Tag: Canadian citizen

  • ಭಾರತಕ್ಕೆ ವಿಶೇಷ ವಿನಾಯ್ತಿ ಏನಿಲ್ಲ – ಖಲಿಸ್ತಾನಿ ಉಗ್ರ ಹತ್ಯೆ ವಿವಾದದ ಕುರಿತು ಅಮೆರಿಕ ಹೇಳಿಕೆ

    ಭಾರತಕ್ಕೆ ವಿಶೇಷ ವಿನಾಯ್ತಿ ಏನಿಲ್ಲ – ಖಲಿಸ್ತಾನಿ ಉಗ್ರ ಹತ್ಯೆ ವಿವಾದದ ಕುರಿತು ಅಮೆರಿಕ ಹೇಳಿಕೆ

    ವಾಷಿಂಗ್ಟನ್‌: ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪದ ನಂತರ ಭಾರತ ಹಾಗೂ ಕೆನಡಾ (India And Canada) ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ (Jake Sullivan) ಕೆನಡಾ ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.

    ಅಮೆರಿಕದ (USA) ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಈ ಬಗ್ಗೆ ಮಾತನಾಡಿದ್ದು, ಈ ವಿಷಯದ ಬಗ್ಗೆ ಈಗಾಗಲೇ ನಡೆದಿರುವ ಹಾಗೂ ನಡೆಯಲಿರುವ ಖಾಸಗಿ ರಾಜತಾಂತ್ರಿಕ ಮಾತುಕತೆಯ ನಡುವೆ ನಾನು ಮಧ್ಯಪ್ರವೇಶಿಸುವುದಿಲ್ಲ. ಈ ವಿಷಯ ಬಗ್ಗೆ ಭಾರತದ ಉನ್ನಮಟ್ಟದ ಅಧಿಕಾರಿಗಳೊಂದಿಗೆ ಸಂಪರ್ಕದಲಿದ್ದೇವೆ ಮತ್ತು ಇರುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಭಾರತವನ್ನ ಪ್ರಚೋದಿಸುವುದಿಲ್ಲ; ತಣ್ಣಗಾದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ

    ಇದೇ ವೇಳೆ ಯುಎಸ್‌ ಅಧ್ಯಕ್ಷ ಜೋ ಬೈಡನ್‌ (Joe Beden) ಅವರು ರಾಜತಾಂತ್ರಿಕ ವಿವಾದದ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ಮಾತನಾಡಲು ಉದ್ದೇಶಿಸಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ, ಬೈಡನ್‌ ಆಡಳಿವು ಕೆನಡಾದ ಆರೋಪಗಳನ್ನ ಗಂಭೀರವಾಗಿ ತೆಗೆದುಕೊಂಡಿದೆ. ಒಟ್ಟಾವಾದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ ವಿರೋಧಿ ಪ್ರಚಾರಕ್ಕೆ ಖಲಿಸ್ತಾನ್ ಉಗ್ರರ ಜೊತೆ ಕೈ ಜೋಡಿಸಿದ ಪಾಕ್

    ನಾವು ಕೆನಡಾದ ನಮ್ಮ ಸಹವರ್ತಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಯಾವುದೇ ದೇಶದ ಹೊರತಾಗಿಯೂ ಮೊದಲು ನಮ್ಮ ಮೂಲ ತತ್ವಗಳನ್ನ ರಕ್ಷಿಸುತ್ತೇವೆ. ಕೆನಡಾದಂತಹ ಮಿತ್ರ ರಾಷ್ಟ್ರಗಳು ತಮ್ಮ ಕಾನೂನು ಜಾರಿಗೊಳಿಸಲು ಮತ್ತು ರಾಜತಾಂತ್ರಿಕ ಪ್ರಕ್ರಿಯೆಯನ್ನು ಮುಂದುವರಿಸುವಾಗ ನಾವು ಅವರೊಂದಿಗೆ ನಿಕಟ ಸಂಪರ್ಕದಲ್ಲಿರುತ್ತೇವೆ. ಅಲ್ಲದೇ ಈ ವಿಚಾರದಲ್ಲಿ ಭಾರತಕ್ಕೆ ವಿಶೇಷ ವಿನಾಯ್ತಿ ಏನೂ ಇಲ್ಲ. ಕೆನಡಾ ಆರೋಪದ ಕುರಿತು ತನಿಖೆ ಮುಂದುವರಿಸಲು ಮತ್ತು ಅಪರಾಧಿಗಳನ್ನ ಗಣನೆಗೆ ತೆಗದುಕೊಳ್ಳಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆನಡಾದಲ್ಲಿ ಗ್ಯಾಂಗ್‌ವಾರ್‌ – ಖಲಿಸ್ತಾನಿ ಭಯೋತ್ಪಾದಕ ಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾವುದೇ ಕಾರಣಕ್ಕೂ ಭಾರತವನ್ನ ಪ್ರಚೋದಿಸುವುದಿಲ್ಲ; ತಣ್ಣಗಾದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ

    ಯಾವುದೇ ಕಾರಣಕ್ಕೂ ಭಾರತವನ್ನ ಪ್ರಚೋದಿಸುವುದಿಲ್ಲ; ತಣ್ಣಗಾದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ

    ಒಟ್ಟಾವಾ: ಭಾರತ ಹಾಗೂ ಕೆನಡಾ (India And Canada) ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಆರೋಪ ಮಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಈಗ ಭಾರತದ ಪರ ಮೃದುವಾಗಿ ಮಾತನಾಡಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಭಾರತವು ಅಭಿವೃದ್ಧಿ ಪ್ರಧಾನ ದೇಶವಾಗಿದೆ, ನಾವು ಯಾವುದೇ ಕಾರಣಕ್ಕೂ ಭಾರತವನ್ನು ಪ್ರಚೋದಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಜಸ್ಟಿನ್‌ ಟ್ರುಡೋ ತಿಳಿಸಿದ್ದಾರೆ. ಇದನ್ನೂ ಓದಿ: ಕೆನಡಾದಲ್ಲಿ ಗ್ಯಾಂಗ್‌ವಾರ್‌ – ಖಲಿಸ್ತಾನಿ ಭಯೋತ್ಪಾದಕ ಹತ್ಯೆ

    ಮುಂದುವರಿದು, ಭಾರತ ಅಭಿವೃದ್ಧಿ ಪ್ರಧಾನ ದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಅಂತಹ ದೇಶದೊಂದಿಗೆ ನಾವು ಜೊತೆಗೂಡಿ ಪ್ರಾದೇಶಿಕ ಹಾಗೂ ಜಾಗತಿಕ ಏಳಿಗೆ ದಿಸೆಯಲ್ಲಿ ಕೆಲಸ ಮಾಡುವ ಅಗತ್ಯವಿದೆ. ಹಾಗಾಗಿ, ನಾವು ಪ್ರಚೋದನೆ ನೀಡುವ ಹಾಗೂ ಯಾವುದೇ ಸಮಸ್ಯೆ ಸೃಷ್ಟಿಸುವ ಪ್ರಯತ್ನ ಮಾಡುವುದಿಲ್ಲ. ಕೆನಡಿಯನ್ನರು (Canadians) ಮತ್ತು ನಮ್ಮ ಮೌಲ್ಯಗಳನ್ನು ರಕ್ಷಿಸುವುದಕ್ಕೆ ನಾವು ಪ್ರಾಮುಖ್ಯತೆ ನೀಡುತ್ತೇವೆ ಎಂದು ಮೃದುವಾಗಿ ಮಾತನಾಡಿದ್ದಾರೆ.

    ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಕೆನಡಾದ ನಾಗರಿಕ ಎಂದು ಪರಿಗಣಿಸಿ ಜಸ್ಟಿನ್‌ ಟ್ರುಡೋ ಭಾರತದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಕೆನಡಾ ನಾಗರಿಕರ ಹಕ್ಕುಗಳನ್ನು ಹಾಗೂ ದೇಶದ ಮೌಲ್ಯಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ, ಯಾವುದೇ ಕಾರಣಕ್ಕೆ ಭಾರತಕ್ಕೆ ಪ್ರಚೋದನೆ ನೀಡುವುದಿಲ್ಲ ಎಂದು ನಯವಾಗಿ ಹೇಳುತ್ತಲೇ ಈ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಅಜರ್‌ಬೈಜಾನ್, ಅರ್ಮೇನಿಯನ್ ಪ್ರತ್ಯೇಕತಾವಾದಿಗಳ ನಡುವಿನ ಯುದ್ಧ ಅಂತ್ಯ

    ಕೆನಡಾದಲ್ಲಿರುವ ಭಾರತದ ರಾಯಭಾರಿಯನ್ನ ಉಚ್ಚಾಟನೆಗೊಳಿಸಿದ ಬಳಿಕ ಭಾರತವೂ ಹಲವು ಕ್ರಮಗಳ ಮೂಲಕ ತಿರುಗೇಟು ನೀಡಿದೆ. ಭಾರತದಲ್ಲಿರುವ ಕೆನಡಾ ರಾಯಭಾರಿಯನ್ನ ಉಚ್ಚಾಟನೆ ಮಾಡುವ ಜೊತೆಗೆ ಕೆನಡಾ ನಾಗರಿಕರಿಗೆ ವೀಸಾ ನೀಡುವುದನ್ನೂ ಸ್ಥಗಿತಗೊಳಿಸಿದೆ. ಇನ್ನು ಹರ್ದೀಪ್ ಸಿಂಗ್‌ ನಿಜ್ಜರ್‌ ಹತ್ಯೆಯ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮಧ್ಯಪ್ರವೇಶಿಸಿದ್ದು, ತನಿಖೆಗೆ ಭಾರತ ಸಹಕರಿಸಲಿ ಎಂದಿದೆ. ಮತ್ತೊಂದೆಡೆ, ಕೆನಡಾ ಆರೋಪ ಮಾಡುವ ಬದಲು ಸಾಕ್ಷ್ಯ ಒದಗಿಸಲಿ ಎಂದು ಭಾರತ ಪ್ರತ್ಯುತ್ತರ ಕೊಟ್ಟಿದೆ.

    ಇತ್ತೀಚೆಗಷ್ಟೇ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಖಲಿಸ್ತಾನಿಗಳ ಅಟ್ಟಹಾಸನ್ನೆ ಬ್ರೇಕ್‌ ಹಾಕುವ ಬಗ್ಗೆ ಕೆನಡಾ ಪ್ರಧಾನಿಯವರೊಂದಿಗೆ ನೇರ ಮಾತುಕತೆ ನಡೆದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]