Tag: canada

  • ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿಗೆ ಪ್ರಧಾನಿ ಮೋದಿ ಖಂಡನೆ

    ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿಗೆ ಪ್ರಧಾನಿ ಮೋದಿ ಖಂಡನೆ

    ನವದೆಹಲಿ: ಕೆನಡಾದ (Canada) ಹಿಂದೂ ದೇವಾಲಯದ (Hindu Temple) ಮೇಲೆ ಉದ್ದೇಶಪೂರ್ವಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಖಂಡಿಸಿದ್ದಾರೆ. ಕಳೆದ ವಾರ ಒಂಟಾರಿಯೊದ ಬ್ರಾಂಪ್ಟನ್‌ನಲ್ಲಿ ಹಿಂದೂ ದೇವಾಲಯದ ಮೇಲೆ ಕೆಲವರು ದಾಳಿ ನಡೆಸಿದ್ದರು.

    ಆ ದೇಶದಲ್ಲಿನ ಭಾರತೀಯ ರಾಜತಾಂತ್ರಿಕರನ್ನು ಬೆದರಿಸುವ ಹೇಡಿತನದ ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ಟೀಕಿಸಿದ್ದಾರೆ. ಇಂತಹ ಹಿಂಸಾಚಾರಗಳು ಭಾರತದ ಸಂಕಲ್ಪವನ್ನು ಎಂದಿಗೂ ದುರ್ಬಲಗೊಳಿಸುವುದಿಲ್ಲ. ಕೆನಡಾದ ಸರ್ಕಾರವು ನ್ಯಾಯವನ್ನು ಖಚಿತಪಡಿಸುತ್ತದೆ ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಬಸ್ ಅಪಘಾತಕ್ಕೆ ಮೋದಿ ಸಂತಾಪ – ಮೃತರ ಕುಟುಂಬಕ್ಕೆ 2 ಲಕ್ಷ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ

    ಭಾರತ ಸರ್ಕಾರವು, ಉಗ್ರವಾದಿಗಳು ಮತ್ತು ಪ್ರತ್ಯೇಕತಾವಾದಿಗಳು ನಡೆಸಿದ ಹಿಂಸಾಚಾರದ ಕೃತ್ಯಗಳನ್ನು ಖಂಡಿಸುತ್ತದೆ ಎಂದು ವಿದೇಶಾಂಗ ಸಚಿವಾಲಯವು ಟೀಕಿಸಿತ್ತು. ಅದರ ಬೆನ್ನಲ್ಲೇ, ಪ್ರಧಾನಿಯವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ. ಎಲ್ಲಾ ಪೂಜಾ ಸ್ಥಳಗಳನ್ನು ಸಮರ್ಪಕವಾಗಿ ರಕ್ಷಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೆನಡಾ ಆಡಳಿತ ವ್ಯವಸ್ಥೆಗೆ ಒತ್ತಾಯಿಸಿದ್ದಾರೆ.

    ಇಂತಹ ಹಿಂಸಾಚಾರದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದನ್ನು ನಾವು ನಿರೀಕ್ಷಿಸುತ್ತೇವೆ ಎಂದು ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಕೆನಡಾದಲ್ಲಿರುವ ತನ್ನ ನಾಗರಿಕರ ಮತ್ತು ಭದ್ರತೆಯ ಬಗ್ಗೆ ಭಾರತ ಸರ್ಕಾರವು ಆಳವಾದ ಕಾಳಜಿ ಹೊಂದಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: Jammu Kashmir | 6 ವರ್ಷದ ನಂತರ ನಡೆದ ಅಧಿವೇಶನದ ಮೊದಲ ದಿನವೇ ಗದ್ದಲ

  • Canada | ಹಿಂದೂ ದೇವಾಲಯದಲ್ಲಿ ಭಕ್ತರ ಮೇಲೆ ಖಲಿಸ್ತಾನಿ ಗುಂಪು ಅಟ್ಯಾಕ್‌ – ಜಸ್ಟಿನ್‌ ಟ್ರುಡೋ ಖಂಡನೆ

    Canada | ಹಿಂದೂ ದೇವಾಲಯದಲ್ಲಿ ಭಕ್ತರ ಮೇಲೆ ಖಲಿಸ್ತಾನಿ ಗುಂಪು ಅಟ್ಯಾಕ್‌ – ಜಸ್ಟಿನ್‌ ಟ್ರುಡೋ ಖಂಡನೆ

    ಒಟ್ಟಾವಾ: ಭಾರತ-ಕೆನಡಾ ರಾಜಕೀಯ ಬಿಕ್ಕಟ್ಟಿನ ನಡುವೆ ಹಿಂದೂಗಳ ಮೇಲೆ ಹಿಂಸಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದಲ್ಲಿ (Hindu Temple) ಭಕ್ತರ ಮೇಲೆ ಖಲಿಸ್ತಾನಿ ಉಗ್ರರು (Khalistani supporters) ಎನ್ನಲಾದ ಗುಂಪೊಂದು ದಾಳಿ ನಡೆಸಿದೆ.

    ಖಲಿಸ್ತಾನಿ ಧ್ವಜ (Khalistani Flag) ಹಿಡಿದ ಉಗ್ರರು ಎನ್ನಲಾದ ಗುಂಪು ದೇವಸ್ಥಾನಕ್ಕೆ ಲಗ್ಗೆಯಿಟ್ಟು ಭಕ್ತರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದೆ. ಈ ಕುರಿತ ವೀಡಿಯೋಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ವೀಡಿಯೋನಲ್ಲಿ ಖಲಿಸ್ತಾನಿ ಧ್ವಜ ಹಿಡಿದ ಗುಂಪು ದೊಣ್ಣೆ ಹಿಡಿದು ಜನರನ್ನು ಥಳಿಸುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ: ಅಮೆರಿಕದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡೋದು 7 ರಾಜ್ಯದ ಜನತೆ! – ಏನಿದು Swing States? ಯಾಕೆ ಇಷ್ಟೊಂದು ಮಹತ್ವ?

    ಹಿಂಸಾಚಾರದ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಹಿಂಸಾಚಾರ ಕೃತ್ಯಗಳು ಸ್ವೀಕಾರಾರ್ಹವಲ್ಲ. ಪ್ರತಿಯೊಬ್ಬ ಕೆನಡಿಯನ್ನರು ತಮ್ಮ ನಂಬಿಕೆಯನ್ನು ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕನ್ನು ಹೊಂದಿದ್ದಾರೆ ಎಂದರಲ್ಲದೇ, ಸಮುದಾಯವನ್ನು ರಕ್ಷಿಸಲು ತತ್ವರಿತವಾಗಿ ಸ್ಪಂಧಿಸಿದ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ.

    ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಖಲಿಸ್ತಾನಿ ಬೆಂಬಲಿಗರ ಗುಂಪು ದಾಳಿ ನಡೆಯುವ ಮೊದಲು 1984ರ ಸಿಖ್ ವಿರೋಧಿ ದಂಗೆಯನ್ನು ಸ್ಮರಿಸಲು ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಭಕ್ತರ ಮೇಲೆ ಹಲ್ಲೆ ನಡೆಸಿದೆ. ಇದನ್ನೂ ಓದಿ: ಮತ್ತೆ ಕ್ಯಾತೆ – ಭಾರತವನ್ನು ಸೈಬರ್‌ ಬೆದರಿಕೆ ಪಟ್ಟಿಗೆ ಸೇರಿಸಿದ ಕೆನಡಾ

    ಇನ್ನೂ ಇತ್ತೀಚೆಗೆ ಕೆನಡಾದ ರಾಷ್ಟ್ರೀಯ ಸೈಬರ್ ಬೆದರಿಕೆ ಮೌಲ್ಯಮಾಪನ (NCTA) 2025-26 ವರದಿ ಬಿಡುಗಡೆಯಾಗಿತ್ತು. ಕೆನಡಾದ ಸೈಬರ್ ಭದ್ರತೆಯ ತಾಂತ್ರಿಕ ಪ್ರಾಧಿಕಾರ ʻಸೈಬರ್ ಸೆಕ್ಯುರಿಟಿ ಕೇಂದ್ರʼ ಅಕ್ಟೋಬರ್ 30 ರಂದು ಈ ವರದಿ ಬಿಡುಗಡೆ ಮಾಡಿತು. ಈ ವರದಿಯಲ್ಲಿ ಭಾರತವನ್ನು ಸೈಬರ್‌ ದಾಳಿಯ ಪಟ್ಟಿಗೆ ಕೆನಡಾ ಸರ್ಕಾರ ಸೇರಿಸಿರುವುದಾಗಿ ಉಲ್ಲೇಖವಾಗಿತ್ತು.

  • ಮತ್ತೆ ಕ್ಯಾತೆ – ಭಾರತವನ್ನು ಸೈಬರ್‌ ಬೆದರಿಕೆ ಪಟ್ಟಿಗೆ ಸೇರಿಸಿದ ಕೆನಡಾ

    ಮತ್ತೆ ಕ್ಯಾತೆ – ಭಾರತವನ್ನು ಸೈಬರ್‌ ಬೆದರಿಕೆ ಪಟ್ಟಿಗೆ ಸೇರಿಸಿದ ಕೆನಡಾ

    ಒಟ್ಟಾವಾ: ಖಲಿಸ್ತಾನಿ (Khalistan) ಉಗ್ರ ಸಂಘಟನೆಯ ವಿಚಾರವನ್ನೇ ಮುಂದಿಟ್ಟುಕೊಂಡು ಭಾರತದೊಂದಿಗೆ ಪದೇ ಪದೇ ಖ್ಯಾತೆ ತೆಗೆಯುತ್ತಿರುವ ಕೆನಡಾದ (Canada), ಈಗ ಮತ್ತೊಂದು ಕುಚೇಷ್ಟೆ ಮಾಡಿದೆ. ಕೆನಡಾ ಸರ್ಕಾರ ಭಾರತವನ್ನು ಸೈಬರ್‌ ಬೆದರಿಕೆ ಪಟ್ಟಿಗೆ (Cyber Adversary Label) ಸೇರಿಸಿದೆ. ತನ್ನ ವಿರುದ್ಧ ಭಾರತ ಸರ್ಕಾರ ಪ್ರಾಯೋಜಿತ ಬೇಹುಗಾರಿಕೆ ನಡೆಯಬಹುದು ಎಂದು ಆರೋಪಿಸಿದೆ.

    ಕೆನಡಾ ಸರ್ಕಾರದ ಈ ನಡೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಕೆನಡಾದ ರಾಷ್ಟ್ರೀಯ ಸೈಬರ್ ಬೆದರಿಕೆ ಮೌಲ್ಯಮಾಪನ (NCTA) 2025-26 ವರದಿ ಬಿಡುಗಡೆಯಾಗಿದೆ. ಕೆನಡಾದ ಸೈಬರ್ ಭದ್ರತೆಯ ತಾಂತ್ರಿಕ ಪ್ರಾಧಿಕಾರ ʻಸೈಬರ್ ಸೆಕ್ಯುರಿಟಿ ಕೇಂದ್ರʼ ಅಕ್ಟೋಬರ್ 30 ರಂದು ಈ ವರದಿ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಇಸ್ರೇಲ್‌ ಮೇಲೆ ದಾಳಿ ಬೆದರಿಕೆ – ಇರಾನ್ ಸರ್ವೋಚ್ಚ ನಾಯಕನ ಎಕ್ಸ್‌ ಖಾತೆ ಅಮಾನತು

    ಅದರಲ್ಲಿ, ಚೀನಾ, ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದ ನಂತರದ ಸ್ಥಾನದಲ್ಲಿ ಭಾರತವನ್ನು ಹೆಸರಿಸಲಾಗಿದೆ. ಬೇಹುಗಾರಿಕೆ ಉದ್ದೇಶದಿಂದ ಭಾರತ ಪ್ರಾಯೋಜಿತ ವ್ಯಕ್ತಿಗಳು ಕೆನಡಾ ಸರ್ಕಾರದ ನೆಟ್‌ವರ್ಕ್‌ಗಳಿಗೆ ಬೆದರಿಕೆಯೊಡ್ಡುವ ಸಾಧ್ಯತೆ ಇದೆ ಎಂದು ಅಂದಾಜಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿದೆ. ಅಂದಹಾಗೆ, 2018, 2020 ಮತ್ತು 2023-24ರಲ್ಲಿ ಪ್ರಕಟವಾಗಿದ್ದ ವರದಿಗಳಲ್ಲಿ ಭಾರತದ ಹೆಸರು ಉಲ್ಲೇಖವಾಗಿರಲಿಲ್ಲ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಕೆನಡಾದ ರಾಷ್ಟ್ರೀಯ ಸೈಬರ್ ಬೆದರಿಕೆ ಮೌಲ್ಯಮಾಪನ 2025-2026 ವರದಿಯನ್ನು ಟೀಕಿಸಿದ್ದಾರೆ. ಭಾರತ ಇಡೀ ವಿಶ್ವದಲ್ಲಿ ಶಾಂತಿ ಕಾಪಾಡಲು ಪ್ರಯತ್ನಿಸುತ್ತಿದೆ. ಆದ್ರೆ ಕೆನಡಾ ಯಾವುದೇ ಪುರಾವೆಗಳಿಲ್ಲದೇ ಆರೋಪ ಮಾಡಿದೆ. ಇದು ಭಾರತದ ಮೇಲೆ ಕೆನಡಾ ದಾಳಿ ಮಾಡುವ ಮತ್ತೊಂದು ತಂತ್ರಕ್ಕೆ ಉದಾಹರಣೆಯಾಗಿದೆ, ಇದು ತಪ್ಪು ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಭಾರತ-ಚೀನಾ ಹ್ಯಾಂಡ್‌ಶೇಕ್; ಫಲ ನೀಡುತ್ತಾ ಒಪ್ಪಂದ?

    2023ರ ಜೂನ್‌ನಲ್ಲಿ ಕೆನಡಾದಲ್ಲಿ ನಡೆದಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಪಾತ್ರದ ಬಗ್ಗೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ವರ್ಷದ ಹಿಂದೆ ಹೇಳಿದ್ದರು.

    ಟ್ರುಡೋ ಹೇಳಿಕೆಯನ್ನು ಭಾರತ ಅಲ್ಲಗಳೆದಿದೆಯಾದರೂ, ಉಭಯ ದೇಶಗಳ ಸಂಬಂಧ ಹದಗೆಟ್ಟಿದೆ. ಏತನ್ಮಧ್ಯೆ, ಸಿಖ್ ಪ್ರತ್ಯೇಕತಾವಾದಿಗಳನ್ನು ಹತ್ಯೆಗೈಯುವ ಸಂಚಿನಲ್ಲಿ ಅಮಿತ್ ಶಾ ಅವರ ಕೈವಾಡವಿದೆ ಎಂದು ಕೆನಡಾದ ಸಚಿವರೊಬ್ಬರು ಇತ್ತೀಚೆಗೆ ಆರೋಪಿಸಿರುವುದು, ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಿದೆ. ಇದನ್ನೂ ಓದಿ: ಇಸ್ರೇಲ್‌ಗೆ ನಮ್ಮ ಶಕ್ತಿ ಏನೆಂದು ತೋರಿಸಬೇಕು: ಮತ್ತೆ ಯುದ್ಧದ ಎಚ್ಚರಿಕೆ ನೀಡಿದ ಇರಾನ್‌ ಸುಪ್ರೀಂ ಲೀಡರ್‌

  • ಅಮಿತ್‌ ಶಾ ವಿರುದ್ಧ ಕೆನಡಾ ಸಚಿವರಿಂದ ಆರೋಪ – ಕೆನಡಾ ರಾಜತಾಂತ್ರಿಕರಿಗೆ ಭಾರತ ಸಮನ್ಸ್‌

    ಅಮಿತ್‌ ಶಾ ವಿರುದ್ಧ ಕೆನಡಾ ಸಚಿವರಿಂದ ಆರೋಪ – ಕೆನಡಾ ರಾಜತಾಂತ್ರಿಕರಿಗೆ ಭಾರತ ಸಮನ್ಸ್‌

    ನವದೆಹಲಿ: ಕೆನಡಾ ಸಚಿವರು, ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ವಿರುದ್ಧ ಮಾಡಿರುವ ಆರೋಪಗಳ ಹಿನ್ನೆಲೆ ಕೆನಡಾದ (Canada) ರಾಜತಾಂತ್ರಿಕರಿಗೆ ಭಾರತ ಸಮನ್ಸ್‌ ನೀಡಿದೆ.

    ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ಖಲಿಸ್ತಾನಿ ಉಗ್ರರನ್ನು ಗುರಿಯಾಗಿಸಲು ಆದೇಶಿಸಿದ್ದಾರೆ ಎಂಬ ಕೆನಡಾದ ಸಚಿವರು ನೀಡಿದ್ದ ಹೇಳಿಕೆಯನ್ನು ಭಾರತ ತಳ್ಳಿಹಾಕಿದೆ. ಅಸಂಬದ್ಧ ಮತ್ತು ಆಧಾರರಹಿತ ಹೇಳಿಕೆ ಎಂದು ಖಂಡಿಸಿದೆ. ಇದನ್ನೂ ಓದಿ: ಅರ್ಧದಷ್ಟು ವಿದ್ಯುತ್‌ ಸರಬರಾಜು ಕಡಿತ – ಬಾಂಗ್ಲಾಗೆ ಅದಾನಿ ಪವರ್‌ ಶಾಕ್‌

    ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಮಾತನಾಡಿ, ದೇಶದ ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಯ ಸ್ಥಾಯಿ ಸಮಿತಿಯ ಸದಸ್ಯರಿಗೆ ಅಮಿತ್‌ ಶಾ ಅವರು ಖಲಿಸ್ತಾನಿ ಉಗ್ರರನ್ನು ಗುರಿಯಾಗಿಸಿಕೊಂಡು ಹಿಂಸಾಚಾರ, ಬೆದರಿಕೆ ಮತ್ತು ಗುಪ್ತಚರ ಸಂಗ್ರಹಣೆಯ ಅಭಿಯಾನಕ್ಕೆ ಆದೇಶಿಸಿದ್ದಾರೆ ಎಂದು ಆರೋಪಿಸಿದ್ದರು.

    ಸಮಿತಿಯ ಮುಂದೆ ಭಾರತದ ಕೇಂದ್ರ ಗೃಹ ಸಚಿವರಿಗೆ ಮಾಡಿದ ಅಸಂಬದ್ಧ ಮತ್ತು ಆಧಾರರಹಿತ ಉಲ್ಲೇಖಗಳಿಗೆ ಭಾರತ ಸರ್ಕಾರವು ತೀವ್ರವಾಗಿ ಪ್ರತಿಭಟಿಸುತ್ತದೆ ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ ಎಂದು ಜೈಸ್ವಾಲ್‌ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಕಲುಷಿತ ಗಾಳಿ – ಕುಟುಂಬದಲ್ಲೊಬ್ಬರಿಗೆ ಮಾಲಿನ್ಯ ಸಂಬಂಧಿತ ಕಾಯಿಲೆ

    ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೆನಡಾದ ಉನ್ನತ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಮಾಧ್ಯಮಗಳಿಗೆ ಆಧಾರರಹಿತ ವಿಚಾರಗಳನ್ನು ಸೋರಿಕೆ ಮಾಡುತ್ತಿದ್ದಾರೆ ಎಂದು ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ.

  • Canada | ಗಾಯಕ ಎಪಿ ಧಿಲ್ಲೋನ್ ಮನೆ ಎದುರು ಗುಂಡು ಹಾರಿಸಿದ್ದ ವಿಡಿಯೋ ವೈರಲ್

    Canada | ಗಾಯಕ ಎಪಿ ಧಿಲ್ಲೋನ್ ಮನೆ ಎದುರು ಗುಂಡು ಹಾರಿಸಿದ್ದ ವಿಡಿಯೋ ವೈರಲ್

    ಒಟ್ಟಾವಾ: ಭಾರತ (India) ಮತ್ತು ಕೆನಡಾದ (Canada) ನಡುವೆ ರಾಜಕೀಯ ಬಿಕ್ಕಟ್ಟು ತಲೆದೋರಿರುವ ಬೆನ್ನಲ್ಲೇ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ವಂದಿದೆ. ಕೆನಡಾದಲ್ಲಿರುವ ಪಂಜಾಬಿ ಗಾಯಕ (Punjabi Singer) ಎ.ಪಿ ಧಿಲ್ಲೋನ್ (AP Dhillon) ಅವರ ಮನೆಯ ಎದುರು ಎರಡು ತಿಂಗಳ ಹಿಂದೆ ದುಷ್ಕರ್ಮಿಗಳು ಗುಂಡು ಹಾರಿಸಲಾಗಿತ್ತು. ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಕೆನಡಾದ ವ್ಯಾಂಕೋವರ್‌ನ  (Vancouver) ವಿಕ್ಟೋರಿಯಾ ದ್ವೀಪದಲ್ಲಿ (Victoria Island) ವಾಸವಾಗಿದ್ದ ಗಾಯಕ ಎಪಿ ಧಿಲ್ಲೋನ್ ಅವರ ಮನೆಯ ಸುತ್ತಲೂ ಕಳೆದ ಸೆ.2 ರಂದು ಗುಂಡು ಹಾರಿಸಲಾಗಿತ್ತು. ಆದರೆ ಅವರಿಗೆ ಯಾವುದೇ ಗಾಯಗಳಾಗಿರಲಿಲ್ಲ. ಇದಕ್ಕೆ ಸಂಬಂಧಿಸಿದಂತಹ ವಿಡಿಯೋವೊಂದು ತಿಂಗಳುಗಳ ಬಳಿಕ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಗಾಯಕನ ಮನೆಯ ಸುತ್ತಲೂ ದುಷ್ಕರ್ಮಿಗಳು ಗುಂಡು ಹಾರಿಸುತ್ತಿರುವುದು ಹಾಗೂ ಎರಡು ವಾಹನಗಳಿಗೆ ಬೆಂಕಿ ಹಚ್ಚಿರುವುದು ಕಂಡುಬಂದಿದೆ.ಇದನ್ನೂ ಓದಿ: ಹಾಸನಾಂಬೆ ದೇವಿ ದರ್ಶನ ಮುಗಿಸಿ ಹಿಂತಿರುಗುವ ವೇಳೆ ಕಾರು ಡಿಕ್ಕಿ- ತಂದೆ, ಮಗಳು ಸಾವು

    ಈ ಘಟನೆಗೆ ಸಂಬಂಧಿಸಿದಂತೆ, ಕೆನಡಾ ಪೊಲೀಸರು ಒಂಟಾರಿಯೊದಲ್ಲಿದ್ದ ಭಾರತೀಯ ಮೂಲದ ಆರೋಪಿ ಅಭಿಜೀತ್ ಕಿಂಗ್ರಾನನ್ನು ಬಂಧಿಸಿದ್ದಾರೆ ಹಾಗೂ ಇನ್ನೋರ್ವ ಆರೋಪಿ ವಿಕ್ರಮ್ ಶರ್ಮಾಗೆ ಬಂಧನ ವಾರಂಟ್ ಕಳುಹಿಸಿದ್ದಾರೆ.

    ಕೆನಡಾ ಪೊಲೀಸರ ಮಾಹಿತಿ ಪ್ರಕಾರ, ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಆರೋಪದ ಮೇಲೆ ಕಿಂಗಾನ್ರನ್ನು ಬಂಧಿಸಲಾಗಿದೆ ಹಾಗೂ ಒಂಟಾರಿಯೊ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇನ್ನೂ ಆರೋಪಿ ಶರ್ಮಾ ಗುರುತು ಪತ್ತೆಯಾಗಿದ್ದು, ಫೋಟೋ ಸಿಕ್ಕಿಲ್ಲ ಆದರೆ ಭಾರತದಲ್ಲಿರುವುದಾಗಿ ಶಂಕಿಸಲಾಗಿದೆ ಎಂದು ತಿಳಿಸಿದ್ದಾರೆ.

    ಸೆಪ್ಟೆಂಬರ್‌ನಲ್ಲಿ ನಡೆದ ಗುಂಡಿನ ದಾಳಿಯ ಬಳಿಕ, ಸಿಧು ಮೂಸೆವಾಲಾ (Sidhu Moose Wala) ಮತ್ತು ಬಾಬಾ ಸಿದ್ದಿಕಿ ಹತ್ಯೆ (Baba Siddique) ಪ್ರಕರಣದ ಹಿಂದೆಯಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi gang) ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು ಎನ್ನಲಾಗಿತ್ತು. ನಟ ಸಲ್ಮಾನ್ ಖಾನ್ ಅವರ ಕಾರ್ಯಕ್ರಮವೊಂದರ ವಿಡಿಯೋದಲ್ಲಿ ಎಪಿ ಧಿಲ್ಲೋನ್ ಕಾಣಿಸಿಕೊಂಡಿದ್ದು, ಅದೇ ಕಾರಣದಿಂದ ಗುಂಡಿನ ದಾಳಿ ನಡೆಸಲಾಗಿದೆ. ಇನ್ನೂ ಕೆನಡಾದ ಆಭರಣ ವ್ಯಾಪಾರಿಯ ಮನೆಯ ಮೇಲೆ ನಡೆದ ಗುಂಡಿನ ದಾಳಿಯಲ್ಲಿದ್ದ ದರೋಡೆಕೋರ ರೋಹಿತ್ ಗೋಡಾರಾ ಲಾರೆನ್ಸ್ ಬಿಷ್ಣೋಯ್‌ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಬರೆದುಕೊಂಡಿದ್ದರು. ಇನ್ನೂ ಕಳೆದ ವರ್ಷ ನವೆಂಬರ್‌ನಲ್ಲಿ ಕೆನಡಾದಲ್ಲಿ ಗಾಯಕ ಗಿಪ್ಪಿ ಗ್ರೆವಾಲ್ ಮನೆಯ ಮುಂದೆ ನಡೆದಿದ್ದ ಗುಂಡಿನ ದಾಳಿಯ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿತ್ತು.

    ಗುಂಡಿನ ದಾಳಿಯ ಬಳಿಕ ಗಾಯಕ ಧಿಲ್ಲೋನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಾನು ಸುರಕ್ಷಿತವಾಗಿದ್ದೇನೆ. ಕಾಳಜಿ ವಹಿಸಿದ್ದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದರು.ಇದನ್ನೂ ಓದಿ: ಬೆಳಗಾವಿಗೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ – 30 ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದು!

  • ಖಲಿಸ್ತಾನಿಗಳಿಗೆ ಟ್ರೂಡೋ ಸರ್ಕಾರದ್ದೇ ಬೆಂಬಲ – ಭಾರತೀಯ ಹೈಕಮೀಷನರ್ ಸಂಜಯ್ ವರ್ಮಾ

    ಖಲಿಸ್ತಾನಿಗಳಿಗೆ ಟ್ರೂಡೋ ಸರ್ಕಾರದ್ದೇ ಬೆಂಬಲ – ಭಾರತೀಯ ಹೈಕಮೀಷನರ್ ಸಂಜಯ್ ವರ್ಮಾ

    – ಖಲಿಸ್ತಾನಿಗಳು ನನ್ನ ಹತ್ಯೆಗೂ ಯತ್ನಿಸಿದ್ದರು; ರೋಚಕ ಸತ್ಯ ಬಿಚ್ಚಿಟ್ಟ ವರ್ಮಾ

    ನವದೆದಹಲಿ/ಒಟ್ಟಾವಾ: ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪಿನ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆ ವಿಚಾರದಲ್ಲಿ ಭಾರತ ಮತ್ತು ಕೆನಡಾ (India – Canada) ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮುಂದುವರಿದಿದೆ. ಈ ನಡುವೆ ಕೆನಡಾದಲ್ಲಿರುವ ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಶುಕ್ರವಾರ ಖಲಿಸ್ತಾನಿ ಕಾರ್ಯಕರ್ತರ ದಾಳಿಯ ಕುರಿತು ಮಾತನಾಡಿದ್ದಾರೆ.

    ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿರುವ ಸಂಜಯ್‌ ಕುಮಾರ್‌ ವರ್ಮಾ, ನಮ್ಮ ಮೇಲೆ ಹಲ್ಲೆ ನಡೆಸಲು ಹಲವು ಬಾರಿ ಪ್ರಯತ್ನ ನಡೆದಿತ್ತು. ಅವರು (ಖಾಲಿಸ್ತಾನಿ ಬೆಂಬಲಿಗರು) ಕತ್ತಿ ಹಿಡಿದಿರುತ್ತಿದ್ದರು. ಅದು ಕಿರ್ಪಾನ್ (ಸಿಖ್ ಧರ್ಮದಲ್ಲಿ ವಿಶೇಷ ಮಾನ್ಯತೆ ಹೊಂದಿರುವ ಅಸ್ತ್ರ) ಆಗಿರಲಿಲ್ಲ. ಅಲ್ಬರ್ಟಾದಲ್ಲಿ ಇದ್ದಾಗ ಅವರು ಬೀಸಿದ್ದ ಕತ್ತಿ ನನ್ನ ದೇಹದಿಂದ ಕೇವಲ 2- 2.5 ಇಂಚಿನಷ್ಟು ಹತ್ತಿರದವರೆಗೂ ಬಂದಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ಯಾನ್‌ ಇಂಡಿಯಾ ರೇಡ್‌ – 4 ರಾಜ್ಯಗಳಲ್ಲಿ ಬಿಷ್ಣೋಯ್‌ ಗ್ಯಾಂಗ್‌ನ 7 ಶೂಟರ್ಸ್‌ ಅರೆಸ್ಟ್‌

    ಖಲಿಸ್ತಾನಿಗಳು ಕೆನಡಾದಲ್ಲಿ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಖಲಿಸ್ತಾನ ಹೆಸರಿನಲ್ಲಿ ಮಾನವ ಕಳ್ಳಸಾಗಣೆ, ಮಾದಕವಸ್ತು ಶಸ್ತ್ರಾಸ್ತ್ರ ಸಾಗಣೆ ಹಾಗೂ ಇತರ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಕೃತ್ಯಗಳಿಂದ ಹಾಗೂ ಗುರುದ್ವಾರಗಳಿಂದ ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಆ ಹಣವನ್ನು ದುಷ್ಕೃತ್ಯಗಳಿಗೆ ಬಳಸುತ್ತಿದ್ದಾರೆ. ಖಾಲಿಸ್ತಾನಿಗಳು ಬೆರಳೆಣಿಕೆಯಷ್ಟಿದ್ದರೂ, ಗಮನ ಸೆಳೆಯುವುದಕ್ಕಾಗಿ ಮತ್ತು ಕೆನಡಾ ರಾಜಕೀಯ ಬೆಂಬಲಕ್ಕಾಗಿ ಹೆಚ್ಚು ಕೂಗಾಡುತ್ತಾರೆ ಎಂದು ಬಾಂಬ್‌ ಸಿಡಿಸಿದ್ದಾರೆ.

    ಖಲಿಸ್ತಾನಿಗಳಿಗೆ ಟ್ರೂಡೋ ಸರ್ಕಾರದ್ದೇ ಬೆಂಬಲ:
    ಕೆನಡಾ ಪ್ರಧಾನಿ ಜಸ್ಟಿನ್ ಟೂಡೊ ವಿರುದ್ಧ ನೇರ ವಾಗ್ದಾಳಿ ನಡೆಸಿ, ಖಾಲಿಸ್ತಾನಿ ಪ್ರತ್ಯೇಕತಾವಾದಿ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದು ಅವರನ್ನು ಪ್ರೋತ್ಸಾಹಿಸುವುದಕ್ಕೆ ಸಮ. ಟ್ಯೂಡೊ ಅವರು ರಾಜಕೀಯ ಲಾಭಕ್ಕಾಗಿ ಖಾಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಅಮಿತ್‌ ಶಾ ವಿದೇಶಿ ಪ್ರವಾಸದ ಮಾಹಿತಿ ಕೊಟ್ಟವರಿಗೆ 10 ಲಕ್ಷ ಬಹುಮಾನ: ಉಗ್ರ ಪನ್ನುನ್‌ ಘೋಷಣೆ

    ಭಾರತೀಯರಿಗೆ ಎಚ್ಚರಿಕೆ:
    ಕೆನಡಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಪ್ರಸ್ತುತ, ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳು ಕೆನಡಾದಲ್ಲಿ ವಾಸಿಸುವ ಸುಮಾರು 3,19,000 ವಿದ್ಯಾರ್ಥಿಗಳು ಸೇರಿದಂತೆ ವಿಶಾಲ ಭಾರತೀಯ ಸಮುದಾಯಕ್ಕೆ ಅಪಾಯವನ್ನುಂಟುಮಾಡುವ ಸಂಚು ರೂಪಿಸಿದ್ದಾರೆ. ಹಾಗಾಗಿ ಅಲ್ಲಿನ ಭಾರತೀಯ ವಿದ್ಯಾರ್ಥಿಗಳು ಜಾಗೃತಿ ವಹಿಸುವಂತೆ ಸಲಹೆ ನೀಡಿದ್ದಾರೆ.

    ಭಾರತ ಖಲಿಸ್ತಾನಿ ಭಯೋತ್ಪಾದಕ ಎಂದು ಘೋಷಿಸಿರುವ ಕೆನಡಾ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ 2023ರ ಜೂನ್‌ನಲ್ಲಿ ಹತ್ಯೆಯಾಗಿದ್ದ. ಭಾರತದ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನು ಆ ಪ್ರಕರಣದ ವಿಚಾರಣೆಗೆ ಒಳಪಡಿಸುವುದಾಗಿ ಕೆನಡಾ ಸರ್ಕಾರ ಇತ್ತೀಚೆಗೆ ಹೇಳಿಕೆ ನೀಡಿತ್ತು. ಅದರ ಬೆನ್ನಲ್ಲೇ ಭಾರತವು ತನ್ನ ಹೈಕಮಿಷನರ್‌ ವರ್ಮಾ ಹಾಗೂ ಇತರ ಐವರು ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿದೆ.

  • ಕೆನಡಾ | ಡಿವೈಡರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು – ನಾಲ್ವರು ಭಾರತೀಯರು ಸಾವು

    ಕೆನಡಾ | ಡಿವೈಡರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು – ನಾಲ್ವರು ಭಾರತೀಯರು ಸಾವು

    ಒಟ್ಟಾವಾ: ಕೆನಡಾದ (Canada) ಟೊರೊಂಟೊ ಬಳಿ ಡಿವೈಡರ್‌ಗೆ ಟೆಸ್ಲಾ ಕಾರು (Tesla Car) ಡಿಕ್ಕಿ (Accident) ಹೊಡೆದು ಬೆಂಕಿ ಹೊತ್ತಿ ಉರಿದ ಪರಿಣಾಮ ನಾಲ್ವರು ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅವರು ಪ್ರಯಾಣಿಸುತ್ತಿದ್ದ ಟೆಸ್ಲಾ ಸ್ವಯಂ ಚಾಲನಾ ಮಾದರಿಯದ್ದೇ ಎಂಬುದು ತಿಳಿದು ಬಂದಿಲ್ಲ.

    ಮೃತಪಟ್ಟವರನ್ನು ಗುಜರಾತ್‌ನ (Gujarat) ಗೋಧ್ರಾ ಮೂಲದ ಕೇತಾ ಗೋಹಿಲ್ (30) ಮತ್ತು ನಿಲ್ ಗೋಹಿಲ್ (26) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇವರ ಇಬ್ಬರು ಸ್ನೇಹಿತರು ಸಹ ಸಾವಿಗೀಡಾಗಿದ್ದಾರೆ. ಕಾರಿನಲಿದ್ದ ಓರ್ವ ಮಹಿಳೆಯನ್ನು ಬೇರೆ ವಾಹನದಲ್ಲಿದ್ದ ಪ್ರಯಾಣಿಕರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ಪ್ರಾಣಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ದಾವಣಗೆರೆ | ಕೆರೆ ಕೋಡಿ ಬಿದ್ದಿದ್ದನ್ನು ನೋಡಲು ಹೋಗಿದ್ದ ವ್ಯಕ್ತಿ ನೀರು ಪಾಲು

    ಅಪಘಾತದಲ್ಲಿ ಸಿಲುಕಿದವರನ್ನು ರಕ್ಷಿಸಲು ಹಲವಾರು ಜನ ತಮ್ಮ ಕಾರುಗಳು ನಿಲ್ಲಿಸಿ ಅಪಘಾತಕ್ಕೀಡಾದ ಕಾರಿನ ಗಾಜುಗಳನ್ನು ಒಡೆದಿದ್ದಾರೆ. ಅಷ್ಟರಲ್ಲಾಗಲೇ ನಾಲ್ವರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

    ಈ ವರ್ಷದ ಜುಲೈನಲ್ಲಿ ಕೆನಡಾದಲ್ಲಿ ಪಂಜಾಬ್‌ನ ಮೂವರು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಹೆದ್ದಾರಿಯಿಂದ ಆಚೆಗೆ ಪಲ್ಟಿಯಾಗಿ ಸಾವನ್ನಪ್ಪಿದರು. ಇದನ್ನೂ ಓದಿ: ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಆರೋಪ – ಮಗ, ಸೊಸೆ ಅರೆಸ್ಟ್

  • ಭಾರತದ ಜೊತೆ ಚೇಷ್ಟೆ – ಶೀಘ್ರವೇ ಜಸ್ಟಿನ್‌ ಟ್ರುಡೋ ರಾಜೀನಾಮೆ?

    ಭಾರತದ ಜೊತೆ ಚೇಷ್ಟೆ – ಶೀಘ್ರವೇ ಜಸ್ಟಿನ್‌ ಟ್ರುಡೋ ರಾಜೀನಾಮೆ?

    ಒಟ್ಟಾವಾ: ಖಲಿಸ್ತಾನ (Khalistan) ಉಗ್ರ ಸಂಘಟನೆಯ ವಿಚಾರ ಹಿಡಿದುಕೊಂಡು ಭಾರತದೊಂದಿಗೆ ಚೇಷ್ಟೆ ಮಾಡುತ್ತಿರುವ ಕೆನಡಾದ (Canada) ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

    ಟ್ರುಡೋ ಪ್ರತಿನಿಧಿಸುತ್ತಿರುವ ಲಿಬರಲ್ ಪಕ್ಷದ ಸಂಸದರೇ ಈಗ ಪ್ರಧಾನಿ ವಿರುದ್ಧ ತಿರುಗಿ ಬಿದ್ದಿದ್ದು ರಾಜೀನಾಮೆಗೆ ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

    ಬುಧವಾರ ನಡೆದ ಸಂಸದರ ಸಭೆಯಲ್ಲಿ ಭಾರೀ ಅಸಮಾಧಾನ ಸ್ಫೋಟಗೊಂಡಿದೆ. 24 ಸಂಸದರು ಅ.28ರ ಒಳಗಡೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಇದನ್ನೂ ಓದಿ: ಏರೋಸ್ಪೇಸ್‌ ಕಚೇರಿ ದಾಳಿಗೆ ಪ್ರತೀಕಾರ – ಇರಾಕ್‌, ಸಿರಿಯಾದಲ್ಲಿರುವ ಉಗ್ರರ ನೆಲೆ ಮೇಲೆ ಟರ್ಕಿ ಏರ್‌ಸ್ಟ್ರೈಕ್‌

    ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಕಳಪೆ ಸಾಧನೆಗೆ ಟ್ರುಡೋ ಅವರ ನಾಯಕತ್ವವೇ ಕಾರಣ ಎಂದು ಸದಸ್ಯರು ಬಹಿರಂಗವಾಗಿಯೇ ಹೇಳಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಕೆನಾಡದ ಮಾಧ್ಯಮಗಳು ವರದಿ ಮಾಡಿವೆ.

    ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸಂಸದರಿಗೆ ಮಾತನಾಡಲು ಅವಕಾಶ ನೀಡಲಾಗಿತ್ತು. ಕ್ಯಾಬಿನೆಟ್‌ ಮಂತ್ರಿ ಸ್ಥಾನ ಹೊಂದಿರದ ಸುಮಾರು 20 ಮಂದಿ ಸದಸ್ಯರು ಮುಂದಿನ ಚುನಾವಣೆಗೆ ಮೊದಲು ಟ್ರುಡೊ ಅವರನ್ನು ಪ್ರಧಾನಿ ಪಟ್ಟದಿಂದ ಕೆಳಗೆ ಇಳಿಸಬೇಕೆಂದು ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

    ಖಲಿಸ್ತಾನ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಆದರೆ ಅ.16  ರಂದು ನಾವು ಯಾವುದೇ ಪುರಾವೆಯನ್ನು ಭಾರತಕ್ಕೆ ನೀಡಿಲ್ಲ ಎಂದು ಕೆ ಜಸ್ಟಿನ್‌ ಟ್ರುಡೋ (Justin Trudeau) ಅಧಿಕೃತವಾಗಿ ಒಪ್ಪಿಕೊಳ್ಳುವ ಮೂಲಕ ಸೆಲ್ಫ್‌ ಗೋಲ್‌ ಹೊಡೆದಿದ್ದರು. ಇದರಿಂದಾಗಿ ಕೆನಡಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸುವಂತಾಗಿತ್ತು. ಖಲಿಸ್ತಾನಿ ಪರ ಟ್ರುಡೋ ಬ್ಯಾಟಿಂಗ್‌ ಮಾಡುತ್ತಿರುವುದಕ್ಕೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿತ್ತು.

     

  • ರಷ್ಯಾವನ್ನು ಹಾಡಿ ಹೊಗಳಿ ಪಾಶ್ಚಿಮಾತ್ಯ ದೇಶಗಳಿಗೆ ಮಾತಿನಲ್ಲೇ ತಿವಿದ ಜೈಶಂಕರ್‌

    ರಷ್ಯಾವನ್ನು ಹಾಡಿ ಹೊಗಳಿ ಪಾಶ್ಚಿಮಾತ್ಯ ದೇಶಗಳಿಗೆ ಮಾತಿನಲ್ಲೇ ತಿವಿದ ಜೈಶಂಕರ್‌

    – ಹಿಂದೆ ವಿಶ್ವದಲ್ಲಿ ಪಾಶ್ಚಿಮಾತ್ಯ ದೇಶಗಳು ಪ್ರಾಬಲ್ಯ ಹೊಂದಿದ್ದವು
    – ಇಂದು ಪಾಶ್ಚಿಮೇತರ ದೇಶಗಳು ನಿಲುವು ತೆಗೆದುಕೊಳ್ಳುತ್ತಿವೆ

    ನವದೆಹಲಿ: ಸ್ವಾತಂತ್ರ್ಯದ ನಂತರ ರಷ್ಯಾದೊಂದಿಗಿನ (Russia) ನಮ್ಮ ಇತಿಹಾಸವನ್ನು ನೋಡಿದರೆ ನಮ್ಮ ಹಿತಾಸಕ್ತಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ರಷ್ಯಾ ಎಂದಿಗೂ ಏನನ್ನೂ ಮಾಡಿಲ್ಲ ಎಂದು ನಾನು ಹೇಳಬಲ್ಲೆ ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ (S Jaishankar) ಹೇಳಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ರಷ್ಯಾಕ್ಕೆ ಹೋಗುತ್ತಿದ್ದಾರೆ. ಇಂದು ರಷ್ಯಾದ ಪರಿಸ್ಥಿತಿಯು ವಿಭಿನ್ನವಾಗಿದೆ ಎಂದು ನಾನು ಭಾವಿಸುತ್ತೇನೆ. ಪಾಶ್ಚಿಮಾತ್ಯ ದೇಶಗಳ ಜೊತೆ ಬಹುತೇಕ ರಷ್ಯಾದ ಸಂಬಂಧ ಮುರಿದು ಬಿದ್ದಿದೆ. ರಷ್ಯಾ ಈಗ ಏಷ್ಯಾದ ದೇಶಗಳತ್ತ ಹೆಚ್ಚು ವಾಲುತ್ತಿದೆ. ಏಷ್ಯಾದ ದೇಶವಾಗಿರುವ ನಾವು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ನಮಗೆ ಇಂದು ಒಳ್ಳೆಯದಾಗುತ್ತಿದೆ. ರಷ್ಯಾವು ಪ್ರಮುಖ ನೈಸರ್ಗಿಕ ಸಂಪನ್ಮೂಲ ಶಕ್ತಿಯಾಗಿದ್ದು ನಾವು ದೊಡ್ಡ ಗ್ರಾಹಕರಾಗಿದ್ದೇವೆ ಎಂದು ಹೇಳಿದರು.

    ಹಿಂದೆ ಪಶ್ಚಿಮದ ರಾಷ್ಟ್ರಗಳು (Western Countries) ವಿಶ್ವದಲ್ಲಿ ಪ್ರಾಬಲ್ಯವನ್ನು ಹೊಂದಿದ್ದವು. ಆದರೆ ಕಳೆದ 20-25 ವರ್ಷಗಳಲ್ಲಿ ಪಾಶ್ಚಿಮಾತ್ಯೇತರ ದೇಶಗಳು ವಿಶ್ವಕ್ಕೆ ಕೊಡುಗೆ ನೀಡುತ್ತಿವೆ. ಇದರಿಂದಾಗಿ ಮರು ಸಮತೋಲನ, ಬಹುಧ್ರುವೀಯತೆ ಆರಂಭವಾಗಿದೆ ಎಂದರು. ಇದನ್ನೂ ಓದಿ: 16 ಮಕ್ಕಳನ್ನು ಹೊಂದುವ ಬಗ್ಗೆ ಯೋಚಿಸಿ – ತಮಿಳುನಾಡು ಸಿಎಂ ಸ್ಟಾಲಿನ್‌ ಕರೆ ಕೊಟ್ಟಿದ್ದೇಕೆ?

     

     

    ಸ್ವಲ್ಪ ಮಟ್ಟಿಗೆ ಸಾಮಾನ್ಯ ಪಾಶ್ಚಾತ್ಯ ದೇಶಗಳಿಗೆ ಸಮಸ್ಯೆ ಇದೆ ಎಂದು ನಾನು ಭಾವಿಸುತ್ತೇನೆ 1945 ರ ಮೊದಲು ಮತ್ತು ನಂತರದ ವಿಶ್ವ ಕ್ರಮವು ಪಾಶ್ಚಾತ್ಯವಾಗಿತ್ತು. ಹಿಂದೆ ನೀವು ಮೇಲಕ್ಕೆ ನೋಡುತ್ತಿದ್ದಾಗ ನಾನು ಕೆಳಗೆ ನೋಡುತ್ತಿದ್ದೆ. ಆದರೆ ಇನ್ನು ಮುಂದೆ ಹಾಗೆ ಇರುವುದಿಲ್ಲ. ಭಾರತ, ಚೀನಾದಂತಹ ದೊಡ್ಡ ರಾಷ್ಟ್ರಗಳು ತಮ್ಮದೇ ನಿಲುವುಗಳನ್ನು ತಗೆದುಕೊಳ್ಳುತ್ತದೆ. ಹೀಗಾಗಿ ಪಶ್ಚಿಮದ ದೇಶಗಳಿಗೆ ಹೊಂದಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಪಾಶ್ಚಿಮಾತ್ಯ ಮತ್ತು ಪಾಶ್ಚಿಮಾತ್ಯೇತರ ದೇಶಗಳ ನಡುವಿನ ಸಮೀಕರಣಗಳು ವೇಗವಾಗಿ ಬದಲಾಗುತ್ತಿವೆ. ಇದು ವಿಶ್ವ ಕ್ರಮ ಬದಲಾಗುತ್ತಿದ್ದು ಪಾಶ್ಚಿಮಾತ್ಯೇತರ ದೇಶಗಳು ತಮ್ಮದೇ ದೃಷ್ಟಿಕೋನಗಳನ್ನು ತೆಗೆದುಕೊಳ್ಳಲು ಬಯಸಿದಾಗ ಘರ್ಷಣೆ, ವಾದಗಳು ಇರುತ್ತದೆ ಎಂದರು.

     

    ಪಾಶ್ಚಿಮಾತ್ಯೇತರ ದೇಶಗಳು ವಿಶ್ವಕ್ಕೆ ದೊಡ್ಡ ಕೊಡುಗೆ ನೀಡಿದ್ದರಿಂದ ಹೆಚ್ಚು ಪ್ರಭಾವವನ್ನು ಹೊಂದಿರುತ್ತದೆ ಮತ್ತು ಸ್ವಾಭಾವಿಕವಾಗಿ ಇದು ಬರುತ್ತದೆ. ಆದರೆ ಕಳೆದ 20-25 ವರ್ಷಗಳಲ್ಲಿ ಏನಾಯಿತು ಎಂದರೆ ಮರುಸಮತೋಲನ, ಬಹುಧ್ರುವೀಯತೆ ಆರಂಭವಾಯಿತು. ಭಾರತ ಮತ್ತು ಚೀನಾದಂತಹ (China) ದೊಡ್ಡ ದೇಶಗಳು ತೆಗೆದುಕೊಂಡಿರುವ ಸ್ವತಂತ್ರ ದೃಷ್ಟಿಕೋನಗಳು ಮತ್ತು ನಿಲುವುಗಳು ಪಾಶ್ಚಿಮಾತ್ಯರೊಂದಿಗೆ ವಾದಗಳು ಮತ್ತು ಘರ್ಷಣೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.

    ಭಾರತೀಯ ಪತ್ರಕರ್ತರು ಕೆನಡಾದ ಹೈಕಮಿಷನರ್ ಬಗ್ಗೆ ವರದಿ ಮಾಡುವಾಗ ಕೆನಡಾ ವಿದೇಶಿ ಹಸ್ತಕ್ಷೇಪ ಎಂದು ಆರೋಪಿಸುತ್ತದೆ. ಆದರೆ ಅವರ ರಾಜತಾಂತ್ರಿಕರು ಕೆನಡಾದ ರಾಜತಾಂತ್ರಿಕರು ನಮ್ಮ ಮಿಲಿಟರಿ, ಪೋಲೀಸ್, ಜನರನ್ನು ಗುರಿಯಾಗಿಸುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಯಾವುದೇ ಸಮಸ್ಯೆ ಇಲ್ಲ ತಿರುಗೇಟು ನೀಡಿದರು.

  • ಖಲಿಸ್ತಾನಿ ಉಗ್ರರು ಕೆನಡಾ ಗುಪ್ತಚರ ಸಂಸ್ಥೆಯ ಆಸ್ತಿ: ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ

    ಖಲಿಸ್ತಾನಿ ಉಗ್ರರು ಕೆನಡಾ ಗುಪ್ತಚರ ಸಂಸ್ಥೆಯ ಆಸ್ತಿ: ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ

    ಒಟ್ಟಾವಾ: ಖಲಿಸ್ತಾನಿ ಭಯೋತ್ಪಾದಕರು ಕೆನಡಾ ಭದ್ರತಾ ಗುಪ್ತಚರ ಸೇವೆಯ (CSIS) ಆಸ್ತಿ ಎಂದು ಕೆನಡಾದಲ್ಲಿರುವ (Canada) ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ (Sanjay Kumar Verma) ಸ್ಫೋಟಕ ಆರೋಪ ಮಾಡಿದ್ದಾರೆ.

    ತನ್ನ ವಿರುದ್ಧ ಟ್ರುಡೋ ಸರ್ಕಾರ (Justin Trudeau Govt) ಆರೋಪ ಮಾಡಿದ ಒಂದು ವಾರದ ನಂತರ ಸಂಜಯ್ ಕುಮಾರ್ ವರ್ಮಾ ಅವರು ಕೆನಡಾ ಮೂಲದ ಸಿಟಿವಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಕೆನಡಾ ಸರ್ಕಾರವು ಖಲಿಸ್ತಾನಿ ಉಗ್ರರನ್ನು ಪ್ರೋತ್ಸಾಹಿಸುತ್ತಿದೆ ಎಂದು ನೇರವಾಗಿಯೇ ಹೇಳಿದರು.

    ಭಾರತೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಸವಾಲೆಸೆಯಲು ಪ್ರಯತ್ನಿಸುತ್ತಿರುವವರೊಂದಿಗೆ ಸ್ನೇಹಯುತವಾಗಿ ನಡೆದುಕೊಳ್ಳುವ ಮೊದಲು ಕೆನಡಾ ಸರ್ಕಾರ ನಮ್ಮ ಮೂಲ ಕಾಳಜಿಯನ್ನು ಪ್ರಾಮಾಣಿಕವಾಗಿ ಅರ್ಥಮಾಡಿಕೊಳ್ಳಬೇಕೆಂದು ತಿಳಿಸಿದರು.

     


    ಈ ಖಲಿಸ್ತಾನಿ ಉಗ್ರಗಾಮಿಗಳು ಭಾರತೀಯ ಪ್ರಜೆಗಳಲ್ಲ, ಅವರು ಕೆನಡಾದ ಪ್ರಜೆಗಳು ಮತ್ತು ಯಾವುದೇ ದೇಶವು ತನ್ನ ನಾಗರಿಕರಿಗೆ ಮತ್ತೊಂದು ರಾಷ್ಟ್ರದ ಸಾರ್ವಭೌಮತ್ವವನ್ನು ಪ್ರಶ್ನಿಸಲು ಅವಕಾಶ ನೀಡಬಾರದು ಎಂದು ಅವರು ಹೇಳಿದರು. ಇದನ್ನೂ ಓದಿ: ಚನ್ನಪಟ್ಟಣಕ್ಕೆ ಡಿಕೆ ಸುರೇಶ್, ಸಂಡೂರಿಗೆ ಅನ್ನಪೂರ್ಣ – ಶೀಘ್ರವೇ ಅಧಿಕೃತ ಪ್ರಕಟಣೆ ಸಾಧ್ಯತೆ

    ಖಾಲಿಸ್ತಾನಿ ಭಯೋತ್ಪಾದಕರ ಹತ್ಯೆಗೆ ಸಂಬಂಧಿಸಿದಂತೆ ತನ್ನ ಮೇಲೆ ಹೊರಿಸಲಾದ ಎಲ್ಲಾ ಆರೋಪಗಳನ್ನು ನಿರಾಕರಿಸಿದ ಅವರು, ಎಲ್ಲಾ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ ಎಂದರು.

    ಭಾತದ ಹೈಕಮಿಷನರ್ ಆಗಿರುವ ನಾನು ಅಂತಹ ಯಾವುದೇ ಕೆಲಸ ಮಾಡಿಲ್ಲ. ಕೆನಡಾದಲ್ಲಿ ಖಲಿಸ್ತಾನಿ ಪರ ಅಂಶಗಳನ್ನು ಮೇಲ್ವಿಚಾರಣೆ ಮಾಡುವುದು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ. ನಮ್ಮ ತಂಡವು ಮುಕ್ತ ಮೂಲಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸುತ್ತದೆ. ನಾವು ಪತ್ರಿಕೆಗಳನ್ನು ಓದುತ್ತೇವೆ, ಅವರ ಹೇಳಿಕೆಗಳನ್ನು ನಾವು ಗಮನಿಸುತ್ತೇವೆ ಎಂದು ವಿವರಿಸಿದರು.

    ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸರ್ರೆ ನಗರದ ಗುರುದ್ವಾರದ ಬಳಿ ಖಲಿಸ್ತಾನಿ ಉಗ್ರ ನಿಜ್ಜಾರ್‌ ಆಗುಂತಕರ ಗುಂಡೇಟಿಗೆ ಬಲಿಯಾಗಿದ್ದ. ಈತನ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಆರೋಪಿಸಿದ ಬೆನ್ನಲ್ಲೇ ಎರಡು ದೇಶಗಳ ಮಧ್ಯೆ ರಾಜತಾಂತ್ರಿಕ ಸಮಸ್ಯೆ ಸೃಷ್ಟಿಯಾಗಿತ್ತು. ನಂತರ ಮಾತುಕತೆಯ ಮೂಲಕ ಎರಡು ದೇಶಗಳ ನಡುವಿನ ಬಿಕ್ಕಟ್ಟು ಬಗೆ ಹರಿದಿತ್ತು.

    ಘಟನೆ ನಡೆದು ಒಂದು ವರ್ಷ ಕಳೆದ ಬಳಿಕ ಈ ವಿಚಾರವನ್ನು ಮತ್ತೊಮ್ಮೆ ಪ್ರಸ್ತಾಪಿಸಿ ಕೆನಡಾ ಭಾರತದ ಕೆಂಗಣ್ಣಿದೆ ಗುರಿಯಾಗಿದೆ. ಹತ್ಯೆಯ ಹಿಂದೆ ಭಾರತೀಯ ರಾಯಭಾರಿ ಸಂಜಯ್‌ಕುಮಾರ್‌ ವರ್ಮಾ ಅವರ ಪಾತ್ರವಿದ್ದು, ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಹೇಳುವ ಮೂಲಕ ಜಸ್ಟಿನ್‌ ಟ್ರುಡೋ ಸರ್ಕಾರ ಚೇಷ್ಟೆ ಮುಂದುವರಿಸಿದೆ.