Tag: canada

  • ಭಾರತದ ಕೆಂಡಕ್ಕೆ ಟ್ರುಡೋ ಥಂಡಾ – ಭಾರತೀಯರಿಗೆ ಶುಭ ಕೋರಿದ ಟ್ರುಡೋ

    ಭಾರತದ ಕೆಂಡಕ್ಕೆ ಟ್ರುಡೋ ಥಂಡಾ – ಭಾರತೀಯರಿಗೆ ಶುಭ ಕೋರಿದ ಟ್ರುಡೋ

    ಒಟ್ಟಾವಾ: ಇತ್ತೀಚೆಗೆ ಭಾರತ (India) ಹಾಗೂ ಕೆನಡಾದ (Canada) ರಾಜತಾಂತ್ರಿಕ ಸಂಬಂಧ ಹದಗೆಟ್ಟಿದ್ದಿದ್ದು, ಇದನ್ನು ಸರಿಪಡಿಸುವ ಪ್ರಯತ್ನದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಹಿಂದೂಗಳ ಹಬ್ಬ ನವರಾತ್ರಿಗೆ (Navratri) ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

    ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಟ್ರುಡೋ ಕೆಲ ವಾರಗಳ ಹಿಂದೆ ಆರೋಪಿಸಿದ್ದರು. ಆದರೆ ಈ ಆರೋಪವನ್ನು ಭಾರತ ನಿರಾಕರಿಸಿದ್ದಲ್ಲದೇ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಹಳಸಲು ಕಾರಣವಾಯಿತು.

    ಇದೀಗ ಟ್ರುಡೋ ಎರಡೂ ದೇಶಗಳ ಸಂಬಂಧಗಳನ್ನು ಸರಿಪಡಿಸುವ ಪ್ರಯತ್ನದಲ್ಲಿ ಹಿಂದೂಗಳ ಹಬ್ಬ ನವರಾತ್ರಿಗೆ ಶುಭಾಶಯವನ್ನು ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ನವರಾತ್ರಿಯ ಶುಭಾಶಯಗಳು. ನಾನು ಹಿಂದೂ ಸಮುದಾಯದ ಸದಸ್ಯರಿಗೆ ಹಾಗೂ ಈ ಹಬ್ಬವನ್ನು ಆಚರಿಸುತ್ತಿರುವ ಎಲ್ಲರಿಗೂ ಆತ್ಮೀಯತೆಯ ಶುಭಾಶಯಗಳನ್ನು ಕೋರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3ರ ಬಳಿಕ ಇಸ್ರೋ ತಂತ್ರಜ್ಞಾನ ಬಯಸಿದ ನಾಸಾ: ಸೋಮನಾಥ್

    ಟ್ರುಡೋ ಹಿಂದೂ ಸಮುದಾಯದಲ್ಲಿ ನವರಾತ್ರಿಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದಾರೆ. ಮಹಿಷಾಸುರನ ವಿರುದ್ಧ ದುರ್ಗಾ ದೇವಿಯ ವಿಜಯ ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ. ಟ್ರುಡೋ ಹಿಂದೂ ಸಂಸ್ಕೃತಿಯ ಬಗ್ಗೆ ಅರಿಯಲು ಹಾಗೂ ಕೆನಡಾಗೆ ಈ ಸಮುದಾಯದ ಕೊಡುಗೆಗಳನ್ನು ಶ್ಲಾಘಿಸಲು ಈ ಹಬ್ಬವನ್ನು ಗುರುತಿಸಿದ್ದಾರೆ.

    ಕೆನಡಾದ ಪ್ರಧಾನಿ ಬಿಡುಗಡೆ ಮಾಡಿದ ಅಧಿಕೃತ ಮಾಧ್ಯಮ ಹೇಳಿಕೆಯಲ್ಲಿ ಮುಂದಿನ 9 ರಾತ್ರಿ ಹಾಗೂ 10 ಹಗಲುಗಳಲ್ಲಿ ಕೆನಡಾ ಮತ್ತು ಪ್ರಪಂಚಾದ್ಯಂತ ಹಿಂದೂ ಸಮುದಾಯದ ಸದಸ್ಯರು ನವರಾತ್ರಿಯನ್ನು ಆಚರಿಸಲು ಒಟ್ಟಾಗಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: 10ನೇ ದಿನಕ್ಕೆ ಕಾಲಿಟ್ಟ ವಾರ್- ಇಸ್ರೇಲ್‌ ಸರ್ಕಾರದ ಆದೇಶಕ್ಕೆ ಕಾದು ಕುಳಿತ ಸೇನಾ ಮುಖ್ಯಸ್ಥರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆನಡಾದಲ್ಲಿ ಲಘು ವಿಮಾನ ಪತನ – ಇಬ್ಬರು ಭಾರತೀಯ ಟ್ರೈನಿ ಪೈಲಟ್‍ಗಳ ದುರ್ಮರಣ

    ಕೆನಡಾದಲ್ಲಿ ಲಘು ವಿಮಾನ ಪತನ – ಇಬ್ಬರು ಭಾರತೀಯ ಟ್ರೈನಿ ಪೈಲಟ್‍ಗಳ ದುರ್ಮರಣ

    ಟೊರೊಂಟೊ: ಕೆನಡಾದ (Canada) ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಲಘು ವಿಮಾನವೊಂದು ಪತನಗೊಂಡು (Plane Crash) ತರಬೇತಿಯಲ್ಲಿದ್ದ ಇಬ್ಬರು ಭಾರತದ ( India) ಪೈಲಟ್‍ಗಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

    ಮೃತ ಪೈಲಟ್‍ಗಳನ್ನು ಮುಂಬೈನ (Mumbai) ಅಭಯ್ ಗದ್ರು (25) ಮತ್ತು ಯಶ್ ರಾಮುಗಡೆ ಎಂದು ಗುರುತಿಸಲಾಗಿದೆ. ಪೈಪರ್ ಪಿಎ -34 ಸೆನೆಕಾ ಎಂಬ ವಿಮಾನದಲ್ಲಿ ಅವರು ಪ್ರಯಾಣಿಸುತ್ತಿದ್ದರು. ಈ ವೇಳೆ ವ್ಯಾಂಕೋವರ್‌ನಿಂದ 100 ಕಿಮೀ ಪೂರ್ವದಲ್ಲಿರುವ ಚಿಲ್ಲಿವಾಕ್‍ನ ಸ್ಥಳೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ. ಇದನ್ನೂ ಓದಿ: ನನ್ನನ್ನು ಸಾಯಿಸ್ಬೇಡಿ- ಬೇಡಿಕೊಂಡ್ರೂ ಬಿಡದೆ ಯುವತಿ ಅಪಹರಿಸಿದ ಹಮಾಸ್ ಉಗ್ರರು

    ಮೃತದೇಹವನ್ನು ಮುಂಬೈಗೆ ತರುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಅವರ ಕುಟುಂಬಸ್ಥರೊಂದಿಗೆ ಮಾತಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪತನಗೊಂಡ ವಿಮಾನವನ್ನು 1972 ರಲ್ಲಿ ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದೆ. ವಿಮಾನ ಪತನಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತೆರೆದ ಟ್ರಕ್‌ನಲ್ಲಿ ಮಹಿಳೆಯ ಬೆತ್ತಲೆ ದೇಹ ಮೆರವಣಿಗೆ ಮಾಡಿದ ಹಮಾಸ್ ಉಗ್ರರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅ. 10ರೊಳಗೆ 40 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಿ- ಕೆನಡಾಗೆ ಭಾರತ ಗಡುವು

    ಅ. 10ರೊಳಗೆ 40 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಿ- ಕೆನಡಾಗೆ ಭಾರತ ಗಡುವು

    ನವದೆಹಲಿ: ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಸಾವಿನ ಕುರಿತಂತೆ ಭಾರತದ ಮೇಲೆ ಆರೋಪ ಮಾಡಿದ ಬಳಿಕ ಕೆನಡಾ (Canada) ಜೊತೆಗಿನ ಸಂಬಂಧದಲ್ಲಿ ಬಿರುಕು ಮೂಡಿದೆ. ಈ ಬೆನ್ನಲ್ಲೇ ಇದೀಗ ಭಾರತವು ಕೆನಾಡಾಗೆ ಗಡುವು ನೀಡುವ ಮೂಲಕ ಎಚ್ಚರಿಕೆಯನ್ನೂ ನೀಡಿದೆ.

    ಅಕ್ಟೋಬರ್ 10 ರೊಳಗೆ 40 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಿ. ಒಂದು ವೇಳೆ ಅಕ್ಟೋಬರ್ 10ರ ಬಳಿಕವೂ ಅಧಿಕಾರಿಗಳು ಇಲ್ಲಿಯೇ ಉಳಿದರೆ ಅವರ ಎಲ್ಲಾ ವಿನಾಯ್ತಿಗಳನ್ನು ರದ್ದುಪಡಿಸುವುದಾಗಿ ನರೇಂದ್ರ ಮೋದಿ (Narendra Modi) ಸರ್ಕಾರ ಎಚ್ಚರಿಕೆಯನ್ನು ನೀಡಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭಿಸಿರುವ ಬಗ್ಗೆ ವರದಿಯಾಗಿದೆ.

    ಕೆನಾಡವು ಭಾರತದಲ್ಲಿ 62 ರಾಜತಾಂತ್ರಿಕರನ್ನು ಹೊಂದಿದೆ. ಆದರೆ ಭಾರತ (India) ಇದನ್ನು 41ಕ್ಕೆ ಕಡಿತಗೊಳಿಸಬೇಕು ಎಂದು ಹೇಳಿತ್ತು. ಕೆನಡಾದಲ್ಲಿ ಖಲಿಸ್ತಾನಿ ಉಗ್ರನ ಹತ್ಯೆಯ ಬಳಿಕ ಭಾರತದ ವಿರುದ್ಧ ಆರೋಪ ಮಾಡಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹಳಸುತ್ತಾ ಬಂದಿದೆ. ಹೀಗಾಗುತ್ತಿದ್ದಂತೆಯೇ ಕೆನಡಾದಲ್ಲಿ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಕಡಿಮೆಗೊಳಿಸುವಂತೆ ಭಾರತವು ಈ ಹಿಂದೆ ಕೆನಡಾವನ್ನು ಕೇಳಿಕೊಂಡಿತ್ತು. ಇದನ್ನೂ ಓದಿ: ಜಾಗರೂಕರಾಗಿರಿ! – ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಕೆನಡಾ ಎಚ್ಚರಿಕೆ

    ಭಾರತಕ್ಕೆ ಹೋಲಿಸಿದರೆ ಒಟ್ಟಾವಾದಲ್ಲಿ ಕೆನಡಾವು ದೆಹಲಿಯಲ್ಲಿರುವ ತನ್ನ ಹೈಕಮಿಷನ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜತಾಂತ್ರಿಕರನ್ನು ಹೊಂದಿದೆ ಎನ್ನಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏನಿದು ಖಲಿಸ್ತಾನ್‌ ಚಳುವಳಿ? – ಇದಕ್ಕೂ ಭಾರತ-ಕೆನಡಾ ಬಿಕ್ಕಟ್ಟಿಗೂ ಏನು ಸಂಬಂಧ?

    ಏನಿದು ಖಲಿಸ್ತಾನ್‌ ಚಳುವಳಿ? – ಇದಕ್ಕೂ ಭಾರತ-ಕೆನಡಾ ಬಿಕ್ಕಟ್ಟಿಗೂ ಏನು ಸಂಬಂಧ?

    ಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ (Hardeep Singh Nijjar) ಹತ್ಯೆಯ ನಂತರ ಭಾರತ ಮತ್ತು ಕೆನಡಾ (India-Canada) ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದಿದ್ದು, ಇನ್ನೂ ಶಮನಗೊಂಡಿಲ್ಲ. ಭಾರತ-ಕೆನಡಾ ಸಂಬಂಧ ಹಳಸಲು ಖಲಿಸ್ತಾನಿಗಳ ಸಮಸ್ಯೆಯೂ ಒಂದು. ಕೆನಡಾದಲ್ಲಿ ಸಕ್ರಿಯರಾಗಿ ಅಲ್ಲಿನ ಹಿಂದೂಗಳು ಮತ್ತು ಭಾರತದಲ್ಲಿ ಹಿಂಸಾಚಾರ ನಡೆಯುತ್ತಿದೆ. ಖಲಿಸ್ತಾನಿ ಉಗ್ರರ (Khalistani Terrorists) ಮೇಲೆ ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಕೆನಡಾ ಮೇಲೆ ಭಾರತಕ್ಕೆ ಮುನಿಸು. ಇಂತಹ ಸನ್ನಿವೇಶದಲ್ಲಿ, ಭಾರತದ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಅವರು ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಕುರಿತು ಆಡಿದ ಮಾತುಗಳು ಎರಡು ದೇಶಗಳ ನಡುವೆ ಬಿಕ್ಕಟ್ಟು ಉಲ್ಬಣಗೊಳ್ಳಲು ಕಾರಣವಾಯಿತು.

    ಅಷ್ಟಕ್ಕೂ ಭಾರತ-ಕೆನಡಾ ಬಿಕ್ಕಟ್ಟಿಗೆ ಕಾರಣವೇನು? ಕೆನಡಾದಲ್ಲಿ ಭಾರತೀಯರೆಷ್ಟಿದ್ದಾರೆ? ಯಾರು ಈ ಖಲಿಸ್ತಾನಿಗಳು? ಏನು ಇವರ ಚಳುವಳಿ? ಖಲಿಸ್ತಾನಿಗಳ ಚಳುವಳಿ ಭಾರತದಿಂದ ಕೆನಡಾಗೆ ಹೋಗಿದ್ದು ಹೇಗೆ? ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಉಂಟಾಗಲು ಇವರು ಹೇಗೆ ಕಾರಣವಾಗುತ್ತಾರೆ? ಬನ್ನಿ ಈ ಬಗ್ಗೆ ವಿವರವಾಗಿ ತಿಳಿಯೋಣ. ಇದನ್ನೂ ಓದಿ: ಉಲ್ಟಾ ಹೊಡೆದ ಕೆನಡಾ- ಭಾರತವನ್ನು ಪ್ರಚೋದಿಸುತ್ತಿಲ್ಲವೆಂದ ಟ್ರುಡೋ

    ಸಿಖ್‌ ಚಳುವಳಿಯ ಇತಿಹಾಸ
    ಗುರುನಾನಕ್‌ ಒಬ್ಬ ದಾರ್ಶನಿಕ. ಸಿಖ್‌ ಧರ್ಮದ ಸಂಸ್ಥಾಪಕ. ಇವರು 15ನೇ ಶತಮಾನದಲ್ಲಿ ಸಿಖ್‌ ಧರ್ಮವನ್ನು ಪ್ರತಿಪಾದಿಸಿದರು. 1675 ರ ಸಂದರ್ಭದಲ್ಲಿ ಗುರು ಗೋಬಿಂದ್ ಸಿಂಗ್ ಅವರನ್ನು ಸಿಖ್ ಧರ್ಮದ ನಾಯಕರಾಗಿ ಘೋಷಿಸಲಾಯಿತು. 1947 ರಲ್ಲಿ ಬ್ರಿಟಿಷರಿಂದ ಭಾರತ ಸ್ವಾತಂತ್ರ್ಯ ಪಡೆಯಿತು. 1948 ರಲ್ಲಿ ತಾರಾ ಸಿಂಗ್ ಪಂಜಾಬಿ ಮಾತನಾಡುವ ಸ್ವಾಯತ್ತ ಸಿಖ್ ರಾಜ್ಯವನ್ನು ಸ್ಥಾಪಿಸಲು ಕರೆ ನೀಡಿದರು. 1970ರ ಬಳಿಕ ಭಾರತ ಮತ್ತು ವಿದೇಶಗಳಲ್ಲಿ ಸಿಖ್‌ ಸ್ವಾತಂತ್ರ್ಯ ಚಳುವಳಿ ಪ್ರಬಲವಾಗಿ ಬೆಳೆಯಲು ಪ್ರಾರಂಭಿಸಿತು. 1984ರ ಜೂನ್‌ ತಿಂಗಳಲ್ಲಿ ಸಿಖ್ ಧರ್ಮದ ಪವಿತ್ರ ಸ್ಥಳವಾದ ಗೋಲ್ಡನ್ ಟೆಂಪಲ್‌ನಲ್ಲಿ ಆಶ್ರಯ ಪಡೆದಿದ್ದ ಪ್ರತ್ಯೇಕತಾವಾದಿಗಳನ್ನು (Khalistani Separatists) ಹೊರಹಾಕಲು ಭಾರತೀಯ ಪಡೆಗಳು ದಾಳಿ ನಡೆಸಿದವು. 1984 ರ ಅಕ್ಟೋಬರ್‌ 31 ರಂದು ದೇವಾಲಯದ ಮೇಲೆ ದಾಳಿ ನಡೆಸಲು ಆದೇಶಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರನ್ನು ಅವರ ಇಬ್ಬರು ಸಿಖ್ (Sikhs) ಅಂಗರಕ್ಷಕರು ಹತ್ಯೆ ಮಾಡಿದರು. 1985 ರಲ್ಲಿ ಕೆನಡಾ ಮೂಲದ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಟೊರೊಂಟೊದಿಂದ ನವದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ‘ಕನಿಷ್ಕಾ’ ಮೇಲೆ ಬಾಂಬ್ ಸ್ಫೋಟಿಸಿ 329 ಮಂದಿ ಹತ್ಯೆಗೈದರು. 2011 ರ ಜನಗಣತಿಯ ಪ್ರಕಾರ, 2.08 ಕೋಟಿ ಸಿಖ್ಖರು ಭಾರತದಲ್ಲಿದ್ದಾರೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಸಿಖ್ಖರು 7% ರಷ್ಟಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಕೆನಡಾದಲ್ಲಿ ಸುರಕ್ಷಿತ ನೆಲೆ ಸಿಕ್ಕಿದೆ: ಟ್ರುಡೊ ವಿರುದ್ಧ ಲಂಕಾ ಸಚಿವ ವಾಗ್ದಾಳಿ

    ಐತಿಹಾಸಿಕ ಪಂಜಾಬ್ ಪ್ರದೇಶವು ಭಾರತೀಯ ಉಪಖಂಡದ ಉತ್ತರ ಭಾಗದಲ್ಲಿದೆ. ಆಧುನಿಕ ಪೂರ್ವ ಪಾಕಿಸ್ತಾನ ಮತ್ತು ವಾಯುವ್ಯ ಭಾರತವನ್ನು ಒಳಗೊಂಡಿದೆ. ಭಾರತದಲ್ಲಿ ಇದು ಲುಧಿಯಾನ, ಅಮೃತಸರ, ಚಂಡೀಗಢ ಮತ್ತು ಜಲಂಧರ್‌ನಂತಹ ನಗರಗಳನ್ನು ಒಳಗೊಂಡಿದೆ. ಅಲ್ಲದೇ ಪಾಕಿಸ್ತಾನದಲ್ಲಿ ಲಾಹೋರ್, ಫೈಸಲಾಬಾದ್, ನಂಕಾನಾ ಸಾಹಿಬ್, ರಾವಲ್ಪಿಂಡಿ ಮತ್ತು ಮುಲ್ತಾನ್ ಪ್ರದೇಶ ಹೊಂದಿದೆ. ಕೆಲವು ಖಲಿಸ್ತಾನ್ ಬೆಂಬಲಿಗರು ಪಂಜಾಬ್‌ನ ಪಾಕಿಸ್ತಾನದ ಭಾಗವನ್ನು (ಭಾರತ-ಪಾಕ್‌ ವಿಭಜನೆ) ಸಂಯೋಜಿಸಲು ಕರೆ ನೀಡಿದ್ದಾರೆ. ಆದರೆ ಇತರ ಗುಂಪುಗಳು, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳು ಹಾಗೂ ಭಾರತದ ಪಂಜಾಬ್‌ನ ಸುತ್ತಲಿನ ರಾಜ್ಯಗಳು ಸಹ ಉದ್ದೇಶಿತ ರಾಷ್ಟ್ರದ ಭಾಗವಾಗಬೇಕೆಂದು ವಾದಿಸುತ್ತವೆ.

    ಕೆನಡಾದಲ್ಲಿರುವ ಸಿಖ್ಖರ ಸಂಖ್ಯೆ ಎಷ್ಟು?
    ಕೆನಡಾದಲ್ಲಿನ ಒಟ್ಟು ಜನಸಂಖ್ಯೆ 3.98 ಕೋಟಿ. ಅವರ ಪೈಕಿ 16.80 ಕೋಟಿ ಮಂದಿ ಭಾರತೀಯರಿದ್ದಾರೆ. 8 ಲಕ್ಷದಷ್ಟು ಜನ ಸಿಖ್ಖರೇ ಇದ್ದಾರೆ. ಆದರೆ ಇಲ್ಲಿರುವ ಸಿಖ್ಖರಲ್ಲಿ ಖಲಿಸ್ತಾನ ಪ್ರತ್ಯೇಕತಾವಾದಿಗಳ ಪರವಾಗಿ ಇರುವವರು ಎಷ್ಟು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಕೆನಡಾ ಜನಸಂಖ್ಯೆಯಲ್ಲಿ ಭಾರತೀಯರ ಪ್ರಮಾಣ 4% ರಷ್ಟಿದೆ. ಇಲ್ಲಿನ ಒಟ್ಟು ಭಾರತೀಯರಲ್ಲಿ 13 ಲಕ್ಷ ಮಂದಿ ಕೆನಡಾ ಪೌರತ್ವ ಪಡೆದುಕೊಂಡಿದ್ದಾರೆ. 3.80 ಲಕ್ಷ ವಿದ್ಯಾರ್ಥಿಗಳ ಸಂಖ್ಯೆ ಇಲ್ಲಿದೆ.

    ಭಾರತ-ಕೆನಡಾ ಬಿಕ್ಕಟ್ಟಿಗೆ ಕಾರಣವೇನು?
    2007ರಲ್ಲಿ ಪಂಜಾಬ್‌ನಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬೇಕಾಗಿದ್ದ ಹರ್ದೀಪ್ ಸಿಂಗ್ ನಿಜ್ಜಾರ್‌ನನ್ನು ಭಾರತ ಸರ್ಕಾರ ಉಗ್ರರ ಪಟ್ಟಿಗೆ ಸೇರಿಸಿತ್ತು. ಭಾರತದಲ್ಲಿ ಉಗ್ರರ ಸಂಘಟನೆ ಎಂದು ಪಟ್ಟಿ ಮಾಡಲಾಗಿ ಖಲಿಸ್ತಾನ್ ಟೈಗರ್ ಫೋರ್ಸ್‌ನ ಅಧ್ಯಕ್ಷನಾಗಿದ್ದ ನಿಜ್ಜಾರ್ 1990 ರ ದಶಕದಲ್ಲೇ ಭಾರತ ತೊರೆದು ಕೆನಡಾ ಸೇರಿದ್ದ. ಅಲ್ಲಿನ ಪೌರತ್ವವನ್ನೂ ಪಡೆದಿದ್ದ. ಖಲಿಸ್ತಾನ ಪ್ರತ್ಯೇಕತಾವಾದಿಗಳಿಗೆ ತರಬೇತಿ ಮತ್ತಿತರ ನೆರವು ನೀಡಿದ ಆರೋಪಗಳೂ ಆತನ ಮೇಲಿದ್ದವು. ಆತನ ಹೆಸರಿದ್ದ ಉಗ್ರನ ಪಟ್ಟಿಯನ್ನು ಭಾರತ ಈಚಿನ ವರ್ಷಗಳಲ್ಲಿ ಕೆನಡಾಕ್ಕೆ ಹಸ್ತಾಂತರಿಸಿತ್ತು. ಕೆನಡಾ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಕೆನಡಾದ ಬ್ರಿಟಿಷ್ ಕೊಲಂಬಿಯಾದ ರ‍್ರೆಯಲ್ಲಿನ ಗುರುದ್ವಾರದ ಅಧ್ಯಕ್ಷನಾಗಿದ್ದ ನಿಜ್ಜಾರ್‌ನನ್ನು ಇಬ್ಬರು ಮುಸುಕುಧಾರಿಗಳು ಇದೇ ಜೂನ್‌ನಲ್ಲಿ ಗುಂಡಿಟ್ಟು ಕೊಂದರು. ಭಾರತ ಮತ್ತು ಕೆನಡಾ ಸಂಬಂಧ ಹದಗೆಡಲು ಅಲ್ಲಿಂದ ಪ್ರಾರಂಭವಾಯಿತು.

    ಯಾರೀ ಖಲಿಸ್ತಾನಿಗಳು?
    ಸಿಖ್ ಪ್ರತ್ಯೇಕತಾವಾದಿಗಳು ತಮ್ಮ ತಾಯ್ನಾಡು ಖಲಿಸ್ತಾನ್, ಅಂದರೆ “ಶುದ್ಧರ ನಾಡು” ಅನ್ನು ಪಂಜಾಬ್‌ನಿಂದ ರಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಭಾರತವನ್ನು ಹಲವು ರಾಷ್ಟ್ರಗಳಾಗಿ ವಿಭಜಿಸುವುದೇ ಅವರ ಗುರಿ. 1970 ಮತ್ತು 1980 ರ ದಶಕದ ಹಿಂಸಾತ್ಮಕ ದಂಗೆಯ ಸಮಯದಿಂದಲೂ ಬೇಡಿಕೆಯನ್ನು ಹಲವು ಬಾರಿ ಪುನರುಚ್ಚರಿಸಿದ್ದಾರೆ. ಪಂಜಾಬ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದನೆ ಚಟುವಟಿಕೆ ಹರಡುವಲ್ಲಿ ಖಲಿಸ್ತಾನಿ ನಾಯಕರು ಪ್ರಮುಖ ಸೂತ್ರಧಾರಿಗಳಾಗಿದ್ದಾರೆ.

    ಖಲಿಸ್ತಾನಿಗಳ ಚಳುವಳಿ
    1980 ರ ದಶಕದ ಆರಂಭದಲ್ಲಿ ಪಂಜಾಬ್‌ನಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಚಳುವಳಿ ಪ್ರಾರಂಭವಾಯಿತು. ಪಂಜಾಬ್ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ‘ಶುದ್ಧರ ನಾಡು’ ಹೆಸರಿನಲ್ಲಿ ಸಿಖ್ ನಾಡು ರಚನೆಯೇ ಇವರ ಪ್ರಮುಖ ಉದ್ದೇಶವಾಗಿದೆ. ಖಲಿಸ್ತಾನಿಗಳಲ್ಲಿ ಹಲವು ಗುಂಪುಗಳಿವೆ. ಒಂದೊಂದು ಗುಂಪಿನ ಪ್ರಸ್ತಾಪವೂ ಭಿನ್ನವಾಗಿದೆ. ಕೆಲವರು ಇಡೀ ಭಾರತವು ಪಂಜಾಬ್ ನಾಡಾಗಬೇಕು ಎಂದು ಪ್ರತಿಪಾದಿಸುತ್ತಾರೆ. ಆದರೆ ಇತರರು ಪಾಕಿಸ್ತಾನಿ ಪಂಜಾಬ್ ಮತ್ತು ಉತ್ತರ ಭಾರತದ ಇತರ ಭಾಗಗಳಾದ ಚಂಡೀಗಢ, ಹರಿಯಾಣ ಮತ್ತು ಹಿಮಾಚಲ ಪ್ರದೇಶ ಪ್ರತ್ಯೇಕ ನಾಡು ಆಗಬೇಕೆಂದು ಪ್ರತಿಪಾದಿಸುತ್ತಾರೆ. ಇದನ್ನೂ ಓದಿ: ಜಾಗರೂಕರಾಗಿರಿ! – ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಕೆನಡಾ ಎಚ್ಚರಿಕೆ

    ಖಲಿಸ್ತಾನದ ಬೇರುಗಳು, 1800 ರ ದಶಕದ ಕೊನೆಯಲ್ಲಿ ಮತ್ತು 1900 ರ ದಶಕದ ಆರಂಭದಲ್ಲಿ ಸಿಖ್ ಮತ್ತು ಹಿಂದೂಗಳನ್ನು ವಿಭಜಿಸಲು ಪ್ರಯತ್ನಿಸಿದ ಬ್ರಿಟಿಷ್ ವಸಾಹತುಶಾಹಿ ನೀತಿಗಳಲ್ಲಿವೆ. ಬ್ರಿಟಿಷ್ ರಾಜ್ ವಿರುದ್ಧ ಬಂಡಾಯವೆದ್ದ ಹಿಂದೂ ಆಡಳಿತಗಾರರ ವಿರುದ್ಧ ಬಳಸಲು ಸಿಖ್ಖರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬ್ರಿಟಿಷ್ ಸೇನೆಗೆ ಸೇರಿಸಿಕೊಳ್ಳಲಾಯಿತು. ತರುವಾಯ, 1947 ರಲ್ಲಿ ಭಾರತದ ಸ್ವಾತಂತ್ರ‍್ಯದ ನಂತರ ಪಂಜಾಬ್ ರಾಜ್ಯ ಮತ್ತು ಭಾರತ ಸರ್ಕಾರದ ನಡುವೆ ಉದ್ವಿಗ್ನತೆ ಕಾಣಿಸಿಕೊಂಡಿತು. ಇದು ಭಾರತ ಸರ್ಕಾರದ ವಿರುದ್ಧ ಸಿಖ್ಖರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.

    ಚಳುವಳಿ ಭಾರತದಿಂದ ಕೆನಡಾಗೆ ವಿಸ್ತರಿಸಿದ್ದು ಹೇಗೆ?
    ಕೆನಡಾಕ್ಕೆ ಸಿಖ್ಖರ ವಲಸೆಯು 20 ನೇ ಶತಮಾನದ ಮೊದಲ ದಶಕದಲ್ಲಿ ಪ್ರಾರಂಭವಾಯಿತು. 1970 ರ ಹೊತ್ತಿಗೆ ಸಿಖ್ಖರು ಕೆನಡಾದ ಸಮಾಜದ ಭಾಗವಾಗಿದ್ದರು. ಖಲಿಸ್ತಾನಿ ಚಳುವಳಿಯು 1980-90ರ ದಶಕದಲ್ಲಿ ಉತ್ತುಂಗಕ್ಕೇರಿತು. ಹಿಂಸಾತ್ಮಕ ಕಾರ್ಯಾಚರಣೆ ಪ್ರಾರಂಭವಾಯಿತು. ಬಾಂಬ್ ದಾಳಿಗಳು, ಹತ್ಯೆ, ಅಪಹರಣ, ಟಾರ್ಗೆಟೆಡ್ ಹತ್ಯೆಗಳು ಮತ್ತು ನಾಗರಿಕರ ಹತ್ಯಾಕಾಂಡಗಳು ನಡೆದವು. ಇಂತಹ ಪ್ರಕರಣಗಳು ಪಂಜಾಬ್‌ನಲ್ಲಿ ಹೆಚ್ಚಾಗಿ ಘಟಿಸಿದವು.

    1985 ರಲ್ಲಿ ಕೆನಡಾ ಮೂಲದ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಟೊರೊಂಟೊದಿಂದ ನವದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ‘ಕನಿಷ್ಕಾ’ ಮೇಲೆ ಬಾಂಬ್ ಸ್ಫೋಟಿಸಿದರು. ವಿಮಾನದಲ್ಲಿದ್ದ 13 ವರ್ಷದೊಳಗಿನ 82 ಮಕ್ಕಳು ಸೇರಿದಂತೆ ಎಲ್ಲಾ 329 ಪ್ರಯಾಣಿಕರು ಹತ್ಯೆಯಾದರು. ಈ ಹಿಂಸಾಚಾರವು ಅಂತಾರಾಷ್ಟ್ರೀಯ ಆಯಾಮ ಪಡೆದುಕೊಂಡಿತು. ಆ ಘಟನೆಯು ಕೆನಡಾದ ಇತಿಹಾಸದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿ ಉಳಿದಿದೆ.

    ಚಳುವಳಿಗೆ ಪ್ರತಿಕ್ರಿಯೆಯಾಗಿ ಮತ್ತು ರಾಜ್ಯದಲ್ಲಿ ಉಗ್ರವಾದವನ್ನು ಕೊನೆಗೊಳಿಸಲು ಭಾರತೀಯ ಭದ್ರತಾ ಪಡೆಗಳು ಮತ್ತು ಸ್ಥಳೀಯ ಪಂಜಾಬ್ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪರಿಣಾಮವಾಗಿ 1990 ರ ದಶಕದ ಅಂತ್ಯದ ವೇಳೆಗೆ ಭಾರತದಲ್ಲಿ ಖಲಿಸ್ತಾನಿ ಚಳುವಳಿಯು ಬಹುತೇಕ ಕೊನೆಯ ಹಂತದಲ್ಲಿತ್ತು. ಆದರೆ ಕೆನಡಾದಲ್ಲಿ ಅದು ಬೆಳೆಯಿತು. 2015 ರ ಫೆಡರಲ್ ಚುನಾವಣೆಯಲ್ಲಿ ತನ್ನ ಲಿಬರಲ್ ಪಕ್ಷವನ್ನು ಬೆಂಬಲಿಸುವ ಹಲವಾರು ಖಲಿಸ್ತಾನಿ ಪರ ಗುಂಪುಗಳೊಂದಿಗೆ ಜಸ್ಟಿನ್ ಟ್ರುಡೊ ಅಧಿಕಾರಕ್ಕೆ ಬಂದಾಗ ಚಳುವಳಿ ಮತ್ತೆ ಜೀವ ಪಡೆಯಿತು.

    ಕಾನಿಷ್ಕಾ ಬಾಂಬ್ ಸ್ಫೋಟ ಕರಾಳತೆ
    1985ರ ಜೂ.1 ರಂದು ಭಾರತದ ಗುಪ್ತಚರ ಸಂಸ್ಥೆಗಳು ಕೆನಡಾ ಪ್ರಾಧಿಕಾರಗಳಿಗೆ ಖಲಿಸ್ತಾನಿ ಉಗ್ರವಾದಿಗಳು ನಡೆಸಬಹುದಾದ ವಿಮಾನ ದಾಳಿಯ ವಿರುದ್ಧ ಸೂಕ್ತ ಭದ್ರತಾ ಕ್ರಮ ಕೈಗೊಳ್ಳುವಂತೆ ತುರ್ತು ಸಂದೇಶ ರವಾನಿಸಿದ್ದವು. ಇದಾದ ನಂತರ, ಅದೇ ವರ್ಷದ ಜೂ.23 ರಂದು ಏರ್ ಇಂಡಿಯಾ ವಿಮಾನ (ಕಾನಿಷ್ಕಾ)ದಲ್ಲಿ ಸೂಟ್‌ಕೇಸ್ ಬಾಂಬ್ ಇರಿಸಲಾಗಿತ್ತು. ಟೊರೊಂಟೊದಿಂದ ಬ್ರಿಟನ್‌ನ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ ಒಟ್ಟು 329 ಪ್ರಯಾಣಿಕರಿದ್ದರು. ಹತ್ಯೆಗೀಡಾಗಿದ್ದ ಬಹುತೇಕ ಪ್ರಯಾಣಿಕರಲ್ಲಿ ಕೆನಡಾ ಪ್ರಜೆಗಳಿದ್ದರು. ಇದನ್ನೂ ಓದಿ: ನಿಜ್ಜರ್‌ನಿಂದ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ, ಭಾರತದಲ್ಲಿ ದಾಳಿಗೆ ಧನ ಸಹಾಯ: ಗುಪ್ತಚರ ದಾಖಲೆ

    ಕಾನಿಷ್ಕಾ ದಾಳಿಯ ಸೂತ್ರಧಾರಿಯಾಗಿದ್ದ ಪಾರ್ಮರ್‌ನನ್ನು 1992 ರಲ್ಲಿ ಪಂಜಾಬ್‌ನಲ್ಲಿ ಪೊಲೀಸರು ಹತ್ಯೆ ಮಾಡಿದರು. ಆದರೆ ಅದೇ ವರ್ಷ ಜೂನ್ ತಿಂಗಳಲ್ಲಿ ಕೆನಡಾದ ಹಲವು ಭಾಗಗಳಲ್ಲಿ ಪಾರ್ಮರ್‌ಗೆ ಗೌರವ ಸೂಚಿಸುವ ಹಲವಾರು ಭಿತ್ತಿ ಚಿತ್ರಗಳು ಕಾಣಿಸಿಕೊಂಡಿದ್ದವು.

    ಖಲಿಸ್ತಾನಿ ಉಗ್ರರ ಪರವಾಗಿ ಕೆನಡಾ ಸಹಾನುಭೂತಿ ತೆರೆಮರೆಯಲ್ಲಿ ನಡೆದಿದೆ. ಇದರಿಂದ ಭಾರತಕ್ಕೆ ಮತ್ತೆ ಖಲಿಸ್ತಾನಿಗಳಿಂದ ಭದ್ರತಾ ಅಪಾಯ ಎದುರಾಗಿದೆ. ಏರ್ ಇಂಡಿಯಾ ಕಾನಿಷ್ಕಾ ಬಾಂಬ್ ದಾಳಿಯನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದರೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ಕಾನಿಷ್ಕಾ ಬಂಬ್ ದಾಳಿಯ ಪರಂಪರೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ.

    ಖಲಿಸ್ತಾನಿಗಳ ಬಗ್ಗೆ ಕೆನಡಾ ಸಹಾನುಭೂತಿ ಯಾಕೆ?
    ಭಾರತದ ನಂತರ ಸಿಖ್ಖರು ಹೆಚ್ಚಿನ ಸಂಖ್ಯೆಯಲ್ಲಿರುವ ದೇಶ ಕೆನಡಾ. ಈ ಜನಸಂಖ್ಯೆಯು ಕೆನಡಾದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ಇಂಬು ನೀಡುವಂತೆ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರ ಲಿಬರಲ್‌ ಪಕ್ಷಕ್ಕೆ ಬೆಂಬಲ ನೀಡಿರುವುದು ಖಲಿಸ್ತಾನ ಪ್ರತ್ಯೇಕತಾ ಹೋರಾಟದಲ್ಲಿ ಭಾಗಿಯಾಗಿರುವ ಜಗಮೀತ್‌ ಸಿಂಗ್‌ ಅವರ ನ್ಯೂ ಡೆಮಾಕ್ರಟಿಕ್‌ ಪಕ್ಷ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಯೋತ್ಪಾದಕರಿಗೆ ಕೆನಡಾದಲ್ಲಿ ಸುರಕ್ಷಿತ ನೆಲೆ ಸಿಕ್ಕಿದೆ: ಟ್ರುಡೊ ವಿರುದ್ಧ ಲಂಕಾ ಸಚಿವ ವಾಗ್ದಾಳಿ

    ಭಯೋತ್ಪಾದಕರಿಗೆ ಕೆನಡಾದಲ್ಲಿ ಸುರಕ್ಷಿತ ನೆಲೆ ಸಿಕ್ಕಿದೆ: ಟ್ರುಡೊ ವಿರುದ್ಧ ಲಂಕಾ ಸಚಿವ ವಾಗ್ದಾಳಿ

    ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ಕುರಿತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಭಾರತದ ವಿರುದ್ಧ ನೀಡಿದ ಹೇಳಿಕೆ ಎರಡು ದೇಶಗಳ ರಾಜತಾಂತ್ರಿಕ ಬಿರುಕಿಗೆ ಕಾರಣವಾಗಿದೆ. ಕೆಲವು ಭಯೋತ್ಪಾದಕರಿಗೆ (Terrorist) ಕೆನಡಾದಲ್ಲಿ (Canada) ಸುರಕ್ಷಿತ ನೆಲೆ ಸಿಕ್ಕಿದೆ ಎಂದು ಶ್ರೀಲಂಕಾದ (Sri Lanka) ವಿದೇಶಾಂಗ ಸಚಿವ ಅಲಿ ಸೆಬ್ರಿ (Ali Sabry) ಹೇಳುವ ಮೂಲಕ ಭಾರತವನ್ನು ಬೆಂಬಲಿಸಿದ್ದಾರೆ.

    ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ವಾಗ್ದಾಳಿ ನಡೆಸಿದ ಸೆಬ್ರಿ, ಭಯೋತ್ಪಾದಕರಿಗೆ ಕೆನಡಾದಲ್ಲಿ ಸುರಕ್ಷಿತ ನೆಲೆ ಸಿಕ್ಕಂತಾಗಿದೆ. ಕೆನಡಾದ ಪ್ರಧಾನಿ ಯಾವುದೇ ಆಧಾರಗಳಿಲ್ಲದೆ ಭಾರತದ ವಿರುದ್ಧ ಅತಿರೇಕದ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಭಾರತದ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶ್ರೀಲಂಕಾದ ವಿರುದ್ಧವೂ ಹಿಂದೆ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು. ಶ್ರೀಲಂಕಾದಲ್ಲಿ ಭಯಾನಕ ನರಮೇಧವಾಗಿತ್ತು ಎಂಬ ಹೇಳಿಕೆ ಸಂಪೂರ್ಣ ಸುಳ್ಳು. ನಮ್ಮ ದೇಶದಲ್ಲಿ ಅಂತಹ ಯಾವುದೇ ನರಮೇಧ ನಡೆದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು. ಇದನ್ನೂ ಓದಿ: ಜಾಗರೂಕರಾಗಿರಿ! – ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಕೆನಡಾ ಎಚ್ಚರಿಕೆ

    ಟ್ರುಡೊ 2ನೇ ಮಹಾಯುದ್ಧದ ಸಮಯದಲ್ಲಿ ಹಿಂದೆ ನಾಜಿಗಳೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬರಿಗೆ ಅದ್ದೂರಿ ಸ್ವಾಗತ ನೀಡಿದ್ದರು. ಇದು ಪ್ರಶ್ನಾರ್ಹ ವಿಚಾರ. ಕೆಲವೊಮ್ಮೆ ಟ್ರುಡೊ ಅತಿರೇಕದ ಹಾಗೂ ಆಧಾರರಹಿತ ಆರೋಪಗಳನ್ನು ಮಾಡುವ ವಿಚಾರ ಹೊಸದೇನಲ್ಲ ಎಂದಿದ್ದಾರೆ. ಇದನ್ನೂ ಓದಿ: ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸಿ – ಕರ್ನಾಟಕಕ್ಕೆ CWRC ಆದೇಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಾಗರೂಕರಾಗಿರಿ! – ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಕೆನಡಾ ಎಚ್ಚರಿಕೆ

    ಜಾಗರೂಕರಾಗಿರಿ! – ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಕೆನಡಾ ಎಚ್ಚರಿಕೆ

    ಒಟ್ಟಾವಾ: ಕೆನಡಾದ (Canada) ಸರ್ಕಾರ ಭಾರತದಲ್ಲಿರುವ (India) ತನ್ನ ನಾಗರಿಕರಿಗೆ ಜಾಗರೂಕರಾಗಿರುವಂತೆ ಸಲಹೆಯನ್ನು ನೀಡಿದೆ.

    ಕೆನಡಾ ಹಾಗೂ ಭಾರತದ ನಡುವೆ ಇತ್ತೀಚೆಗೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟು ಹಿನ್ನೆಲೆ ಕೆನಡಾ ಸರ್ಕಾರ ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಎಚ್ಚರಿಕೆಯನ್ನು ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆನಡಾದ ಬಗ್ಗೆ ಪ್ರತಿಭಟನೆಗಳು ಹಾಗೂ ಕೆಲವು ನಕಾರಾತ್ಮಕ ಭಾವನೆಗಳಿಗೆ ಕರೆ ನೀಡಲಾಗಿದೆ ಎಂದು ತಿಳಿಸಿದೆ.

    ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ ಬಳಿಕ ಭಾರತ ಹಾಗೂ ಕೆನಡಾದ ನಡುವೆ ಉದ್ವಿಗ್ನದ ಸ್ಥಿತಿ ನಿರ್ಮಾಣವಾಗಿದೆ. ಕೆನಡಾದ ಈ ಆರೋಪವನ್ನು ಭಾರತ ತಿರಸ್ಕರಿಸಿದೆ.

     

    ಕೆನಡಾ ಸರ್ಕಾರ ತನ್ನ ಪ್ರಯಾಣಿಕರಿಗೆ ನೀಡಿದ ಸಲಹೆಯಲ್ಲಿ, ಕೆನಡಾ ಮತ್ತು ಭಾರತದಲ್ಲಿನ ಇತ್ತೀಚಿನ ಬೆಳವಣಿಗೆಗಳ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆಗಳಿಗೆ ಕರೆಗಳು ಹಾಗೂ ಕೆನಡಾದ ಬಗ್ಗೆ ಕೆಲವು ನಕಾರಾತ್ಮಕ ಭಾವನೆಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆ ದಯವಿಟ್ಟು ಜಾಗರೂಕರಾಗಿರಿ ಮತ್ತು ಎಚ್ಚರಿಕೆಯಿಂದಿರಿ ಎಂದು ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮೂವರು ಕೇಂದ್ರ ಸಚಿವರಿಗೆ ಬಿಜೆಪಿ ಟಿಕೆಟ್‌

    ಕಳೆದ ವಾರ ಭಾರತ ಕೆನಡಾದಲ್ಲಿ ವಾಸವಿರುವ ತನ್ನ ಪ್ರಜೆಗಳು ಮತ್ತು ವಿದ್ಯಾರ್ಥಿಗಳಿಗೆ ಇದೇ ರೀತಿಯ ಸಲಹೆಯನ್ನು ನೀಡಿತು. ಕಳೆದ ಬುಧವಾರ ಭಾರತೀಯ ಪ್ರಜೆಗಳು, ಕೆನಡಾದಲ್ಲಿರುವ ವಿದ್ಯಾರ್ಥಿಗಳು ಮತ್ತು ದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿರುವವರು ಎಚ್ಚರಿಕೆ ವಹಿಸುವಂತೆ ಸೂಚಿಸಿತ್ತು. ಭಾರತೀಯ ಪ್ರಜೆಗಳು ಮತ್ತು ಕೆನಡಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಕೆನಡಾದಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ಕಂಡಿರುವ ಪ್ರದೇಶಗಳು ಮತ್ತು ಸಂಭಾವ್ಯ ಸ್ಥಳಗಳಿಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಬೆಂಗಳೂರು ಬಂದ್ – ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದಲೂ ಸಹಜ ಸ್ಥಿತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಜ್ಜರ್‌ನಿಂದ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ, ಭಾರತದಲ್ಲಿ ದಾಳಿಗೆ ಧನ ಸಹಾಯ: ಗುಪ್ತಚರ ದಾಖಲೆ

    ನಿಜ್ಜರ್‌ನಿಂದ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ, ಭಾರತದಲ್ಲಿ ದಾಳಿಗೆ ಧನ ಸಹಾಯ: ಗುಪ್ತಚರ ದಾಖಲೆ

    ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಹರ್ದೀಪ್ ಸಿಂಗ್ ನಿಜ್ಜರ್‌ನ (Hardeep Singh Nijjar) ಹತ್ಯೆ ಭಾರತ ಮತ್ತು ಕೆನಡಾದ (Canada) ನಡುವೆ ಭಾರೀ ರಾಜತಾಂತ್ರಿಕ ಬಿರುಕಿಗೆ ಕಾರಣವಾಗಿದೆ. ನಿಜ್ಜರ್ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ, ಭಾರತದಲ್ಲಿನ ದಾಳಿಗಳಿಗೆ ಹಣ ಸಹಾಯ ಮಾಡುವಲ್ಲಿ ಸಕ್ರಿಯನಾಗಿದ್ದ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು (Indian Intelligence Agency) ಸಿದ್ಧಪಡಿಸಿದ ದಾಖಲೆಗಳು ತಿಳಿಸಿವೆ.

    ನಿಜ್ಜರ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಯ ಸಹಾಯದಿಂದ ಪಾಕಿಸ್ತಾನದಲ್ಲಿ ತರಬೇತಿ ಪಡೆದು ಮತ್ತು ದೇಶದ ಇತರ ಖಲಿಸ್ತಾನಿ ನಾಯಕರೊಂದಿಗೆ ಸಂಪರ್ಕವನ್ನು ಹೊಂದಿದ್ದ. ಆತ ಪಂಜಾಬ್ ಮತ್ತು ಭಾರತದ ಇತರ ಭಾಗಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ಮಾಡಿದ್ದ ಎಂದು ದಾಖಲೆಯಲ್ಲಿ ಉಲ್ಲೇಖವಾಗಿದೆ.

    ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ ಹಾಗೂ ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ (KTF) ಮುಖ್ಯಸ್ಥನಾಗಿದ್ದ ನಿಜ್ಜರ್‌ನನ್ನು ಜೂನ್ 18 ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ ಗುರುದ್ವಾರದ ಹೊರಗೆ ಇಬ್ಬರು ಅಪರಿಚಿತರು ಗುಂಡಿಕ್ಕಿ ಕೊಂದರು.

    ಗುಪ್ತಚರ ದಾಖಲೆಯಲ್ಲೇನಿದೆ?: ನಿಜ್ಜರ್ ಖಲಿಸ್ತಾನಿ ಚಟುವಟಿಕೆಗಳನ್ನು ಯಾವುದೇ ಮುಲಾಜಿಲ್ಲದೆ ನಡೆಸುತ್ತಿದ್ದ. ಆತ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ಆಯೋಜಿಸಿ, ಅಲ್ಲಿ ಆತ ಎಕೆ-47, ಸ್ನೈಪರ್ ರೈಫಲ್‌ಗಳು ಮತ್ತು ಪಿಸ್ತೂಲ್‌ಗಳಂತಹ ಬಂದೂಕುಗಳನ್ನು ಬಳಸಲು ತರಬೇತಿ ನೀಡುತ್ತಿದ್ದ.

    1996 ರಲ್ಲಿ ರವಿ ಶರ್ಮಾ ಎಂಬ ಹೆಸರಿನ ನಕಲಿ ಪಾಸ್‌ಪೋರ್ಟ್ ಬಳಸಿ ನಿಜ್ಜರ್ ಕೆನಡಾಕ್ಕೆ ಪರಾರಿಯಾಗಿದ್ದ ಮತ್ತು ಟ್ರಕ್ ಡ್ರೈವರ್ ಮತ್ತು ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ. ಆತ ಕೆನಡಾದಲ್ಲಿ ಹಿಂಸಾತ್ಮಕ ಭಾರತ ವಿರೋಧಿ ಪ್ರತಿಭಟನೆಗಳನ್ನು ಆಯೋಜಿಸಿದ್ದ ಮಾತ್ರವಲ್ಲದೇ ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಕಾವೇರಿ ಕಿಚ್ಚು – ಬೆಂಗಳೂರು ಬಂದ್‌ಗೆ ಸಿದ್ಧತೆ

    ಕೆನಡಾದಲ್ಲಿ ಸ್ಥಳೀಯ ಗುರುದ್ವಾರಗಳು ಆಯೋಜಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳನ್ನು ನಿಷೇಧಿಸುವಂತೆ ಆತ ಕರೆ ನೀಡಿದ್ದ. ಆತನಿಗೆ ಕೆನಡಾಗೆ ವಲಸೆ ಹೋಗಲು ಸಹಾಯ ಮಾಡಿದ್ದ ಮಹಿಳೆಯನ್ನು ಮದುವೆಯಾಗಿದ್ದ. ಆದರೆ ಆ ಮಹಿಳೆ 1997ರಲ್ಲಿ ಕೆನಡಾಕ್ಕೆ ಆಗಮಿಸಿ ಬೇರೊಬ್ಬ ಪುರುಷನನ್ನು ವಿವಾಹವಾಗಿದ್ದಾಳೆ ಎಂಬುದನ್ನು ಅಧಿಕಾರಿಗಳು ಗಮನಿಸಿದ್ದಾರೆ ಹಾಗೂ ಆಕೆ ತನ್ನ ಅನುಕೂಲಕ್ಕಾಗಿ ಮದುವೆ ಹಕ್ಕನ್ನು ತಿರಸ್ಕರಿಸಿದ್ದಾಳೆ.

    2001 ರಲ್ಲಿ ನಿಜ್ಜರ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ, ಸೋತಿದ್ದ. ಆತ ಬಳಿಕ 2007 ರಲ್ಲಿ ಕೆನಡಾದ ಪ್ರಜೆಯಾದ ಎಂದು ದಾಖಲೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ಬೆಂಬಲಿಸಿ ಮಂಡ್ಯ ಚಿತ್ರಮಂದಿರಗಳು ಬಂದ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಯೋತ್ಪಾದಕರಿಗೆ ಕೆನಡಾ ಸುರಕ್ಷಿತ ನೆಲೆ – ನೇರಾನೇರವಾಗಿ ದೂಷಿಸಿದ ಭಾರತ

    ಭಯೋತ್ಪಾದಕರಿಗೆ ಕೆನಡಾ ಸುರಕ್ಷಿತ ನೆಲೆ – ನೇರಾನೇರವಾಗಿ ದೂಷಿಸಿದ ಭಾರತ

    ನವದೆಹಲಿ: ಭಯೋತ್ಪಾದನೆಯ ವಿಚಾರ ಬಂದಾಗ ಪಾಕಿಸ್ತಾನದ (Pakistan) ವಿರುದ್ಧ ಭಾರತ (India) ಕಠಿಣ ಪದಗಳನ್ನು ಬಳಸಿ ಕಿಡಿಕಾರುವುದು ಸಾಮಾನ್ಯ. ಆದರೆ ಇದೇ ಮೊದಲ ಬಾರಿಗೆ ಕೆನಡಾ (Canada) ವಿರುದ್ಧ ಭಾರತ ಕಠಿಣ ಪದಗಳನ್ನು ಬಳಸಿ ದೂಷಿಸಿದೆ.

    ಭಯೋತ್ಪಾದಕರಿಗೆ (Terrorists) ಕೆನಡಾ ಸುರಕ್ಷಿತ ನೆಲೆ ಒದಗಿಸಿದೆ ಎಂದು ಭಾರತ ನೇರಾನೇರವಾಗಿ ದೂಷಿಸಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ (Khalistani Terrorist Hardeep Singh Nijjar) ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟ ಬೆನ್ನಲ್ಲೇ ಭಾರತ ಕೆನಡಾವನ್ನು ಬಹಿರಂಗ ವೇದಿಕೆಯಲ್ಲಿ ಟೀಕಿಸಲು ಆರಂಭಿಸಿದೆ.

    ಸುದ್ದಿಗೋಷ್ಠಿ ನಡೆಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ, ಭಯೋತ್ಪಾದನೆಗೆ ನಮ್ಮ ನೆರೆಯ ಪಾಕಿಸ್ತಾನ ಪಶ್ಚಿಮಾತ್ಯ ದೇಶಗಳಿಗೆ ಧನಸಹಾಯ ಮತ್ತು ಬೆಂಬಲ ನೀಡುತ್ತದೆ. ಉಗ್ರರಿಗೆ ಕೆನಡಾ ಸೇರಿದಂತೆ ವಿದೇಶಗಳು ಕಾರ್ಯನಿರ್ವಹಿಸಲು ಸ್ಥಳಗಳನ್ನು ನೀಡುತ್ತಿದೆ ಎಂದು ದೂರಿದರು.  ಇದನ್ನೂ ಓದಿ: ಕೆನಡಾದಲ್ಲಿ ಖಲಿಸ್ತಾನಿ ಉಗ್ರನ ಹತ್ಯೆ – ಹೊಣೆ ಹೊತ್ತುಕೊಂಡ ಬಿಷ್ಣೋಯ್‌ ಗ್ಯಾಂಗ್‌

    ಕೆನಡಾ ಸರ್ಕಾರವು ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯವನ್ನು ನೀಡಬಾರದು. ಭಯೋತ್ಪಾದನೆ ಆರೋಪಗಳನ್ನು ಎದುರಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಥವಾ ಆರೋಪಗಳನ್ನು ಎದುರಿಸಲು ಅವರನ್ನು ಭಾರತಕ್ಕೆ ಕಳುಹಿಸಬೇಕು ಎಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದರು.

    ಭಾರತವು ವರ್ಷ ವರ್ಷ ಕನಿಷ್ಠ 20-25 ವ್ಯಕ್ತಿಗಳನ್ನು ಹಸ್ತಾಂತರಿಸುವಂತೆ ಕೋರಿದೆ. ಆದರೆ ಕೆನಡಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

     

    ಈ ವರ್ಷ ಜೂನ್ 18 ರಂದು ಇಬ್ಬರು ಅಪರಿಚಿತ ದುಷ್ಕರ್ಮಿಗಳಿಂದ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲ್ಪಟ್ಟ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಕೆನಡಾದಿಂದ ಭಾರತಕ್ಕೆ ಯಾವುದೇ ನಿರ್ದಿಷ್ಟ ಮಾಹಿತಿ ಬಂದಿಲ್ಲ ಎಂದು ಬಾಗ್ಚಿ ಹೇಳಿದ್ದಾರೆ.

    ಈ ಪ್ರಕರಣದಲ್ಲಿ ಕೆನಡಾ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಹಂಚಿಕೊಂಡಿಲ್ಲ. ನಾವು ಈ ಕುರಿತು ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಪಡೆಯಲು ಸಿದ್ಧರಿದ್ದೇವೆ. ಆದರೆ ಇಲ್ಲಿಯವರೆಗೆ ನಮಗೆ ಕೆನಡಾದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಬಾಗ್ಚಿ ಹೇಳಿದರು.

    ಭಾರತದ ಜೊತೆಗಿನ ವ್ಯಾಪಾರ ಒಪ್ಪಂದ ಮುಂದೂಡಿ, ಭಾರತದ ರಾಯಭಾರಿಯನ್ನು ಉಚ್ಛಾಟಿಸಿದ್ದ ಕೆನಡಾ ಸರ್ಕಾರಕ್ಕೆ ಭಾರತ ಮತ್ತೊಂದು ಪೆಟ್ಟು ನೀಡಿದೆ. ಭಾರತಕ್ಕೆ ಬರುವ ಕೆನಡಾ ಪ್ರಜೆಗಳಿಗೆ ವೀಸಾ ನೀಡಿಕೆಯನ್ನು ಕೇಂದ್ರ ಸರ್ಕಾರ ತಾತ್ಕಲಿಕವಾಗಿ ಸ್ಥಗಿತ ಮಾಡಿದೆ. ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿ ಇರಲಿದೆ.

    ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಜಿ-20 ಶೃಂಗಸಭೆಗೆ ಬರುವ ಮೊದಲು ಖಲಿಸ್ತಾನಿ ಉಗ್ರ ಪನ್ನೂ ಸೇರಿ ಹಲವರ ಜೊತೆ ಸಭೆ ಮಾಡಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆನಡಾದ ಪ್ರಜೆಗಳಿಗೆ ಭಾರತೀಯ ವೀಸಾ ಸೇವೆ ತಾತ್ಕಾಲಿಕ ಸ್ಥಗಿತ

    ಕೆನಡಾದ ಪ್ರಜೆಗಳಿಗೆ ಭಾರತೀಯ ವೀಸಾ ಸೇವೆ ತಾತ್ಕಾಲಿಕ ಸ್ಥಗಿತ

    ನವದೆಹಲಿ: ಭಾರತ (India) ಹಾಗೂ ಕೆನಡಾ (Canada) ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮೂಡಿರುವ ಹಿನ್ನೆಲೆ ಕೆನಡಾದ ಪ್ರಜೆಗಳಿಗೆ ಭಾರತೀಯ ವೀಸಾ (Visa) ಸೇವೆಯನ್ನು ಗುರುವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

    ಜೂನ್‌ನಲ್ಲಿ ಕೆನಡಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಆರೋಪಿಸಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮೂಡಿದ್ದು, ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

    ಈ ಬಗ್ಗೆ ವೀಸಾ ಸಲಹೆಗಳನ್ನು ಒದಗಿಸುವ ಭಾರತದ ಆನ್‌ಲೈನ್ ವೀಸಾ ಅರ್ಜಿ ಕೇಂದ್ರ ಬಿಎಲ್‌ಎಸ್ ಇಂಟರ್‌ನ್ಯಾಷನಲ್ ತನ್ನ ವೆಬ್‌ಸೈಟ್‌ನಲ್ಲಿ ಸೂಚನೆಯನ್ನು ಪೋಸ್ಟ್ ಮಾಡಿದೆ. ಭಾರತೀಯ ಮಿಷನ್‌ನಿಂದ ಪ್ರಮುಖ ಸೂಚನೆ: ಕಾರ್ಯಾಚರಣೆಯ ಕಾರಣಗಳಿಂದಾಗಿ 2023ರ ಸೆಪ್ಟೆಂಬರ್ 21ರಿಂದ ಜಾರಿಗೆ ಬರುವಂತೆ ಭಾರತೀಯ ವೀಸಾ ಸೇವೆಗಳನ್ನು ಮುಂದಿನ ಸೂಚನೆಯ ತನಕ ಸ್ಥಗಿತಗೊಳಿಸಲಾಗಿದೆ ಎಂದು ಬರೆದಿದೆ. ಇದನ್ನೂ ಓದಿ: ಕೆನಡಾದಲ್ಲಿ ಗ್ಯಾಂಗ್‌ವಾರ್‌ – ಖಲಿಸ್ತಾನಿ ಭಯೋತ್ಪಾದಕ ಹತ್ಯೆ

    ಕೆನಡಾದ ಪ್ರಧಾನಿ ಟ್ರುಡೋ ಸೋಮವಾರ ಸಂಸತ್ತಿನಲ್ಲಿ ಮಾತನಾಡುತ್ತಾ, ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್‌ನ ಮಾರಣಾಂತಿಕ ಗುಂಡಿನ ದಾಳಿಯ ಹಿಂದೆ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪವನ್ನು ಭಾರತ ತಳ್ಳಿ ಹಾಕಿದೆ. ನಾವು ತಮ್ಮ ಸಂಸತ್ತಿನಲ್ಲಿ ಕೆನಡಾ ಪ್ರಧಾನಿಯವರ ಹೇಳಿಕೆಯನ್ನು ಗಮನಿಸಿದ್ದೇವೆ ಹಾಗೂ ಅದನ್ನು ತಿರಸ್ಕರಿಸುತ್ತೇವೆ. ಮತ್ತು ಅವರ ವಿದೇಶಾಂಗ ಸಚಿವರ ಹೇಳಿಕೆನ್ನೂ ತಿರಸ್ಕರಿಸುತ್ತೇವೆ ಎಂದು ಭಾರತದ ವಿದೇಶಾಂಗ ಸಚಿವಾಲಯ (MEA) ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಭಾರತ ವಿರೋಧಿ ಪ್ರಚಾರಕ್ಕೆ ಖಲಿಸ್ತಾನ್ ಉಗ್ರರ ಜೊತೆ ಕೈ ಜೋಡಿಸಿದ ಪಾಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆನಡಾದಲ್ಲಿ ಗ್ಯಾಂಗ್‌ವಾರ್‌ – ಖಲಿಸ್ತಾನಿ ಭಯೋತ್ಪಾದಕ ಹತ್ಯೆ

    ಕೆನಡಾದಲ್ಲಿ ಗ್ಯಾಂಗ್‌ವಾರ್‌ – ಖಲಿಸ್ತಾನಿ ಭಯೋತ್ಪಾದಕ ಹತ್ಯೆ

    ಒಟ್ಟಾವಾ: ಕೆನಡಾದಲ್ಲಿ (Canada) ನಡೆದ ಗ್ಯಾಂಗ್‌ವಾರ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಸುಖ ಡುನೆಕೆ ಹತ್ಯೆಯಾಗಿದ್ದಾನೆ. ಡುನೆಕೆ ಕೆನಡಾದಲ್ಲಿ ಖಲಿಸ್ತಾನ್ ಚಳವಳಿಯ ಭಾಗವಾಗಿದ್ದ ಎನ್ನಲಾಗಿದೆ.

    ಡುನೆಕೆ ಕೆನಡಾ ಮೂಲದ ದರೋಡೆಕೋರ ಅರ್ಶ್‌ದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲಾನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ. ಇದನ್ನೂ ಓದಿ: ಭಾರತ ವಿರೋಧಿ ಪ್ರಚಾರಕ್ಕೆ ಖಲಿಸ್ತಾನ್ ಉಗ್ರರ ಜೊತೆ ಕೈ ಜೋಡಿಸಿದ ಪಾಕ್

    ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌ ಹತ್ಯೆಗೂ ಭಾರತೀಯ ಸರ್ಕಾರಿ ಏಜೆಂಟರಿಗೂ ಸಂಬಂಧವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಈ ವಾರದ ಆರಂಭದಲ್ಲಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಹೇಳಿದ್ದರು. ಈ ಹೇಳಿಕೆ ಭಾರತ-ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಡುನೆಕೆ ಹತ್ಯೆಯಾಗಿದೆ.

    ನಿಜ್ಜರ್ ಭಾರತೀಯ ಭಯೋತ್ಪಾದಕ ಮತ್ತು ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥನಾಗಿದ್ದ. ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯ ಗುರುದ್ವಾರದ ಹೊರಗೆ ಹತ್ಯೆಗೀಡಾಗಿದ್ದ. ಈತ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ. ಇದನ್ನೂ ಓದಿ: ಉಲ್ಟಾ ಹೊಡೆದ ಕೆನಡಾ- ಭಾರತವನ್ನು ಪ್ರಚೋದಿಸುತ್ತಿಲ್ಲವೆಂದ ಟ್ರುಡೋ

    ಕೆನಡಾದಲ್ಲಿ ಹೆಚ್ಚುತ್ತಿರುವ ಭಾರತ-ವಿರೋಧಿ ಚಟುವಟಿಕೆಗಳು, ದ್ವೇಷದ ಅಪರಾಧಗಳು ಮತ್ತು ಕ್ರಿಮಿನಲ್ ಹಿಂಸಾಚಾರದ ಹಿನ್ನೆಲೆಯಲ್ಲಿ ಅಲ್ಲಿನ ಭಾರತೀಯರಿಗೆ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ.

    ಭಾರತ ಮತ್ತು ಕೆನಡಾ ರಾಷ್ಟ್ರಗಳ ನಡುವೆ ಬಿಕ್ಕಟ್ಟು ತಲೆದೋರಿದೆ. ಈ ನಡುವೆ, ಗಾಯಕ ಸಿಧು ಮೂಸೆವಾಲಾ ಅವರನ್ನು ಕೊಂದ ಆರೋಪ ಹೊತ್ತಿರುವ ದರೋಡೆಕೋರ ಗೋಲ್ಡಿ ಬ್ರಾರ್‌ನ ಸಹಚರರ ಮೇಲೆ ಪಂಜಾಬ್ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಗೋಲ್ಡಿ ಬ್ರಾರ್ ಖಲಿಸ್ತಾನಿ ಪ್ರತ್ಯೇಕತಾವಾದಿ ಚಳವಳಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಕೆನಡಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]