Tag: canada

  • ಕೆನಡಾ ಹಾಕಿ ಟೀಂ ಪ್ರಯಾಣಿಸುತ್ತಿದ್ದ ಬಸ್ ಅಪಘಾತ – 14 ಮಂದಿ ಸಾವು

    ಕೆನಡಾ ಹಾಕಿ ಟೀಂ ಪ್ರಯಾಣಿಸುತ್ತಿದ್ದ ಬಸ್ ಅಪಘಾತ – 14 ಮಂದಿ ಸಾವು

    ಒಟ್ಟಾವಾ: ಕೆನಡಾ ದೇಶದ ಜೂನಿಯಾರ್ ಹಾಕಿ ತಂಡದ ಆಟಗಾರರು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೆ ಒಳಗಾಗಿ 14 ಮಂದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.

    ಕೆನಡಾದ ಸಾಸ್ಕಾಚೆವನ್ ಗ್ರಾಮೀಣ ಪ್ರದೇಶದ ಹೆದ್ದಾರಿ ತಿಸ್ದಲೆ ಬಳಿ ಆಟಗಾರರಿದ್ದ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದು, ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

    ಸಾಸ್ಕಾಚೆವನ್ ಜೂನಿಯರ್ ಹಾಕಿ ಟೂರ್ನಿಮೆಂಟ್ ನಲ್ಲಿ ಭಾಗವಹಿಸುವ ಸಲುವಾಗಿ ಆಟಗಾರರು ಬಸ್ ನಲ್ಲಿ ಹೊರಟ್ಟಿದ್ದರು. ಒಟ್ಟಾರೆ 28 ಮಂದಿ ಆಟಗಾರರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಎಲ್ಲರೂ 16 ರಿಂದ 24 ವಯಸ್ಸಿನ ಒಳಗಿನವರು ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ತಿಳಿಸಿದ್ದಾರೆ.

  • `ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ

    `ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ

    ಬೆಂಗಳೂರು: ಕನ್ನಡದ ಹಿರಿಯ ನಟ ಚಂದ್ರ ಶೇಖರ್ ಅವರು ವಿಧಿವಶರಾಗಿದ್ದಾರೆ. ಕೆನಡಾದಲ್ಲಿ ಅವರಿಗೆ ಹೃದಯಾಘಾತವಾಗಿ ಇಂದು ಮುಂಜಾನೆ 3.30ರ ಸುಮಾರಿಗೆ ಕನ್ನಡದ ನಟ ಕಣ್ಮುಚ್ಚಿದ್ದಾರೆ.

    1973ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕರಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಶಿವಲಿಂಗ, ಅಸ್ತಿತ್ವ, ಕಾರಂಜಿ, ಜೀವ, ಪೂರ್ವಾಪರ, ಮಳೆ ಬಂತು ಮಳೆ, ಮಾನಸ ಸರೋವರ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

    ಡಾ. ರಾಜ ನನ್ನ ರಾಜ ಜೊತೆ ನಟಿಸಿದ್ದರು. ನಂತರ ಸಾಹಸ ಸಿಂಹ ವಿಷ್ಟುವರ್ಧನ್ ಜೊತೆ ವಂಶವೃಕ್ಷ ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. ಮೃತರು ಪತ್ನಿ ಶೀಲಾ ಹಾಗೂ ಪುತ್ರಿ ತಾನ್ಯರನ್ನು ಅಗಲಿದ್ದಾರೆ.

    ಸದ್ಯ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲಾಗುತ್ತದೆಯೋ, ಇಲ್ಲವೋ ಎಂಬುದರ ಬಗ್ಗೆ ಖಚಿತ ಮಾಹಿತಿ ತಿಳಿದಬಂದಿಲ್ಲ.

  • ಬೋಟ್‍ನಲ್ಲಿ ಕುಳಿತಿದ್ದ ಬಾಲಕಿಯನ್ನು ಏಕಾಏಕಿ ನೀರಿಗೆಳೆದ ಕಡಲಸಿಂಹ! ಶಾಕಿಂಗ್ ವಿಡಿಯೋ ನೋಡಿ

    ಬೋಟ್‍ನಲ್ಲಿ ಕುಳಿತಿದ್ದ ಬಾಲಕಿಯನ್ನು ಏಕಾಏಕಿ ನೀರಿಗೆಳೆದ ಕಡಲಸಿಂಹ! ಶಾಕಿಂಗ್ ವಿಡಿಯೋ ನೋಡಿ

    ಒಟ್ಟಾವ: ಬೋಟ್‍ನಲ್ಲಿ ಕುಳಿತಿದ್ದ ಬಾಲಕಿಯನ್ನು ಕಡಲ ಸಿಂಹ ಸೀಲ್ ಎಳೆದೊಯ್ದ ಘಟನೆ ಕೆನಡಾದ ಪಶ್ಚಿಮ ಕರಾವಳಿಯಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬೋಟ್‍ನಿಂದ ಈಜುತ್ತಿದ್ದ ಸೀಲ್‍ಗೆ ಆಹಾರ ಎಸೆದಿದ್ದಾರೆ. ಇತ್ತ ಬಾಲಕಿಯೊಬ್ಬಳು ಮಾತನಾಡುತ್ತಾ ನಗುತ್ತಾ ಬೋಟ್ ಬದಿಯಲ್ಲಿ ಬಂದು ಕುಳಿತಿದ್ದಾಳೆ. ಆಹಾರವನ್ನು ಅರಸುತ್ತಿದ್ದ ಸೀಲ್ ಗೆ ಬಾಲಕಿ ಬಿಳಿ ಬಟ್ಟೆ ಧರಿಸಿ ಕುಳಿತಿರುವುದು ಕಂಡಿತು. ಹೀಗಾಗಿ ತನಗೆ ಆಹಾರ ಸಿಕ್ಕಿತ್ತೆಂದು ಸೀಲ್ ಹಾರಿ ಆಕೆಯ ಅಂಗಿಯನ್ನು ಕಚ್ಚಿ ನೀರಿಗೆಳೆದಿದೆ. ಈ ವೇಳೆ ಅಲ್ಲಿದ್ದವರು ಆಶ್ಚರ್ಯಗೊಂಡು ಕೂಗಾಡಿದ್ದಾರೆ. ಆದ್ರೆ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಕೂಡಲೇ ಸಮುದ್ರಕ್ಕೆ ಹಾರಿ ಹುಡುಗಿಯನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಹುಡುಗಿ ಪಾರಾಗಿದ್ದು, ವ್ಯಕ್ತಿಯ ಕೈಗೆ ಗಾಯಗಳಾಗಿವೆ. ಆದ್ರೆ ನೀರಿನಿಂದ ರಕ್ಷಿಸಿದ ಕೂಡಲೇ ಬಾಲಕಿಯನ್ನು ಆಕೆಯ ಪೋಷಕರು ಕರೆದುಕೊಂಡು ಹೋಗಿದ್ದಾರೆ.

    ಘಟನೆಯ ಸಂಪೂರ್ಣ ದೃಶ್ಯವನ್ನು ಮೈಕೆಲ್ ಫುಜಿವಾರಾ ಎಂಬವರು ಸೆರೆಹಿಡಿದಿದ್ದು, ಬಳಿಕ ಸಾಮಾಜಿಕ ಜಾಲತಾಣ ಯೂಟ್ಯೂಬ್ ಗೆ ಕಳೆದ ಶನಿವಾರ ಅಪ್ ಲೋಡ್ ಮಾಡಿದ್ದಾರೆ. ಅಪ್ ಲೋಡ್ ಮಾಡಿದ ದಿನನೇ ಸುಮಾರು ಒಂದೂವರೆ ಲಕ್ಷ ವ್ಯೂ ವಿಡಿಯೋವನ್ನು ನೋಡಿದ್ದು, ಇದೂವರೆಗೆ 67.49 ವ್ಯೂ ಕಂಡಿದೆ.