Tag: Canara Bank

  • 10ರೂ. ನಾಣ್ಯ ಸ್ವೀಕರಿಸಲ್ಲವೆಂದ ಶಿವಮೊಗ್ಗದ ಕೆನರಾ ಬ್ಯಾಂಕ್: ಗ್ರಾಹಕರು ಕಂಗಾಲು

    10ರೂ. ನಾಣ್ಯ ಸ್ವೀಕರಿಸಲ್ಲವೆಂದ ಶಿವಮೊಗ್ಗದ ಕೆನರಾ ಬ್ಯಾಂಕ್: ಗ್ರಾಹಕರು ಕಂಗಾಲು

    ಶಿವಮೊಗ್ಗ: ಇಲ್ಲಿನ ಕಾಶಿಪುರದಲ್ಲಿರುವ ಕೆನರಾ ಬ್ಯಾಂಕೊಂದು 10 ರೂಪಾಯಿ ಕಾಯಿನ್ ಸ್ವೀಕರಿಸುವುದಿಲ್ಲ ಎಂದು ಗೊಂದಲ ಸೃಷ್ಠಿಸಿ, ಗ್ರಾಹಕರಿಗೆ ಸಮಸ್ಯೆಯನ್ನು ಸೃಷ್ಟಿಸಿದೆ.

    10 ರೂಪಾಯಿ ಕಾಯಿನ್ ಬ್ಯಾನ್ ಆಗಿಲ್ಲ, ಸ್ಚೀಕರಿಸಬಹುದು ಅಂತ ಆರ್‍ಬಿಐ ನವೆಂಬರ್ 20ರಂದೇ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟವಾಗಿ ಹೇಳಿದೆ. ಆದ್ರೆ, ಆರ್‍ಬಿಐ ಆದೇಶಕ್ಕೆ ಸೆಡ್ಡು ಹೊಡೆದಿರುವ ಕೆನರಾ ಬ್ಯಾಂಕ್ 10 ರೂಪಾಯಿ ನ್ಯಾಣ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

    ಇದರಿಂದಾಗಿ 10 ರೂಪಾಯಿ ಕಾಯಿನ್‍ಗಳನ್ನು ಇಟ್ಟುಕೊಂಡಿರುವ ವ್ಯಾಪಾರಸ್ಥರು ಈಗ ಕಂಗಾಲಾಗಿದ್ದಾರೆ. ಗ್ರಾಹಕರಿಂದ 10 ರೂಪಾಯಿ ಸ್ವೀಕರಿಸಬೇಕೋ ಬೇಡವೋ ಎಂಬ ಗೊಂದಲ ಕಾಡುತ್ತಿದೆ ಅಂತಾ ಅಂಗಡಿ ಮಾಲಕ ನೀಲಾ ನಾಯಕ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

    ಚಾಲ್ತಿಯಲ್ಲಿರುವ ನಾಣ್ಯ ಅಥವಾ ನೋಟುಗಳನ್ನು ನಿರಾಕರಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಒಂದು ವೇಳೆ ಚಾಲ್ತಿಯಲ್ಲಿರುವ ನಾಣ್ಯ ಅಥವಾ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದರೆ ಅಂತವರ ವಿರುದ್ಧ ದೂರು ಸಲ್ಲಿಸಬಹದು ಎಂದು ಆರ್‍ಬಿಐ ಈ ಹಿಂದೆಯೇ ತಿಳಿಸಿದೆ.

  • ಕೆನರಾ ಬ್ಯಾಂಕ್‍ನಲ್ಲಿ ಎಸಿ ಸಿಲಿಂಡರ್ ಸ್ಫೋಟ: ಕಂಪ್ಯೂಟರ್, ಪೀಠೋಪಕರಣ ಸುಟ್ಟು ಭಸ್ಮ

    ಕೆನರಾ ಬ್ಯಾಂಕ್‍ನಲ್ಲಿ ಎಸಿ ಸಿಲಿಂಡರ್ ಸ್ಫೋಟ: ಕಂಪ್ಯೂಟರ್, ಪೀಠೋಪಕರಣ ಸುಟ್ಟು ಭಸ್ಮ

    ಬೆಂಗಳೂರು: ಎಸಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನೆಲಮಂಗಲ ಪಟ್ಟಣದ ಕೆನರಾ ಬ್ಯಾಂಕ್ ನಲ್ಲಿ ಇಂದು ಬೆಳಗ್ಗೆ ಅಗ್ನಿ ಅವಗಢ ಸಂಭವಿಸಿದೆ.

    ಬೆಳಗ್ಗೆ ಎಂದಿನಂತೆ ಬ್ಯಾಂಕ್‍ಗೆ ಬಂದ ಸಿಬ್ಬಂದಿ ಎಸಿ ಆನ್ ಮಾಡಿದ್ದಾರೆ. ಆನ್ ಆಗುತ್ತಿದ್ದಂತೆ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡು ಶಬ್ಧ ಬಂದಿದೆ. ತಕ್ಷಣ ಬ್ಯಾಂಕಿನಲ್ಲಿದ್ದ ಸಿಬ್ಬಂದಿ ಹೊರಗೆ ಬಂದು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ.

    ಆಗ್ನಿಶಾಮಕದ ಸಿಬ್ಬಂದಿ ಬರುವಷ್ಟರಲ್ಲಿ ಬ್ಯಾಂಕಿನಲ್ಲಿದ್ದ ಪೀಠೊಪಕರಣಗಳು, ಕಂಪ್ಯೂಟರ್‍ಗಳು ಹಾಗೂ ಹಲವಾರು ದಾಖಲೆಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬ್ಯಾಂಕಿಗೆ ಆವರಿಸಿದ ಬೆಂಕಿಯನ್ನು ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಒಬ್ಬರ ಕೈಗೆ ಗಾಯವಾಗಿದೆ.

    ಬ್ಯಾಂಕಿನಲ್ಲಿದ್ದ ಅನೇಕ ದಾಖಲೆಗಳು ಸುಟ್ಟಿ ಹೋಗಿದ್ದು, ಸ್ಟ್ರಾಂಗ್ ರೂಂನಲ್ಲಿರುವ ಹಣಕ್ಕೆ ಯಾವುದೇ ತೊಂದರೆಯಾಗಿಲ್ಲ. ಅದನ್ನು ಬ್ಯಾಂಕಿನ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಬೇಕು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

    ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಬೆಂಕಿ ಅವಘಡದ ಬಗ್ಗೆ ಪ್ರಕರಣ ದಾಖಲಾಗಿದೆ.