Tag: campaign

  • ಹುಟ್ಟೂರಿಗೆ ನೆರವಾದ ಸೋನು ಸೂದ್-1,000 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ

    ಹುಟ್ಟೂರಿಗೆ ನೆರವಾದ ಸೋನು ಸೂದ್-1,000 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ

    ಚಂಡೀಗಢ: ಕೊರೊನಾ ಸಂಕಷ್ಟದ ಕಾಲದಲ್ಲಿ ಅಭಿಮಾನಿಗಳ ಪಾಲಿಗೆ ರಿಯಲ್ ಹೀರೋ ಆಗಿರುವ ಸೋನು ಸೂದ್ ಅವರು ಹೆಣ್ಣು ಮಕ್ಕಳಿಗೆ ಸೈಕಲ್ ವಿತರಣೆ ನೀಡುವ, ಮೊಗಾ ಕಿ ಭೇಟಿ (ಮೊಗಾದ ಮಗಳು) ಹೆಸರಿನ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ.

    ಸಹೋದರಿ ಮಾಳವಿಕಾ ಸೂದ್ ಜೊತೆ ಸೇರಿ ಸೋನು ಸೂದ್ ತಮ್ಮ ಹುಟ್ಟೂರಾದ ಪಂಜಾಬ್‍ನ ಮೊಗಾದಲ್ಲಿ, 1,000 ವಿದ್ಯಾರ್ಥಿನಿಯರು ಹಾಗೂ ಸಾಮಾಜಿಕ ಕಾರ್ಯಕರ್ತೆಯರಿಗೆ ಸೈಕಲ್‍ಗಳನ್ನು ನೀಡಿದ್ದಾರೆ. ಇದರಿಂದ ಸುಮಾರು 40-45 ಗ್ರಾಮದ ವಿದ್ಯಾರ್ಥಿನಿಯರಿಗೆ ಸಹಾಯ ಆಗಿದೆ. ಸೂದ್ ಚಾರಿಟಿ ಫೌಂಡೇಶನ್‍ನೊಂದಿಗೆ ಮಾಳವಿಕಾ ಸೂದ್ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕತ್ರಿನಾ ಕೈಫ್ ವಜ್ರ ಖಚಿತ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ?

    ಈ ಯೋಜನೆ ಕುರಿತಾಗಿ ಮಾತನಾಡಿದ ಸೋನು ಸೂದ್, ಮನೆಯಿಂದ ಶಾಲೆಗೆ ಹೋಗುವುದು ತುಂಬಾ ದೂರವಾಗಿದ್ದು, ವಿದ್ಯಾರ್ಥಿನಿಯರು ತೀವ್ರ ತೊಂದರೆಯಾಗುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸಲು, ಸಹಾಯ ಮಾಡಲು 8ನೇ ತರಗತಿಯಿಂದ 12ನೇ ತರಗತಿವರೆಗಿನ ಅರ್ಹ ವಿದ್ಯಾರ್ಥಿನಿಯರಿಗೆ ಸೈಕಲ್‍ಗಳನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಅಭಿಯಾನದಲ್ಲಿ ಈ ಸೈಕಲ್‍ಗಳನ್ನು ಸಾಮಾಜಿಕ ಕಾರ್ಯಕರ್ತರಿಗೂ ನೀಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸೋನು ಸೂದ್‌ರಿಂದ ರೈಫಲ್‌ ಗಿಫ್ಟ್‌ ಪಡೆದಿದ್ದ ಶೂಟರ್‌ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ಸೋನು ಸೂದ್ ಅವರು ಸಾಮಾಜಿಕ ಕೆಲಸಗಳು ಒಂದೆರಡಲ್ಲ. ಕೋವಿಡ್ ಮೊದಲನೆ ಅಲೆ ಕಾಣಿಸಿಕೊಂಡಾಗ ಸೋನು ಸಾಮಾಜಿಕ ಕೆಲಸ ಆರಂಭಿಸಿದ್ದರು. ಆ ಬಳಿಕ ಅವರು ಒಂದಾದ ಮೇಲೆ ಒಂದರಂತೆ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತ ನೊಂದವರ ಪಾಲಿನ ದೇವರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

  • ಕೋವಿಡ್‌ ಎರಡನೇ ಲಸಿಕಾ ಅಭಿಯಾನದಲ್ಲಿ ಬೆಂಗಳೂರು ನಗರ ಜಿಲ್ಲೆ ರಾಜ್ಯಕ್ಕೆ ಪ್ರಥಮ

    ಕೋವಿಡ್‌ ಎರಡನೇ ಲಸಿಕಾ ಅಭಿಯಾನದಲ್ಲಿ ಬೆಂಗಳೂರು ನಗರ ಜಿಲ್ಲೆ ರಾಜ್ಯಕ್ಕೆ ಪ್ರಥಮ

    ಬೆಂಗಳೂರು:  ಎರಡನೇ ಸುತ್ತಿನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಲ್ಲಿ ಬೆಂಗಳೂರು ನಗರ ಜಿಲ್ಲೆಯು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಬಿಬಿಎಂಪಿ ಹೊರತುಪಡಿಸಿ 10,34,184 ಜನರಿಗೆ ಲಸಿಕೆ ನೀಡಿದ್ದು, ನೂರಕ್ಕೆ ನೂರರಷ್ಟು ಗುರಿ ಸಾಧಿಸಿದ ಜಿಲ್ಲೆಯಾಗಿದೆ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಕಂದಾಯ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲೆಯಲ್ಲಿ ಮೊದಲ ಸುತ್ತಿನಲ್ಲಿ 13,26,255 ಜನರಿಗೆ ಲಸಿಕೆ ಹಾಕಲಾಗಿದ್ದು, ಶೇ.129 ಸಾಧನೆಯಾಗಿದೆ. ಇಡೀ ರಾಜ್ಯದಲ್ಲಿ ಗುರಿ ಮೀರಿ ಸಾಧನೆಗೈದ ಏಕೈಕ ಜಿಲ್ಲೆಯಾಗಿದೆ ಎಂದರು. ಇದನ್ನೂ ಓದಿ: ಮತಾಂತರ ಕಾಯ್ದೆ ವಿಧಾನಸಭೆಯಲ್ಲಿ ಪಾಸ್: ಕಟೀಲ್ ಸ್ವಾಗತ

    ಆರೋಗ್ಯ ಇಲಾಖೆಯ ವೈದ್ಯರು-ಸಿಬ್ಬಂದಿ, ಜಿಲ್ಲಾ ಪಂಚಾಯತ್, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಮತ್ತಿತರ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಹಾಗೂ ಪ್ರತಿ ಗ್ರಾಮ ಪಂಚಾಯಿತಿಗಳ ಮನೆ ಮನೆಗೆ ಹೋಗಿ ಲಸಿಕೆ ಹಾಕಿಸಿದ ಕಾರಣ ಈ ಯಶಸ್ಸು ಸಾಧಿಸಲು ಸಾಧ್ಯವಾಗಿದೆಯೆಂದು ತಿಳಿಸಿದ್ದಾರೆ. ಇದನ್ನೂ ಓದಿ:  ಗೋವು ನಮಗೆ ತಾಯಿ, ಪವಿತ್ರ: ನರೇಂದ್ರ ಮೋದಿ

    ಹೊಸ ವರ್ಷದ ಹೊಸ್ತಿಲಲ್ಲಿರುವ ನಾವುಗಳು ಸಂಭ್ರಮ ಆಚರಿಸಲು ಮುಂದಾಗಿದ್ದು, ಸಾರ್ವಜನಿಕರು ಅನಾವಶ್ಯಕವಾಗಿ ಗುಂಪು ಸೇರುವುದನ್ನು ಕಡಿಮೆ ಮಾಡಬೇಕು. ಎರಡು ಡೋಸ್ ಮುಗಿದಿದೆಯೆಂದು ಮೈಮರೆಯದೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರ

  • BJP, RSS ವಿರುದ್ಧ ಹೋರಾಡಲು ಪಕ್ಷದಲ್ಲಿ ಏಕತೆ ಇರಬೇಕು: ಸೋನಿಯಾ ಗಾಂಧಿ

    BJP, RSS ವಿರುದ್ಧ ಹೋರಾಡಲು ಪಕ್ಷದಲ್ಲಿ ಏಕತೆ ಇರಬೇಕು: ಸೋನಿಯಾ ಗಾಂಧಿ

    ನವದೆಹಲಿ: ಬಿಜೆಪಿ ಮತ್ತು ಆರ್​ಎಸ್​ಎಸ್ ವಿರುದ್ಧವಾಗಿ ಹೋರಾಡಲು ನಮ್ಮ ಪಕ್ಷದಲ್ಲಿ ಏಕತೆ ಇರಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

    ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಗಳ ಅಧ್ಯಕ್ಷರು ಮತ್ತು ಇತರ ಹಿರಿಯ ನಾಯಕರೊಂದಿಗೆ ಸಭೆ ನಡೆಸಿ ಮಾತನಾಡಿದ ಸೋನಿಯಾ ಗಾಂಧಿ, ಬಿಜೆಪಿ ಮತ್ತು ಆರ್​ಎಸ್​ಎಸ್ ವಿರುದ್ಧ ಹೋರಾಡಲು ಪಕ್ಷದಲ್ಲಿ ಶಿಸ್ತು ಮತ್ತು ಏಕತೆ ತುಂಬ ಮುಖ್ಯ. ಬಿಜೆಪಿ ಮತ್ತು ಆರ್​ಎಸ್‍ಎಸ್‍ನ ಕುಟಿಲತೆಯ ವಿರುದ್ಧ ಸೈದ್ಧಾಂತಿಕವಾಗಿ ಹೋರಾಟ ಮಾಡಬೇಕು. ಅವರು ಹೇಳುತ್ತಿರುವುದು ಸುಳ್ಳು ಎಂಬುದನ್ನು ಜನರಿಗೆ ತೋರಿಸಿಕೊಡಬೇಕು. ಇದನ್ನೆಲ್ಲ ನಾವು ದೃಢವಿಶ್ವಾಸದಿಂದ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ:  ಕುಮಾರಸ್ವಾಮಿಯನ್ನು ಆನೆಯನ್ನಾಗಿ ಮಾಡಿದ್ದು ನಾವು: ಜಮೀರ್

    ಈ ದೇಶ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಎಐಸಿಸಿ ಪ್ರತಿದಿನ ಬಹಳ ಮುಖ್ಯವಾದ ಮತ್ತು ವಿವರವಾದ ಪ್ರಕಟಣೆಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ ಅವು ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಕಾರ್ಯಕರ್ತರಿಗೆ ತಲುಪುತ್ತಿದೆ ಎನ್ನುವ ಕುರಿತಾಗಿ ನನಗೆ ನಂಬಿಕೆಯಿಲ್ಲ. ಹಾಗೇ ಕಾಂಗ್ರೆಸ್ ನೀತಿಯ ಕುರಿತಂತೆ ನಮ್ಮ ರಾಜ್ಯಮಟ್ಟದ ನಾಯಕರಲ್ಲೂ ಸ್ಪಷ್ಟತೆ, ಒಗ್ಗಟ್ಟಿನ ಕೊರತೆಯಿದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೈಲಾಗದವನು ಮೈ ಪರಚಿಕೊಂಡ ಹಾಗೆ, ಜಮೀರ್ ಸ್ಥಿತಿ: ಹೆಚ್‍ಡಿಕೆ ಲೇವಡಿ 

    2022ರ ಚುನಾವಣೆಯಲ್ಲಿ ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್, ಗೋವಾ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದಲ್ಲಿನ ಸ್ಥಿರತೆ ಕಾಪಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ.

  • 2ಎ ಮೀಸಲಾತಿ ಹೋರಾಟ ಮುಂದುವರಿಯುತ್ತದೆ: ಯತ್ನಾಳ್

    2ಎ ಮೀಸಲಾತಿ ಹೋರಾಟ ಮುಂದುವರಿಯುತ್ತದೆ: ಯತ್ನಾಳ್

    ವಿಜಯಪುರ: 2ಎ ಮೀಸಲಾತಿ ಹೋರಾಟ ಮುಂದುವರಿಯುತ್ತದೆ. ಈ ಹೋರಾಟಕ್ಕೆ ಯಾರಾದರೂ ಬರಲಿ ಬಿಡಲಿ. ನಮ್ಮ ಹೋರಾಟ ನಡೆಯುತ್ತದೆ ಎಂದು ವಿಜಯಪುರ ನಗರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

    ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ನಾವು ಪಂಚಮಸಾಲಿ ಸಮಾಜ ಅಷ್ಟೇಯಲ್ಲಾ ಅದಿ ಬಣಜಿಗ ಕೂಡು ಒಕ್ಕಲಿಗ, ಕುರುಬ ಸಮಾಜ ಹಾಗೂ ವಾಲ್ಮೀಕಿ ಸಮಾಜ, ಮಡಿವಾಳ ಸಮಾಜಗಳ ಬೇಡಿಕೆ ಈಡೇರಿಕೆಗೆ ಬೆಂಬಲಿಸಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಕನ್ನಡಿಗರು ಎಂಬುದನ್ನು ಸಿ.ಟಿ.ರವಿ ಮರೆತು ಭಾರತೀಯರಾಗಿದ್ದಾರೆ: ಹೆಚ್‍ಡಿಕೆ

    ನಿನ್ನೆ ಹುಬ್ಬಳ್ಳಿಯ ಖಾಸಗಿ ಹೊಟೇಲಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿ ದ್ದೇವೆ. ಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮೋದಿ ನೀಡಿದ್ದಾರೆ. ಪ್ರಧಾನಿಗಳ ಈ ಐತಿಹಾಸಿಕ ತಿದ್ದುಪಡಿಗೆ ಸ್ವಾಗತ ಮಾಡುತ್ತೇನೆ. ಮೀಸಲಾತಿ ವಿಚಾರವಾಗಿ ನಾನು ಸಿಎಂ ಬೊಮ್ಮಾಯಿ ಅವರಿಗೆ ಒತ್ತಾಯ ಮಾಡುವೆ. ಈಗಾ ಯಾವುದೇ ನೆಪ ಹೇಳಲು ಬರಲ್ಲಾ. ಆದಷ್ಟು ಬೇಗಾ ಪಂಚಮಸಾಲಿ ಸಮಾಜ, ಆದಿ ಬಣಜಿಗ, ಕೂಡು ಒಕ್ಕಲಿಗ ಸಮಾಜಗಳಿಗೆ 2ಎ ಮೀಸಲಾತಿ ನೀಡಬೇಕು. ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದಿದ್ದಾರೆ. ಇದನ್ನೂ ಓದಿ: ಕುತ್ತಿಗೆಯಲ್ಲಿ ನಿಜವಾದ ಹಾವು, ಅಮರ ಹಳೆ ನೆನಪು: ಜಗ್ಗೇಶ್

    ಎಸ್ಸಿ ಸಮಾಜದ ಮೀಸಲಾತಿಯನ್ನು ಮೂರು ಪ್ರತಿಶತದಿಂದ 7.5 ಪ್ರತಿಶತಕ್ಕೆ ಏರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಅಲ್ಲದೆ ಇವುಗಳ ಜೊತೆ ಮಡಿವಾಳ ಸಮಾಜ, ಹಡಪದ ಸಮಾಜ, ಗಂಗಾ ಮತಸ್ಥ, ತಳವಾರ, ಕೋಳಿ ಸಮಾಜಕ್ಕೂ ಎಸ್ಟಿಗೆ ಸೇರಿಸಬೇಕು. ಈ ನಿಟ್ಟಿನಲ್ಲಿ ಸಿಎಂ ಅವರು ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಈ ಹೋರಾಟಕ್ಕೆ ಯಾರಾದರೂ ಬರಲಿ ಬಿಡಲಿ. ನಮ್ಮ ಹೋರಾಟ ನಡೆಯುತ್ತದೆ. ಆಯಾ ಸಮುದಾಯದ ನಾಯಕರು ಶಾಸಕರು ಬರದಿದ್ದರೆ ಮುಂದಿನ ಚುನಾವಣೆಯಲ್ಲಿ ಜನರು ಅವರಿಗೆ ಪಾಠ ಕಲಿಸುತ್ತಾರೆ ಎಂದಿದ್ದಾರೆ.

  • ರಾಯಚೂರಲ್ಲಿ ಗಾಯಕಿ ಮಂಗ್ಲಿ ಪ್ರಚಾರ- ಮುಗಿಬಿದ್ದ ಅಭಿಮಾನಿಗಳು

    ರಾಯಚೂರಲ್ಲಿ ಗಾಯಕಿ ಮಂಗ್ಲಿ ಪ್ರಚಾರ- ಮುಗಿಬಿದ್ದ ಅಭಿಮಾನಿಗಳು

    ರಾಯಚೂರು: ರಾಬರ್ಟ್ ಸಿನಿಮಾದ ಕಣ್ಣೇ ಅದಿರಿಂದಿ ಹಾಡಿನ ಮೂಲಕ ಪ್ರಸಿದ್ಧಿ ಪಡೆದಿರುವ, ಮಂಗ್ಲಿ ಎಂದೇ ಜನಪ್ರಿಯರಾಗಿರುವ ಗಾಯಕಿ ಸತ್ಯವತಿ ರಾಥೋಡ್ ಇಂದು ಬಿಜೆಪಿ ಅಭ್ಯರ್ಥಿ ಪ್ರತಾಪ್‍ಗೌಡ ಪಾಟೀಲ್ ಪರ ಪ್ರಚಾರ ನಡೆಸಿದ್ದಾರೆ.

    ಮಸ್ಕಿ ಉಪಚುನಾವಣೆ ಹಿನ್ನೆಲೆ ಪ್ರತಾಪ್‍ಗೌಡ ಪಾಟೀಲ್ ಪರ ಮಂಗ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ಅಡವಿಬಾವಿ ತಾಂಡಾ, ಹಡಗಲಿತಾಂಡಾ ಹಾಗೂ ಮಸ್ಕಿ ಭರ್ಜರಿ ಮತಯಾಚನೆ ಮಾಡಿದರು. ಈ ವೇಳೇ ಅಭಿಮಾನಿಗಳು ಮುಗಿಬಿದ್ದಿದ್ದು, ನೂಕುನುಗ್ಗಲಿನ ಮಧ್ಯೆಯೇ ನೆಚ್ಚಿನ ಗಾಯಕಿಯನ್ನು ಕಣ್ತುಂಬಿಕೊಂಡಿದ್ದಾರೆ. ಬಂಜಾರ ಸಮುದಾಯದ ಮತಗಳನ್ನು ಮಂಗ್ಲಿ ಸೆಳೆದಿದ್ದು, ತಾಂಡಾಗಳು ಹಾಗೂ ಮಸ್ಕಿ ಪಟ್ಟಣದಲ್ಲಿ ಭರ್ಜರಿ ಪತ ಬೇಟೆ ನಡೆಸಿದ್ದಾರೆ.

    ಈ ವೇಳೆ ಮಾತನಾಡಿದ ಗಾಯಕಿ, ಪ್ರತಾಪ್ ಗೌಡ ಪಾಟೀಲ್ ರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಬೇಕು. ಇಲ್ಲಿಗೆ ಬಂದಿದ್ದು ನನಗೆ ತುಂಬಾ ಖುಷಿಯಾಗಿದೆ. ಕಣ್ಣೇ ಅದಿರಿಂದಿ ಹಾಡು ನನಗೆ ಇಲ್ಲಿಗೆ ತಂದು ನಿಲ್ಲಿಸಿದೆ. ಎಲ್ಲೋ ಹುಟ್ಟಿದ ನನಗೆ ನೀವೂ ಗೌರವಿಸಿದ್ದು, ಯಾವುದೋ ಜನ್ಮದ ಪುಣ್ಯ. ಹಾಡು ಯಶಸ್ವಿ ಆಗಿದಕ್ಕೆ ಡಿ ಬಾಸ್ (ದರ್ಶನ್) ಹಾಗೂ ಎಲ್ಲರಿಗೂ ನನ್ನ ನಮಸ್ಕಾರ. ನಟ ಯಶ್ ಅವರ ಸಂದರ್ಶನ ಮಾಡಿದ್ದೇನೆ ನೋಡಿದ್ರಾ ಎಂದು ಪ್ರಶ್ನಿಸಿದ್ದಾರೆ.

    ನೀವು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ನಾನು ಪ್ರಧಾನಿ ಮೋದಿ ಅಭಿಮಾನಿ, ಯಡಿಯೂರಪ್ಪನವರ ಮಗ ವಿಜಯೇಂದ್ರ ಅಣ್ಣನಿಗೂ ನಮಸ್ಕಾರ. ಯಾರೂ ಮರೆಯದೇ ಬಿಜೆಪಿಗೆ ಮತ ನೀಡಿ ಎಂದು ಮಂಗ್ಲಿ ಮನವಿ ಮಾಡಿದರು. ಮಂಗ್ಲಿ ಅವರು ಭಾಷಣ ಮಾಡುತ್ತಿದ್ದಂತೆ ನೆರೆದಿದ್ದ ಜನ ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

  • ಪ್ರಚಾರ ವೇಳೆ ಬಟ್ಟೆ, ಪಾತ್ರೆ ತೊಳೆದು ಕೊಟ್ಟ ಅಭ್ಯರ್ಥಿ

    ಪ್ರಚಾರ ವೇಳೆ ಬಟ್ಟೆ, ಪಾತ್ರೆ ತೊಳೆದು ಕೊಟ್ಟ ಅಭ್ಯರ್ಥಿ

    ವಾಷಿಂಗ್ ಮಷೀನ್ ಕೊಡುವುದಾಗಿ ಭರವಸೆ

    ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಎಐಎಡಿಎಂಕೆ ಅಭ್ಯರ್ಥಿಯೊಬ್ಬರು ಮಹಿಳೆಯ ಬಟ್ಟೆ ಒಗೆದುಕೊಟ್ಟಿದ್ದಾರೆ. ಹಾಗೇ ಚುನಾವಣೆಯಲ್ಲಿ ಗೆದ್ದರೆ ವಾಷಿಂಗ್ ಮಷೀನ್ ಕೊಡುವ ಭರವಸೆಯನ್ನು ನೀಡುವ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

    ಕಾತಿರವನ್(50) ನಾಗಪಟ್ಟಿಣಂ ಟೌನ್ ಕಾರ್ಯದರ್ಶಿಯಾಗಿದ್ದಾರೆ. ಅವರು ಪಕ್ಷಕ್ಕಾಗಿ ಮಾಡಿದ ಕಾರ್ಯವನ್ನು ಗುರುತಿಸಿ ಟಿಕೆಟ್ ನೀಡಲಾಗಿದ್ದು, ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

    ನಾಗಪಟ್ಟಣಂ ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ತಂಗಾ ಕಾತಿರವನ್ ನಾಗೋರ್ ಬಳಿ ಪ್ರಚಾರ ಮಾಡಿದ್ದಾರೆ. ಇಲ್ಲಿ ವಂದಿ ಪೆಟ್ಟೈ ಏರಿಯಾದಲ್ಲಿ ಮನೆಮನೆಗೆ ಹೋಗಿ ಮತಯಾಚನೆ ಮಾಡಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ತಮ್ಮ ಕುಟುಂಬಸ್ಥರ ಬಟ್ಟೆಗಳನ್ನು ತೊಳೆಯುತ್ತಿದ್ದರು. ಇದನ್ನು ಗಮನಿಸಿದ ಕಾತಿರವನ್ ಮಹಿಳೆ ಬಳಿ ಹೋಗಿ ನಾನು ಬಟ್ಟೆ ತೊಳೆದು ಕೊಡುತ್ತೇನೆ ಎಂದು ಹೇಳಿ ರಸ್ತೆಯಲ್ಲಿ ಕುಳಿತು ಬಟ್ಟೆಗಳನ್ನು ಒಗೆದಿದ್ದಾರೆ. ಹಾಗೆ ಪಕ್ಕದಲ್ಲಿಯೇ ಇದ್ದ ಕೆಲ ಪಾತ್ರೆಗಳನ್ನು ತೊಳೆದಿದ್ದಾರೆ.

    ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ವಾಷಿಂಗ್ ಮಷೀನ್ ವಿತರಿಸುವ ಭರವಸೆ ನೀಡಿರುವುದರಿಂದ ಅದನ್ನು ಸೂಚಿಸಲು ಬಟ್ಟೆ ತೊಳೆದಿದ್ದೇನೆ. ನಮ್ಮ ಅಮ್ಮಾ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಕೊಟ್ಟ ಮಾತಿನಂತೆ ವಾಷಿಂಗ್ ಮಷೀನ್ ನೀಡಿತ್ತೇವೆ. ಸರ್ಕಾರ ಇದನ್ನು ನೋಡಿಕೊಳ್ಳುತ್ತದೆ ಎಂದು ಕಾತಿರವನ್ ಹೇಳಿದ್ದಾರೆ.

  • ಶುದ್ಧ ಕನ್ನಡ ನಾಮಫಲಕ ಜಾಗೃತಿ ಅಭಿಯಾನ – ಬೆಂಗಳೂರಿನಲ್ಲಿ ಕನ್ನಡ ಅಕ್ಷರದ ಕಾರು ಓಡಾಟ

    ಶುದ್ಧ ಕನ್ನಡ ನಾಮಫಲಕ ಜಾಗೃತಿ ಅಭಿಯಾನ – ಬೆಂಗಳೂರಿನಲ್ಲಿ ಕನ್ನಡ ಅಕ್ಷರದ ಕಾರು ಓಡಾಟ

    ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಕಾಯಕ ವರ್ಷಾಚರಣೆ ಹೆಸರಿನಲ್ಲಿ ಒಂದು ವರ್ಷದ ಯೋಜನೆ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕನ್ನಡ ನಾಮಫಲಕ ಜಾಗೃತಿ ಅಭಿಯಾನ ರಥಕ್ಕೆ ಪ್ರಾಧಿಕಾರದ ಅಧ್ಯಕ್ಷರಾದ ನಾಗಾಭರಣ, ಆಡಳಿತಗಾರ ಗೌರವ್ ಗುಪ್ತಾ, ಆಯುಕ್ತರಾದ ಮಂಜುನಾಥ್ ಪ್ರಸಾದ್ ಚಾಲನೆ ನೀಡಿದರು.

    ಕನ್ನಡ ಬಾವುಟ ಕೆಂಪು ಹಾಗೂ ಹಳದಿ ಬಣ್ಣದಿಂದ ಕಂಗೊಳಿಸುತ್ತಿರುವ ಕಾರಲ್ಲಿ ಕನ್ನಡದ ಘೋಷಣೆ, ಕನ್ನಡದ ಮಹತ್ವವನ್ನು ಸಾರಲಾಗಿದೆ. ರಾಜಧಾನಿ ಬೆಂಗಳೂರಲ್ಲಿ ಅನ್ಯ ಭಾಷೆಯ ಜನರಿಗೂ ಕನ್ನಡ ಲಿಪಿ, ಕನ್ನಡ ಸಂಸ್ಕೃತಿಯ ಮಾಹಿತಿಯನ್ನೂ ಅಭಿಯಾನದಲ್ಲಿ ಅರಿವು ಮೂಡಿಸಲಾಗುತ್ತದೆ.

    ಬಳಿಕ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಆದರೆ ಕನ್ನಡೇತರರೂ ಇಲ್ಲಿದ್ದಾರೆ. ನಗರಕ್ಕೆ ವಿಶಿಷ್ಟ ಪರಂಪರೆ ಇದೆ. ಒಗ್ಗೂಡಿ ಬೆಳೆಯುವಾಗ ಎಲ್ಲರನ್ನು ಭಾಷೆ ಒಗ್ಗೂಡಿಸಬೇಕು. ಅದಕ್ಕಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಶುದ್ಧ ಕನ್ನಡ ನಾಮಫಲಕ ಅಭಿಯಾನ ಹಮ್ಮಿಕೊಂಡಿದ್ದೇವೆ. ಇದು ಅಂಗಡಿ ಮುಂಗಟ್ಟು, ನಾಮಫಲಕಕ್ಕೆ ಸೀಮಿತ ಅಲ್ಲ ಅಕ್ಷರದಾಸೋಹವೂ ನಡೆಯಬೇಕಿದೆ. ಮುಖ್ಯಮಂತ್ರಿಗಳು ಈ ವರ್ಷವನ್ನು ಕನ್ನಡ ಕಾಯಕ ವರ್ಷ ಎಂದು ಘೋಷಿಸಿದ್ದು, ಅದರ ಭಾಗವಾಗಿ ಈ ಅಭಿಯಾನ ನಡೆಯುತ್ತಿದೆ ಎಂದರು.

    ಆಯುಕ್ತರಾದ ಮಂಜುನಾಥ್ ಪ್ರಸಾದ್ ಮಾತನಾಡಿ, ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ಕೊಡಬೇಕು. ಇದರಲ್ಲಿ ಶೇ. 67ರಷ್ಟು ಕನ್ನಡ ಭಾಷೆ ಇರಬೇಕು. ಉಳಿದ ಭಾಷೆ ಬೇರೆ ಪ್ರಮಾಣದಲ್ಲಿ ಇರಬಹುದು. ಇದಕ್ಕೆ ಸೂಕ್ತ ಕಾನೂನು ಇಲ್ಲದಿದ್ದ ಕಾರಣ, ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಮುಂದುವರಿಯಲು ಸಾಧ್ಯವಾಗಿರಲಿಲ್ಲ. ಈಗ ಜಾಹಿರಾತು ಬೈಲಾದಲ್ಲೇ ಈ ಅಂಶವನ್ನು ಜಾರಿಗೆ ತರಲಾಗಿದೆ. ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗಿತ್ತದೆ. ಅಧ್ಯಕ್ಷರು ಹೇಳಿದ್ದಂತೆ, ಪಾಲಿಕೆ ನಾಮಫಲಕಗಳಲ್ಲೂ ಅಕ್ಷರ ತಪ್ಪಾಗಿರುತ್ತವೆ. ಇದನ್ನು ಪ್ರತೀ ವಲಯದ ಅಧಿಕಾರಿಗಳಿಗೆ ಸರಿಪಡಿಸಲು ತಿಳಿಸಲಾಗಿದೆ ಎಂದರು.

  • 30ಕ್ಕೂ ಹೆಚ್ಚು ದೇಶಗಳ ಅನಿವಾಸಿ ಕನ್ನಡಿಗರ ಟ್ವಿಟ್ಟರ್ ಅಭಿಯಾನ

    30ಕ್ಕೂ ಹೆಚ್ಚು ದೇಶಗಳ ಅನಿವಾಸಿ ಕನ್ನಡಿಗರ ಟ್ವಿಟ್ಟರ್ ಅಭಿಯಾನ

    ಬೆಂಗಳೂರು: ಇದೇ ಮೊದಲ ಬಾರಿಗೆ ವಿಶ್ವದಾದ್ಯಂತವಿರುವ ಮೂವತ್ತಕ್ಕೂ ಹೆಚ್ಚು ದೇಶಗಳ ನೂರಕ್ಕೂ ಹೆಚ್ಚು ಅನಿವಾಸಿ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಒಂದೇ ದಿನ, ಒಂದೇ ಧ್ವನಿಯೊಂದಿಗೆ ಟ್ವಿಟ್ಟರ್ ಮತ್ತು ಇಮೇಲ್ ಮೂಲಕ ಕರ್ನಾಟಕ ಸರಕಾರಕ್ಕೆ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸಿ ಇಂದು ಅಭಿಯಾನ ನಡೆಸಲಾಯಿತು.

    ‘ಎನ್‍ಆರ್‍ಐ ಅಪೀಲ್ ಡೇ’ #NRIappealDay ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಜನವರಿ 2ನ್ನು ಅಂತರಾಷ್ಟ್ರೀಯ ಅನಿವಾಸಿ ಕನ್ನಡಿಗರ ಮನವಿ ದಿನವಾಗಿ ಆಚರಿಸಲಾಯಿತು. ಅಭಿಯಾನದಲ್ಲಿ ಅಮೆರಿಕ, ಯುಎಇ, ಬ್ರಿಟನ್, ಆಸ್ಟ್ರೇಲಿಯಾ, ಕತಾರ್, ಕುವೈಟ್, ಇಟಲಿ, ಜರ್ಮನಿ, ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡಾ, ಇಥಿಯೋಪಿಯ, ಡೆನ್ಮಾರ್ಕ್, ನೈಜೀರಿಯಾ, ಹಾಲೆಂಡ್, ಓಮನ್, ಬಹರೈನ್, ಇಂಡೋನೇಷಿಯಾ, ಸೌದಿ ಅರೇಬಿಯಾ, ಇಸ್ರೇಲ್, ಈಜಿಪ್ಟ್, ಸ್ವಿಜಲ್ರ್ಯಾಂಡ್, ಘಾನ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಹಾಂಕಾಂಗ್, ಸಿಂಗಪೂರ್, ಸ್ಕಾಟ್ಲ್ಯಾಂಡ್, ನಾರ್ವೆ, ನೆದಲ್ರ್ಯಾಂಡ್, ಸೌತ್ ಕೊರಿಯಾ ಸೇರಿದಂತೆ ಇನ್ನಿತರ ದೇಶದ ನೂರಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಭಾಗವಹಿಸಿದ್ದವು.

    ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಕೂಡಲೇ ಉಪಾಧ್ಯಕ್ಷರನ್ನ ನೇಮಿಸಬೇಕು, ಉಪಾಧ್ಯಕ್ಷ ಸ್ಥಾನಕ್ಕೆ ಅನಿವಾಸಿಗಳ ಕಷ್ಟ ಬಲ್ಲ ಒಬ್ಬ ಅನಿವಾಸಿ ಕನ್ನಡಿಗರನ್ನೇ ನೇಮಿಸಬೇಕು. ನೆನೆಗುದಿಗೆ ಬಿದ್ದಿರುವ ಎನ್‍ಆರ್‍ಕೆ ಕಾರ್ಡ್ ಯೋಜನೆಯನ್ನು ತ್ವರಿತವಾಗಿ ಜಾರಿಗೆಗೊಳಿಸಬೇಕು. ಹೆಚ್ಚು ಅನಿವಾಸಿ ಕನ್ನಡಿಗರ ಸಾಂದ್ರತೆ ಇರುವ ದೇಶಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡಿ ಕನ್ನಡ ಪಾಠಶಾಲೆ ನಡೆಸಲು ವ್ಯವಸ್ಥೆ ಮಾಡಬೇಕು ಎಂಬ ನಾಲ್ಕು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರವನ್ನು ಆಗ್ರಹಿಸಲಾಯಿತು.

  • ಕರ್ನಾಟಕ ಸರ್ಕಾರದ ಗಮನ ಸೆಳೆಯಲು ವಿಶ್ವಾದ್ಯಂತ ಒಗ್ಗಟ್ಟಾದ ಅನಿವಾಸಿ ಕನ್ನಡಿಗರು

    ಕರ್ನಾಟಕ ಸರ್ಕಾರದ ಗಮನ ಸೆಳೆಯಲು ವಿಶ್ವಾದ್ಯಂತ ಒಗ್ಗಟ್ಟಾದ ಅನಿವಾಸಿ ಕನ್ನಡಿಗರು

    ಬೆಂಗಳೂರು: ಸತತ ಕೋರಿಕೆ, ಹಲವಾರು ಮನವಿಗಳ ನಂತರವೂ ಹಲವು ವರ್ಷಗಳಿಂದ ಕಡೆಗಣಿಸಲ್ಪಟ್ಟು, ಸ್ಪಂದನೆ ಸಿಗದೇ ಹೋದರೆ ಗಮನ ಸೆಳೆಯ ಬೇಕಾದರೆ ವಿಭಿನ್ನ ರೀತಿಯ ಪ್ರಯತ್ನ ಮಾಡಬೇಕಾಗುತ್ತದೆ. ಅಂತದ್ದೇ ಒಂದು ಪ್ರಯತ್ನಕ್ಕೆ ವಿಶ್ವದಾದ್ಯಂತ ಇರುವಂತಹ ಅನಿವಾಸಿ ಕನ್ನಡಿಗರು ಕೈಹಾಕಿದ್ದಾರೆ.

    ಇದೇ ಮೊದಲ ಬಾರಿಗೆ ವಿಶ್ವದಾದ್ಯಂತವಿರುವ ಮೂವತ್ತಕ್ಕೂ ಹೆಚ್ಚು ದೇಶಗಳ ನೂರಕ್ಕೂ ಹೆಚ್ಚು ಅನಿವಾಸಿ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಒಂದೇ ದಿನ ಒಂದೇ ಧ್ವನಿಯೊಂದಿಗೆ ಟ್ವಿಟ್ಟರ್‌ ಮತ್ತು ಇಮೇಲ್ ಮೂಲಕ ಕರ್ನಾಟಕ ಸರಕಾರಕ್ಕೆ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸುವ ಅಭಿಯಾನವನ್ನು ಜನವರಿ 2 ರಂದು ಮಧ್ಯಾಹ್ನ ನಡೆಸಲು ತೀರ್ಮಾನಿಸಿದ್ದಾರೆ. #NRIAPPEALDAY ಎಂಬ ಹ್ಯಾಷ್‌ ಟ್ಯಾಗ್‌ನೊಂದಿಗೆ ಜನವರಿ 2ರಂದು ಅಂತರಾಷ್ಟ್ರೀಯ ಅನಿವಾಸಿ ಕನ್ನಡಿಗರ ಮನವಿ ದಿನವಾಗಿ ಆಚರಿಸಲು ಮುಂದಾಗಿದ್ದಾರೆ.

    ಅನಿವಾಸಿ ಕನ್ನಡಿಗರಿಗಾಗಿಯೇ ಕರ್ನಾಟಕ ಸರಕಾರದಲ್ಲಿ ಅನಿವಾಸಿ ಭಾರತೀಯ ಸಮಿತಿ ಇದೆ(ಕೆಎನ್ಆರ್‌ಐ ಪೋರಂ), ಅದರ ಅಧ್ಯಕ್ಷರು ಸ್ವತಃ ಮುಖ್ಯಮಂತ್ರಿಗಳು, ಆದರೆ ಮುಖ್ಯಮಂತ್ರಿಗಳಿಗೆ ಸರ್ಕಾರದ ಇತರ ಗಂಭೀರ ಜವಾಬ್ದಾರಿಗಳಿರುವ ಕಾರಣ ಕೆಎನ್ಆರ್‌ಐ ಸಮಿತಿಯಲ್ಲಿ ಉಪಾಧ್ಯಕ್ಷರಿಗೇ ಹೆಚ್ಚಿನ ಜವಾಬ್ದಾರಿ. ಆದರೆ ಕಳೆದ ಮೂರು ವರ್ಷಗಳ ಹಿಂದೆ ತೆರವುಗೊಂಡ ಉಪಾಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಯಾರನ್ನು ನೇಮಕವೇ ಮಾಡಿಲ್ಲ.

    ಹಲವಾರು ಕನ್ನಡಪರ ಸಂಘಟನೆಗಳು ಈ ಕುರಿತು ಸರ್ಕಾರದ ಗಮನ ಸೆಳೆದಿದ್ದರೂ ಯಾರು ಸ್ಪಂದಿಸುವ ಗೋಜಿಗೆ ಹೋಗಿರಲಿಲ್ಲ, ಇದೀಗ ಶತಾಯಗತಾಯ ಬೇಡಿಕೆಯನ್ನು ಕರ್ನಾಟಕ ಸರಕಾರಕ್ಕೆ ತಲುಪಿಸಿ ಸೇರಿಸಿಕೊಳ್ಳಬೇಕೆಂದು ಈಡೇರಿಸಿ ಕೊಳ್ಳಬೇಕೆಂದು ಅನಿವಾಸಿ ಕನ್ನಡಿಗರು ತೀರ್ಮಾನಿಸಿದಂತಿದೆ. ಹಾಗಾಗಿ ಈ ವಿಭಿನ್ನ ಅಭಿಯಾನದ ಮೂಲಕ ಒಗ್ಗಟ್ಟಾಗಿ ಧ್ವನಿಎತ್ತಲಿದ್ದಾರೆ.

    ಅಂತರರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಕರೆಕೊಟ್ಟಿರುವ ಈ ಅಭಿಯಾನಕ್ಕೆ ಈಗಾಗಲೇ ಅಮೆರಿಕ, ಯುಎಇ, ಬ್ರಿಟನ್, ಆಸ್ಟ್ರೇಲಿಯಾ, ಕತಾರ್, ಕುವೈಟ್, ಇಟಲಿ, ಜರ್ಮನಿ, ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡಾ, ಇಥಿಯೋಪಿಯ, ಡೆನ್ಮಾರ್ಕ್, ನೈಜೀರಿಯಾ, ಹಾಲೆಂಡ್, ಓಮನ್, ಬಹರೈನ್, ಇಂಡೋನೇಷಿಯಾ, ಸೌದಿ ಅರೇಬಿಯಾ, ಇಸ್ರೇಲ್, ಈಜಿಪ್ಟ್, ಸ್ವಿಜರ್ಲ್ಯಾಂಡ್, ಘಾನ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಹಾಂಕಾಂಗ್, ಸಿಂಗಪೂರ್, ಸ್ಕಾಟ್ಲ್ಯಾಂಡ್, ನಾರ್ವೆ, ನೆದರ್ಲ್ಯಾಂಡ್, ದಕ್ಷಿಣ ಕೊರಿಯಾ ಇನ್ನಿತರ ದೇಶದ ನೂರಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಈಗಾಗಲೇ ಬೆಂಬಲ ಘೋಷಿಸಿದ್ದಾರೆ. ‘ಅನಿವಾಸಿಗಳಿಗಾಗಿ ಒಂದು ದಿನ’ ಎಂದು ದೇಶ ವಿದೇಶಗಳಲ್ಲಿ ಇರುವ ಎಲ್ಲಾ ಕನ್ನಡಿಗರೊಂದಿಗೆ ಅಭಿಯಾನದಲ್ಲಿ ಭಾಗವಹಿಸಲು ವಿನಂತಿಸಿದ್ದಾರೆ.

  • ನನ್ನ, ನಿಖಿಲ್ ಮಧ್ಯೆ ಏನೂ ಇಲ್ಲವೆಂದು ದರ್ಶನ್ ಸ್ಪಷ್ಟಪಡಿಸಿದ್ದಾರೆ: ನಿಖಿಲ್ ಕುಮಾರಸ್ವಾಮಿ

    ನನ್ನ, ನಿಖಿಲ್ ಮಧ್ಯೆ ಏನೂ ಇಲ್ಲವೆಂದು ದರ್ಶನ್ ಸ್ಪಷ್ಟಪಡಿಸಿದ್ದಾರೆ: ನಿಖಿಲ್ ಕುಮಾರಸ್ವಾಮಿ

    – ಆರ್.ಆರ್ ನಗರದಲ್ಲಿ ವ್ಯಕ್ತಿ ಪರವಾಗಿ ಪ್ರಚಾರ ಮಾಡಿದ್ದಾರೆ

    ತುಮಕೂರು: ನನ್ನ ನಿಖಿಲ್ ಮಧ್ಯೆ ಏನೂ ಇಲ್ಲ ಎಂದು ದರ್ಶನ್ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ನಟ ನಿಖಿಲ್ ಕುಮಾರಸ್ವಾಮಿಯವರು ಹೇಳಿದ್ದಾರೆ.

    ಇಂದು ಉಪಚುನಾವಣೆಯ ಪ್ರಚಾರದ ಅಂಗವಾಗಿ ನಿಖಿಲ್ ಕುಮಾರಸ್ವಾಮಿಯವರು ಶಿರಾದಲ್ಲಿ ನಡೆದ ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿರಾ ಕ್ಷೇತ್ರದ ಜನರು ಜೆಡಿಎಸ್ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ಇಂದು ವ್ಯಕ್ತವಾಗುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷವನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದರು.

    ಜೊತೆಗೆ ನನ್ನ ಮತ್ತು ನಿಖಿಲ್ ಮಧ್ಯೆ ಏನೂ ಇಲ್ಲ ಎಂದು ದರ್ಶನ್ ಸ್ಪಷ್ಟಪಡಿಸಿದ್ದಾರೆ. ಪದೇ ಪದೇ ಮಾಧ್ಯಮದವರು ಈ ಪ್ರಶ್ನೆ ಕೇಳಬೇಡಿ. ಆರ್.ಆರ್ ನಗರದಲ್ಲಿ ದರ್ಶನ್ ಅವರು ವ್ಯಕ್ತಿ ಪರವಾಗಿ ಪ್ರಚಾರ ಮಾಡಿದ್ದಾರೆ. ಅದಕ್ಕೆ ಅವರು ಸ್ವತಂತ್ರರು. ಅವರ ಅಭಿಮಾನ ಮತವಾಗಿ ಬದಲಾಗುತ್ತಾ ಅನ್ನೋದನ್ನು ಕಾದು ನೋಡಬೇಕು. ಆದರೆ ಆರ್.ಆರ್ ನಗರದಲ್ಲೂ ಜೆಡಿಎಸ್ ಪರ ಮತದಾರರು ಇದ್ದಾರೆ ಎಂದು ತಿಳಿಸಿದರು.

    ಶಿರಾ ಕ್ಷೇತ್ರದಲ್ಲಿ ಮತದಾರರು ನಮ್ಮ ಪರ ಒಲಿಯಲಿದ್ದಾರೆ. ಟಿ.ಬಿ.ಜಯಚಂದ್ರ ಅವರು ಈ ಹಿಂದೆ ಮಂತ್ರಿಯಾಗಿದ್ದವರು, ಆಗ ಯಾಕೆ ಮದಲೂರು ಕೆರೆ ತುಂಬಿಸಿಲ್ಲ. ಚುನಾವಣೆಯಲ್ಲಿ ಮತ ಪಡೆಯಲು ಜನರನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.