Tag: Cancellation

  • ಕೊಪ್ಪಳ | 6 ತಿಂಗಳಿಂದ ಪಡಿತರ ಪಡೆಯದ 5,779 ಬಿಪಿಎಲ್ ಕಾರ್ಡ್‌ ರದ್ದು

    ಕೊಪ್ಪಳ | 6 ತಿಂಗಳಿಂದ ಪಡಿತರ ಪಡೆಯದ 5,779 ಬಿಪಿಎಲ್ ಕಾರ್ಡ್‌ ರದ್ದು

    ಕೊಪ್ಪಳ: ಪ್ರತಿ ತಿಂಗಳೂ ಪಡಿತರ ಪಡೆಯಿರಿ. ಇಲ್ಲದಿದ್ದರೆ, ರೇಷನ್ ಕಾರ್ಡ್ ರದ್ದಾಗಲಿವೆ ಎಂದು ಪಡಿತರ ಪಡೆಯದ ಕಾರ್ಡ್‌ಗಳನ್ನು ಸರ್ಕಾರ ರದ್ದುಪಡಿಸುತ್ತಿದೆ. ಈಗಾಗಲೇ ಕೊಪ್ಪಳ (Koppal) ಜಿಲ್ಲೆಯಲ್ಲಿ 5,779 ಕಾರ್ಡ್‌ಗಳು ರದ್ದಾಗಿವೆ.

    ಆಹಾರ ಮತ್ತು ಸರಬರಾಜು ಇಲಾಖೆ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಎಂದು ಮೂರು ವರ್ಗಗಳಲ್ಲಿ ರೇಷನ್ ಕಾರ್ಡ್ ವಿತರಣೆ ಮಾಡಿದೆ. ಈ ಕಾರ್ಡ್‌ಗಳನ್ನು ಹೊಂದಿದವರು ಪಡಿತರ ಅಂಗಡಿಗೆ ತೆರಳಿ ಪಡಿತರ ಪಡೆಯಬೇಕು. ಆದರೆ ಕೆಲವು ಕಾರ್ಡ್‌ದಾರರು ಪಡಿತರ ಪಡೆಯುತ್ತಿಲ್ಲ. ಇದನ್ನು ಗಮನಿಸಿದ ಸರ್ಕಾರವು ಇಂತಹ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ.ಇದನ್ನೂ ಓದಿ: ಬಿಜೆಪಿ ಮೇಲೆ ಆಪರೇಷನ್ ಕಮಲದ ಆರೋಪ ಮಾಡ್ತಿರೋ ರವಿ ಗಣಿಗ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ರೇಣುಕಾಚಾರ್ಯ ಸವಾಲ್

    ಜಿಲ್ಲೆಯಲ್ಲಿಯೂ ಬಿಪಿಎಲ್ ಕಾರ್ಡ್‌ಗಳು (BPL Card) ಎಪಿಎಲ್ ಆಗಿ ಪರಿವರ್ತಿಸಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 923 ಕಾರ್ಡ್‌ಗಳು ಬಿಪಿಎಲ್‌ನಿಂದ ಎಪಿಎಲ್ ಆಗಿವೆ. ಸಾರ್ವಜನಿಕರು ಪಡಿತರ ಅಂಗಡಿಗಳಿಗೆ ಹೋದಾಗಲೇ ಈ ವಿಚಾರ ಗೊತ್ತಾಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕೊಪ್ಪಳ ಜಿಲ್ಲೆಯೊಂದರಲ್ಲಿಯೇ 5,779 ಕಾರ್ಡ್ ರದ್ದಾಗಿದ್ದು, ರಾಜ್ಯಾದ್ಯಂತ ಎಷ್ಟು ಕಾರ್ಡ್‌ಗಳು ರದ್ದಾಗಿರಬಹುದು ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

    ಜಿಲ್ಲೆಯಲ್ಲಿರುವ 9,209 ಅನರ್ಹ ಕಾರ್ಡ್‌ಗಳನ್ನು ರದ್ದು ಮಾಡಲು ಸರ್ಕಾರ ಜಿಲ್ಲಾಡಳಿತಕ್ಕೆ ತಿಳಿಸಿದೆ. ಈ ಕಾರ್ಡ್‌ದಾರರು 1.20 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿರುವವರು, ಆದಾಯ ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರು ಆಗಿದ್ದಾರೆ. ಈ ಕಾರ್ಡ್‌ಗಳನ್ನು ಪರಿಶೀಲಿಸಲಾಗುತ್ತಿದ್ದು, ಹಂತ-ಹಂತವಾಗಿ ರದ್ದು ಮಾಡುವ ಪ್ರಕ್ರಿಯೆಯಲ್ಲಿ ಇಲಾಖೆ ನಿರತವಾಗಿದೆ.ಇದನ್ನೂ ಓದಿ: ಪ್ರಧಾನಿ ಮೋದಿಗೆ ಗಯಾನಾದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ

  • ಆಂಧ್ರದಲ್ಲಿ ರೈಲು ದುರಂತ – 12 ರೈಲುಗಳ ಸಂಚಾರ ರದ್ದು

    ಆಂಧ್ರದಲ್ಲಿ ರೈಲು ದುರಂತ – 12 ರೈಲುಗಳ ಸಂಚಾರ ರದ್ದು

    ಅಮರಾವತಿ: ಆಂಧ್ರ ಪ್ರದೇಶದಲ್ಲಿ (Andhra Pradesh) ಭಾನುವಾರ ರಾತ್ರಿ ಸಂಭವಿಸಿದ ರೈಲು ದುರಂತದಲ್ಲಿ (Train Tragedy) ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎರಡು ರೈಲುಗಳ ಮಧ್ಯೆ ಸಂಭವಿಸಿದ ಅಪಘಾತದಿಂದಾಗಿ 12 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ (Cancelled) ಎಂದು ರೈಲ್ವೆ ಇಲಾಖೆ (Railway Department) ತಿಳಿಸಿದೆ.

    ಭಾನುವಾರ ಆಂಧ್ರ ಪ್ರದೇಶದ ವಿಜಯನಗರದಲ್ಲಿ (Vijayanagara) ಎರಡು ಪ್ಯಾಸೆಂಜರ್ ರೈಲುಗಳ ಮಧ್ಯೆ ಸಂಭವಿಸಿದ ಅಪಘಾತದ ನಂತರ 12 ರೈಲುಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೇ 15 ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದ್ದು, 7 ಇತರ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ಪೂರ್ವ ಕರಾವಳಿ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭೀಕರ ರೈಲು ದುರಂತ ಪ್ರಕರಣ- ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ

    ಘಟನೆಯಲ್ಲಿ ಇಲ್ಲಿಯವರೆಗೆ 40 ಮಂದಿ ಗಾಯಗೊಂಡಿದ್ದಾರೆ. 32 ಮಂದಿಯನ್ನು ವಿಜಯನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆಡಿಕೋವರ್ ಆಸ್ಪತ್ರೆಯಲ್ಲಿ ಇಬ್ಬರನ್ನು ದಾಖಲಿಸಿದ್ದು, ಎನ್‌ಆರ್‌ಐ ಆಸ್ಪತ್ರೆಯಲ್ಲಿ ಒಬ್ಬರನ್ನು ದಾಖಲಿಸಲಾಗಿದೆ. 4 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಗಾಯಗೊಂಡವರೆಲ್ಲರೂ ಆಂಧ್ರಪ್ರದೇಶದವರಾಗಿದ್ದಾರೆ ಎಂದು ವಿಜಯನಗರ ಜಿಲ್ಲಾಡಳಿತ ತಿಳಿಸಿದೆ. ಇದನ್ನೂ ಓದಿ: ಕೇರಳದಲ್ಲಿ ಸ್ಫೋಟ ಪ್ರಕರಣ- ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

    ವಿಶಾಖಪಟ್ಟಣದಿಂದ ಪಲಾಸಕ್ಕೆ ಹೋಗುತ್ತಿದ್ದ ವಿಶೇಷ ಪ್ಯಾಸೆಂಜರ್ ರೈಲು ಸಿಗ್ನಲ್ ಇಲ್ಲದ ಕಾರಣ ಕೊತ್ಸವತ್ಸಲ ಬಳಿಯ ಅಳಮಂಡ ಮತ್ತು ಕಂಟಕಪಲ್ಲಿ ನಡುವೆ ಹಳಿಗಳ ಮೇಲೆ ನಿಂತಿದ್ದು, ವೈಜಾಗ್-ರಾಯಗಡ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂರು ಬೋಗಿಗಳು ಹಳಿತಪ್ಪಿವೆ. ಮಾನವ ದೋಷದಿಂದ ದುರಂತ ಸಂಭವಿಸಿದೆ ಎಂದು ರೈಲ್ವೆ ಮೂಲಗಳು ತಿಳಿಸಿದ್ದು, ಸಿಗ್ನಲಿಂಗ್ ಅನ್ನು ಲೋಕೋ ಪೈಲಟ್ ಗಮನಿಸದ ಪರಿಣಾಮ ದುರಂತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಆಂಧ್ರದಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲಿಗೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ; 6 ಮಂದಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೋಂಕು ಹರಡುವ ಭೀತಿ – ಹಜ್ ಯಾತ್ರೆ ರದ್ದುಗೊಳಿಸಿದ ಭಾರತ

    ಸೋಂಕು ಹರಡುವ ಭೀತಿ – ಹಜ್ ಯಾತ್ರೆ ರದ್ದುಗೊಳಿಸಿದ ಭಾರತ

    ನವದೆಹಲಿ: ಕೊರೊನಾ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಈ ಬಾರಿ ಭಾರತದಿಂದ ಹಜ್ ಯಾತ್ರೆ ರದ್ದು ಮಾಡಲಾಗಿದೆ ಎಂದು ಕೇಂದ್ರ ಅಲ್ಪ ಸಂಖ್ಯಾತರ ಕಲ್ಯಾಣ ಖಾತೆ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.

    ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಬಾರಿ ಹಜ್ ಯಾತ್ರೆಗೆ ಭಾರತದಿಂದ ಯಾರ್ಥಾತ್ರಿಗಳನ್ನು ಕಳುಹಿಸದಂತೆ ಸೌದಿ ಅರೇಬಿಯಾದ ಸಚಿವ ಡಾ. ಮೊಹಮ್ಮದ್ ಸಲೇಹ್ ಬಿನ್ ತಾಹೆರ್ ಬೆಂಟನ್ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಯಾತ್ರೆ ರದ್ದುಗೊಳಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಸೋಮವಾರ ದೂರವಾಣಿ ಕರೆ ಮಾಡಿದ್ದ ಡಾ. ಮೊಹಮ್ಮದ್ ಸಲೇಹ್ ಬಿನ್ ತಾಹೆರ್ ಬೆಂಟನ್, ಹಜ್ ಯಾತ್ರೆಗೆ ಅವಕಾಶ ನೀಡಿದರೆ ಸೋಂಕು ಹೆಚ್ಚಾಗಬಹುದು. ಇದರಿಂದ ಎರಡು ದೇಶಗಳಿಗೆ ಅಪಾಯ ಎದುರಾಗಬಹುದು ಹೀಗಾಗಿ ಈ ಬಾರಿ ಭಾರತದಿಂದ ಯಾತ್ರೆಗೆ ಯಾತ್ರಿಗಳನ್ನು ಕಳುಹಿಸದಂತೆ ಮನವಿ ಮಾಡಿದ್ದಾರೆ ಎಂದು ಸಚಿವ ನಕ್ವಿ ತಿಳಿಸಿದರು.

    ಭಾರತದಲ್ಲಿ ಈವರೆಗೂ 2.13 ಲಕ್ಷ ಅರ್ಜಿಗಳು ಹಜ್ ಯಾತ್ರೆಗೆ ಸ್ವೀಕೃತಗೊಂಡಿದೆ. ಯಾತ್ರೆ ರದ್ದಾದ ಕಾರಣ ಅವರ ಹಣವನ್ನು ದಂಡ ಶುಲ್ಕವಿಲ್ಲದೇ ಮರುಪಾವತಿಸುವ ಪ್ರಕ್ರಿಯೆ ನಡೆದಿದೆ ಎಂದರು. ಈ ವರ್ಷ 2,300ಕ್ಕೂ ಹೆಚ್ಚು ಮಹಿಳೆಯರು ಮೆಹ್ರಾಮ್ ಇಲ್ಲದೆ ಹಜ್ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಈ ಮಹಿಳೆಯರಿಗೆ ಹಜ್ 2020ಗೆ ಅರ್ಜಿ ಸಲ್ಲಿಸಿದ ಆಧಾರದ ಮೇಲೆ ಹಜ್ 2021ಗೆ ಹೋಗಲು ಅವಕಾಶವಿರುತ್ತದೆ. ಅಲ್ಲದೆ ಹೊಸ ಅರ್ಜಿ ಸಲ್ಲಿಸುವ ಮಹಿಳೆಯರಿಗೂ ಮುಂದಿನ ವರ್ಷ ಹಜ್‍ಗೆ ಹೋಗಲು ಅವಕಾಶವಿರುತ್ತದೆ ಎಂದು ಸ್ಪಷ್ಟನೆ ನೀಡಿದರು.

    2019ರಲ್ಲಿ ಒಟ್ಟು 2ಲಕ್ಷ ಭಾರತೀಯ ಮುಸ್ಲಿಮರು ಹಜ್ ಮಾಡಿದ್ದಾರೆ. ಈ ಯಾತ್ರಾರ್ಥಿಗಳಲ್ಲಿ 50 ಪ್ರತಿಶತ ಮಹಿಳೆಯರು ಸೇರಿದ್ದಾರೆ. 2018ರಲ್ಲಿ ಮೆಹ್ರಾಮ್ (ಪುರುಷ ಒಡನಾಡಿ) ಇಲ್ಲದೆ ಮುಸ್ಲಿಂ ಮಹಿಳೆಯರು ಹಜ್ ಮಾಡಬಹುದು ಎಂದು ಸರ್ಕಾರ ಖಚಿತಪಡಿಸಿದ ನಂತರ ಒಟ್ಟು 3,040 ಮಹಿಳೆಯರು ಹಜ್ ಯಾತ್ರೆ ಮಾಡಿದ್ದಾರೆ.

  • ಗಣೇಶ ಹಬ್ಬ ಆಚರಿಸಲು ಅನುಮತಿ ಪಡೆಯುವ ನಿಯಮ ರದ್ದು ಮಾಡಿ: ಯತ್ನಾಳ್ ಮನವಿ

    ಗಣೇಶ ಹಬ್ಬ ಆಚರಿಸಲು ಅನುಮತಿ ಪಡೆಯುವ ನಿಯಮ ರದ್ದು ಮಾಡಿ: ಯತ್ನಾಳ್ ಮನವಿ

    ಬೆಂಗಳೂರು: ಗಣೇಶ ಹಬ್ಬ ಆಚರಿಸಲು ಅನುಮತಿ ಪಡೆಯುವ ನಿಯಮ ರದ್ದು ಮಾಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದ್ದಾರೆ.

    ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಯತ್ನಾಳ್ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸಲು ಅವಕಾಶ ಮಾಡಿಕೊಡಿ. ಎಲ್ಲದಕ್ಕೂ ನಿರ್ಬಂಧ ಹಾಕಿದರೆ ಹಬ್ಬ ಆಚರಣೆ ಮಾಡಲು ಆಗುವುದಿಲ್ಲ ಎಂದು ಮನವಿ ಮಾಡಿದರು.

    ಹಬ್ಬದಲ್ಲಿ ಡಿಜೆ ಹಾಕೋಕು ಅನುಮತಿ ಪಡೆಯಬೇಕು. ಹೀಗಾಗಿ ಧರ್ಮದ ಹಿರಿಯರು, ಸಂಘ ಸಂಸ್ಥೆಗಳು ನನ್ನ ಭೇಟಿಯಾಗಿ ಮನವಿ ಮಾಡಿದ್ದಾರೆ. ಸರ್ಕಾರದ ಹಬ್ಬ ಆಚರಣೆ ಮಾಡಲು ಅನುಮತಿ ಪಡೆಯುವ ನಿಯಮವನ್ನು ರದ್ದುಗೊಳಿಸಬೇಕು. ಹಿಂದೂಗಳು ನಿರ್ಭೀತಿ ಇಂದ ಹಬ್ಬ ಆಚರಿಸಲು ಅವಕಾಶ ಮಾಡಿಕೊಡಿ. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಚಳುವಳಿ ಮಾಡುತ್ತೇವೆ ಎಂದು ನನ್ನ ಬಳಿ ಹೇಳಿದ್ದಾರೆ. ಹೀಗಾಗಿ ನಾನು ಇಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

  • ಪಾಕ್‍ಗೆ ಸಂಚರಿಸುವ ಥಾರ್ ಲಿಂಕ್ ಎಕ್ಸ್‌ಪ್ರೆಸ್‌ ಸ್ಥಗಿತಗೊಳಿಸಿದ ಭಾರತ

    ಪಾಕ್‍ಗೆ ಸಂಚರಿಸುವ ಥಾರ್ ಲಿಂಕ್ ಎಕ್ಸ್‌ಪ್ರೆಸ್‌ ಸ್ಥಗಿತಗೊಳಿಸಿದ ಭಾರತ

    ನವದೆಹಲಿ: ಪಾಕಿಸ್ತಾನವು ಜೋಧ್‍ಪುರ-ಕರಾಚಿಯನ್ನು ಸಂಪರ್ಕಿಸುವ ಥಾರ್ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಭಾರತ ಜೋಧ್‍ಪುರ-ಮುನಾಬಾವೊ ಸಂಪರ್ಕಿಸುವ ಥಾರ್ ಲಿಂಕ್ ಎಕ್ಸ್‌ಪ್ರೆಸ್‌ ಅನ್ನು ರದ್ದುಗೊಳಿಸಿದೆ.

    ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ನಿರ್ಧಾರ ಪಾಕಿಸ್ತಾನವನ್ನು ವಿಚಲಿತಗೊಳಿಸಿದ್ದು, ಎರಡೂ ರಾಷ್ಟ್ರಗಳ ಸಂಬಂಧಗಳಲ್ಲಿ ಮತ್ತಷ್ಟು ಬಿರುಕು ಕಾಣಿಸಿಕೊಂಡಿದೆ. ಪಾಕಿಸ್ತಾನ ಜೋಧ್‍ಪುರ-ಕರಾಚಿಯನ್ನು ಸಂಪರ್ಕಿಸುವ ಥಾರ್ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ರದ್ದುಗೊಳಿಸಿದ್ದರೆ, ಭಾರತ ಈಗ ಜೋಧ್‍ಪುರ-ಮುನಾಬಾವೊ ಸಂಪರ್ಕಿಸುವ ಥಾರ್ ಲಿಂಕ್ ಎಕ್ಸ್‌ಪ್ರೆಸ್‌ ಸಂಚಾರಕ್ಕೆ ಬ್ರೇಕ್ ಹಾಕಿದೆ.

    ಮುಂದಿನ ಆದೇಶದವರೆಗೆ, ‘ಭಗತ್ ಕಿ ಕೋಥಿ-ಮುನಾಬಾವೊ-ಭಗತ್ ಕಿ ಕೋಥಿ’ ಮತ್ತು ‘ಮುನಾಬಾವೊ- ಜೀರೋ ಪಾಯಿಂಟ್-ಮುನಾಬಾವೊ’ ಥಾರ್ ಎಕ್ಸ್‌ಪ್ರೆಸ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವಾಯುವ್ಯ ರೈಲ್ವೆ ವಕ್ತಾರ ಅಭಯ್ ಶರ್ಮಾ ಅವರು ತಿಳಿಸಿದ್ದಾರೆ.

    ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್ ಅವರು ಆಗಸ್ಟ್ 9ರಂದು ಹೊರಡುವ ರೈಲು ಜೋಧ್‍ಪುರಕ್ಕೆ ಸಂಚರಿಸುವ ಕೊನೆಯ ರೈಲಾಗಿದೆ ಎಂದು ಇಸ್ಲಾಮಾಬಾದ್‍ನಲ್ಲಿ ಘೋಷಿಸಿದ್ದರು. ಅಲ್ಲದೆ ಅಂದು ಸುಮಾರು 45 ಜನರು ಪಾಕಿಸ್ತಾನಕ್ಕೆ ಹೋಗಲು ಟಿಕೆಟ್ ಕಾಯ್ದಿರಿಸಿದ್ದರು ಎಂದು ಎನ್‍ಡಬ್ಲ್ಯುಆರ್ ವಕ್ತಾರರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

    ಅಲ್ಲದೆ ಜಮ್ಮು-ಕಾಶ್ಮೀರ ವಿಚಾರಕ್ಕೆ ಕಳೆದ ಗುರುವಾರ ಪಾಕಿಸ್ತಾನವು ಸಂಜೋತಾ ಎಕ್ಸ್‌ಪ್ರೆಸ್‌ ಸಂಚಾರವನ್ನು ನಿಲ್ಲಿಸಿತ್ತು. ಹೀಗಾಗಿ ಕಳೆದ ವಾರ ದೆಹಲಿಯಿಂದ ಪಂಜಾಬಿನ ಅಟ್ಟಾರಿಗೆ ಸಂಪರ್ಕ ಕಲ್ಪಿಸುವ ಸಂಜೋತಾ ಲಿಂಕ್ ಎಕ್ಸ್‌ಪ್ರೆಸ್‌ ಅನ್ನು ಭಾರತೀಯ ರೈಲ್ವೇ ಇಲಾಖೆ ಸ್ಥಗಿತಗೊಳಿಸಿತ್ತು.

  • ಅಕಾಡೆಮಿಗಳ ಅಧ್ಯಕ್ಷ, ಸದಸ್ಯರ ನೇಮಕಾತಿ ರದ್ದು

    ಅಕಾಡೆಮಿಗಳ ಅಧ್ಯಕ್ಷ, ಸದಸ್ಯರ ನೇಮಕಾತಿ ರದ್ದು

    ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 15 ವಿವಿಧ ಅಕಾಡೆಮಿಗಳ ಅಧ್ಯಕ್ಷರ ಮತ್ತು ಸದಸ್ಯರ ನೇಮಕಾತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.

    ಇತ್ತೀಚೆಗಷ್ಟೇ ಎಲ್ಲ ಪ್ರಾಧಿಕಾರ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಆಡಳಿತ ಮಂಡಳಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 15 ವಿವಿಧ ಅಕಾಡೆಮಿಗಳ ಅಧ್ಯಕ್ಷರುಗಳ ನೇಮಕಾತಿಯನ್ನು ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಹಿಂದಿನ ಸರ್ಕಾರದ ಎಲ್ಲ ಯೋಜನೆಗಳನ್ನು ಬದಲಾಯಿಸುತ್ತಿರುವ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ಸಹ ರದ್ದುಗೊಳಿಸಿತ್ತು. ಹಿಂದಿನ ಸರ್ಕಾರದ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳಲ್ಲಿ ಕೆಲವನ್ನು ರದ್ದುಗೊಳಿಸುತ್ತಿದೆ. ಕೆಲವನ್ನು ಮಾರ್ಪಾಡು ಮಾಡಲು ಹಾಗೂ ಹೆಸರು ಬದಲಾಯಿಸಲು ಚಿಂತನೆ ನಡೆಸಿದೆ.

  • 1 ತಿಂಗಳ ನಂತ್ರ ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಹೊರಹಾಕಿದ್ರು!

    1 ತಿಂಗಳ ನಂತ್ರ ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಹೊರಹಾಕಿದ್ರು!

    ಕಾರವಾರ: ಕಡಿಮೆ ಅಂಕ ಬಂದಿದೆ ಎಂದು ಪ್ರಥಮ ಪಿಯುಸಿಗೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿನಿಯನ್ನು ಕಾಲೇಜಿನಿಂದಲೇ ಹೊರ ಹಾಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾದಲ್ಲಿ ನಡೆದಿದೆ.

    ಕರೋಲೀನಾ ಎನ್ನುವ ವಿದ್ಯಾರ್ಥಿನಿಯು ಕೈಗಾ ಅಣುಶಕ್ತಿ ಕೇಂದ್ರೀಯ ವಿದ್ಯಾಲಯದ ಶಾಲೆಯಲ್ಲಿ 10ನೇ ತರಗತಿಯಲ್ಲಿ ಶೇಕಡ 43ರಷ್ಟು ಅಂಕ ಗಳಿಸಿ ಪಾಸಾಗಿದ್ದಳು. ವಿದ್ಯಾರ್ಥಿನಿ ಇನ್ನು ಇದೇ ಸಂಸ್ಥೆಗೆ ಸೇರಿದ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆದಿದ್ದಳು. ಇತ್ತೀಚೆಗೆ 10ನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದಿದ್ದಾಳೆ ಎಂಬ ಕಾರಣ ನೀಡಿ ಕಾಲೇಜಿನಿಂದ ಪ್ರಾಂಶುಪಾಲರು ತೆಗೆದುಹಾಕಿದ್ದಾರೆ.

    ಏಕಾಏಕಿ ಕಾಲೇಜಿನ ತೀರ್ಮಾನದಿಂದಾಗಿ ವಿದ್ಯಾರ್ಥಿನಿಯು ತೊಂದರೆ ಅನುಭವಿಸಿದ್ದಾಳೆ. ವಿದ್ಯಾರ್ಥಿನಿ ಕುಟುಂಬವು ಕೈಗಾ ಅಣು ಸ್ಥಾವರಕ್ಕೆ ಭೂಮಿ ನೀಡಿ ನಿರಾಶ್ರಿತ ಕುಟುಂಬವಾಗಿದೆ. ಹೀಗಾಗಿ ನಿರಾಶ್ರಿತ ಕುಟುಂಬಕ್ಕೆ ಕಡ್ಡಾಯವಾಗಿ ದಾಖಲಾತಿ ಮಾಡಿಕೊಳ್ಳಬೇಕು ಎಂಬ ನಿಯಮವಿದ್ದರೂ, ಒಂದು ತಿಂಗಳವರೆಗೆ ವಿದ್ಯಾರ್ಥಿಯನ್ನು ದಾಖಲೆ ಮಾಡಿಕೊಂಡು ನಂತರ ಹೊರಹಾಕಿದ್ದಾರೆ. ಕೈಗಾ ಉದ್ಯೋಗಿಗಳ ಮಕ್ಕಳು ಕೂಡ ಕಮ್ಮಿ ಅಂಕ ಬಂದಿದ್ದರೂ, ಅವರಿಗೆ ಮಾತ್ರ ಪ್ರವೇಶ ನೀಡಿ ಅನ್ಯಾಯ ಎಸಗಿ, ವಿದ್ಯಾರ್ಥಿನಿಯ ಭವಿಷ್ಯದ ಜೊತೆ ಆಡಳಿತ ವರ್ಗ ಚೆಲ್ಲಾಟವಾಡುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.

    ಕಾಲೇಜಿನ ನಿರ್ಧಾರವನ್ನು ವಿರೋಧಿಸಿದ ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಸ್ಥಳೀಯರೊಂದಿಗೆ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಬೇರೆ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ದಿನಾಂಕ ಮುಗಿದಿದ್ದು, ಬೇರೆ ಕಾಲೇಜಿನಲ್ಲಿ ಪ್ರವೇಶ ಸಿಗದೇ ವಿದ್ಯಾರ್ಥಿನಿಯು ಒಂದು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡದಂತಹ ಪರಿಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದರು.