Tag: canada

  • ಹಿಮ ಸುನಾಮಿಗೆ ಅಮೆರಿಕ, ಕೆನಡಾ ತಲ್ಲಣ – ಫ್ರಿಡ್ಜ್‌ನಂತಾದ ವಾಹನಗಳು, 38 ಮಂದಿ ಸಾವು

    ಹಿಮ ಸುನಾಮಿಗೆ ಅಮೆರಿಕ, ಕೆನಡಾ ತಲ್ಲಣ – ಫ್ರಿಡ್ಜ್‌ನಂತಾದ ವಾಹನಗಳು, 38 ಮಂದಿ ಸಾವು

    ವಾಷಿಂಗ್ಟನ್: ಹಿಮ (Snow) ಸುನಾಮಿಗೆ ಅಮೆರಿಕ (America) -ಕೆನಡಾ (Canada) ಮತ್ತೊಮ್ಮೆ ತಲ್ಲಣಿಸಿದೆ. ಕ್ರಿಸ್‍ಮಸ್ ಸಂಭ್ರಮದ ಹೊತ್ತಲ್ಲಿ ಶೀತ ಸೂತಕ ಆವರಿಸಿದ್ದು, ಈವರೆಗೆ 38 ಮಂದಿ ಸಾವನ್ನಪ್ಪಿದ್ದಾರೆ.

    ಅಮೆರಿಕದಲ್ಲಿ 34, ಕೆನಡಾದಲ್ಲಿ 4 ಜನ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ತಾಪಮಾನ ಕೆಲವು ಕಡೆ ಮೈನಸ್ 45 ಡಿಗ್ರಿಗೆ ಕುಸಿದಿದೆ. ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಅಮೆರಿಕ-ಕೆನಡಾ ಮಧ್ಯೆ ಆರ್ಕಟಿಕ್ ಬ್ಲಾಸ್ಟ್ ಹೋಗಿ ಬಾಂಬ್ ಸೈಕ್ಲೋನ್ ಆಗಿದೆ. ಅಮೆರಿಕ-ಕೆನಡಾ ನಡುವೆ ಹಿಮರಾಶಿ ಹರಡುತ್ತಲೇ ಇದೆ. ಟೆಕ್ಸಾಸ್‍ನಿಂದ ಕ್ಯೂಬೆಕ್‍ವರೆಗೆ ಸುಮಾರು 3,200 ಕಿ.ಮೀ.ವರೆಗೆ ಹಿಮ ಆವರಿಸಿದೆ.

    ನ್ಯೂಯಾರ್ಕ್ (New York), ಬಫೆಲೋ ಮಿಚಿಗನ್, ಒರ್ಲಾಂಡೋ, ಡೆನ್ವರ್, ದಲ್ಲಾಸ್, ನಾಶ್‍ವಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಹೆದ್ದಾರಿಗಳಲ್ಲಿ ದಾರಿ ಕಾಣದೆ ಸರಣಿ ಅಪಘಾತಗಳಾಗಿವೆ. ಎಲ್ಲೆಂದರಲ್ಲೇ ಜನ, ವಾಹನಗಳು ಫ್ರಿಡ್ಜ್‌ ಆಗುತ್ತಿದ್ದಾರೆ. ಭಾರೀ ಪ್ರಮಾಣದಲ್ಲಿ ಹಿಮ ಸುರಿಯುತ್ತಿರುವ ಕಾರಣ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಓಹಿಯೋದಲ್ಲಿ ಹಿಮ ತೂಫಾನ್ ಕಾರಣದಿಂದ 50 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. ಇದನ್ನೂ ಓದಿ: ಕೊರೊನಾ ಪಾಸಿಟಿವ್ ಎಂದಾಕ್ಷಣ ನಾವು ಚೀನಾಗೆ ಹೋಲಿಕೆ ಮಾಡೋದು ಬೇಡ: ಸುಧಾಕರ್‌

    ಹಿಮದಿಂದಾಗಿ ವಿದ್ಯುತ್ ಸಂಪರ್ಕ ಕಟ್ ಆಗಿದ್ದು, ಕೋಟ್ಯಂತರ ಜನ ಕತ್ತಲೆಯಲ್ಲಿರುವಂತಾಗಿದೆ. 3,500ಕ್ಕೂ ಹೆಚ್ಚು ವಿಮಾನಗಳ ಹಾರಾಟ ಬಂದ್ ಆಗಿದೆ. ಏರ್‌ಪೋರ್ಟ್‍ಗಳಲ್ಲಿ ಜನ ಸಾಲುಗಟ್ಟಿ ನಿಂತಿದ್ದಾರೆ. ಅಮೆರಿಕ-ಕೆನಡಾ ಗಡಿಯ ನದಿ ನೀರು ಹಿಮವಾಗಿದೆ. ಅದರಲ್ಲೂ, ವಿಶ್ವಪ್ರಸಿದ್ಧ ನಯಾಗರ ಫಾಲ್ಸ್ ಸಂಪೂರ್ಣ ಫ್ರಿಡ್ಜ್‌ ಆಗುವ ಹಂತಕ್ಕೆ ಬಂದಿದೆ. ಇದನ್ನೂ ಓದಿ: ಬಹುಮಹಡಿ ಕಟ್ಟಡದ ಪಾರ್ಕಿಂಗ್‌ ಸ್ಥಳದಲ್ಲಿ ಹೊತ್ತಿ ಉರಿದ ಬೆಂಕಿ – 21 ಕಾರುಗಳು ಭಸ್ಮ

    Live Tv
    [brid partner=56869869 player=32851 video=960834 autoplay=true]

  • ಕೆನಡಾದಲ್ಲಿ ಟ್ರಕ್‌ನಿಂದ ಎಳೆಯಲ್ಪಟ್ಟು ಭಾರತ ಮೂಲದ ವಿದ್ಯಾರ್ಥಿ ಸಾವು

    ಕೆನಡಾದಲ್ಲಿ ಟ್ರಕ್‌ನಿಂದ ಎಳೆಯಲ್ಪಟ್ಟು ಭಾರತ ಮೂಲದ ವಿದ್ಯಾರ್ಥಿ ಸಾವು

    ಒಟ್ಟಾವಾ: ಕೆನಡಾದಲ್ಲಿ (Canada) ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದ ಭಾರತ ಮೂಲದ ವಿದ್ಯಾರ್ಥಿಯೊಬ್ಬ (Indian student) ಪಿಕಪ್ ಟ್ರಕ್‌ಗೆ (Pickup Truck) ಡಿಕ್ಕಿ ಹೊಡೆದು, ಎಳೆಯಲ್ಪಟ್ಟು ಭೀಕರವಾಗಿ ಸಾವನ್ನಪಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ವರದಿಗಳ ಪ್ರಕಾರ, ಭೀಕರ ಅಪಘಾತ ಬುಧವಾರ ಸಂಭವಿಸಿದೆ. ಬಲಿಯಾದ ವಿದ್ಯಾರ್ಥಿಯ ಸೋದರಸಂಬಂಧಿ ಆತನ ಮೃತದೇಹವನ್ನು ಕಾರ್ತಿಕ್ ಎಂದು ಗುರುತಿಸಿದ್ದಾರೆ. ಕಾರ್ತಿಕ್ 2021ರಲ್ಲಿ ವಿದ್ಯಾಭ್ಯಾಸಕ್ಕಾಗಿ ಭಾರತದಿಂದ ಕೆನಡಾಗೆ ತೆರಳಿದ್ದ ಎನ್ನಲಾಗಿದೆ. ಇದನ್ನೂ ಓದಿ: ಹಳ್ಳಕ್ಕೆ ಉರುಳಿದ KSRTC ಬಸ್ – 12 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಕಾರ್ತಿಕ್ ಶೆರಿಡನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಆತನ ಸಾವಿಗೆ ಕಾಲೇಜು ಸಂತಾಪ ವ್ಯಕ್ತಪಡಿಸಿದೆ. ಆತನ ಕುಟುಂಬ, ಸ್ನೇಹಿತರು, ಗೆಳೆಯರು ಮತ್ತು ಪ್ರಾಧ್ಯಾಪಕರು ಕಂಬನಿ ಮಿಡಿದಿದ್ದಾರೆ. ಕಾರ್ತಿಕ್‌ನ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಡೌನ್‌ ವಿತ್‌ ಕ್ಸಿ ಜಿನ್‌ಪಿಂಗ್‌.. ಲಾಕ್‌ಡೌನ್‌ ತೆಗೆಯಿರಿ – ಚೀನಾದಲ್ಲಿ ಭುಗಿಲೆದ್ದ ಜನಾಕ್ರೋಶ

    Live Tv
    [brid partner=56869869 player=32851 video=960834 autoplay=true]

  • ಶೀಘ್ರದಲ್ಲೇ ಭಾರತದ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವೆ ಎಂದು ಅಕ್ಷಯ್ ಕುಮಾರ್

    ಶೀಘ್ರದಲ್ಲೇ ಭಾರತದ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವೆ ಎಂದು ಅಕ್ಷಯ್ ಕುಮಾರ್

    ಬಾಲಿವುಡ್ ನಟ ಅಕ್ಷಯ್ ಕುಮಾರ್ ಈವರೆಗೂ ಕೆನಡಾ ಪಾಸ್ ಪೋರ್ಟ್ ನಲ್ಲಿ ಫಾರೀನ್ ಟೂರ್ ಮಾಡುತ್ತಿದ್ದಾರೆ. ಕೆನಡಾ ಪೌರತ್ವ ಹೊಂದಿರುವ ಕಾರಣದಿಂದಾಗಿ ಅವರಿಗೆ ಭಾರತದಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿಯೇ ಹಲವಾರು ಬಾರಿ ಟೀಕೆಗೂ ಗುರಿಯಾಗಿದ್ದಾರೆ ಅಕ್ಷಯ್. ಹಾಗಾಗಿಯೇ ಸದ್ಯದಲ್ಲೇ ಅವರು ಭಾರತದ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.

    ಈ ರೀತಿ ಹೇಳಿಕೆ ಕೊಡುವುದು, ಸಂದರ್ಶನದಲ್ಲಿ ಉತ್ತರಿಸುವುದು ಅಕ್ಷಯ್ ಕುಮಾರ್ ಅವರಿಗೆ ಹೊಸದೇನೂ ಅಲ್ಲ. 2019ರಲ್ಲೇ ಅವರು ಇಂಥದ್ದೊಂದು ಹೇಳಿಕೆಯನ್ನು ನೀಡಿದ್ದರು.ಆದರೆ, ಈವರೆಗೂ ಅವರು ಪಾಸ್ ಪೋರ್ಟ್ ಬದಲಾಯಿಸಿಕೊಂಡಿಲ್ಲ. ಇದೀಗ ಮತ್ತೆ ಸಂದರ್ಶನವೊಂದರಲ್ಲಿ ಭಾರತದ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸುವುದಾಗಿ ಹೇಳಿಕೊಂಡಿದ್ದಾರೆ. ಅವರ ಮಾತು ಇದೀಗ ಮತ್ತೆ ಟ್ರೋಲ್ ಆಗಿದೆ. ಸುಳ್ಳು ಹೇಳದೆ, ಭರವಸೆ ಕೊಡದೇ ಆದಷ್ಟು ಬೇಗ ಭಾರತದ ಪೌರತ್ವ ಪಡೆಯಿರಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ:ಗುರೂಜಿಗೆ ಬಿಗ್ ಬಾಸ್ ಡಬಲ್ ಶಾಕ್: ಸೂಟ್ ಕೇಸ್ ರೆಡಿ ಮಾಡಿ ಎಂದ ನಟ ಸುದೀಪ್

    ದೇಶಭಕ್ತಿಯ ವಿಚಾರದಲ್ಲಿ ಹಲವಾರು ಭಾಷಣಗಳನ್ನು ಅಕ್ಷಯ್ ಕುಮಾರ್ ಮಾಡಿದ್ದಾರೆ. ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ, ಅಕ್ಷಯ್ ಕುಮಾರ್ ಮಾತ್ರ ಕೆನಡಾ ಪೌರತ್ವ ಹೊಂದಿದ್ದಾರೆ. ಭಾರತದಲ್ಲಿ ಅವರು ಹಲವು ವರ್ಷಗಳಿಂದ ಇದ್ದರೂ, ಇನ್ನೂ ಕೆನಡಾ ಪಾಸ್ ಪೋರ್ಟ್ ಹೊಂದಿದ್ದಾರೆ. ಹೀಗಾಗಿ ಪದೇ ಪದೇ ಈ ಪ್ರಶ್ನೆಯು ಅವರಿಗೆ ಎದುರಾಗುತ್ತಿದ.ಇದರಿಂದ ತಪ್ಪಿಸಿಕೊಳ್ಳಲು ಭಾರತದ ಪಾಸ್ ಪೋರ್ಟ್ ಗೆ ಅತೀ ಶೀಘ್ರದಲ್ಲೇ ಅರ್ಜಿ ಹಾಕುವುದಾಗಿ ಅಕ್ಷಯ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೇಶ ವಿರೋಧಿ ಚಟುವಟಿಕೆ – ಕೆನಡಾದಲ್ಲಿರುವ ವಿದ್ಯಾರ್ಥಿಗಳಿಗೆ ಎಚ್ಚರವಾಗಿರಿ ಎಂದ ಭಾರತ

    ದೇಶ ವಿರೋಧಿ ಚಟುವಟಿಕೆ – ಕೆನಡಾದಲ್ಲಿರುವ ವಿದ್ಯಾರ್ಥಿಗಳಿಗೆ ಎಚ್ಚರವಾಗಿರಿ ಎಂದ ಭಾರತ

    ನವದೆಹಲಿ: ಕೆನಡಾದಲ್ಲಿ (Canada) ದ್ವೇಷ ಅಪರಾಧಗಳು, ಮತೀಯ ಹಿಂಸಾಚಾರಗಳು ಹಾಗೂ ಭಾರತ ವಿರೋಧಿ ಚಟುವಟಿಕೆಗಳು (Anti-Indian Activity) ಹೆಚ್ಚುತ್ತಿದ್ದು, ಇದರಿಂದ ಜಾಗರೂಕರಾಗಿರಿ ಎಂದು ಭಾರತ ಸರ್ಕಾರ ಶುಕ್ರವಾರ ಕೆನಡಾದಲ್ಲಿರುವ ಭಾರತೀಯ ಪ್ರಜೆಗಳು (Indian citizens) ಹಾಗೂ ವಿದ್ಯಾರ್ಥಿಗಳಿಗೆ (Students) ಎಚ್ಚರಿಕೆಯ ಸಂದೇಶವನ್ನು (Caution) ರವಾನಿಸಿದೆ.

    ಕೆನಡಾದಲ್ಲಿ ದ್ವೇಷದ ಅಪರಾಧಗಳು, ಹಿಂಸಾಚಾರ ಹಾಗೂ ಭಾರತ ವಿರೋಧಿ ಚಟುವಟಿಕೆಗಳ ಘಟನೆಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಅಪರಾಧಗಳ ವಿರುದ್ಧ ತನಿಖೆ ಹಾಗೂ ಕ್ರಮ ಕೈಗೊಳ್ಳುವಂತೆ ನಾವು ಅಲ್ಲಿನ ಅಧಿಕಾರಿಗಳನ್ನು ಕೇಳಿಕೊಂಡಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಅಪರಾಧಿಗಳ ಮೇಲೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

    ಕೆನಡಾದಲ್ಲಿ ಹೆಚ್ಚುತ್ತಿರುವ ಇಂತಹ ಘಟನೆಗಳಿಂದಾಗಿ ಅಲ್ಲಿರುವ ಭಾರತೀಯ ಪ್ರಜೆಗಳು ಹಾಗೂ ಶಿಕ್ಷಣಕ್ಕಾಗಿ ತೆರಳಿರುವ ಭಾರತೀಯ ವಿದ್ಯಾರ್ಥಿಗಳು ಜಾಗರೂಕರಾಗಿರಿ ಎಂದು ಸಚಿವಾಲಯ ಎಚ್ಚರಿಕೆಯನ್ನು ನೀಡಿದೆ. ಇದನ್ನೂ ಓದಿ: ಬಲವಂತದ ಮತಾಂತರ ತಡೆಗೆ ನಿರ್ದೇಶನ ಕೋರಿ ಅರ್ಜಿ – ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

    ಒಟ್ಟಾವಾದಲ್ಲಿರುವ ಭಾರತೀಯ ಮಿಷನ್ ಅಥವಾ ಟೊರೊಂಟೊ ಮತ್ತು ವ್ಯಾಂಕೋವರ್‌ನಲ್ಲಿರುವ ಕಾನ್ಸುಲೇಟ್‌ಗಳಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಭಾರತ ಸರ್ಕಾರ ಕೆನಡಾದಲ್ಲಿರುವ ಭಾರತೀಯ ಪ್ರಜೆಗಳು ಹಾಗೂ ವಿದ್ಯಾರ್ಥಿಗಳನ್ನು ಕೇಳಿಕೊಂಡಿದೆ. ಇದರಿಂದ ಯಾವುದೇ ತುರ್ತು ಸಂದರ್ಭದಲ್ಲಿ ಅಥವಾ ಅವಶ್ಯಕತೆ ಬಂದಾಗ ಕೆನಡಾದಲ್ಲಿರುವ ಭಾರತೀಯ ನಾಗರಿಕರೊಂದಿಗೆ ಸಂಪರ್ಕ ಸಾಧಿಸಲು ಸಹಾಯವಾಗುತ್ತದೆ ಎಂದು ತಿಳಿಸಲಾಗಿದೆ.

    ಕೆನಡಾದಲ್ಲಿ ಸುಮಾರು 16 ಲಕ್ಷ ಭಾರತೀಯರು ನೆಲೆಸಿದ್ದಾರೆ. ಅಲ್ಲಿನ ಜನಸಂಖ್ಯೆಯ ಶೇ.3 ಕ್ಕಿಂತಲೂ ಹೆಚ್ಚು ಜನರು ಭಾರತೀಯರೇ ಇದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ನಡುವೆ ಶಾಂತಿ ಸ್ಥಾಪನೆಗೆ ಮೋದಿಯನ್ನೊಳಗೊಂಡ ಸಮಿತಿ ರಚಿಸಿ: ಮೆಕ್ಸಿಕೋ

    Live Tv
    [brid partner=56869869 player=32851 video=960834 autoplay=true]

  • ಕೆನಡಾದಲ್ಲಿ ಹಿಂದೂ ದೇವಾಲಯ ವಿರೂಪ – ಭಾರತ ವಿರೋಧಿ ಬರಹದ ಮೂಲಕ ದ್ವೇಷ ಬಿತ್ತನೆ

    ಕೆನಡಾದಲ್ಲಿ ಹಿಂದೂ ದೇವಾಲಯ ವಿರೂಪ – ಭಾರತ ವಿರೋಧಿ ಬರಹದ ಮೂಲಕ ದ್ವೇಷ ಬಿತ್ತನೆ

    ಒಟ್ಟೋವಾ: ಕೆನಡಾದ (Canada) ಖಲಿಸ್ತಾನ ತೀವ್ರವಾದಿಗಳ ಗುಂಪೊಂದು ಟೊರೊಂಟೊದಲ್ಲಿರುವ (Toronto) ಹಿಂದೂ ದೇವಾಲಯವನ್ನು (Hindu Temple) ವಿರೂಪಗೊಳಿಸಿರುವ ಘಟನೆ ನಡೆದಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

    ಟೊರೊಂಟೊದ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದಲ್ಲಿ ಈ ಘಟನೆ ನಡೆದಿದೆ. ಭಾರತ-ವಿರೋಧಿ ಗೀಚುಬರಹದ ಮೂಲಕ ಪ್ರಮುಖ ಹಿಂದೂ ದೇವಾಲಯವನ್ನು ವಿರೂಪಗೊಳಿಸಲಾಗಿದೆ. ಇದನ್ನು ಭಾರತೀಯ ಮಿಷನ್‌ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್‌; ಇಬ್ಬರು ಉಗ್ರರು ಹತ್ಯೆ

    ಭಾರತೀಯ ಹೈಕಮಿಷನ್ ಬುಧವಾರ ಟ್ವೀಟ್ ಮಾಡಿ ಖಂಡನೆ ವ್ಯಕ್ತಪಡಿಸಿದೆ. ಭಾರತ ವಿರೋಧಿ ಗೀಚುಬರಹದ ಮೂಲಕ BAPS ಸ್ವಾಮಿನಾರಾಯಣ ಮಂದಿರ ವಿರೂಪಗೊಳಿಸುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಘಟನೆಯ ಬಗ್ಗೆ ತನಿಖೆ ನಡೆಸಲು ಮತ್ತು ಅಪರಾಧಿಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳಲು ಕೆನಡಾದ ಅಧಿಕಾರಿಗಳಿಗೆ ವಿನಂತಿಸಿದ್ದೇವೆ ಎಂದು ತಿಳಿಸಿದೆ.

    ಕೆನಡಾದ ಸಂಸತ್ ಸದಸ್ಯ ಚಂದ್ರ ಆರ್ಯ (Chandra Arya) ಟ್ವೀಟ್ ಮಾಡಿ, ಕೆನಡಾದ ಖಲಿಸ್ತಾನಿ ತೀವ್ರವಾದಿಗಳಿಂದ ಟೊರೊಂಟೊ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರ ವಿರೂಪಗೊಳಿಸಿರುವುದನ್ನು ಎಲ್ಲರೂ ಖಂಡಿಸಬೇಕು. ಇದು ಕೇವಲ ಒಂದು ಘಟನೆಯಲ್ಲ. ಕೆನಡಾದ ಹಿಂದೂ ದೇವಾಲಯಗಳು ಇತ್ತೀಚಿನ ದಿನಗಳಲ್ಲಿ ಈ ರೀತಿಯ ದಾಳಿಗೆ ಗುರಿಯಾಗುತ್ತಿವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸಂಚರಿಸುತ್ತಿದ್ದ ಕಾರು ಅಪಘಾತ

    Live Tv
    [brid partner=56869869 player=32851 video=960834 autoplay=true]

  • ಪ್ಯಾರಾಚೂಟ್ ಓಪನ್ ಆಗದೇ ಸ್ಕೈಡೈವಿಂಗ್ ಮಾಡುವಾಗ ಖ್ಯಾತ ಟಿಕ್ ಟಾಕ್ ತಾರೆ ತಾನ್ಯಾ ಸಾವು

    ಪ್ಯಾರಾಚೂಟ್ ಓಪನ್ ಆಗದೇ ಸ್ಕೈಡೈವಿಂಗ್ ಮಾಡುವಾಗ ಖ್ಯಾತ ಟಿಕ್ ಟಾಕ್ ತಾರೆ ತಾನ್ಯಾ ಸಾವು

    ಕೆನಡಾದ ಖ್ಯಾತ ಟಿಕ್ ಟಾಕ್ ತಾರೆ ಹಾಗೂ ಮಾಡೆಲ್ ತಾನ್ಯಾ ಪರ್ದಾಜಿ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಸದ್ಯ ಅವರು ಸ್ಕೈಡೈವಿಂಗ್ ಕ್ಲಾಸಿಗೆ ಸೇರಿಕೊಂಡಿದ್ದು, ಸ್ಕೈಡೈವಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದಾಗ ಅನಾಹುತ ಸಂಭವಿಸಿದೆ. ಆಕಾಶದಿಂದ ನೇರವಾಗಿ ನೆಲಕ್ಕೆ ಬಿದ್ದು 21ರ ವಯಸ್ಸಿನ ತಾನ್ಯ ದುರಂತ ಅಂತ್ಯ ಕಂಡಿದ್ದಾರೆ.

    ತಾನ್ಯಾ ಪರ್ದಾಜಿ ಒಬ್ಬರೇ ಸ್ಕೈಡೈವಿಂಗ್ ಅಭ್ಯಾಸ ಮಾಡುವಾಗ ತಡವಾಗಿ ಪ್ಯಾರಾಚೂಟ್ ಓಪನ್ ಮಾಡಿದ ಹಿನ್ನೆಲೆಯಲ್ಲಿ ಪ್ಯಾರಾಚೂಟ್ ಗೆ ಗಾಳಿ ತುಂಬಿಕೊಳ್ಳದೇ ಆಕಾಶದಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಆಗಸ್ಟ್ 27 ರಂದು ಕೆನಡಾದ ಒಂಟಾರಿಯೋದಲ್ಲಿ ಈ ದುರಂತ ನಡೆದಿದ್ದು, ಸ್ಕೈಡೈವಿಂಗ್ ತರಬೇತಿ ಸಂಸ್ಥೆಯ ಮೇಲೆ ದೂರು ದಾಖಲಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ತಾನ್ಯ ಪರ್ದಾಜಿ  ಕೇವಲ ಟಿಕ್ ಟಾಕ್ ತಾರೆ ಮಾತ್ರ ಆಗಿರಲಿಲ್ಲ. ಮಾಡೆಲಿಂಗ್ ನಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಲ್ಲದೇ, 2017ರಲ್ಲಿ ಮಿಸ್ ಕೆನಡಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗಿ ಸೆಮಿ ಫೈನಲಿಸ್ಟ್ ಕೂಡ ಆಗಿದ್ದವರು. ಸ್ಕೈಡೈವಿಂಗ್ ಮೇಲಿನ ಆಸಕ್ತಿಯಿಂದಾಗಿ ಇತ್ತೀಚೆಗಷ್ಟೇ ಅವರು ಕ್ಲಾಸಿಗೆ ಸೇರಿಕೊಂಡಿದ್ದರು ಎಂದಿದೆ ಸಂಸ್ಥೆ.

    Live Tv
    [brid partner=56869869 player=32851 video=960834 autoplay=true]

  • ಚಾಕು ಇರಿತಕ್ಕೆ 10 ಮಂದಿ ಬಲಿ, 15ಕ್ಕೂ ಹೆಚ್ಚು ಜನರಿಗೆ ಗಾಯ

    ಚಾಕು ಇರಿತಕ್ಕೆ 10 ಮಂದಿ ಬಲಿ, 15ಕ್ಕೂ ಹೆಚ್ಚು ಜನರಿಗೆ ಗಾಯ

    ಒಟ್ಟಾವಾ: ದುಷ್ಕರ್ಮಿಗಳಿಬ್ಬರು ಚಾಕು ಇರಿದು, ದಾಳಿ ನಡೆಸಿದ ಪರಿಣಾಮ 10 ಜನ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಕೆನಡಾದ ಸಾಸ್ಕಾಚೆವಾನ್ ಪ್ರಾಂತ್ಯದಲ್ಲಿ ನಡೆದಿದೆ.

    ಕೆನಡಾದ ಸಾಸ್ಕಾಚೆವಾನ್ ಪ್ರಾಂತ್ಯದ ವೆಲ್ಡನ್ ಪಟ್ಟಣದಲ್ಲಿರುವ ಜೇಮ್ಸ್ ಸ್ಮಿತ್ ಕ್ರೀ ನೇಷನ್ ಎಂಬಲ್ಲಿ ಈ ಘಟನೆ ನಡೆದಿದೆ. ಈ ದುರ್ಘಟನೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಪೊಲೀಸರು ಧಾವಿಸಿ, ಪರಿಶೀಲನೆ ನಡೆಸಿದರು. ಗಾಯಗೊಂಡಿರುವ 15ಕ್ಕೂ ಹೆಚ್ಚು ಜನರನ್ನು ಪೊಲೀಸರೇ ಸುತ್ತಮುತ್ತಲ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಒಂದಿಷ್ಟು ಜನರು ತಾವೇ ಸ್ವತಃ ಆಸ್ಪತ್ರೆಗಳಿಗೆ ಬಂದಿದ್ದಾರೆ.

    ಆರೋಪಿಗಳು ದಾಳಿ ಬಳಿಕ ಕಾರಿನಿಂದ ನಾಪತ್ತೆ ಆಗಿದ್ದಾರೆ. ಆರೋಪಿಗಳನ್ನು ಮೈಲ್ಸ್(30), ಡೇಮಿಯನ್ ಸ್ಯಾಂಡರ್ಸನ್ (31) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿ ಇಬ್ಬರು ಶಂಕಿತರ ಪತ್ತೆಗಾಗಿ ಶೋಧಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಹಬ್ಬಕ್ಕೆಂದು ಊರಿಗೆ ಬಂದವ ಸ್ನೇಹಿತನಿಂದಲೇ ಮರ್ಡರ್!

    ಘಟನೆಗೆ ಸಂಬಂಧಿಸಿ ಪ್ರಧಾನಿ ಜಸ್ಟಿನ್ ಟ್ರುಡೊ ಟ್ವೀಟ್ ಮಾಡಿ, ಸಂತಾಪವನ್ನು ಸೂಚಿಸಿದ್ದಾರೆ. ದಾಳಿಯು ಭಯಾನಕ ಹಾಗೂ ಹೃದಯವಿದ್ರಾವಕವಾಗಿದೆ. ಘಟನೆಗೆ ಸಂಬಂಧಿಸಿ ನಿವಾಸಿಗಳು ಅಧಿಕಾರಿಗಳ ಸೂಚನೆಯನ್ನು ಪಾಲಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು

    Live Tv
    [brid partner=56869869 player=32851 video=960834 autoplay=true]

  • ಕೆನಡಾಕ್ಕೆ ಹೋಗಲು ವೀಸಾ ವಿಳಂಬ- ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ

    ಕೆನಡಾಕ್ಕೆ ಹೋಗಲು ವೀಸಾ ವಿಳಂಬ- ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ

    ಚಂಡೀಗಢ: ಕೆನಡಾಕ್ಕೆ ಹೋಗಲು ವೀಸಾ ವಿಳಂಬದಿಂದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿ ನಡೆದಿದೆ.

    ಶಹಬಾದ್‍ನ ಗೂರ್ಖಾ ಗ್ರಾಮದ ವಿಕೇಶ್ ಸೈನಿ ಅಲಿಯಾಸ್ ದೀಪಕ್ (23) ಮೃತ ಯುವಕ. ದೀಪಕ್ ವೀಸಾ ಗುರುವಾರವೇ ಬಂದಿತ್ತು. ಆದರೆ ವೀಸಾ ಕಾಣೆಯಾಗಿರುವುದರಿಂದ ಆತನಿಗೆ ಯಾರು ವೀಸಾ ಬಂದಿರುವ ವಿಷಯವನ್ನು ತಿಳಿಸಿರಲಿಲ್ಲ. ಆದರೆ ದೀಪಕ್ ತನ್ನ ಸ್ನೇಹಿತನಿಗೆ ವೀಸಾ ಬಂದಿದ್ದರೂ, ತನಗೆ ಇನ್ನೂ ವೀಸಾ ಬಂದಿಲ್ಲ ಎಂದು ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಘಟನೆ ಸಂಬಂಧ ದೀಪಕ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ದೀಪಕ್‍ನ ಚಪ್ಪಲಿಗಳು ಮತ್ತು ಬೈಕ್ ನರ್ವಾನಾ ಬ್ರಾಂಚ್ ಕೆರೆ ಬಳಿ ಪತ್ತೆ ಆಗಿದೆ. ನಂತರ ಅಲ್ಲೆ ಹುಡುಕಿದಾಗ ಮೃತದೇಹವು ಅಲ್ಲೇ ಪತ್ತೆ ಆಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧಿಸಿ ಪೊಲೀಸರು ವಿಚಾರಣೆ ಆರಂಭಿಸಿದ್ದು, ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದಾರೆ. ಇದನ್ನೂ ಓದಿ: ಇಯರ್‌ಫೋನ್ ಧರಿಸಿ ಹಳಿ ಮೇಲೆ ಹೋಗುತ್ತಿದ್ದ ಮೂವರು ರೈಲಿಗೆ ಸಿಲುಕಿ ಸಾವು

    ಕೋವಿಡ್ ಕಡಿಮೆಯಾದ ನಂತರವೂ ವಿದ್ಯಾರ್ಥಿ ವೀಸಾ ವಿಳಂಬ ಸಮಸ್ಯೆಯಾಗಿದೆ. ಕೆನಡಾಕ್ಕೆ ಹೋಗಲು ವೀಸಾ ಪ್ರಕ್ರಿಯೆಯು ಸುಮಾರು 6 ತಿಂಗಳುಗಳನ್ನು ತೆಗೆದುಕೊಳ್ಳುತ್ತಿದೆ. ಯುಕೆ ಮತ್ತು ಯುಎಸ್ ವೀಸಾಕ್ಕಾಗಿ ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ. ಇದನ್ನೂ ಓದಿ: ಚಾಕುವಿನಿಂದ ಇರಿದು ಟಿಎಂಸಿ ಕಾರ್ಯಕರ್ತನ ಬರ್ಬರ ಹತ್ಯೆ – ನಾಲ್ವರು ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಚಿಲಿಯಲ್ಲಿ ನಿಗೂಢ ಸಿಂಕ್‍ಹೋಲ್ ಪತ್ತೆ – ಹೇಗೆ ಬಂತು ಅಂತ ಯಾರಿಗೂ ಗೊತ್ತಿಲ್ಲ!

    ಚಿಲಿಯಲ್ಲಿ ನಿಗೂಢ ಸಿಂಕ್‍ಹೋಲ್ ಪತ್ತೆ – ಹೇಗೆ ಬಂತು ಅಂತ ಯಾರಿಗೂ ಗೊತ್ತಿಲ್ಲ!

    ಸ್ಯಾಂಟಿಯಾಗೊ: ಜಗತ್ತಿನಲ್ಲಿ ಒಂದಲ್ಲಾ ಒಂದು ವಿಸ್ಮಯಗಳು ಆಗಾಗ ನಡೆಯುತ್ತಲೇ ಇರುತ್ತದೆ. ಕಳೆದ ವಾರ ಚಿಲಿ ದೇಶದ (Mining In Chile) ಗಣಿಗಾರಿಕೆ ಪ್ರದೇಶವೊಂದರಲ್ಲಿ ಬೃಹತ್ ಕುಳಿಯೊಂದು ಪತ್ತೆಯಾಗಿದ್ದು, ಇದೀಗ ಈ ವಿಚಾರ ಭಾರೀ ಸದ್ದು ಮಾಡುತ್ತಿದೆ.

    ಚಿಲಿ ದೇಶದ ಉತ್ತರ ಭಾಗದಲ್ಲಿರುವ ಗಣಿಗಾರಿಕೆ ಪ್ರದೇಶದಲ್ಲಿ ಕಾಣಿಸಿಕೊಂಡ ಸುಮಾರು 82 ಮೀಟರ್ ವ್ಯಾಸದ ನಿಗೂಢ ಸಿಂಕ್‍ಹೋಲ್ ಬಗ್ಗೆ ತನಿಖೆ ಇದೀಗ ಆರಂಭಗೊಂಡಿದೆ. ಚಿಲಿ ದೇಶದ ರಾಜಧಾನಿ ಸ್ಯಾಂಟಿಯಾಗೊದ ಉತ್ತರಕ್ಕೆ ಸುಮಾರು 656 ಕಿಲೋಮೀಟರ್ ದೂರದಲ್ಲಿ ಕೆನಡಾದ ಲುಂಡಿನ್ ಮೈನಿಂಗ್ ತಾಮ್ರದ ಗಣಿ ಇರುವ ಭಾಗದಲ್ಲೇ ಈ ಬೃಹತ್ ಸಿಂಕ್‍ಹೋಲ್ (Chile Sinkhole) ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂವಿಜ್ಞಾನ ಮತ್ತು ಗಣಿಗಾರಿಕೆ ಸೇವೆ ಅಂದಾಜಿಸಿದೆ. ಇದನ್ನೂ ಓದಿ: ಪಶು ಸಂಗೋಪನೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ- ಶಿಕ್ಷಕ ಅರೆಸ್ಟ್

    ಕೆನಡಾದ ಸಂಸ್ಥೆ ಲುಂಡಿನ್ ಗಣಿಗಾರಿಕೆ ಮಾಡುತ್ತಿರುವ ಅಲ್ಕಾಪರ್ರೋಸಾ ಗಣಿ ಬಳಿ, ಟಿಯೆರಾ ಅಮರಿಲ್ಲಾ ಪುರಸಭೆಯು ಸಿಂಕ್‍ಹೋಲ್ ಸುತ್ತಲೂ 100 ಮೀಟರ್ ಭದ್ರತಾ ಪರಿಧಿಯನ್ನು ನಿರ್ಮಿಸಲಾಗಿದ್ದು, ಸಿಬ್ಬಂದಿ, ಉಪಕರಣಗಳು ಅಥವಾ ಮೂಲಸೌಕರ್ಯಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಮತ್ತು ಸಿಂಕ್ಹೋಲ್ ಪತ್ತೆಯಾದಾಗಿನಿಂದ ಸ್ಥಿರವಾಗಿದೆ ಎಂದು ಕಂಪನಿ ತಿಳಿಸಿದೆ.

    ಸ್ಯಾಂಟಿಯಾಗೊದ ಉತ್ತರ ಭಾಗದಲ್ಲಿ ಸುಮಾರು 800 ಕಿಲೋಮೀಟರ್ (ಸುಮಾರು 500 ಮೈಲುಗಳು) ದೂರದ ಪ್ರದೇಶದಲ್ಲಿ ಸಿಂಕ್‍ಹೋಲ್ ಪತ್ತೆಯಾಗಿದ್ದು, ಅಲ್ಕಾಪರ್ರೋಸಾ ಭೂಗತ ಗಣಿ ಪ್ರದೇಶದ ಅಭಿವೃದ್ಧಿ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಚಿಲಿಯು ವಿಶ್ವದ ಅತಿದೊಡ್ಡ ತಾಮ್ರ ಉತ್ಪಾದಕನ ದೇಶವಾಗಿದ್ದು, ಇಡೀ ಜಗತ್ತಿಗೆ ಕಾಲು ಭಾಗದಷ್ಟು ಪೂರೈಕೆ ಮಾಡುತ್ತದೆ.

    ಈ ಸಿಂಕ್‍ಹೋಲ್ ಸರಿಸುಮಾರು 200 ಮೀಟರ್‍ಗಳಷ್ಟು ಆಳವಿದೆ. ಸಿಂಕ್‍ಹೋಲ್‍ನ ಕೆಳಭಾಗದಲ್ಲಿ ನಾವು ಯಾವುದೇ ವಸ್ತುವನ್ನು ಪತ್ತೆ ಮಾಡಿಲ್ಲ. ಆದರೆ ಸಾಕಷ್ಟು ನೀರು ಇರುವುದು ಪತ್ತೆಯಾಗಿದೆ ಎಂದು ಏಜೆನ್ಸಿಯ ನಿರ್ದೇಶಕ ಡೇವಿಡ್ ಮಾಂಟೆನೆಗ್ರೊ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಧಾನಿ ನಿವಾಸಕ್ಕೆ ಘೆರಾವ್? – ಬೆಲೆ ಏರಿಕೆ ವಿರುದ್ಧ ಹೆಚ್ಚಿದ ಕಿಚ್ಚು

    ಸಿಂಕ್‍ಹೋಲ್‍ನಿಂದ ಸಮೀಪವಿರುವ ಮನೆಯು 600 ಮೀಟರ್‍ಗಿಂತ ಹೆಚ್ಚು ದೂರದಲ್ಲಿದೆ. ಆದರೆ ಯಾವುದೇ ಜನನಿಬಿಡ ಪ್ರದೇಶ ಅಥವಾ ಸಾರ್ವಜನಿಕ ಸೇವೆಯು ಪೀಡಿತ ವಲಯದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ. ಇದರಿಂದ ತನಿಖೆ ನಡೆಸಲು ಸುಳಬಾವಗಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೆನಡಾದಲ್ಲಿ ಸಾಮೂಹಿಕ ಗುಂಡಿನ ದಾಳಿ: ಹಲವರ ಸಾವು

    ಕೆನಡಾದಲ್ಲಿ ಸಾಮೂಹಿಕ ಗುಂಡಿನ ದಾಳಿ: ಹಲವರ ಸಾವು

    ಒಟ್ಟಾವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಸೋಮವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಹಲವು ಜನ ನಿರಾಶ್ರಿತರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

    ಬ್ರಿಟಿಷ್ ಕೊಲಂಬಿಯಾದ ಲಾಂಗ್ಲಿ ನಗರದಲ್ಲಿ ಗುಂಡಿನ ದಾಳಿ ಪ್ರಾರಂಭವಾಗುತ್ತಲೇ ಪೊಲೀಸರು ತುರ್ತು ಎಚ್ಚರಿಕೆಯನ್ನು ನೀಡಿದ್ದರು. ಘಟನೆಯ ಪ್ರದೇಶದಿಂದ ಜಾಗರೂಕರಾಗಿರಲು ಹಾಗೂ ದೂರವಿರಲು ನಿವಾಸಿಗಳನ್ನು ಕೇಳಿಕೊಂಡಿದ್ದರು. ಆದರೆ ಇಂದಿನ ಗುಂಡಿನ ದಾಳಿಯಿಂದಾಗಿ ಹಲವು ನಿರಾಶ್ರಿತರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿಂದು 939 ಮಂದಿ ಕೊರೊನಾ ಸೋಂಕು – ಓರ್ವ ಸಾವು

    ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ವಕ್ತಾರರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಗುಂಡಿನ ದಾಳಿಯಲ್ಲಿ ಹಲವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ನಿರ್ದಿಷ್ಟವಾಗಿ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿಲ್ಲ. ವರದಿಗಳ ಪ್ರಕಾರ ನಿರಾಶ್ರಿತರನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿಯನ್ನು ನಡೆಸಲಾಗಿದೆ. ಶಂಕಿತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ನಿರ್ಗಮಿತ ರಾಷ್ಟ್ರಪತಿಗೆ ಮುಫ್ತಿ ಅಪಮಾನ- ಖರ್ಗೆಗೆ ಆಸನ ನಿಗದಿಯಲ್ಲಿ ಶಿಷ್ಟಾಚಾರ ಉಲ್ಲಂಘನೆ

    Live Tv
    [brid partner=56869869 player=32851 video=960834 autoplay=true]