Tag: canada

  • ಭಾರತ ವಿರೋಧಿ ಪ್ರಚಾರಕ್ಕೆ ಖಲಿಸ್ತಾನ್ ಉಗ್ರರ ಜೊತೆ ಕೈ ಜೋಡಿಸಿದ ಪಾಕ್

    ಭಾರತ ವಿರೋಧಿ ಪ್ರಚಾರಕ್ಕೆ ಖಲಿಸ್ತಾನ್ ಉಗ್ರರ ಜೊತೆ ಕೈ ಜೋಡಿಸಿದ ಪಾಕ್

    ನವದೆಹಲಿ: ಭಾರತ (India) ವಿರೋಧಿ ಪ್ರಚಾರಕ್ಕೆ ಸಂಚು ರೂಪಿಸಲು ಕೆನಡಾದಲ್ಲಿರುವ (Canada) ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆಯ (ಐಎಸ್‍ಐ) ಏಜೆಂಟ್‍ಗಳು ಮತ್ತು ಖಲಿಸ್ತಾನ್ (Khalistan) ಭಯೋತ್ಪಾದಕ ಗುಂಪುಗಳ ಮುಖ್ಯಸ್ಥರು ಇತ್ತೀಚೆಗೆ ವ್ಯಾಂಕೋವರ್‌ನಲ್ಲಿ ರಹಸ್ಯ ಸಭೆ ನಡೆಸಿದ್ದಾರೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ.

    ಇದೇ ವಾರ ಸಭೆ ನಡೆದಿದ್ದು, ಸಿಖ್ಸ್ ಫಾರ್ ಜಸ್ಟಿಸ್ (ಎಸ್‍ಎಫ್‍ಜೆ) ಮುಖ್ಯಸ್ಥ ಗುರುಪತ್‍ವಂತ್ ಸಿಂಗ್ ಪನ್ನುನ್ ಮತ್ತು ಖಲಿಸ್ತಾನಿ ಸಂಘಟನೆಗಳ ಇತರ ಮುಖ್ಯಸ್ಥರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಭಾರತದ ವಿರುದ್ಧ ನಕಾರಾತ್ಮಕ ಪ್ರಚಾರ ಮಾಡಲು ತಿರ್ಮಾನಿಸಲಾಗಿದೆ. ಅಲ್ಲದೇ ಸಾಧ್ಯವಾದಷ್ಟು ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸಂಘಟನೆಗಳು ಮುಂದಾಗಿವೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ಉಗ್ರ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ: ಕೆನಡಾ ಗಂಭೀರ ಆರೋಪ

    ಪ್ಲಾನ್-ಕೆ ಎಂದು ಹೆಸರಿಸಲಾದ ಯೋಜನೆಯ ಭಾಗವಾಗಿ ಐಎಸ್‍ಐ ಕಳೆದ ಕೆಲವು ತಿಂಗಳುಗಳಿಂದ ಕೆನಡಾದಲ್ಲಿ ಖಲಿಸ್ತಾನ್ ಚಟುವಟಿಕೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣವನ್ನು ನೀಡುತ್ತಿದೆ. ಈ ಹಣವನ್ನು ಪ್ರತಿಭಟನೆಗಳನ್ನು ನಡೆಸಲು ಜನರನ್ನು ಪ್ರಚೋದಿಸಲು ಮತ್ತು ಭಾರತ ವಿರೋಧಿ ಪ್ರಚಾರಕ್ಕಾಗಿ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ತಯಾರಿಸಲು ಬಳಸಲಾಗುತ್ತಿದೆ. ಅಲ್ಲದೇ ಸಂಘಟನೆಗಳಿಗೆ ಹೊಸಬರನ್ನು ಸೇರಿಸಿಕೊಳ್ಳಲು ಇದೇ ಹಣವನ್ನು ಬಳಕೆ ಮಾಡಲಾಗುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

    20ಕ್ಕೂ ಹೆಚ್ಚು ಖಲಿಸ್ತಾನಿ ಮತ್ತು ದರೋಡೆಕೋರರು ಕೆನಡಾದಲ್ಲಿ ಅಡಗಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ದೇಶದ ಇತರ ಏಜೆನ್ಸಿಗಳು ಕೆನಡಾಕ್ಕೆ ಪರಸ್ಪರ ಕಾನೂನು ಸಹಾಯ ಕೇಳಿದ್ದವು. ಆದರೆ ಕೆನಡಾದ ತನಿಖಾ ಸಂಸ್ಥೆಗಳು ತನಿಖೆಗೆ ಪ್ರತಿಕ್ರಿಯಿಸಿಲ್ಲ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಭಾರತದ ಮೇಲಿನ ಕೆನಡಾ ಆರೋಪಕ್ಕೆ ಕಳವಳ ವ್ಯಕ್ತಪಡಿಸಿದ ಅಮೆರಿಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಲ್ಟಾ ಹೊಡೆದ ಕೆನಡಾ- ಭಾರತವನ್ನು ಪ್ರಚೋದಿಸುತ್ತಿಲ್ಲವೆಂದ ಟ್ರುಡೋ

    ಉಲ್ಟಾ ಹೊಡೆದ ಕೆನಡಾ- ಭಾರತವನ್ನು ಪ್ರಚೋದಿಸುತ್ತಿಲ್ಲವೆಂದ ಟ್ರುಡೋ

    ಒಟ್ಟಾವಾ: ಭಾರತದ ಮೇಲೆ ಕೆನಡಾ ಮಾಡಿದ ಆರೋಪ ಜಗತ್ತಿನಾದ್ಯಂತ ಸುದ್ದಿಯಾದ ಬೆನ್ನಲ್ಲೇ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಸಿಟ್ಟು ತಣ್ಣಗಾದಂತೆ ಕಾಣಿಸುತ್ತಿದೆ.

    ಹೌದು. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ (Hardeep Singh Nijjar) ಹತ್ಯೆಯ ಹಿಂದೆ ಭಾರತದ (India) ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದ ಪ್ರಧಾನಿ ಇದೀಗ ಸ್ಪಷ್ಟನೆ ನೀಡಿದ್ದಾರೆ. ನಾವು ಭಾರತವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿಲ್ಲ, ಆದರೆ ಕೆನಡಾವು ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಬಯಸುತ್ತದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

    ಈ ವಿಚಾರವನ್ನು ಭಾರತ ಸರ್ಕಾರವು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದೆ. ನಾವು ಹಾಗೆ ಮಾಡುತ್ತಿದ್ದೇವೆ, ನಾವು ಭಾರತವನ್ನು ಪ್ರಚೋದಿಸುವ ಅಥವಾ ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳುವ ಮೂಲಕ ಕೆನಾಡ (Canada) ಪ್ರಧಾನಿ ಉಲ್ಟಾ ಹೊಡೆದಿದ್ದಾರೆ. ಇದನ್ನೂ ಓದಿ: ಭಾರತದ ಮೇಲಿನ ಕೆನಡಾ ಆರೋಪಕ್ಕೆ ಕಳವಳ ವ್ಯಕ್ತಪಡಿಸಿದ ಅಮೆರಿಕ

    ಜೂನ್ 18 ರಂದು ಹರ್ದೀಪ್ ಸಿಂಗ್ ನಿಜ್ಜರ್ ಮೇಲೆ ಗುಂಡು ಹಾರಿಸಲಾಗಿತ್ತು. ಭಾರತವು ಈತನನ್ನು ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಘೋಷಿಸಿತು ಎಂಬುವುದು ಉಲ್ಲೇಖನೀಯ. ಈ ಮಧ್ಯೆ ಜೂನ್ 18 ರಂದು ವ್ಯಾಂಕೋವರ್ ನ ಉಪನಗರವಾದ ಸರ್ರೆಯ ಗುರುದ್ವಾರದ ಬಳಿ ನಿಜ್ಜರ್ ನನ್ನು ಗುಂಡಿಕ್ಕಿ ಕೊಲ್ಲಲಾಯಿತು.

    ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆ ನಿರಂತರವಾಗಿ ಹೆಚ್ಚುತ್ತಿದೆ. ಜಿ20 ಶೃಂಗಸಭೆಯ ಸಂದರ್ಭದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಖಲಿಸ್ತಾನಿಗಳ ಹಿಂಸಾಚಾರ ಹಾಗೂ ವಿದೇಶಿ ಹಸ್ತಕ್ಷೇಪದ ಕುರಿತು ಮಾತನಾಡಿದ್ದರು. ಈ ಮಾತುಕತೆಯ ಬಳಿಕ ಭಾರತ ಮತ್ತು ಕೆನಡಾದ ಸಂಬಂಧ ಹಳಸಿದೆ.

    ಸಂಬಂಧ ಹಳಸಿದ ಬೆನ್ನಲ್ಲೇ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತ ಕೈವಾಡವಿದೆ ಎಂಬ ಕೆನಡಾ ಆರೋಪವನ್ನು ಭಾರತ ತಿರಸ್ಕರಿಸಿದೆ. ಅಲ್ಲದೆ ಕೆನಡಾದಲ್ಲಿರುವ ಭಾರತೀಯ ರಾಯಭಾರಿಯನ್ನು ಉಚ್ಛಾಟಿಸಿದ ಬೆನ್ನಲ್ಲೇ ಭಾರತ ಸರ್ಕಾರ ಕೆನಡಾ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ಮೇಲಿನ ಕೆನಡಾ ಆರೋಪಕ್ಕೆ ಕಳವಳ ವ್ಯಕ್ತಪಡಿಸಿದ ಅಮೆರಿಕ

    ಭಾರತದ ಮೇಲಿನ ಕೆನಡಾ ಆರೋಪಕ್ಕೆ ಕಳವಳ ವ್ಯಕ್ತಪಡಿಸಿದ ಅಮೆರಿಕ

    ನ್ಯೂಯಾರ್ಕ್: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ (Canada) ಗಂಭೀರ ಆರೋಪದ ಕುರಿತು ಅಮೆರಿಕ (America) ಕಳವಳ ವ್ಯಕ್ತಪಡಿಸಿದೆ.

    ಕೆನಡಾ ಆರೋಪ ಸಂಬಂಧ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ಪ್ರತಿಕ್ರಿಯಿಸಿ, ಪ್ರಧಾನಿ ಟ್ರುಡೊ ಅವರು ಉಲ್ಲೇಖಿಸಿರುವ ಆರೋಪಗಳ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ. ನಾವು ನಮ್ಮ ಕೆನಡಾದ ಪಾರ್ಟ್ನರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇವೆ. ಕೆನಡಾದ ತನಿಖೆಯು ಮುಂದುವರಿಯುವುದು ಮತ್ತು ನ್ಯಾಯ ಒದಗಿಸುವುದು ನಿರ್ಣಾಯಕವಾಗಿದೆ ಎಂದು ಅವರು ತಿಳಿಸಿದ್ದಾರೆ.

    ಜೂನ್ 18 ರಂದು ಹರ್ದೀಪ್ ಸಿಂಗ್ ನಿಜ್ಜರ್ ಮೇಲೆ ಗುಂಡು ಹಾರಿಸಲಾಗಿತ್ತು. ಭಾರತವು ಈತನನ್ನು ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಘೋಷಿಸಿತು ಎಂಬುವುದು ಉಲ್ಲೇಖನೀಯ. ಈ ಮಧ್ಯೆ ಜೂನ್ 18 ರಂದು ವ್ಯಾಂಕೋವರ್‍ನ ಉಪನಗರವಾದ ಸರ್ರೆಯ ಗುರುದ್ವಾರದ ಬಳಿ ನಿಜ್ಜರ್‍ನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇದನ್ನೂ ಓದಿ: 5 ದಿನ ಒಳಗಡೆ ದೇಶ ತೊರೆಯಿರಿ – ಕೆನಡಾ ರಾಯಭಾರಿಗೆ ಭಾರತ ಕಟು ಸಂದೇಶ

    ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆ ನಿರಂತರವಾಗಿ ಹೆಚ್ಚುತ್ತಿದೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಪಾತ್ರವಿದೆ ಎಂದು ಆರೋಪಿಸಿ ಕೆನಡಾದಲ್ಲಿರುವ ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದ ಬೆನ್ನಲ್ಲೇ ಭಾರತ ಸರ್ಕಾರ ಕೆನಡಾ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ.

    ಜಿ20 ಶೃಂಗಸಭೆಯ ಸಂದರ್ಭದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಖಲಿಸ್ತಾನಿಗಳ ಹಿಂಸಾಚಾರ ಹಾಗೂ ವಿದೇಶಿ ಹಸ್ತಕ್ಷೇಪದ ಕುರಿತು ಮಾತನಾಡಿದ್ದರು. ಈ ಮಾತುಕತೆಯ ಬಳಿಕ ಭಾರತ ಮತ್ತು ಕೆನಡಾದ ಸಂಬಂಧ ಹಳಸಿದೆ. ಸಂಬಂದ ಹಳಸಿದ ಬೆನ್ನಲ್ಲೇ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತ ಕೈವಾಡವಿದೆ ಎಂಬ ಕೆನಡಾ ಆರೋಪವನ್ನು ಭಾರತ ತಿರಸ್ಕರಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 5 ದಿನ ಒಳಗಡೆ ದೇಶ ತೊರೆಯಿರಿ – ಕೆನಡಾ ರಾಯಭಾರಿಗೆ ಭಾರತ ಕಟು ಸಂದೇಶ

    5 ದಿನ ಒಳಗಡೆ ದೇಶ ತೊರೆಯಿರಿ – ಕೆನಡಾ ರಾಯಭಾರಿಗೆ ಭಾರತ ಕಟು ಸಂದೇಶ

    ನವದೆಹಲಿ: ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬಂತೆ 5 ದಿನಗಳ ಒಳಗಡೆ ದೇಶವನ್ನು ತೊರೆಯುವಂತೆ ಕೆನಡಾ ರಾಯಭಾರಿಗೆ (Canadian Diplomat) ಭಾರತ ಸೂಚಿಸಿದೆ.

    ಕೆನಡಾ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಪಾತ್ರವಿದೆ ಎಂದು ಆರೋಪಿಸಿ ಕೆನಡಾದಲ್ಲಿರುವ ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದ ಬೆನ್ನಲ್ಲೇ ಭಾರತ ಸರ್ಕಾರ ಕೆನಡಾ ರಾಯಭಾರಿಗೆ ಸಮನ್ಸ್‌ ಜಾರಿ ಮಾಡಿದೆ.

    ಜಿ20 ಶೃಂಗಸಭೆಯ (G20 Summit) ಸಂದರ್ಭದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಖಲಿಸ್ತಾನಿಗಳ ಹಿಂಸಾಚಾರ ಹಾಗೂ ವಿದೇಶಿ ಹಸ್ತಕ್ಷೇಪದ ಕುರಿತು ಮಾತನಾಡಿದ್ದರು. ಈ ಮಾತುಕತೆಯ ಬಳಿಕ ಭಾರತ ಮತ್ತು ಕೆನಡಾದ ಸಂಬಂಧ ಹಳಸಿದೆ.  ಇದನ್ನೂ ಓದಿ: ಉಗ್ರ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ: ಕೆನಡಾ ಗಂಭೀರ ಆರೋಪ

    ಸಂಬಂದ ಹಳಸಿದ ಬೆನ್ನಲ್ಲೇ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ಹಿಂದೆ ಭಾರತ ಕೈವಾಡವಿದೆ ಎಂಬ ಕೆನಡಾ ಆರೋಪವನ್ನು ಭಾರತ ತಿರಸ್ಕರಿಸಿದೆ.

    ಈ ಸಂಬಂಧ ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಕೆನಡಾದ ಆರೋಪಗಳು “ಅಸಂಬದ್ಧ ಮತ್ತು ಪ್ರೇರಿತ” ಎಂದು ಬಣ್ಣಿಸಿದೆ. ಇಂತಹ ಆರೋಪಗಳು ನಮ್ಮ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುತ್ತಿರುವ ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗುತ್ತವೆ ಎಂದು ಹೇಳಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇದು ಅಸಂಬದ್ಧ, ಪ್ರೇರಿತ- ಕೆನಡಾ ಆರೋಪ ತಿರಸ್ಕರಿಸಿದ ಭಾರತ

    ಇದು ಅಸಂಬದ್ಧ, ಪ್ರೇರಿತ- ಕೆನಡಾ ಆರೋಪ ತಿರಸ್ಕರಿಸಿದ ಭಾರತ

    ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ಹಿಂದೆ ಭಾರತ ಕೈವಾಡವಿದೆ ಎಂಬ ಕೆನಡಾ ಆರೋಪವನ್ನು ಭಾರತ ತಿರಸ್ಕಾರ ಮಾಡಿದೆ.

    ಈ ಸಂಬಂಧ ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಕೆನಡಾದ ಆರೋಪಗಳು “ಅಸಂಬದ್ಧ ಮತ್ತು ಪ್ರೇರಿತ” ಎಂದು ಬಣ್ಣಿಸಿದೆ. ಇಂತಹ ಆರೋಪಗಳು ನಮ್ಮ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುತ್ತಿರುವ ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗುತ್ತವೆ ಎಂದು ಹೇಳಿದೆ. ಇದನ್ನೂ ಓದಿ: ಉಗ್ರ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ: ಕೆನಡಾ ಗಂಭೀರ ಆರೋಪ

    ಕೆನಡಾ ಸಂಸತ್ತಿನಲ್ಲಿ ಅಲ್ಲಿನ ಪ್ರಧಾನಿ ನೀಡಿರುವ ಹೇಳಿಕೆಯನ್ನು ನೋಡಿದ್ದೇವೆ. ಹೀಗಾಗಿ ಕೆನಡಾ ಪ್ರಧಾನಿ ಹಾಗೂ ಕೆನಡಾ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆಯನ್ನು ತಿರಸ್ಕರಿಸುತ್ತಿದ್ದೇವೆ. ಕೆನಡಾದಲ್ಲಿ ಯಾವುದೇ ಹಿಂಸಾಚಾರದಲ್ಲಿ ಭಾರತ ಸರ್ಕಾರವು ಭಾಗಿಯಾಗಿದೆ ಎಂಬ ಆರೋಪಗಳು ಅಸಂಬದ್ಧವಾದದ್ದು. ನಾವು ಕಾನೂನಿನ ಆಳ್ವಿಕೆಗೆ ಬದ್ಧತೆ ಹೊಂದಿರುವ ಪ್ರಜಾಸತ್ತಾತ್ಮಕ ರಾಜಕೀಯ ಹೊಂದಿದ್ದೇವೆಂದು ತಿಳಿಸಿದೆ.\

    ಕೆನಡಾದಲ್ಲಿ ಕೊಲೆ, ಮಾನವ ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಹೊಸದೇನಲ್ಲ. ಇದೀಗ ಕೆನಡಾ ಪ್ರಧಾನಿ ನಮ್ಮ ಪ್ರಧಾನಿಯವರ ಮೇಲೆ ಆರೋಪ ಮಾಡಿದ್ದು, ಅವುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ. ನಮ್ಮದು ಪ್ರಜಾಸತ್ತಾತ್ಮಕ ದೇಶವಾಗಿದ್ದು, ಕಾನೂನಿನ ನಿಯಮಕ್ಕೆ ಬಲವಾದ ಬದ್ಧತೆ ಇದೆ ಎಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆ ಕುರಿತು ಮೋದಿ-ಟ್ರುಡೋ ಚರ್ಚೆ

    ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆ ಕುರಿತು ಮೋದಿ-ಟ್ರುಡೋ ಚರ್ಚೆ

    – ವಿಮಾನದಲ್ಲಿ ತಾಂತ್ರಿಕ ದೋಷ, ಭಾರತದಲ್ಲೇ ಮತ್ತೊಂದು ದಿನ ಕಳೆಯಲಿರುವ ಕೆನಡಾ ಪ್ರಧಾನಿ

    ನವದೆಹಲಿ: ಜಿ20 ಶೃಂಗಸಭೆಯ (G20 Summit) ಸಂದರ್ಭದಲ್ಲಿ ತಾವು ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ಖಲಿಸ್ತಾನಿಗಳ ಹಿಂಸಾಚಾರ ಹಾಗೂ ವಿದೇಶಿ ಹಸ್ತಕ್ಷೇಪದ ಕುರಿತು ಮಾತನಾಡಿರುವುದಾಗಿ ಕೆನಡಾದ (Canada) ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಭಾನುವಾರ ಹೇಳಿದ್ದಾರೆ.

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರುಡೋ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಾವು 2 ವಿಚಾರವಾಗಿ ಅನೇಕ ಚರ್ಚೆಗಳನ್ನು ನಡೆಸಿದ್ದೇವೆ ಎಂದು ಹೇಳಿದರು. ಖಲಿಸ್ತಾನಿ ಪ್ರತಿಭಟನೆಗಳ ಬಗ್ಗೆ ಮಾತನಾಡುತ್ತಾ, ಕೆನಡಾ ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ‍್ಯ, ಆತ್ಮಸಾಕ್ಷಿಯ ಸ್ವಾತಂತ್ರ‍್ಯ ಮತ್ತು ಶಾಂತಿಯುತ ಪ್ರತಿಭಟನೆಯ ಸ್ವಾತಂತ್ರ‍್ಯವನ್ನು ರಕ್ಷಿಸುತ್ತದೆ. ಮತ್ತು ಆ ದೇಶಕ್ಕೆ ಅವು ಅತ್ಯಂತ ಮಹತ್ವದ್ದಾಗಿವೆ. ಆದರೂ ಹಿಂಸೆಯನ್ನು ತಡೆಯಲು ಮತ್ತು ದ್ವೇಷದ ವಿರುದ್ಧ ಹಿಂದೆ ಸರಿಯಲು ನಾವು ಯಾವಾಗಲೂ ಸಿದ್ಧರಿರುತ್ತೇವೆ ಎಂದು ಹೇಳಿದರು.

    ಸಮುದಾಯದ ವಿಷಯದ ಬಗ್ಗೆ ಹೇಳುವುದಾದರೆ, ಕೆಲವರ ಕ್ರಮಗಳು ಇಡೀ ಸಮುದಾಯ ಅಥವಾ ಕೆನಡಾವನ್ನು ಪ್ರತಿನಿಧಿಸುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಅದರ ಇನ್ನೊಂದು ಬದಿ ನಾವು ಕಾನೂನಿನ ನಿಯಮವನ್ನು ಗೌರವಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದೇವೆ. ಮಾತ್ರವಲ್ಲದೇ ವಿದೇಶಿ ಹಸ್ತಕ್ಷೇಪದ ಬಗ್ಗೆ ಮಾತನಾಡಿ ನಾವು ಅದನ್ನು ಮಾಡಿದ್ದೇವೆ ಎಂದು ತಿಳಿಸಿರು. ಇದನ್ನೂ ಓದಿ: 2 ದಿನಗಳ ಜಿ-20 ಶೃಂಗಸಭೆ ಯಶಸ್ವಿ- ಗಾಂಧೀಜಿ ಸ್ಮಾರಕಕ್ಕೆ ವಿಶ್ವನಾಯಕರ ನಮನ

    ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ನಾನು ಮತ್ತು ಕೆನಡಾದ ಪ್ರಧಾನ ಮಂತ್ರಿ ವಿವಿಧ ವಲಯಗಳಲ್ಲಿ ಭಾರತ-ಕೆನಡಾ ಬಾಂಧವ್ಯಗಳ ಸಂಪೂರ್ಣ ಶ್ರೇಣಿಯನ್ನು ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.

    ವಿಮಾನದಲ್ಲಿ ತಂತ್ರಿಕ ದೋಷ:
    ಜಿ20 ಶೃಂಗಸಭೆಯ ಬಳಿಕ ಕೆನಡಾಗೆ ಹೊರಟಿದ್ದ ಜಸ್ಟಿನ್ ಟ್ರುಡೋ ಅವರ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಈ ಹಿನ್ನೆಲೆ ಅವರು ಮತ್ತೊಂದು ದಿನ ಭಾರತದಲ್ಲೇ ಉಳಿಯಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: G20 Summit: ‘ಆರ್‌ಆರ್‌ಆರ್‌’ ಚಿತ್ರವನ್ನು ಹೊಗಳಿದ ಬ್ರೆಜಿಲ್‌ ಅಧ್ಯಕ್ಷ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆನಡಾದಲ್ಲಿ ಮತ್ತೊಂದು ಹಿಂದೂ ದೇವಾಲಯ ಧ್ವಂಸ – ಖಲಿಸ್ತಾನಿ ಉಗ್ರರ ಪೋಸ್ಟರ್‌ ಅಂಟಿಸಿ ವಿಕೃತಿ

    ಕೆನಡಾದಲ್ಲಿ ಮತ್ತೊಂದು ಹಿಂದೂ ದೇವಾಲಯ ಧ್ವಂಸ – ಖಲಿಸ್ತಾನಿ ಉಗ್ರರ ಪೋಸ್ಟರ್‌ ಅಂಟಿಸಿ ವಿಕೃತಿ

    ಒಟ್ಟೋವಾ: ಕೆನಡಾದ (Canada) ಬ್ರಿಟಿಷ್ ಕೊಲಂಬಿಯಾದಲ್ಲಿರುವ ಹಿಂದೂ ದೇವಾಲಯವನ್ನು (Hindu Temple) ಶನಿವಾರ ಮಧ್ಯರಾತ್ರಿ ಧ್ವಂಸಗೊಳಿಸಲಾಗಿದೆ. ಅಲ್ಲದೇ ಹತ್ಯೆಯಾಗಿರುವ ಖಲಿಸ್ತಾನಿ ಭಯೋತ್ಪಾದಕರ (Khalistani Terrorist’s) ಪೋಸ್ಟರ್‌ಗಳನ್ನು ದೇವಾಲಯದ ಮುಖ್ಯ ಬಾಗಿಲಿಗೆ ಅಂಟಿಸಿರುವ ಘಟನೆ ನಡೆದಿದೆ.

    ಜೂನ್ 18 ರ ಹತ್ಯೆಯಲ್ಲಿ ಭಾರತದ ಪಾತ್ರವನ್ನು ಕೆನಡಾ ತನಿಖೆ ಮಾಡುತ್ತದೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಬಾಗಿಲಿಗೆ ಅಂಟಿಸಲಾಗಿದ್ದ ಪೋಸ್ಟರ್‌ನಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಫೋಟೋ ಕೂಡ ಇತ್ತು. ಇದನ್ನೂ ಓದಿ: 14ರ ಬಾಲಕಿ ಪಕ್ಕದಲ್ಲಿ ಕುಳಿತು ಹಸ್ತಮೈಥುನ – ಭಾರತೀಯ ಅಮೆರಿಕನ್ ಡಾಕ್ಟರ್‌ ಅರೆಸ್ಟ್‌!

    ಹರ್ದೀಪ್ ಸಿಂಗ್ ನಿಜ್ಜರ್ ಕೆನಡಾದ ಸರ್ರೆಯಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರ ಸಾಹಿಬ್‌ನ ಮುಖ್ಯಸ್ಥನಾಗಿದ್ದ. ಜೂನ್ 18 ರಂದು ಸಂಜೆ ಗುರುದ್ವಾರದ ಆವರಣದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಆತನನ್ನು ಕೊಂದಿದ್ದರು.

    ಧ್ವಂಸಗೊಳಿಸಲಾದ ದೇವಾಲಯವು ಸರ್ರೆಯಲ್ಲಿರುವ ಲಕ್ಷ್ಮಿ ನಾರಾಯಣ ಮಂದಿರ. ಬ್ರಿಟಿಷ್ ಕೊಲಂಬಿಯಾದಲ್ಲಿನ ಅತಿದೊಡ್ಡ ಮತ್ತು ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಕೆನಡಾದಲ್ಲಿ ಈ ವರ್ಷ ನಡೆದ ಮೂರನೇ ದೇವಸ್ಥಾನ ಧ್ವಂಸ ಘಟನೆ ಇದಾಗಿದೆ. ಇದನ್ನೂ ಓದಿ: ಜಗತ್ತಿನ ಬೃಹತ್ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಹೆಚ್‍ಡಿಕೆ

    ಜನವರಿ 31 ರಂದು, ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಪ್ರಮುಖ ಹಿಂದೂ ದೇವಾಲಯವನ್ನು ಭಾರತ ವಿರೋಧಿ ಗೀಚುಬರಹದೊಂದಿಗೆ ಧ್ವಂಸಗೊಳಿಸಲಾಗಿತ್ತು. ಈ ಕೃತ್ಯ ಭಾರತೀಯ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.

    ಈ ವರ್ಷದ ಏಪ್ರಿಲ್‌ನಲ್ಲಿ ಕೆನಡಾದ ಒಂಟಾರಿಯೊದಲ್ಲಿರುವ ಮತ್ತೊಂದು ಹಿಂದೂ ದೇವಾಲಯವನ್ನು ಭಾರತ ವಿರೋಧಿ ಗೀಚುಬರಹದಿಂದ ಧ್ವಂಸಗೊಳಿಸಲಾಗಿತ್ತು. ವಿಂಡ್ಸರ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಇಬ್ಬರು ಶಂಕಿತರು ಹಿಂದೂ ದೇವಾಲಯದ ಗೋಡೆಗಳ ಮೇಲೆ ಪೇಂಟಿಂಗ್ ಎರಚಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 18 ವರ್ಷಗಳ ದಾಂಪತ್ಯ ಜೀವನ ಅಂತ್ಯ – ಪತ್ನಿಗೆ ವಿಚ್ಛೇದನ ನೀಡಿದ ಕೆನಡಾ ಪ್ರಧಾನಿ

    18 ವರ್ಷಗಳ ದಾಂಪತ್ಯ ಜೀವನ ಅಂತ್ಯ – ಪತ್ನಿಗೆ ವಿಚ್ಛೇದನ ನೀಡಿದ ಕೆನಡಾ ಪ್ರಧಾನಿ

    ಒಟ್ಟಾವಾ: ಕೆನಡಾದ (Canada) ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ತಮ್ಮ ಪತ್ನಿ ಸೋಫಿಯೊಂದಿಗೆ ವಿಚ್ಛೇದನ (Divorce) ಪಡೆದುಕೊಂಡಿರುವುದಾಗಿ ತಮ್ಮ ಕಚೇರಿ ಬುಧವಾರ ತಿಳಿಸಿದೆ. ಈ ಮೂಲಕ ಕೆನಡಾ ಪ್ರಧಾನಿ ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.

    ಜಸ್ಟಿನ್ ಟ್ರುಡೊ (51) ಹಾಗೂ ಸೋಫಿ (48) 2005ರ ಮೇ ಕೊನೆಯಲ್ಲಿ ವಿವಾಹವಾದರು. ಪ್ರಧಾನಿ ಟ್ರುಡೊ ಹಾಗೂ ಅವರ ಪತ್ನಿ ಸೋಫಿ ಪ್ರತ್ಯೇಕಗೊಳ್ಳುತ್ತಿರುವ ನಿರ್ಧಾರಕ್ಕೆ ಸಂಬಂಧಿಸಿಂತೆ ಎಲ್ಲಾ ಕಾನೂನು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಕಚೇರಿ ತಿಳಿಸಿದೆ. ಇದನ್ನೂ ಓದಿ: ಎಸ್‍ಇಪಿ ಜಾರಿಗೆ ಸರ್ಕಾರದ ಸಿದ್ಧತೆ – ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ

    ದಂಪತಿಗೆ ಮೂವರು ಮಕ್ಕಳಿದ್ದಾರೆ. ಈಗ ಅವರು ನಿಕಟ ಕುಟುಂಬವಾಗಿ ಉಳಿಯಲಿದ್ದಾರೆ. ಪ್ರಧಾನಿ ಹಾಗೂ ಸೋಫಿ ತಮ್ಮ ಮಕ್ಕಳನ್ನು ಸುರಕ್ಷಿತ, ಪ್ರೀತಿ, ಸಹಯೋಗದ ವಾತಾವರಣದಲ್ಲಿ ಬೆಳೆಸುವತ್ತ ಗಮನಹರಿಸಲಿದ್ದಾರೆ. ಮುಂದಿನ ವಾರದಿಂದ ಕುಟುಂಬ ಜೊತೆಯಲ್ಲಿ ರಜೆಯನ್ನು ಕಳೆಯಲಿದೆ ಎಂದು ಕಚೇರಿ ಉಲ್ಲೇಖಿಸಿದೆ. ಇದನ್ನೂ ಓದಿ: 5 ಡಜನ್‍ಗೂ ಹೆಚ್ಚು ಇನ್ಸ್‌ಪೆಕ್ಟರ್‌ ವರ್ಗಾವಣೆಗೆ ತಡೆ – ಆದೇಶಕ್ಕೆ ದಿಢೀರ್‌ ತಡೆ ಹಿಡಿದಿದ್ದು ಯಾಕೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದಿಂದ ಕೆನಡಾಗೆ ತೆರಳಿ ಮಗಳಿಗೆ ಸರ್ಪ್ರೈಸ್ ಕೊಟ್ಟ ತಂದೆ- ವೀಡಿಯೋ ವೈರಲ್

    ಭಾರತದಿಂದ ಕೆನಡಾಗೆ ತೆರಳಿ ಮಗಳಿಗೆ ಸರ್ಪ್ರೈಸ್ ಕೊಟ್ಟ ತಂದೆ- ವೀಡಿಯೋ ವೈರಲ್

    ತಂದೆಯೊಬ್ಬ ತನ್ನ ಮಗಳನ್ನು ಸರ್ಪ್ರೈಸ್ ಆಗಿ ನೋಡಲು ಹೋದ ಹೃದಯಸ್ಪರ್ಶಿ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದ ಬಳಿಕ ಎಂಥವರ ಮನಸ್ಸು ಕೂಡ ಒಂದು ಬಾರಿ ಕರಗುತ್ತದೆ. ತಂದೆ-ಮಗಳ ಬಾಂಧವ್ಯದ ಈ ವಿಡಿಯೋ ನೋಡಿ ಎಲ್ಲರೂ ಕಣ್ಣೀರಾಕಿದ್ದಾರೆ.

    ಹೌದು. ಮಗಳಿಗೆ ಸರ್ಪ್ರೈಸ್ ಕೊಡಲೆಂದೇ ತಂದೆ ಭಾರತದಿಂದ ಕೆನಡಾಗೆ ತೆರಳಿದ್ದಾರೆ. ಅಲ್ಲಿ ಆಕೆ ಕೆಲಸ ಮಾಡುತ್ತಿದ್ದ ಕಚೇರಿಗೆ ತೆರಳಿ ಮಗಳಿಗೆ ಶಾಕ್ ಕೂಡ ಕೊಟ್ಟಿದ್ದಾರೆ. ತಂದೆ ತಾನು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಶಾಕ್ ಹಾಗೂ ಅಚ್ಚರಿಗೊಳಗಾದ ಮಗಳು ಕಣ್ಣಿಗೆ ಕೈ ಇಟ್ಟು ಅಲ್ಲಿಯೇ ಕುಳಿತಿದ್ದಾಳೆ. ಬಳಿಕ ಹತ್ತಿರ ಬಂದ ತಂದೆಯನ್ನು ತಬ್ಬಿಕೊಂಡು ಆನಂದಭಾಷ್ಪ ಸುರಿಸಿದ್ದಾಳೆ. ತಂದೆ ಕೂಡ ಮುದ್ದಿನ ಮಗಳನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಇದರ ಸಂಪೂರ್ಣ ವೀಡಿಯೋವನ್ನು ಮಗಳು ತಮ್ಮ ಇನ್ ಸ್ಟಾ (Instagram) ದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾಳೆ. ಇದನ್ನೂಓದಿ: ಬೆಂಗ್ಳೂರಿನಲ್ಲಿ ಕಣಕ್ಕಿಳಿಯುತ್ತಾ ಪಾಕ್‌ ತಂಡ – ಭದ್ರತೆ ಕಾರಣ ನೀಡಿದ್ರೆ ಸ್ಥಳ ಬದಲಾವಣೆ ಮಾಡಬಹುದು ಎಂದ ಅಶ್ವಿನ್‌

     

    View this post on Instagram

     

    A post shared by Shrutva???? (@shrutva_desai)

    ಅಲ್ಲದೆ ತಂದೆ ತನಗೆ ಸರ್ಪ್ರೈಸ್ ಕೊಟ್ಟ ಬಗ್ಗೆಯೂ ಶ್ರುತ್ವಾ ದೇಸಾಯಿ ಬರೆದುಕೊಂಡಿದ್ದಾಳೆ. ಭಾರತದಿಂದ ಕೆನಡಾಕ್ಕೆ ಭೇಟಿ ನೀಡುವ ಮೂಲಕ ನನ್ನ ತಂದೆ ನನ್ನನ್ನು ಆಶ್ಚರ್ಯಗೊಳಿಸಿದರು. ಇದು ನಾನು ಯಾವಾಗಲೂ ಪ್ರೀತಿಸುವ ಅತ್ಯಂತ ಅದ್ಭುತ ಕ್ಷಣವಾಗಿತ್ತು. ನನ್ನ ತಂದೆ ಬಾಗಿಲಿನ ಮೂಲಕ ನಡೆದುಕೊಂಡು ಒಳಬಂದಾಗ ನಾನು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೆ. ಅಲ್ಲದೆ ಖುಷಿಯಿಂದ ಕಣ್ಣೀರೇ ಬಂತು. ನನ್ನನ್ನು ನೋಡುವುದಕ್ಕಾಗಿಯೇ ಅವರು ಕೆನಡಾ(Canada) ಕ್ಕೆ ಬಂದಿದ್ದಾರೆ ಎಂದರೆ ನನಗೆ ನಂಬಲು ಅಸಾಧ್ಯವಾಗಿತ್ತು. ಇಂತಹ ತಂದೆಯನ್ನು ಪಡೆಯಲು ನಿಜಕ್ಕೂ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನಾನು ನಿಮ್ಮನ್ನು ತುಂಬಾಪ್ರೀತಿಸುತ್ತೇನೆ ಅಪ್ಪ ಎಂದು ಬರೆದುಕೊಂಡಿದ್ದಾಳೆ.

    ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ತಂದೆ-ಮಗಳ ಬಾಂಧವ್ಯಕ್ಕೆ ನೆಟ್ಟಿಗರು ಮಾರು ಹೋಗಿದ್ದಾರೆ. ಹಲವಾರು ಕಾಮೆಂಟ್‍ಗಳು ಬಂದಿವೆ. ಈ ವೀಡಿಯೋ 1.6 ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿದೆ. ಅಲ್ಲದೆ 198ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಅನೇಕರು ಅಪ್ಪ-ಮಗಳಿಗೆ ಶುಭಹಾರೈಸಿದ್ದಾರೆ.

  • ಭಾರತಕ್ಕೆ ಮೋಸ್ಟ್‌ ವಾಂಟೆಡ್‌ ಆಗಿದ್ದ ಖಲಿಸ್ತಾನಿ ಉಗ್ರ ಗುಂಡಿನ ದಾಳಿಗೆ ಬಲಿ

    ಭಾರತಕ್ಕೆ ಮೋಸ್ಟ್‌ ವಾಂಟೆಡ್‌ ಆಗಿದ್ದ ಖಲಿಸ್ತಾನಿ ಉಗ್ರ ಗುಂಡಿನ ದಾಳಿಗೆ ಬಲಿ

    ಒಟ್ಟಾವಾ: ಕೆನಡಾದ ಸರ್ರೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತಕ್ಕೆ ಮೋಸ್ಟ್‌ ವಾಂಟೆಡ್‌ ಆಗಿದ್ದ ಖಲಿಸ್ತಾನಿ ಉಗ್ರ (Khalistani Terrorist) ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಬಲಿಯಾಗಿದ್ದಾನೆ.

    ಇತ್ತೀಚೆಗೆ ಭಾರತ ಸರ್ಕಾರ (Government Of India) ಬಿಡುಗಡೆ ಮಾಡಿದ 40 ಉಗ್ರರ ಪಟ್ಟಿಯಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಪ್ರಮುಖ ಉಗ್ರನಾಗಿದ್ದ.

    2022 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪಂಜಾಬ್‌ನ ಜಲಂಧರ್‌ನಲ್ಲಿ ಹಿಂದೂ ಅರ್ಚಕನನ್ನು ಕೊಲ್ಲಲು ಸಂಚು ರೂಪಿಸಿದ ಆರೋಪದ ಮೇಲೆ ಬಂಧಿಸಲು ಸಕಲ ಪ್ರಯತ್ನ ನಡೆದಿತ್ತು. ಆದ್ರೆ ಆರೋಪಿ ಎಸ್ಕೇಪ್‌ ಆಗಿದ್ದರಿಂದ ನಿಜ್ಜರ್‌ ಬಗ್ಗೆ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು. ಇದನ್ನೂ ಓದಿ: ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ – ಕೀವ್‌ನಿಂದ 200 ಕಿಮೀ ದೂರದಲ್ಲಿರೋ ಬೆಲಾರಸ್‌ಗೆ ರವಾನೆ!

    ಈ ಹಿಂದೆ ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನ ಎಸಗಿದ್ದ ಪ್ರಕರಣದಲಿ ನಿಜ್ಜರ್ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಕೂಡ ಸಲ್ಲಿಸಿತ್ತು. ಭಾರತದಿಂದ ಪರಾರಿಯಾಗಿದ್ದ ನಿಜ್ಜರ್‌ ಕೆನಡಾದಲ್ಲಿ ನೆಲೆಸಿದ್ದ, ಖಲಿಸ್ತಾನಿ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥನೂ ಆಗಿದ್ದ ಅನ್ನೋದು ತಿಳಿದುಬಂದಿದೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ತ್ರಿವರ್ಣ ಧ್ವಜ ತೆಗೆದಿದ್ದ ಖಲಿಸ್ತಾನಿ ಉಗ್ರ ಅವತಾರ್ ಸಿಂಗ್ ನಿಗೂಢ ಸಾವು

    ಇತ್ತೀಚೆಗಷ್ಟೇ ಖಲಿಸ್ತಾನಿ ಉಗ್ರ ಅಮೃತಪಾಲ್ ಸಿಂಗ್ ಆಪ್ತ, ಬ್ರಿಟನ್ ಮೂಲದ ಖಲಿಸ್ತಾನ್ ಲಿಬರೇಷನ್ ಫೋರ್ಸ್ (KLF) ಮುಖ್ಯಸ್ಥ ಅವತಾರ್ ಸಿಂಗ್ ಖಂಡಾ ನಿಗೂಢವಾಗಿ ಸಾವನ್ನಪ್ಪಿದ್ದ. ಈತನನ್ನ ವಿಷ ಉಣಿಸಿ ಸಾಯಿಸಲಾಗಿದೆ ಎಂದು ಶಂಕೆ ವ್ಯಕ್ತವಾದರೂ ವೈದ್ಯಕೀಯ ದಾಖಲೆಗಳು ರಕ್ತ ಕ್ಯಾನ್ಸರ್ ಎಂದು ಹೇಳಿದ್ದವು.

    ಯಾರು ಅವತಾರ್ ಸಿಂಗ್?
    2007ರಲ್ಲಿ ಶಿಕ್ಷಣ ವೀಸಾದಡಿ ಬ್ರಿಟನ್‌ಗೆ ತೆರಳಿದ್ದ ಅವತಾರ್ ಸಿಂಗ್ 2012ರಿಂದ ಅಲ್ಲಿಯೇ ನೆಲೆಸಿದ್ದ. ಬಾಂಬ್ ತಜ್ಞನಾಗಿದ್ದ ಖಂಡಾ, ಲಂಡನ್‌ನಲ್ಲಿರುವ ಭಾರತೀಯ ದೂತವಾಸ ಕಚೇರಿಯ ಮೇಲೆ ಆಕ್ರಮಣ ಮಾಡಿಸಿದವರ ಪೈಕಿ ಈತ ಪ್ರಮುಖ ಆರೋಪಿಯಾಗಿದ್ದ. ದೂತವಾಸ ಕಚೇರಿ ಮೇಲಿದ್ದ ತ್ರಿವರ್ಣ ಧ್ವಜ ತೆಗೆದು ಖಲಿಸ್ತಾನ್‌ ಧ್ವಜ ಹಾರಿಸಿದ್ದ.

    ಪಂಜಾಬ್ ಪೊಲೀಸರು ಮಾರ್ಚ್‌ ಮತ್ತು ಏಪ್ರಿಲ್‌ ಅವಧಿಯಲ್ಲಿ ಖಲಿಸ್ತಾನಿ ಮುಖಂಡ ಅಮೃತಪಾಲ್ ಸಿಂಗ್‌ ಬಂಧನಕ್ಕೆ ತೀವ್ರ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಆತ ತಲೆಮರೆಸಿಕೊಳ್ಳಲು ಅವತಾರ್ ಖಾಂಡಾ ನೆರವಾಗಿದ್ದ. ಅಮೃತಪಾಲ್‌ನನ್ನು ಪೊಲೀಸರು ಬೆನ್ನಟ್ಟಿದಾಗ ಆತ ಲಂಡನ್‌ನಲ್ಲಿದ್ದ ಅವತಾರ್ ಜತೆ ಸಂಪರ್ಕದಲ್ಲಿದ್ದ ವಿಚಾರ ಪೊಲೀಸ್‌ ತನಿಖೆಯಿಂದ ಬೆಳಕಿಗೆ ಬಂದಿತ್ತು.