Tag: Campus Front of India

  • Hijab Row: ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲ್ಲ ಎಂದ ಶಿಕ್ಷಣ ಸಚಿವರ ನಿಲುವು ಖಂಡನೀಯ: ಕ್ಯಾಂಪಸ್ ಫ್ರಂಟ್

    Hijab Row: ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲ್ಲ ಎಂದ ಶಿಕ್ಷಣ ಸಚಿವರ ನಿಲುವು ಖಂಡನೀಯ: ಕ್ಯಾಂಪಸ್ ಫ್ರಂಟ್

    ಬೆಂಗಳೂರು: ಹಿಜಬ್ ವಿಚಾರದಲ್ಲಿ ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವುದಿಲ್ಲ ಎಂದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ನಿಲುವು ಖಂಡನೀಯ ಎಂದು ಕ್ಯಾಂಪಸ್ ಫ್ರಂಟ್ ಕಿಡಿಕಾರಿದೆ.

    ಈ ಬಗ್ಗೆ ಮಾಧ್ಯಮ ಪ್ರಕಟನೆ ಹೊರಡಿಸಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ, ಸಂವಿಧಾನವು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣದ ಹಕ್ಕನ್ನು ನೀಡಿದೆ. ಆದರೆ ಈ ಹಕ್ಕನ್ನು ಕಸಿದಿರುವ ರಾಜ್ಯ ಸರ್ಕಾರದ ಅನ್ಯಾಯದ ಕ್ರಮವನ್ನು ವಿರೋಧಿಸಿ ಪ್ರತಿಭಟಿಸಿದ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಇದೀಗ ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆ ನಡೆಸುವುದಿಲ್ಲ ಎಂದಿರುವ ಶಿಕ್ಷಣ ಸಚಿವರ ನಿಲುವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದಿದೆ. ಇದನ್ನೂ ಓದಿ: ಪರೀಕ್ಷೆಗೆ ಗೈರಾದ್ರೆ ಅಲ್ಲಿಗೇ ಮುಗೀತು, ಅವಕಾಶ ನೀಡಲ್ಲ: ಬಿ.ಸಿ.ನಾಗೇಶ್

    ಪದವಿ ಪೂರ್ವ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಸರ್ಕಾರವು ಚೆಲ್ಲಾಟವಾಡುತ್ತಿದ್ದು, ಇಂದು ರಾಜ್ಯದಲ್ಲಿ ಹಲವಾರು ಮುಸ್ಲಿಮ್ ವಿದ್ಯಾರ್ಥಿನಿಯರು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಸಚಿವರ ಹೇಳಿಕೆಯನ್ನು ಗಮನಿಸಿದರೆ, ಮುಸ್ಲಿಮ್ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿಸಿ ಅವರ ಸಾಕ್ಷರತಾ ಪ್ರಮಾಣವನ್ನು ಕಡಿಮೆ ಮಾಡಬೇಕೆಂಬ ದುರುದ್ದೇಶ ಅವರ ಹೇಳಿಕೆಯಲ್ಲಿ ಎದ್ದು ಕಾಣುತ್ತಿದೆ. ಶಿಕ್ಷಣವು ಪ್ರತಿಯೊಬ್ಬ ಪ್ರಜೆಗಳ ಮೂಲಭೂತ ಹಕ್ಕು, ಇದನ್ನು ಕಸಿಯಲು ಸಂವಿಧಾನ ಯಾರಿಗೂ ಅನುಮತಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರವು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನೊಂದಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ಹಾಗೆಯೇ ಸರ್ಕಾರವು ವಿದ್ಯಾರ್ಥಿಗಳ ಧಾರ್ಮಿಕ ಹಾಗೂ ಶಿಕ್ಷಣದ ಮೂಲಭೂತ ಹಕ್ಕನ್ನು ಖಾತರಿಪಡಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆ ಒತ್ತಾಯಿಸಿದ್ದಾರೆ.

  • ಸಾರ್ವಜನಿಕ ಸ್ಥಳದಲ್ಲಿ ನಾವು ಹಿಜಬ್ ತೆಗೆಯೋದಿಲ್ಲ ಹೇಳಿಕೆ ಸುಳ್ಳು – ಆಧಾರ್ ಕಾರ್ಡ್‍ನಲ್ಲಿ ಹಿಜಬ್ ಧರಿಸಿಲ್ಲ

    ಸಾರ್ವಜನಿಕ ಸ್ಥಳದಲ್ಲಿ ನಾವು ಹಿಜಬ್ ತೆಗೆಯೋದಿಲ್ಲ ಹೇಳಿಕೆ ಸುಳ್ಳು – ಆಧಾರ್ ಕಾರ್ಡ್‍ನಲ್ಲಿ ಹಿಜಬ್ ಧರಿಸಿಲ್ಲ

    ಬೆಂಗಳೂರು: ಹಿಜಬ್ ವಿವಾದಕ್ಕೆ ಸಿಎಫ್‍ಐ ಸಂಘಟನೆಯೇ ಕಾರಣ ಅಂತ ಕಾಲೇಜ್ ಶಿಕ್ಷಕರ ಪರ ವಾದ ಮಾಡುತ್ತಿರುವ ವಕೀಲ ನಾಗಾನಂದ್ ವಾದಿಸಿದ್ದಾರೆ.

    ಹೈಕೋರ್ಟ್‍ನಲ್ಲಿ 9ನೇ ದಿನದ ಹಿಜಬ್ ವಿವಾದ ವಿಚಾರಣೆ ನಡೆಯಿತು. ಸಾರ್ವಜನಿಕ ಸ್ಥಳದಲ್ಲಿ ನಾವು ಹಿಜಜ್ ತೆಗೆಯೋದಿಲ್ಲ ಅನ್ನೋ ವಿದ್ಯಾರ್ಥಿನಿಯರ ಹೇಳಿಕೆಯೇ ಸುಳ್ಳು. ಆಧಾರ್ ಕಾರ್ಡ್‍ನಲ್ಲಿ ಅವರು ಹಿಜಬ್ ಹಾಕಿಲ್ಲ ಅಂತ ವಕೀಲರು ತೋರಿಸಿದರು. 2014ರಿಂದ ಸಮವಸ್ತ್ರ ಹಾಕಿಕೊಂಡು ಬರುತ್ತಿದ್ದಾರೆ. 2021ರ ಡಿ.30 ರಂದು ಸಿಎಫ್‍ಐನವರು ಹಿಜಬ್‍ಗೆ ಅವಕಾಶ ಕೊಡಿ ಅಂತ ಆಡಳಿತ ಮಂಡಳಿಗೆ ಕೇಳಿಕೊಂಡರು. ಇದನ್ನು ಆಡಳಿತ ಮಂಡಳಿ ತಿರಸ್ಕರಿಸಿತು. ಅಂದಿನಿಂದ ವಿದ್ಯಾರ್ಥಿನಿಯರು ಕಟುವಾಗಿ ನಡೆದುಕೊಳ್ಳುತ್ತಿದ್ದಾರೆ. ಸಿಎಫ್‍ಐ ವಿದ್ಯಾರ್ಥಿ ಸಂಘಟನೆ ಆದರೂ ಅಧಿಕೃತ ಮಾನ್ಯತೆ ಪಡೆದಿಲ್ಲ. ಬರೀ ಗದ್ದಲವನ್ನೇ ಸೃಷ್ಟಿಸ್ತಿದೆ ಎಂದು ನಾಗಾನಂದ್ ವಾದಿಸಿದರು. ಇದನ್ನೂ ಓದಿ: ಕೋರ್ಟ್ ತೀರ್ಪು ಬರೋವರೆಗೂ ಪರೀಕ್ಷೆ ಮುಂದೂಡಿ – ಹಿಜಬ್ ಹೋರಾಟಗಾರ್ತಿಯರು

    ಇದ್ದಕ್ಕಿದ್ದಂತೇ ಇದು ಹೇಗೆ ಸೃಷ್ಟಿಯಾಯಿತು ಅಂತ ಅಚ್ಚರಿ ಸೂಚಿಸಿದ ಸಿಜೆ ಅವಸ್ತಿ, ಸಿಎಫ್‍ಐ ಬಗ್ಗೆ ಮಾಹಿತಿ ಕೊಡುವಂತೆ ಎಜಿಗೆ ಸೂಚಿಸಿದರು. ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ಕೊಡೋದಾಗಿ ಎಜಿ ನಾವದಗಿ ತಿಳಿಸಿದರು. ಇದಕ್ಕೆ ಅರ್ಜಿದಾರರ ವಕೀಲ ತಾಹೀರ್ ಮಧ್ಯಪ್ರವೇಶಿಸಿ, ಘಟನೆಗೆ ಕೇಸರಿ ಶಾಲು ಹಂಚಿದ ವರದಿಗಳೂ ಇವೆ. ಅದರ ಬಗ್ಗೆಯೂ ಕೇಳಬೇಕು ಅಂದ್ರು. ಪರಿಶೀಲಿಸುವುದಾಗಿ ಸಿಜೆ ಹೇಳಿದರು. ಇದನ್ನೂ ಓದಿ: ಹಿಜಬ್ ಹೋರಾಟಗಾರ್ತಿ ಅಣ್ಣನ ಮೇಲೆ ಹಲ್ಲೆ

    ಕಾಲೇಜು ಆಡಳಿತ ಪರವಾಗಿ ಸಜ್ಜನ್ ಪೂವಯ್ಯ ವಾದ ಮಂಡಿಸಿ, 2014ರಲ್ಲಿ ಸಿಡಿಸಿಗೆ ಅಧಿಕಾರ ನೀಡಲಾಗಿದೆ. 5 ಮಕ್ಕಳಿಗೆ ಮಾತ್ರ ಸಮಸ್ಯೆ ಆಗಿದೆ. ಉಡುಪಿ ಜಿಲ್ಲೆಯಲ್ಲಿ 12 ಸರ್ಕಾರಿ ಶಾಲೆಗಳಿದ್ದು ಅಲ್ಲಿ ಹಿಜಬ್‍ಗೆ ಅವಕಾಶ ನೀಡಲಾಗಿದೆ. ಈ ನಿರ್ಧಾರವನ್ನು ಆಯಾ ಶಾಲಾ ಆಡಳಿತ ಮಂಡಳಿಗಳೇ ನಿರ್ಧಾರ ಮಾಡಿವೆ ಎಂದರು. ವಾದ ಆಲಿಸಿದ ಹೈಕೋರ್ಟ್ ಪೂರ್ಣ ಪೀಠ ನಾಳೆ ಮಧ್ಯಾಹ್ನಕ್ಕೆ ಮುಂದೂಡಿತು. ಅಲ್ಲದೆ, ಹಿಜಬ್ ಕುರಿತ ಅಂತಿಮ ಆದೇಶದವರೆಗೆ `ಎಲ್ಲೆಲ್ಲಿ ಸಮವಸ್ತ್ರ ಪಾಲನೆ ಕಡ್ಡಾಯ ಇದೆಯೋ ಅಲ್ಲಿ ಸಮವಸ್ತ್ರ’ವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕಡ್ಡಾಯವಿಲ್ಲದ ಕಡೆ ಯಾವುದೇ ತೊಂದರೆ ಇಲ್ಲ ಅಂತ ಸಿಜೆ ರಿತುರಾಜ್ ಅವಸ್ತಿ ನೇತೃತ್ವದ ತ್ರಿಸದಸ್ಯ ಪೀಠ ಮತ್ತೊಮ್ಮೆ ಸ್ಪಷ್ಟಪಡಿಸಿತು.