಪ್ರಾಧಿಕಾರಕ್ಕೆ ಕೋರ್ಟ್ ಆದೇಶ

  • ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಿರುತೆರೆ ನಟಿ ಪ್ರಿಯಾ ಮರಾಠೆ ನಿಧನ; 38ನೇ ವಯಸ್ಸಿಗೆ ನಟಿ ದುರಂತ ಅಂತ್ಯ

    ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಿರುತೆರೆ ನಟಿ ಪ್ರಿಯಾ ಮರಾಠೆ ನಿಧನ; 38ನೇ ವಯಸ್ಸಿಗೆ ನಟಿ ದುರಂತ ಅಂತ್ಯ

    ಮುಂಬೈ: ಪವಿತ್ರಾ ರಿಶ್ತಾ ಧಾರಾವಾಹಿಯಲ್ಲಿ ವರ್ಷಾ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ನಟಿ ಪ್ರಿಯಾ ಮರಾಠೆ ಅವರು ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ.

    38 ವಯಸ್ಸಿನ ನಟಿ ಪ್ರಿಯಾ ಎರಡು ವರ್ಷಗಳಿಗೂ ಹೆಚ್ಚು ಕಾಲ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರು ಮೀರಾ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಸುಕಿನ 4 ಗಂಟೆಗೆ ನಿಧನರಾಗಿದ್ದಾರೆ. ಪ್ರಿಯಾ ಅವರು ಪತಿ, ನಟ ಶಾಂತನು ಮೋಘೆ ಅವರನ್ನು ಅಗಲಿದ್ದಾರೆ.

    ಪ್ರಿಯಾ ಅವರು ‘ಯಾ ಸುಖನೋ ಯಾ’ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ನಂತರ ‘ಚಾರ್ ದಿವಸ್ ಸಸುಚೆ’ ಸೇರಿದಂತೆ ಹಲವು ಮರಾಠಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರು ಕಾಮಿಡಿ ಸರ್ಕಸ್‌ನ ಭಾಗವೂ ಆಗಿದ್ದರು.

    ಆಕೆ ‘ಬಡೇ ಅಚ್ಚೆ ಲಗ್ತೆ ಹೈ’ನಲ್ಲಿ ಜ್ಯೋತಿ ಮಲ್ಹೋತ್ರಾ ಪಾತ್ರದಲ್ಲಿ ನಟಿಸಿದ್ದರು. ‘ತು ತಿಥೆ ಮಿ’ ಧಾರವಾಹಿಯಲ್ಲಿಯೂ ಕೆಲಸ ಮಾಡಿದ್ದಾರೆ. ಪ್ರಿಯಾ ಮತ್ತು ಶಾಂತನು 2012 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ಹದಗೆಟ್ಟ ಅನಾರೋಗ್ಯ.. ಉಲ್ಬಣಗೊಂಡ ಕ್ಯಾನ್ಸರ್: ಸಹಾಯ ಕೇಳಿ ಕಣ್ಣೀರಿಟ್ಟ KGF ಚಾಚಾ

    ಹದಗೆಟ್ಟ ಅನಾರೋಗ್ಯ.. ಉಲ್ಬಣಗೊಂಡ ಕ್ಯಾನ್ಸರ್: ಸಹಾಯ ಕೇಳಿ ಕಣ್ಣೀರಿಟ್ಟ KGF ಚಾಚಾ

    ಕೆಜಿಎಫ್ (KGF) ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳ ನಟ ಹರೀಶ್ ರಾಯ್ (Harish Rai) ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಅನ್ನೋ ಮಹಾಮಾರಿ ಅವರನ್ನ ಕಿತ್ತು ತಿನ್ನುತ್ತಿದೆ. ಕೆಜಿಎಫ್ ಸಿನಿಮಾದ ಶೂಟಿಂಗ್ ವೇಳೆ ಕಾಣಿಸಿಕೊಂಡ ಕ್ಯಾನ್ಸರ್ ಮಹಾಮಾರಿ ಹರೀಶ್ ರಾಯ್ ಕಲಾ ಬದುಕಿಗೆ ಕುತ್ತು ತಂದಿದೆ. ಒಂದುಕಡೆ ಸಿನಿಮಾಗಳಿಲ್ಲದೇ ಮನೆಯ ಜವಾಬ್ದಾರಿ ನಿಭಾಯಿಸಲಾಗುತ್ತಿಲ್ಲ. ಮತ್ತೊಂದೆಡೆ ದುಬಾರಿ ಚಿಕಿತ್ಸೆಗಾಗಿ ವೈದ್ಯರು ಹೈಟ್ರಿಟ್ಮೆಂಟ್‌ಗಾಗಿ ಸಲಹೆ ನೀಡಿದ್ದಾರೆ. ಮುಂದಿನ ಹಂತದ ಚಿಕಿತ್ಸೆಗಾಗಿ ಹರೀಶ್ ರಾಯ್‌ಗೆ 70-80 ಲಕ್ಷ ರೂಪಾಯಿ ಹಣ ಹೊಂದಿಸಬೇಕಾದ ಅನಿವಾರ್ಯತೆ ಎದುರಾಗಿದೆ.

    ಹರೀಶ್ ರಾಯ್ `ಪಬ್ಲಿಕ್ ಟಿವಿ’ ಮೂಲಕ ಕನ್ನಡ ಚಿತ್ರರಂಗದ ಕಲಾವಿದರಿಗೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರಿಗೆ ಹಾಗೂ ಸಮಸ್ತ ಕರುನಾಡಿನ ಜನರನ್ನ ಕೈಮುಗಿದು ಕೇಳಿಕೊಂಡಿದ್ದಾರೆ. ಹರೀಶ್ ರಾಯ್ ಅವರಿಗೆ ವೈದ್ಯರು ಸಲಹೆ ನೀಡಿರುವ ಪ್ರಕಾರ ಒಂದು ಇಂಜೆಕ್ಷನ್‌ಗೆ 3.55 ಲಕ್ಷ ರೂ. ವೆಚ್ಚ ತಗುಲಲಿದೆಯಂತೆ. ಈ ಚಿಕಿತ್ಸೆ ಶುರು ಮಾಡಿದ ಮೇಲೆ 21 ದಿನಗಳಿಗೊಂದರಂತೆ ಇಂಜೆಕ್ಷನ್ ನೀಡಬೇಕಾಗುತ್ತೆ. 63 ದಿನಗಳಲ್ಲಿ ಮೂರು ಇಂಜೆಕ್ಷನ್ ನೀಡಬೇಕು. ಅಲ್ಲಿಗೆ ಒಂದು ಸೈಕಲ್ ಕಂಪ್ಲೀಟ್ ಆಗುತ್ತಂತೆ. ಅಂದರೆ ಅಲ್ಲಿಗೆ 10.65,000 ರೂ. ಹಣ ಬೇಕಾಗುತ್ತೆ. ಹೀಗೆ 6 ರಿಂದ 7 ಸೈಕಲ್ ಕಂಪ್ಲೀಟ್ ಮಾಡ್ಬೇಕು. ಅಂದರೆ ಅಲ್ಲಿಗೆ 70-80 ಲಕ್ಷ ಹಣ ಕೇವಲ ಇಂಜೆಕ್ಷನ್‌ಗೆ ಬೇಕಾಗುತ್ತದೆಯಂತೆ. ಸಹಾಯ ಹಸ್ತ ಚಾಚುವರಿಗೆ ಇಲ್ಲಿ ಬ್ಯಾಂಕ್ ಡಿಟೇಲ್ಸ್ ನೀಡಲಾಗಿದೆ.ಇದನ್ನೂ ಓದಿ: ಕೊಪ್ಪಳದಲ್ಲಿ ಗಮನ ಸೆಳೆಯುತ್ತಿದೆ ಜೋಕಾಲಿ ಗಣೇಶ

    ಅಕೌಂಟ್ ಡಿಟೇಲ್ಸ್ :
    ನೇಮ್ : ಹರೀಶ್ ರಾಯ್
    ಅಕೌಂಟ್ ನಂಬರ್: 38510865963
    ಐಎಫ್‌ಎಸ್‌ಸಿ :  SBIN0004408

    ಫೋನ್ ಪೇ & ಗೂಗಲ್ ಪೇ
    7760035557
    9606960656

    ಈ ಇಂಜೆಕ್ಷನ್ ತುಂಬಾ ದುಬಾರಿಯಾಗಿದ್ದು, ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣಬೇಕು ಹೀಗಾಗಿ ಹರೀಶ್ ರಾಯ್ ಸಹಾಯ ಹಸ್ತ ಚಾಚಿದ್ದಾರೆ. ಬಾಲಿವುಡ್‌ನ ನಟ ಸಂಜಯ್ ದತ್ ಅವರಿಗೆ ಕ್ಯಾನ್ಸರ್ ಬಂದ ವೇಳೆ ಅವರಿಗೂ ಈ ಇಂಜೆಕ್ಷನ್ ಕೊಡಲಾಗಿತ್ತು, ಅವರು ಗುಣಮುಖರಾಗಿದ್ದಾರೆ. ಅದೇ ಹೋಪ್ ನನ್ನಲ್ಲೂ ಇದೆ. ಇದಕ್ಕೆ ನಮ್ಮ ಚಿತ್ರರಂಗ, ಕಲಾವಿದರು, ತಂತ್ರಜ್ಞರು, ನಿರ್ಮಾಪಕ, ನಿರ್ದೇಶಕರು, ಫಿಲ್ಮ್ ಚೇಂಬರ್ ಹಾಗೂ ಸಮಸ್ತ ಕರುನಾಡಿನ ಸಿನಿಮಾ ಅಭಿಮಾನಿಗಳು ಮನಸ್ಸು ಮಾಡಬೇಕು. ಈ ಕಾಯಿಲೆಯನ್ನ ಮೆಟ್ಟಿ ನಿಲ್ಲಲು ನನಗೆ ಧೈರ್ಯವಿದೆ ಆದ್ರೆ ಹಣವಿಲ್ಲ. ಹೀಗಾಗಿ ತಾವೆಲ್ಲರೂ ಸಹಾಯ ಮಾಡಿದ್ರೆ ನಾನು ಮತ್ತೆ ಮೊದಲಿನಂತೆ ಆಗುತ್ತೇನೆ ಎಂದು ʻಪಬ್ಲಿಕ್ ಟಿವಿʼ ಮೂಲಕ ಹರೀಶ್ ರಾಯ್ ಕೇಳಿಕೊಂಡಿದ್ದಾರೆ.

    ಮತ್ತೆ ಮೊದಲಿನಂತೆ ಆರೋಗ್ಯವಾಗಿ ಮರಳಿ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಳ್ಳಬೇಕು. ನನಗೆ ಸಿನಿಮಾ ಇಂಡಸ್ಟ್ರಿನೇ ಎಲ್ಲಾ. ಅದು ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ. ನಾನಿನ್ನು ಕಲಾ ಸರಸ್ವತಿಯ ಸೇವೆ ಮಾಡಬೇಕು. ಅದಕ್ಕಾಗಿ ಗುಣಮುಖರಾಗಿ ಬಂದ ಬಳಿಕ ನಿರ್ದೇಶಕರುಗಳ ಮನೆ ಬಾಗಿಲಿಗೆ ಹೋಗಿ ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತೇನೆ. ನಟರನ್ನ ಭೇಟಿ ಮಾಡಿ ಅವಕಾಶಗಳನ್ನ ಕೊಡುವಂತೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಈ ಹಿಂದೆ ಮೂರುಗಳ ಹಿಂದೆ ಕ್ಯಾನ್ಸರ್ ಟ್ರೀಟ್ಮೆಂಟ್‌ಗಾಗಿ ನಟ ಯಶ್, ದರ್ಶನ್ ಹಾಗು ದುನಿಯಾ ವಿಜಯ್ ಸಹಾಯ ಮಾಡಿರುವ ಬಗ್ಗೆ ನೆನೆದಿದ್ದಾರೆ.ಇದನ್ನೂ ಓದಿ: ರಾಹುಲ್‌ ರ‍್ಯಾಲಿಯಲ್ಲಿ ಮೋದಿಯನ್ನು ನಿಂದಿಸಿದವ ಅರೆಸ್ಟ್‌

  • ತಮಿಳಿನ ಜನಪ್ರಿಯ ಹಾಸ್ಯನಟ ಮಧನ್ ಬಾಬ್ ನಿಧನ

    ತಮಿಳಿನ ಜನಪ್ರಿಯ ಹಾಸ್ಯನಟ ಮಧನ್ ಬಾಬ್ ನಿಧನ

    ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಮಧನ್ ಬಾಬ್ (71) (Madhan Bob) ಶನಿವಾರ ರಾತ್ರಿ ನಿಧನರಾಗಿದ್ದಾರೆ.

    ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ನಟ ಶನಿವಾರ ಸಂಜೆ ಅಡ್ಯಾರ್‌ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 1984ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟ ಮಧನ್‌ ಬಾಬ್‌, ಕಮಲ್ ಹಾಸನ್, ರಜನಿಕಾಂತ್, ಅಜಿತ್ ಕುಮಾರ್‌, ಸೂರ್ಯ ಮತ್ತು ವಿಜಯ್ ಅವರಂತಹ ಸ್ಟಾರ್‌ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಹಾಸ್ಯ, ಖಳನಾಯಕ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ನಟಿಸಿ ಜನರನ್ನ ರಂಜಿಸಿದ್ದರು. ಇದನ್ನೂ ಓದಿ: ಅಶ್ಲೀಲ ಮೆಸೇಜ್ ಮಾಡಿದ್ದ ಮೂವರು ಅರೆಸ್ಟ್ – ಬೆಂಗ್ಳೂರು ಪೊಲೀಸರ ಕಾರ್ಯಕ್ಕೆ ನಟಿ ರಮ್ಯಾ ಮೆಚ್ಚುಗೆ

    ಚಲನಚಿತ್ರೋದ್ಯಮದಲ್ಲಿ ಅವರ ಸುದೀರ್ಘ ವೃತ್ತಿಜೀವನದಲ್ಲಿ, ಅವರು 150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮಿಳು ಮಾತ್ರವಲ್ಲದೆ ಮಲಯಾಳಂ, ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ತಮಿಳಿನ ತೆನಾಲಿ ಚಿತ್ರದಲ್ಲಿ ಡೈಮಂಡ್ ಬಾಬು, ಫ್ರೆಂಡ್ಸ್ ಚಿತ್ರದಲ್ಲಿ ಮ್ಯಾನೇಜರ್ ಸುಂದರೇಶನ್‌ ಪಾತ್ರಗಳು ಪ್ರೇಕ್ಷಕರನ್ನ ನಕ್ಕು ನಲಿಸಿದ್ದವು. ಇದನ್ನೂ ಓದಿ: ಕೂಲಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ `ಎ’ ಸರ್ಟಿಫಿಕೇಟ್

    ಕಳೆದ ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಲ್ಲದ ಮಧನ್ ಬಾಬು ಅವರು 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ನಟನ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಇದನ್ನೂ ಓದಿ: ಮಲಯಾಳಂ ನಟ ಕಲಾಭವನ್ ನವಾಸ್ ಹೋಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆ – ಹೃದಯಾಘಾತ ಶಂಕೆ

  • ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್ – ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರ ಓಪನ್

    ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್ – ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರ ಓಪನ್

    ಬೆಂಗಳೂರು: ಕ್ಯಾನ್ಸರ್ (Cancer) ರೋಗಿಗಳಿಗೆ ಆರೋಗ್ಯ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯದ 16 ಜಿಲ್ಲೆಗಳಲ್ಲಿ ಕೀಮೋಥೆರಪಿ (Chemotherapy) ಕೇಂದ್ರಗಳನ್ನು ಓಪನ್ ಮಾಡಲಾಗುವುದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.

    ವಿಕಾಸ ಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗ ಹೆಚ್ಚಿನ ಸಂಖ್ಯೆಯಲ್ಲಿ ಆಗ್ತಾ ಇದೆ. ಹೀಗಾಗಿ, ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಓಪನ್ ಆಗಲಿವೆ. ಪ್ರತಿ ವರ್ಷ 70 ಸಾವಿರ ಕ್ಯಾನ್ಸರ್ ಖಾಯಿಲೆ ಕಾಣಿಸಿಕೊಳ್ಳುತ್ತಾ ಇದೆ. ಅವರು ಬೆಂಗಳೂರಿಗೆ ಬರಬೇಕು. ಬಡವರು ಕಿದ್ವಾಯಿಯಂತಹ ಸಂಸ್ಥೆಗಳಿಗೆ ಬರಬೇಕು. ಹಾಗಾಗಿ ಬಡವರಿಗೆ ಅನುಕೂಲ ಆಗಲಿ ಅಂತಾ ಓಪನ್ ಮಾಡ್ತಾ ಇದ್ದೇವೆ. ರೋಗಿಗಳು ಹೆಚ್ಚಾಗ್ತಾ ಇದ್ದಾರೆ. ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿದೆ. ಕೀಮೋ ಥೆರಪಿಗಾಗಿ 60% ರೋಗಿಗಳು 100 ಕಿಮೀ ಪ್ರಯಾಣ ಮಾಡಬೇಕು. ಸಮಯ ಮತ್ತು ತೊಂದರೆ, ಖರ್ಚು ಹೆಚ್ಚಾಗ್ತಾ ಇದೆ. ಆದ್ದರಿಂದ ಜಿಲ್ಲಾ ಆಸ್ಪತ್ರೆಗಳಲ್ಲಿ ಕೀಮೋಥೆರಪಿ ಓಪನ್ ಮಾಡ್ತಾ ಇದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮನಗರ ಜಿಲ್ಲೆ ಇನ್ಮುಂದೆ ಬೆಂಗಳೂರು ದಕ್ಷಿಣ – ಹಠ ಸಾಧಿಸಿ ಗೆದ್ದ ಡಿಕೆಶಿ

    ಕಳೆದ ಆಯವ್ಯಯ ಬಜೆಟ್‌ನಲ್ಲಿ ಕೀಮೋ ಥೆರಪಿ ಸ್ಥಾಪನೆ ಮಾಡೋದಾಗಿ ಘೋಷಣೆ ಮಾಡಿದ್ವಿ. ನಾಳೆ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಪ್ರಾರಂಭಿಸುತ್ತಿದ್ದೇವೆ. ಮುಖ್ಯಮಂತ್ರಿಗಳೇ ಮೈಸೂರಿನಲ್ಲಿ ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಕ್ಯಾನ್ಸರ್ ಪತ್ತೆಯಾಗಿದೆ ಅನ್ನುವವರು ಕೀಮೋ ಥೆರಪಿ ಪಡೆಯಬಹುದು. ಎಲ್ಲಾ ರೀತಿಯ ತರಬೇತಿ ಮಾಡಲಾಗಿದೆ. ಮೆಡಿಕಲ್ ಅಂಕಾಲಜಿಸ್ಟ್ ಮಾಡಿದ್ದೇವೆ. ನರ್ಸ್ಗಳಿಗೆ ತರಬೇತಿ ನೀಡುತ್ತಿದ್ದೇವೆ. ಪ್ರತಿ ಆಸ್ಪತ್ರೆಯಲ್ಲಿ 10 ಬೆಡ್ ಮೀಸಲಿಡಲಾಗಿದೆ. ಇಬ್ಬರು ನರ್ಸ್‌ಗಳು ಇರ್ತಾರೆ. ಉಚಿತ ಚಿಕಿತ್ಸೆಗೆ ತುಂಬಾ ಅನುಕೂಲ ಆಗಲಿದೆ. ಬಿಪಿಎಲ್ ಕುಟುಂಗಳಿಗೆ ಉಚಿತವಾಗಿ ಆಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ನಾವೆಲ್ಲ ಒಂದೇ ಟೀಂನಲ್ಲಿ ಇದ್ದವರು, ಈಗ ಮರೆವು ಜಾಸ್ತಿಯಾಗಿದೆ: ಸೋಮಣ್ಣ

    ಕೋವಿಡ್ ಪ್ರಕರಣಗಳ ಕುರಿತು ಮಾತನಾಡಿದ ಸಚಿವರು, ಯಾರೂ ಗಾಬರಿ ಪಡುವ ಅಗತ್ಯವಿಲ್ಲ. 16 ಆಕ್ಟಿವ್ ಕೇಸ್ ಇದಾವೆ ಅಷ್ಟೇ. ಮಾನಿಟರ್ ಮಾಡಿ ಅಂತಾ ಹೇಳಿದ್ದೇವೆ. ಕೇಂದ್ರದಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಯಾವ್ಯಾವ ಆಸ್ಪತ್ರೆಗಳಲ್ಲಿ ಕೀಮೋ ಥೆರಪಿ ಕೇಂದ್ರ?
    * ಇನ್-ಹೌಸ್, ವಿಜಯಪುರ
    * ಇನ್-ಹೌಸ್, ಉಡುಪಿ
    * ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಳ್ಳಾರಿ
    * ಹೆಚ್‌ಸಿಜಿ ಹಾಸ್ಪಿಟಲ್ ಧಾರವಾಡ, ಧಾರವಾಡ
    * ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಚಿತ್ರದುರ್ಗ
    * ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿಜಯನಗರ
    * ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹಾವೇರಿ
    * ಸಂಜೀವಿನಿ ಆಸ್ಪತ್ರೆ, ಬೆಂಗಳೂರು ಗ್ರಾಮಾಂತರ
    * ಸಂಜೀವಿನಿ ಆಸ್ಪತ್ರೆ, ರಾಮನಗರ
    * ಸಂಜೀವಿನಿ ಆಸ್ಪತ್ರೆ, ಬೆಂಗಳೂರು ನಗರ, ಸಿ.ವಿ.ರಾಮನ್ ಆಸ್ಪತ್ರೆ
    * ಕೆಎಂಸಿ, ಮಂಗಳೂರು, ದಕ್ಷಿಣ ಕನ್ನಡ
    * ಕಿದ್ವಾಯಿ ಆಸ್ಪತ್ರೆ, ಮೈಸೂರು
    * ಸಿದ್ಧಾರ್ಥ ಮೆಡಿಕಲ್ ಕಾಲೇಜು, ತುಮಕೂರು
    * ಆರ್.ಎಲ್.ಜಾಲಪ್ಪ ಮೆಡಿಕಲ್ ಕಾಲೇಜು ಆಸ್ಪತ್ರೆ, ಕೋಲಾರ
    * ನಿಜಲಿಂಗಪ್ಪ ಮೆಡಿಕಲ್ ಕಾಲೇಜು ಆಸ್ಪತ್ರೆ, ಬಾಗಲಕೋಟೆ

  • ಗುಂಡು ಹಾರಿಸಿ ಪತ್ನಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ರಿಯಲ್‌ ಎಸ್ಟೇಟ್‌ ಉದ್ಯಮಿ

    ಗುಂಡು ಹಾರಿಸಿ ಪತ್ನಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ರಿಯಲ್‌ ಎಸ್ಟೇಟ್‌ ಉದ್ಯಮಿ

    ನವದೆಹಲಿ: ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.

    ಕುಲದೀಪ್ ತ್ಯಾಗಿ (46) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್‌ನಲ್ಲಿ, ‘ನನಗೆ ಕ್ಯಾನ್ಸರ್ ಇತ್ತು. ಚಿಕಿತ್ಸೆಗೆ ಹಣ ವ್ಯರ್ಥವಾಗಬಾರದು ಎಂದು ಈ ನಿರ್ಧಾರಕ್ಕೆ ಬಂದೆವು. ಪತ್ನಿ ಅಂಶು ತ್ಯಾಗಿ ಮತ್ತು ನಾನು ಒಟ್ಟಿಗೆ ಇರುವುದಾಗಿ ನಿರ್ಧರಿಸಿದೆವು. ಹೀಗಾಗಿ, ಅವಳನ್ನೂ ಕೊಂದಿದ್ದೇನೆ’ ಎಂದು ಉಲ್ಲೇಖವಾಗಿದೆ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಕುಲದೀಪ್ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ. ಇದನ್ನೂ ಓದಿ: ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಕೋಪಗೊಂಡು ನಾದಿನಿಯನ್ನು ಕೊಂದ

    ರಾಧಾ ಕುಂಜ್ ಸೊಸೈಟಿಯಲ್ಲಿರುವ ಮನೆಯಲ್ಲಿ ಕುಲದೀಪ್ ತನ್ನ ಪತ್ನಿಯನ್ನು ಪರವಾನಗಿ ಪಡೆದ ರಿವಾಲ್ವರ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದರು. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಸಮಯದಲ್ಲಿ ಅವರ ಪುತ್ರರು ಮನೆಯಲ್ಲಿದ್ದರು. ಗುಂಡೇಟಿನ ಶಬ್ದ ಕೇಳಿ ಕೋಣೆಗೆ ಧಾವಿಸಿದರು. ಕುಲದೀಪ್ ಮೃತದೇಹ ನೆಲದ ಮೇಲೆ ಮತ್ತು ಅಂಶು ಅವರ ಮೃತದೇಹ ಹಾಸಿಗೆಯ ಮೇಲೆ ಬಿದ್ದಿತ್ತು. ತಕ್ಷಣ ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಾಗಲೇ ಇಬ್ಬರು ಮೃತಪಟ್ಟಿದ್ದರು.

    ಡೆತ್‌ನೋಟ್‌ನಲ್ಲೇನಿತ್ತು?
    ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ಆದರೆ, ಈ ವಿಚಾರ ನನ್ನ ಕುಟುಂಬದವರಿಗೆ ತಿಳಿದಿಲ್ಲ. ಬದುಕುಳಿಯುವುದು ಕಷ್ಟ ಎಂದು ತಿಳಿದಿತ್ತು. ನನ್ನ ಚಿಕಿತ್ಸೆಗೆ ಹಣ ವ್ಯರ್ಥವಾಗಬಾರದು ಎಂದು ನಾನು ಬಯಸುತ್ತೇನೆ. ಬದುಕಿದರೂ, ಸತ್ತರೂ ನಿನ್ನ ಜೊತೆಯೇ ಎಂದು ಪತ್ನಿ ಹೇಳಿದ್ದಳು. ಹಾಗಾಗಿ, ಇಬ್ಬರೂ ಒಟ್ಟಿಗೆ ಸಾಯಲು ನಿರ್ಧರಿಸಿದ್ದೇವೆ. ನಾನು ನನ್ನ ಹೆಂಡತಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೇನೆ. ಇದರಲ್ಲಿ ಯಾರೂ ಕೂಡ ತಪ್ಪಿತಸ್ಥರಲ್ಲ ಎಂದು ಡೆತ್‌ನೋಟ್‌ನಲ್ಲಿ ಕುಲದೀಪ್‌ ಬರೆದಿದ್ದರು. ಇದನ್ನೂ ಓದಿ: ನಾನು ಅವನನ್ನೇ ಮದ್ವೆಯಾಗ್ತೀನಿ – ಭಾವಿ ಅಳಿಯನೊಂದಿಗೆ ಓಡಿಹೋಗಿದ್ದ ಯುಪಿ ಮಹಿಳೆ ಪಟ್ಟು

    ಪೊಲೀಸರು ಪಿಸ್ತೂಲನ್ನು ವಶಪಡಿಸಿಕೊಂಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

  • ಪನ್ನೀರ್ ಪ್ರಿಯರಿಗೆ ಬಿಗ್ ಶಾಕ್ – ಮೆದುವಾಗಿಸಲು ಬಳಸುವ ಕೆಮಿಕಲ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ

    ಪನ್ನೀರ್ ಪ್ರಿಯರಿಗೆ ಬಿಗ್ ಶಾಕ್ – ಮೆದುವಾಗಿಸಲು ಬಳಸುವ ಕೆಮಿಕಲ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ

    – ಕ್ಯಾಲ್ಸಿಯಂ, ಪ್ರೋಟಿನ್ ಪ್ರಮಾಣ ಕಡಿಮೆ

    ಬೆಂಗಳೂರು: ಕಲ್ಲಂಗಡಿ, ಸಿಹಿ ತಿಂಡಿ, ಇಡ್ಲಿ ಬಳಿಕ ಇದೀಗ ಆಹಾರ ಸುರಕ್ಷತಾ ಇಲಾಖೆ ಮತ್ತೆ ಶಾಕ್ ನೀಡುತ್ತಿದ್ದು, ಪನ್ನೀರ್‌ನಲ್ಲಿ (Paneer)  ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿದೆ ಎಂಬುದು ಆಹಾರ ಸುರಕ್ಷತಾ ಇಲಾಖೆ (Department of Food Safety) ವರದಿಯಲ್ಲಿ ಗೊತ್ತಾಗಿದೆ.

    ಹೌದು, ಈ ಮೊದಲು ಆಹಾರ ಸುರಕ್ಷತಾ ಇಲಾಖೆ ಕಲ್ಲಂಗಡಿಯಲ್ಲಿ ಕೆಮಿಕಲ್, ಸಿಹಿ ತಿಂಡಿ ಹಾಗೂ ಇಡ್ಲಿಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ ಮಾಡಿತ್ತು. ಇದೀಗ ಪನ್ನೀರ್‌ನ್ನು ಮೆದುವಾಗಿಸಲು ಬಳಸುವ ಕೆಮಿಕಲ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಇಲಾಖೆಯ ವರದಿ ತಿಳಿಸಿದೆ.ಇದನ್ನೂ ಓದಿ:ದುಬೈ ಮರಳುಗಾಡಿನಲ್ಲಿ ನಟಿ ಫೋಟೋಶೂಟ್- ಬಾಲಿವುಡ್ ಬ್ಯೂಟಿಯಂತೆ ಮಿಂಚಿದ ಇಶಿತಾ

    ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಕಡೆಯ ಪನ್ನೀರ್ ಅನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಲ್ಯಾಬ್ ಟೆಸ್ಟ್ ವರದಿ ಬಂದಿದ್ದು, ಆತಂಕಕಾರಿ ಅಂಶ ಬಯಲಾಗಿದೆ. ಪನ್ನೀರ್‌ನಲ್ಲಿ ಕ್ಯಾಲ್ಸಿಯಂ ಹಾಗೂ ಪ್ರೋಟಿನ್ ಪ್ರಮಾಣ ಕಡಿಮೆಯಿರುವುದು ಕಂಡುಬಂದಿದೆ. ಪನ್ನೀರ್ ತಯಾರಿಸುವಾಗ ಕಡಿಮೆ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಪ್ರೋಟಿನ್‌ಅನ್ನು ಬಳಸುತ್ತಾರೆ ಮತ್ತು ಪನ್ನೀರ್‌ನ್ನು ಮೆದುವಾಗಿಸಲು ಕೆಮಿಕಲ್ ಬಳಸುತ್ತಾರೆ. ಈ ಕೆಮಿಕಲ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಆಹಾರ ಸುರಕ್ಷತಾ ಇಲಾಖೆ ವರದಿ ತಿಳಿಸಿದೆ.

    ಆರೋಗ್ಯ ಸಮಸ್ಯೆಗಳೇನು?
    1. ಹೃದಯ ಸಂಬಂಧಿ ಖಾಯಿಲೆಗೆ ಕಾರಣ
    2. ಕೆಮಿಕಲ್ ಬಳಕೆ ಕ್ಯಾನ್ಸರ್‌ಗೆ ಕಾರಣ
    3. ಕೊಬ್ಬಿನ ಪ್ರಮಾಣ ಹೆಚ್ವಾಗುತ್ತದೆ.
    4. ಕಿಡ್ನಿ ಸಮಸ್ಯೆ ಉಂಟಾಗುತ್ತದೆ.

    ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಹಾಗೂ ತಿನಿಸುಗಳಲ್ಲಿ ಹೆಚ್ಚಾಗಿ ಕಲಬೆರಿಕೆ ಅಂಶ ಪತ್ತೆಯಾಗಿತ್ತಿರುವ ಹಿನ್ನೆಲೆ ಬೆಂಗಳೂರು ನಗರದಲ್ಲಿ ಆಹಾರ ಸುರಕ್ಷತಾ ಇಲಾಖೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಾರತಹಳ್ಳಿ, ವೈಟ್‌ಫೀಲ್ಡ್, ದೊಡ್ಡನಕ್ಕುಂದಿ, ಔಟರ್ ರಿಂಗ್ ರೋಡ್, ಮಹಾದೇವಪುರ ಸುತ್ತಮುತ್ತ ಇಲಾಖೆಯ ಅಧಿಕಾರಿಗಳು ಆಹಾರ ಪದಾರ್ಥಗಳ ಕಲರಿಂಗ್ ಮತ್ತು ಕಲಬೆರಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಕಲಬೆರಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ:ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲೀಮರೂ ಸುರಕ್ಷಿತ – ಯೋಗಿ ಆದಿತ್ಯನಾಥ್‌

  • ಮಕ್ಕಳಲ್ಲೂ ಕಾಡ್ತಿದೆ ಮಾರಕ ಕ್ಯಾನ್ಸರ್ – ಅಂಕಿ ಅಂಶ ಬಿಚ್ಚಿಟ್ಟ ಶರಣು ಪ್ರಕಾಶ್ ಪಾಟೀಲ್

    ಮಕ್ಕಳಲ್ಲೂ ಕಾಡ್ತಿದೆ ಮಾರಕ ಕ್ಯಾನ್ಸರ್ – ಅಂಕಿ ಅಂಶ ಬಿಚ್ಚಿಟ್ಟ ಶರಣು ಪ್ರಕಾಶ್ ಪಾಟೀಲ್

    ಬೆಂಗಳೂರು: ಮಕ್ಕಳಲ್ಲಿ ಹೆಚ್ಚು ಕ್ಯಾನ್ಸರ್ (Cancer) ಪತ್ತೆ ಆಗುತ್ತಿರುವುದು ಬೆಳಕಿಗೆ ಬಂದಿದೆ. ಖುದ್ದು ರಾಜ್ಯ ಸರ್ಕಾರವೇ ಈ‌ ಬಗ್ಗೆ ಅಂಕಿ ಅಂಶಗಳನ್ನು ಕೊಟ್ಟಿದೆ. ಈ ಬಗ್ಗೆ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ (Congress) ಸದಸ್ಯೆ ಉಮಾಶ್ರೀಯವರ ಪ್ರಶ್ನೆಗೆ ಸಚಿವ ಶರಣು ಪ್ರಕಾಶ್ ಪಾಟೀಲ್ (Sharanu Prakash Patil) ಉತ್ತರ ನೀಡಿದ್ದಾರೆ.

    ಪ್ರತಿ ವರ್ಷ ರಾಜ್ಯದಲ್ಲಿ 0-14 ವಯಸ್ಸಿನ ಮಕ್ಕಳಲ್ಲಿ 1533 ಪ್ರಕರಣಗಳು ಕಂಡುಬರುತ್ತಿವೆ. ಗಂಡುಮಕ್ಕಳಲ್ಲಿ 876 ಕೇಸ್ ಮತ್ತು ಹೆಣ್ಣುಮಕ್ಕಳಲ್ಲಿ 657 ಕೇಸ್ ದಾಖಲಾಗುತ್ತಿದೆ. ಗಂಡು ಮಕ್ಕಳಲ್ಲಿ ಸಾಮಾನ್ಯವಾಗಿ 45% ರಕ್ತ ಕ್ಯಾನ್ಸರ್ ಹಾಗೂ 14.5% ಲಿಂಪೋಮಾ ಕ್ಯಾನ್ಸರ್, 12.9 % ಮೆದುಳು, 5.6% ಮೂಳೆ ಸಂಬಂಧಿಸಿದ ಕ್ಯಾನ್ಸರ್, 3.6% ಮೂತ್ರಪಿಂಡ ಕ್ಯಾನ್ಸರ್, 2.6% ಕಣ್ಣಿನ ಕ್ಯಾನ್ಸರ್ ಬರುತ್ತಿದೆ.

    ಹೆಣ್ಣುಮಕ್ಕಳಲ್ಲಿ 44.6% ರಕ್ತ ಕ್ಯಾನ್ಸರ್, 12.1% ಮೆದುಳು- ನರ ಕ್ಯಾನ್ಸರ್, 9.5% ದುಗ್ದ ಗ್ರಂಥಿ ಅಥವಾ ಲಿಂಪೋಮಾ ಕ್ಯಾನ್ಸರ್, 5.8% ಮೂಳೆ ಕ್ಯಾನ್ಸರ್ ಹಾಗೂ 3.4% ಮೃದು ಅಂಗಾಂಗ ಕ್ಯಾನ್ಸರ್ ಪತ್ತೆಯಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಕಿದ್ವಾಯಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದ್ದೇವೆ. ಎಲ್ಲಾ ರೀತಿ ಕ್ಯಾನ್ಸರ್ ಚಿಕಿತ್ಸೆ ಕೊಡುತ್ತಿದ್ದೇವೆ. ಬೋನ್ ಮ್ಯಾರೋ ಚಿಕಿತ್ಸೆ ಕೂಡಾ ಕಿದ್ವಾಯಿ ಆಸ್ಪತ್ರೆಯಲ್ಲಿ ಈಗ ಕೊಡುತ್ತಿದ್ದೇವೆ. ABRKಯಲ್ಲಿ ಚಿಕಿತ್ಸೆಗೆ ಹಣ ಕೊಡಲು ತೀರ್ಮಾನ ಮಾಡಲಾಗಿದೆ. ಕ್ಯಾನ್ಸರ್ ಜಾಗೃತಿ ಮೂಡಿಸೋ ಕೆಲಸ ಮಾಡ್ತಿದ್ದಾರೆ. 4 ಭಾಗದಲ್ಲಿ ಮಕ್ಕಳ ಕ್ಯಾನ್ಸರ್‌ಗೆ ಚಿಕಿತ್ಸೆಗೆ ಆಸ್ಪತ್ರೆ ನಿರ್ಧಾರ ಮಾಡಲಾಗಿದೆ. ಇನ್ನೂ ಮೈಸೂರು, ಕಲಬುರ್ಗಿ, ಹುಬ್ಬಳ್ಳಿಯಲ್ಲಿ ಆಸ್ಪತ್ರೆಯಲ್ಲಿ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ಕ್ಯಾನ್ಸರ್ ಬಗ್ಗೆ ಜಿಲ್ಲಾ, ತಾಲೂಕು ಮಟ್ಟದ ಜಾಗೃತಿ ಮೂಡಿಸಲು ಕ್ರಮವಹಿಸುತ್ತೇವೆ ಎಂದು ತಿಳಿಸಿದ್ದಾರೆ.

  • ಇಡ್ಲಿ ಬಳಿಕ ಹೋಳಿಗೆ ಪ್ರಿಯರಿಗೆ ಶಾಕ್!

    ಇಡ್ಲಿ ಬಳಿಕ ಹೋಳಿಗೆ ಪ್ರಿಯರಿಗೆ ಶಾಕ್!

    ಬೆಂಗಳೂರು: ಇಡ್ಲಿ (Idli) ಬಳಿಕ ಹೋಳಿಗೆ (Holige) ಪ್ರಿಯರಿಗೆ ಶಾಕ್ ಎದುರಾಗಿದೆ. ಇದೀಗ ಹೋಳಿಗೆಯೂ ನಿಮ್ಮ ಆರೋಗ್ಯಕ್ಕೆ ಕಂಟಕ ತರಬಹುದು. ಹೋಳಿಗೆ ತಯಾರು ಮಾಡುತ್ತಿದ್ದ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಪ್ಲಾಸ್ಟಿಕ್ (Plastic) ಬಳಕೆ ಮಾಡಿಕೊಂಡು ಹೋಳಿಗೆ ತಯಾರಿಸುತ್ತಿರುವುದು ಪತ್ತೆಯಾಗಿದೆ.

    ಪ್ಲಾಸ್ಟಿಕ್ ಕವರ್ ಬಳಕೆ ಮಾಡಿಕೊಂಡು ಹೋಳಿಗೆ ತಯಾರಿಸುವುದು ಕ್ಯಾನ್ಸರ್‌ಗೆ (Cancer) ಕಂಟಕವಾಗಬಹುದು. ಪ್ಲಾಸ್ಟಿಕ್ ಶಾಖದಿಂದ ಕೆಮಿಕಲ್ ಹೊರಸೂಸಿ ಕ್ಯಾನ್ಸರ್ ರೋಗಕ್ಕೆ ಎಡೆಮಾಡಿಕೊಡಬಹುದು. ಆಹಾರ ಸುರಕ್ಷತೆ ಮತ್ತು ಔಷಧ ಗುಣಮಟ್ಟ ಇಲಾಖೆಯ ಅಧಿಕಾರಿಗಳ ತಪಾಸಣೆಯಲ್ಲಿ ಈ ಶಾಕಿಂಗ್ ವಿಚಾರ ಬಯಲಾಗಿದೆ. ಇದನ್ನೂ ಓದಿ: ಕೆಆರ್‌ ನಗರ ರೇಪ್‌ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ – ಹೈಕೋರ್ಟ್‌ ಮೊರೆ ಹೋದ ಭವಾನಿ ರೇವಣ್ಣ

    ಮೈಸೂರಿನ ಎರಡು ಹೋಟೆಲ್‌ಗಳ ಮೇಲೆ ದಾಳಿ ಮಾಡಿದ ವೇಳೆ ಪ್ಲಾಸ್ಟಿಕ್ ಕವರ್ ಬಳಸಿ ಹೋಳಿಗೆ ತಯಾರು ಮಾಡುವುದು ಕಂಡುಬಂದಿದೆ. ಈ ಹಿನ್ನೆಲೆ ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅಂಗಡಿಗಳಿಗೆ ಆಹಾರ ಸುರಕ್ಷತಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ಶಾಸಕರಿಗಾಗಿ ವಿಧಾನಸೌಧಕ್ಕೆ ಬಂತು ರಿಕ್ಲೈನರ್‌, ಮಸಾಜ್ ಚೇರ್‌ಗಳು – ಬೆಲೆ ಎಷ್ಟು?