Tag: Cambodia

  • ಶಿವನ ದೇವಸ್ಥಾನಕ್ಕಾಗಿ ಥಾಯ್ಲೆಂಡ್, ಕಾಂಬೋಡಿಯಾ ಮಧ್ಯೆ ಗಡಿಯಲ್ಲಿ ಘರ್ಷಣೆ!

    ಶಿವನ ದೇವಸ್ಥಾನಕ್ಕಾಗಿ ಥಾಯ್ಲೆಂಡ್, ಕಾಂಬೋಡಿಯಾ ಮಧ್ಯೆ ಗಡಿಯಲ್ಲಿ ಘರ್ಷಣೆ!

    ಬ್ಯಾಂಕಾಕ್‌: ಶಿವನ ದೇವಸ್ಥಾನದ (Shiva Temple) ವಿಚಾರದ ಬಗ್ಗೆ ಥಾಯ್ಲೆಂಡ್ ಮತ್ತು ಕಾಂಬೋಡಿಯಾದ (Thailand-Cambodia Clash) ಮಧ್ಯೆ ಗಡಿಯಲ್ಲಿ ಘರ್ಷಣೆ ನಡೆಯುತ್ತಿದ್ದು ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದಾರೆ.

    ಬುಧವಾರ ದಟ್ಟವಾದ ಅರಣ್ಯದಿಂದ ಕೂಡಿದ ಡ್ಯಾಂಗ್ರೆಕ್ ಪರ್ವತ ಶ್ರೇಣಿಯಲ್ಲಿ ಕಾಂಬೋಡಿಯನ್ ಡ್ರೋನ್ (Drone) ಪತ್ತೆಯಾಗಿದೆ ಎಂದು ಥಾಯ್ಲೆಂಡ್‌ ಹೇಳಿತ್ತು. ಇದಾದ ಸ್ವಲ್ಪ ಸಮಯದ ನಂತರ, ನೆಲಬಾಂಬ್ ಸ್ಫೋಟಗೊಂಡು ಐವರು ಥಾಯ್ಲೆಂಡ್‌ ಸೈನಿಕರು ಗಾಯಗೊಂಡಿದ್ದು ಈಗ ಗಲಾಟೆಗೆ ಮೂಲ ಕಾರಣ. ಈ ನೆಲ ಬಾಂಬ್‌ ಅನ್ನು ಕಾಂಬೋಡಿಯಾ ಇಟ್ಟಿತ್ತು ಎಂದು ಥಾಯ್ಲೆಂಡ್‌ ದೂರಿದೆ.

    ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಬೆನ್ನಲ್ಲೇ ಎರಡೂ ದೇಶಗಳು ರಾಯಭಾರಿಗಳನ್ನು ಹೊರ ಹಾಕಿವೆ. ನಂತರ ಥಾಯ್ಲೆಂಡ್‌ ಕಾಂಬೋಡಿಯಾದ ಮೇಲೆ ಡ್ರೋನ್‌ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕಾಂಬೋಡಿಯಾದ ಫಿರಂಗಿ ಗುಂಡಿನ ದಾಳಿ ನಡೆಸಿದೆ. ಎರಡು ದೇಶಗಳು ಗಡಿಯನ್ನು ಮುಚ್ಚಿದ್ದು ತನ್ನ ದೇಶದ ಜನರು ಮರಳುವಂತೆ ಸೂಚಿಸಿವೆ. ಇದನ್ನೂ ಓದಿ: ಮುಂಬೈ ದಾಳಿಯ ರುವಾರಿ, ಸಂಸತ್‌ ಮೇಲಿನ ದಾಳಿಯ ಸಂಚುಕೋರ ಲಷ್ಕರ್ ಉಗ್ರ ಪಾಕಿಸ್ತಾನದ ಆಸ್ಪತ್ರೆಯಲ್ಲಿ ಸಾವು

    ಕಾಂಬೋಡಿಯಾದ ದಾಳಿಯಿಂದ ಒಂಬತ್ತು ಥಾಯ್ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಐದು ವರ್ಷದ ಬಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಥಾಯ್ ಅಧಿಕಾರಿಗಳು ಹೇಳಿದಾರೆ. ಇದಕ್ಕೆ ಪ್ರತಿಯಾಗಿ ಥಾಯ್ ಸೈನ್ಯವು ಕಾಂಬೋಡಿಯನ್ ಪಡೆಗಳ ಮೇಲೆ BM-21 ರಾಕೆಟ್‌ಗಳನ್ನು ಹಾರಿಸಿವೆ. ಅಷ್ಟೇ ಅಲ್ಲದೇ ಎಫ್‌ 16 ಯುದ್ಧ ವಿಮಾನದ ಮೂಲಕ ಏರ್‌ ಸ್ಟ್ರೈಕ್‌ ಮಾಡಿದೆ ಎಂದು ವರದಿಯಾಗಿದೆ. ಎರಡೂ ದೇಶಗಳ 800 ಕಿಮೀ ಗಡಿಯಲ್ಲಿ ಕನಿಷ್ಠ ಆರು ಸ್ಥಳಗಳಲ್ಲಿ ಘರ್ಷಣೆಗಳು ನಡೆದಿವೆ.


    ಏನಿದು ದೇವಸ್ಥಾನ ವಿವಾದ?
    ಖಮೇರ್ ರಾಜವಂಶದ ಒಂದನೇ ಸೂರ್ಯವರ್ಮ 11ನೇ ಶತಮಾನದಲ್ಲಿ ಶಿವನ ದೇವಸ್ಥಾನ ಕಟ್ಟಿಸಿದ್ದಾನೆ. ಈ ದೇವಸ್ಥಾನ ಎರಡೂ ದೇಶಗಳ ಗಡಿಯಲ್ಲಿದೆ. ಈ ದೇವಸ್ಥಾನ ಯಾವ ದೇಶಕ್ಕೆ ಸೇರಬೇಕು ಎನ್ನುವ ವಿಚಾರಕ್ಕೆ ಈಗ ಕಿತ್ತಾಟ ನಡೆಯುತ್ತಿದೆ. ವಿಶೇಷ ಏನೆಂದರೆ ಈ ಎರಡೂ ದೇಶಗಳ ಬೌದ್ಧ ಧರ್ಮದ ದೇಶಗಳಾಗಿದ್ದು, 95% ಹೆಚ್ಚು ಬೌದ್ಧರೇ ನೆಲೆಸಿದ್ದಾರೆ.

    ಈ ದೇವಾಲಯಗಳು ಖಮೇರ್ ಸಾಮ್ರಾಜ್ಯದ ಐತಿಹಾಸಿಕ ಗಡಿಯೊಳಗೆ ಬರುತ್ತವೆ ಎಂದು ಕಾಂಬೋಡಿಯಾ ಹೇಳಿದರೆ ಥಾಯ್ಲೆಂಡ್‌ ವಸಾಹತುಶಾಹಿ ಯುಗದ ನಕ್ಷೆಗಳನ್ನು ಉಲ್ಲೇಖಿಸುತ್ತದೆ ಮತ್ತು ದೇವಾಲಯಗಳು ತನ್ನ ಪ್ರದೇಶದೊಳಗೆ ಇವೆ ಎಂದು ಥಾಯ್ಲೆಂಡ್‌ ಪ್ರತಿಪಾದಿಸುತ್ತಿದೆ. ಈ ದೇವಸ್ಥಾನವನ್ನು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು ಎಂದು ಕಾಂಬೋಡಿಯಾ ಭಾರೀ ಪ್ರಯತ್ನ ನಡೆಸಿತ್ತು. ಆದರೆ ಥಾಯ್ಲೆಂಡ್ ಆಕ್ಷೇಪ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಯುಕೆ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಭಾರತಕ್ಕೆ ಏನು ಲಾಭ?

    ಬೌದ್ಧ ಕೇಂದ್ರಗಳಾಗಿ ಹೇಗೆ ಮಾರ್ಪಟ್ಟವು?
    ಮೂಲತಃ ಶೈವ ಹಿಂದೂ ಪೂಜೆಗಾಗಿ ನಿರ್ಮಿಸಲ್ಪಟ್ಟಿದ್ದರೂ, ಖಮೇರ್ ಸಾಮ್ರಾಜ್ಯವು ಮಹಾಯಾನ ಬೌದ್ಧಧರ್ಮವನ್ನು ಸ್ವೀಕರಿಸಿದಂತೆ ದೇವಾಲಯಗಳನ್ನು ಕ್ರಮೇಣ ಬೌದ್ಧ ಬಳಕೆಗೆ ಬಳಸಲಾಯಿತು. ರಾಜ ಜಯವರ್ಮನ್ VII ರ ಅಡಿಯಲ್ಲಿ, ಧರ್ಮ ಸಲಾಸ್ (ವಿಶ್ರಾಂತಿ ಗೃಹಗಳು) ನಂತಹ ಹೆಚ್ಚುವರಿ ರಚನೆಗಳನ್ನು ಸೇರಿಸಲಾಯಿತು.

  • ಕಾಂಬೋಡಿಯಾದಲ್ಲಿ ಮೋಸದ ಉದ್ಯೋಗ ಜಾಲಕ್ಕೆ ಸಿಲುಕಿದ್ದ 60 ಮಂದಿ ಭಾರತೀಯರ ರಕ್ಷಣೆ

    ಕಾಂಬೋಡಿಯಾದಲ್ಲಿ ಮೋಸದ ಉದ್ಯೋಗ ಜಾಲಕ್ಕೆ ಸಿಲುಕಿದ್ದ 60 ಮಂದಿ ಭಾರತೀಯರ ರಕ್ಷಣೆ

    – ಸ್ವದೇಶಕ್ಕೆ ಮರಳಿದ ಮೊದಲ ಬ್ಯಾಚ್‌

    ನವದೆಹಲಿ/ನಾಮ್ ಪೆನ್: ಉದ್ಯೋಗ ಪಡೆಯುವ ಉತ್ಸಾಹದಲ್ಲಿ ಕಾಂಬೋಡಿಯಾದಲ್ಲಿ (Cambodia) ಮೋಸದ ಜಾಲಕ್ಕೆ ಸಿಲುಕಿದ್ದ 60 ಮಂದಿ ಭಾರತೀಯರನ್ನ ಇಲ್ಲಿನ ಭಾರತೀಯ ರಾಯಭಾರ ಕಚೇರಿ (Indian Embassy) ರಕ್ಷಣೆ ಮಾಡಿದೆ. 60 ಮಂದಿಯ ಮೊದಲ ಬ್ಯಾಚ್‌ ಭಾರತಕ್ಕೆ ಮರಳಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.

    ಕಾಂಬೋಡಿಯಾ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಸಿಹಾನೌಕ್ವಿಲ್ಲೆನಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಜಿನ್‌ಬೆ-4 ಎಂಬ ಸ್ಥಳದಲ್ಲಿ ರಕ್ಷಣೆ ಭಾರತೀಯರನ್ನ (Indians Rescued) ಮಾಡಿದ್ದಾರೆ. ಅಲ್ಲದೇ ಇನ್ಮುಂದೆ ಉದ್ಯೋಗಕ್ಕಾಗಿ ಕಾಂಬೋಡಿಯಾಕ್ಕೆ ಬರುವ ಭಾರತೀಯರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅನುಮೋದಿಸಿದ ಅಧಿಕೃತ ಏಜೆಂಟರ ಮೂಲಕ ಮಾತ್ರವೇ ಉದ್ಯೋಗ ಪಡೆದುಕೊಳ್ಳಬೇಕು ಎಂದು ಸಲಹೆಯನ್ನೂ ನೀಡಿದೆ.

    ಈ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ನಮ್ಮ ಅಧಿಕಾರಿಗಳ ತಂಡ ವಿದೇಶದಲ್ಲಿರುವ ಭಾರತೀಯರಿಗೆ ಯಾವಾಗಲು ಸಹಾಯಕ್ಕೆ ಬದ್ಧವಾಗಿದೆ. ಸದ್ಯ ಮೋಸದ ಉದ್ಯೋಗ ಜಾಲಕ್ಕೆ (Job Scam )ಸಿಲುಕಿದ್ದ 60 ಮಂದಿಯನ್ನ ರಕ್ಷಿಸಿದ್ದೇವೆ. ಅವರಿಂದು ಸ್ವದೇಶಕ್ಕೆ ಮರಳಿದ್ದಾರೆ. ಅದಕ್ಕಾಗಿ ನಮ್ಮ ಇಡೀ ಅಧಿಕಾರಿಗಳ ತಂಡಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಹೇಳಿದೆ.

    ಜೊತೆಗೆ ಅವರು ಕಾಂಬೋಡಿಯಾದ ಸಿಹಾನೌಕ್ವಿಲ್ಲೆಯಿಂದ ನೋಮ್ ಪೆನ್‌ಗೆ ಕಳುಹಿಸಲು ಅಗತ್ಯ ದಾಖಲೆಗಳು ಹಾಗೂ ಇತರೇ ವ್ಯವಸ್ಥೆಗಳ ಸಹಾಯವನ್ನೂ ಅಧಿಕಾರಿಗಳು ಮಾಡಿಕೊಟ್ಟಿದ್ದಾರೆ. ಉದ್ಯೋಗ ಪಡೆಯುವ ಆಸೆಯಲ್ಲಿ ಮೋಸದ ಜಾಲಕ್ಕೆ ಸಿಲುಕಿದ್ದವರನ್ನ ರಕ್ಷಿಸಿ ಸಿಹಾನೌಕ್ವಿಲ್ಲೆ ನಿಂದ ನೋಮ್‌ಪೆನ್‌ಗೆ ಕಳುಹಿಸಲಾಗಿತ್ತು. ಬಳಿಕ ಪ್ರಯಾಣದ ದಾಖಲೆಗಳು ಸೇರಿದಂತೆ ಎಲ್ಲ ಸಹಾಯವನ್ನೂ ಒದಗಿಸಿಕೊಟ್ಟಿದೆ ಎಂದು ಕಚೇರಿ ತಿಳಿಸಿದೆ.

    ಇದೇ ವೇಳೆ ಕಾಂಬೋಡಿಯಾದಲ್ಲಿ ಉದ್ಯೋಗ ಹುಡುಕುತ್ತಿರುವ ಭಾರತೀಯರು ಅನಧಿಕೃತ ಏಜೆಂಟ್‌ಗಳಿಗೆ ಬಲಿಯಾಗದಂತೆ ರಾಯಬಾರಿ ಕಚೇರಿ ಎಚ್ಚರಿಕೆ ನೀಡಿದೆ.

  • ಕಾಂಬೋಡಿಯಾದ ಸೇನಾನೆಲೆಯಲ್ಲಿ ಮದ್ದುಗುಂಡುಗಳ ಸ್ಫೋಟ – 20 ಸೈನಿಕರು ಸಾವು

    ಕಾಂಬೋಡಿಯಾದ ಸೇನಾನೆಲೆಯಲ್ಲಿ ಮದ್ದುಗುಂಡುಗಳ ಸ್ಫೋಟ – 20 ಸೈನಿಕರು ಸಾವು

    ನಾಮ್ ಪೆನ್: ಕಾಂಬೋಡಿಯಾ (Cambodia) ದೇಶದ ಪಶ್ಚಿಮ ಭಾಗದಲ್ಲಿರುವ ಸೇನಾ ನೆಲೆಯಲ್ಲಿ ಮದ್ದುಗುಂಡುಗಳು ಸ್ಫೋಟಗೊಂಡ (Ammunition Explosion) ಪರಿಣಾಮ ಇಪ್ಪತ್ತು ಸೈನಿಕರು (Soldiers) ಮೃತಪಟ್ಟಿದ್ದಾರೆ ಎಂದು ಕಾಂಬೋಡಿಯಾ ಪ್ರಧಾನಿ ಹನ್ ಮಾನೆಟ್ (Hun Manet) ಶನಿವಾರ ತಿಳಿಸಿದ್ದಾರೆ.

    ಘಟನೆ ಕುರಿತು ಪ್ರಧಾನಿ ಹನ್ ಮಾನೆಟ್ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದು, ಸೈನಿಕರ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಏಪ್ರಿಲ್ 27, 2024ರ ಶನಿವಾರ ಮಧ್ಯಾಹ್ನ ಕಂಪಾಂಗ್ ಸ್ಪ್ಯೂ ಪ್ರಾಂತ್ಯದ 3ನೇ ಮಿಲಿಟರಿ ಗ್ರಾಮದಲ್ಲಿ ಸ್ಫೋಟದ ಸುದ್ದಿಯನ್ನು ಕೇಳಿ ಆಘಾತವಾಯಿತು. ಘಟನೆಯಲ್ಲಿ 20 ಸೈನಿಕರು ಮೃತಪಟ್ಟಿದ್ದು, ಹಲವು ಸೈನಿಕರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಾಳು ಸೈನಿಕರು ಶೀಘ್ರವೇ ಗುಣಮುಖರಾಗಲಿ ಎಂದು ಹನ್ ಮಾನೆಟ್ ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ನಾಡದ್ರೋಹಿ: ಡಿಕೆಶಿ ವಾಗ್ದಾಳಿ

    ಅಲ್ಲದೇ ಈ ದುರಂತದಲ್ಲಿ ಮೃತಪಟ್ಟ ಸೈನಿಕರ ಅಂತ್ಯಕ್ರಿಯೆಯ ವೆಚ್ಚದ ಸಂಪೂರ್ಣ ಹೊಣೆಯನ್ನು ಸರ್ಕಾರವೇ ಹೊತ್ತುಕೊಳ್ಳಲಿದೆ. ಮೃತ ಸೈನಿಕರ ಕುಟುಂಬಕ್ಕೆ ತಲಾ 20 ಮಿಲಿಯನ್ ಯುಎಸ್ ಡಾಲರ್ ಮತ್ತು ಘಟನೆಯಲ್ಲಿ ಗಾಯಗೊಂಡ ಸೈನಿಕರಿಗೆ ತಲಾ 20 ಮಿಲಿಯನ್ ರಿಯೆಲ್ ಆರ್ಥಿಕ ನೆರವು ನೀಡುತ್ತೇನೆ ಎಂದು ಹನ್ ಮಾನೆಟ್ ತಿಳಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ಆರೋಗ್ಯವಾಗಿದ್ದಾರೆ, ಇನ್ಸುಲಿನ್ ಡೋಸ್ ಮುಂದುವರಿಸಲು ಏಮ್ಸ್ ಮೆಡಿಕಲ್ ಬೋರ್ಡ್ ಸಲಹೆ

  • ಉದ್ಯೋಗದ ಆಸೆಗೆ ಬಿದ್ದು ಕಾಂಬೋಡಿಯಾದಲ್ಲಿ ಸಿಲುಕಿದ್ದ ಕಾಫಿನಾಡಿನ ಯುವಕನ ರಕ್ಷಣೆ

    ಉದ್ಯೋಗದ ಆಸೆಗೆ ಬಿದ್ದು ಕಾಂಬೋಡಿಯಾದಲ್ಲಿ ಸಿಲುಕಿದ್ದ ಕಾಫಿನಾಡಿನ ಯುವಕನ ರಕ್ಷಣೆ

    ಚಿಕ್ಕಮಗಳೂರು: ವಿದೇಶದಲ್ಲಿ (Foreign) ಉದ್ಯೋಗದ (Job) ಆಸೆಗೆ ಬಿದ್ದು ಕಾಂಬೋಡಿಯಾ (Cambodia) ದೇಶಕ್ಕೆ ಕೆಲಸಕ್ಕೆ ತೆರಳಿದ್ದ ಜಿಲ್ಲೆಯ ಎನ್‌ಆರ್‌ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮಾಗುಂಡಿ ಯುವಕ ಅಶೋಕ್‌ನನ್ನು ಭಾರತೀಯ ರಾಯಭಾರಿ ಕಚೇರಿಯ (Indian Embassy) ಸಿಬ್ಬಂದಿ ರಕ್ಷಿಸಿದ್ದು, ಭಾರತಕ್ಕೆ ವಾಪಸ್ ಕರೆತರುವ ಪ್ರಕ್ರಿಯೆ ಆರಂಭವಾಗಿದೆ.

    ಚೀನಿ ಆಫ್ ಮಾಫಿಯಾಕ್ಕೆ ಸಿಲುಕಿದ್ದ ಯುವಕ ಕಳೆದ ಮೂರು ತಿಂಗಳ ಹಿಂದೆ ಕಾಂಬೋಡಿಯಾ ದೇಶಕ್ಕೆ ಉದ್ಯೋಗಕ್ಕಾಗಿ ತೆರಳಿದ್ದ. ವಂಚನೆಯ ಟಾರ್ಗೆಟ್ ನೀಡುತ್ತಿದ್ದ ಚೀನಿ ಆಪ್ ಕಂಪನಿ ಟಾರ್ಗೆಟ್ ಪೂರ್ಣ ಮಾಡದ ಹಿನ್ನೆಲೆ ಅಶೋಕ್‌ಗೆ ಚಿತ್ರಹಿಂಸೆ ನೀಡಿತ್ತು. ಇನ್ನು ಅಶೋಕ್‌ನನ್ನು ಬಂಧನದಲ್ಲಿರಿಸಿ 13 ಲಕ್ಷ ರೂ. ಹಣಕ್ಕಾಗಿ ಆತನ ಪೋಷಕರಿಗೆ ಬೇಡಿಕೆ ಇಟ್ಟಿದ್ದರು. ಅಶೋಕ್‌ನನ್ನು ಭಾರತಕ್ಕೆ ವಾಪಸ್ ಕರೆತರುವಂತೆ ಆಶೋಕ್ ಕುಟುಂಬಸ್ಥರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಮೂಲಕ ರಾಜ್ಯ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಹೂಡಿಕೆ ಮಾಡಿದ್ರೆ ಡಬಲ್ ಕೊಡೋದಾಗಿ ನಂಬಿಸಿ ಹಣದೊಂದಿಗೆ ದಂಪತಿ ಎಸ್ಕೇಪ್

    ಈ ಕುರಿತು ಮಾಹಿತಿ ತಿಳಿದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸ್ಪಂದಿಸಿ ಅಶೋಕ್‌ನನ್ನು ರಕ್ಷಣೆ ಮಾಡುವಂತೆ ಕಾಂಬೋಡಿಯಾ ದೇಶದ ಭಾರತೀಯ ರಾಯಭಾರಿ ಕಚೇರಿಗೆ ಪತ್ರ ವ್ಯವಹಾರ ನಡೆಸುವ ಮೂಲಕ ಮನವಿ ಮಾಡಿಕೊಂಡಿದ್ದರು. ಕಳೆದ ಎರಡು ದಿನಗಳ ಹಿಂದೆ ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿ ಕಾಂಬೋಡಿಯಾದ ವಿಯೆಟ್ನಾಂ ಗಡಿಭಾಗದಲ್ಲಿರುವ ಚೀನಿ ಆಪ್ ಕಚೇರಿಗೆ ಭೇಟಿ ನೀಡಿ, ಅಶೋಕ್‌ನನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ಮತ್ತೆ ಮಳೆ ಅವಾಂತರ – ಸಾಧಾರಣ ಮಳೆಗೆ ಕೆರೆಯಂತಾದ ಸರ್ವಿಸ್ ರಸ್ತೆ

    ಸದ್ಯ ಅಶೋಕ್ ಕಾಂಬೋಡಿಯಾದ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿ ಜೊತೆಯಿದ್ದು, ಸೋಮವಾರದ ಬಳಿಕ ಅಶೋಕನನ್ನು ಭಾರತಕ್ಕೆ ಕರೆತರಲು ಸಿದ್ಧತೆ ನಡೆಸಲಾಗುತ್ತಿದೆ. ಬಾಳೆಹೊನ್ನೂರು ಸಮೀಪದ ಮಹಲ್ಗೋಡು ಗ್ರಾಮದ ಯುವಕ ಅಶೋಕ್ ಕಾಂಬೋಡಿಯಾ ದೇಶದಲ್ಲಿ ಚೀನಿ ಆಪ್ ಮಾಫಿಯಾಕ್ಕೆ ಸಿಲುಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಆರ್.ಪುರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಕೊಪ್ಪ ಡಿವೈಎಸ್ಪಿ, ನರಸಿಂಹರಾಜಪುರ, ಬಾಳೆಹೊನ್ನೂರು ಪಿಎಸ್‌ಐಗಳು ಅವರ ಕುಟುಂಬಸ್ಥರ ಜೊತೆ ನಿಕಟ ಸಂಪರ್ಕ ಹೊಂದಿ, ನಿಕ್ಷೇಪ್ ಎಂಬ ಯುವಕನ ಜೊತೆ ಸಂಪರ್ಕ ಸಾಧಿಸಿ, ಅಶೋಕ್‌ನನ್ನು ಭಾರತೀಯ ರಾಯಭಾರಿ ಕಚೇರಿಗೆ ಕರೆತಂದು ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಕನಕಪುರ ಪೊಲೀಸರ ಕಾರ್ಯಾಚರಣೆ – ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ

    ಈ ವಿಷಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಬೇರೆ-ಬೇರೆ ಗಣ್ಯರು ಕೂಡ ವಿದೇಶಿ ರಾಯಭಾರಿಗಳೊಂದಿಗೆ ಪತ್ರ ವ್ಯವಹಾರ, ಮಾತಕತೆ ನಡೆಸುವ ಮೂಲಕ ಅಶೋಕ್‌ಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ಪ್ರಕರಣ ಸುಖಾಂತ್ಯ ಕಾಣುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ಅಶೋಕ್ ಇಲ್ಲಿಗೆ ಬಂದ ನಂತರ ಮಾಹಿತಿ ಪಡೆದು, ಇಲ್ಲಿ ಯಾರಾದರೂ ಆ ರೀತಿ ಕೆಲಸ ಕೊಡಿಸುವ ಆಸೆ ತೋರಿಸಿ ವಂಚಿಸಿದ್ದಾರಾ ಎಂಬ ಕುರಿತು ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ವಿಕ್ರಂ ಅಮಟೆ ತಿಳಿಸಿದ್ದಾರೆ. ಇದನ್ನೂ ಓದಿ: ಮುಕೇಶ್ ಅಂಬಾನಿಗೆ ಜೀವ ಬೆದರಿಕೆ – ಆರೋಪಿ ಅರೆಸ್ಟ್

  • ಕಾಂಬೋಡಿಯಾ ಪ್ರವಾಸ ಮುಗಿಸಿ ಹೆಚ್‍ಡಿಕೆ ವಾಪಸ್- ವಿದೇಶದಲ್ಲೇ ಇರಿ ಎಂದ ಸಚಿವರಿಗೆ ಟಾಂಗ್

    ಕಾಂಬೋಡಿಯಾ ಪ್ರವಾಸ ಮುಗಿಸಿ ಹೆಚ್‍ಡಿಕೆ ವಾಪಸ್- ವಿದೇಶದಲ್ಲೇ ಇರಿ ಎಂದ ಸಚಿವರಿಗೆ ಟಾಂಗ್

    – ಚಲುವರಾಯಸ್ವಾಮಿ ವಿರುದ್ಧ ಗರಂ

    ಬೆಂಗಳೂರು: ಕಾಂಬೋಡಿಯಾ (Cambodia) ಪ್ರವಾಸ ಮುಗಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

    ಭಾನುವಾರ ತಡರಾತ್ರಿ ಕೆಐಎಎಲ್ ಏರ್ ಪೋರ್ಟ್ ಗೆ ಆಗಮಿಸಿದ ಹೆಚ್‍ಡಿಕೆ, ರಾಜ್ಯದ ಸಚಿವರ ವಿರುದ್ಧ ಗರಂ ಆದರು. ರಾಜ್ಯದ ಕೆಲವು ಸಚಿವರು, ನೀವು ವಿದೇಶದಲ್ಲಿ ಇದ್ದುಬಿಡಿ ಎಲ್ಲ ವ್ಯವಸ್ಥೆ ಮಾಡಿ ಕೊಡ್ತೀವಿ ಅಂದಿದ್ರಲ್ಲ. ಇಲ್ಲಿ ಲೂಟಿ ಹೊಡೆಯೋಕೆ ನಮ್ಮನ್ನ ಬಿಟ್ಬಿಡಿ, ನೀವು ವಿದೇಶದಲ್ಲಿ ಇರಿ ಅಂತ ಸಲಹೆ ಕೊಟ್ಟಿದ್ರಲ್ಲಾ. ಅದನ್ನ ಪಾಲಿಸಬೇಕಲ್ಲ. ಯಾಕೆಂದರೆ ಇಲ್ಲಿ ದರೋಡೆ ಮಾಡಿಕೊಂಡು ಕೂತವ್ರಲ್ಲಾ, ಮಾನ ಮಾರ್ಯಾದೆ ಇಲ್ಲದೆ ಎಂದು ವಾಗ್ದಾಳಿ ನಡೆಸಿದರು.

    ನಾನು ಅವರಿಂದ ವ್ಯವಸ್ಥೆ ಮಾಡಿಕೊಂಡು ಹೋಗಬೇಕಾ..?, ಆ ಪಾಪದ ಹಣ ತಗೊಂಡು ಹೋಗಬೇಕಾ ಎಂದು ಪ್ರಶ್ನಿಸಿದ ಹೆಚ್‍ಡಿಕೆ, ಕಳೆದ 12 ವರ್ಷದಿಂದ ಪಕ್ಷದ ಸಂಘಟನೆಗೆ ಸಮಯ ಇಟ್ಟಿದ್ದೆ. ದೇಶ ಸುತ್ತು, ಕೋಶ ಓದು ಅಂತಾ ಹಿರಿಯರ ಗಾದೆ ಮಾತಿದೆ. ಯಾವ ದೇಶದಲ್ಲಿ ಏನೇನಿದೆ ಅಂತಾ ತಿಳ್ಕೊಬೇಕಲ್ಲ. ಅಲ್ಲಿ ಯಾವ ರೀತಿ ಇದೆ, ನಮ್ಮಲ್ಲಿ ಯಾವ ರೀತಿ ಇದೆ ನೋಡಬೇಕು. ಅದ್ದರಿಂದ ಕಾಂಬೋಡಿಯಾಗೆ ಸ್ನೇಹಿತರ ಆಹ್ವಾನ ಇತ್ತು, ಹೋಗಿದ್ದೆ ಎಂದರು.

    ಅಲ್ಲಿ 18-20 ಎಕರೆಯಲ್ಲಿ ಕಟ್ಟಿರುವ ಅದ್ಭುತವಾದ ದೇವಸ್ಥಾನ ಇದೆ. ನಮ್ಮ ದೇಶದಲ್ಲೂ ಇಲ್ಲ, ಅಂತ ದೇವಸ್ಥಾನ. ಬ್ರಹ್ಮ, ವಿಷ್ಣು, ಮಹೇಶ್ವರ ದೇವಸ್ಥಾನ. ಇತ್ತೀಚೆಗೆ ಆ ದೇಶ ಆರ್ಥಿಕವಾಗಿ ಬೆಳೆಯುತ್ತಿದೆ. ಒಂದು ಕಾಲದಲ್ಲಿ ಹಲವಾರು ಸಮಸ್ಯೆ ಇತ್ತು. ಈಗ ತುಂಬಾ ಅದ್ಭುತವಾಗಿ ಆ ದೇಶ ಬೆಳೆಯುತ್ತಿದೆ. ಕಾಂಬೋಡಿಯಾದಲ್ಲಿ ಜಿಡಿಪಿ 7.7 ಅಂತ ಮೊನ್ನೆ ಮಂತ್ರಿಯೊಬ್ಬರು ಹೇಳ್ತಾ ಇದ್ರು. ನಮ್ಮಲ್ಲಿ ಹಣದ ಕೊರತೆ ಇಲ್ಲ, ಈಗ ಲೂಟಿ ಮಾಡ್ತಾವ್ರಲ್ಲ. ಈಗ ಒಳಗಡೆ ಟಿವಿಯಲ್ಲಿ ಮಧ್ಯಪ್ರದೇಶ 40% ಸರ್ಕಾರ ಅಂತಾ ಹೇಳಿ ಪೋಸ್ಟರ್ ಹಾಕ್ಕೊಂಡಿದ್ದಾರೆ. ದೇಶ ಎಲ್ಲಿಗೆ ತಗೊಂಡು ಹೋಗ್ತಿದ್ದಾರೆ. ಹಲವಾರು ಬಡತನದ ದೇಶಗಳು ಬೆಳೀತಾ ಇವೆ. ಈಗ ಸಮಯ ಸಿಕ್ಕಿದೆ. ಸ್ವಲ್ಪ ಬೇರೆ ದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಅಭಿವೃದ್ಧಿ ಬಗ್ಗೆ ನೋಡ್ತಾ ಇದ್ದೀನಿ ಎಂದು ತಿಳಿಸಿದರು.

    ಅಧಿಕಾರಿಗಳ ಸಹಿ ಮಾಡಿದ್ದಾರೆ ಅನ್ನೋ ಚಲುವರಾಯಸ್ವಾಮಿ (Chaluvarayaswamy) ಆರೋಪಕ್ಕೆ ಪ್ರತಿಕ್ರಿಯಿಸಿ, ಅವರ ಕಥೆ ಬಿಡಿ, ಹೌದಪ್ಪ ಸಹಿ ನಾನೇ ಮಾಡಿದ್ದೀನಿ. ಹಾಗಾದ್ರೆ ಗವರ್ನರ್ ಹತ್ತಿರ ಯಾಕೆ ಹೋದ್ರು. ನಾನು ಆ ಪ್ರಕರಣದ ಬಗ್ಗೆ ಚರ್ಚೆನೆ ಮಾಡಿಲ್ಲ. ನನ್ನ ಹೆಸರು ಯಾಕೆ ಥಳುಕು ಹಾಕ್ತಾರೆ ಅಲ್ಲಿ. ಅಲ್ಲೂ ನನ್ನ ಹೆಸರೇ ಬೇಕು, ಯಾಕೆಂದರೆ ನನ್ನದೇ ಭಯ ಇರೋದು. ಮೊದಲು ಪ್ರಾಮಾಣಿಕವಾಗಿ ನಡೆದುಕೊಳ್ಳುವುದು ಕಲಿರಿ. ಪ್ರಾಮಾಣಿಕವಾಗಿ ನಡೆದುಕೊಂಡರೆ ಇಂತಹ ಪರಿಸ್ಥಿತಿ ಏನಕ್ಕೆ ಬರುತ್ತೆ. ಮಂತ್ರಿಗಿರಿ ಸಿಕ್ಕಿದೆ ಅಂತಾ ಹಗಲು ದರೋಡೆ ಮಾಡೋದಲ್ಲ ಎಂದು ಹೇಳುತ್ತಾ ಒಳ್ಳೆಯ ಕೆಲಸ ಮಾಡಲು ಹೆಚ್‍ಡಿಕೆ ಸೂಚನೆ ಕೊಟ್ಟರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಗತ್ತಿನ ಬೃಹತ್ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಹೆಚ್‍ಡಿಕೆ

    ಜಗತ್ತಿನ ಬೃಹತ್ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಹೆಚ್‍ಡಿಕೆ

    ಪ್ನೋಮ್ ಪೆನ್: ಕಾಂಬೋಡಿಯಾ (Cambodia) ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಐತಿಹಾಸಿಕ ಪ್ರಸಿದ್ಧ ಆಂಗ್‍ಕರ್ ವಾಟ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದೇವಾಲಯದ ಪರಮ ಶಿವ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

    ಆಂಗ್‍ಕರ್ ವಾಟ್ ಜಗತ್ತಿನಲ್ಲಿಯೇ ಬೃಹತ್ ಹಿಂದೂ ದೇವಾಲಯವಾಗಿದೆ. ಹೆಚ್‍ಡಿಕೆ ಜೊತೆಯಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್, ಮಾಜಿ ಶಾಸಕ ಚೌಡರೆಡ್ಡಿ ತೂಪಲ್ಲಿ, ಮಂಜುನಾಥ್ ಸೇರಿದಂತೆ ಮುಂತಾದವರು ಇದ್ದರು. ಇದನ್ನೂ ಓದಿ: ಸಿನಿಮೀಯ ಸ್ಟೈಲ್‌ನಲ್ಲಿ ದೇವಸ್ಥಾನದಲ್ಲಿ ಜೆಡಿಎಸ್‌ ಮುಖಂಡನ ಹತ್ಯೆಗೆ ಯತ್ನ – ಕೊಲೆಗೆ ಸ್ನೇಹಿತನಿಂದಲೇ ಸ್ಕೆಚ್‌

    ಇತ್ತೀಚೆಗಷ್ಟೆ ಯೂರೋಪ್ ಪ್ರವಾಸ ಮುಗಿಸಿದ್ದ ಅವರು ಆ.7 ರಂದು ಕಾಂಬೋಡಿಯಾ ಪ್ರವಾಸ ಕೈಗೊಂಡಿದ್ದರು. ಇಂದು (ಆ.12) ವಾಪಾಸ್ ಭಾರತಕ್ಕೆ ಅವರು ಮರಳಲಿದ್ದಾರೆ. ಇದನ್ನೂ ಓದಿ: ರಾಜೀನಾಮೆ, ನಿವೃತ್ತಿಯಿಂದ ತೆರವಾಗುತ್ತಿರುವ ಶಿಕ್ಷಕರು-ಪದವೀಧರರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ವಿದೇಶ ಪ್ರವಾಸ- ಕಾಂಬೋಡಿಯಾಗೆ ತೆರಳಿದ ಮಾಜಿ ಸಿಎಂ ಹೆಚ್‍ಡಿಕೆ

    ಮತ್ತೆ ವಿದೇಶ ಪ್ರವಾಸ- ಕಾಂಬೋಡಿಯಾಗೆ ತೆರಳಿದ ಮಾಜಿ ಸಿಎಂ ಹೆಚ್‍ಡಿಕೆ

    ಬೆಂಗಳೂರು: ಯುರೋಪ್ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಇದೀ ಮತ್ತೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

    ಹೌದು. ಹೆಚ್. ಡಿ ಕುಮಾರಸ್ವಾಮಿಯವರು ಸೋಮವಾರ ರಾತ್ರಿ ಕಾಂಬೋಡಿಯಾಗೆ (Cambodia) ತೆರಳಿದ್ದಾರೆ. ಆಪ್ತರ ಜೊತೆ 4 ದಿನಗಳ ಕಾಲ ಪ್ರವಾಸಕ್ಕೆ ತೆರಳಿದ್ದಾರೆ. ಆಗಸ್ಟ್ 12 ರಂದು ವಾಪಸ್ ಆಗಲಿದ್ದಾರೆ.

    ಕುಟುಂಬದ ಸದಸ್ಯರೊಂದಿಗೆ ಜು.23ರಂದು ಹೆಚ್‍ಡಿಕೆ ಯೂರೋಪ್ (Europe) ಪ್ರವಾಸ ಕೈಗೊಂಡಿದ್ದರು. ಕುಮಾರಸ್ವಾಮಿ ಅವರು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ (Anitha Kumaraswamy) ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ವಿದೇಶಕ್ಕೆ ತೆರಳಿದ್ದರು. ಯೂರೋಪಿನ ವಿವಿಧ ನಗರ ಹಾಗೂ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದು, ಎರಡು ವಾರಗಳ ಪ್ರವಾಸ ಪೂರ್ಣಗೊಳಿಸಿ, ಬೆಂಗಳೂರಿಗೆ ವಾಪಸ್ಸಾಗಿದ್ದರು.

    ಹೆಚ್‍ಡಿಕೆ ಫಾರಿನ್ ಟೂರ್ ನಿಂದ ವಾಪಸ್ ಬರ್ತಿದ್ದಿದ್ದಂತೆ ಚಾರ್ಜ್‍ಶೀಟ್ ಪಾಲಿಟಿಕ್ಸ್ ಶುರುವಾಗಿತ್ತು. ಸಿಎಂ, ಪರಂ ಸಭೆಯಲ್ಲಿ `ವೈಎಸ್‍ಟಿ ಟ್ಯಾಕ್ಸ್ ಏಕೆ ಇದ್ದರು..? ಗರುಡಾ ಮಾಲ್ ಬಳಿಯ ಪೊಲೀಸ್ ಮೆಸ್‍ನಲ್ಲಿ ಸಭೆ ನಡೆದಿತ್ತು ಎಂದು ಹೆಚ್‍ಡಿಕೆ ಫ್ರೆಶ್ ಫೈಲ್ಸ್ ಬಿಟ್ಟಿದ್ದರು. ಹಲವು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೆ ತಡೆ ಬೆನ್ನಲ್ಲೇ ಹೆಚ್‍ಡಿಕೆ ವೈಎಸ್‍ಟಿ ರಹಸ್ಯ ಬಾಂಬ್ ಹಾಕಿರುವುದು ಚರ್ಚೆಗೆ ಗ್ರಾಸವಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 72 ವರ್ಷದ ವೃದ್ಧನನ್ನು ಕೊಂದು ತಿಂದ 40 ಮೊಸಳೆಗಳು!

    72 ವರ್ಷದ ವೃದ್ಧನನ್ನು ಕೊಂದು ತಿಂದ 40 ಮೊಸಳೆಗಳು!

    ಫನಂ ಪೆನ್ಹ್: 72 ವರ್ಷದ ವೃದ್ಧರೊಬ್ಬರನ್ನು ಸುಮಾರು 40 ಮೊಸಳೆಗಳು ಕೊಂದ ಭಯಾನಕ ಘಟನೆಯೊಂದು ನಡೆದಿರುವ ಬಗ್ಗೆ ಕಾಂಬೋಡಿಯಾದಲ್ಲಿ ಬೆಳಕಿಗೆ ಬಂದಿದೆ.

    ಮೃತನ ಕುಟುಂಬ ಮೊಸಳೆ ಸಾಕಾಣಿಕೆ ಮಾಡುತ್ತಿದೆ. ಅಂತೆಯೇ ಮೊಸಳೆ (Crocodile) ಗಳನ್ನು ಕೂಡಿ ಹಾಕುವ ಪಂಜರದ ಒಳಗೆ ವೃದ್ಧ ಆಯತಪ್ಪಿ ಬಿದ್ದಿದ್ದರಿಂದ ಈ ಅನಾಹುತ ಸಂಭವಿಸಿದೆ. ಇದನ್ನೂ ಓದಿ: ಶವ ಸಂಸ್ಕಾರದ ವೇಳೆ ಕುತ್ತಿಗೆಯಲ್ಲಿ ಹಗ್ಗದ ಗುರುತು ಪತ್ತೆ – ಈಗ ಕೊಲೆ ಕೇಸ್ ದಾಖಲು

    ಮೊಟ್ಟೆ ಇರಿಸಿದ್ದ ಮೊಸಳೆಯನ್ನು ಹೊರಗೆ ಕಳುಹಿಸಲು ವೃದ್ಧ ಲುವಾನ್ ನಾಮ್ ಪ್ರಯತ್ನಿಸುತ್ತಿದ್ದರು. ಅಂತೆಯೇ ಕೋಲಿನಿಂದ ಮೊಸಳೆಯನ್ನು ಬೆದರಿಸಲು ಮುಂದಾಗಿದ್ದರು. ಈ ವೇಳೆ ಮೊಸಳೆ ಕೋಲನ್ನು ಗಟ್ಟಿಯಾಗಿ ಕಚ್ಚಿ ಹಿಡಿದು ಬಲವಾಗಿ ಎಳೆದಿದೆ. ಇದರಿಂದ ಆ ವೃದ್ಧ ಕೋಲಿನ ಸಮೇತ ಮೊಸಳೆಗಳ ವಾಸಸ್ಥಳದೊಳಗೆ ಬಿದ್ದಿದ್ದಾರೆ. ಕ್ಷಣಮಾತ್ರದಲ್ಲಿ ಅಲ್ಲಿದ್ದ ಮೊಸಳೆಗಳ ಹಿಂಡು ಅವರ ಮೇಲೆ ದಾಳಿ ನಡೆಸಿದ್ದು, ವೃದ್ಧನ ದೇಹವನ್ನು ಛಿದ್ರಗೊಳಿಸಿ ತಿಂದು ಹಾಕಿವೆ.

    ಈ ಬಗ್ಗೆ ಸೀಯೆಮ್ ರೀಪ್ ಸಮೂಹದ ಪೊಲೀಸ್ ಮುಖ್ಯಸ್ಥ ಮೀ ಸಾವ್ರಿ ಪ್ರತಿಕ್ರಿಯಿಸಿ, ಮೊಟ್ಟೆ ಇರಿಸಿದ್ದ ಪಂಜರದಿಂದ ಮೊಸಳೆಯನ್ನು ಹೊರಗೆ ಓಡಿಸುತ್ತಿದ್ದಾಗ, ಮೊಸಳೆಯು ಕೋಲಿನ ಮೇಲೆ ದಾಳಿ ನಡೆಸಿದೆ. ಇದರಿಂದ ಆಯ ತಪ್ಪಿದ ಅವರು ಆವರಣದ ಒಳಗೆ ಬಿದ್ದಿದ್ದಾರೆ. ಬಳಿಕ ಇತರೆ ಮೊಸಳೆಗಳು ಅವರು ಬಿದ್ದ ಜಾಗದತ್ತ ನುಗ್ಗಿದ್ದವು. ಪರಿಣಾಮ ಅವರಿಗೆ ಅಲ್ಲಿಂದ ಪಾರಾಗಲು ಸಾಧ್ಯವಾಗದಂತೆ ದಾಳಿ ನಡೆಸಿದವು. ವೃದ್ಧನ ಕೈಗಳನ್ನು ಕಚ್ಚಿ ಎಳೆದ ಮೊಸಳೆಗಳು ಒಂದು ಕೈಯನ್ನು ನುಂಗಿವೆ ಎಂದು ವಿವರಿಸಿದ್ದಾರೆ.

    ಸ್ಥಳೀಯ ಮೊಸಳೆ ಕೃಷಿಕರ ಸಂಘಟನೆಯ ಅಧ್ಯಕ್ಷರಾಗಿದ್ದ ಲುವಾನ್ ಆಮ್ ಅವರ ಬಳಿ ಮೊಸಳೆ ಸಾಕಾಣಿಕೆ ಕೆಲಸವನ್ನು ಬಿಟ್ಟುಬಿಡುವಂತೆ ಕುಟುಂಬ ಅನೇಕ ವರ್ಷಗಳಿಂದ ಒತ್ತಾಯಿಸುತ್ತಾ ಬಂದಿತ್ತು. ಆದರೆ ಲುವಾನ್ ಅದನ್ನು ಒಪ್ಪಿರಲಿಲ್ಲ. ಈಗ ಲುವಾನ್ ಅವರೇ ಮೊಸಳೆಗಳಿಗೆ ಬಲಿಯಾದ ಕಾರಣ ತಮ್ಮಲ್ಲಿನ ಎಲ್ಲ ಮೊಸಳೆಗಳನ್ನು ಮಾರಾಟ ಮಾಡಲು ಕುಟುಂಬ ಮುಂದಾಗಿದೆ.

  • ಕಾಂಬೋಡಿಯಾದಲ್ಲಿ ಅಕ್ರಮ ವಶದಲ್ಲಿರುವ ತೀರ್ಥಹಳ್ಳಿಯ ಸಾಫ್ಟ್‌ವೇರ್‌ ಇಂಜಿನಿಯರ್; ಬಿಡುಗಡೆಗೆ ಗೃಹ ಸಚಿವ ಶತಪ್ರಯತ್ನ

    ಕಾಂಬೋಡಿಯಾದಲ್ಲಿ ಅಕ್ರಮ ವಶದಲ್ಲಿರುವ ತೀರ್ಥಹಳ್ಳಿಯ ಸಾಫ್ಟ್‌ವೇರ್‌ ಇಂಜಿನಿಯರ್; ಬಿಡುಗಡೆಗೆ ಗೃಹ ಸಚಿವ ಶತಪ್ರಯತ್ನ

    ಬೆಂಗಳೂರು: ಕಾಂಬೋಡಿಯದಲ್ಲಿ (Cambodia) ವಿದೇಶಿ ಅಕ್ರಮ ನೇಮಕಾತಿ ಜಾಲಕ್ಕೆ ಸಿಲುಕಿ ಅಪಾಯದಲ್ಲಿರುವ ತೀರ್ಥಹಳ್ಳಿ ಪಟ್ಟಣದ ಸಾಫ್ಟ್‌ವೇರ್‌ ಇಂಜಿನಿಯರ್ ಕಿರಣ್ ಶೆಟ್ಟಿ ಅವರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ, ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು, ಕೇಂದ್ರದ ವಿದೇಶಾಂಗ ಸಚಿವಾಲಯ ಅಧಿಕಾರಿಗಳ ಜತೆ ಸತತ ಪ್ರಯತ್ನ ನಡೆಸಿದ್ದಾರೆ.

    ಥೈಲ್ಯಾಂಡ್ ದೇಶದಲ್ಲಿ ಹೆಚ್ಚಿನ ಸಂಬಳ ದೊರಕಿಸಿಕೊಡುವ ಆಮಿಷ ಒಡ್ಡಿದ ನೇಮಕಾತಿ ಏಜೆನ್ಸಿಯಿಂದ ಮೊಸಹೋಗಿ, ಕಾಂಬೋಡಿಯಾ ದೇಶದಲ್ಲಿ ಖಾಸಗಿ ಸಂಸ್ಥೆಯೊಂದರ ವಶದಲ್ಲಿರುವ ತೀರ್ಥಹಳ್ಳಿ ನಿವಾಸಿಯ ಬಿಡುಗಡೆ ಬಗ್ಗೆ ಸತತ ಪ್ರಯತ್ನ ನಡೆಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ (Pralhad Joshi) ಹಾಗೂ ವಿದೇಶಾಂಗ ರಾಜ್ಯ ಸಚಿವ ವಿ.ಮುರಳೀಧರ್ ಅವರ ಕಚೇರಿ ಜತೆ ಸಂಪರ್ಕಿಸಿ, ಬಿಡುಗಡೆ ಕುರಿತು ಮನವಿ ಮಾಡಿದ್ದಾರೆ. ಇದನ್ನೂ ಓದಿ: ದೇವೇಗೌಡರನ್ನೇ ಮನೆ, ಜಿಲ್ಲೆಯಿಂದ ಹೊರಹಾಕಿದವರು ನನ್ನನ್ನು ಬಿಡ್ತಾರಾ: ರೇವಣ್ಣ ವಿರುದ್ಧ ಎ.ಟಿ.ರಾಮಸ್ವಾಮಿ ವಾಗ್ದಾಳಿ

    ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೂ ಟೆಕ್ಕಿಯ ಸುರಕ್ಷಾ ಹಿಂದುವರಿಕೆ ಬಗ್ಗೆ ಸಚಿವರು ಚರ್ಚಿಸಿದ್ದು, ತಮ್ಮ ಎಲ್ಲಾ ಕೈಲಾದ ಪ್ರಯತ್ನ ಮಾಡಲಾಗುತ್ತಿದೆ. ಪೋಷಕರು ಧೈರ್ಯಗುಂದಬಾರದು ಎಂದು ಸಾಂತ್ವನ ಹೇಳಿದ್ದಾರೆ.

    ಸಾಫ್ಟ್‌ವೇರ್‌ ಇಂಜಿನಿಯರ್ ಕಿರಣ್ ಶೆಟ್ಟಿ ಅವರನ್ನು ದುಷ್ಕರ್ಮಿಗಳಿಂದ ಬಿಡಿಸಿ ಕೊಡುವಂತೆ ಅವರ ಸಹೋದರ ಪವನ್ ಶೆಟ್ಟಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಕಿರಣ್ ಶೆಟ್ಟಿ ಅವರಿಗೆ ನಾಲ್ಕು ತಿಂಗಳ ಮಗು ಹಾಗೂ ಪತ್ನಿಯಿದ್ದು, ತೀರ್ಥಹಳ್ಳಿಯಲ್ಲಿ ಆತಂಕದಿಂದ ಪತಿಯ ಮರಳಿಕೆ ಬಗ್ಗೆ ಚಿಂತಿತರಾಗಿದ್ದಾರೆ. ಇದನ್ನೂ ಓದಿ: ಕಿಡ್ನಿ ಮಾರಿ ದುಡ್ಡು ಕೊಡ್ತೀನಿ.. ನಮ್ಮ ನಾಯಕರಿಗೆ ಟಿಕೆಟ್ ಕೊಡಿ – ಯುವಕನ ಹುಚ್ಚಾಟ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!

    ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!

    ಅಮರಾವತಿ: ಅಸನಿ ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿಯ ಕರಾವಳಿ ಪ್ರದೇಶಕ್ಕೆ ಬಂಗಾರ ಬಣ್ಣದ ರಥವೊಂದು ತೇಲಿ ಬಂದಿದೆ.

    ಸಮುದ್ರದಲ್ಲಿ ತೇಲುತ್ತಿದ್ದ ರಥವನ್ನು ನೋಡಿದ ಗ್ರಾಮಸ್ಥರು ಅದನ್ನು ಹಗ್ಗ ಕಟ್ಟಿ ಎಳೆದು ದಡಕ್ಕೆ ತಂದಿದ್ದಾರೆ. ಚಂಡಮಾರುತದ ತೀವ್ರತೆ ಹೆಚ್ಚಾಗಿರುವುದರಿಂದಾಗಿ ಇದು ಮಯನ್ಮಾರ್, ಮಲೇಷಿಯಾ ಅಥವಾ ಥೈಲೆಂಡ್‍ನಿಂದ ಬಂದಿರಬಹುದೆಂದು ಶಂಕಿಸಲಾಗಿದೆ.

    ಈ ರಥವು ನೋಡಲು ಏಷ್ಯಾ ರಾಷ್ಟ್ರಗಳ ಮಠದ ಆಕಾರವನ್ನು ಹೊಂದಿದೆ. ಚಂಡಮಾರುತದ ಪ್ರಭಾವದಿಂದಾಗಿ ಉಂಟಾದ ಎತ್ತರದ ಅಲೆಗಳ ಕಾರಣದಿಂದಾಗಿ ರಥವು ಕರಾವಳಿಗೆ ಕೊಚ್ಚಿ ಹೋಗಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ರಥವನ್ನು ನೋಡಲು ಸುತ್ತಮುತ್ತಲಿನ ಜನರೆಲ್ಲರೂ ಸಮದ್ರದ ದಡದಲ್ಲಿ ಸೇರಿದ್ದರು. ಜೋತೆಗೆ ಈನ ರಥವನ್ನು ಕೌತುಕದಿಂದ ವೀಕ್ಷಿಸಿದರು. ಇದನ್ನೂ ಓದಿ: ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದು ಮದುವೆ ಅಂದಾಗ ಮನೆಯಿಂದ ಹೊರಹಾಕ್ದ!

    ಈ ಬಗ್ಗೆ ಸಂತೆಬೊಮ್ಮಾಳಿ ತಹಸೀಲ್ದಾರ್ ಜೆ.ಚಲಮಯ್ಯ ಮಾತನಾಡಿ, ಯಾವುದೇ ದೇಶದಿಂದ ಬಂದಿರದಿರಬಹುದು ಅಥವಾ ಭಾರತೀಯ ಕರಾವಳಿಯಲ್ಲಿ ಎಲ್ಲೋ ಕೆಲವು ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ರಥವನ್ನು ಬಳಸಲಾಗಿರಬಹುದು. ಇದು ಚಂಡಮಾರುತದ ಪ್ರಭಾವದಿಂದಾಗಿ ಶ್ರೀಕಾಕುಲಂ ತೀರಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು