ಒಟ್ಟಾವಾ: ತಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರು ಉದ್ಯೋಗದ ಹಿಂದೆ ಬಿದ್ದಿದ್ದಾರೆ. ದುಡಿಯುವ ಹುಚ್ಚು ಹೆಚ್ಚಾಗಿ, ತಮ್ಮ-ತಮ್ಮ ಉದ್ಯೋಗಗಳಲ್ಲಿ ಮುನ್ನಡೆ ಸಾಧಿಸಬೇಕೆಂಬ ಛಲದಿಂದ ಹುಚ್ಚು ಕುದುರೆಗಳಂತೆ ಓಡುತ್ತಿದ್ದಾರೆ. ಇದರಿಂದ ಪ್ರೀತಿ, ಮಮತೆ, ವಾತ್ಸಲ್ಯಗಳಿಂದ ದೂರವಾಗುತ್ತಿದ್ದಾರೆ. ಪ್ರೀತಿ-ಪಾತ್ರರಿಂದ ಅಕ್ಕರೆಯ ಅಪ್ಪುಗೆ ಬೇಕೆನಿಸಿದರೂ ಹಣಕೊಟ್ಟು ಪಡೆಯಬೇಕಿದೆ.

ಆದರೆ ಕೆನಡಾದ ವ್ಯಕ್ತಿಯೊಬ್ಬ ಪ್ರೀತಿ, ಕಾಳಜಿ, ಸದ್ಭಾವದೊಂದಿಗೆ ಅಪ್ಪುಗೆಯನ್ನು ನೀಡುವುದು, ಲೈಂಗಿಕತೆಯನ್ನು ಬಯಸುವ ಮನಸ್ಸುಗಳಿಗೆ ಸಂವಹನದ ಮೂಲಕವೇ ಸಾಂತ್ವನ ನೀಡುವ ಕೆಲಸ ಮಾಡುತ್ತಿದ್ದಾನೆ. ಅವಶ್ಯಕತೆಯಿದ್ದವರಿಗೆ ತನ್ನ ಅಪ್ಪುಗೆ ಸ್ಪರ್ಶದಿಂದ ಪ್ರೀತಿ, ವಾತ್ಸಲ್ಯ ಹಾಗೂ ಕಾಳಜಿಯ ನೀಡುತ್ತಿದ್ದಾನೆ. ಇದನ್ನೂ ಓದಿ: ಬಿಸಾಡಿದ ಮಚ್ಚು ತೋರಿಸುತ್ತೇನೆಂದು ಪೊಲೀಸರ ಮೇಲೆಯೇ ಹಲ್ಲೆ – ಆರೋಪಿಗೆ ಗುಂಡೇಟು
ಈ ಅಪ್ಪುಗೆಯೂ ಸುಮ್ಮನೆ ಸಿಗುವುದಿಲ್ಲ. ಈತ ಒಂದು ಗಂಟೆ ವಾತ್ಸಲ್ಯದ ಅಪ್ಪುಗೆ ನೀಡಿದರೆ 75 ಡಾಲರ್ (7 ಸಾವಿರ) ಸಂಭಾವನೆ ಪಡೆಯುತ್ತಾನೆ. ಇದನ್ನು `ಕಡ್ಲ್ ಅಥವಾ ಹಗ್ ಥೆರಪಿ’ ಎಂದೂ ಕರೆಯುತ್ತಾರೆ. ಕೆನಡಾದ ಮಾಂಟ್ರಿಯಲ್‌ನಿಂದ ಬಂದು UKನ ಬ್ರಿಸ್ಟಲ್‌ನಲ್ಲಿ ನೆಲೆಸಿರುವ ಟ್ರೆಷರ್ ಎಂಬಾತನೇ ಈ ವೃತ್ತಿ ಮಾಡಿಕೊಂಡಿದ್ದು, ಇದು ಜನರು ಸುರಕ್ಷಿತ ಹಾಗೂ ಶಾಂತವಾಗಿರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾನೆ.

ಈ ಕುರಿತು ಮಾತನಾಡಿರುವ ಟ್ರೆಷರ್, ಈ ಥೆರಪಿ ಏನು ಹೇಳುತ್ತದೆ ಎಂದು ಅರ್ಥ ಮಾಡಿಕೊಳ್ಳುವುದಿಲ್ಲ. ಕೆಲವರು ಇದನ್ನು ಲೈಂಗಿಕ ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಆದರೆ ನಾನು ಮಾನವ ಸಂಪರ್ಕ ನಿರ್ಮಿಸುವ ಉತ್ಸಾಹದಿಂದ ಪ್ರಾರಂಭಿಸಿದ್ದೇನೆ. ಅನೇಕರು ಹೆಣಗಾಡುವ ಈ ಕೆಲಸವನ್ನು ನಾನು ಮಾಡುತ್ತಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಳೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಹುಟ್ಟುಹಬ್ಬ : ವಿವಿಧ ಕಾರ್ಯಕ್ರಮಗಳ ಆಯೋಜನೆ
ಅಪ್ಪುಗೆ ಕೇವಲ ಮುದ್ದಾಡುವಿಕೆಯಲ್ಲ, ಅದಕ್ಕಿಂತಲೂ ಹೆಚ್ಚಿನದ್ದು. ಮೊದಲು ಇದನ್ನು ಸ್ವಲ್ಪ ವಿಚಿತ್ರವಾಗಿ ಕಾಣುತ್ತಾರೆ. 10 ವರ್ಷಗಳ ಹಿಂದೆ ಮಾನವ ಸಂಪರ್ಕದ ವಿಜ್ಞಾನ ನೋಡಲು ಪ್ರಾರಂಭಿಸಿತು. ನಂತರ 2022ರ ಮೇ ತಿಂಗಳಿನಿಂದ ಅದನ್ನು ವ್ಯವಹಾರವಾಗಿ ಪರಿವರ್ತಿಸಲಾಯಿತು ಎಂದಿದ್ದಾರೆ.

ಏನಿದು ಥೆರಪಿ?
ಇದು ಯಾವಾಗಲೂ ಲೈಂಗಿಕವಲ್ಲದ ಥೆರಪಿ. ಆ ವ್ಯಕ್ತಿಗೆ ಏನು ಬೇಕೋ ಅದನ್ನು ಆಧರಿಸಿರುತ್ತದೆ. ನಾವು ಭೇಟಿಯಾಗುತ್ತೇವೆ ಒಂದೇ ಮನಸ್ಥಿತಿಯಲ್ಲಿರಲು ಬಯಸುತ್ತೇವೆ. ಅದಕ್ಕಾಗಿ ಮುಂಚಿತವಾಗಿಯೇ ನೀಡಿರುವ ಸೂಚನೆಗಳನ್ನು ಪರಿಶೀಲಿಸಿಕೊಳ್ಳುತ್ತೇವೆ. ನಂತರ ಅವರ ಸಮಯ, ಸನ್ನಿವೇಶ ಎಲ್ಲವನ್ನು ಆಧರಿಸಿ ಅವರು ಏನನ್ನು ಬಯಸುತ್ತಿದ್ದಾರೆ ಎನ್ನುವ ಆಧಾರದ ಮೇಲೆ ಥೆರಪಿ ನೀಡುತ್ತೇವೆ. ಇದು ಪೂರ್ವಗ್ರಹಗಳಿಂದ ಕೂಡಿದ ಮನಸ್ಸುಗಳಿಗೆ ಸಾಂತ್ವನವನ್ನೂ ನೀಡುತ್ತದೆ. ಒಂದು ವೇಳೆ ಅವರು ಲೈಂಗಿಕತೆಯ ಪ್ರಾರಂಭ ಅನುಭವಿಸುತ್ತಿದ್ದರೆ ನಾವು ಅದರ ಬಗ್ಗೆ ಸಂವಹನ ನಡೆಸಿ, ಲೈಂಗಿಕವಲ್ಲದ ಅನ್ಯೋನ್ಯತೆಯ ಬಗ್ಗೆ ತಿಳಿಸುತ್ತೇವೆ.
ಇದು ಸಂವಹನ ಮತ್ತು ನಂಬಿಕೆಯನ್ನು ಬೆಳೆಸುತ್ತದೆ. ನಾನು ಯಾರಿಗಾದರೂ ಅಪ್ಪುಗೆಯನ್ನು ನೀಡುವಾಗ, ನಾನು ಆ ಸ್ಪರ್ಶದ ಮೂಲಕ ಕಾಳಜಿ, ವಾತ್ಸಲ್ಯ ಮತ್ತು ಸದ್ಭಾವನೆ ನೀಡುತ್ತೇನೆ. ಅದು ಅವರ ಬಗ್ಗೆ ಕಾಳಜಿ ವಹಿಸುವ ಮನೋಭಾವವನ್ನು ಸೃಷ್ಟಿಸುತ್ತದೆ.



























